Saturday, June 19, 2010

ವಿಸ್ವಾಮಿತ್ರನ ಎಡ್ವಟ್ಟು

“ನಮ್ಸ್ಕಾರ ಕಣಣ್ಣೋ ವಿಸ್ವಾಮಿತ್ರಣ್ಣ...ಸಂದಾಕಿದ್ದೀಯಾ..? ಏನು ಎರಡ್ತಿಂಗ್ಳು ಸರ್ಕಾರಿ ಮೇಜ್ವಾನಿ ಆಯ್ತಂತೆ...?? ಎಂಗಿತ್ತು...?? ಅದೂ ನಿನ್ನ ತಗೊಂಡೋಗಿ ಎಂಗ್ಸರ್ ಕ್ವಾಣ್ಯಾಕ್ಕೆ ಆಕುದ್ರಂತೆ..? ಅದ್ಕೇಯಾ ಯೋಳಿದ್ದು ಕೂದ್ಲು ಆ ಪಾಟಿ ಬುಡ್ಬ್ಯಾಡಾ ಅಂತ ಕೇಳ್ದ್ಯಾ ನನ್ ಮಾತ್ನ...ಅಲ್ಲ ...ಮೀಸೆ ಬೋಳಿಸ್ಬಿಟ್ಟು..ಆ ಪಾಟಿ ಊದ್ದಕ್ಕೆ ಕೂದ್ಲು ಬಿಟ್ಟು ..ನಿಲುವಂಗಿ ಆಕ್ಕಂಡ್ರೆ...ಅದ್ಯಾವ್ನನ್ ಮಗ ನಿನ್ನ ಗಂಡ್ಸು ಅಂದಾನು....? ಆ ಪ್ಯಾದ್ಗುಳ್ಗೆ ಎಂಗ್ ಗೊತ್ತಾದದು...?! ಪಾಪ...!!”

ವಿಸ್ವಾಮಿತ್ರನಿಗೆ ಕೋಪ ನೆತ್ತಿಗೇರಿತ್ತು....ಎಷ್ಟು ರೋಪಿತ್ತು ..??!! ಆರು ತಿಂಗಳಿಗೆ ಮುಂಚೆ....ಎಲ್ಲಾರೂ...ಆ ಪೋಲೀಸು ಆಫೀಸರ್ರು ಬಂದಿರ್ಲಿಲ್ಲವಾ..ನನ್ನ ಪ್ರಮೋಶನ್ ನಿಂತೋಗಿದೆ..ಮಿನಿಸ್ಟ್ರು ಎಡವಟ್ಟು ಕೆಲಸ ಮಾಡ್ತಾ ಇದಾರೆ, ನೀವಾದರೂ ಸ್ವಲ್ಪ ಶಿಫಾರಸು ಮಾಡಿ ಸ್ವಾಮೀಜಿ ಅಂತ ಉದ್ದಕ್ಕೆ ನನ್ನ ಕಾಲು ನೆಕ್ತಾ ಬಿದ್ದಿರಲಿಲ್ಲವಾ ಎದ್ದೇಳು ಅನ್ನೋತನಕ...?? ಧ್ಯಾನ ದಲ್ಲಿದ್ರೂ ಈ ಮೂರು ತಿಂಗಳಲ್ಲಿ ತನ್ನ ಮಾನ ಮೂರು ಕಾಸಿಗೆ ಹರಾಜಾದ ಮಾಹಿತಿ ದಪ್ಪ ದಪ್ಪ ಅಕ್ಷರಗಳಲ್ಲಿ ಅಚ್ಚು ಹಾಕಿದ್ದ ..ಹತ್ತಿರ ಬಿದ್ದಿದ್ದ‘ಘಂಟಾನಾದ‘ ಪತ್ರಿಕೆಯ ಮೇಲೆ ಕಣ್ಣಾಡಿಸಿದ್ದ ..ವಿಸ್ವಾಮಿತ್ರ. ಹೌದು ಅವನೇ..ಅದೇ ವರದಿಗಾರ..ನನ್ನ ಖಾಸ ಕೋಣೆಗೆ ಬಂದು..ವಿಲಾಯಿತಿ ..ದ್ರಾಕ್ಷಾರಸವನ್ನು ಜೊಲ್ಲು ಸುರಿಸಿಕೊಂಡು ಕುಡಿದವ, ಕುಡಿದದ್ದು ಸಾಲ್ದು ಅನ್ನೋ ಹಾಗೆ ಕಪ್ ನೆಕ್ಕಿದ್ದ ನಿರ್ಭಯ ಕುಮಾರ್...!!!?? ಛೇ ನಾಯಿಗಾದರೂ ನಿಯತ್ತಿರುತ್ತೆ ..ಇವರಿಗಿಲ್ಲದಾಯಿತೇ...?? ಅಕಟಕಟ...!!!


