ಅಂಕೆಯಿಲ್ಲ ಜ್ಞಾನದಾಹಕೆ
ಸಂಖ್ಯೆಯಿಲ್ಲ ಪುಸ್ತಕವಿಧಕೆ
ಅಂಕೇಗೌಡರಿಗೆ ಸಾಟಿಯಿಲ್ಲ
ಪುಸ್ತಕ ಪ್ರೇಮಿಗೆ ಎದುರಿಲ್ಲ.
ಅಂಕೇಗೌಡರ ಪುಸ್ತಕ ಸಂಗ್ರಹ ಮತ್ತು ಅವರ ಪುಸ್ತಕ ಸಂಗ್ರಹದ ಅಮಿತದಾಹ ನೋಡಿ ನನ್ನ ಮನ ಒಡನೇ ಹೇಳಿದ್ದು ಹೀಗೆ.
“ಭೂಮಿಯೆಂದರೆ ಬಾಯ್ಬಿಡುವ ಮಂತ್ರಿ, ಶಾಸಕರೇ ತುಂಬಿರುವ ದೇಶದ ಮತ್ತು
ಮಣ್ಣನ್ನೇ ಮಾರಿದವರ ಕಂಡ ಕನ್ನಡನಾಡಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂತಹವರೂ
ಕಾಪಾಡಿಕೊಳ್ಳುವ ತನ್ನದೇ ಆದ ೬೦x೪೦ ಸೈಟನ್ನು ಮಾರಿ ಪುಸ್ತಕ ಕೊಂಡವರ ಕಂಡಿರುವಿರಾ?? ಪುಸ್ತಕ ಸಂಗ್ರಹ
ದಾಹ ಅಂಕೇಗೌಡರ ಇಂದಿನ “ಪುಸ್ತಕ ಮನೆ” ಯ ಸ್ಥಾಪನೆಗೆ ಕಾರಣ. ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ
ಎನ್ನುವುದು ನಿಜ, ಅದರಲ್ಲೂ ಸಜ್ಜನಿಕೆ ಮೆರೆವವರೂ ಇದ್ದಾರೆನ್ನುವುದು ಎಲ್ಲವೂ ನಿರಾಶಾದಾಯಕವಲ್ಲ
ಎನ್ನುವುದನ್ನು ತೋರಿಸಿ, ಸಕಾರಾತ್ಮಕ ನಿಲುವು ಜನಸಾಮಾನ್ಯರಲ್ಲಿ ಬೇರೂರುವಂತೆ ಮಾಡುತ್ತದೆ. ಅಂಕೇಗೌಡರ ಆಸಕ್ತಿ, ಜನ-ಜ್ಞಾನದಾನ ಪರ ನಿಲುವಿಗೆ
ಮಾರುಹೋದ ಸ್ಥಳೀಯ ಶಾಸಕರು ಮತ್ತು ಖೋಡೇ ಔದ್ಯಮಿಕ ಸಂಸ್ಥೆಯ ಸಹಾಯದಿಂದ ಒಂದು ಟಾಕೀಸಿನ ಛಾವಣಿಯಡಿ
ಪುಸ್ತಕಗಳ ವರ್ಗೀಕರಣ ಪ್ರಾರಂಭವಾಗಿದೆ.
ಇಲ್ಲಿಗೆ ನಮ್ಮ ಭೇಟಿ ಆಗಿದ್ದು ನಿಜಕ್ಕೂ ಒಂದು ಮರೆಯಲಾಗದ ಮತ್ತು
ಧನ್ಯ ಅನುಭವ. ಇದಕ್ಕೆ “ನಮ್ಮೊಳಗೊಬ್ಬ ’ಬಾಲು’” ಹಾಗೂ ಪ್ರಕಾಶ್ ಹೆಗ್ಗಡೆ (ಇಟ್ಟಿಗೆ ಸಿಮೆಂಟ್)
ಕಾರಣೀಭೂತರು, ನಮ್ಮ ಹೃದಯಪೂರ್ವಕ ಧನ್ಯವಾದ ಈ ಮಿತ್ರರಿಗೆ.
