Tuesday, December 29, 2009

ಬಾಷ್ಪಾಂಜಲಿ-ವಿಷ್ಣುಗೆವಿಷ್ಣುವಾಗಿ ನಟನೆಯಲ್ಲಿ ಮೇರು ಸಂಪತ್
ಭಾವಕ್ಕೆ ಗೀತೆಕೊಟ್ಟು ಅವಿಸ್ಮರಣೀಯ ಅಶ್ವಥ್
ಒಂದೇ ದಿನದಂತರದಲ್ಲಿ ಎಂತಹ ನೋವು ಕಲೆಗೆ
ಎರಡು ಅಮೂಲ್ಯ ಪುತ್ರರತ್ನಗಳ ನಷ್ಟ ನಾಡಿಗೆ.

ಛಲ ತೋರಿ ಮಿಂಚಿ ನಟನೆಯಲಿ ಪುಟ್ಟಣ್ಣನ ನಾಗರಹಾವಾಗಿದ್ದು
ದಾರಿತಪ್ಪಿದ ಪಾತ್ರದ ಗಂಧದಗುಡಿಯಲ್ಲಿ ಅಣ್ಣನ ತಮ್ಮನಾಗಿದ್ದು
ಅಮೋಘ ನಟನೆ ದುರಂತ ಕಥೆಗೆ ಜೀವಾಳದ ಬಂಧನವಾದದ್ದು
ಕನ್ನಡ ಕುಲಕೋಟಿಗೆ ಸಾಹಸಿಂಹನಾಗಿ ಆಪ್ತಮಿತ್ರನಾದದ್ದು.

ಅಂದು ಮಾರ್ಪಟ್ಟ ಸಂಪತ್ ಇಂದು ಇಲ್ಲವಾದ ವಿಷ್ಣು
ಮಿತ ನುಡಿ ಹಿತ ನಡೆಯಿಂದ ಟೀಕೆಗೆ ಉತ್ತರಿಸಿದ ವಿಷ್ಣು
ನಾಡ-ನುಡಿಯ ರಕ್ಷಣೆಗೆ ಅಣ್ಣನಜತೆಗೂಡಿದ ವಿನಯಿ ವಿಷ್ಣು
ಎಂತಹ ನೋವು ನಾಡಿಗೆ ಅಶ್ವಥ್ ಹಿಂದೆಯೇ ಹೋದರು ವಿಷ್ಣು.

ಚಿತ್ರರಂಗ ಒಬ್ಬ ಮೇರು ನಟನನ್ನು ಕಳೆದುಕೊಂಡಿರಬಹುದು
ರಂಗದ ನಟರು ಆಪ್ತಮಿತ್ರನನ್ನು ಕಳೆದುಕೊಂಡಿರಬಹುದು
ಆದರೆ ವಿಷ್ಣು ಒಂದು ಗುರುತಾಗಿ ವ್ಯಕ್ತಿ ನಮ್ಮಲ್ಲಿ ಇಲ್ಲ
ನಟನಾಗಿ, ಯಜಮಾನನಾಗಿ ಸಿಂಹದ ಹೂಂಕಾರ ಇನ್ನಿಲ್ಲ.

ಚೇತನ ಹೊರಟಿದೆ ದೇಹ ಬಿಟ್ಟು ಇಹ ಲೋಕವ ತ್ಯಜಿಸಿ
ನೂತನ ಚಿರಂತನವಾಗಲಿ ಜನಿಸಿ ಮತ್ತೊಮ್ಮೆ ಪ್ರವೇಶಿಸಿ
ಕನ್ನಡ ಲೋಕವ, ಸಾರಸ್ವತವ ನಟನಾ ಪ್ರಪಂಚವ
ದೈವನೀಡಲಿ ಕುಟುಂಬಕೆ ಸಾಂತ್ವನ, ಆತ್ಮಕೆ ಸ್ವರ್ಗವ.


ಗಾಯನ ಗಾರುಡಿಗ ಅಶ್ವಥ್ - ಹೃದಯಪೂರ್ವಕ ಶ್ರದ್ಧಾಂಜಲಿನೇಗಿಲಯೋಗಿ - ಕುವೆಂಪು - ಸಿ. ಅಶ್ವಥ್
ನೆಡೆದರೇ ಒಂದು ಚಂದ ಸಾಥ್ -ಸಾಥ್
ಗಾಯನ ಗಾರುಡಿ ಹೊರಡಲು ಕಂಠದಿ
ಸಿ. ಅಶ್ವಥ್ ಬರುವರು ಮನಃ ಪಟಲದಿ
ಕೆ.ಎಸ್.ನ. ಜೀ.ಎಸ್ಸೆಸ್,ಶಿಶುನಾಳ ರಚನೆಗೆ
ಕೋಡಗನ ಕೋಳಿ, ಮೈಸೂರು ಮಲ್ಲಿಗೆ
ಮುಕ್ತ ಕಂಠದಿ ಮನ್ವಂತರಕ್ಕೂ ಹೆಜ್ಜೆ
ಗಾಯನ ಮನದಾಳದಿ ಮಿಡಿವ ಗೆಜ್ಜೆ
ತಪ್ಪು ಮಾಡದವ್ರು ಯಾರವ್ರೇ ? ಹಾಡು
ಬೆಪ್ಪುಗೊಳಿಸಿದ್ದು ತೆರೆದು ನವ ಅಲೆಯ ಜಾಡು
ಅಣ್ಣನಾಗಿ ರೈತ, ಉಳುವಾ ಜೋಗಿಯ ತೋರಿ
ಕಣ್ಣ ತೆರೆಸಿದಾತ ಹಾಡುಗಾರಿಕೆ ಕನ್ನಡಿಗನ ಸಿರಿ
ಸಂಗೀತ ರಚನೆ ಗಾಯನಕೆ ಕೊಟ್ಟರೊಂದು ದಿಶೆ
ಕಲಿಸಿ ನಮ್ಮವರಿಗೇ ಗಾನ ಗಾರುಡಿಯ ನಶೆ
ಹುಟ್ಟುದಿನದಂದೇ ಇಲ್ಲವಾದರು ಅಶ್ವಥ್ ಹೀಗೆ
ಹಾಡಿ ಹೋದರು ಒಂದೇ ಹಾಡು ಹುಟ್ಟುಹಬ್ಬ ಪುಣ್ಯ ತಿಥಿಗೆ

Saturday, December 26, 2009

ಬ್ಲಾಗು-ಬಂಧಮಂಗಳೂರಿಗೆ ಕಾರ್ಯನಿಮಿತ್ತ ಡಿಸೆಂಬರ್ ೨೨ಕ್ಕೆ ಹೋಗಿದ್ದಾಗ ದಿನಕರ್ ಮೊಗೇರ್ ನನಗಾಗಿ ಕಾಯುತ್ತಿರುವಂತೆ ಫೋನ್ ಮಾಡಿದರು, ಭೇಟಿಗೆಂದೇ ನಮ್ಮ ಮೀನುಗಾರಿಕಾ ಮಹಾವಿದ್ಯಾಲಯದ ಆವರಣಕ್ಕೆ ಬಂದು ಕಾದಿದ್ದರು. ತಮ್ಮ ಶ್ರೀಮತಿಯವರೊಂದಿಗೆ ಬಂದಿದ್ದ ಅವರ ಆತ್ಮೀಯತೆಗೆ ನಾನು ಮೂಕನಾಗಿದ್ದೆ. ಯಾವುದೋ ಸಂದರ್ಭದಲ್ಲಿ "ನಿಮ್ಮ ಊರಿಗೆ ಬರುವೆ" ಎಂದು ತಾರೀಖು ತಿಳಿಸಿದ್ದೆ ಅಷ್ಟೇ. ಇದನ್ನು ಯಾವ ರೀತಿಯ ಬಾಂಧವ್ಯ ಎನ್ನಬೇಕು? ಕಾಲೇಜಿನಲ್ಲಿ ನನ್ನ ಸ್ನೇಹಿತರಂತೂ ಈ ರೀತಿಯ ಉತ್ಕಟ ಬಂಧ-ಬಾಂಧವ್ಯ ಬ್ಲಾಗಿನ ಮೂಲಕ ಬರಲು ಸಾಧ್ಯವೇ ಎಂದು ಆಶ್ಚರ್ಯ ಪಟ್ಟರು. ನನ್ನ ಘನಿಷ್ಟ ಮಿತ್ರ ಡಾ.ಶಿವಪ್ರಕಾಶ್ ಅಂತೂ ಮೂಕನಾಗಿದ್ದ ಅವರ ಆತ್ಮೀಯತೆ ಕಂಡು..ಅವನು ಆಗಲೇ ನಿರ್ಧರಿಸಿದ ತಾನೂ ಬ್ಲಾಗ್ ರಚಿಸಬೇಕೆಂದು. ಈ ಚಿತ್ರದಲ್ಲಿ ನಾನು, ದಿನಕರ್, ವನಿತಾ (ಶ್ರೀಮತಿ ದಿನಕರ್) ಮತ್ತು ನನ್ನ ಮಿತ್ರ ಡಾ. ಶಿವಪ್ರಕಾಶ್, ಎಸ್.ಎಮ್.


ಚಾಟ್ನಲ್ಲಿ ಡಿ.೨೪ಕ್ಕೆ ತನ್ನ ಹುಟ್ಟುಹಬ್ಬ ನೀವು ಬಂದಾಗ ಖಂಡಿತಾ ಮನೆಗೆ ಬರಬೇಕು ಎಂದು ಒತ್ತಾಯಿಸಿದ್ದ ಶಿವುವನ್ನು ಕಾಣಲು ಅವರ ಮನೆಗೆ ಹೊರಟೆ. ಮಲ್ಲೇಶ್ವರಂ ಸರ್ಕಲ್ ನಿಂದ ಹೊರಟು ನವರಂಗ ಟಾಕೀಸಿನ ದಾರಿಯಲ್ಲಿ ಪಾರ್ಕಿನ ಬಳಿ ಬಸ್ಸಿನಿಂದಿಳಿದೆ. ಶಿವುಗೆ ಫೋನ ಮಾಡಿದೆ..ತಮ್ಮ ಸ್ಕೂಟಿಯಲ್ಲಿ ಬಂದೇ ಬಿಟ್ತರು ಶಿವು ನನ್ನ ಪಿಕ್-ಅಪ್ ಮಾಡಲು...ಅವರ ಮತ್ತು ಹೇಮಾಶ್ರೀ (ಶ್ರೀಮತಿ ಶಿವು) ಅವರ ಸಂಭ್ರಮ ನನ್ನನ್ನು ಮೂಕನ್ನನ್ನಾಗಿಸಿದವು. ಅವರ ಮನೆಯಲ್ಲಿ ಒಪ್ಪವಾಗಿ ಜೋಡಿಸಿದ್ದ ಶಿವುಗೆ ಸಂದಿದ್ದ ಪ್ರಶಸ್ತಿಗಳ ಮತ್ತು ಮನೆಯ ವೀಡಿಯೋ ಕ್ಲಿಪ್ ತೆಗೆದೆ.. ನನ್ನ, ಶಿವು ಮತ್ತು ಅವರ ಶ್ರೀಮತಿಯರ ಜೊತೆ ಫೋಟೋ ತೆಗೆದರು. ಬಿಸಿ ಬಿಸಿ ದೋಸೆಯ ಸೇವೆ, ಹಬೆಯಾಡುವ ಕಾಫಿ..ನನ್ನ ಹೊಟ್ಟೆ ತುಂಬಿಸಿದರೆ ನನ್ನ ಮನದಾಳಕ್ಕೆ ಅವರ ಅತ್ಮೀಯತೆ ಹೊಕ್ಕಿತ್ತು..

ಬೆಂಗಳೂರಿನ ಸಿಟಿ ಟ್ಯಾಕ್ಸಿಯಲ್ಲಿ ಕುಳಿತು ಸಹಕಾರನಗರಕ್ಕೆಂದು ಹೇಳಿದಾಗ ಹರೀಶ್ (ಟ್ಯಾಕ್ಸಿ ಚಾಲಕ) ಕೇಳಿದ್ದು "ಸ್ಥಳದ ಪರಿಚಯ ನಿಮಗಿದೆಯಾ ಎಂದು. ಇಲ್ಲ ಎಂದಾಗ "ಸಹಕಾರ ನಗರ ಗೊತ್ತು ಅಲ್ಲಿ ಯಾವ ನಿಗದಿತ ಜಾಗ ಎಂದು ತಿಳಿದುಕೊಳ್ಳಿ" ಎಂದಾಗ ಪ್ರಕಾಶ್ ಗೆ ಫೋನಾಯಿಸಿದೆ. ಪಾರ್ಕಿನ ಬಳಿ ಎಂದಾಗ "ಆ ಜಾಗ ಗೊತ್ತು ಅಲ್ಲಿಗೆ ಹೋಗೋಣ ನಂತರ ನಿಮ್ಮ ಸ್ನೇಹಿತರಿಗೆ ಫೋನು ಮಾಡಿ" ಎಂದು ಟ್ಯಾಕ್ಸಿ ಹೊರಡಿಸಿದ ಹರೀಶ. ಅ ಜಾಗಕ್ಕೆ ಬಂದಾಗ..ಕಾರಿನಲ್ಲಿ ಕುಳಿತಲ್ಲಿಂದಲೇ ನಮ್ಮೆಡೆ ಕೈಬೀಸಿದ್ದರು ಪ್ರಕಾಶ್...!!! ಹರೀಶನಿಗೆ ನಾವು ಒಬ್ಬರನ್ನೊಬ್ಬರು ನೋಡುತ್ತಿರುವುದು ಇದೇ ಮೊದಲಿಗೆ ಎಂದಾಗ ನಂಬಲಿಲ್ಲ...ಅದುಹೇಗೆ..ಈ ರೀತಿಯ ಸ್ನೇಹ-ಬಂಧ ಹೇಗೆ ತಿಳಿಯಿತು ಇವರೇ ಎಂದು? ಎಂದೆಲ್ಲಾ ಅವನಿಗೆ ಪ್ರಶ್ನೆ ಕಾಡತೊಡಗಿದುವಂತೆ.

