Friday, August 21, 2009
ಹಂದಿ ಜ್ವರ ಪೂರಕ ಪೋಸ್ಟ್
ಶಿವು ಬೆಂಗಳೂರಿಗೆ ಬಂದೂ ನಿಮ್ಮನ್ನು ಭೇಟಿಯಾಗಲಾಗಲಿಲ್ಲ ಆದರೆ ಹಂದಿ ಜ್ವರದ ಉಗಮ ಕಂಡೆ ಅಲ್ಲಿ. ಮೊದಲ ಬಲಿ lady teacher ಗೆ ವೈದ್ಯಕೀಯ ಸೂಕ್ತ ಚಿಕಿತ್ಸೆ ಸಿಕ್ಕಿದ್ದು ತಡವಾಯ್ತು ಎಂದೇ ನನ್ನ ಅನಿಸಿಕೆ, ಇಲ್ಲಿ ಇನ್ನೊಂದು ಅಂಶ ಹಂದಿ ಜ್ವರ ಒಂದೇ ಇದ್ದಲ್ಲಿ ಮಾರಣಾಂತಕವಾಗುವ ಸಾಧ್ಯತೆ ಕಡಿಮೆ ಅದರ ಜೊತೆಗೇ ಸೋಂಕುವ ಇತರೆ ರೋಗಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು (ರೋನಿಶ) ಹಂಚಿಬಿಟ್ಟು ಹಂದಿ ಜ್ವರ ವೈರಸ್ ನತ್ತ ನಿರೋಧಕತೆ ಕ್ಷೀಣವಾಗಿ ಮರಣ ಅನಿವಾರ್ಯವಾಗುತ್ತದೆ. ಅದಕ್ಕೇ ಹಂದಿಜ್ವರದ ತಡೆಗೆ ಉತ್ತಮ ಆಹಾರ ವಿಟಮಿನ್ ಸಿ ಅಧಿಕ ಸೇವನೆ (ಮೆಗಾ ಡೋಸ್ ಎನ್ನುತ್ತಾರೆ) ಮತ್ತು ಹೆಚ್ಚು ನೀರಿನ ಸೇವನೆ ಬಹು ಸಹಾಯಕ. ರೋಗ ನಿರೋಧಕಗುಣ ಗುಣ ಮತ್ತು ಸಾಮಾನ್ಯ ಸೋಂಕುಗಳನ್ನು ವಿರೋಧಿಸುವ ಮೂಲಗಳ ಉದ್ದೀಪನೆಗೆ ಸಹಾಯವಾಗುತ್ತೆ. ವೈರಸ್ ನಂದಿಸುವ ಔಷಧಿ ತಾಮಿಫ್ಲೂ ಹಂದಿ ಜ್ವರ ಬಳಲಿತರಿಗೆ ಎಷ್ಟು ಬೇಗ ಕೊಟ್ಟರೆ ಅಷ್ಟೇ ಬೇಗ ನಮ್ಮ ರೋನಿಶ ದ ಹಂಚುವಿಕೆ ನಿಲ್ಲುತ್ತೆ ಮತ್ತು ಈರೋಗ (ಇತರ ರೋಗಗಳ ವಿಷಯದಲ್ಲೂ) ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಈ ಪ್ರಶ್ನೆ ನನಗೆ ನನ್ನ ಬ್ಲಾಗ್ ಪೋಸ್ಟ್ ಗೆ ಪೂರಕ ಪೋಸ್ಟ್ ಹಾಕುವಂತೆ ಮಾಡಿದೆ. ನನ್ನ ಈ ಲೇಖನ ಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಿದರೆ ಧನ್ಯ.
Subscribe to:
Post Comments (Atom)
ಆಝಾದ್ ಸರ್.....
ReplyDeleteತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ...
ನನ್ನ ಸ್ನೇಹಿತರಿಗೆ ನಿಮ್ಮ ಬ್ಲಾಗ್ ಲಿಂಕ್ ಕಳಿಸಿದ್ದೇನೆ....
ಥ್ಯಾಂಕ್ ಯೂ....