ಅಂಕೇಗೌಡರ ಜ್ಞಾನದೇಗುಲದ ವಿಳಾಸ:
ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ,
ಪಾಂಡವಪುರ ತಾಲುಕ್, ಮಂಡ್ಯ ಜಿಲ್ಲೆ
ದೂರವಾಣಿ: 9242822934.
ಮಾನವನಾಗಿ ಹುಟ್ಟಿ ಪ್ರಾಣಿ ಪಕ್ಷಿಗಳಂತೆ ಜೀವಿಸದೇ, ಹೆತ್ತವರ, ಹೊತ್ತನೆಲದ ಮತ್ತು ಸಮಾಜದ ಹಿತಕಾಗಿ ಏನಾದರೂ ಮಾಡಲೇಬೇಕಾಗಿರುವುದನ್ನು ಎಲ್ಲರೂ ಮನಗಾಣಬೇಕು, ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವ ಉತ್ಕಟಾಕಾಂಕ್ಷೆಯ ಅಂಕೇಗೌಡರ ವ್ಯಕ್ತಿತ್ವ ನಿಜಕ್ಕೂ ಅನುಕರಣೀಯ, ನಮನೀಯ, ಶ್ಲಾಘನೀಯ.
ಪುಸ್ತಕಾಲಯಕ್ಕೆ ಭೇಟಿ ನೀಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಮ್.ಎನ್ ವೆಂಕಟಾಚಲಯ್ಯನವರು "ಪುಸ್ತಕ ಪ್ರೇಮಿ ಅಂಕೇಗೌಡರು ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು. ಈ ಪುಸ್ತಕಾಲಯವು ಭೂಮಿಯ ಮೇಲಿನ ಸಾರಸ್ವತ ಜ್ಞಾನಲೋಕವೆನಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.
ಒಡಿಶಾದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾ.ಮೂ. ವಿ. ಗೋಪಾಲ ಗೌಡರು ಅಂಕೇಗೌಡರ ಪುಸ್ತಕಾಲಯ ಕಂಡು ನಿಬ್ಬೆರಗಾಗಿ "ಅಂಕೇಗೌಡರ ಪುಸ್ತಕ ಸಂಗ್ರಹದ ಸಾಧನೆ ಅಮೋಘವಾದುದು, ಇಂಥ ಅಮೂಲ್ಯವಾದ ಜ್ಞಾನ ಭಂಡಾರಕ್ಕೆ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಜ್ಞಾನ ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ" ಎಂದು ಹೇಳಿದ್ದಾರೆ.
ಗೌಡರ ಜ್ಞಾನದಾನದ ಈ ಅಭೂತಪೂರ್ವ ಮಾರ್ಗವನ್ನು, ಅವರ ಆಸಕ್ತಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ೫೦ ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ.
ಅಂಕೇಗೌಡರ ಜ್ಞಾನದೇಗುಲದ ವಿಳಾಸ:
ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ,
ಪಾಂಡವಪುರ ತಾಲುಕ್, ಮಂಡ್ಯ ಜಿಲ್ಲೆ
ದೂರವಾಣಿ: 9242822934.
ಮಾನವನಾಗಿ ಹುಟ್ಟಿ ಪ್ರಾಣಿ ಪಕ್ಷಿಗಳಂತೆ ಜೀವಿಸದೇ, ಹೆತ್ತವರ, ಹೊತ್ತನೆಲದ ಮತ್ತು ಸಮಾಜದ ಹಿತಕಾಗಿ ಏನಾದರೂ ಮಾಡಲೇಬೇಕಾಗಿರುವುದನ್ನು ಎಲ್ಲರೂ ಮನಗಾಣಬೇಕು, ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವ ಉತ್ಕಟಾಕಾಂಕ್ಷೆಯ ಅಂಕೇಗೌಡರ ವ್ಯಕ್ತಿತ್ವ ನಿಜಕ್ಕೂ ಅನುಕರಣೀಯ, ನಮನೀಯ, ಶ್ಲಾಘನೀಯ.
