ಚಿತ್ರ: ದಿ ಹಿಂದು ದಿನಪತ್ರಿಕೆ (ಕೃಪೆ)
ಹೆತ್ತ ಕರುಳಿನ ಆಕ್ರಂದನ
ಹೆತ್ತ ಕರುಳಲ್ಲಿ ಬಿದ್ದಿತೇ ಬೆಂಕಿ..!!
ನವಮಾಸ ರಕ್ತ ಮಾಂಸ ಹಂಚಿ
ಉಸಿರ್ತುಂಬಿ ಜೀವ ಕೊಟ್ಟು..
ಪ್ರಾಣ ಹಿಂಡೋ ಪ್ರಸವ ವೇದನೆ
ಹಸುಗೂಸು ಕಂದಮ್ಮನ ಅಳಲಿಗೆ
ಹೇಗೆ ಇಲ್ಲವಾಯಿತೋ ನಾನರಿಯೆ
ಪುಟ್ಟ ಪುಟ್ಟ ಕೈಗಳು ದೇಹ ಸೋಕಿ
ನವಿರು ಮೃದು ಸ್ಪರ್ಶದ ಬಿಸಿ ತಾಕಿ
ದೇಹದಣಿವಿನ ಬಿಗುವಿನ ಆ ಮನ
ಕಂದನಾಗಮನ ಅಳು ನಗುವಿನ
ಬಂಜೆಯೆಂಜರಿದ ಜಗಕೆ ಕೂಗಿ
ಹೇಳಿದ್ದೆ ಅಂದು, ಅಮ್ಮನಾ ಬೀಗಿ
ಬಂಜೆಯೆಂದರೂ ಜಗ ಪರವಿಲ್ಲ
ನನ್ನ ಕೂಸ ಹೆಣ್ಣೆಂದವಗೆ ತರವಲ್ಲ
ಅವನಲ್ಲವೇ ಕಾರಣ ಹೆಣ್ಣಿನ ಹುಟ್ಟಿಗೆ?
ಎರಡರ ಶಕ್ತಿ ತನ್ನದೆಂದು ಬೀಗುವವಗೆ
ಕೊಡಲಾಗಲಿಲ್ಲದವನು ಕೊಲುವುದೇ?
ನನ್ನ ತಾಯ್ತನವ ಹೀಗೆ ಹೀಗಳೆವುದೇ?
ಆಫ್ರೀನ್ ಹೆಸರು ನನ್ನಪ್ಪ ಆಮ್ಮ ಇಟ್ಟದ್ದು
ಕೆನ್ನೆ ಗುಳಿ, ಅರೆ! ಏನಿದು? ಗಾಯ ಸುಟ್ಟದ್ದು?
ಅಳು ಬಂತು, ಮುಲಾಮು ಹಚ್ಚಿ, ಮುದ್ದಿಸ್ದೆ
ನೋವನ್ನ ಹೇಗೆ ಸಹಿಸಿರ್ಬೇಡ ಯೋಚಿಸ್ದೆ
ಮತ್ತೆರಡು ದಿನ, ಮಗು ಏಕೋ ಅಳ್ತಿತ್ತು
ಸ್ನಾನ ಆದ್ಮೇಲೆ ಕೈಮೇಲೆ ಕೆರೆದ ಗುರ್ತಿತ್ತು
ಇವರಿಗೋ ಆಫ್ರೀನ್ನೋಡಿದ್ರೆನೇ ಬರೀ ಸಿಡ್ಕು
ಎತ್ಕೊಳ್ರೀ ಅಂದ್ರೆ ಆಗೋರು ಬಾಲ ತುಳುದ್ಬೆಕ್ಕು
ಅಫ್ರೀನ್ ಹೆದ್ರೋಳು ಇವರ ಹತ್ರ ಹೋಗೋಕೆ
ಕಡೇಗೂ ರಾಕ್ಷಸ ಆಗಿ ಯತ್ನಿಸೋದೇ ಸಾಯ್ಸೋಕೆ?