ಕಣ್ಣು ತೆರೆದು ತನ್ನ ಗೆಳೆಯ ... ಸಿಂಗ್ರುನ ನೋಡಿದ ವಿಸ್ವಾಮಿತ್ರ.....ಹೌದು...ಕ್ಲಾಸ್ ಮೇಟು ಸಿಂಗ್ರು ಇವನಿಗಿಂತಾ ಎರಡು ವರ್ಷ ಜೂನಿಯರ್ರು...ಆದ್ರೂ ಕ್ಲಾಸ್ ಮೇಟು ಹ್ಯಾಗೆ ಅಂತೀರಾ..? ನಮ್ ವಿಸ್ವಾಮಿತ್ರ 8, 9 ನೇ ಕ್ಲಾಸಿನಲ್ಲಿ ಒಂದೊಂದು ಸಲ ಡುಮ್ಕಿ ಹೊಡೆದಿದ್ದಕ್ಕೆ ಸಿಂಗ್ರು ಕ್ಲಾಸ್ ಮೇಟ್ ಆದ....ಎಸ್ಸೆಸೆಲ್ಸಿ ಬೆಟ್ಟ ಹತ್ತಾಕಾಗ್ದೆ...ವಿಸ್ವಾಮಿತ್ರ ಹಿಮಾಲಯ ಹತ್ತಿ ಬಂದಮೇಲೇನೆ ಈ ಅವತಾರ!!.....ಶ್ರೀ..ಶ್ರೀ..ವಿಸ್ವಾಮಿತ್ರ ಗುರು ಆಗಿದ್ದು....ಸಿಂಗ್ರ ..ಬಿ,ಇ, ಮಾಡಿ ಪಕ್ಕದ ನಲ್ಲಗೆರೆ ಡ್ಯಾಮ್ ನ ಪ್ರಾಜೆಕ್ಟ್ ಇಂಜನೀಯರ್ ಆಗಿದ್ರೂ ಮಿತ್ರನ್ನ ..ಸಾರಿ...ಗುರೂಜೀನ ನೋಡಿ ಆಶೀರ್ವಾದ ಪಡಕೊಂಡು ಹೋಗ್ತಿದ್ದ...ಖಾಸಗಿಯಲ್ಲಿ ಇಬ್ರೇ ಇದ್ದಾಗ...ವಿಸ್ವಾಮಿತ್ರನ ಜೊತೆ ಅದೇ ಹಳ್ಳಿ ಭಾಷೇಲೇ ಇಬ್ರೂ ಮಾತನಾಡ್ತಿದ್ದದ್ದು. ಹಾಗೂ ಇಬ್ರೇ ಇದ್ದಾಗ ವಿಸ್ವಾಮಿತ್ರ ಹೇಳಿದ್ದುಂಟು...ಸಿಂಗ್ರು ನಮ್ಮ ಗುಟ್ಟು ನಮ್ಮಲ್ಲೇ ಇರ್ಲಪ್ಪ... ಅಂತ.....