ಮೀನು, ಮತ್ಸ್ಯಶಾಸ್ತ್ರ ಮತ್ತು ಮತ್ಸ್ಯಕೃಷಿಗಳಲ್ಲಿ ಮುಳುಗಿದ್ದ ನನಗೆ ... ಇಷ್ಟೇ ಅಲ್ಲ ಪ್ರಪಂಚ ಎನ್ನುವುದನ್ನು ಸಾದರಪಡಿಸುವಂತೆ ಪರಿಚಯಿಸಿದ ಶ್ರೇಯ -ಮೃದುಮನಸು- ಗೆ ಸಲ್ಲಬೇಕು. ಬಹುಶಃ ಒಂದು ವರ್ಷದ ನನ್ನ ಗಳಿಕೆ... ಆತ್ಮೀಯರ, ನನ್ನ ಲೇಖನ ಅದು ಹೇಗೇ ಇದ್ದರೂ ಮೆಚ್ಚಿ ಪ್ರೋತ್ಸಾಹಿಸುವ ಬ್ಲಾಗು-ಮಿತ್ರರ ಸ್ನೇಹ. ತುಂಬು ಮನಸ್ಸಿನಿಂದ ಅಣ್ಣ ಎನ್ನುವ ತಂಗಿಯರು, ತಮ್ಮಂದಿರು, ಅಲ್ಪಸ್ವಲ್ಪ ಹತ್ತಿರ ವಯಸ್ಕರು, ಹೀಗೆ ಹಲವಾರು ಸ್ನೇಹಿತರು...ಜೊತೆಗಿದ್ದು ಹುಟ್ಟಿನಿಂದ ಪರಿಚಿತ ಬಂಧುಗಳಿಗಿಲ್ಲದ ಆಪ್ಯಾಯತೆ ಇವರಲ್ಲಿ ಕಂಡೆ...

ಬ್ಲಾಗು ಬ್ರಹ್ಮ ಬ್ಲಾಗು ವಿಷ್ಣು ಬ್ಲಾಗುದೇವೋ ಮಹೇಶ್ವರಃ ಬ್ಲಾಗೇ ಸಾಕ್ಶಾತ್ ಪರ ಬ್ರಹ್ಮ ತಸ್ಮೈಶ್ರೀ ಬ್ಲಾಗುವೇ ನಮಃ...........ಅಲ್ಲವೇ...??.

Friday, December 11, 2009

ಯಾರಲ್ಲಿ ಹೇಳಿಕೊಳ್ಳಲಿ ನನ್ನ ಗೋಳು..??

ನಾನು ಗಂಡಾಗಿ ಹುಟ್ಟಿದ್ದೇ ತಪ್ಪೇ??...ನನ್ನ ನೋವನ್ನೇಕೆ ಈ ಹೆಣ್ಣುಗಳು ಅರ್ಥಮಾಡಿಕೊಳ್ಳುವುದಿಲ್ಲ..??!! ದೇವರೇ..ಯಾವ ಜನ್ಮಕ್ಕೂ ಬೇಡ ಈ ಗಂಡಾಗುವ ಕರ್ಮ... ಹಯವದನ ಮನಸ್ಸಿನಲ್ಲೇ ನೋವು ಅನುಭವಿಸುತ್ತಾ...ದೇವರಲ್ಲಿ ಬೇಡಿಕೊಳ್ಳತೊಡಗಿದ... ಅಂದು.. ಹೊರಗಡೆ ಅಡ್ಡಾಡಿ...ಮನೆಗೆ ಅಲ್ಪಸ್ವಲ್ಪ ಏನಾದರೂ ತರೋಣ ಅಂತ ಹೊರಟಿದ್ದ ಹಯವದನ... ಇಡೀ ಕಾಲೊನಿಯಲ್ಲೇ ಬಹುಸ್ಫುರದ್ರೂಪಿ ಕಟ್ಟುಮಸ್ತಾದ ಅಂಗಸೌಸ್ಠವ ಹೊಂದಿದ್ದ ಯುವ ಚೇತನ ಪುಟಿಯುವ ನವ ಯುವಕ ಇವನು. ಎಲ್ಲ ಹೆಣ್ಣುಗಳ ಕಣ್ಣೂ ಇವನಮೇಲೆಯೇ.. ಆಜಾನುಬಾಹು ವ್ಯಕ್ತಿತ್ವ...ಮುಖದಲ್ಲಿ ಬಹು ಆಕರ್ಷಣೀಯ ಕಾಂತಿ, ನಡೆದಾಡಿದರೆ ರಾಜಗಾಂಭೀರ್ಯ ತುಳುಕುತ್ತಿತ್ತು. ಯಾವುದೇ ಹೆಣ್ಣು ಆಸೆ ಪಡುವ ಎಲ್ಲ ಗುಣ ಅವನಲ್ಲಿದ್ದುದರಿಂದಲೇ ಎಲ್ಲ ಹೆಣ್ಣುಗಳ ಕಣ್ಣೂ ಇವನ ಮೇಲೆ. ಕಾಲೋನಿಯ ಬಹು ಕ್ವಾಲಿಫೈಯ್ಡ್ ಗಂಡುಗಳಲ್ಲಿ ಒಬ್ಬನಾದರೂ ಇವನ ರೂಪಕ್ಕೆ ಎಲ್ಲ ಹೆಣ್ಣುಗಳೂ ಮಾರುಹೋಗಿದ್ದವು. ತನ್ನ ಮನೆಗೆ ಬೇಕಾದ ಸಾಮಾನು ಸರಂಜಾಮನ್ನು ಹುಡುಕುವ ಅವನ ಕಣ್ಣಿಗೆ ಮೂರು ನವ ಯುವತಿಯರ ಕಣ್ಣುಗಳು ಹಿಂಬಾಲಿಸುವುದನ್ನು ಕಂಡುಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಬೇಗ ಬೇಗ ..ಅವಸವಸರದಲ್ಲಿ ಸಾಮಾನನ್ನು ತೆಗೆದುಕೊಂಡು ಕಡೆದಾಗಿ ಬೇಕಾಗಿದ್ದ ವಸ್ತುವಿಗೆ ಸ್ವಲ್ಪ ಬಿಕೋ ಎನ್ನುವ ಜಾಗಕ್ಕೆ ಬಂದಿದ್ದ...ಸಂಜೆ ಗತ್ತಲು ..ಅವರಿಸಿದ್ದರಿಂದ..ಭಯ ಆವರಿಸಿತು. ಹಯವದನ ಹಿಂಬಾಲಿಸಿದ ಕಣ್ಣುಗಳು ಕತ್ತಲಲ್ಲಿ ಇನ್ನೂ ಹೆಚ್ಚಾಗಿ ಮಿನುಗುತ್ತಾ ಘೋರವೆನಿಸತೊಡಗಿತು.. ತನ್ನ ಬೇಕಾದ ಸಾಮಾನನ್ನು ಇನ್ನೇನು ತಗೆದುಕೊಳ್ಳಬೇಕು ಎನ್ನುವಾಗ ಮೂವರು ಯುವತಿಯರೂ ಸುತ್ತುಗಟ್ಟಿದರು..ಅವನ ಅಂಗಗಳ ಬಗ್ಗೆ ವಿವರಿಸುತ್ತಾ ಛೇಡಿಸತೊಡಗಿದರು.. ಒಬ್ಬಳು ಅವನ ಮೈಮೇಲೆ ಮೃದುವಾಗಿ ಕೈಯಾಡಿಸಿದಳು...ಇನ್ನೊಬ್ಬಳು ತನ್ನ ಬಾಹುಗಳಿಂದ ಗಟ್ಟಿಯಾಗಿ ತಬ್ಬಿಕೊಳ್ಳಲು ಮುಂದಾದಳು...ಕೊಸರಿಕೊಂಡ ಹಯವದನ..ತಪ್ಪಿಸಿಕೊಂಡು ಸತ್ತೆನೋ ಕೆಟ್ಟೆನೋ ಎಂದು.. ಓಡಲಾರಂಭಿಸಿದ...ಕತ್ತಲಾಗಿತ್ತು.. ಗಾಭರಿಯಲ್ಲಿ ದಾರಿ ತಪ್ಪಿದ..ಕುರುಚುಲು ಗಿಡ ಎತ್ತರ ಹುಲ್ಲಿನ ಬಯಲಿಗೆ ಬಂದಿದ್ದ...ದಾರಿತಪ್ಪಿದ ಗಂಡು ಈಗ ಸುಲಭವಾಗಿ ಸಿಗುವಂತಾದ... ಇಬ್ಬರು ಹೆಣ್ಣುಗಳು ಅವನಮೇಲೆ ಬಿದ್ದು ಕೆಡಹಿದರು..ಹಯವದನನ ಕೊಸರಾಡಿದರೂ ಆಗಲಿಲ್ಲ .. ವಿಲಕ್ಷಣ ಮತ್ತು ಬಿಡೆವೆಂಬ ಛಲ ಆ ಹೆಣ್ಣುಗಳಲ್ಲಿತ್ತು...ಹಯವದನನ ಶಕ್ತಿ ಕುಗ್ಗತೊಡಗಿತು....ಕತ್ತಲೂ ಹೆಚ್ಚಾಯಿತು...ಸೋಲತೊಡಗಿದ..ಹೆಣ್ಣುಗಳು ಗೆಲ್ಲತೊಡಗಿದವು......ಏನಾಗಬಾರದೆಂದು ಜಾಗರೂಕನಾಗಿದ್ದನೋ ಅದು ಅಂದು ಆಗೇ ಹೋಯಿತು..ಹಯವದನನ ಜೀವನದಲ್ಲಿ.....ಛೇ..ದೈವವೇ..ಗಂಡಿಗೇಕೆ ಇಂಥ ಶಿಕ್ಷೆ ಎಂದು..ಗೋಳಾಡಿದ. ಈಗ..ಪಾಪದ..ಫಲ ಬೆಳೆಯುತ್ತಿದೆ ಇವನ ಹೊಟ್ಟೆಯಲ್ಲಿ..ಅದಕ್ಕೆ ಕಾರಣರಾದ ಆ ಮೂರೂ ಹೆಣ್ಣುಗಳು...ರಾಜಾರೋಷವಾಗಿ ತಿರುಗುತ್ತಿವೆ..ಊರಲ್ಲೆಲ್ಲಾ... ತನ್ನ ಪ್ರಸವ ವೇದನೆಯನ್ನು ನೆನೆದು ಹಲುಬುತ್ತಿದ್ದಾನೆ ಹಯವದನ..... ಇಗೋ ಇಲ್ಲಿದೆ ನೀವೇ ನೋಡಿ ಅವನ ಗೋಳು ಎಂತಹುದೆಂದು....

ಸ್ನೇಹಿತರೇ..ಇದು ಹೆರುವ ಗಂಡು....ಸಮುದ್ರಕುದುರೆ...ಇದೊಂದು ಮೀನು......ಇದರ ಬಗ್ಗೆ ವಿವರ ನನ್ನ ಮೇ ಬ್ಲಾಗ್ ಪೋಸ್ಟ್ ನೋಡಿ.....ಹಹಹಹ...

Tuesday, December 8, 2009

ಫಾರ್ a ಚೇಂಜ್


ಆಗೊಮ್ಮೆ
ಈಗೊಮ್ಮೆ
ಬರ್ತಾನೆ
ಎಲ್ಲರೆದುರಿಗೆ
ಬಲವಾಗಿ ಒಂದು
ಕಿಸ್ ಕೊಡ್ತಾನೆ..
ಛೀ...

(ಕಿಸಿಂಗ್-ಗೌರಾಮಿ)

ಕಪ್ಪುಕರಿಯ
ಹೊನ್ನ ಬೆಡಗಿಯ
ಬೆನ್ನಟ್ತಾನೆ
ಮೀಟ್ ಮಾಡ್ತಾನೆ
ಮೇಟ್ ಮಾಡ್ತಾನೆ
ಛೀ.....
(ಬ್ಲಾಕ್-ಸಿಲ್ವರ್ ಮೋಲಿ)ಹುಡ್ಗೀಂತ ನೋಡೊಲ್ಲ
ಬೆನ್ನಹತ್ತಾನೆ
ಕಾಟಕೊಡ್ತಾನೆ
ಅಕ್ಕ-ಪಕ್ಕ ಕಚ್ತಾನೆ
ಮದುವೆನೂ ಮಾಡ್ಕೋತಾನೆ
ಛೀ....
(ಫೈಟರ್ ಫಿಶ್)
ಹುಡ್ಗಿ ಆದ್ರೂ ನಾಚಿಕೆ ಇಲ್ಲ
ಯಾವಾಗ್ಲೂ ಹುಡುಗ್ರ ಹಿಂದೇನೇ
ಒಬ್ಬನ್ನೂ ಬಿಡೊಲ್ಲಾ ಅಂತಾಳೆ
ಇವತ್ತು ಒಬ್ಬ
ನಾಳೆ ಇನ್ನೊಬ್ಬ
ಛೀ.....

(ಪ್ಲಾಟಿ ಮೀನು)

Friday, December 4, 2009

ಹೊಸ ಪ್ರಯೋಗ(Pic: Shivu images)

ಸ್ನೇಹಿತರೇ ಒಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದೇನೆ...ನಿಮ್ಮ ವಿಮರ್ಶೆಗೆ ಸ್ವಾಗತ

Probelms
ಜನನ ಮನನ
ಜಂಜಾಟ -traffic problem
ತನನ ಮದನ
ಗುಂಜಾಟ- Romance problems
ಹನನ ಸದನ
ಗುದ್ದಾಟ- Property problem
ಹವನ ಕದನ
ಜಿದ್ದಾಟ - Province problems

Feelings
ಕಲೆತು ಬೆರೆತು
ಕುಣಿದಾಟ - feel of playing
ಕಲಿತು ಅರಿತು
ಕಲಿವಾಟ - feel of learning
ಬಲಿತು ಜಾರಿತು
ಬೆಳೆವಾಟ - feel of growing
ಅರಿತು ಸಾರಿತು
ತಿಳಿಸುವಾಟ - feel of informing
ತೋರಿತು ಮಾರಿತು
ಮಾರಾಟದಾಟ -feel of selling


My views
ಅಕ್ಕ ಭಾವ
ಪಕ್ಕ ಪಕ್ಕ- my favourites
ನೀನು ನಾನು
ಹಳ್ಳಿ ಮುಕ್ಕ -my mistakes
ಜೇನು ಬೋನು
ಸಿಕ್ಕ ಠಕ್ಕ - my confusions
ಸರ ಬೇಸರ
ಅಲ್ಲೇ ಸಿಕ್ಕ - my foolishness
ಕುರ್ಚಿ ಮರ್ಜಿ
ಅಲ್ಲಿದೆ ರೊಕ್ಕ - my passions
ಗಣಿ ಧಣಿ
ಇಲ್ಲ ಮಣ್ಮುಕ್ಕ - my miss mess

Monday, November 30, 2009

ಏನ್ಮಾಡೋಕೆ ಹೋದೆ ...ಏನಾಯ್ತು...?


