Monday, April 2, 2012

ಹನಿಯಬೇಡ - ನಿಲ್ಲು


(ಚಿತ್ರ ಕೃಪೆ: ವಿಜಯಶ್ರೀ ನಟರಾಜ್ ರವರ ಫೇಸ್ ಬುಕ್)

ಹನಿಯಬೇಡ - ನಿಲ್ಲು
ನಿಲ್ಲು ನೀ ನಿಲ್ಲು ನೀ ಜಾರ ಬೇಡ...
ಹನಿಯಲಿಲ್ಲಿ ಹನಿಸಿಬಿಟ್ಟು ಕಾಡಬೇಡ
ದೂರ ಹೊಲದಿ ರೈತ ಕುಳಿತ
ಸೋತ ಭಾರ ಮನದಿ ತುಡಿತ
ಹನಿದು ಮುನಿದು ಹೀಗೆ ಇಳಿದು
ಸುರುಟು ಸಸಿಯ ಬರಿದೇ ನೋಡಬೇಡ

ಹೂವ ಮೇಲೆ ನಿನ್ನ ಮನಸು
ನಮ್ಮ ಮೇಲೆ ಏಕೆ ಮುನಿಸು
ಚಿತ್ರ ಗ್ರಹಣ ಅವರ ಶೋಕಿ
ಮೊಳಕೆ ಸಹಜ ನೀನು ತಾಕಿ
ಗಗನ ತೊರೆದು ಇಲ್ಲೇ ಇಳಿದು
ಕರಟು ಮೊಳಕೆ ಅರಿತೇ ದೂಡಬೇಡ

ಎಲ್ಲೋ ಸುರಿವೆ ಹೇಳು ಬೇಕೆ?
ನಿಲದೇ ಹರಿವೆ ತಾಳು, ಏಕೆ?
ಒಪ್ಪು ನಮಗೆ ನಮದೇ ತಪ್ಪು
ಹಸಿರ ತೆಗೆದು ತರಿಸಿ ಮುಪ್ಪು
ಮನ್ನಿಸೆಮ್ಮ ಹೀಗೆ ಮುನಿಯ ಬೇಡ
ನಿಲ್ಲು ನೀ ನಿಲ್ಲು ನಿ ಜಾರ ಬೇಡ...

8 comments:

  1. ೧೮ ಸಾಲುಗಳ ಮಹಾ ಕಾವ್ಯ ಇದು.

    ಬಂದು ಬಾರದೆ ಕಾಡಿಸುವ ಮಳೆಯ ಚಿತ್ರಣ.

    ಇಲ್ಲಿನ ಕೆಲ ಸಾಲುಗಳು ನಾನು ಪದೇ ಪದೇ ಹಲುಬುವುದೇ! ಚಿಕ್ಕಬಳ್ಳಾಪುರ ಜಿಲ್ಲೆಯ ಬರಗ್ರಸ್ತ ತಾಲ್ಲೂಕಿನ ಕುಗ್ರಾಮದ ನಮ್ಮ ಅಳಲಿದು. ಅಲ್ಲೆಲ್ಲೋ ಮಂಗಳೂರಿನಲ್ಲಿ, ಮಲೆನಾಡಿನಲ್ಲಿ, ಬೆಂಗಳೂರಿನಲ್ಲಿ ಮಳೆಯಂತೆ ಅಂತ ಕೇಳಿ ಕೇಳಿ ಆಕಾಶಕ್ಕೆ ಬಾಯಿ ಬಿಟ್ಟುಕೊಂಡು ನೋಡುವುದು ಅನವಾಯಿತಿ.

    ಹಸಿರ ಕಡಿದು ನಾವು ಗಳಿಸಿದ್ದಾದರೂ ಬೆಂಗಾಡೆ?

    ಇದು ನಿಮ್ಮ ಅತ್ಯುತ್ತಮ ಕವನಗಳಲ್ಲೊಂದು...

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
  2. ವಿಜಯಶ್ರೀ ಎರಡು ಧನ್ಯವಾದಗಳು... ಒಳ್ಲೆಯ ಭಾವಾಂಕುರಕಾರಕ ಚಿತ್ರಕ್ಕೆ ಮತ್ತು ನಿಮ್ಮ NICE ಪ್ರತಿಕ್ರಿಯೆಗೆ...

    ReplyDelete
  3. ನಮಸ್ಕಾರ...ನಮಸ್ಕಾರ... ಬದರಿ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....

    ReplyDelete
  4. ನೀರಿಲ್ಲದೇ ನಮಗಷ್ಟೇ ಅಲ್ಲ ಇದೀ ಜೀವಕುಲಕ್ಕೆ ಏನಿದೆ...ಜೀವಿತಕ್ಕೆ...?? ಧನ್ಯವಾದ ಕಾವ್ಯ.