ವಿಸ್ವಾಮಿತ್ರ ಹೇಳಿದ ...ನೋಡೋ ಸಿಂಗ್ರ....ಆ ಮಿನಿಸ್ಟ್ರು ನನ್ ತಾವ ಎಸ್ಟ್ ದಪ ಬಂದಿಲ್ಲ .. ಏನೋ ಒಂದ್ ಸಣ್ಣ ಎಡವಟ್ಟು ಆಗೋಯ್ತು...ಗುಟ್ಟಾಗಿರ್ಬೇಕಾದದ್ದು ಬಯಲಾಗೋಯ್ತು...ನಾಯಿ ಎಂಜಲ್ ಕಾಸಿಗೆ ಆಸೆ ಬಿದ್ದು ನನ್ನ ಕಚ್ಚಿಬಿಡ್ತು...ನನ್ನ ಸೆಲ್ ಗೆ ಮಿನಿಸ್ಟ್ರು ಬಂದಿದ್ದಾಗ ಗುಟ್ಟಾಗಿ ಯೋಳಿದ್ದೆ...ಅತ್ಗ್ಯಮ್ಮನಿಗೆ ಯೋಳಿಬಿಡ್ತೀನಿ ನನಗೆ ನೀನೀಗ ಸಹಾಯ ಮಾಡ್ದೆ ಇದ್ರೆ..ಅಂತ...ಅದಕ್ಕವನು ಏಯ್..ಬಿಡ್ ಬಿಡು ಅಳ್ಳಕ್ಕೆ ಬಿದ್ದಿದ್ದೀಯಾ ಆಳಿಗೊಂದು ಕಲ್ಲು ಆಕ್ತಾವ್ರೆ...ನನ್ನೆಂಡ್ರಿಗೂ ಯೋಳೀವ್ನಿ...ಎಲ್ಲಾರ ವಿರುದ್ಧಾನೂ ಆಪಾದ್ನೆ ಮಾಡ್ತಾ ಅವ್ನೆ ಆ ಗುರು..ನನ್ ಬಗ್ಗೆ ಯೋಳಿದ್ರೆ ನಂಬ್ಗಿಂಬೀಯಾ ಅಂತ....ನಿನ್ ಮಾತು ಯಾರೂ ನಂಬಾಕಿಲ್ಲ ಈವಾಗ....ಅಂತ ಲೇವಡಿ ಮಾಡಿಬುಟ್ಟ... ತನ್ನ ಅಳಲನ್ನ ಸ್ನೇಹಿತನ ಹತ್ರ ತೋಡಿಕೊಂಡ ವಿಸ್ವಾಮಿತ್ರ.

ಹೌದು..ಇದು ಸುಮಾರು ಆರು ತಿಂಗಳಿಗೆ ಮುಂಚೆ ಬಹಳ ಪ್ರಸಿದ್ಧವಾಗಿದ್ದ ಶ್ರೀ ಶ್ರೀ ವಿಶ್ವಾಮಿತ್ರ ಗುರೂಜಿ ಕಥೆಯ ತುಣುಕಿದು...ಎಂಥೆಂಥ ಕಚಡಾ ಕೆಲಸ ಮಾಡೋ ಅಧಿಕಾರಿಗಳು ರಾಜಾರೋಷವಾಗಿ ಓಡಾಡ್ತಾರೆ...ಸಿಕ್ಕಿಬಿದ್ರೆ ಸಸ್ಪೆಂಡ್ ಆಗ್ತಾರೆ...ಆಮೇಲೆ ಹೇಗೋ ಸಸ್ಪೆನ್ಶನ್ ರಿವೋಕ್ ಮಾಡಿಸ್ಕೊಂಡು ಅಲ್ಲೇ ಬಮ್ದು ಮತ್ತೆ ಮೆರೀತಾರೆ...ಜನರ ಓಟನ್ನ ತಿನ್ನೋದೂ ಅಲ್ದೇ ಅಧಿಕಾರದ ಕುರ್ಚಿ ಹಿಡಿಯೋ ರಾಜಕಾರಣಿ ಮಾಡಬಾರದ್ದನ್ನೆಲ್ಲ ಮಾಡ್ತಾನೆ...ಕೊಲೆ ಸುಲಿಗೆ..ಹೆಣ್ಣು ಮಕ್ಕಳ ಅಸಹಾಯಕತೆನಾ ಕ್ಯಾಶ್ ಮಾಡ್ತಾನೆ...ಆದ್ರೂ...ಮೆರೀತಾನೆ...ಮತ್ತೆ ದುಡ್ಡು ಸುರೀತಾನೆ ಅದೇ ಮಂದಿ ಓಟ್ ತಗೋತಾನೆ ಮತ್ತೆ ಅದೇ ಗದ್ದುಗೆ ಹಿಡೀತಾನೆ...ಇವರೆಲ್ಲರ ತಪ್ಪುಗಳಿಗೆ...ಹೋಲಿಸಿದರೆ ನಮ್ಮ ವಿಸ್ವಾಮಿತ್ರಂದು ಬಹಳ ಜುಜುಬಿ ...ಆದ್ರೂ ....

