Wednesday, April 27, 2011

(ಚಿತ್ರ ಕೃಪೆ: ಇಟ್ಟಿಗೆ ಸಿಮೆಂಟ್)

ಬಾ ಹೂಬನಕೆ ಇನಿಯಾ


ಮುಳ್ಳು ಹರಿತೆಲೆಯ ತಲೆ

ಚುಚ್ಚುವುದು ಬಂದರೆ

ಅನುಮತಿಯಿಲ್ಲದಲೇ

ನಾಜೂಕು ಕಾಂಡ

ಮುಳ್ಳಿದ್ದರೂ ಭ್ರಮರ ಭಂಡ

ನುಸುಳುವುದು ಮಕರಂದಕಾಗಿ

ಹೆದರಿದ ಪತಂಗ ನೋಡುತಿರೆ ಮಂಕಾಗಿ

ಭರ ಭ್ರಮರದ ಸಂಭ್ರಮ,

ನಾಚಿದ ಕೆಂದುಟಿ ತೆರೆದ ಸುಮ

ಇನ್ನೂ ಮುಚ್ಚಿದ ಗರಿ ಬಿಚ್ಚದ ಮೊಗ್ಗು

ನೋಡುತಿದೆ ಅಳೆದಳೆದು

ಕಳೆದುಕೊಂಡರೂ ಗಳಿಸಿದ ತನ್ನಕ್ಕನ

ಗಳಿಸಿದರೂ ಕಳಕೊಂಡ ಭ್ರಮರನ

ನಸುನಕ್ಕು ಅರಿತಂತೆ ಓಲಾಡಿಸಿ ತಲೆ

ಕಾಯುತಿದೆ ಮತ್ತೆ ಬರುವ ರವಿಗಾಗಿ

ರವಿತರುವ ಪುಳಕ ಸುಳಿವ ಋತುಗಾಗಿ

ಆ ಕಿರಣದಾಗಮನ ಭೃಂಗಸಂಗಕಾಗಿ

20 comments:

  1. ಬರೆದಿರುವರು ಜಲನಯನ
    ಗುಲಾಬಿ ಹೂವಿನ ಕವನ
    ಮುಳ್ಳು ಮೊಗ್ಗು ಭ್ರಮರ
    ವರಣಿಸಿದ ಕವಿಯ ಸಂಭ್ರಮ
    ತೋಟದ ಗುಲಾಬಿ ಖುಷಿಯಿಂದ
    ಕರೆಯುತಿದೆ ಈ ಕವಿಮನವೊಂದನ್ನ...
    ಚೆನ್ನಾಗಿದೆ ಈ ಕವನ..

    ReplyDelete
  2. ಇಂತಹ ಮಧುರ ಕವನವನ್ನು ಬರೆಯಲು ಪ್ರೇರಣೆಯಿತ್ತ, ಪ್ರಕಾಶ ಹೆಗಡೆಯವರ ಚಿತ್ರಕ್ಕೇ ನಾನು ಋಣಿಯಾಗಬೇಕು!

    ReplyDelete
  3. foto kavana hoovu ella sogaso sogasu.....

    ReplyDelete
  4. ಅಜಾದ್,
    ಮದುರ ಮದುರವೀ ಈ ಸುಂದರ ಕವನ. ಫೋಟೊಗೆ ತಕ್ಕಂತೆ ಸೊಗಸು.

    ReplyDelete
  5. ದಿನಕರ್ ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ....

    ReplyDelete
  6. ಮನಸು ಮೇಡಂ ಕವನದ ಬನದಲ್ಲಿ ಅರಳಿನಿಂತ ಹೂವಿನ ಪಾಲು ನಿಮ್ಮ ಪ್ರತಿಕ್ರಿಯೆ. ಧನ್ಯವಾದ

    ReplyDelete
  7. ಗಿರೀಶ್, ಎರಡೇ ಶಬ್ದದ ಪ್ರತಿಕ್ರಿಯೆ ಸಾವಿರ ಮಾತು ಹೇಳಿತು...

    ReplyDelete
  8. ವಾರೆವ್ವಾ...ಕವನಕ್ಕೆ ಕವನ
    ಪರಿಯಿದು ಕೀರ್ತಿಯ ನವ ತನನ
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  9. ಸುನಾಥಣ್ಣ...ಧನ್ಯವಾದ..ನಿಮ್ಮ ಅಭಿಪ್ರಾಯಕ್ಕೆ ಮತ್ತು ಕವನದ ಜರ್ರಾ ನವಾಜಿಶ್ ಗೆ...ಪ್ರಕಾಶನ ಚಿತ್ರಗಳ ಪ್ರೇರಣೆ...

    ReplyDelete
  10. ಮಹೇಶ್ ಮಾಮ ಥ್ಯಾಂಕ್ಸ್....

    ReplyDelete
  11. ಉಮೇಶ್ ದೇಸಾಯರೇ..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹದ ಮಾತಿಗೆ.

    ReplyDelete
  12. ಸೀತಾರಾಮ್ ಸರ್ ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ....

    ReplyDelete
  13. ಶಿವು...
    ಮಧುರ ಸುಮಧುರ ಮಧುಭರಿತ ಸುಮ
    ಸುಮ ವನಸುಮ ಮನಗೆಲುವ ಕುಸುಮ
    ಮನ ತನುಮನ ಗೆಲುವಾಗಲಿ ನಿರಂತನ
    ವನ ಜೀವನ ತುಂಬಲಿ ಭಾವನೆ ಮನನ
    ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ

    ReplyDelete
  14. ತುಂಬಾ ಚೆನ್ನಾಗಿದೆ ... ಹೂವು ,ಭ್ರಮರದ ನಂಟು ಎಷ್ಟೊಂದು ಅಂದವಾಗಿ ಬಣ್ಣಿಸಿದ್ದೀರಿ . ನಿಜವಾಗಿಯು ವ್ಹಾ ವ್ಹಾ!!!!

    ReplyDelete
  15. ಧನ್ಯವಾದ ಆಶಾವ್ರೆ..ಹೂವು ಮತ್ತು ಭ್ರಮರಗಳ ಬಂಧ ನಿಸರ್ಗ ನಿಯಮ ಅಲ್ಲವೇ..??

    ReplyDelete