ಪುಸ್ತಕಾಲಯಕ್ಕೆ ಭೇಟಿ ನೀಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಮ್.ಎನ್ ವೆಂಕಟಾಚಲಯ್ಯನವರು "ಪುಸ್ತಕ ಪ್ರೇಮಿ ಅಂಕೇಗೌಡರು ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು. ಈ ಪುಸ್ತಕಾಲಯವು ಭೂಮಿಯ ಮೇಲಿನ ಸಾರಸ್ವತ ಜ್ಞಾನಲೋಕವೆನಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.
ಒಡಿಶಾದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾ.ಮೂ. ವಿ. ಗೋಪಾಲ ಗೌಡರು ಅಂಕೇಗೌಡರ ಪುಸ್ತಕಾಲಯ ಕಂಡು ನಿಬ್ಬೆರಗಾಗಿ "ಅಂಕೇಗೌಡರ ಪುಸ್ತಕ ಸಂಗ್ರಹದ ಸಾಧನೆ ಅಮೋಘವಾದುದು, ಇಂಥ ಅಮೂಲ್ಯವಾದ ಜ್ಞಾನ ಭಂಡಾರಕ್ಕೆ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಜ್ಞಾನ ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ" ಎಂದು ಹೇಳಿದ್ದಾರೆ.
ಗೌಡರ ಜ್ಞಾನದಾನದ ಈ ಅಭೂತಪೂರ್ವ ಮಾರ್ಗವನ್ನು, ಅವರ ಆಸಕ್ತಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ೫೦ ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ.
ಅಂಕೇಗೌಡರ ಮನದ ಎಲ್ಲಾ ಇಚ್ಛೆಗಳನ್ನೂ ಪೂರ್ಣಗೊಳಿಸಿ ನಾಡಿನಲ್ಲೇ ಏಕೆ ಇಡೀ
ದೇಶದಲ್ಲೇ ವ್ಯಕ್ತಿಯೊಬ್ಬರ ಪ್ರಯತ್ನಫಲದ ಅಪೂರ್ವ ಪುಸ್ತಕಾಲಯವಾಗಿ ಅಂಕೇಗೌಡ ಪುಸ್ತಕ
ಪ್ರತಿಷ್ಠಾನ ರೂಪುಗೊಳ್ಳಲಿ ಎಂದು ನಾವೆಲ್ಲಾ ಹಾರೈಸೋಣ ಮತ್ತು ಈ ನಿಟ್ಟಿನಲ್ಲಿ ನಮ್ಮಿಂದಾಗುವ
ಸಹಾಯಕ್ಕೆ ಮುಂದಾಗೋಣ.. ಏನೆನ್ನುವಿರಿ ಸ್ನೇಹಿತರೇ..??
ಅಜಾದ್,
ReplyDeleteನಾವೆಲ್ಲ ನಮ್ಮ ಬ್ಲಾಗಿನಲ್ಲಿ ಫೋಟೊಗಳ ಸಮೇತ ಲೇಖನವನ್ನು ಬರೆದಿದ್ದೆವು. ನೀವು ಅಂಕೇಗೌಡರ ಮಾತುಗಳ ವಿಡಿಯೋವನ್ನು ನೋಡುವ ಮೂಲಕ ಪುಸ್ತಕ ದೇಗುಲದ ವಿಚಾರವನ್ನು ತಿಳಿಸಿದ್ದೀರಿ...ತುಂಬಾ ಚೆನ್ನಾಗಿದೆ...ಅವರ ಮಾತುಗಳನ್ನು ಮತ್ತೆ ಮತ್ತೆ ಕೇಳಬೇಕಿನಿಸುತ್ತದೆ...
ಬ್ಲಾಗಿಗರಿಗೆ ಜೈ ಹೋ...
