Monday, May 21, 2012

ನಂಗೊತ್ತಿಲ್ಲ ಮಗಾ
ನಂಗೊತ್ತಿಲ್ಲ ಮಗಾ
ಪುಟ್ಟಾ..ಏನ್ಲಾ ಮಾಡ್ತಿದ್ದಿಯಾ?
ಏನಿಲ್ಲಪ್ಪಾ.. ಒಸಿ ಟೀವಿ ನೋಡ್ತಾ ಇವ್ನಿ,,, ತೋಳ ಬಂತು ತೋಳ ಟೀವಿನಾಗೆ ಕತೆ ಬತ್ತಾ ಐತೆ
ಅಪ್ಪಾ..ಒಂದ್ಯಿಸ್ಯ..... ಅಲ್ಲಾ ಆ ಹೈದ ಸುಮ್ ಸುಮ್ನೆ ಯಾಕೆ ಆಟೊಂದ್ ಕಿತ ಅಳ್ಳಿ ಜನ್ಗೊಳ್ನ ’ತೋಳ ಬಂತಪ್ಪೋ ತೋಳ’ ಅಂತ ಎದಿರ್ಸಿದ್ದು.... ಅದ್ಕೇಯಾ ನಿಜ್ಕೂ ತ್ವಾಳ ಬಂದ್ರೂ ಯಾರೂ ಸಾಯಕ್ಬರ್ನಿಲ್ಲ
ಊಂ ಕಣ್ಮಗ, ಅದ್ಕೇ ಯೋಳೋದು ಒಂದಪ ಸುಳ್ ಯೋಳಿದ್ರೂ ಓಗ್ಲಿ ಬಿಡು ಏನೋ ತಪ್ಪಾಗ್ಯದೆ ಅಂತ ಮನ್ನಿಸ್ತಾರೆ...ಕಿತಾ ಕಿತಾ ಅಂಗೇ ಮಾಡಿದ್ರೆ..ಅದ್ನ ಜನ ಅಚ್ಕೊಳ್ಳೊಲ್ಲ...ಅಂತವ್ರನ್ನ ನಂಬಾಕೂ ಓಗಲ್ಲ...
ಊಂ... ನಮ್ಮಾಜಿ ಮುಮಂ ಗ್ಳೂ ಆಟೊಂದು ಒಳ್ಳೆ ಎಸ್ರ್ ಮಾಡಿದ್ರು, ಜನ ಆಸೀರ್ವಾದಾನೂ ಮಾಡಿದ್ರು..... ಈ ಪಾಟಿ ತಮಾಸಿ ಮಾಡಿ ಜನಾನ ಯಾಮರ್ಸಿ .. ಈವಾಗ ಅಯ್ಯೋ ತ್ವಾಳ ಬಂದೈತಿ ನನ್ಕಾಪಾಡ್ರಿ ಅಂದ್ರೆ...ಯಾರೂ ನಂಬಾಕಿಲ್ಲ ಅಲ್ವಾ???
ಅಲ್ವಾ ಮತ್ತೆ.. ಜನಾನೂ ಶ್ಯಾನೆ ಬುದ್ದಿ ಕಲ್ತ್ಕಂಡವ್ರೆ... ಶ್ಯಾಲೆ, ದುಡ್ಡು, ಎಂಡ, ಇಂತಾವೆಲ್ಲಾ ಈಸ್ಕೊಂಡೂ...ಒತ್ತೋ ಕಡೆ ಓಟ್ ಒತ್ತಾಕೋ ಮಟ್ಟಕ್ ಬಂದವ್ರೆ...  ತ್ವಾಳ ಅಂತ ಅಂದ್ಕಂಡು ಕುರಿ ಬಂಡ ಕತ್ತರ್ಸಿ ಮಾರ್ಕೊಂಡು, ಬಲ್ತ್ ಮ್ಯಾಲೆ ಕಟ್ಕನ್ಕೊಟ್ಟು  ದುಡ್ಮಾಡೋ ಕುರಿ ಕಾಯೊರ್ನ ನಂಬಾಕಿಲ್ಲ...
ಆದ್ರೆ...ಅವರು ನಾನು ಬೋ ಸಾಚಾ, ಬೇಕಾದ್ರೆ ಸ್ವಾಮಿಗಳ್ನ ಕೇಳಿ ಅಂತ ಯೋಳ್ತಾರಲ್ಲಾ... ಸ್ವಾಮ್ಗೋಳು ಶಾಮೀಲಾ ಅಂಗಾರೆ...?
ನಂಗೊತ್ತಿಲ್ಲ ಮಗ

10 comments:

 1. ಅಲ್ವಾ ಮತ್ತೆ,ಮಗು ಕೇಳಿದ್ದು ತಪ್ಪೇನಿಲ್ಲ ಬಿಡಿ, ದಿನಕ್ಕೊಂದು ವೇಷ, ದಿನಕ್ಕೊಂದು ಭಾಷೆ ಅಂತ ಮಾಡ್ತಾ ಇದ್ದರೆ ಯಾರು ನಂಬುತ್ತಾರೆ?