ನಿಜ ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು....... ಆದ್ರೆ ವಿಶ್ವಾಮಿತ್ರ ತಪ್ಪು ಮಾಡಿಲ್ಲ ಅನ್ನೋದಲ್ಲಾ ನನ್ನ ವಾದ...ಇಂತಹ ತಪ್ಪಿಗೆ ಈ ತರಹದ ಶಿಕ್ಷೆಯಾದರೆ....ಅಮಾಯಕ ಜನರ ಪ್ರಾಣ ಹೀರಿ ಮತೀಯ ಗಲಭೆ ಮಾಡಿಸೋ ರಾಜಕಾರಣಿಗೆ ಯಾಕಿಲ್ಲ ಶಿಕ್ಷೆ... ತಿಂದು ತಿಂದು ಹಂದಿಯಾಗಿ ಮೆರೆಯೋ .. ಲೋಕಾಯುಕ್ತರು ಹಿಡಿದ್ರೂ...ಶಿಕ್ಷೆಯಿಲ್ಲ ಅಂತ ತಿಳ್ಕೊಂಡು ಲಂಗು ಲಗಾಮಿಲ್ಲದೇ ಮೆರೆಯೋ ಅಧಿಕಾರಿಗಳಿಗೆ ಯಾಕಿಲ್ಲ ಶಿಕ್ಷೆ...?? ಯೋಚಿಸಬೇಕಾದ್ದೇ ಅಲ್ವೇ..?

Saturday, June 12, 2010

ಗೊತ್ತಿಲ್ಲ ಮಗು

ಅಪ್ಪಾ ..



ಏನು ಮಗು?


ಮಳೆಗಾಲ ಮತ್ತೆ ಶುರು ಆಗಿದೆ ಅಲ್ಲಪ್ಪಾ


ಹೌದು ಮಗು, ಒಳ್ಳೆದಲ್ವೇ..?


ಮತ್ತೆ ಅದೇ ಉತ್ತರ ಕರ್ನಾಟಕದ ಕಡೆ..


ಹೌದು ಕಣೋ ರೈತರಿಗೆ ಖುಷಿ ತರುತ್ತೆ ಕೃಷಿ ಅದಕ್ಕೆ...


ಮತ್ತೆ ಹೋದ ವರ್ಷದ ಅತಿ ವೃಷ್ಠಿ ಪರಿಹಾರಾನೇ ತಲುಪಿಲ್ಲ ಅಂತಾರೆ..


ಗೊತ್ತಿಲ್ಲ ಮಗು.




ಮತ್ತೆ ಅಪ್ಪಾ..


ಹೇಳು ಮಗು..


ವಿರೋಧ ಪಕ್ಷದವರೂ ನಿಧಿ ಸಂಗ್ರಹ ಮಾಡಿದ್ರಲ್ಲಾ..?


ಹೌದು ಕಣೋ ಬಂದಿತ್ತಲ್ಲ ಪೇಪರಲ್ಲಿ.