ಪ್ರಕಾಶ್ ಇದನ್ನೇ ಮಾಹಿತಿಯ ಪ್ರಸರಣೆಯೆನ್ನುವುದು. ನಿಮ್ಮ ಈ ಪ್ರಯತ್ನ ಸ್ತುತ್ಯಾರ್ಹ. ಜನರಲ್ಲಿ ಸಾಮಾನ್ಯ ತಿಳುವಳಿಕೆ ಅಗತ್ಯ ನೀರು ಮತ್ತು ಪೌಷ್ಠಿಕ ಆಹಾರದ ಮಹತ್ವ ಇಂತಹ ಸಮಯದಲ್ಲಿ ಹೆಚ್ಚು. Thanks.
ReplyDeleteಜಲನಯನ ಸರ್....
ReplyDeleteರೋನಿಶ ಹೆಚ್ಚಿಸಲು ಅದ್ಯಾವುದೋ ಹೋಮಿಯೋಪತಿ ಮಾತ್ರೆಗಳು ಸಹಾಯಮಾಡುತ್ತವೆ೦ದು ನನ್ನ ಗೆಳೆಯ ಹೇಳುತ್ತಿದ್ದ.... ಅದು ನಿಜವೇ...?
ಸುಧೇಶ್ ರೋನಿಶ ದ ಉದ್ದೀಪನ ಒಳ್ಳೆಯ ಆಹಾರ, ವಿಟಮಿನ್-ಸಿ ಅಲ್ಲದೇ ಕೆಲವು ಔಷಧಿಗಳಿಂದ ಸಾಧ್ಯವಿರಬಹುದು. ಆದ್ರೆ ಸ್ವಾಭಾವಿಕವಾದ ಪೌಷ್ಠಿಕ ಆಹಾರ ವಿಟಮಿನ-ಸಿ (ಹುಳಿ ಹಣ್ಣುಗಳು ಅದರಲ್ಲೂ ಬೆಟ್ಟದ ನೆಲ್ಲಿ ಸಹಕಾರಿ), ಸೋಂಕಿದ್ದಲ್ಲಿ ಹೆಚ್ಚು-ಹೆಚ್ಚು ನೀರನ್ನು ಕುಡಿಯುವ ಮೂಲಕ ರೋಗ ವಿಷಮವಾಗದಂತೆ ತಡೆಯಬಹುದು.
ReplyDeleteಸರ್,
ReplyDeleteಈಗ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ವಿಷಯದ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟಿರುವಿರಿ. ಧನ್ಯವಾದಗಳು.
upayukta maahiti...
ReplyDeleteಮಲ್ಲಿಯವರೇ ಬಹಲ ದಿನಗಳ ನಂತರ ನಿಮ್ಮ ದರ್ಶನವಾಯ್ತು, ಧನ್ಯವಾದ ಪ್ರತಿಕ್ರಿಯೆಗೆ. ಹಲವಾರು ಸಣ್ಣ ಪುಟ್ಟ ವಿಷಯಗಳನ್ನು ನಾವು ಮರೆತು ಬಿಡುತ್ತೇವೆ..ಪೌಷ್ಠಿಕ ಆಹಾರ, ಮತ್ತು ಯಥೇಚ್ಛ ನೀರು ಕುಡಿಯುವುದರಿಂದ complications ಅನ್ನು ಕಡಿಮೆ ಮಾಡಬಹುದು ಇದರಿಂದ ಚಿಕಿತ್ಸೆ ಫಲಕಾರಿಯಾಗುತ್ತೆ..
ReplyDeleteಮನಸು ಮೇಡಂ ಧನ್ಯವಾದ, ನಿಮಗೆಲ್ಲ ಗೌರಿ-ಗಣೇಶ ಸನ್ಮಂಗಳವನ್ನುಂಟುಮಾಡಲಿ, ಹಬ್ಬದ ಶುಭಾಷಯಗಳು
ReplyDeleteತು೦ಬಾ ಥ್ಯಾ೦ಕ್ಸ್ ಜಲನಯನ ಸರ್...
ReplyDeleteಈ ರೋಗದ ಬಗ್ಗೆ ನಮ್ಮೆಲ್ಲರಲ್ಲಿ awareness ಬೆಳೆಸಿದ್ದಕ್ಕೆ...