(ನನ್ನ ಫೋಟೋ ನೋಡ್ದೆ ಇರೋರಿಗೆ....ಮಧ್ಯೆ ಇರೋದೇ...ನಾನು..ಅಂದರೆ ಜಲನಯನ...)
ನನ್ನ ಬ್ಲಾಗಾಯಣದ ಮೂಲ ಕಾರಣ ಸುಗುಣ (ಮನಸು)...ನಮ್ಮ ಕನ್ನಡ ಕೂಟದ ಯಾವುದೋ ಒಂದು ಮೀಟಿಂಗ್ ನಲ್ಲಿ ತಾನು ಬ್ಲಾಗ್ ಮಾಡ್ತಿದ್ದೇನೆ..ನೋಡಿ ನಿಮ್ಮ ಅನಿಸಿಕೆ ತಿಳಿಸಿ ಸಾರ್..(ಗಮನಿಸಿ ಈ ಸಂಬೋಧನೆಯನ್ನ..!!!), ಅವರ ಪತಿ ಪರಮೇಶ್ವರ (ಮಹೇಶ್..ಉರ್ಫ್..ಸವಿಗನಸು..ಒಂದು ರೀತೀಲಿ ಅವರು ಬ್ಲಾಗ್ ಪ್ರಾರಂಭಿಸೋಕೆ ಅವರ ಅರ್ಧಾಂಗಿ ಇನ್ನೊಂದು ಕಡೆಯಿಂದ ನಾನು ಕಾರಣ...ಇಲ್ಲ ಅಂತ ಹೇಳ್ಲಿ..ಕೇಳಿ ನೀವೇ...ಹಾಂ ಮತ್ತೆ...) ಹೌದು ಸರ್ (ಇವರ ಸಂಬೋಧನೇನೂ...ಹೇಗೆ ಛೇಂಜ್ ಆಗುತ್ತೆ ನೀವೇ ನೋಡಿ...) ನೀವು ನೋಡಿ ನಿಮ್ಮ ಅನಿಸಿಕೆಯನ್ನ ತಿಳಿಸಿ ಅಂತ ದನಿಗೂಡಿಸೋದೇ?? ....
ಸರಿ ಒoದು ಶುಭ ದಿನ ಪ್ರಾರಂಭಿಸಿಯೇ ಬಿಟ್ಟೆ ನನ್ನ ಬ್ಲಾಗುಬಂಡಿ ಪಯಣ....ಮೊದ ಮೊದಲಿಗೆ ಮನಸು...ಪ್ರತಿಕ್ರಿಯೆ, ನಂತರ ಅವರಿಗೆ ತಿಳಿದ ಒಂದಿಬ್ಬರು ಬ್ಲಾಗು ಮಿತ್ರರು...ಹೀಗೆ..ನನ್ನ ಹಿಂಬಾಲಕರು, ..sorry...ಇಂಗ್ಲೀಷಿನಲ್ಲಿ ಹೇಳಿದ್ರೆ..ಸರಿ..blog followers...!! , ಈಗ ಸರಿಯಾಯ್ತು..
ನನ್ನ ಬ್ಲಾಗನ್ನು ಓದಿ ಪ್ರತಿಕ್ರಿಯೆ ನೀಡೊಕೆ ಶುರು ಹಚ್ಚಿದರು...ನೋಡ್ ನೋಡ್ತಾ ಇದ್ದಂತೆ ನನ್ನ followers ಲಿಸ್ಟ್ ದೊಡ್ದದಾಯ್ತು... ’ಮನಸು’ ನ overtake ಮಾದ್ಬಿಟ್ಟೆ...ನನ್ನ ಎದೆ ಉಬ್ಬಿ...Arnold ಥರ ಆಗೋಯ್ತು....ಇನ್ನೇನು..ನಾನು...ಕನ್ನಡ ಬ್ಲಾಗಿಗರ Numero Uno ಅಗ್ಬಿಟ್ಟೆ ಅಂತ ಊದಿಕೊಳ್ಳುವಾಗ ನನ್ನ ಉತ್ಸಾಹದ ಬಲೂನಿಗೆ ಸೂಜಿ...??.!! ಅಲ್ಲಲ್ಲ....ದಬ್ಬಣ....!!!ಚುಚ್ಚಿದ್ರು ನಮ್ಮ ಗಂಡು ಬ್ಲಾಗು ಮಿತ್ರರು (ಅವರ ಪ್ರತಿಕ್ರಿಯೆಗಳು ಈಗ ಬಹುಶಃ ತಪ್ಪೋದೇ ಇಲ್ಲ)...
ನನ್ನ ಒಂದು ಬ್ಲಾಗ್ ಪೋಸ್ಟಿಗೆ..ಅವರ ಪ್ರತಿಕ್ರಿಯೆ...."ಜಲನಯನ ಮೇಡಂ...ನೀವು ತುಂಬಾ..ತುಂಬಾ..ಚನ್ನಾಗಿ ಬರೀತೀರಿ...ನಿಮ್ಮ ಟಾಪಿಕ್ ಬಹಳ ಸಮಯೋಚಿತ ವಾಗಿರುತ್ತೆ...ನಿಮ್ಮ ಬಗ್ಗೆ ತಿಳಿಸಿ...ನಾನು ನಿಮ್ಮೊಂದಿಗೆ ಚರ್ಚಿಸಬೇಕೆಂದಿದ್ದೇನೆ...ನನ್ನ...ಮೈಲ್ ಐಡಿ.........@.......com." ಅಂತ ಬರೆಯೋದೇ...?? ಇದ್ಯಾಕೋ ಎದವಟ್ಟಾಗ್ತಾ ಇದೆ...ನನ್ನ ಅಪ್ಪ-ಅಮ್ಮ ನಿಗೆ ಮೊದಲ ಮಗು ಹೆಣ್ಣು ಆಗ್ಬೇಕು ಅನ್ನೋ ಉತ್ಕಟ ಅಭಿಲಾಷೆ ಇದ್ದದ್ದು ನಿಜ...ಆದ್ರೆ ಬೆಳೆದು ಮದುವೆ ಆಗಿ ಮೊಮ್ಮಗಳನ್ನು ಕೊಟ್ಟಿರೋ ಮಗ ಹೀಗೇ ರಾತ್ರೋ ರಾತ್ರಿ ಲಿಂಗ ಪರಿವರ್ತನೆಯಾದ ಅಂದ್ರೆ...?? ಅದೂ ಕುವೈತ್ ನಲ್ಲಿದ್ದುಕೊಂಡು ದೀನಾರ ದವಲತ್ತು ಮಾಡೋನಿಗೆ..!!! ??? ಛೆ..ಛೆ...ಸರಿಯಿಲ್ಲ,,, ಎನಿಸಿ ತಲೆ ಕೊಡವಿಕೊಂಡೆ...
ನಾನು ಬರೆದೆ... “ಧನ್ಯವಾದ ನನ್ನ ಬ್ಲಾಗ್ ಗೆ ಪ್ರತಿಕ್ರಿಯೆ ನೀಡಿದಿರಿ..ಆದ್ರೆ..ನಿಮಗೆ ನನ್ನ ಬಗ್ಗೆ confusion ..!!! ಇರೋ ಹಾಗಿದೆ....ದಯವಿಟ್ಟು ನನ್ನ ಪ್ರೊಫೈಲ್ ಒಮ್ಮೆ ನೋಡಿ..ನಿಮ್ಮ confusion ನ್ನೂ..ದೂರ ಆಗುತ್ತೆ...ಮತ್ತು ನಿಮಗೆ ನನ್ನ ಈ ಮೈಲ್ ಗೆ ಲಿಂಕೂ ಸಿಗುತ್ತೆ..." ಅಂತ ಬೆವರು ಒರೆಸಿಕೊಳ್ಳುತ್ತಾ ...ಟೈಪಿಸಿದೆ...
ನಂತರ..ಸ್ವಲ್ಪ ಥಂಡ--ಥಂಡ,,ಕೂಲ್..ಕೂಲ್,,,ಅಂತ ಒಂದು ಪೆಪ್ಸಿ ಕ್ಯಾನ್ ಕೊಡಮ್ಮ ಅಂತ ಮಗಳಿಗೆ ಹೇಳಿ cool ಕುಡಿದು..ಯೋಚಿಸ್ದಾಗ...ಎಡವಟ್ಟು ಎಲ್ಲಿ ಆಗಿದೆ ಅಂತ ಅರ್ಥ ಆಯ್ತು...
ನನ್ನ ಬ್ಲಾಗ್ ಹೆಸರು..."ಜಲನಯನ" .....ಆದ್ರೂ ನಾನು ಪ್ರತಿಕ್ರಿಯೆ ಕೊಡುವಾಗಲೆಲ್ಲಾ ಎಲ್ಲೂ ಪ್ರತಿಕ್ರಿಯಿಸುತ್ತಿರುವುದು ಹೆಣ್ಣು ಅನ್ನೋ..ಕ್ಲೂ ಕೊಡೋ ತರಹ ಬರ್ದಿಲ್ಲವಲ್ಲಾ...??!! ..ಛೇ..ಹೋಗ್ಲಿ..ಬಿಡು...ಈಗ confusion ದೂರ ಆಯ್ತಲ್ಲ..ಅಂತ ನಿಟ್ಟುಸಿರು ಬಿಟ್ಟೆ...
…ಹಾಂ...ಹಿಂದೇನೇ..ಆತಂಕ ಶುರು ಆಯ್ತು..ನಾನು ಅಂದರೆ ಜಲನಯನ ಹೆಣ್ಣು ಅಂತ..ಎಲ್ಲಾ ಗಂಡು ಬ್ಲಾಗಿಗಳು ಪ್ರತಿಕ್ರಿಯೆ ನೀಡ್ತಾ ಇದ್ರ...ಮತ್ತೆ ಪರ್ವಾಯಿಲ್ಲ ಇದು ಹೆಣ್ಣು ಬ್ಲಾಗಿ ...ಅಂತ ಹೆಣ್ಣು ಬ್ಲಾಗಿಗಳು...ಓ..my God..!!! ಅನ್ನಿಸಿ ಕ್ಷಣ ವಿಚಲಿತನಾದೆ...ನಂತರ...ಛೇ...ನನ್ನ profile ನಲ್ಲಿ ಕ್ಲಿಯರ್ ಆಗಿ ಬರೆದಿದ್ದೇನಲ್ಲಾ..??!! ಯಾರೇ ಆದ್ರೂ ಪ್ರೊಫೈಲ್ ನೋಡಿ ಪ್ರತಿಕ್ರಿಯಿಸೋದು...ಹೀಗೆ ಇರಲಿಕ್ಕಿಲ್ಲ...ಅಂತ ಸಮಾಧಾನ ಮಾಡಿಕೊಂಡೆ...
ಈ ನೆನಪು ಹಸಿಯಾಗಿರುವಾಗಲೇ ಬಂತು..ತೇಜಸ್ವಿನಿಯವರ shocking ಬ್ಲಾಗ್ ಪೋಸ್ಟ್...ಅವರನ್ನ ಯಾರೋ ಒಬ್ಬ (ತನ್ನ ನಿಜ ಪರಿಚಯವನ್ನು ಗುಪ್ತವಾಗಿಟ್ಟು) ಹುಡುಗಿಯ ಹೆಸರಿಟ್ಟ ಬ್ಲಾಗಿನ ಮೂಲಕ ..ಕೀಟಲೆಗೆ ಪ್ರಯತ್ನಿಸಿದ್ದು..ಅವನ ಬಣ್ಣ ಬಯಲಾಗಿದ್ದು ...ಇತ್ಯಾದಿ...
ಆಗಲೇ... ನಾನು.. ಬ್ಲಾಗ್ ಎಡವಟ್ಟು ಬಗ್ಗೆ ಕವನ ಬರೆದದ್ದು...
ಇಷ್ಟೇ ಆದ್ರೆ ತಾಪತ್ರಯ ನನ್ನದು ಪರವಾಗಿಲ್ಲ...ಮಹೇಶ್..ನನ್ನ ಮಿತ್ರ...ಆಗ..., ಈಗ...ತಮ್ಮ (ನನ್ನನ್ನ ಆಝಾದಣ್ಣ ಅಂತಾನೆ...)..ಮಹೇಶನ ಅರ್ಧಾಂಗಿ...ಮನಸು...ಸಹಾ ..ಆಜಾದಣ್ಣ ಅನ್ನೋದೇ...??!! ಈಗ..ಹೇಳೇಬಿಡ್ತೀನಿ.. ಅವರಿಗೆ, “ನೋಡಿ ಯಾರಾದ್ರೂ ಒಬ್ರು...ಅಣ್ಣ ಅನ್ನಿ...ಇಬ್ರೂ ಅಂದ್ರೆ ಸಂದಾಕಿರಕಿಲ್ಲಾ...ಅಂತ....” ಹಹಹಹ..
ನಮ್ಮ ಜಯಲಕ್ಷ್ಮಿಯವರು ಏನು ಕಮ್ಮೀನಾ...?? ಅವರ ಮುಕ್ತ ಮುಕ್ತದ ಮಂಗಳತ್ತೆ ಪಾತ್ರ ನೋಡಿ...ಅವರು ಹಾಕಿದ ಕಾಮೆಂಟಿಗೆ ನಾನು ಪ್ರತಿಕ್ರಿಯಿಸುತ್ತಾ...."ಜಯಕ್ಕಾ ನೀವು ತುಂಬಾ ಚನ್ನಾಗಿ ಅಭಿನಯಿಸಿದ್ದೀರಿ..ಕೆಟ್ಟ ಅತ್ತೆ ಪಾತ್ರ..ಬೇರೇದು ಸಿಗಲಿಲ್ಲವೇ..?"...ಅದಕ್ಕೆ ಅವರು...
ಆಜಾದ್..ನೀವು ವಯಸ್ಸಲ್ಲಿ ನನ್ಗಿಂತ ಹಿರಿಯರು (ಇವರು ಎಲ್ಲರಿಗಿಂತ ಬುದ್ಧಿವಂತರು..ನನ್ನ ಕರ್ಮಕ್ಕೆ..!!! ನನ್ನ ಪ್ರೊಫೈಲ್ ನಲ್ಲಿ age ಗಮನಿಸಿದ್ದಾರೆ..!!!) ನನ್ನನ್ನ ಅಕ್ಕ ಅಂತ ಕರೆಯೋದೇ...??(ಯಾವ್ ಹೆಣ್ಣು ಮಗಳಿಗೆ ತಾನೇ ತಾನು ಅಜ್ಜಿಯಾಗಿದ್ದರೂ ..aunty ಅನ್ನಿಸಿಕೊಳ್ಳೊದಕ್ಕಿಂತಾ sister ಅನ್ನಿಸಿಕೊಳ್ಳೊದು ಇಷ್ಟ ಇರೊಲ್ಲ, ಜಯಲಕ್ಷ್ಮಿಯವರು ತಪ್ಪು ತಿಳಿಬಾರ್ದು..ಓಕೆ..). ಸದ್ಯಕ್ಕೆ ಅವರು ನನ್ನನ್ನ "ಅಣ್ಣ" ಅಂದಿಲ್ಲ ಈ ವರೆಗೂ...(ಆರ್ಕುಟ್..ಅಥವಾ ನನ್ನ ಬ್ಲಾಗ್ ನ title bar ಮೇಲಿರೋ 47,48,49,50 ನೋಡ್ದೇ ಇದ್ರೆ ಸಾಕು..).
ಈಗ ಗಾಯಕ್ಕೆ ಇನ್ನೊಂದು ಬರೆ ಅನ್ನೋಹಾಗೆ..ಸೀತಾರಾಂ ಸೇರ್ಕೊಂಡ್ರು...ನನ್ನ ಇತ್ತೀಚಿನ ಪೋಸ್ಟ್ಗೆ ಪರಿತಿಕ್ರಿಯೆ ಹಾಕ್ತಾ..ಕೊನೆಗೆ ಬಾಂಬ್ ಸಿಡಿಸಿಯೇ ಬಿಟ್ರು..."ಚಮಕಾಯಿಸಿಬಿಟ್ರಿ..ಆಜಾದಣ್ಣ...!!!!"
ಅಲ್ಲ...ನಾಲ್ಕು ಜನ ನಾವು..ನಾನು ಜೇಷ್ಟ..ನಮ್ಮ ಪಕ್ಕದ ಮನೆ ..ಶಾರದಕ್ಕ ನ ಮಗಳನ್ನ (ನನ್ನ ಮೂರನೇ ತಮ್ಮನ ವಯಸ್ಸು) ನಾನು ಎತ್ತಿ ಕೊಂಡು ಮುದ್ದು ಮಾಡೋದನ್ನ ನೋಡಿ..ಶಾರದಕ್ಕ ನಮ್ಮಪ್ಪನಿಗೆ.."ಅಜಾದನಿಗೆ ಹೆಣ್ಣುಮಕ್ಳು ಅಮ್ದ್ರೆ ಪ್ರಾಣ ..ಕಾಸೀಮಣ್ಣ...ಅವನಿಗೆ ಒಬ್ಬಳು ತಂಗಿ ಬಂದ್ರೆ ಚನ್ನ" ಅಂತ ನಮ್ಮಪ್ಪನ್ನ ಗೋಳುಹುಯ್ಕೊಳ್ತಿದ್ದಳು ಅಂತ ನಮ್ಮಮ್ಮ ನನ್ನ ತಂಗಿ ಹುಟ್ಟಿದಾಗ ಹೇಳಿದ್ದು ನೆನಪು...ಹಂಗಂತ,,,ಈಗ ಸಾಲು..ಸಾಲು ತಂಗೀಯರನ್ನ ಕೊಟ್ಟುಬಿಡ್ತು ನನ್ನ ಬ್ಲಾಗ್...ಜಲನಯನ...
ಹೋಗ್ಲೀ ಅಂದ್ರೆ...ಈ ಪಾಟಿ ತಮ್ಮಂದಿರೇ...???
ಈಗ ನಾನು ಬ್ಲಾಗ್ ಲೋಕಾನ ಜಾಲಾಡ್ಸಿತಿದೀನಿ...ನನಗಿಂತ ವಯಸ್ಸಿನಲ್ಲಿ ಹಿರಿಯರು ಸಿಗ್ತಾರಾಂತ..ಅಮಿತಾಭ್ ಸಿಕ್ಕರು....ಆದ್ರೆ..ನನ್ನ ವಯಸ್ಸಿಗೂ ಅತಿ ಕಡಿಮೆ ವಯಸ್ಸಿನ ಹೀರೋಯಿನ್ ಜೊತೆ ಹೀರೋ ಆಗಿ ನಟಿಸಿದ್ದು ನೋಡಿ..ಅವರೂ ನನ್ನ "ಅಣ್ಣ"..ಅಂದ್ಬಿಟ್ರೆ…..???!!! ಅಂತ ಹೆದರಿ ಅವರಿಗೆ ಮೈಲ್ ಕಳಿಸ್ಲಿಲ್ಲ...ಈಗ ಧೈರ್ಯವಾಗಿ ಸಂಪರ್ಕ ಮಾಡ್ಬೇಕು ಅಂತ ಇರೋದು..ನಮ್ಮ ಹೋಂ ಮಿನಿಸ್ಟರ್..ವಿ.ಎಸ್.ಆಚಾರ್ಯ, ನಮ್ಮ ಫ್ರೆಸಿಡೆಂಟ್...ಪ್ರತಿಭಾ ಪಾಟೀಲ್, ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್......
ನೀವೆಲ್ಲಾ...ನಿಮ್ಮಣ್ಣನಿಗೆ,,,,,ಶುಭಕೋರಿ...ಇವ್ರಾದ್ರೂ ನನ್ನ ತಮ್ಮ ಅಂತ ಒಪ್ಪಿಕೊಳ್ಳಲಿ....
(ಇದೊಂದು ಕೇವಲ ಮನರಂಜನೆಯ ಪ್ರಹಸನ ಎಂದುಕೊಳ್ಳಿ...ಯಾರದಾದರೂ ಭಾವನೆಗಳಿಗೆ ನೋವಾಗಿದ್ದರೆ.....ಕ್ಷಮೆಯಿರಲಿ)

