Tuesday, September 4, 2012

ದಿಲ್ ಕೊ ದೇಖೋ ಚೆಹರಾ ನ ದೇಖೋ



“ಹಾಯ್ ಡೂಡ್” ಹೌ ಆರ್ ಯೂ...?

What yaar what are you doing this evening….??

What Daa…looking smartaaaa!!!!! Accept my friendship….

ಇವು ಖಾಸಾ ಸ್ನೇಹಿತನ ಫೇಸ್ ಬುಕ್ ಗೆ ಬರ್ತಿದ್ದ ಚಟ್ಪಟಾ ಮೆಸೇಜ್ ಗಳು....

ಹೊಟ್ಟೆ ಉರಿಯೊಲ್ವಾ..?? ಅದೂ ಸುಂದರ ಹುಡುಗಿಯರು, ಲಲನೆಯರು, ಜಸ್ಟ್ ಮ್ಯಾರೀಡ್ ಹುಡ್ಗೀರು, ದಿಲ್ದಾರ್ ಆಂಟಿಗಳು.... ಅಬ್ಬಬ್ಬಬ್ಬಾ....!!!!

ಗಾಯದ ಮೇಲೆ ಬರೆ ಅನ್ನೋ ಹಾಗೆ ...

ನನಗೊಬ್ರು ಮೆಸೇಜ್ ಹಾಕಿದ್ರು “ಅಂಕಲ್ ನಿಮ್ಮ ಕವನಗಳು ತುಂಬಾ ಚನ್ನಾಗಿರುತ್ತವೆ, ಆದ್ರೆ ನೀವು ಹಾಕೋ ಕೆಲ ರಸಿಕ ಕವನ-ಚುಟ್ಕಗಳು ನಿಮ್ಮಂತಹ ವಯಸ್ಸಾದವರಿಗೆ ಒಪ್ಪೊಲ್ಲ... ಆದರೂ ಯಂಗ್ ಆಗಿದ್ದಾಗ ನಿಮ್ಮ ಕರಾಮತ್ತು ಜೋರಾಗಿದ್ದಿರಬಹುದು ಅನ್ನೋದು ಮಾತ್ರಾ ಊಹಿಸ್ಕೋಬಹುದು...!!!

ಛೆ ಛೇ... “ಯಂಗ್ ಆಗಿದ್ದಾಗ..??!!” ಅಂದ್ರೆ ಹೆಂಗಾಗ್ಬೇಡ ನನಗೆ...??

ಅಲ್ಲ, ನನ್ನ ಸ್ನೇಹಿತ ಅಬ್ಬಬಾ ಅಂದ್ರೆ ನನಗಿಂತ ಒಂದು ಮೂರ್ನಾಲ್ಕು ವರ್ಷ ಚಿಕ್ಕವನಪ್ಪಾ.., ಹಂಗಂತ ನನ್ನ ಅಂಕಲ್ ಮಾಡಿ... ಅವನನ್ನ “Dude” ಸಿಂಹಾಸನಕ್ಕೆ ಏರ್ಸೋದು ಸರಿನಾ...?? ನೀವೇ ಹೇಳಿ...!!!

ನನಗೆ ನನ್ನ ಸ್ನೇಹಿತನ ಈ ಅಪಾರ ಜನ (ಜನಾನ) ಮನ್ನಣೆ, ಲವ್ವು ಸಿಕ್ತಾ ಇರೋದರ ಗುಟ್ಟು ಅವನೇ ಬಿಟ್ಕೊಟ್ಟ. ಎತ್ತರಕ್ಕೆ ಗಡದ್ದಾಗಿರೋ ಇವನನ್ನ ನೋಡಿರೋರು...ಸಾರ್ ನೀವು ಸಿನಿಮಾದಲ್ಲಿ ’ವಿಲನ್’ ಪಾತ್ರ ಯಾಕೆ ಮಾಡಬಾರದು ಅಂತ ಕೇಳಿದ್ರಂತೆ.... ಅದೂ ಅವನೇ ಹೇಳಿದ್ದು...

