Sunday, April 15, 2012

ಎದೆಯ ಮಿಡಿತ (ಮತ್ತೊಂದು ಕರವೋಕೆ)




ದಿಲ್ ತಡಪ್ ತಡಪ್ ಕೆ ಕೆಹ್ ರಹಾ ಹೈ...
ಚಿತ್ರ: ಮಧುಮತಿ, ಸಂಗೀತ: ಸಲೀಲ್ ಚೌಧರಿ, ಗಾಯಕರು: ಮುಖೇಶ್,
..........ಎದೆಯ ಮಿಡಿತದ ಹಿಡಿತ...........
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss.../೨/

ನೀನೇ ಇರದ ಮರದ ತಂಪ ಸೊಂಪು ಸೋತಿದೇss
ಸುಮದ ಮಧುರ ಸುಧೆಯ ಇಂದು ಬನವು ಬಯಸಿದೇss /ನೀನೇ ಇರದ/
                   ಇಂದು ಬನವು ಬಯಸಿದೆ /೨/                                           (ಗಂಡು ದನಿ)

ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ../೨/
ನೀನು ಬಂದು ನನ್ನ ಜೀವ ಹಿತವ ಕಂಡಿದೇ
ಜೀವಿಸಿಹೆನು ನಿನ್ನ ಪ್ರೀತಿ ಉಸಿರ ತುಂಬಿದೇ..ss /ನೀನು ಬಂದು/
                             ಪ್ರೀತಿ ಉಸಿರ ತುಂಬಿದೇ/೨/

ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss...                                    (ಗಂಡು ದನಿ)
ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ                                                (ಹೆಣ್ಣು ದನಿ)
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ..


ಮುಗುಳು ನಗೆಯ ಬೀರೋ ನಿನ್ನ ಸೊಬಗು ಇಲ್ಲಿದೇ..
ನಾನು ಎಲ್ಲೋ ಹೃದಯವೆಲ್ಲೋ ಒಂದೂ ತಿಳಿಯದೇ ss.../೨/          (ಗಂಡು ನಂತರ ಹೆಣ್ಣು ದನಿ)
                   ಎಲ್ಲೋ ಒಂದೂ ತಿಳಿಯದೇ../೨/
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss...                                         (ಗಂಡು)
ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ..                                         (ಹೆಣ್ಣು)                         
                         

2 comments:

  1. ನಿಮ್ಮ ಹಾಡನ್ನು ಅದೇ ರಾಗದಲ್ಲಿ ಹಾಡಲು ಪ್ರಯತ್ನಿಸುತ್ತಿದ್ದೇನೆ.

    ಮೂಲ ಸಾಹಿತ್ಯಕ್ಕೆ ಕೊರತೆ ಇರದಂತೆ ನಿಮ್ಮ ಸಾಹಿತ್ಯ ರಚನೆ ಸೆಡ್ಡು ಹೊಡೆದಿದೆ.

    ನಿಮ್ಮ ಅಭಿರುಚಿಗಳ ಪಟ್ಟಿ ತಯಾರಿಸುತ್ತಿದ್ದೇನೆ.

    ಅಂದ ಹಾಗೆ, ಸಲೀಲ್ ಚೌದರಿ ನನ್ನ ನೆಚ್ಚಿನ ಸಂಗೀತ ನಿರ್ದೇಶಕ ಸಾರ್.

    ಮಧುಮತಿ ಚಿತ್ರಕ್ಕೆ ದಿಲೀಪ್ ಗುಪ್ತ ಛಾಯಾಗ್ರಾಹಣವಿದೆ. ಅವರ ಕಪ್ಪು ಬಿಳುಪು ಚಿತ್ರಣದಲ್ಲಿ ಆಳ ಮತ್ತು ನೈಜತೆ ಗಮನಿಸಿ.

    ReplyDelete
  2. ಹೌದು ಬದರಿ... ಇದೇ ಚಿತ್ರದ ಸುಹಾನಾ ಸಫರ್ ಔರ್ ಎಹ್ ಮೌಸಮ್.... ಹಾಡು ಸಹಾ ಚನ್ನಾಗಿದೆ...
    ಬದರಿ, ಯೂಟ್ಯೂಬಿನಲ್ಲಿ ಹಾಡು ಕೇಳ್ತಾ ಮಾಡಿದ್ದು.. ಪದಜೋಡಣೆ..ಧನ್ಯವಾದ.

    ReplyDelete