Saturday, November 28, 2009

ಅಂದ ಚೆಂದದ ವಯಸ್ಸಿನ ಹುಡುಗೀರನ್ನ ಹಿಡೀತಿದ್ದ ಅವನು...!!!

“ಲೇ...ಈ ಕಡೆ ಬಾರೆ...ಆ ಗಡವ ಏನು ತಿನ್ನೋತರಹ ನೋಡ್ತಿದ್ದಾನೆ...??!! ಅಲ್ಲ ನಿಮ್ಮ ಸ್ಕೂಲ್ ನಲ್ಲಿ ಇಷ್ಟೊಂದು ಹುಡುಗೀರು ಇದ್ದೀರಲ್ಲಾ...?? ನೀವು ಎಲ್ಲಾದ್ರೂ ಹೋದ್ರೂ ಗುಂಪು ಗುಂಪಾಗೇ ಹೋಗ್ತೀರಾ....? ಅದೇ ಒಳ್ಳೆದು ಕಣೆ...ಮೊನ್ನೆ ಮೂರ್ನಾಲ್ಕು ದಿನದಿಂದ ಒಬ್ಬ ತನ್ನ ಕಾರಿನಲ್ಲಿ ಆ ಕಡಿಯಿಂದ ಈ ಕಡೆ..ಈ ಕಡೆಯಿಂದ ಆ ಕಡೆ ಸುಮಾರು ಐದಾರು ಸರ್ತಿ ಓಡಾಡ್ತಿದ್ದ...ಮಧ್ಯೆ ಮಧ್ಯೆ ಅದೇನೋ ಟಾರ್ಚ್ ತರಹ ಇದ್ದದ್ದನ್ನು ನಮ್ಮ ಕಡೆ ಹಾಕ್ತಿದ್ದ...ನಾವೆಲ್ಲ ತಪ್ಪಿಸ್ಕೊಂಡು ಅವನ ಕಣ್ಣಿಗೆ ಭೀಳ್ದ ಹಾಗೆ ಇದ್ವಿ....”
“ಹೌದೇ..ನಮಗೂ ಹಾಗೇ ಅನ್ನ್ಸಿತು..ನಿಮ್ ಸ್ಕೂಲ್ ಕಡೆ ಜಾಸ್ತಿ ಇದ್ದದ್ದು ಅವನು...ನಮ್ಮದು ಹೈಸ್ಕೂಲು ನಿಮ್ಮದು ಹೈಸ್ಕೂಲು-ಕಾಲೇಜು...ವಯಸ್ಸಿಗೆ ಬಂದ ಅಂದ ಚಂದ ಇರೋ ನಿಮ್ಮನ್ನೇ ಹಿಡೀಬೇಕು ಅಂತ ಇರ್ಬೇಕು...
ಅಷ್ಟೇ ಅಲ್ಲ ಕಣೆ...ಅವನ ತರದ ಕಾರೇ ಇನ್ನೊಂದೂ ಇತ್ತು..ಅದರಲ್ಲಿ ಇಬ್ಬ್ರು ಮೂವರು ಇದ್ದರು...ನಮಗೆಲ್ಲಾ ಬಹಳ ಗಾಬರಿಯಾಗಿತ್ತು...ಕಣ್ರೇ...ಇವರು ಹೊಂಚಾಕಿ ವಯಸ್ಸಿನವರನ್ನೇ ಹಿಡೀಯೋದು...ಒಂದು ವಾರಕ್ಕೆ ಹಿಂದೆ..ಪಕ್ಕದ ಹೈಸ್ಕೂಲಿನಿಂದ ಒಬ್ಬ ಮದುವೆ ವಯಸ್ಸಿನವಳನ್ನ ಇಂತಹವನೇ ಯಾರೋ ಹಿಡ್ಕಂಡ್ ಹೋದನಂತೆ...ಎಲ್ಲ ಗಾಬರಿಯಾಗವ್ರೆ ಆ ಸ್ಕೂಲಿನಲ್ಲಿ..”
“ಚೆನ್-ಚೆನ್ನಗಿ ಇರೋರೇ ಬೇಕು ಅಂತ ಯಾರೋ ಫಾರಿನ್ ನವ್ರು ಬಂದವ್ರಂತೆ..ಪಕ್ಕದ ಮೊಹಲ್ಲಾದ ಕಪ್ಪು ಬುರ್ಕಾ ಹಾಕಿರೋ ವಯಸ್ಸಿಗೆ ಬಂದ ಇಪ್ಪ್-ಇಪ್ಪತ್ತೈದು ಹಿಡ್ಕೊಂಡೋಗಿ ಮಾರ್ಕಂಡ್ರಂತೆ ಈ ಮೋಟಾರ್ ನಲ್ಲಿ ಬರೋರು...ನಮ್ಮನ್ನ ನಾವೇ ನೋಡ್ಕೋ ಬೇಕು ...ಹುಷಾರಾಗಿರಬೇಕು.......”

ಇದು.. ಅಕ್ವೇರಿಯಂ ಮೀನನ್ನು ಬೆಳೆಯುತ್ತಿದ್ದ ದೊಡ್ಡದೊಂದುಕೊಳದಲ್ಲಿನ ಬಣ್ಣ ಬಣ್ಣದ ಮೀನುಗಳು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದಾಗ ಕದ್ದು ಅವರ ಮಾತುಗಳನ್ನು ಅಲೈಸಿ ನಿಮಗೆ ತಿಳಿಸ್ತಾ ಇದ್ದೀನಿ...ಮೋಟಾರ್ ನಲ್ಲಿ ಬರೋದು ಅಂದ್ರೆ...ಮೋಟಾರ್ ಬೋಟಿನಲ್ಲಿ ಬರುತ್ತಿದ್ದ ಮೀನುಗಾರ-ಕೆಲಸದಾಳು....!!! ಹೈಸ್ಕೂಲು-ಕಾಲೇಜು ಹುಡ್ಗೀರು ಅಂದ್ರೆ...ಕೋಯಿ ಕಾರ್ಪ್ ಮೀನು (ಇವು ಸ್ವಲ್ಪ ದೊಡ್ಡಗಾತ್ರದಲ್ಲಿದ್ದರೇ ಚೆನ್ನ...ಅಂಕಾರಕ್ಕೆ). ಕಪ್ಪು ಬುರಖಾದಲ್ಲಿದ್ದವು....ಬ್ಲಾಕ್ ಮೋಲಿ ಮೀನು....
ಸ್ಕೂಲು ಅನ್ನೋದು ಗುಂಪು-ಗುಂಪಾಗಿ ಇರೋ ಮೀನಿನ ಗುಂಪನ್ನ........ಇವಕ್ಕೆ ಅಂದ ಹೆಚ್ಚು ಮತ್ತು ಬೆಲೆಯೂ ಸಿಗುತ್ತೆ.......ನಿಮ್ಮ ಅನ್ನಿಸಿಕೆ.....??? !!!!!

Friday, November 27, 2009

ನಿಸರ್ಗದ ಮೂರು ಶಕ್ತಿಗಳು

ಕಿರಣ
ಚುಮು ಚುಮು ಛಳಿಯಲಿ
ತೂರಿ ಬಂದ ಹೊಂಗಿರಣಕೆ
ಮೈಯೊಡ್ಡು ತವಕದಮನ
ನೆತ್ತಿ ಏರಿ ಸುಡು ಸುಡುವಲಿ
ಹರಡುವ ಕೊಡೆಯಡಿಯಲಿ
ಮೈಮನ ಚೆಲ್ಲುವ ಬಯಕೆ
ಮನಮಾತ್ರವಲ್ಲದೇ
ತನುವಿಗೂ ಧಗಿಸುವ ಬೇಗೆ
ಸಂಜೆ ಇದ್ದರೂ ಇಲ್ಲದೆ
ಕದ್ದೋಡಿದಂತೆ ಸೂರ್ಯ
ದಿನವಿಡೀ ಕಾದು ಕೆಂಪಾಗಿ
ಮುಳುಗುವ ಸೊಂಪಾಗಿ.....
ಒಂದು ಬೇಕೆನ್ನುವ ಹಿತಕಿರಣ
ಇನ್ನೊಂದು ಹೋಗೆನ್ನುವ ಚರಣ


ಅಲೆ
ಆಟದ ಅಲೆ
ಬೀಳುವ ಅಲೆ
ಮಲಗಿರುವುದಲೆ
ಒಮ್ಮೆಲೇ ಎದ್ದುದಲೆ
ಭೋರ್ಗಯುತ್ತಲೇ
ಪರ್ವತವಾಯಿತಲೆ
ತೋಯಿಸಿತಲೆ
ಕೊಚ್ಚಿಕೊಂಡೊಯ್ಯಿತಲೆ
ಸುನಾಮಿ, ಕತ್ರಿನಾ,
ಚಂಡಮಾರುತ, ಫಯಾನ
ಅದೇ ಅಲೆ.....
ಎಷ್ಟು ವಿಭಿನ್ನ? ವ್ಯತ್ಯಾಸ


ಬೆಳಕು
ಮಿಂಚುಹುಳು-ಚೆಲ್ಲಿಬೆಳಕು
ದೀಪ, ಕತ್ತಲ ಕಳೆವ ಮಂದ ಬೆಳಕು
ಒಂದು ಆಂತರಿಕೆ ನೆಲೆಯ ಸೆಲೆ
ಇನ್ನೊಂದು ಆಗಬಹುದು ಜ್ವಾಲೆ

