Saturday, June 2, 2012


ಸ್ನೇಹಿತರೇ, ಇದೊಂದು ಹೊಸ ಪ್ರಯೋಗ, ನಿಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಇದ್ದರೆ ಮುಂದುವರೆಸುವ ಯೋಚನೆಯಿದೆ. ಇದಕ್ಕೆ "ಬಟಾಣಿ-ಚಿಕ್ಕಿ" ಎಂದು ಹೆಸರಿಸಿದ್ದೇನೆ. ಇಲ್ಲಿ ಒಂದು ಮೂಲ ವಿಷಯ ಮತ್ತು ಅದರಲ್ಲಿ ಸಣ್ಣ ಸಣ್ಣ ಸ್ವತಂತ್ರ ಭಾವ ತುಣುಕುಗಳು. ಕವನ ಶೀರ್ಷಿಕೆ ಜತೆ-ಬಟಾಣಿ ಚಿಕ್ಕಿ 
ಇಲ್ಲಿ ಒಂದು ಮಾದರಿ ನಿಮ್ಮ ಮುಂದೆ
ನೋಡವಳಂದಾವ-ಬಟಾಣಿ ಚಿಕ್ಕಿ: ಕವನ ಹೆಣ್ಣಿನಂದವನ್ನು ಕುರಿತಾಗಿದ್ದು ಚೂರುಗಳಲ್ಲಿ ಸ್ವತಂತ್ರ ಭಾವ ಪ್ರಕಟಣೆ..."ಕಣ್ಣ ಹೊಳಪು", "ಖೆಡ್ಡಾ-ಗುಳಿ", ಇತ್ಯಾದಿ.....
ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಸ್ವಾಗತ.

ನೋಡವಳಂದಾವ ಬಟಾಣಿ ಚಿಕ್ಕಿ
ಕಣ್ಣ ಹೊಳಪು
ಕಣ್ಣು ಏಕೋ ಏನೋ ಎಂಥಾ ಹೊಳಪು
ಹೃದಯ ಚುಚ್ಚಿಬಿಡುವುದೀ ಬಾಣ ಎಂಥಾ ಚೂಪು

ಖೆಡ್ಡಾ-ಗುಳಿ
ನಕ್ಕರವಳು ಮುತ್ತಿನಂಥ ಮೋಹಕ ಕೆನ್ನೆಕುಳಿ
ಉರುಳಿಸಲು ಸಾಕು ಅದುವೇ ಖೆಡ್ದದ ಗುಳಿ

ಹುಬ್ಬು-ಗತ್ತಿ
ಹುಬ್ಬು ತೀಡಿ ತಂದು ಮುಖಕೆ ಮೆರುಗು
ಕೊಲ್ಲಲೆಂದೇ ಝಳಪು ಬಂತೇ ಕತ್ತಿಗಲಗು

ಬಳುಕು-ಛಳುಕು
ನಡೆ, ಜಡೆ ಸೊಂಟ ಬಳಕು ಉಫ್.. ಥಳುಕು
ಅದುರು ಛಳಿಯಲ್ಲೂ ಅದು ಬೆವರಿಳಿಸೋ ಛಳುಕು

ಕೋಗಿಲೆ-ಉಲಿಕೆ
ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ
ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ

ಜಡೆ-ಹೆಡೆ-ಕೊಡೆ
ನೀಳಗಪ್ಪು ಬೆನ್ನ ಹಿಂದೆ ಜಾರಿ ಬಿದ್ದ ಹಾವಿನಂಥ ಜಡೆ
ಕೇಶರಾಶಿ ಹರಡಿಕೊಂಡ್ರೆ ಆದೀತು ಅದುವೇ ಕೊಡೆ

ಕೆಂಪು ನೀರೆ
ನಾಚಿ ನೀರು ಕೆನ್ನೆಗೆಂಪು ನೆಲವ ಕೆರೆವ ಬೆರಳು
ನನಗಿದು ನಿತ್ಯಸತ್ಯ ನೀನಾಗಬೇಡ ಬೆಪ್ಪೆ ಮರಳು

19 comments:

 1. ಆಹ್ಹಾ.... !

  ಸೊಗಸಾಗಿದೆ ಕಣೊ ಆಜಾದೂ.... !

  ಹಿಂದಿ ಶಾಯರಿ ಥರಹ....!

