ನನ್ನನ್ನು ಈ ಲೋಕಕ್ಕೆ ಪರಿಚಯಿಸಿದವರು ನನ್ನ ಸ್ನೇಹಿತೆ-ಸ್ನೇಹಿತ ದಂಪತಿಗಳು, (ಮೃದುಮನಸು-ಸವಿಗನಸು). ಅವರಿಗೆ ಮೊದಲ ನಮನ...ಸವಿಗನಸನ್ನು ಕಾಣಲು ಪುಸಲಾಯಿಸಿದ್ದು ಮೊದಲಿಗೆ ನಾನೇ ಎನ್ನುವುದು ಬೇರೆ ವಿಷಯ...ಹಹಹ...
ಕೆಲವರು ಪ್ರತಿಕ್ರಿಯೆಯಲ್ಲಿ ಮೇಡಮ್ ಜಲನಯನವ್ರೇ ತುಂಬಾ ಚನ್ನಾಗಿ ಬರೀತೀರಿ..ಎಂದಾಗ ...ನಾನು ಮೊದಲಿಗೆ ನಾಟಕದಲ್ಲಿ ಹೆಣ್ಣಿನ ಪಾತ್ರ ಮಾಡಿದ್ದು ನೆನಪಾಗಿ ನಾಚಿಕೊಂಡೆ ಬೆಪ್ಪಾಗಿ...ಹಹಹ...ಆಮೇಲೆ..ನಡೆದದ್ದನ್ನು ಒಂದು ನನ್ನ ಬ್ಲಾಗಿನಲ್ಲಿ ನಿಮಗೆ ತಿಳಿಸಿದ್ದೇನೆ...
ನನ್ನ ಬ್ಲಾಗ್ ಜೀವನದ ತಿರುವು..ಬಹಳ ಭಾವುಕ ಎನ್ನಬಹುದ್ದಾದ್ದು..ಈಗಾಗಲೇ ಲೇಖನವಾಗಿ ನಿಮಗೆ ತಿಳಿದಿದೆ..ನನ್ನ ಮಂಗಳೂರಿನ ಮತ್ತು ಬೆಂಗಳೂರಿನ ಡಿಸೆಂಬರ್ ಪ್ರವಾಸದ ಸಮಯದಲ್ಲಿ, ದಿನಕರ್ ದಂಪತಿಗಳನ್ನು, ಶಿವು ದಂಪತಿಗಳನ್ನು ಮತ್ತು ಪ್ರಕಾಶ್ (ಅವನ ಮನೆಗೆ ಹೋಗಲಿಲ್ಲವೆಂದು ಅವನ ಕೋಪ ನನ್ನನ್ನು ಬೀಳ್ಕೊಡುವವರೆಗೂ ಇತ್ತು ಅನ್ನಿ..) ಎಲ್ಲರನ್ನೂ ಭೇಟಿ ಮಾಡಿದ್ದು.....
ಈಗ ನಿಮ್ಮೊಂದಿಗೆ ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ....
ಹಲವು ಬ್ಲಾಗ್ ಮಿತ್ರರು ಬ್ಲಾಗ್-ಬಳಗದ ಒಂದು ಸಮ್ಮಿಲನ ಏಕೆ ಮಾಡಬಾರದು ಎನ್ನುವುದನ್ನು ಪ್ರಸ್ತಾಪಿಸಿರುವುದು... ನನ್ನ ಎಲ್ಲ ಮಿತ್ರರು ಅವರ ಬ್ಲಾಗ್ ಫಾಲೋಯರ್ಸ್ ಗಳು (ಹಿಂಬಾಲಕರು ಅನ್ನೋದು ಯಾಕೋ ಸರಿ ಕಾಣ್ಲಿಲ್ಲ ಅದಕ್ಕೆ ಅಂಗ್ಲಕ್ಕೆ ಮೊರೆ..ಹಹಹ..ಮೂರ್ಖ ಅನ್ನೋದಕ್ಕಿಂತ fool ಅಂದ್ರೆ ,ಅಷ್ಟಾಗಿ ಮನಸ್ಸಿಗೆ ಹಚ್ಕೊಳ್ಳಲ್ಲ ಅಂತ).
ಜೂನ್ ಅಂತ್ಯದ ಅಥವಾ ಜುಲೈ ಮೊದಲ ವಾರದಲ್ಲಿ ಇದನ್ನು ಆಯೋಜಿಸುವುದರಿಂದ ವಿದೇಶದಲ್ಲಿರುವ ಮಿತ್ರರು ಬರಲೂ ಅನುವಾಗಬಹುದೆಂದು ನನ್ನ ಯೋಚನೆ..ನಿಮ್ಮ ಅನಿಸಿಕೆಗಳನ್ನು ಖಂಡಿತಾ ನನಗೆ ಅಥವಾ ಪ್ರಕಾಶ್ (ಇಟ್ಟಿಗೆ ಸಿಮೆಂಟು) ಗೆ ಮೈಲ್ ಮೂಲಕ ತಿಳಿಸಿ.. ಒಂದು ದಿನದ (ಬೆಳಿಗ್ಗೆ 9 ರಿಂದ ಮದ್ಯಾನ್ಹ 2 ರ ವರೆಗೆ ಮಾಡಿ..ಮದ್ಯಾನ್ಹದ ಊಟದ ನಂತರ ಮುಕ್ತಾಯ) ಕಾರ್ಯಕ್ರಮ ಹೇಗಿರುತ್ತೆ...ನಮ್ಮ ಪರಿಚಯ, ಕೆಲವು ಚರ್ಚೆ, ಒಂದಷ್ಟು ಕವನ-ಕಥೆ ವಿಚಾರ ಹೀಗೆ.
ನಿಮ್ಮೆಲ್ಲರ ಅಭಿಮಾನಕ್ಕೆ ಮತ್ತೊಮ್ಮೆ ವಂದಿಸಿ...ನಮ್ಮ ಬ್ಲಾಗ್-ಸಮೇಳನದ ಬಗ್ಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.
ನಿಮ್ಮವ......
ಡಾ. ಆಜಾದ್
(ಜಲನಯನ, ಭಾವ-ಮಂಥನ ಮತ್ತು science & share ಬ್ಲಾಗ್ ಗಳ ಒಡೆಯ)
Mails: azadis@hotmail.com; suruaz@gmail.com