ಬೆಳಕು ದಾರಿಕಾಣಲು, ದಿಕ್ಕುತೋರಲು
ಬೆಳಕು ನೋಡಲು ನೋಡಿ ನಲಿಯಲು
ಬೆಳಕು ಆಗಬಾರದು ಜ್ವಾಲೆ ಸುಡಲು
ಬಡವನ ಒಲೆ ಉರಿಯಲು ಅಲ್ಲ ಉರಿಸಲು

Saturday, November 21, 2009

ನಂಗೊತ್ತಿಲ್ಲ ಮಗು


ಅಪ್ಪಾ..
ಏನು ಮಗು?
ನಮ್ಮ ನಾಡು ನಮಗೆ ಮುಖ್ಯ ಅಲ್ಲ್ವಪ್ಪಾ?
ಹೌದು ಕನ್ನಡ ನಾಡು -ಗಂಧದ ಬೀಡು ಅನ್ನೋಲ್ಲ್ವೇ?
ಮತ್ತೆ ದೇಶಭಕ್ತಿ ತೋರ್ಸಿದ್ರೆ ತಪ್ಪಾಗುತ್ತ?
ನಾಡು ಕನ್ನಡಿಗರದು-ದೇಶ ಎಲ್ಲರದ್ದು ತಪ್ಪೆಲ್ಲಿ??
ಮತ್ತೆ ಸಚಿನ್ ಮಾಡಿದ್ದು ತಪ್ಪಂತೆ,
ನಂಗೊತ್ತಿಲ್ಲ ಮಗು

ಅಪ್ಪಾ
ಹೇಳಪ್ಪ..ಏನು?
ಮದ್ಯ ಸರಾಯಿ ಕೆಟ್ಟದಲ್ಲವಾ?
ಹೌದು..ಅದೊಂದು ದುಶ್ಚಟ
ಮನೆ-ಮಠ ಅಷ್ಟೇ ಯಾಕೆ
ಪ್ರಾಣಾನೇ ಹೋದೀತು ಬಿದ್ರೆ ಚಟಕ್ಕೆ
ಮತ್ತೆ ಈಗ ಸರ್ಕಾದವರೇ ಮದ್ಯ
ಮಾರೋ ಸಾವಿರಾರು ಅಂಗಡಿ ತೆರೀತಿದಾರೆ
ಅದು ಅಬ್ಕಾರಿ ಇಲಾಖೆ ಯೋಜನೆ
ಮತ್ತೆ..ಮಕ್ಕಳ ಸ್ಕೂಲುಗಳೇ ಇಲ್ಲ
ಕೆಲವು ಕಡೆ ಅಂತಾರಲ್ಲಾ ಇದು
ಶಿಕ್ಷಣ ಇಲಾಕೆಯ ಯೋಜನೇಲಿಲ್ವಾ?
ನಂಗೊತ್ತಿಲ್ಲ ಮಗು

ಅಪ್ಪಾ,
ಇನ್ನೂ ಎನೋ ನಿನ್ನ ತರಲೆ
ಕೊಲೆ ಸುಲಿಗೆ ಮಾಡೋರನ್ನ ನಮ್ಮ ಪೋಲೀಸ್ರು
ಬಹಳ ಚಾಕ ಚಕ್ಯತೆಯಿಂದ ಹಿಡೀತಿದ್ದಾರೆ
ಹೌದು ಮಗು ನಮ್ಮವರು ದಕ್ಷರು
ಮತ್ತೆ ಮಂಗಳೂರಿನಲ್ಲೊಬ್ಬ ಕೇಡಿ
೨೦-೩೦ ಮದ್ವೆ ಆಗಿ, ಅವ್ರನ್ನ ಕೊಲೆನೂ ಮಾಡ್ದ
ಹೌದು ಮಗ..ಐದಾರು ವರ್ಷದಿಂದ
ನಡೆಸ್ದ ತನ್ನ ಧಂಧೆ ಅಂತ ಟೀವೀ ವಾರ್ತೆ ಬಂದಿತ್ತಲ್ಲ
ಮತ್ತೆ ಅಷ್ಟರವರೆಗೂ ದಕ್ಷತೆ ಮೇಯೋಕೆ ಹೋಗಿತ್ತಾ?
ನಂಗೊತ್ತಿಲ್ಲ ಮಗು

Saturday, November 14, 2009

ಬ್ಲಾಗು- ಹೀಗೂ ಒಂದು ಎಡವಟ್ಟುಸುಮ್ನಿದ್ದವ್ನಿಗೆ ಬ್ಲಾಗ್ರೋಗ ಹತ್ಬಿಡ್ತು
ದಿನಾ ಒಂದಷ್ಟು ಓದ್ತಿದ್ದೆ ಈಗದು ಎಕ್ಕುಡ್ತು
ಹುಡ್ಗೀ ಹೆಸರ್ನಾಗೆ ಬ್ಲಾಗ್ಮಾಡೋಕೆ ಸುರುಹಚ್ದೆ
ಹುಡ್ಗೀರ್ಸ್ನೇಹ ಆಗ್ತಾದಂದ್ರೆ ಹುಡುಗರ್ದೇ ಧಂದೆ

ಒಬ್ಬ ಬರ್ದ ನಿಮ್ ಬರಹ ಮೆಚ್ದೆ ಮೈಲ್ ಐಡಿ ಕೊಡಿ
ನಿಮ್ಜೊತೆ ಮಾತ್ನಾಡೋದೈತೆ ಒಂದ್ಡೇಟು ಕೊಡಿ
ಅವ್ನಿಗ್ ಹೆಂಗೇಳ್ಳಿ ನಿನ್ನಂಗೇ ನಾನೂ ಉಡುಗ್ನೇಯ
ಕಾಮೆಂಟ್ಮಾಡೋರ್ ಕಮ್ಮಿ ಅಗ್ತಾರ್ ಅಂಗೇಯ

ಒಬ್ಳು ಬರದ್ಳು ನನ್ ಕಷ್ಟ ನಿಂತಾವ ಹೇಳ್ಬೇಕು ಅಂತಿವ್ನಿ
ಬ್ಲಾಗ್ ಮಡೋ ಒಬ್ಬ್ ಮುದ್ಕಂಗೆ ಹೆದ್ರ್ ಕೊಂಡು ಕುಂತಿವ್ನಿ
ನನ್ ಕಷ್ಟ ಅವ್ಳಿಗೇನು ಗೊತ್ತು ಆದ್ರೂ ..ಯೋಳ್ದೆ ಕಳ್ಸು ವಿವ್ರಾನ
ಅವ್ಳು ನಾನ್ ಕೊಟ್ ಮೈಲ್ ಐಡಿಗೆ ಕಳ್ಸ್ ಬಿಟ್ಳು
ವೆಬ್ನಾಗೆ ಮುಳ್ಗಿ ಹುಡ್ಗೀ ಒಬ್ಳಿಗೆ ನನ್ ಫ್ರೆಂಡು ಬರೆದಿದ್ದ ಪತ್ರಾನ

ಮುದ್ಕಪ್ಪ ಒಬ್ಬ ಬರ್ದ, ನಿಮ್ ಬರಹ ನೋಡಿದ್ರಿ
ಭಾಳ ಅನುಭೋವಸ್ತ್ರು ನೀವ್ ಅನ್ನೋದು ಕಾಣ್ತದ್ರಿ
ನಂಗೂ ಹೇಂತೀಹೋಗಿ ಹತ್ತ್ ವರ್ಷ ಆಗೈತ್ರೀ
ಜೊತ್ ಜೊತ್ಯಾಗೇ ಇನ್ಮುಂದಿ ಬ್ಲಾಗ್ಮಾಡೋಣು ಏನಂತೀರಿ?

ಯಪ್ಪೋ ನನ್ಗೋ ಸುಸ್ತಾಯ್ತು ಈ ಪಾಟಿ ಎಡ್ಬಿಡಂಗಿ ಆಗಿ
ಅದ್ಕೆ ಮುಂದಿನ ಪೋಸ್ಟ್ನಾಗೆ ಬರ್ದೆ ನಾನ್ ಗಂಡು ಬ್ಲಾಗಿ
ಬರ್ತಿದ್ವು ಪ್ರತಿಪೋಸ್ಟ್ಗೂ ೫೦-೬೦ ಕಾಮೆಂಟ್ಸು ಆವಾಗ
ನಾಲ್ಕೈದು ವಾರ ಆಯ್ತು ಒಟ್ಟು ಐದೋ-ಆರೋ ಈವಾಗ


ಮುಚ್ಚಿಟ್ಟೆ ಮೊಸರು, ಬೆಣ್ಣೆ ತುಪ್ಪ ಅನ್ನೋರ್ಗೆನೂ ಕಮ್ಮಿಇಲ್ಲ
ತೆರೆದಿಟ್ಟೆ ಒಮ್ಮೆ ಮಜ್ಜಿಗೆ ಹುಳಿ ಹತ್ರ ಸುಳಿಯೋರೇ ಕಾಣ್ತಿಲ್ಲ
ಈವತ್ನ ಜೀವ್ನಾನೆ ಹೀಂಗೆ, ಇದ್ದದ್ದು ಇದ್ದಾಂಗೆ ಯೋಳೋಂಗಿಲ್ಲ
ಕದ್ದೋ ಮುಚ್ಚೊ ಹೊಲಸಾದ್ರೂ ಅಮೃತ ಅಂತಾರೆ ಎಲ್ಲ

Saturday, November 7, 2009

ನಿಜವಾಗ್ಲೂ ನಂಗೊತ್ತಿಲ್ಲ ಮಗು

ಅಪ್ಪಾ...ಅಪ್ಪಾ...
ಅಪ್ಪಾ.....sss
ನಿನ್ ಮಗ ಕೂಗ್ತಾನೇ ಇದ್ದೀನಿ
ಕೇಳಿಸ್ತಾ ಇಲ್ಲ್ವೇ ಅಪ್ಪಾ..??...
ಪ್ರವಾಹದಲ್ಲಿ ಮನೆಮಠ ಕಳ್ಕೊಂಡೋವ್ರು
ಸಹಾಯಕ್ಕೆ ಕೂಗಿದ್ರೂ..
ಗರ ಬಡ್ದಿರೋ ಸರ್ಕಾರದ್ ಥರಾ....
ಎದ್ದೇಳಪ್ಪಾ...ನನಗೆ ಉತ್ತರಾ ಕೊಡು..

ಹಾ..ಆಂ....ಏನ್ಮಗಾ.....
ಅಲ್ಲಪ್ಪಾ..ಅಮ್ಮನಜೊತೆ ರಾತ್ರಿ
ಜಗಳಮಾಡ್ಕಂಡು ನಾನ್ ಕರೆದ್ರೂ ಕೇಳ್ತಿಲ್ಲವಾ?
ಇಲ್ಲ ಕಣೋ..ಏನೋ ಯೋಚಿಸ್ತಿದ್ದೆ..
ಹೇಳು ಏನು ನಿನ್ನ ಗೋಳು..??
ಹೆಣ್ಣು ದೋಷ ಬಡಿದಿದೆಯಂತೆ
ಮಂತ್ರಿ ಮಂಡಳಕ್ಕೆ ಮತ್ತೆ ಸರ್ಕಾರಕ್ಕೆ ಹೌದಾಪ್ಪಾ..?
ನಂಗೊತ್ತಿಲ್ಲ ಮಗ..
ಅಲ್ಲಪ್ಪಾ ..ನೆರೆಪೀಡಿತರು
ಸಹಾಯ ಕೇಳಿದ್ರೆ .. ಸರ್ಕಾರ ಉಳೀಲಿ
ಅಂತಾರಲ್ಲಾ..
ಹೌದು ಕಣೋ ಆವಾಗ್ಲೇ ಅಲ್ಲವಾ
ಪರಿಹಾರ, ಪುನರ್ವಸತಿ ಸಾಧ್ಯ ಆಗೋದು..?
ಮತ್ತೆ ..ಎತ್ತು ಏರಿಗೆಳದ್ರೆ
ಕೋಣ ನೀರಿಗೆಳೀತಿದೆಯಲ್ಲಪ್ಪಾ..?
ನೀನೇ ಜಾಣ ಕಣೋ ..
ಸರ್ಕಾರ ಉಳಿಯೋದು ಮುಖ್ಯಾನಾ..
ಅನ್ನ, ವಸ್ತ್ರ ಸೂರಿಲ್ಲದೇ ಪರದಾಡ್ತಿರೋರಿಗೆ
ಪರ್ಯಾಯ ವ್ಯವಸ್ಥೇನಾ...?
ನನಗೆ ಮಂಕು ಕವಿದೈತೆ ಮಗಾ
ನಿಜವಾಗ್ಲೂ ನಂಗೊತ್ತಿಲ್ಲ ಮಗು

Wednesday, November 4, 2009

ಪ್ರಾಚೀನ ವೇದ, ಪುರಾಣ, ಖಗೋಳಶಾಸ್ತ್ರದ ನಮ್ಮ ಪ್ರಕಾರ...೨೦೧೨...ಏನು??