  ಮುಂದುವರೆಸು.... ಹೊಸ ಪ್ರಯೋಗ.. !

  ಜೈ ಹೋ !!

  ReplyDelete
  Replies
  1. ಜಬ್ ಹೋತಾ ಹೈ ಓಹ್, ಬ್ಲಾಗ್ ಕೊ ಮೇರಿ ದೇಖ್ ವಾಹ್ ಕರೆ, ತೊ ಕಭಿ ಅಪ್ನೆ ಬ್ಲಾಗ್ ಕೊ ಔರ್ ಕಭಿ ಉಸ್ಕೊ ದೇಖ್ತೆ ಹೈಂ..... ಎಹ್ ಹೈ ದೋಸ್ತ್ ಪ್ರಕಾಶ್....ಹಹಹ

   Delete
 2. ಆಜಾದ್ ಸರ್;ಸುಂದರ ಪ್ರಯೋಗ ಮುಂದುವರೆಸಿ.
  ನಾಚಿ ಕೊಂಕಿಸಿ ಕೊರಳು,
  ನೆಲವ ಕೆರೆವ ಹೆಬ್ಬೆರಳು.
  ತೊಡುತ್ತಿದ್ದಾಳೆ ಹಳ್ಳ!!
  ಬಿದ್ದೀ ಜೋಕೆ ಮಳ್ಳ!!!

  ReplyDelete
  Replies
  1. ಡಾಕ್ಟ್ರೇ, ನಿಮ್ಮ ಬಟಾಣಿ...ಕಟುಂ ಕಟುಂ...ಹಹಹಹ ಧನ್ಯವಾದ

   Delete
 3. ಧನ್ಯವಾದ ಪ್ರಕಾಶೂ,,,,

  ReplyDelete
 4. ಜಲನಯನ,
  ನಿಮ್ಮದು ಅದ್ಭುತ ಪ್ರತಿಭಾವೈವಿಧ್ಯ!
  (೧)ಬಟಾಣಿ ಎಂದರೆ tiny; ಚಿಕ್ಕಿ ಅಂದರೆ star.
  ಆದುದರಿಂದ ಬಟಾಣಿಚಿಕ್ಕಿ ಅಂದರೆ tiny star.
  (೨)ಬಟಾಣಿ ಎಂದರೆ ಒಂದು ಕುರುಕುಲು ತಿನ್ನುವ item.
  ಚಿಕ್ಕಿ ಎಂದರೆ ಬೆಲ್ಲ ಹಾಗು ಸೇಂಗಾಗಳ ಒಂದು ಪಾಕವಿಶೇಷ.
  ಆದುದರಿಂದ ಬಟಾಣಿಚಿಕ್ಕಿ ಅಂದರೆ ಕಟುಮಧುರ ತಿನಿಸು.

  ನಿಮ್ಮ ಬಟಾಣಿಚಿಕ್ಕಿ ಈ ಎರಡೂ ವೈಶಿಷ್ಟ್ಯಗಳನ್ನು ಹೊಂದಿದೆ!

  ReplyDelete
  Replies
  1. ಸುನಾಥಣ್ಣ.... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ .. ನನ್ನ ಕವನ (ಚುಟುಕು) ಸಂಕಲನಕ್ಕೆ ಇದೇ ಹೆಸರನ್ನು ಉಪ ಪಂಕ್ತಿಯಲ್ಲಿ ಇಲ್ಲವೇ ಶೀರ್ಷಿಕೆಯಲ್ಲಿ ಉಪಯೋಗಿಸುವ ಯೋಚನೆ ಮಾಡುತ್ತಿದ್ದೇನೆ. ನನ್ನ ಯೋಚನೆಗೆ ಪುಷ್ಠಿ ಸಿಕ್ಕಿದ್ದು ಈ ಪದಕ್ಕೆ ನೀವು ಕೊಟ್ಟ ಉತ್ತಮವಾದ ಇನ್ನೊಂದು ಆಯಾಮದಿಂದ... ಧನ್ಯವಾದ.
   ನಿಮ್ಮ ಉಪಸ್ಥಿತಿಯ ಭಾಗ್ಯ ನನ್ನ ಕವನ ಸಂಕಲನ ಬಿಡುಗಡೆ (ಯೋಜಿತ ಆಗಸ್ಟ್ ೨೦-೨೫) ಗೆ ಸಿಕ್ಕರೆ ನನಗಂತೂ ತುಂಬಾ ಸಂತೋಷವಾಗುತ್ತದೆ.