ಅಂಕೇಗೌಡರಿಗೆ ಮತ್ತು ಅವರ ಪುಸ್ತಕದ ಮನೆಗೆ ಜೈಹೋ...
ಧನ್ಯವಾದ ಶಿವು
ReplyDeleteಹೌದು ನೀವೆಲ್ಲಾ ಫೋಟೋ ಹಾಕ್ತೀರ ಅಂತ ಗೊತ್ತಿತ್ತು ಅದಕ್ಕೇ ಅವರ ಮಾತನ್ನೇ ಕೇಳಿಸೋಣ ಅಂತ ಈ ಪ್ರಯತ್ನ.
Bloginalli Video hosa anubhava:)
ReplyDeleteಹೌದು ಸುಲತಾ...ಇದು ನನ್ನ ಕರವೋಕೆಲಿ ಇದೆ, ಹಾಗೇ ... ಲೇಖನಕ್ಕೆ ಇದರ ಅಳವಡಿಕೆ... ಹೊಸತು
ReplyDeleteನಾವು ನೋಡಿದ್ದು ಮರೆಯ ಬಹುದು..ಕೇಳಿದ್ದು ಮರೆಯಬಹುದು..ಆದ್ರೆ ನೋಡಿ-ಕೇಳಿದ್ದು ಎಂದು ಮರೆಯದು..ಆಜಾದ್ ಸರ್..ನೀವು ಈ ಅನುಭವವನ್ನ ತಂದು ಕೊಟ್ಟಿರುವುದು ಅನನ್ಯ...ಶ್ರೀ ಅಂಕೆ ಗೌಡರ ಸಾಹಸ, ಅದಕ್ಕೆ ಕೆಲ ಸೃಜನಶೀಲ ರಾಜಕಾರಣಿಗಳು, ಉದ್ಯಮಿಗಳ ಸಹಾಯಹಸ್ತ ನಮ್ಮ ವಾಣಿಜ್ಯ ಬದುಕಿನ ವಸಾಹತುಶಾಯಿಗಳ ಬಗ್ಗೆ ಗೌರವ ಮೂಡುತ್ತದೆ..ಎಲ್ಲರು ಕೆಟ್ಟವರಲ್ಲ ಅಲ್ಲಿ ಇಲ್ಲಿ ಮುತ್ತುಗಳು ಸಿಗುತ್ತವೆ ಅನ್ನುವ ಮಾತು ನಿಜ..ಸಾಗರದಾಳದಲ್ಲಿ ಇರುವುದೆಲ್ಲ ಮುತ್ತಲ್ಲ..ಆದ್ರೆ ಮುತ್ತುಗಳು ಇರುವುದು ಸುಳ್ಳಲ್ಲ...ಅಂಥಹ ಒಂದು ಕನ್ನಡಾಂಬೆಯ ಒಡಲಾಳದಲ್ಲಿರುವ ಅನರ್ಘ್ಯ ಮುತ್ತು ನಮ್ಮ ಹೆಮ್ಮೆಯ ಶ್ರೀ ಅಂಕೆ ಗೌಡರು...ಅವರ ಸಾಹಸಕ್ಕೆ ಖಂಡಿತ ನಮ್ಮ ಬೆಂಬಲ ಸದಾ ಇದೆ..ಜೈ ಕರ್ನಾಟಕ ಮಾತೆ...