ಅಬ್ಬಾ..!! ಹೊಟ್ಟೆಗೆ ಹಾಲು ಸುರಿದಂತೆ ಆಯ್ತು.. ಉರಿನೂ ಕಮ್ಮಿ ಆಯ್ತು ಅನ್ನಿ...,

ವಿಷಯ ಏನು ಗೊತ್ತಾ..?? ಅವನು ತನ್ನ ಪ್ರೊಫೈಲಲ್ಲಿ – ಅತ್ಗೆ ತದ್ರೂಪು ಇವ್ನ ಗೆಟಪ್ಪು (ಇವ ನಾನು ತಲೆ ಎತ್ತಿ ನೋಡೋ ಹಾಗೆ ಎತ್ತರದ ಆಳು...ಇದೂ ಕಾರಣಾನೇ ನನ್ನ ಹೊಟ್ಟೆ ಉರಿಗೆ..ಊಂ...)

ಇರುವ ತನ್ನ ಮಗನ ಫೋಟೋ ಹಾಕಿದ್ದ. ಅದೇ ತಡ...

ತಕಳಪ್ಪಾ ಎಲ್ಲಾ ಕಡೆಯಿಂದ ಫ್ರೆಂಡ್ ರಿಕ್ವೆಸ್ಟೂ... ಅದ್ರಲ್ಲಿ ೬೦% ಹುಡ್ಗೀರಾದ್ರೆ, ೩೦% ಯಂಗ್ ಆಂಟೀರ್ದು... ಇನ್ನು ೧೦% ನಮ್ಮಂಥೋರದ್ದು...!! ಯಾಕೆ ಹೇಳಿ..?? ಇವನ ನೆಪದಿಂದಾದ್ರೂ ಲಲನೆಯರು ನನ್ನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡ್ಕೋತಾರೋ ಅನ್ನೋ ಆಸೆಗೆ... ಊಂ....!!

ಹಾಗೇ ಸುಮಾರು ಜನಕ್ಕೆ (ಜನಾನಕ್ಕೆ) ನಾನು ಇಸಿ ಫ್ರೆಂಡು ಅಂತ ಹೇಳ್ಕೊಂಡೇ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಸ್ಕೊಂಡಿದ್ದೀನಿ... (ಅಂದಹಾಗೆ, ಜನಾನಾ ಅಂದ್ರೆ ಸ್ತ್ರೀ ಸಮೂಹ)


ಈ ಜನಾನೇ ಹೀಗೆ...

ಮುದ್ದಾದ ಮುಖ (ಗೋರಾ ಗಾಲ್) ನೋಡಿದ್ರೆ ಗೋಲ್ ಆಗಿ ಬಿಡ್ತಾರೆ.

ಅಲ್ಲ ರೀ, ಕರಿಯ ಕೃಷ್ಣನ್ನ ಗೋಪಿಯರು ಮುತ್ಕೋತಾಯಿದ್ರು ಅಂದ್ರೆ ಹ್ಯಂಗ್ರೀ ನಂಬೋದು...?? ನನ್ನ ನೋಡಿದ್ರೆ ದೂರ ಓಡ್ತಾರೆ...!!!??

ಹೋಗ್ಲಿ ಬಿಡಿ, ಆದರೆ ಈ ನನ್ ಸ್ನೇಹಿತ ಗುಣದಲ್ಲಿ ಅಪರಂಜಿ ಅದ್ರಲ್ಲಿ ಎರಡು ಮಾತಿಲ್ಲ... ಊಂ..

ಅದು ಅಪರಿಚಿತ ಆದ್ರೂ ಕಷ್ಟದಲ್ಲಿದ್ರೆ ಕರಗ್ತಾನೆ, ಸಹಾಯಕ್ಕೆ ಮುಂದಾಗ್ತಾನೆ. ಅಪಘಾತ ಆಗಿ ರಸ್ತೆಲಿ ಒದ್ದಾಡೋರನ್ನ ಕಂಡು ಅವ್ರ ಪ್ರಲಾಪವನ್ನ, ಅವಸ್ಥೆ ನ ವೀಡಿಯೋ, ಫೋಟೋ ಮಾಡಿ ಅಪ್ ಲೋಡ್ ಮಾಡೋ ಆಸಕ್ತಿ ಇರೋ ಜಗಳ ಮಧ್ಯೆ ಇವನು ಅಪವಾದ. ತಕ್ಷಣ ತನ್ನ ಕಾರ್ ನಿಲ್ಲಿಸ್ತಾನೆ, ಗಾಯಾಳನ್ನ ಆಸ್ಪತ್ರೆಗೆ ಸೇರ್ಸಿ ಅವರಿಗೆ ಚಿಕಿತ್ಸೆ ಆಗಿ ಯಾರಾದ್ರೂ ಅವರ ಕಡೆಯವರು ಅವರನ್ನ ನೋಡ್ಕೊಳ್ಳೋಕೆ ಬರೋವರೆಗೆ ಕಾಳಜಿ ವಹಿಸ್ತಾನೆ!! ಊಂ...!! ಇದಲ್ವೇ ಮಾನವತೆ ಮೆರೆಯೋ ಗುಣ..??

