Thursday, March 7, 2013

ನಿನ್ನಿಂದಲೇ


(Pic Source: http://www.vawnet.org/global/IWDSeries.php)
ನಿನ್ನಿಂದಲೇ
ಜೀವ ತಂತುಗಳಿವು ವರ್ಣವೆಲ್ಲಿಯದು
ಅಂಕುರದಲ್ಲೂ ಭೇದ ಸೃಷ್ಟಿಗೆನ್ನಲೇ ಜೈ
ಒಂದಕ್ಕೆ ಎಕ್ಸ್ ಎಂಬ ಹೆಣ್ಣು ಹೆಸರು
ಮತ್ತೊಂದಕ್ಕೆ ಬೀಗುವುದಕ್ಕೆಂದೇ ವೈ?

ಹುಟ್ಟುವುದಕ್ಕೆ ಮುಂಚೆಯೇ ತಲೆಬರಹ
ಮುಟ್ಟುವುದಕ್ಕೆ ಮೊದಲೇ ಕೋಮಲತೆ
ಯಾವುದೀ ನಿಯಮ ಏಕೆ ತಾರತಮ್ಯ
ಹೀಗೇ ಕೊರಗಬೇಕೇ ಪ್ರತಿ ತರುಲತೆ?

ಜೀವಾಂಕುರ ಸಾಧ್ಯವೇ ತಾಯಿ ಇಲ್ಲದೇ?
ಮಡಿಲ ಮೆತ್ತೆ, ಅಮೃತ ಪಾನ, ಮಮತೆ
ಬೆಳೆದು ಬಲಗೊಳ್ಳಲು ಆ ಹಾಯಿ ಇಲ್ಲದೇ?
ಅಮ್ಮ, ಸೋದರಿ, ಸತಿಯ ಆ ಕಕ್ಕುಲತೆ

ಮರು ಹುಟ್ಟು ಅಮ್ಮನದು ಮಗಳಾಗಿ
ತಾಯಿ ತಂದೆಗೆ ತಾಯಿಯಾಗುವ ಪರಿ
ಸಂಸಾರ ನೌಕೆಗವಳು ಕುಶಲ ನಾವಿಕ
ಕುಗ್ಗದ ಕೊರಗದ ಕರಗದ ಚೈತನ್ಯ ಸಿರಿ

ಹೆಣ್ಣೆಂದು ಛೀಮಾರಿ ಹುಟ್ಟಿಗೇ ಕೊಡಲಿ
ಸೊಸೆ-ಮಗಳಲಿ ತಾರತಮ್ಯ ಹೆಣ್ಣಿಂದಲೇ
ಹೆಣ್ಣೇ ಹೆಣ್ಣಿಗೆ ವೈರಿ ಹುಳುಕಿರೆ ಮನೆಯಲಿ
ಆಗಲಿ ಎಲ್ಲ ಶುಭಕೂ ಪ್ರಾರಂಭ ನಿನ್ನಿಂದಲೇ