ಸುಧೇಶ್ ಧನ್ಯವಾದ, ನನ್ನ ಇನ್ನೊಂದು ಬ್ಲಾಗ್ science & share ನಲ್ಲಿ ವೈರಸ್ ಮತ್ತು ಸ್ವೈನ್ ಫ್ಲೂ ಬಗ್ಗೆ ಒಂದು ಪೋಸ್ಟ್ ಮತ್ತು ಲಿಂಕ್ ಕೊಟ್ಟಿದ್ದೇನೆ ನೋಡಿ. ಜಲನಯನದ ಹೋಮ್ ಪೇಜ್ ನಲ್ಲಿ ಭಾವಮಂಥನ ಮತ್ತು science and share ನ ಲಿಂಕ್ ಕೊಟ್ಟಿದ್ದೇನೆ.
ReplyDeleteಜಲನಯನ ಸರ್,
ReplyDeleteಬೆಂಗಳೂರಿನಲ್ಲಿ ನಾನು ನಿಮಗೆ ಸಿಗದಿದ್ದಕ್ಕೆ ವಿಷಾದಿಸುತ್ತೇನೆ. ಮೀನುಗಾರಿಕೆಯಲ್ಲಿ ದೊಡ್ಡ ಸಾಧನೆ ಮಾಡಿದ ನಿಮ್ಮನ್ನು ಬೇಟಿಯಾಗಿ ಅನೇಕ ಮಾಹಿತಿಯನ್ನು ಪಡೆದುಕೊಳ್ಳುವ ಅವಕಾಶವನ್ನು ನಾನು ಮಿಸ್ ಮಾಡಿಕೊಂಡೆ. ಮುಂದಿನ ಬಾರಿ ನೀವು ಬೆಂಗಳೂರಿಗೆ ಬಂದಾಗ ಖಂಡಿತ ತಪ್ಪಿಸಿಕೊಳ್ಳುವುದಿಲ್ಲ.
ಮತ್ತೆ ನನ್ನನ್ನು ಉದ್ದೇಶಿಸಿಯೇ ಈ ಲೇಖನ ಬರೆದು ಉತ್ತಮ ಮಾಹಿತಿಯನ್ನು ನೀಡಿದ್ದೀರಿ. ನನ್ನ ಮೇಲೆ ನೀವಿಟ್ಟಿರುವ ಪ್ರೀತಿಗೆ ನಾನು ಚಿರಋಣಿ. ನಿಮ್ಮ ಈ ಲೇಖನವನ್ನು ನನ್ನ ಅನೇಕ ಗೆಳೆಯರಿಗೆ ತಿಳಿಸುತ್ತೇನೆ. ಸಾಧ್ಯವಾದಷ್ಟು ಹೆಚ್ಚು ಜನರಿಗೆ ಇದರಿಂದ ತಿಳಿವಳಿಕೆ ಮೂಡಲು ನಾನು ಖಂಡಿತ ಪ್ರಯತ್ನಿಸುತ್ತೇನೆ.
ಧನ್ಯವಾದಗಳು.
ಶಿವು,
ReplyDeleteವೈವಿಧ್ಯಮಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿ ವಿದೇಶಿಯರಿಂದ ಪುರಸ್ಕಾರ ಪಡೆದ ನಿಮ್ಮ ಸಾಧನೆಯ ಮುಂದೆ ನಮ್ಮದು ಸಾಮಾನ್ಯ, ನಿಮ್ಮ ಹೃದಯವಂತಿಕೆ ಮತ್ತು ಸರಳತಗೆ ಶರಣು. ನಿಮ್ಮ ಪ್ರಶ್ನೆ ನನ್ನ ಲೇಖನದ ಅಪೂರ್ಣತೆಯನ್ನು ಎತ್ತಿ ಹಿಡಿಯಿತು ಅದಕ್ಕೇ ಪೂರಕ ಪೋಸ್ಟಿಂಗ್ ಹಾಕಿದೆ ಅದಕ್ಕಾಗಿ ನಿಮಗೆ ನನ್ನ ಧನ್ಯವದಗಳು.
ನಿಮಗೆ ನಿಮ್ಮ ಪರಿವಾರಕ್ಕೆ ಮತ್ತು ಗೆಳೆಯ ವೃಂದಕ್ಕೆ ಹಾಗೆಯೇ ಈ ಮೂಲಕ ಎಲ್ಲ ನಮ್ಮ ಬ್ಲಾಗ್-ಸ್ನೇಹಿತ ಸ್ನೇಹಿತೆಯರಿಗೆ
ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.