ಈಗ ಮೊನ್ನೆ ಪ್ರೊಫೈಲ್ ಚೇಂಜ್ ಮಾಡವ್ನೆ... ನನಗೆ ಇನ್ನೂ..ಭರ್ತಿ ಸಮಾಧಾನ ಆಯ್ತು..ಆಗ..

ಆದರೆ ಇವನ ಫ್ರೆಂಡ್ ರಿಕ್ವೆಸ್ಟ್ ನಿಂತಿಲ್ಲಾರೀ.... ಊಂ..!!!!

ಇನ್ನೂ ಖುಷ್ ನನಗೆ ಈಗ, ಯಾಕೆ ?? ಮನುಷ್ಯ ಅಂತಹವನ್ರೀ, ಮನಸಿಗೆ ಹತ್ತಿರ ಆಗ್ಬಿಡ್ತಾನೆ ಮೊದಲನೇ ಸಲ ಭೇಟಿ ಆದರೂ...!! ಇನ್ನು ಫ್ರೆಂಡ್ ರಿಕ್ವೆಸ್ಟ್ ಅತಿಶಯೋಕ್ತಿ ಆಲ್ಲ ಅಲ್ವಾ???

ಅವನ್ನ ನೋಡಿದ್ರೆ ಮತ್ತೆ ಇನ್ನೊಬ್ಬ ಬ್ಲಾಗ್ ಠಕ್ಕ ಇದ್ದಾನೆ, ಏನು ನಯ?? ಏನು ನಾಜೂಕು ??? ಏನು ಜ್ಞಾನ ಪ್ರದರ್ಶನ...!!! ಅಬ್ಬಬಬ್ಬಾ ,,,, ಅಷ್ಟೇ ನಯ ವಂಚಕ, (ಇವನ ಹುಡುಕಾಟಕ್ಕೂ ನನ್ನ ಸ್ನೇಹಿತ ಹಲವರಿಗೆ ಹೆಲ್ಪ್ ಮಾಡ್ತಿದ್ದಾನೆ ಅನ್ನೋ ವಿಷಯ ಬೇರೆ...) ಇವನ ಬಗ್ಗೆ ನೆನಪಿಸ್ಕೊಂಡ್ರೆ...

ನನಗೆ ನೆನಪಾಗೋ.. ಹಿಂದಿ ಹಾಡು....

“ದಿಲ್ ಕೊ ದೇಖೋ ಚೆಹರಾ ನ ದೇಖೋ

ಚೆಹರೋಂನೆ ಲಾಖೋಂಕೊ ಲೂಟಾ...

ದಿಲ್ ಸಚ್ಚಾ ಔರ್ ಚೆಹ್ರಾ ಝೂಟಾ...”

20 comments:

  1. ನಿಮ್ಮ ಹೊಟ್ಟೆ ಉರಿಯ ವಿಷಯದ ಬಗ್ಗೆ ನಮಗೆ ನಗು ಬರಿಸೋ ಹಾಗೆ ಬರೆದಿದ್ದೀರಿ.....ಮತ್ತೆ..... ಬ್ಲಾಗ್ ಠಕ್ಕನ ವಿಷಯದ ಬೇಸರವಿದೆ..... ಒಳ್ಳೆಯತನವನ್ನೂ ಎಲ್ಲರೂ ದುರುಪಯೋಗ ಪಡಿಸಿಕೊಳ್ಳುತ್ತಾರೆ..... ಆದ್ರೆ ಇಲ್ಲಿ ಮಾತ್ರಾ "ಚೆಹ್ರಾ ಸಚ್ಚಾ ಔರ್ ದಿಲ್ ಝೂಟಾ..."
    ಬರೆದ ರೀತಿ ಸುಪರ್ ಸರ್....