ಆ ದಿನ ಏನೋ ಕೆಲ್ಸಕ್ಕೆ ಹೊರ ಹೋಗಿದ್ದೇ ತಪ್ಪಾಯ್ತು
ಕಂದಮ್ಮ ಆಫ್ರೀನ್ಗೆ, ಅವಳಪ್ಪನಿಂದಲೇ ಕುತ್ತಾಯ್ತು
ರಕ್ತ ಪೀಪಾಸು ಮೃಗವೂ ಕೂಸನ್ನು ಪರಚಲಿಕ್ಕಿಲ್ಲ
ಪರರ ಮಗುವನ್ನ ಭೀಕರ ಹುಚ್ಚನೂ ಚಚ್ಚಲಿಕ್ಕಿಲ್ಲ
ಅಯ್ಯೋ ವಿಧಿಯೇ..!! ಎಂತಹ ಪಾಪಿ ಅಪ್ಪನಿವನು??
ತನ್ನ ಕರಳ ಕುಡಿಯ ರಕ್ತ ಸಿಕ್ತಗೊಳಿಸಿ ಬಡಿದಿಹನು
ಸುಕೋಮಲ ತ್ವಚೆ ಪರಚಿದ ಇವನು ಮಾನವನೇ?
ಹೆಣ್ಣಾದರೇನು ತನ್ನ ಕೂಸಲ್ಲವೇ? ಕ್ರೂರ ದಾನವನೇ?
ಮಾತೂ ಬಾರದ ಕೂಸು ಎಷ್ಟು ಬಿಕ್ಕಿ ಅತ್ತಿರಬೇಡ?
ನೋವ ತಾಳಲಾರದೆ ಅತ್ತು ಅತ್ತು ಸೋತಿರಬೇಡ?
ಕ್ರೂರಿ ಅಪ್ಪನ ಮಗಳಾಗಿರಲು ಒಲ್ಲದೆ ಹೋದೆಯಾ?
ನೀನಿಲ್ಲದೇ ಬದುಕಿರಲಾರೆ ನಾನೂ ಬರುವೆ, ಬರುವೆಯಾ?
ಅಜ್ಜಾದ್ ಸರ್ ;ಬಹಳ ನೋವು ತರಿಸಿದ ಘಟನೆಯಿದು.ಮನುಷ್ಯ ಈ ಮಟ್ಟಕ್ಕೂ ಇಳಿಯಬಲ್ಲನೆ?!
ReplyDelete:(
ReplyDeleteಮಾತು ಬರುತ್ತಿಲ್ಲ ಸರ್.. ಓದಿ ಮುಗಿಸುವಷ್ಟರಲ್ಲಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು..
ReplyDeleteಉಫ್...!! ಎಂತಹ ಹೃದಯ ವಿದ್ರಾವಕ ಘಟನೆ.... ಅದು ಹೇಗೆ ಅಷ್ಟು ಚಿಕ್ಕ ಮಗು ಅದೂ ತನ್ನ ಮಗುವನ್ನ ಹಿಂಸಿಸಲು ಮನಸ್ಸು ಬರುತ್ತೋ...! :( :'(
ReplyDeleteಬಂಜೆಯೆಂದರೂ ಜಗ ಪರವಿಲ್ಲ
ನನ್ನ ಕೂಸ ಹೆಣ್ಣೆಂದವಗೆ ತರವಲ್ಲ
ಅವನಲ್ಲವೇ ಕಾರಣ ಹೆಣ್ಣಿನ ಹುಟ್ಟಿಗೆ?
ಎರಡರ ಶಕ್ತಿ ತನ್ನದೆಂದು ಬೀಗುವವಗೆ
ಕೊಡಲಾಗಲಿಲ್ಲದವನು ಕೊಲುವುದೇ?