ಸ್ನೇಹಿತರೇ...(ಭಾವ ಮಂಥನಕ್ಕೆ ಭೇಟಿ ಕೊಟ್ಟಿರುವ ಮಿತ್ರರಿಗೆ ವಿಶೇಷತಃ) ಇದೇನು ಭಾವಮಂಥನದ ಪೋಸ್ಟ್ ತೆಗೆದು ಇಲ್ಲಿ ಹಾಕಿದ್ದಾನಲ್ಲ...??!! ಎಂದುಕೊಳ್ಳಬೇಡಿ..ನಿಜ ಅದನ್ನ ಹಾಕಿದ್ದು ..ಕಾರಣ ಜಲನಯನದಲ್ಲಿ ಈ ಬಗ್ಗೆ ಮಾಹಿತಿ ಕೊಟ್ಟಿದ್ದೆ ಆದರೂ ಹಲವು ಜಲನಯದ ಓದುಗ ಮಿತ್ರರು ಭಾವಮಂಥನವನ್ನು ನೋಡಲಾಗಿಲ್ಲ....ಆ ಕಾರಣಕ್ಕೆ ಈ ಉಪ-ಲೇಖನ.
"ಅರೆ ಇವನ..!! ಪ್ರಳಯದ ಇವನ ಸಂಶಯ ನಿವಾರಿಸಿ ಮೂರುದಿನ ಆಗಿಲ್ಲ, ಇನ್ನೊಬ್ಬರನ್ನ ಕರೆತರ್ತಾ ಇದ್ದಾನಲ್ಲ...ಇವರೇನಾದ್ರೂ ಅವರ್ದ್ದೇ ತರ್ಕ ತಂದರೋ ಹೇಗೆ..? ಎ0ಮ್ದು ಕೊಳ್ಳುತ್ತಾ ರಾಮಣ್ಣ ತನ್ನ ಮನೆಕಡೆ ಬರುತ್ತಿದ್ದ ಗೋಪಾಲ ಮತ್ತು ಅವರ ಜೊತೆಯಿದ್ದವರನ್ನು ಬರ ಮಾಡಿಕೊಳ್ಳುತ್ತಾ...‘ಬಪ್ಪಾ ಗೋಪಲ...ಬನ್ನಿ ಒಳಗ್ಬನ್ನಿ....ಅಂದಹಾಗೆ ಇವರು ಯಾರು ಗೊತ್ತಾಗಲಿಲ್ಲ..?‘
ರಾಮು ಇವರು ನಮ್ಮ ವೇದ ಪುರಾಣಗಳನ್ನು ಅಧ್ಯಯನ ಮಾಡ್ತಿರೋರು..ಇವರು ನಿನ್ನ ಮಾತು ಒಪ್ತಾರೆ..ಅಷ್ಟೇ ಅಲ್ಲ..ನಮ್ಮ ವೇದ ಪುರಾಣಗಳ ಪ್ರಕಾರ ಇದು ಕೇವಲ ಯುಗದ ಪ್ರಾರಂಭ ಆಗಿರೋಕೆ ಸಾಧ್ಯ ಅನ್ತಿದ್ದಾರೆ...ಅದೂ ನಮ್ಮ ಯುಗದ್ದಲ್ಲ..ಮಾಯನ್ ಯುಗದ್ದು..ನಮ್ಮ ಪ್ರಕಾರ ಯುಗ ಮುಗಿಯೋಕೆ...ಇನ್ನೂ ದೂರ ಇದೆ...ಪ್ರಳಯ ಹಾಗಿರ್ಲಿ...ಅಂತಾರೆ....ಅಂದಹಾಗೆ ಇವರು ವಿದ್ವಾನ್ ಸಿದ್ಧರಾಮ್. ಎಂದು ತನ್ನ ಜೊತೆಯಿದ್ದವರನ್ನು ರಾಮಣ್ಣನಿಗೆ ಪರಿಚಯಿಸಿದ.

ಸರ್ ನೀವೊಬ್ಬ scientist ಅಂತ ಹೇಳಿದ್ರು ಗೋಪಾಲ್ ..ಹಾಗೇ ಇವರ ಪ್ರಳಯದ ಬಗ್ಗೆ ಎದ್ದಿರುವ ಊಹಾ ಪೋಹಾ ನಿಜವಲ್ಲ ಅಂತ ಹೇಳಿದ್ದಿರಂತೆ...ಎಂದರು ವಿದ್ವಾನ್
ನೋಡಿ ನನ್ನ ಅಧ್ಯಯನ ಈಗಷ್ಟೇ ಪ್ರಾರಂಭವಾಗಿದೆ ನನಗೆ ತಿಳಿದಿರುವುದನ್ನು ಹೇಳ್ತೇನೆ...
ನಮ್ಮ ವೇದ-ಪುರಾಣಗಳ ಪ್ರಕಾರ...ಬ್ರಹ್ಮ ನಮ್ಮ ಸೃಷ್ಠಿಕರ್ತ...ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ಎಂದೇ ಹೇಳಬೇಕು. ಅಲ್ಲವೇ?
ಹೌದು...ಎಂದು ಗೋಣು ಹಾಕಿದರು ರಾಮಣ್ಣ ಮತ್ತು ಗೋಪಾಲ್ ..
ಮುಂದುವರಿದ ವಿದ್ವಾನರು...

ಮಾಯನ್ ಪ್ರಕಾರ ಅವರ ಪಂಚಾಂಗ 2012 ಕ್ಕೆ ಕೊನೆಯಾದರೆ ಬೇರೆ ಯುಗ ಪ್ರಾರಂಭವಾಗಬೇಕು...ಅದು ಪ್ರಳಯ ಅನ್ನುವುದಾದರೆ...ಮನುಕುಲದ ಸಮಾಪ್ತಿ ಎಂದಾಯಿತು...ಆದರೆ ಹಿಂದೂ ಪುರಾಣಗಳ ಪ್ರಕಾರ ಇದು ಅಸಾಧ್ಯ..ಇದು ಕೇವಲ ಒಂದು ಯುಗದ (ಮಾಯನ್) ಅಂತ್ಯ ಮತ್ತು ಮತ್ತೊಂದರ ಪ್ರಾರಂಭ...!!!
ಹೇಗೆ??

ಇದರ ಪ್ರಕಾರ ಬ್ರಹ್ಮನ ಆಯಸ್ಸು 100 ಭ್ರಹ್ಮ ವರ್ಷಗಳು. ಬ್ರಹ್ಮನ ವರ್ಷದ ಒಂದುದಿನವನ್ನು ‘ಕಲ್ಪ‘ ಎನ್ನುತ್ತೇವೆ...ಇದರ ಅವಧಿ 4.32 ದಶಕೋಟಿ ವರ್ಷಗಳು (ಇದು ಪೃಥ್ವಿಯ ಆಯಸ್ಸಿಗೆ ಸಮ). ಪ್ರತಿ ಕಲ್ಪದಲ್ಲಿ (ಆತನ ಒಂದು ದಿನ) ಬ್ರಹ್ಮ ಹದಿನಾಲ್ಕು ಮನು ವಂಶಗಳನ್ನು ಸೃಷ್ಠಿಸುತ್ತಾನಂತೆ. ಒಂದು ಮನು ವಂಶ (ಮನ್ವಂತರ) ಎಪ್ಪತ್ತೊಂದು ಚತುರ್ಯುಗಗಳನ್ನು ಹೊಂದಿರುತ್ತದಂತೆ...ಚತುರ್ಯುಗಗಳು ಅಂದರೆ ಸತ್ಯ, ತ್ರೇತ, ದ್ವಾಪರ ಮತ್ತು ಕಲಿ.
ಸತ್ಯಯುಗ - 1,728,000 ಮಾನವ ವರ್ಷಗಳ ಅವಧಿ ಹೊಂದಿರುತ್ತೆ
ತ್ರೇತ ಯುಗ- 1,296,000 ಮಾ.ವ.
ದ್ವಾಪರ ಯುಗ- 864,000 ಮಾ.ವ.
ಕಲಿಯುಗ - 432,000 ಮಾ.ವ.
ನಮ್ಮ ಆರ್ಯಭಟನ ಪ್ರಕಾರ ಕಲಿಯುಗ ಪ್ರಾರಂಭವಾಗಿದ್ದು 3102 ಕ್ರಿಸ್ತ ಪೂರ್ವ ಅಂದರೆ 3102+2009=5111 ವರ್ಷ ಕಳೆದಿದೆ. ಅಂದರೆ ಕಲಿಯುಗದ 432,000 ವರ್ಷ ಅವಧಿಯಲ್ಲಿ ನಾವು ಕಳೆದಿರುವುದು ಕೇವಲ 5111 ವರ್ಷ ಅಂದರೆ ಯುಗಾಂತ್ಯಕ್ಕೆ ಇನ್ನೂ 427,889 ವರ್ಷ ಇದೆ ನಂತರ ಒಂದು ಚತುರ್ಯುಗ ಮುಗಿದಂತೆ. ಈಗ ನಡೆಯುತ್ತಿರುವ ಮನು ವಂಶ ಏಳನೇ ಮನುವಂಶ ಇದಕ್ಕೆ ವೈಸ್ವತ್ ಮನುವಂಶ ಎನ್ನುತ್ತಾರೆ. ಹೀಗೆ ಹದಿನಾಲ್ಕು ಮನು ವಂಶಕಾಲ ಮುಗಿದ ಮೇಲೆ ಪ್ರಳಯ...!!!! ಅಂದ್ರೆ ಕಲಿಯುಗದ ಉಳಿದಿರುವ 427,889 ವರ್ಷದ ನಂತರ ಇನ್ನೂ ಏಳು ಮನುವಂಶಗಳು ಉಳಿದಿವೆ..ಪ್ರತಿ ಮನು ವಂಶಕ್ಕೆ 71 ಚತುರ್ಯುಗಗಳು ಅಂದರೆ 71 x 7 = 497 ಚತುರ್ಯುಗಗಳು. ಒಂದು ಚತುರ್ಯುಗ = 4,320,000 ವರ್ಷ ಅಂದರೆ ಉಳಿದಿರುವ 497 ಚತುರ್ಯುಗಕ್ಕೆ ತಗಲುವ ಅವಧಿ 2,147,040,000 ವರ್ಷ...!!!!! ಅಲ್ಲಿಗೆ ಬ್ರಹ್ಮನ ಒಂದು ದಿನ (ಕಲ್ಪ) ಮುಗಿಯುತ್ತೆ ಅಂದರೆ ಪ್ರಳಯ, ಬ್ರಹ್ಮ ನಿದ್ರಿಸುತ್ತಾನೆ..ಬೆಳಗೆದ್ದು ಮತ್ತೊಂದು ಸೃಷ್ಠಿ ಅಂದರೆ 14 ಮನುವಂಶಗಳು...ಹೀಗೆ ಬ್ರಹ್ಮನ ೧೦೦ ವರ್ಷ..ಒಬ್ಬ ಬ್ರಹ್ಮನ ಪತನ ಮತ್ತೊಬ್ಬನ ಉಗಮ...

ಇಲ್ಲಿ ಇನ್ನೊಂದು ಅಂಶ ಗಮನಿಸಿದಿರಾ? ಸತ್ಯಯುಗದ ಬರೋಬ್ಬರಿ ಅರ್ಧ ಮಾತ್ರ ದ್ವಾಪರ..ಅಂದರೆ ಧರ್ಮ ಒಂದು ಕಾಲಲ್ಲಿ ನಡೆದ ಯುಗ...ಅದರಲ್ಲಿ ಅರ್ಧ ಕಲಿಯುಗ..ಅಲ್ಲವಾ..? ಇಲ್ಲಿ scientific ಆಗಿ ನೋಡೊದಾದರೆ.. ಸತ್ಯ ಜನಸಂಖ್ಯೆ ಕಡಿಮೆ..ನಿಸರ್ಗ ಸಂಪದ್ಭರಿತ..ತ್ರೇತಾ..ಅದರ ನಂತರದ್ದು..ಜನ ಸಮ್ಖ್ಯೆ ಸ್ವಲ್ಪ ಜಾಸ್ತಿ ಅವರ ಅಧರ್ಮಾಚರಣೆ ಹೆಚ್ಚುತ್ತೆ..ಆದ್ರೂ ಪ್ರಕೃತಿ ಮಾನವನ ಮೇಲೆ ಹಾಗೇ ಕೃಪೆ ಮುಂದುವರಿಸುತ್ತೆ..ದ್ವಾಪರ..ಹೆಚ್ಚು ಜನಸಂಖ್ಯೆ..ಪ್ರಕೃತಿ ಹುಸಿ ಮುನಿಸು ಮತ್ತು ಮಾನವನ ಉದ್ಧಟತನ..ಅಧರ್ಮ..ಹೆಚ್ಚುತ್ತೆ..ಅಧರ್ಮಿಗಳು ಹೆಚ್ಚುತ್ತಾರೆ..ಕಲಿ ಪ್ರಕೃತಿಯ ವಿಕೋಪ ಹೆಚ್ಚುವ ಕಾಲ..ಮಾನವ ತನ್ನ ಸಜಾತಿಯಲ್ಲದೇ ಪ್ರಕೃತಿಯ ಇತರ ಜೀವಿಗಳಮೇಲೆ ಕ್ರೂರಿಕ್ರಮಕ್ಕೆ ಮುಂದಾಗುವುದು..ಪ್ರಕೃತಿಯ ವ್ಯಾಪಕ ಪ್ರಕೋಪ..ಆಗ ಹಲವೆಡೆ ನಾಶ ಕೆಲವೆಡೆ ಶಾಂತ..ಇದು ಮುಂದುವರೆದು..ಮಾನವ ಸಂತತಿ ಕಡಿಮೆಯಾಗಿ..ದುಷ್ಠನಾಶ..ಅಂದರೆ ಜನಸಂಖ್ಯೆಯಲ್ಲಿ ಹೆಚ್ಚಿರುವ ದುಷ್ಟರ ದಮನ...ಉಳಿಯುವವರು ಸತ್ಯಕ್ಕಾಗಿ ಧರ್ಮಕ್ಕಾಗಿ ನಿಲ್ಲುವವರು...ಅಂದರೆ...ಸತ್ಯಯುಗದ ಪುನರಾರಂಭ....ಹೀಗೆ..೭೧ ಬಾರಿ..ಪ್ರತಿ ಬಾರಿಯೂ ಸತ್ಯವಂತರ ನೆರಳಲ್ಲಿ ಮೊದಲಿಗೆ ಕೆಲಪಾಪಿಗಳು ಉಳಿದುಬಿಡುತ್ತಾರೆ..ನಂತರದ ಚತುರ್ಯುಗದ ಕೊನೆಗೆ ಮೊದಲ ಚತುರ್ಯುಗಕ್ಕಿಂತ ಸ್ವಲ್ಪ ಹೆಚ್ಚು ಪಾಪಿಗಳು...ಹೀಗೆ..೧೪ ಮನುವಂಶಗಳು ಮುಗಿಯುವ ವೇಳೆಗೆ ಭೂಭಾರ ಹೆಚ್ಚಾಗಿ ಪಾಪಿಗಳೇ ತುಂಬಿಹೋಗಿ..ಸೃಷ್ಟಿಕರ್ತನಿಗೆ ಯುಗಗಳ ಮೂಲಕ ರಿಪೇರಿಮಾಡಲಾಗದು ಎನಿಸಿ..ಪೂರ್ತಿ ಪ್ರಳಯವಾಗಿ...ಮತ್ತೊಂದು ಪೃಥ್ವಿ ರೂಪ ಹೊರ ಹೊಮ್ಮುತ್ತೆ..ಅದರೊಂದಿಗೆ ಬ್ರಹ್ಮನ ಎರಡನೇ ಕಲ್ಪದ ಪ್ರಾರಂಭ..ಅಂದರೆ ಹದಿನಾಲ್ಕು ಮನುವಂಶಗಳಲ್ಲಿ ಏಳು ಮುಗಿದಿವೆ ಎಂಟನೆಯ ಮನು ವಂಶದ ಸೃಷ್ಟಿ.........ಹೀಗೆ ನೋಡಿದರೆ..??!!
ನನ್ನ ತರ್ಕದಿಂದ.....ಏನು ಪ್ರತಿಕ್ರಿಯೆ ಬರುತ್ತೋ ನೋಡೋಣ......