ನನ್ನ ಮುಂದಿನ ಭೇಟಿಯಲ್ಲಿ ಖಂಡಿತಾ ಸಿಗುವಾ
ಜಲನಯನ,
ReplyDeleteತುಂಬ ಉಪಯುಕ್ತ ಮಾಯಿತಿ....ನಾನು ಈ ಖಾಯಿಲೆ ಬಗೆ ಹೆಚ್ಚು ತಿಳಿದು ಕೊಂಡಿದ್ದು ನಿಮ್ಮ ಲೇಖನ ಓದಿಯೇ...
ಬ್ಲಾಗ್ ಲೋಕ ಎಷ್ಟೊಂದು ತಿಳಿಸಿ ಕೊಡುತ್ತೆ.....
ಮಾಯಿತಿಗೆ ಧನ್ಯವಾದಗಳು...
ಸವಿಗನಸಿನ ದಿನಗಳು ಮರಳಿಬಂದಿವೆ...ತಿಳಿದುಕೊಳ್ಳುವುದರಲ್ಲಿ ಆಸಕ್ತಿ ನಿಮ್ಮಂತೆ ಎಲ್ಲರಿಗೂ ಬಂದರೆ ಸರ್ಕಾರದ ಕೆಲಸ ಅರ್ಧ ಕಡಿಮೆಯಾದಂತೆ. ನಿಮ್ಮ ರೆಸ್ಪಾನ್ಸ್ ಗೆ ಷುಕ್ರಿಯಾ.
ReplyDeleteಎಲ್ಲೆಡೆ ಭಯವನ್ನು ಬಿತ್ತುತ್ತಿರುವ ಹಂದಿ ಜ್ವರದ ಕುರಿತು ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು. ಅಂತೆಯೇ ಈ ಜ್ವರದ ಮೂಲ, ಹುಟ್ಟಿನ ಕುರಿತು ವಿಕ್ರಮ ಬೇತಾಳ ಕಥೆಯ ಮೂಲಕ ಮತ್ತಷ್ಟು ಮಾಹಿತಿಗಳನ್ನೂ ನೀಡಿದೆ ನಿಮ್ಮ ಹಾಸ್ಯ ಮಿಶ್ರಿತ ಲೇಖನ. ಜಲನಯನ ಬ್ಲಾಗ್ ಇಂತಹ ಉಪಯುಕ್ತ ಮಾಹಿತಿಗಳನ್ನು ಮತ್ತಷ್ಟು ನೀಡಲೆಂಡು ಹಾರೈಸುವೆ.
ReplyDeleteತೇಜಸ್ವಿನಿ, ನಿಮ್ಮ ಪ್ರತಿಕ್ರಿಯೆ ನನಗೆ ಪ್ರೋತ್ಸಾಹದಾಯಕ ಮತ್ತು ದುಕ್ಸೂಚಕ. ಧನ್ಯವಾದ, ಖಂಡಿತ ಇದು ನನ್ನ profession ಗೂ ಸಂಬಂಧಿಸಿದ್ದು ಹಾಗಾಗಿ ಇದು ನನಗೆ ಪ್ರಿಯ ಕೂಡ. ನನ್ನ science & share blog ನಲ್ಲಿ ಇನ್ನಷ್ಟು ಲಿಂಕ್ ಕೊಟ್ಟಿದ್ದೇನೆ ಸಮಯವಿದ್ದಾಗ ನೋಡಿ, ನಿಮ್ಮ ಸ್ನೇಹಿತ/ತೆ ಯರಿಗೂ ತಿಳಿಸಿ.
ReplyDeleteಗುರುಗಳೇ! ಕೆಲಸವಿಲ್ಲ ಪುರ್ಸ್ಹೊತ್ತು ಇಲ್ಲದಂತೆ ಆಗಿದ್ದೇನೆ, ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆ ಇರಲಿ..