ReplyDeleteಅಜಾದ್ ಸರ್;ಅಂಕೇ ಗೌಡರ ಬಗ್ಗೆ ನಿಮ್ಮ ಬರಹ ಮತ್ತು ವೀಡಿಯೋ ಚೆನ್ನಾಗಿವೆ.ಧನ್ಯವಾದಗಳು.ಇಂತಹ ಸಾಧಕರ ಬಗ್ಗೆ ಏನು ಹೇಳೋಣ!!?ಅವರ ಅಘಾದ ವ್ಯಕ್ತಿತ್ವ ನಮ್ಮ ನಿಲುಕಿಗೇ ಸಿಗುವುದಿಲ್ಲ.ಇಂತಹ ಪುಸ್ತಕ ರಾಶಿ,ಅದರ ಹಿಂದಿರುವ ಅವರ ಮತ್ತು ಅವರ ಮನೆಯವರ ಪರಿಶ್ರಮ,ಸಾಧನೆ,ಇವೆಲ್ಲವೂ ನಮ್ಮನ್ನು ಮೂಕ ವಿಸ್ಮಿತರಾಗಿಸುತ್ತದೆ.ನಮ್ಮ ಕರ್ನಾಟಕದಲ್ಲೇ ಇರುವ ಅದ್ಭುತಗಳಲ್ಲಿ ಅಂಕೇ ಗೌಡರೂ ಒಬ್ಬರು.ಅವರ ಪುಸ್ತಕ ಪ್ರೇಮ ಅಪರೂಪದ್ದು!೨೦೧೦ರಲ್ಲಿ ಬಾಲಣ್ಣನವರು ನಮ್ಮನ್ನು ಅಲ್ಲಿಗೆ ಕಳಿಸಿದಾಗ ದಂಗಾಗಿ ಹೋದೆ.ಅಂಕೆ ಗೌಡರು 'ಇದು ಯಾವುದೋ ಜನ್ಮದಲ್ಲಿ ಸರಸ್ವತಿ ನನಗೆ ನೀಡಿದ ಶಾಪ ಸರ್'ಎಂದಾಗ ನನ್ನ ಕಣ್ಣುಗಳು ತೇವವಾಗಿದ್ದವು .ಪ್ರತಿಯೊಬ್ಬರೂ ಜೀವನದಲ್ಲಿ ನೋಡಲೇ ಬೇಕಾದ ಸ್ಥಳ 'ಪುಸ್ತಕದ ಮನೆ'.ಇಂತಹ ಮಹತ್ ಕಾರ್ಯಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿಯನ್ನು ಸರ್ಕಾರ ಗೌರವಿಸಿ ಸೂಕ್ತ ಆರ್ಥಿಕ ಸಹಾಯ ನೀಡಲು ಮುಂದಾಗಿರುವುದು ಸಮಾಧಾನ ತಂದಿದೆ.ಅದು ಬೇಗ ಕಾರ್ಯರೂಪಕ್ಕೆ ಬರಲಿ ಎಂದು ಹಾರೈಸೋಣ.ಲೇಖನ ಮತ್ತು ವೀಡಿಯೋಗಳಿಗೆ ಮತ್ತೊಮ್ಮೆ ಧನ್ಯವಾದಗಳು.
ReplyDeleteಆಜಾದ್ ಸಾರ್,
ReplyDeleteಈ ಪ್ರವಾಸ ಒಂತರಾ ಶೌಕ್ಷಣಿಕ ಪ್ರವಾಸ ಅನ್ನಿ. ಅಂಕೇಗೌಡರ ಪುಸ್ತಕ ಮನೆ, ಕರಿಘಟ್ಟದ ಬಾಲ್ ಆಟ, ಪ್ರಕಾಶಣ್ಣನ ಪೋಸೂ ಎಲ್ಲವೂ ಹೋಗಿ ಬಂದ ಅದೃಷ್ಟಶಾಲಿಗಳಿಗೆ ಸದಾಕಾಲ ನೆನಪಿನಲ್ಲಿ ಉಳಿಯುತ್ತದೆ.
ಫೋಟೋಗಳೂ ಮತ್ತು ಮಾಹಿತಿ ಉಪಯುಕತ್ತವಾಗಿದೆ.
ಅಂಕೇಗೌಡರ ವಿಳಾಸ ಕೊಟ್ಟು ಒಳ್ಳೆಯ ದುಮಾಡಿದಿರಿ.
ಉತ್ತಮ ಮಾಹಿತಿ ಇತ್ತಿದ್ದೀರ.. ಧನ್ಯವಾದಗಳು.