ಮತ್ತೆ ಅದೇ ಪೇಪರಲ್ಲಿ ನಿಧಿ ಪರಿಹಾರಕ್ಕೆ ಹೋಗಿಲ್ಲ


ಮತ್ತೆ ಯಾವುದೋ ವ್ಯವಹಾರಕ್ಕೆ ಹೋಗಿದೆ ಅಂತ ಇತ್ತಲ್ಲಾ?


ಗೊತ್ತಿಲ್ಲ ಮಗು.






ಅಲ್ಲಪ್ಪಾ ..


ಮತ್ತೆ ಇನ್ನೇನೋ ..?


ಅದೇ ವಿರೋಧ ಪಕ್ಷದ್ದು ಕೇಂದ್ರದಲ್ಲಿ ಸರ್ಕಾರ


ಹೌದು ನಿನಗೂ ಗೊತ್ತಲ್ಲಾ


ಕೇಂದ್ರ ಕಳುಹಿಸಿದ ಪ್ರವಾಹ ಪರಿಹಾರದ ಖರ್ಚೂ


ನಮ್ಮ ಸರ್ಕಾರ ಮಾಡಿಲ್ಲ ಅಂತ ಲೋಕಾಯುಕ್ತರೂ ಹೇಳಿದ್ದಾರೆ


ಮತ್ತೆ ಆಕಡೆ, ಈ ಕಡೆ ಹಣ ಎಲ್ಲಾ ಯಾವ ಕಡೆ ಹೋಯ್ತು

ನಂಗೊತ್ತಿಲ್ಲ ಮಗು

Saturday, June 5, 2010

ವಿಶ್ವ ಪರಿಸರ ದಿನಾಚರಣೆ...(ಜೂನ್ 5)

ವಿಶ್ವ ಪರಿಸರ ದಿನಾಚರಣೆ...(ಜೂನ್ 5)


Top Ecological Disasters so far......


ವಿಶ್ವ ಪರಿಸರದಿನಾಚರಣೆ ಆಚರಿಸಿಕೊಳ್ಳುತ್ತಿರುವ ನಾವು ನಿಜವಾಗಿಯೂ ಮಾಡಿರುವುದೇನು..? ಪರಿಸರದ ಬಗ್ಗೆ ..,  ನಮ್ಮ ಮನೆಯನ್ನೇ ನಾವು ಎಷ್ಟು ಮುತುವರ್ಜಿಯಿಂದ ನೋಡಿಕೊಳ್ಳುತ್ತೇವೆಂದು...ಯೋಚಿಸಬೇಕಾಗಿದೆ...ಪರಿಸರದ ದೂಷಣೆ -ನಮ್ಮ ಹಾಸುಗೆ, ನಮ್ಮ ಊಟದ ತಟ್ಟೆ, ನಮ್ಮ ಕುಡಿನೀರು ಅಷ್ಟೇಕೆ ನಮ್ಮ ಉಸಿರಾಡುವ ಪ್ರಾಣ ವಾಯು ಇವುಗಳನ್ನೇ ಮಲಿನ ಮಾಡಿಕೊಳ್ಳುತ್ತಿದ್ದೇವೆ.

ಈ ಸಂದರ್ಭದಲ್ಲಿ ನಮ್ಮಿಂದಾದ ತಪ್ಪುಗಳನ್ನು ನೆನಪಿಸಿಕೊಳ್ಳುವ ಮತ್ತು ಆತ್ಮವಿಮರ್ಶಿಸಿಕೊಳ್ಳುವ ಅವಕಾಶ ಸಿಕ್ಕಿದೆ...ಅದಕ್ಕೆ ..ನಮ್ಮಿಂದಾದ ಈ ಪ್ರಮುಖ ಪರಿಸರ ದೂಷಣೆಗಳ ಪುನರಾವಲೋಕನ ಮಾಡೋಣವೇ....?

1. (ಚೆರ್ನೋಬಿಲ್ ಅಂದಿನ ರಷ್ಯಾದ ಅಣುಸ್ಥಾವರ ವಿಸ್ಫೋಟ)

The Chernobyl Nuclear Plant Explosion



Chernobyl, Russia: Nuclear power plant explosion (ವೆಬ್ ಎಮ್.ಎಸ್.ಎನ್. ಕೃಪೆ)



The worst ever nuclear power plant accident in history, happened on the 26th of April in 1986 when a reactor at the Chernobyl plant, in the Ukrainian Soviet Socialist Republic, Released 400 times higher radioactive material than that happened during bombing of Hiroshima-Nagasaki.



