Saturday, October 19, 2013

ಶ್ರಾವಣ-ಕಾರಣ

ಮತ್ತೊಂದು..ಹಿಂದಿ ಕರವೋಕೆ ಪ್ರಿಯರಿಗಾಗಿ 1967 ರ "ಮಿಲನ್" ಚಿತ್ರದ ಮುಕೇಶ್ ಮತ್ತು ಲತಾ ಮಂಗೇಶ್ಕರ್ ಗೀತೆ
ಸಾವನ್ ಕಾ ಮಹಿನಾ ಪವನ್ ಕರೆ ಸೋರ್.... 



ಶ್ರಾವಣ-ಕಾರಣ
***********
ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಆಕೆ: ಶ್ರಾವಣ ಮಾಸ ನೋಡು
sವನ ಬಲು ಘೋರ
ಆತ: sವನ ಬಲು ಗೋರ...
ಆಕೆ: sವನ ಬಲು ಘೋರ
ಆತ: ಅರೆ ಬಾಬ ಘೋರ ಅಲ್ಲ ಗೋರ.. ಗೋರ...ಗೋರ
ಆಕೆ: sವನ ಬಲು ಗೋರ
ಆತ: ಹಾಂ.... ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆತ: ರಾಮಾ ಯಾಕಪ್ಪಾ ಹೀಗೆ
        ಗಾಳಿ ಬೀಸುತಿರುವೆ
ಆಕೆ: ಹಡಗ ನೀನು ನಡೆಸು ಗೆಳೆಯಾ
        ಮಾತು ನಿನಗೆ ತರವೆ..
ಆತ: ರಾಮಾ ಯಾಕಪ್ಪಾ ಹೀಗೆ
        ಗಾಳಿ ಬೀಸುತಿರುವೆ
ಆಕೆ: ಹಡಗ ನೀನು ನಡೆಸು ಗೆಳೆಯಾ
        ಮಾತು ನಿನಗೆ ತರವೆ..
ಆತ: ಓಯ್,.ಮೋಡ ಚದುರಿ ಹೋಗೆ
ಬಾನೆಲ್ಲಾ ಚಲ್ಲಿತು ಶಾಯಿ
        ಗಾಳಿಗೆ ಹಾರಾಡಿದರೆ
        ನಿನ್ನ ಸೆರಗೇ ದೋಣಿಗೆ ಹಾಯಿ
ಆಕೆ: ಓ.ಓಓ
ಆಕೆ, ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ನೀನೇ ನನ್ನಯಾ ದಡವು
        ದಾಟಿ ಬರಲಿ ಹೇಗೆ
ಆತ: ದಾಟಲೇಕೆ ಹುಡುಗಿ ನೀನು
        ಪ್ರೀತಿ ಗುಣವೇ ಹಾಗೆ
ಆಕೆ: ನೀನೇ ನನ್ನಯಾ ದಡವು
        ದಾಟಿ ಬರಲಿ ಹೇಗೆ
ಆತ: ದಾಟಲೇಕೆ ಹುಡುಗಿ ನೀನು
        ಪ್ರೀತಿ ಗುಣವೇ ಹಾಗೆ
ಆಕೆ: ನಿನ್ನ ಕಣ್ಣೇ ನದಿಯೂ
        ಇಲ್ಲಿ ಮುಳುಗಿದರೇನು ಹಾನಿ
ನಿನ್ನನೇ ನೋಡುತಲಿದ್ದರೆ
ಮಾತು ಹೊರಡದೇ ನಾನು ಮೌನಿ
ಆತ: ಓ ಓ ಓ..
ಆಕೆ, ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ಸಖ ನೀನು ದೂರ ಹೋಗಿ
        ಸುಖ ಕಿತ್ತು ಕೊಂಡೆ
        ಅಂದಿನ ನಿನ್ನಯ ಮಾತ
ಎದೆಯಲಿಟ್ಟುಕೊಂಡೆ            II 2 II
ನಿನ್ನಯನೆನಪಲೇ ನನ್ನ
ರಾತ್ರಿ ಹಗಲು ಒಂದೇ
        ಬಂದುಬಿಡು ನೀ ಬೇಗ
        ಒಂದಾಗುವ ನಾವು ಅಂದೇ.
ಆಕೆ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ

ಕಂಡಂತೆ ಮೋಡ ಮಯೂರ

6 comments:

  1. ಪಿ.ಎಲ್. ರಾಜ್ ಛಾಯಾಗ್ರಹಣದ ಮಿಲನ್.

    ಇನ್ನೂ ಸಾವಿರ ವರ್ಷಗಳ ಕಾಲ ಚಿರಾಯುವಾಗುವಂತಹ ಗೀತೆಯನ್ನು ಒಪ್ಪವಾಗಿ ಕನ್ನಡೀಕರಿಸಿದ ನಿಮಗೆ ಶರಣು.

    ಪ್ರಸಾದ್ ಪ್ರೊಡಕ್ಷನ್ಸನ ಎಲ್.ವಿ. ಪ್ರಸಾದ್ ನಿರ್ಮಾಣದ ಈ ಚಿತ್ರವಿದು.

    ReplyDelete
  2. ಒಂದು ಮಧುರವಾದ ಚಿತ್ರಗೀತೆಯನ್ನು, ಧಾಟಿಗೆ ಸರಿಯಾಗಿ ಕನ್ನಡಿಸಿದ್ದೀರಿ. ಓದಿ, ಹಾಡಿಕೊಂಡು ಖುಶಿಯಾಯಿತು!

    ReplyDelete
  3. ವಾಹ್! ನಿಮ್ಮ ಪದ ಪದಕ್ಕೂ ಆ ಹಾಡಿನ ರಾಗಕ್ಕೂ ಪಕ್ಕಾ ಹೊಂದಾಣಿಕೆ ಇದೆ Azadanna. ಒಮ್ಮೆ ಮನದಲ್ಲೇ ಹಾಡಿಕೊಂಡು ನೋಡಿದೆ... ಸಕ್ಕತ್ತಾಗಿದೆ ರಚನೆ!

    ReplyDelete
  4. ವಾಹ್.. ಸೂಪರ್ ಸರ್ ಮಧುರ ಚಿತ್ರಗೀತೆ ಸುಮಧುರ ಸಾಲುಗಳು

    ReplyDelete
  5. ನನಗೆ ಹಳೆಯ ಹಿಂದಿ ಗೀತೆಗಳು ಜಾಸ್ತಿ ಗೊತ್ತಿಲ್ಲ ಸರ್...ಇದಂತೂ ಚೆನಾಗಿದೆ :) :)ಬರೀತಾ ಇರಿ

    ReplyDelete
  6. ಸುನಿಲ್ ಮತ್ತು ನೂತನ್ ಸೊಗಸಾದ ಅಭಿನಯವಿರುವ ಈ ಚಿತ್ರ ಹಾಗು ಗೀತೆಗಳು ಸದಾ ಮುದ ನೀಡುತ್ತದೆ. ಕಣ ಕಣವನ್ನು ಸಾಕ್ಷಾತ್ಕರಿಸಿಕೊಂಡು ಅನುವಾದ ಮಾಡಿರುವ ನಿಮ್ಮ ತಾಕತ್ ಗೆ ನನ್ನ ಶರಣು ಸೂಪರ್ ಸರ್ಜಿ. ಶೋರ್ ನಹಿ ಬಾಬ ಸೋರ್ ಸೋರ್ ಎನ್ನುವ ಪದಗಳು ಅಷ್ಟೇ ಮುದ್ದಾಗಿ ಮೂಡಿ ಬಂದಿದೆ. ಸೂಪರ್ ಸರ್ಜಿ

    ReplyDelete