ReplyDeleteThanks for giving such a good information :)
ReplyDeleteಆಜಾದ್ ಸರ್,
ReplyDeleteಎಲ್ಲರ ಲೇಖನಗಳಲ್ಲಿ ಫೋಟೋ ಮತ್ತೆ ವಿವರಣೆ ಮಾತ್ರ ಇತ್ತು....ನಿಮ್ ಬ್ಲಾಗ್ ನಲ್ಲಿ ವೀಡಿಯೊನು ನೋಡಿ ಖುಷಿ ಆಯಿತು....ಒಂದು ಸುಂದರ ದೇಗುಲದ ದರ್ಶನ ಮಾಡಿಸಿದ್ದೀರಿ...ಧನ್ಯವಾದಗಳು...
ಜಲನಯನ,
ReplyDeleteಅಂಕೇಗೌಡರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಪರಿಚಯಿಸಿದ ನಿಮಗೆ ಧನ್ಯವಾದಗಳು.
ವಿಡಿಯೋ ಸಮೇತ ಹಾಕಿದ್ದೀರಿ ಖುಷಿ ಆಯ್ತು. ನಿಮ್ಮ ನಿರೂಪಣೆ ಎಲ್ಲರಿಗಿಂದ ವಿಭಿನ್ನ ಬಿಡಿ..:)) ನಮ್ಮ ರಾಜಕೀಯ ಜನರಿಗೆ ಇಂತಹವರೆಲ್ಲಾ ಕಾಣೋದಿಲ್ಲ ಬರಿ ಆಸ್ತಿ ಐಶ್ವರ್ಯಗಳಷ್ಟೇ ಕಾಣೋದು.. ಧನ್ಯವಾದಗಳು ಸರ್ ಒಳ್ಳೆಯ ಬರಹ
ReplyDeleteಸ್ನೇಹಿತರೇ ಮತ್ತೆರಡು ದೃಶ್ಯ ತುಣುಕು (ವೀಡಿಯೋ ಕ್ಲಿಪ್) ಹಾಕಿದ್ದೇನೆ, ನೋಡಿ.
ReplyDeleteಎಲ್ಲಾ ಪ್ರೋತ್ಸಾಹಿಸಿದ ಸ್ನೇಹಿತರಿಗೆ ಧನ್ಯವಾದಗಳು.
ಅಜಾದ್ ಸರ್ ವಿಡಿಯೋ ಸಮೇತ ವಿವರಗಳ ಮಾಹಿತಿ ತುಂಬಿದ್ದೀರ , ಎಲ್ಲಾ ಬ್ಲಾಗಿಗರ ಪುಟಕ್ಕಿಂತ ಬಿನ್ನವಾಗಿ ಮೂಡಿಬಂದಿದೆ ಜೈ ಹೋ ಅಜಾದ್ ಸಾರ್
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
Ankegoudarige nannadoo ondu namaskaara. Baredu-parichayisida nimagoo. :-)
ReplyDeleteಧನ್ಯವಾದ ಸುಶೄತ್....ನೀವಿಬ್ರೂ ಬರ್ತೀರಾ ಅಂದ್ಕೊಂಡಿದ್ದೆ ನಾನು
Deleteಧನ್ಯವಾದ ಬಾಲು.... ನಿಮಗೆ ಮೊದಲ ನಮನ ಅಂಕೇಗೌಡರನ್ನ ಪರಿಚಯಿಸಿದ್ದಕ್ಕೆ
ReplyDeleteನಮಸ್ತೆ ಸರ್,
ReplyDeleteಎಲ್ಲಾ ಬ್ಲಾಗ್ ಗಳಲ್ಲಿ ಕೇವಲ ವಿವರಣೆಗಳನ್ನು & ಪೋಟೋಗಳನ್ನು ಮಾತ್ರ ನೋಡಿದ್ದೇ. ನಿಮ್ಮ ಬ್ಲಾಗ್ ನಲ್ಲಿ ಅಂಕೇಗೌಡರ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು... ವಿಶೇಷವಾಗಿದೆ ನಿಮ್ಮ ಬ್ಲಾಗ್..............