ಅಂದಿನ ರಷ್ಯಾ ಸಂಯುಕ್ತ ಸಂಸ್ಥಾನಗಳ ಉಕ್ರೇನ್ ಪ್ರಾಂತದ ಚೆರ್ನೋಬಿಲ್ ಅಣುಸ್ಥಾವರ ೨೬ ಏಪ್ರಿಲ್ ೧೯೮೬ ರಲ್ಲಿ ಸ್ಫೋಟಗೊಂಡು ಮಾನವ ಇತಿಹಾಸದ ಅತಿ ಘೋರ ಪರಿಸರ ಪ್ರದೂಷಣೆಗೆ ದಾರಿಯಾಯಿತು. ಇದು ಎಷ್ಟು ತೀವ್ರತರವಾಗಿತ್ತೆಂದರೆ...ನಾಗಸಾಕಿ –ಹಿರೋಷಿಮಾ ನಗರಗಳ ಮೇಲೆ ಅಣುಬಾಂಬಿನ ಸ್ಪೋಟದಿಂದ ಉತ್ಪಾನೆಯಾದ ವಿಕಿರಣಪ್ರಸರಣಕ್ಕಿಂತ ೪೦೦ ಪಟ್ಟು ಹೆಚ್ಚು ವಿಕಿರಣ ಪರಿಸರಕ್ಕೆ ಬಿಡುಗಡೆಯಾಗಿ ಥೈರಾಯ್ಡ್ ಕ್ಯಾನ್ಸರ್ (೨.೪%) ರಕ್ತದ ಕ್ಯಾನ್ಸರ್ (೧೦೦ %) ಜನ್ಮವಿರೂಪತೆ ಹೃದಯ ಖಾಯಿಲೆಗಳು, ಹೀಗೆ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಮೂಲವಾಯಿತು. ಈ ಸ್ಥಾವರಗಳಿದ್ದ ಪ್ರದೇಶ ಮಾನವ ಜೀವನ ಸಂಬಂಧಿತ ಯಾವುದೇ ಚಟುವಟಿಕೆ (ವ್ಯವಸಾಯ, ಹೈನುಗಾರಿಕೆ ಇತ್ಯಾದಿ) ಗೆ ಯೋಗ್ಯವಾಗಲು ಕನಿಷ್ಠ ಇನ್ನೂ ೬೦-೨೦೦ ವರ್ಷಕಾಲ ಅಯೋಗ್ಯವಾಗಿರುತ್ತದೆ. ಇನ್ನು ಅಣುಸ್ಥಾವರದ ಸ್ಫೋಟಿತ ಜಾಗ ೨೦,೦೦೦ ವರ್ಷಗಳವರೆಗೂ ಮಾನವ ಜೀವನಕ್ಕೆ ಅನರ್ಹವಾಗಿರುತ್ತಂತೆ....!!!!
2. The Union Carbide gas leak (ಚಿತ್ರ: ಎಮ್.ಎಸ್.ಎನ್. ಕೃಪೆ)

(ಭೋಪಾಲ್ – ಮಧ್ಯಪ್ರದೇಶ ದ ಯೂನಿಯನ್ ಕಾರ್ಬೈಡ್ ದುರಂತ)
The sun sets behind the Union Carbide Corp pesticide plant in Bhopal