    ReplyDelete
  5. ಏನನ್ನೋಣ ಈಗಿನ ಮಳೆಯ ಬಗ್ಗೆ!,ನನ್ನ ಅಜ್ಜಿಗೆ ಬ್ಲಾಗು ಎಲ್ಲಾ ತಿಳಿದು,ಟೈಪಿಂಗ್ ಕಲಿಸಿಕೊಟ್ಟಿದ್ದರೆ ಅಂದಿನ ಮಳೆಗಾಲದ ಕರಾರುವಾಕ್ ತನದ ಬಗ್ಗೆ ಎರಡು ಪುಟವೇ ಬರೆಯುತ್ತಿದ್ದರೇನೋ!!ನನಗಿಂದೂ ನೆನಪಿದೆ ಕನ್ನಡ ಶಾಲೆಗೆ ಹೋಗುವಾಗ "ತಮ್ಮಾ,ಇವತ್ತು ಮಂಜುಗುಣಿ ತೇರು,ಎರಡು ಹನಿ ಆದ್ರು ಮಳೆ ಬರ್ತು*"(*ಬರುತ್ತದೆ) ಎಂದಿದ್ದೂ, ,ಸಂಜೆ ನಾವೆಲ್ಲಾ ಮಳೆಯಲ್ಲೇ ನೆನೆದೇ ಬಂದು ಅಮ್ಮನ ಹತ್ತಿರ ಬೈಸಿಕೊಂಡಿದ್ದೂ ನೆನಪಿದೆ....
    ಅದು ಕಾಕತಾಳೀಯವೋ ,ನಂಬಿಕೆಯೋ,ನಿಜವೋ ಗೊತ್ತಿಲ್ಲಾ...ಅದ್ರೆ ಒಂದಂತೂ ಸತ್ಯ,ಆಗ ಮಳೆ ಒಂತರ ನಂಬುಗೆಯದ್ದಾಗಿತ್ತಂತೆ...ಎಲ್ಲಿ ಮಳೆಯಾಗ ಬೇಕೋ ಅಲ್ಲಿ ಸಾಮಾನ್ಯವಾಗಿ ಮಳೆ ಆಗಿಯೇ ಆಗುತ್ತಿತ್ತಂತೆ.... ಮಳೆಯ ತೀವ್ರತೆ ಹೆಚ್ಚಾಗುತ್ತದೆ ಇನ್ನು ಎಂದು ಅಜ್ಜ ಪಂಚಾಗ ನೋಡಿ ಹೇಳುತ್ತಿದ್ದುದು ನನಗೂ ಚೂರು ನೆನಪಿದೆ,"ಆರಿದ್ರೆ ಶುರುವಾತೋ,ಇನ್ನು ಜೋರೆಯಾ..." ಮತ್ತೊಮ್ಮೆ "ಈ ಮಳೆ ನಂಜು,ಕಾಲ್ ಕೊಳಿತು" ಎಂದು ಹೀಗೆ ಏನೇನೋ........


    ಈ ಮಳೆಯೂ ಈಗ ಇಂದಿನ ರಾಜಕಾರಣಿಗಳ ಥರವೇ ನಂಬಿಕೆ ಕಳೆದುಕೊಂಡಿದೆ!!!!ಎಲ್ಲರೂ ಮಳೆಯನ್ನು ಬೈಯ್ಯುವವರೇ (ರಾಜಕಾರಣಿಗಳನ್ನು ಬೈದಂತೆ)..!ಏನೇ ಇರಲಿ ,ಇಂದಿನ ಜಮಾನಾಕ್ಕೆ ನಿಮ್ಮ ಕವಿತೆ ಅರ್ಥಪೂರ್ಣವಾಗಿದೆ..ಧನ್ಯವಾದಗಳು.


    "ಗಗನ ತೊರೆದು ಇಲ್ಲೇ ಇಳಿದು" ತುಂಬಾ ಇಷ್ಟವಾದ ಸಾಲು...

    ಬನ್ನಿ ನಮ್ಮನೆಗೂ,
    http://chinmaysbhat.blogspot.in/

    ಇತಿ ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  6. ಧನ್ಯವಾದ ಚಿನ್ಮಯ. ಸ್ವಾಗತ ನಿಮಗೆ ಜಲನಯನಕ್ಕೆ... ನಿಮ್ಮ ಮಾತು ನಿಜ..ನನಗೂ ನೆನಪಿದೆ...ಕರಾವಳಿಯಲ್ಲಂತೂ (ಓದಿದ್ದು ಮಂಗಳೂರು ಹಾಗಾಗಿ) ದಿನ ಲೆಕ್ಕಾಚಾರಕ್ಕೆ ತಕ್ಕಂತೆ ಮಳೆ ಆಗುತ್ತೆ ಅಂದರೆ ಆಗೇ ಆಗುತ್ತಿತ್ತು...

    ReplyDelete