  ವಾಸ್ತವ ಸತ್ಯ ಭಯ್ಯಾ....

  ReplyDelete
 2. ಪ್ರವೀಣ್...ಹ್ಯಾಗಿದ್ದೀಯೋ ತಮ್ಮಯ್ಯಾ...ಈ ಮಧ್ಯೆ ಎಲ್ಲೂ ಕಾಣ್ತಿಲ್ಲ...ಅದಕ್ಕೇ ಇಲ್ಲಿ ಉ.ಕು.ಸಾಂ....ಹಹಹಹ ಧನ್ಯವಾದ ಕಣಣ್ಣೋ...

  ReplyDelete
 3. ಇಂದಿನ ಪ್ರಸಕ್ತ ರಾಜಕೀಯ ದೊಂಬರಾಟಕ್ಕೆ ಕೈಗನ್ನಡಿ ಈ ಬರಹ. ಮುಗ್ಧವಾಗಿ ಆ ಮಗು ಕೇಳಿದ ಪ್ರಶ್ನೆಗಳಾವುವು ಅಪ್ರಸ್ತುತವಲ್ಲ.

  ಪೆದ್ದ ಮತದಾರ ಮಾತ್ರ ನಿರಂತರ ಪೆಚ್ಚೇ!! ನೋಡೋಣ ಮುಂದಿನ ಚುನಾವಣೆಗಾದರೂ ಸರಿಯಾದ ಪಾರ್ಟಿ ಆರಿಸಿ ಬರುತ್ತೋ ಏನೋ?

  ReplyDelete
 4. ಬದರಿ ಯಾರನ್ನ ನಂಬೋದೋ ಯಾರನ್ನ ನೆಚ್ಚಿಕೊಳ್ಳೋದೋ...??? ಆದರೆ ಮಕ್ಕಳಿಗೆ ಅನುಮಾನ ತಪ್ಪೊಲ್ಲ...ನಮಗೆ ಬವಣೆಗೆ ಕೊನೆಯಿಲ್ಲ...

  ReplyDelete
 5. ಅಜಾದ್,: ರಾಜಕೀಯ ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದು ನೋಡಿರಲಿಲ್ಲ. ನಿಮ್ಮ ತೋಳಬಂತು ತೋಳ ವ್ಯಂಗ್ಯ ತುಂಬಾ ಚೆನ್ನಾಗಿದೆ...

  ReplyDelete
 6. ಧನ್ಯವಾದ ಶಿವು...ಹೀಗೂ ನಡಿತಿವೆ ದಿನ....

  ReplyDelete
 7. ಚೆನ್ನಾಗಿದೆ ವಿಡಂಬನೆ. ಅಪ್ಪ ಮಕ್ಕಳ ಸಂಭಾಷಣೆಯ ರೂಪದಲ್ಲಿ ಪರೋಕ್ಷವಾಗಿ ಈಗಿನ ರಾಜಕೀಯ ದೊಂಬರಾಟವನ್ನು, ಮಾ.ಮು.ಮಂ ರನ್ನು ಚೆನ್ನಾಗಿಯೇ ಝಾಡಿಸಿದ್ದೀರ :-)

  ReplyDelete
 8. ಪ್ರಶ್, ಧನ್ಯವಾದ...ಜಲನಯನಕ್ಕೆ ಸ್ವಾಗತ,,,,

  ReplyDelete
 9. ತೋಳದ ಕತೆ ಚೆನ್ನಾಗಿದೆ. ಈಗ ತೋಳ ಯಾರು, ಕುರಿ ಯಾರು ಎಂದು ನಂಬುವುದೇ ಕಷ್ಟವಾಗಿದೆ

  ReplyDelete
 10. ದೀಪಸ್ಮಿತಾ.... ನನಗೂ ಅರ್ಥ ಆಗ್ತಿಲ್ಲ ಬಹುಶಃ ನಾಡಲ್ಲಿರೋ ನಿಮಗೆ ಸ್ವಲ್ಪ ಸ್ಪಷ್ಟ ಅನಿಸಿರಬೇಕು...

  ReplyDelete