1984, ಡಿಸೆಂಬರ್ 2ರ ರಾತ್ರಿ ಭರತದ ಇತಿಹಾಸದ ಕರಾಳ ರಾತ್ರಿ...ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಪಾಲಿಗೆ. ವಿದೇಶೀ ಕಂಪನಿಯೊಂದರ ಪ್ರಮುಖ ಒಡೆತನದ ಯೂನಿಯನ್ ಕಾರ್ಬೈಡ್ ಕೀಟನಾಶಕ ತಯಾರಿಕಾ ಘಟಕದಿಂದ ಮೀಥೈಲ್ ಐಸೋ ಸಯನೇಟ್ ಎಂಬ ವಿಷಾನಿಲ ಸೋರಿಕೆಯಾದ ಫಲಸ್ವರೂಪ ಈ ವರೆಗೂ 20,000 ಜೀವಗಳ ಬಲಿತೆಗೆದುಕೊಂಡಿದೆ ಈ ಪರಿಸರ ಸಂಪಧಿಸಿದ ಮಾನವ ತಪ್ಪಿನ-ಕಾರಣದ ಅವಘಡ. ಈ ದುರ್ಘಟನೆಗೆ ಈಗಲೂ ಸುಮಾರು ೨ ಲಕ್ಷ ಜನ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವಿತರಾಗಿದ್ದಾರೆ.

3. The death of the Aral Sea, Kazakhstan
(ಅರಲ್ ಸರೋವರ – ಇಲ್ಲವಾಗಿದೆ....ಚಿತ್ರ: ಎಮ್.ಎಸ್.ಎನ್ ಕೃಪೆ)
sert which used to be the seabed of the Aral Sea

ಮೇಲಿನ ಚಿತ್ರದಲ್ಲಿರುವ...ಅಥವಾ...ಇಲ್ಲದಿರುವ...?? ಸರೋವರ.. ಒಮ್ಮೆ ವಿಶ್ವದ ನಾಲ್ಕನೇ ಅತಿ ವಿಶಾಲ ಸರೋವರವಾಗಿತ್ತೆಂದರೆ ನಂಬುವಿರಾ...?



ಹೌದು...ಇದು ಅಂದಿನ ರಷ್ಯಾದ ಕಜಾಕಿಸ್ತಾನ್ ನ ಅರಲ್ ಸರೋವರದ ಜಲತಲವಾಗಿದ್ದ ಚಿತ್ರ...ಸುಮಾರು 68,000 ಚದರ ಕಿಲೋಮೀಟರ್ ಇದ್ದ ಈ ಸರೋವರ 1960 ರಲ್ಲಿದ್ದ ತನ್ನ ಸ್ಥಿತಿಗಿಂತ ಶೇ 90 ರಷ್ಟು ಮಾಯವಾಗಿ ಒಮ್ಮೆ ಆಗಾಧ ಜಲಚರ, ಮೀನು ಸಂಕುಲದ ವಾಸಸ್ಥಾನವಾಗಿದ್ದ ಸರೋವರ ಈಗ ಕುರುಚಲು ಗಿಡ, ಮರಳುಗಾಡು..ಆಗಿದೆ ಎಂದರೆ...!!?? ಮಾನವ..ಎಷ್ಟು ನಿನ್ನ ಪ್ರತಾಪ...?? ನೀನು ಪರಿತಾಪ ಪಡುವ ದಿನ ದೂರವಿಲ್ಲ ಎನ್ನುತ್ತಿದೆ... ಇದಕ್ಕೆ ಕಾರಣ ಏನು ಗೊತ್ತೆ..? ಈ ಸರೋವರದ ಜೀವವಾಹಿನಿಗಳಾದ ನದಿಗಳನ್ನು ಅವುಗಳ ಉಪನದಿಗಳನ್ನು ...ಕಾಡಿ..ಅವುಗಳ ಹರಿವಿನ ದಿಶಾಬದಲಾವಣೆ ಮಾಡಿ ನೀರಾವರಿ ಉದ್ದೇಶದ ಜಲಾಶಯಗಳನ್ನು ಮಾಡಿದ್ದು...