    ReplyDelete
  2. ಧನ್ಯವಾದ ದಿನಕರ್... ಠಕ್ಕ ಎಲ್ಲೆಲ್ಲೋ ತನ್ನ ಕದಂಬ ಬಾಹು ಹರಡ್ತಾ ಇದ್ದಾನೆ ಇದನ್ನ ಆದಷ್ಟು ಬೇಗ ಬಹಿರಂಗಪಡಿಸಿ ಹೆಚ್ಚು ಜನ ಮೋಸಹೋಗದಂತೆ ಮಾಡಬೇಕು....

    ReplyDelete
  3. ಸುಂದರ ಲೇಖನ...ಮುಖ ನೋಡಿ ಮನೆ ಹಾಕಬೇಕು..ಗಿಡ ನೋಡಿ ನೀರು ಹಾಕಬೇಕು..ಈ ಪದಗಳ ವ್ಯಾಪ್ತಿ ಸಾನೆ ದೊಡ್ಡದು ಅಲ್ಲುವ್ರಾ..ಆನಂದ್ (ಕನ್ನಡ) ಚಿತ್ರದ ಹಾಡು ನೆನಪಿಗೆ ಬರುತ್ತೆ..
    ಟಿಕ್ ಟಿಕ್ ಬರುತಿದೆ ಕಾಲ..ಮುಗಿವುದು ನಿನ್ನ ಮೋಸದ ಜಾಲ..ವೇಷವ ಕಳಚಿ ಹಾಕಿದ ಮೇಲೆ ಗೌರವ ನಿನಗಿಲ್ಲ..ಮಾನವ ಗೌರವ ನಿನಗಿಲ್ಲ..ಎಚ್ಚರಿಕೆ..ಮಾನವ ಎಚ್ಚರಿಕೆ..
    ಮುಗ್ದರಾಗಿ ಯಾವುದೇ ದುರುದ್ದೇಶವಿಲ್ಲದೆ ಅವರ ಕಲೆಯನ್ನ.ಅಥವಾ ಅವರ ಗುಣವನ್ನ ಹೊಗಳಿದರೆ..ಯೋಚನೆ ಮಾಡುವ ಕಾಲ ಬಂದು ಬಿಟ್ಟಿದೆ...ಸಕಾಲಿಕ ಲೇಖನ ಸರ್ಜಿ..

    ReplyDelete
  4. This comment has been removed by the author.

    ReplyDelete
  5. ಕ್ಯಾ ಬಾತ್... ಕ್ಯಾ ಬಾತ್.. ಖೂಬ್ ಕಹಾ ಹೈ ಆಜಾದ್ ಭೈಯ್ಯಾ...

    ReplyDelete
  6. ಧನ್ಯವಾದ ಶ್ರೀಕಾಂತ್... ನಿಜಕ್ಕೂ ಯೋಚನೆಯಾಗುತ್ತೆ ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಅಂತ...ಕೆಲವೇ ಕೆಲವರು ಮಾಡುವ ಮೋಸ ವಂಚನೆಯಿಂದ... ಆದ್ರೆ ಮನಸಿನ ಅಪರಂಜಿಗಳು ಇಲ್ಲದಿಲ್ಲ ಹಾಗಾಗಿ ಸಮಾಧಾನ.

    ReplyDelete
  7. ದಿಲೀಪ್ ಬಹಳ ದಿನಗಳ ನಂತರ ನಿಮ್ಮ ಆಗಮನ...ಧನ್ಯವಾದ.

    ReplyDelete
    Replies
    1. ಹೌದು ಭೈಯ್ಯಾ.. ಆಫೀಸು ಕಿತ್ತು ತಿಂತಿದೆ.. ಬ್ಲಾಗ್ ಕಡೆ ಸಲ್ಪ ಕಡಿಮೆ ಬೀಟ್ ಹೊಡೀತಿದ್ದೆ.. ಈ ನಡುವೆ ಮತ್ತೆ ಶುರು ಹಚ್ಚಿಕೊಂಡಿದ್ದೇನೆ..