ಯಾವುದಕ್ಕೆ ಅಂತ್ಯ? ಯಾರದ್ದು ಅಂತ್ಯ? ವಿಚಾರ ವೈಶಾಲ್ಯತೆಯ ಆಧಾರಕ್ಕೆ ಬಂದರೆ 2012..ಅಂದರೆ ಇನ್ನು ಉಳಿದಿರುವ ಮೂರು ವರ್ಷ...ಉಳಿದಿರುವ ಕಲಿಯುಗದ ಅವಧಿಯಲ್ಲಿ ತೃಣಮಾತ್ರ!!!

Wednesday, October 28, 2009

ಭೂಮಿಯ ಅಂತ್ಯ..!! 2012 ಡಿಸೆಂಬರ್ 21 ಕ್ಕೆ !!! ..ಕಿವೀಗೆ ಹೂವಾ??!!
ಮನುಯುಗ-ಪ್ರಳಯ ವೇದಗಳು
(www.bhavamanthana.blogspot.com
)
‘ರೀ ಗೋಪಾಲ್ ನಿಮ್ಮ ಮಗಳ ಮದುವೆ 2011 ಕ್ಕೆ ಮಾಡ್ಬೇಕು ಅಂದ್ಕೊಂಡಿದ್ದರಲ್ಲವಾ? ಈ ವರ್ಷನೇ ಮಾಡ್ಬಿಡಿ...ಪ್ರಳಯ ಆಗುತ್ತಂತ್ರೀ...2012 ಡಿಸೆಂಬರ್ 21ಕ್ಕೆ...!!?? ಮೊಮ್ಮಗೂನಾದರೂ ನೋಡ್ಕೊಂಡು ಹೋಗಬಹುದು ನೀವು..‘ ಎಲ್ಲೋ ಊರಿಗೆ ಹೋಗೋರಿಗೆ..ಮಧ್ಯಾನ್ಹದ ಊಟ ಮಾಡ್ಕೊಂಡು ಹೋಗಿ ಅನ್ನೋರೀತಿ... ಹೇಳ್ದ ನಿಂಗಣ್ಣ ..ತನ್ನ ಎದುರು ಮನೆ ಗೋಪಾಲ್..ಗೆ ಇದ್ದ ಬದ್ದ ಎರಡು ಕೂದಲನ್ನ ಕೆರೀತಾ ....
‘ರೆಡ್ಡಿ ರಂಪಾಟ - ಎಡ್ಡಿ ಎಗರಾಟ‘ ಅನ್ನೋ ಸ್ವಾರಸ್ಯಕರ ತಲೆಬರಹ ನೋಡಿ ಆ ದಿನದ ದಿನಪತ್ರಿಕೆ ಹಿಡಿದು ತನ್ನ ಪೋರ್ಟಿಕೋದಲ್ಲಿ ಈಸೀ ಛೇರಿನಲ್ಲಿ ಆಸೀನನಾಗಿ..ಬೆಳಗಿನ ಹಬೆಯಾಡುವ ಕಾಫಿಯನ್ನು ಗುಟುಕಿಸುತ್ತಾ ಕೂತಿದ್ದ ಗೋಪಾಲ್ ಗೆ ಒಂದು ಬಾಂಬೆಸೆದ....
ಎಡ್ಡಿ-ರೆಡ್ಡಿ ವಿಷಯ ಹಾರೇ ಹೋಯ್ತು..ಗೋಪಾಲ್ ತಲೆಯಿಂದ ನಿಂಗಣ್ಣ ಸಿಡಿಸಿದ ಬಾಂಬು ಕೇಳಿ...ಏನು..?? ಏನು ನಿಂಗಣ್ಣ ನೀನು ಹೇಳಿದ್ದು?..ಪ್ರಳಯ ಆಗುತ್ತಂತಾ?? ಯಾವ ನ್ಯೂಸ್ನಲ್ಲೂ ಬರ್ಲಿಲ್ಲವೇ?? ನಿನಗ್ಯಾರು ಹೇಳಿದ್ದು..?? ಇದೇನಪ್ಪ ಇದ್ದಕ್ಕಿದ್ದಂಗೆ ಪ್ರಳಯ ಗಿಳಯ ಅಂತೀಯ?? ಆಗೋಂದ್ಸಾರಿ..ಸ್ಕೈಲ್ಯಾಬ್ ಬೆಂಗಳೂರ್ ಮೇಲೆ ಬೀಳ್ಸೋಕೆ ಅಮೇರಿಕಾದವ್ರು ಪ್ಲಾನ್ ಮಾಡವ್ರಂತೆ ಅಂತ ನೀನೇ ಅಲ್ವಾ ಗುಲ್ಲೆಬ್ಬಿಸಿದ್ದು..!!?? ಹಂಗೇನಾ ಇದೂನೂ..??
ಯೇ..ಬಿಡ್ರಪ್ಪಾ ನೀವು..ಉಪಕಾರ ಮಾಡೊರ ಬುಡಕ್ಕೇ ಈಡ್ತೀರ ನೀವು ಬತ್ತೀನಾ..!! ಇದು ನಿಜ ಕಣಪ್ಪಾ..ವಿಜ್ಜಾನಿಗಳೂ ಹೇಳವರಂತೆ..ಅದೇನೋ ಆಕಾಶ ಕಾಯ ಅನ್ನೋದು ಭೂಮಿಗೆ ಬಡಿತದಂತೆ.. ಯಾರೂ ಉಳಿಯಲ್ಲವಂತೆ..ಅದನ್ನೇ ಮಾಯಾ ಜನಾಂಗದ ಕ್ಯಾಲಂಡರೂ ಹೇಳೋದಂತೆ..ಆ ಕ್ಯಾಲಂಡರ್ ನಲ್ಲಿ ೨೦೧೨, ಡಿ. ೨೧ ನಂತರ ಯಾವುದೇ ದಿನ ಇಲ್ಲಂತೆ..ಅಲ್ಲೀಗೇ ಮುಗೀತದಂತೆ ಎಲ್ಲಾ??....
ಒಂದೇ ಉಸಿರಿಗೆ ತನಗೆ ಗೊತ್ತಿದ್ದನ್ನ ಒದರಿದ ನಿಂಗಣ್ಣ.
ಈಗ ನಿಜವಾಗೂ ಯೋಚನೆಗೆ ಬಿದ್ದ ಗೋಪಾಲ...ತಕ್ಷಣ ಅವನಿಗೆ ssಛಿieಟಿಣisಣ ರಾಮಣ್ಣ ನೆನಪಿಗೆ ಬಂದ. ತನ್ನ ಬಾಲ್ಯದ ಗೆಳೆಯ, ಮೊನ್ನೆ ಮೊನ್ನೆವರೆಗೂ ಅಮೇರಿಕಾದಲ್ಲಿದ್ದು ಈಗ ಕರ್ನಾಟಕ ಸರ್ಕಾರದ ವಿಶೇಷ ಆಹ್ವಾನದ ಮೇರೆಗೆ ವಾತಾವರಣ ಶಾಸ್ತ್ರದ ಎಕ್ಸ್ಪರ್ಟ್ ಆಗಿ ಬೆಂಗಳೂರಿಗೆ ಬಂದಿದ್ದ. ಪಕ್ಕದ ಬೀದೀಲೇ ಅವನ ಮನೆ, ಭಾನುವಾರ ಆಗಿದ್ದರಿಂದ ಮನೇಲೇ ಇರ್ತಾನೆ ಅಂತ ರಾಮಣ್ಣನ ಮನೆಕಡೆ ಹೆಜ್ಜೆ ಹಾಕ್ದ.
ಗಾಬರಿ ಗಾಬರಿಯಾಗೇ ಮನೆಗೆ ಬಂದ ಗೋಪಾಲನ್ನ ನೋಡಿ ರಾಮಣ್ಣ..ಏನೋ ಗೋಪಾಲ ಗಾಬರಿ...ಎಲ್ಲಾ ಆರಾಮ ಹೌದಲ್ಲೋ? ಎನ್ನುತ್ತ ಗೆಳೆಯನನ್ನ ಬರಮಾಡಿಕೊಂಡ.
ಏ..ಏನಿಲ್ಲೋ ರಾಮು...ಎನ್ನುತ್ತಾ ತನ್ನ ಗಾಬರಿಯನ್ನು ಇಲ್ಲವೆನ್ನುವಂತೆ...ಅದೇ..ನಿಂಗಣ್ಣ ...ಏನೋ ೨೦೧೨......
ಓ ಅದಾ..ನಿನ್ಗೂ ಬಿಟ್ಟವನೆ ಭೂತಾನ..?? ಹಹಹ..ಎಂದ ರಾಮಣ್ಣ ಎಲ್ಲ ಗೊತ್ತಿರುವಂತೆ.
ನಿನಗೆ ಗೊತ್ತಾ.. ರಾಮು..? ಕೇಳಿದ ಗೆಳೆಯನ್ನ ಆಶ್ಚರ್ಯದಿಂದ ಗೋಪಾಲ.
ಊಂ ನಪ್ಪಾ..ಎಲ್ಲ ಕಡೆ ಇದೇ ಡಿಸ್ಕಶನ್ನು...ಮಾಡೋಕೆ ಕೇಮೆಯಿಲ್ಲ...ಎಂದ ಉದಾಸೀನತೆಯಿಂದ..
ಅಲ್ಲೋ ಏನೂ ಇಲ್ಲ ಅನ್ನೋ ತರಹ ಹೇಳ್ತಿದ್ದೀಯಾ ನೀನು..ಎಂದ ಗೋಪಾಲ ಈಗ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಾ
ಗೆಳೆಯನ್ನ ತನ್ನ ಪಕ್ಕದ ಸೋಫಾದಲ್ಲಿ ಕೂರಿಸಿಕೊಳ್ಳುತ್ತಾ...ಕೂತ್ಕೋ ಹೇಳ್ತೀನಿ ನಾನು..ಎಂದ ರಾಮಣ್ಣ. ನೋಡು ಗೋಪಾಲ..ಎಲ್ಲಾ ಪ್ರಾರಂಭ ಆಗಿದ್ದು ಮಾಯನ್ ಪಂಚಾಂಗ ಅಥವಾ ಕ್ಯಾಲಂಡರ್ ನಿಂದ.
ಮಾಯಾನ್ ಜನಾಂಗ ಆಕಾಶಕಾಯ, ಸೂರ್ಯ ಚಂದ್ರ ಹೀಗೆ ಹಲವು ವಿಷಯ ಅರಿತ ಹಗೂ ಗಣಿತವನ್ನೂ ಅರಿತ ನಾಗರಿಕ ಜನಾಂಗ..ಅದು ಈಗಲೂ ಮಾಯನ್ ಕ್ಯಾಲಂಡರ್ ಅನ್ನು ಬಳಸುತ್ತೆ. ಅದರ ಪ್ರಕಾರ ೨೧ ದಿಸೆಂಬರ್ ೨೦೧೨ ರ ನಂತರ ದಿನವಿಲ್ಲ, ದಿನಾಂಕವಿಲ್ಲ..ನಿನ್ನ ಕಾರಿನ ಸ್ಪೀಡಾ ಮೀಟರ್ ೯೯,೯೯೯ಕ್ಕೆ ಬಂದ ನಂತರ ಓಡೋದನ್ನ ನಿಲ್ಲುಸುತ್ತಾ ಹೇಳು??..
ಏನೋ ರಾಮು ಹೀಗ್ ಕೇಳ್ತೀಯಾ..ಮತ್ತೆ ೦೦೦೦೧ಕ್ಕೆ ಬರುತ್ತೆ...ಅಲ್ಲವಾ...ಅದರಲ್ಲಿ ನಿಲ್ಲೋದು ಏನು?
ನೋಡಿದ್ಯಾ..ಇಲ್ಲೇ ಇದೆ ಉತ್ತರ..ಮಾಯನ್ ಕ್ಯಾಲಂಡರ್ ತನ್ನ ಮೂಲ ಸಂಖ್ಯೆಗಳಾದ ೧೩ ಮತ್ತು ೧೯ ನು ಉಪಯೋಗಿಸಿ ೦.೦.೦.೦.೦. ಉದ್ದ ಎಣಿಕೆ- ಎಂದು‌, ಕರೆಯುತ್ತೆ, ಅಂದರೆ ಅವರ ೦.೦.೦.೦.೦ ರೂಪದ ಕಡೆಯ ಸಂಖ್ಯೆ ೧೩.೦.೦.೦.೦. ಹಾಗಾದ್ರೆ ಈ ಸಂಖ್ಯೆ ಬಂದ ನಂತರ ನಿಂತರೆ ಭೂಮಿ ನಾಶ ಆದಂತೆ ಆಗುತ್ತಾ..?
ಇಲ್ಲಿ ಮಾಯನ್ ಕ್ಯಾಲಂಡರ್ ಬಗ್ಗೆ ತಿಳಿಯೋಣ. ಅವರ ಕ್ಯಾಲಂಡರ್ ನಲ್ಲಿ.. ೦.೦.೦.೦.೦ ..ಹೀಗೆ ಐದು ಸೊನ್ನೆಗಳು..ಪ್ರತಿಸೊನ್ನೆ (ಮೂಲದ ಮೊದಲ ಸೊನ್ನೆ ೧೩ಕ್ಕೆ ನಿಲ್ಲುತ್ತೆ) ೧ರಿಂದ ೧೯ ರವರೆಗೆ ಹೋಗುತ್ತೆ...ಅಂದರೆ ಮೊದಲದಿನ ೦.೦.೦.೦.೧ ಹಾಗೇ ೧೯ನೇ ದಿನ ೦.೦.೦.೦.೧೯, ಅದೇ ೨೦ನೇ ದಿನ ೦.೦.೦.೧.೦ ಆಗುತ್ತೆ ...ಹಾಗೆಯೇ..ಒಂದು ವರ್ಷಕ್ಕೆ -೦.೦.೧.೦.೦, ಇಪ್ಪತ್ತು ವರ್ಷಕ್ಕೆ ೦.೧.೦.೦.೦. ಇದನ್ನೇ ಮುಂದುವರೆಸಿದರೆ .. ೧.೦.೦.೦.೦ ಅಂದರೆ ೪೦೦ ವರ್ಷ (೨೦ *೨೦). ಇದೇ ರೀತಿ ಕ್ಯಾಲಂಡರಿನ ಕೊನೆಯ ಸಂಖ್ಯೆ...೧೩.೦.೦.೦.೦ ಇದನ್ನು ನಮ್ಮ
ಸೌರ್ಯ ಮಾನದಲ್ಲಿ ಹೇಳಿದರೆ ೫೧೨೬ ವರ್ಷ. ಮಾಯನ್ ಕ್ಯಾಲಂಡರ್ ನ ೦.೦.೦.೦.೧ ರ ನಮ್ಮ ಲೆಕ್ಕದ ದಿನಾಂಕ ಕ್ರಿ,ಪೂ. ೩೧೧೪ರ ಆಗಸ್ಟ್ ೧೧. ಅಲ್ಲಿಂದ ೫೧೨೬ ವರ್ಷ ಅಂದರೆ ೨೦೧೨ ಡಿಸೆಂಬರ್ ೨೧..!!!! ಅಂದ್ರೆ ನಿನ್ನ ಕಾರು ನಿಲ್ಲುತ್ತಾ..? ಹೇಳು..?
ಓ... ಅದ್ಕಾ ಇವರು ಹೇಳೋದು ಡಿ.೨೧ ೨೦೧೨ ಕ್ಕೆ ಪ್ರಳಯ ಅಂತಾ..??!! ..ಅಲ್ಲಪ್ಪ ನಮ್ಮ ಕ್ಯಾಲಂಡರ್ ಡಿ.೩೧ಕ್ಕೆ ಪ್ರತಿವರ್ಷ ನಿಲ್ಲುತ್ತಲ್ಲಾ..ಮತ್ತೆ ಜನವರಿ ೧ಕ್ಕೆ ಹೊಸವರ್ಷ ಆಚರಿಸೊಲ್ಲವೇ ನಾವು?...!!! ಸರಿ..ಸರಿ..ಬಿಡು ಅರ್ಥ ಆಯ್ತು..
ನೋಡು ಗೋಪಾಲ..ಇನ್ನೊಂದೆರಡು ವಿಷಯಾನೂ ಇದೆ..ಅವ್ರು ಹೇಳೋದು...
ಆ ದಿನಕ್ಕೆ ಭೂಮಿಯ ಗುರುತ್ವ ಮತ್ತು ಕಾಂತಗುಣ ಅದಲು ಬದಲಾಗುತ್ತೆ ಅಂತ...ಅಂದರೆ..ಉತ್ತರ ದೃವ ದಕ್ಷಿಣ ದೃವಗಳಲ್ಲಿ ವ್ಯತ್ಯಯ ಆಗುತ್ತೆ ಅಂತ...ಇದರಿಂದ ಸಮುದ್ರ ಅಲ್ಲೋಲಕಲ್ಲೋಲ ಆಗುತ್ತೆ, ಜೀವಿಗಳ ಮೇಲೆ ಅಪಾರ ಪ್ರಭಾವ ಬೀಳುತ್ತೆ ಅಂತ... ಇದೂ..ಅಸಾಧ್ಯ ಅಂತ ನಾನು ಹೇಳ್ತೀನಿ...
ಯಾಕೆ ಗೊತ್ತಾ? ಕಾಂತಗುಣ ಬದಲಾವಣೆ ಹೊಸದೇನಲ್ಲ. ಇದು ನಿಯಮಿತವಲ್ಲ ಹಾಗೂ ಇದ್ದಕ್ಕಿದ್ದಂತೆ..ನೀನು ಮಲಗಿದ್ದು ಬೆಳಿಗ್ಗೆ ಏಳುವಾಗ ಬದಲಾಗುವಂತಹುದೂ ಅಲ್ಲ... ಕ್ರಮೇಣ ಆಗುವುದು.. ಲೆಕ್ಕದ ಪ್ರಕಾರ ೩೦೦,೦೦೦ ವರ್ಷಕ್ಕೆ ಒಮ್ಮೆ ಆಗುತ್ತದಂತೆ. ಹೀಗೆ ಆಗಿ ೭೮೦,೦೦೦ ವರ್ಷ ಆಗಿದೆಯಂತೆ..ಅಂದರೆ ಆಗಬೇಕಿತ್ತು ಆಗಿಲ್ಲ..ಯಾವಾಗ ಬೇಕಾದರೂ ಆಗಬಹುದು...ಮತ್ತು ಇದು ಕ್ರಮೇಣ ಆಗುವುದಾದ್ದರಿಂದ ಮತ್ತು ಇದು ಪೂರ್ಣವಾಗಲು ಸುಮಾರು ೫೦೦೦ ವರ್ಷಗಳೇ ತಗಲಬಹುದು ಎನ್ನುವುದರಿಂದ....ನಮ್ಮ ಇಡೀ ನಾಗರೀಕತೆಯೂ ಇಷ್ಟು ಸಮಯವನ್ನು ನೋಡಿಲ್ಲ ಇನ್ನು ಆ ಸಮಯದ ಅವಧಿಯ ತೃಣಸಮಾನವೂ ಇಲ್ಲ ನಮ್ಮ ಜೀವಿತಾವಧಿ...ಇದರ ಬಗ್ಗೆ ಯೋಚಿಸುವ ಅಗತ್ಯವಾದರೂ ಏನು...?? ಹಾಗೆಯೇ ನಮ್ಮ ಭೂಮಿಯ ಕಾಂತೀಯ ಗುಣ ಶೂನ್ಯವಾಗುವುದು ಎನ್ನುವ ಮಾತೂ ಅಸಾಧ್ಯವಾದದ್ದು...ಕಾಂತ ಕ್ಷೇತ್ರ..ಏರುಪೇರಾದರೂ ಅದರ ಒಟ್ಟಾರೆ ರಕ್ಷಕಗುಣ ಹಾಗೆಯೇ ಇರುತ್ತೆ..ಹೀಗಾಗಿ..ಸೂರ್ಯ ಅಥವಾ ಇನ್ನಿತರ ಆಕಾಶಕಾಯದ ಕ್ಷಕಿರಣ ಬೆಂಕಿ ನಮ್ಮನ್ನು ತಟ್ಟುತ್ತೆ ಎನ್ನುವುದೂ ಬರೀ ಬುರುಡೆ...ಇದಕ್ಕೆ ಅಮೇರಿಕೆಯ ನಾಸಾ ಸ್ಸಿನೆತಿಸ್ತ್ಸ್ ಸಹಾ ಪೂರಕ ತರ್ಕ ಒದಗಿಸಿ ಭೂಕಾಂತತೆ ಹೇಗೆ ಸೂರ್ಯನ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಮೂರನೇ ಸಾಧ್ಯತೆ...ಇದು ಎಲ್ಲದಕ್ಕಿಂತ ಅತಿ ಬಾಲಿಶ ಮತ್ತು ಮೂರ್ಖ ತರ್ಕದ ಸಾಧ್ಯತೆ... ಯಾವುದೋ ಎಕ್ಸ್ ಎನ್ನುವ ಆಕಾಶಕಾಯ ಭೂಮಿಯತ್ತ ಬರುತ್ತಿದ್ದು ೨೦೧೨ ಡಿ.೨೧ಕ್ಕೆ ಭೂಮಿಯನ್ನು ಬಲವಾಗಿ ಹೊಡೆಯುತ್ತೆ,....!! ಅದೂ ..ಡಿ.೨೧ಕ್ಕೇ ಏಕೆ? ಅದರ ಗಾತ್ರ ಏನು? ಮೂರುದಿನ ಭೂಮಿಯ ಚಲನೆಯನ್ನೇ ನಿಲ್ಲಿಸುವಷ್ಟು ಶಕ್ತಿಯುತವಾಗಿದ್ದರೆ ಅದರ ಗಾತ್ರ ಬೃಹದಾಕಾರದ್ದಾಗಿ‌ಅರಬೇಕು...ನಮ್ಮಲ್ಲಿ ಲಕ್ಷಾಂತರ ಖಗೋಳ ಶಾಸ್ತ್ರಿಗಳು ಅಕಾಶ ವೀಕ್ಷಕರು ಇದ್ದು ಇಷ್ಟು ದೊಡ್ದ ಆಕಾಶಕಾಯವನ್ನು ಗಮನಿಸಿಲ್ಲವೇ..?? ಅದರ ಗಾತ್ರದ ಬಗ್ಗೆ ಗೊತ್ತಿಲ್ಲ ಎಂದರೆ...ಅದರ ವೇಗ ಹೇಗೆ ತಿಳಿಯಿತು? ವೇಗ ಗೊತ್ತಿಲ್ಲ ಎಂದರೆ ಅದು ಡಿ,೨೧ಕ್ಕೇ ಢೀ ಹೊಡೆಯುತ್ತೆ ಎನ್ನುವುದು ಯಾವ ತರ್ಕ..??!! ಇದರ ಸುತ್ತ ಸಂಶಯಗಳೇ ಹೆಚ್ಚು...ಅಸಲು ಹೀಗೊಂದು ಆಕಾಶ ಕಾಯ ಇರುವುದೇ ಯಾವ ದೇಶದ ಖಗೋಳಜ್ನ ನಿಗೂ ಗೊತ್ತಾಗಿಲ್ಲ..!!! ಇದಕ್ಕೆ ಇನ್ನೊಂದು ಹಾಗಲಕ್ಕೆ ಬೇವು ಸಾಕ್ಷಿ ತರಹ...ಸರ್ಕಾರಗಳು ವಿಷಯವನ್ನು ತಿಳಿದಿದ್ದೂ ಬಯಲು ಮಾಡುತ್ತಿಲ್ಲ...!!! ಇದು ಸಣ್ಣ ಪುಟ್ಟದ್ದಲ್ಲ...ಇಡೀ ಭೂಮಿಯೇ ಇಲ್ಲವಾಗುತ್ತೆ ಎನ್ನುವುದಾದರೆ...ಯಾವುದೇ ಕುರುಹೇ ಇರುವುದಿಲ್ಲವೇ..??!! ಭೂಮಿ, ಸೂರ್ಯ, ಆಕಾಶಕಾಯ ಎಲ್ಲ ಚಾಲನೆಯ ನಿಯಮಕ್ಕೆ ಬದ್ಧ ಎನ್ನುವುದಾದರೆ ...ಅತಿಘೋರ ಒಮ್ಮೆಗೇ ಆಗುತ್ತೆ ಎನ್ನುವುದನ್ನು ನಂಬುವುದಾದರೂ ಹೇಗೆ..??
ಇದಕ್ಕೆಲ್ಲ ಒಂದೇ ಉತ್ತರ ಸಾಧ್ಯ...ಇದು ಮೂಲತಃ ಮಾಯನ್ ಹುಟ್ಟುಹಾಕಿದ ಜನಗೊಂದಲ್ಕ್ಕೀಡುಮಾಡುವುದು...ತಮ್ಮ ಸ್ಪೀಡಾ ಮೀಟರ್ ಕೊನೆಯಾದ್ದರಿಂದ ಜಗತ್ತೂ ಕೊನೆಯೆನ್ನುವುದು...ಹೇಗೆಂದರೆ...ಅಜ್ಜಿ ಹುಂಜ ಕೂಗದಿದ್ದರೆ ಸೂರ್ಯ ಮೂಡುವುದಿಲ್ಲ ಬೆಳಕಾಗುವುದಿಲ್ಲ ಎನ್ನುವಂತೆ...
ಏನಂತೀಯ ಗೋಪಾಲ???
ಏಯ್ ಬಿಡು ಮಾರಾಯಾ..ಒಳ್ಳೆ ಮಾಹಿತಿ ಕೊಟ್ಟೆ ನೀನು..., ಬರ್ಲಿ ಆ ನಿಂಗಣ್ಣ ನನ್ನ ಹತ್ರ ಹೇಳ್ತೀನಿ ಅವನಿಗೆ ಸರಿಯಾಗಿ...ಬರ್ಲಾ...ಅಂದಹಾಗೆ ...ನನ್ನ ಕಾರಿನ ಸ್ಪೀಡಾ ಮೀಟರು ನಿಜಕ್ಕೂ ಕೆಟ್ಟೈತೆ ೫೦೦೦ ಕಿ.ಮೀ ಓಡಿದೆ ಕಾರು..೦೦೦೦೦ ತೋರಿಸ್ತಾ ಇದೆ....ಬರ್ಲಾ...