ನನ್ನ ತಾಯ್ತನವ ಹೀಗೆ ಹೀಗಳೆವುದೇ?
- ನಿಜವಾದ ಮಾತು.... ಹೆಣ್ಣು ಹುಟ್ಟಿಗೆ ಹೆಣ್ಣು ಹೊಣೆಯೇ ..!!?
ಕ್ರೂರಿ ಅಪ್ಪನ ಮಗಳಾಗಿರಲು ಒಲ್ಲದೆ ಹೋದೆಯಾ?
ReplyDeletesaRi sIr
Swarna
ಹೌದು ಡಾಕ್ಟ್ರೇ, ಟಿವಿಯಲ್ಲಿ ಗೋಳಿನ ಕಥೆ ನೋಡ್ತಾ ಕಣ್ಣಲ್ಲಿ ನೀರು ಬಂತು... ಹಸುಗೂಸನ್ನು ಆ ಅಮಾನುಷ ರೀತಿ ಹಿಂಸಿಸಿದ ಅವನು ಮೃಗವಾಗಿರಲೂ ನಾಲಾಯಕ್....
ReplyDeleteತುಂಬಾ ಅಮಾನವೀಯ ಅಲ್ವಾ ವನಿತಾ...?? ಆ ಮಗುವಿನ ಅಸಹಾಯ ಸ್ಥಿತಿ ನೆನಪಿಸಿಕೊಂಡರೆ ಕರಳು ಕಿವುಚಿದಂತಾಗುತ್ತೆ... ಇಂತಹವರೂ ಇದ್ದಾರಾ ಜಗತ್ತಲ್ಲಿ.
ReplyDeleteಸಂಧ್ಯಾ ನನಗೂ ಕಣ್ಣಾಲಿ ತುಂಬಿ ಬಂದ್ವು ನ್ಯೂಸ್ ನೋಡುವಾಗ....ಪಾಪ ಪುಟ್ಟ ಮಗು...ಛೇ,,,,
ReplyDeleteಕಾವ್ಯ ಧನ್ಯವಾದ ಪ್ರತಿಕ್ರಿಯೆಗೆ... ಇದಕ್ಕೆ ಹಿಂದೆ ಉತ್ತರಭಾರತದ ಘಟನೆ ಕೇಳಿ ಏನೋ..ಹುಚ್ಚತನದ ಕ್ರಿಯೆ ಅನ್ನಿಸ್ತು...ಆದ್ರೆ ಈಗಿನ ಘಟನೆ ..ಹೌದು ಇದೊಂದು ಪಾಸವೀ ವೈಕ್ತಿತ್ವ ಇಂತಹವರಿಗೆ ಕ್ಷಮೆಯೇ ಇಲ್ಲ...
ReplyDeleteಸ್ವರ್ಣ... ಬಹಳ ಮನಸ್ಸಿಗೆ ನೋವುಂಟುಮಾಡಿದ ಘಟನೆ...
ReplyDeleteಮೊನ್ನೆಯಷ್ಟೆ ಇದೇ ಘಟನೆಯೊಂದರ ಬಗ್ಗೆ ಬ್ಲಾಗೊಂದರಲ್ಲಿ ಕಥೆಯೊಂದನ್ನೋದಿ ಬೇಸರಗೊಂಡಿದ್ದೆ. ಈಗ ನಿಮ್ಮ ಬ್ಲಾಗಲ್ಲಿ ಕವನವನ್ನೋದುತ್ತಿದ್ದೇನೆ.
ReplyDeleteಎಂತಾ ಮನುಷ್ಯರಿರ್ತಾರಲ್ವಾ ? ತಮ್ಮ ಮಕ್ಕಳನ್ನೇ ಚಚ್ಚಿ ಕೊಲ್ಲುವಷ್ಟು ? ಓದಿ ಬೇಸರವಾಯಿತು :-(