   Delete
 5. ಬಟಾಣಿ ಚಿಕ್ಕಿಗಳು ಬಹಳ ರುಚಿಯಾಗಿವೆ..
  ಎರಡೇ ಸಾಲುಗಳಲ್ಲಿ ಭಾವ ಗುಚ್ಛಗಳು

  ReplyDelete
  Replies
  1. ಸಂದ್ಯಾ ಧನ್ಯವಾದ...ಬಟಾಣಿ ಚಿಕ್ಕಿ ..ಮತ್ತು ಚುಟುಕು. ಸಂಕಲನ ಮಾಡುವ ಯೋಚನೆಯಿದೆ...ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದ...

   Delete
 6. ಈ ಪ್ರಯೋಗ ಅಮೋಘವಾಗಿದೆ ಸಾರ್. ಬಟಾಣಿ ಚಿಕ್ಕಿ ಓದಿಕೊಳ್ಳಲು ಬಾಯಿ ಪಾಠ ಮಾಡಿ ಸ್ನೇಹಿತರ ಮುಂದೆ ಹರಿಬಿಡಲು ಅಥವ ಬರಹಗಳಲ್ಲಿ ಅಲ್ಲಲ್ಲಿ ಉಕ್ತಿಯಂತೆ ಬಳಿಸಲು ಉತ್ತಮವಾಗಿವೆ.

  ನೀವು ಬಹು ವ್ಯಕ್ತಿತ್ವದ ರಸಿಕ ಹೃದಯಿ.

  ReplyDelete
  Replies
  1. ಧನ್ಯವಾದ ಬದರಿ....ನಿಮ್ಮ ಪ್ರೋತ್ಸಾಹಕ್ಕೆ....

   Delete
  2. This comment has been removed by the author.

   Delete
 7. ಅಜಾದಣ್ಣ ಇಷ್ಟು ದಿನದ ಶೇಂಗಾ ಚಿಕ್ಕಿ ಜೊತೆ ಈಗಿನ ಬಟಾಣಿ ಚಿಕ್ಕಿ ಕೂಡ ಮಧುರವಾಗಿದೆ, ರುಚಿಯಾಗಿಯೂ ಇದೆ... :) :)

  ReplyDelete
  Replies
  1. ಕಾವ್ಯಾ ಪುಟ್ಟಾ...ಧನ್ಯವಾದ ನೀವೂ ತಿನ್ನಿ ಬಟಾಣಿ ಚಿಕ್ಕಿ...ಸ್ವಾದ ಹೇಗೆ ಅಂತ ಹೇಳಿದ್ರಿ ಅದೇ ನನ್ನ ಭಾಗ್ಯ...ಧನ್ಯವಾದ

   Delete
 8. ಧನ್ಯವಾದ ದಯಾನಂದ್ ಸರ್... ಸ್ವಾಗತ ಜಲನಯನಕ್ಕೆ.

  ReplyDelete
 9. ಏನ್ ಆಜಾದ್ ಅವರೇ ನಾನು ನಿಮಗೆ ನೆನಪಿದ್ದೆನಾ.........................?
  ಬಹಳ ವರ್ಷಗಳ ನಂತರ ನಿಮ್ಮನ್ನು ಕಾಡಲು ಮತ್ತೆ ಬಂದಿದ್ದೇನೆ. ಹಿ ಹ್ಹಿ ಹ್ಹಿ ಹ್ಹಿ ಹೀ ..............!

  ReplyDelete
 10. ಏನಿದೇನಿದು...??? ಎಲ್ಲಿ ಅಜ್ಞಾತವಾಗಿದ್ದಿರಿ...?? ಬಂದ್ರಲ್ಲಾ ಸದ್ಯ....

  ReplyDelete
 11. ಬಟಾಣಿ ಅಂತ ಕರೆದು ದೊಡ್ಡ ಕಲ್ಲಂಗಡಿ ಹಣ್ಣೇ ಇಟ್ಟಿದ್ದೀರಿ ಆಝಾದ್ ಸರ್,. ಸೂಪರ್.. ಲೇಟ್ ಆದ ಪ್ರತಿಕ್ರಿಯೆಗೆ ಕ್ಷಮೆಯಿರಲಿ.

  ReplyDelete