      Delete
    2. ಧನ್ಯವಾದ ದಿಲೀಪ್... ನಿಮ್ಮ ಬ್ಲಾಗ್ ಅಪ್ ಡೇಟ್ ಆದ್ರೆ ತಿಳ್ಸಿ...

      Delete
  8. ಬ್ಲಾಗ್ ನಲ್ಲಿ ಕಪಿ ಚೇಷ್ಟೆ ಶುರುವಾಗಿದೆ.. ಎರಡು ಕವನಗಳಿವೆ.. ಬಿಡುವಾದಾಗ ಓದಿ...

    ReplyDelete
  9. ಸಕಾಲಿಕ ....... ಮಗನ ಫೋಟೋ .!!!!!!!!!!

    ReplyDelete
  10. ಧನ್ಯವಾದ ವಂದನಾ...

    ReplyDelete
  11. ಸುನಾಥಣ್ಣ ಬಹಳ ದಿನ ಬ್ಲಾಗ್ ಲೇಖನ ಹಾಕಿರಲಿಲ್ಲ... ಹಾಗೇ ಈ ಭಾವ ಅರಳಿತು..ಧನ್ಯವಾದ ನಿಮ್ಮ ಹಾರೈಕೆಗೆ

    ReplyDelete
  12. ಅಜಾದ್ ಸರ್;ಚೆಂದದ ಬರಹ.ಇಷ್ಟವಾಯಿತು.ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಲಾಗಲಿಲ್ಲ.ಬೇಸರವಿದೆ.ಬ್ಲಾಗಿಗೆ ಬನ್ನಿ.ನಮಸ್ತೆ.

    ReplyDelete
  13. ಹಹಹ ...ಅಜಾದ್ ಸರ್....ಬಹುತ್ ಖೂಬ್ .....ಬಹುತ್ ಮಜಾ ಆಯ.....'ಬ್ಲಾಗ್ ಠಕ್ಕ' ಹೆಸರು ಕೇಳಿ ಮತ್ತೊಮ್ಮೆ 'ಸಂತ್ರಸ್ತರ ' ನೆನಪಾಯಿತು....'ದಿಲ್ ಕಪ್ ದೇಖೋ ಚೆಹರ ಮತ್ ದೇಖೋ ' ಹೆಡ್ಡಿಂಗ್ ಸರಿಯಾಗಿದೆ.....

    ReplyDelete
  14. Dr. ಡಿಟಿಕೆ ಸರ್ ನಿಮ್ಮ ನೆನಪು ಬಹಳ ಆಯ್ತು ಎಲ್ಲರಿಗೂ ವಿಶೇಷವಾಗಿ ನನಗೂ ಪ್ರಕಾಶನಿಗೂ ಮತ್ತೆ ನಮ್ಮ ಮೊದಲ ಪುಸ್ತಕ ಲೋಕಾರ್ಪಣೆ ಸಮಯ ನಿಮ್ಮ ಹಾಡನ್ನು ಆಸ್ವಾದಿಸಿ ಕೇಳಿದವರಿಗೆ... ಖಂಡೀತಾ...

    ReplyDelete
  15. ಅಶೋಕ್...ಠಕ್ಕ ಈಗ ಬೇರೆ ವೇಷದಲ್ಲಿದ್ದಾನೆ, ಇದಕ್ಕೆ ಬೇಗ ಒಂದು ಮಂತ್ರ ಕಂಡುಹಿಡಿಯಬೇಕು ಇಲ್ಲವಾದರೆ ಸಂತ್ರಸ್ತರ ಸಂಖ್ಯೆ ಬೆಳೆಯುತ್ತೆ. ಹಹಹ ಧನ್ಯವಾದ

    ReplyDelete
  16. tumba chennagide lekhana. thakkana innondu rupadalli blog nalli odaadtha iddane keli khedavenisitu...

    ReplyDelete
  17. ಹೂಂ...ಬಹಳ ಖೇದ ಎನಿಸುತ್ತೆ. ಅದಕ್ಕೇ ಒಮ್ದು ಪೋಸ್ಟ್ ಹಾಕಿದೆ ಸೀತಾರಾಮ್ ಸರ್ ಎಚ್ಚರಿಕೆ ಎಲ್ಲರಿಗೂ ಫೇಸ್ ಬುಕ್ಕಲ್ಲಿ

    ReplyDelete