4. Kuwaiti Oil fires, Gulf war



(ಕುವೈತಿನ ಖಾರಿಯುದ್ಧ ಪರಿಣಾಮದ ಎಣ್ಣೆ ಸೋರಿಕೆ ಮತ್ತು ಅನಿಲಾಗ್ನಿ)


ಇರಾಕಿನ ಮಹದಾಸೆ..ದುರಾಸೆ...ಪರಿಸರಕ್ಕೆ ಮಾಡಿದ ಅಪಾರ ಹಾನಿ...ಎಣ್ಣೆ ಮತ್ತು ಅನಿಲ ಸೋರಿಕೆ..ಪರಿಣಾಮ ಅನಿಲಾಗ್ನಿ...ಸುಮಾರು 600 ಎಣ್ಣೆಸ್ಥಾವರ/ಬಾವಿ ಗಳನ್ನು ಬೆಂಕಿಗಾಹುತಿಮಾಡಲಾಯಿತು. ಇವುಗಳ ಬೆಂಕಿ ಸುಮಾರು ಏಳು ತಿಂಗಳು ನಿಲ್ಲದೇ ಹತ್ತಿ ಉರಿಯಿತು. 1991 ರ ಜನವರಿ 23 ಕ್ಕೆ ಪ್ರಾರಂಭವಾಯಿತು ಈ ಸೋರಿಕೆ...ಇದು ಪರಿಸರಕ್ಕೆ ವಿಸರ್ಜಿಸಿದ (ಸೋರಿಸಿದ) ಎಣ್ಣೆಯಪ್ರಮಾಣ 11 ದಶಲಕ್ಷ ಬ್ಯಾರಲ್ಲುಗಳು..ಇದು ಸಮುದ್ರದ ನೀರಿನಮೇಲೆ ಹರಡಿದ ವಿಸ್ತೀರ್ಣ 6787 ಚದರ ಕಿಲೋ ಮೀಟರ್ ಮತ್ತು ಎಣ್ಣೆ ಪದರು 5 ಇಂಚ್ ದಪ್ಪವಿತ್ತು...!!! ಈ ಕಚ್ಚಾ ತೈಲದ ಪ್ರಮಾಣ ಭಾರತದ ಒಂದು ವಾರದ ಬೇಡಿಕೆಗೆ ಸಮ...!!!!!

ಇವು ಕೇವಲ ಕೆಲವೇ ನಿದರ್ಶನಗಳು ಮಾನವ ಪರಿಸರದ ಮೇಲಿನ ನಿಲ್ಲದ ದೂಷಣೆಗೆ...ನಾವು ಎಚ್ಚೆತ್ತುಕೊಳ್ಳದಿದ್ದರೆ..ಮುಂದೆ ..ಮಾನವ ಕುಲದ ವಿನಾಶ ನಿಸ್ಚಿತ...

Thursday, June 3, 2010

ಅಸಹಾಯಕತೆ

ಮಂಕು ಕವಿದಂತೆ
ಬಿಂಕ ಬಿಡದಂತೆ
   ಭಾವನೆಗಳು ಮೂಕವಾಗಿರುವಾಗ
   ಮನಸ ಮುದಿಸುವ
   ಕನಸ ಹೊದಿಸುವ
   ಮಾತೊಂದ ಹೇಳುವುದೆಂತು?

ಮಂಜು ಕವಿದಿರುವಾಗ
ಸಂಜೆ ಕತ್ತಲಡವಿಯಲಿ
ತಡ-ತಡವಿ ಎಡವಿ ಮುನ್ನಡೆವಾಗ
ಕಲ್ಲಮುಳ್ಳಹಾದಿಯಲಿ
ಹುಲ್ಲಮೆತ್ತೆಯೆಂದೆಣಿಸಿ
ನಿನ್ನ ಬಳಿಗೋಡಿ ಬರುವುದೆಂತು?

   ಕಣ್ಣರೆಪ್ಪೆಯು ನೀನು
   ಮನದ ಮಿಡಿತವು ನೀನು
   ಬರಿದೇ ಉಬ್ಬಿಸಿ ಕಣ್ಣಮುಚ್ಚಿರುವಾಗ
   ಮನದ ಹಾಡನು
  ಎವೆಯ ಕನಸನು

  ಚಿತ್ತ ಚಿತ್ರವನು ನಾ ಬಿಡಿಸಲೆಂತು?