ReplyDeleteನಿಮ್ಮ ಉತ್ತರದಿಂದ ನನ್ನ ಸಂಶಯ ಪರಿಹಾರವಾಯಿತು. ತುಂಬಾ thanks :)
ಹಂದಿ ಜ್ವರದ ಗುಣಗಳನ್ನು ನೋಡಿದರೆ ಅದು ಎರಡು ಅಥವ ಮೂರು ದಿನಗಳೊಳಗೆ ತನ್ನ toll ಮುಗಿಸುತ್ತಿದೆ. ಇಷ್ಟು ಕಡಿಮೆ ಅವಧಿಯ incubation time ಇರುವ virus ಗೆ active immunisation ಸಾಧ್ಯವಾ?
ನನ್ನ ಸಂಶಯಗಳು ಅಸಂಬದ್ಧವಾಗಿದ್ದರೆ ಕ್ಷಮಿಸಿ. mail ಮೂಲಕ ಕೇಳಬೇಕಿದ್ದರೆ ದಯವಿಟ್ಟು ತಿಳಿಸಿ.
ರೂಪಶ್ರೀ, ನಿಮ್ಮ ಸಮಯ ತಗೊಂಡು ಉತ್ತರಿಸಿ...ಸಾರಿ..ಪ್ರಶ್ನಿಸಿ..ಹಹಹ
ReplyDeleteimmunisation - preventive not curative..ಎಲ್ಲಾ ರೋಗಗಳಿಗೂ ಅಷ್ಟೇ. ಅಂದ್ರೆ ರೋಗ ಬಂದಾಗ ಇಮ್ಮಯುನೈಸ್ ಮಾಡೊದು ಸಾಧ್ಯವಿಲ್ಲ. ಮುಂಚಾನೆ ಆಗ್ಬೇಕು. ನೀವು ಹೇಳೋ activity period ರೋಗ ಹರಡೋಕೆ ಅಥವಾ ಲಕ್ಷಣ ಕಾಣೋಕೆ. ವೈರಸ್ ತಗುಲಿದಾಗ ವಾಕ್ಸಿನಾಶನ್ ಮಾಡಲಾಗದು. ಅದಕ್ಕೇ ಮಕ್ಕಳಿಗೆ ವಾಕ್ಸಿನೇಶನ್ (ಯಾವುದೇ ಆಗಲಿ) ಮಾಡುವಾಗ ಯಾವುದೇ ರೀತಿಯ ಜ್ವರ ಖಾಯಿಲೆ ಇದ್ದರೆ ಮಾಡುವುದಿಲ್ಲ (ನೆನೆಪಿಸಿಕೊಳ್ಳಿ..ನಿಮ್ಮ ಅನುಭವಕ್ಕೆ ಬಂದಿರಬೇಕು). ಈ ರೀತಿಯ ಕೇಸುಗಳಲ್ಲಿ ವೈರಸ್ ತಗುಲಿ ರೋಗಿ ಗುಣಮುಖನಾದರೆ ಅವನು ನೈಸರ್ಗಿಕವಾಗಿ ಇಮ್ಯುನೈಸ್ ಆದಂತೆ, ಇದೂ active immunisations. If we vaccinate before the disease occurs, then also it is active immunization.
ಕತೆ ಕವಿತೆ ಗಳೆಂಬ ಲೋಕದ ಮದ್ಯೆಯು ಜನರಿಗೆ ಒಂದು ಸಂದೇಶ ಕೊಡ್ತಾ ಇರೋ ನಿಮ್ಮ ಬ್ಲಾಗ್ ಗೆ ನನ್ನ ಒಂದು ಚಿಕ್ಕ ಥ್ಯಾಂಕ್ಸ್ ಸರ್, ಇವತ್ತು ನಮ್ಮನ್ನೆಲ್ಲಾ ಕಾಡ್ತಾ ಇರೋ ಈ ಹಂದಿ ಜ್ವರದ ಬಗ್ಗೆ ಕಾಳಜಿ ಮೂಡಿಸುವ ನಿಮ್ಮ ಪ್ರಯತ್ನ ತುಂಬಾ ಚನ್ನಾಗಿದೆ ಸರ್.
ReplyDeleteಇಲ್ಲಿ ನಾನು ತುಂಬಾನೇ ತಿಳ್ಕೊಂಡಿದ್ದೀನಿ.
ಇಂತಿ ಚಿಕ್ಕವ.
"ದೊಡ್ಡಮನಿ.ಮಂಜು"