ಅಂಕೆಯಿಲ್ಲ ಜ್ಞಾನದಾಹಕೆ
ಸಂಖ್ಯೆಯಿಲ್ಲ ಪುಸ್ತಕವಿಧಕೆ
ಅಂಕೇಗೌಡರಿಗೆ ಸಾಟಿಯಿಲ್ಲ
ಪುಸ್ತಕ ಪ್ರೇಮಿಗೆ ಎದುರಿಲ್ಲ.
ತುಂಬಾನೇ ಚೆನ್ನಾಗಿದೆ..........
ಧನ್ಯವಾದ ಗೆಳತಿ... ವಿಭಿನ್ನ ಇರಲೆಂದೇ ಈ ತುಣುಕು ಹಾಕಿದ್ದು....
ReplyDeleteಊರಿಗೆ ಒಂದು ದಾರಿಯಾದರೆ ಪೋರನಿಗೆ ಒಂದು ದಾರಿಯಂತೆ.. ಎಂಬ ನಾಣ್ನುಡಿಯೊಂದಿದೆ.. ನಿಮ್ಮ ಲೇಖನವು ಹಾಗೇನೆ.. ಎಲ್ಲರ ಬ್ಲಾಗ್ ಲಿ ಫೋಟೋಗಳ ಜೊತೆ ಲೇಖನ ಓದಿದೆ. ಆದರೆ ನೀವೂ ಮತ್ತು ನಿಮ್ಮ ಲೇಖನ ಎರಡು ವಿಭಿನ್ನ. ವಿಡಿಯೋ ಲೇಖನ ಚೆನ್ನಾಗಿದೆ
ReplyDeleteAzad Sir,
ReplyDeleteNimma Lekhana Odi, mattomme anke gowdara bagge kelavu vichaaragaLu innashtu tiLidantaayitu... video saha ondu hosa anubhava. Nimmannu bEti aagiddu namagondu sadaavakaashavaayitu. Dhanyavaada Sir....
Roopa
ಸಂಧ್ಯಾ ಪೋರ???? ತೆಲುಗಿನ ಪೋರಾ...ಅಂದ್ರೆ....ಹೋಗೋಲೋ ಅಂತ.... ಇದಲ್ಲ ಅಂದ್ಕೊತೇನೆ... ಧನ್ಯವಾದ ನಿನ್ನ ಅಭಿಮಾನಕ್ಕೆ
ReplyDeleteರೂಪಾ...ಅದು ನಿಮ್ಮ ಅಭಿಮಾನ ನಿಮ್ಮನ್ನೆಲ್ಲಾ ಭೇಟಿ ಮಾಡೋ ಸೌಭಾಗ್ಯ ನನಗೂ ಸಿಕ್ಕಿದ್ದು ಬಾಲು ಮತ್ತೆ ಪ್ರಕಾಶನ ಪ್ರಯತ್ನಗಳಿಂದ.
ReplyDeleteuttama maahiti needideera .dhanyavaadagalu.
ReplyDelete೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು ಇಂದಿನ ದಿನಗಳಲ್ಲಿ.
ReplyDeleteಸರ್ಕಾರದಿಂದ ಘೋಷಣೆಯಾದ ಅನುದಾನವು ಅಂಕೇಗೌಡರ ಪುಸ್ತಕದ ದೇಗುಲವ ಸೇರಲಿ ನಮ್ಮ ಆಶಯ. ಅನುದಾನ ಬಿಡುಗಡೆಯ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಿ ಈ ಬಗ್ಗೆ ಪ್ರಸ್ತುತ ಸ್ಥಿತಿಯ ಬಗ್ಗೆ ಮುಂದಿನ ಪ್ರತಿಕ್ರಿಯೆಯಲ್ಲಿ ತಿಳಿಸುತ್ತೇನೆ.