ಸ್ನೇಹಿತರೇ ಇಲ್ಲಿ ನಿಮಗೆ ಮಾಯನ್ ಕ್ಯಾಲೆಂಡರ್ ಲಿಂಕ್ ಕಳುಹಿಸುತ್ತಿದ್ದೇನೆ...ಇದರಲ್ಲಿ ನಮ್ಮ ಕ್ಯಾಲಂಡರ್ ನಲ್ಲಿ ಡಿಸೆಂಬರ್ ೨೧, ೨೦೧೨ ಟೈಪ್ ಮಾಡಿ.....ನೀವೇ ನೋಡಿ ಇದು...ಮ್ಯಾಯನ್ ಕ್ಯಾಲಂಡರ್ ನ ಮೂಲ ಸೊನ್ನೆಯ ಗರಿಷ್ಟ್ ಸಂಖ್ಯೆ ೧೩ ಕ್ಕೆ ನಿಲ್ಲುತ್ತೆ ಮತ್ತು ..ಕ್ಯಾಲಂಡರ್....೧೩.೦.೦.೦.೦ ಗೆ ನಿಲ್ಲಿತ್ತೆ..!!!!
http://www.diagnosis2012.co.uk/mlink.htm

Friday, October 16, 2009

ಶಾಯರಿ-ಗುಟುಕು

ಖುದ್ ಖುಷಿ
ನ ಕರೋ ವಾರ್
ಕರ್ಕೆ ದಿಲ ಕೆ ಪಾರ್
ಮೀಠಿ ನಜ಼ರೋಂಕೆ ತೀರ್
ಬೈಠಿಹೋ ದಿಲ್ ಮೇ ಮೇರೆ
ಬನಾಕೆ ಉಸ್ಕೋ ಅಪ್ನಾ ಘರ್
ನ ಮಾನೋಗಿ ತುಮ ಅಗರ್
ತೊ ಹೋಜಾನ ತುಮ್
ಖುದ್-ಖುಷಿಕೋ ತಯ್ಯಾರ್

ಆತ್ಮಹತ್ಯೆ
ನನ್ನೆದೆ ಗೂಡಿಗೆ ಚುಚ್ಚಿ
ಕೊಲ್ಲಬೇಡವೇ ಹುಚ್ಚಿ
ಅದುವೆ ಗೂಡು ಅಲ್ಲಿಹಳೆನ್ನ ಗುಬ್ಬಚ್ಚಿ
ಕೇಳದೇ ಹೋದರೆ ಪೋರಿ
ನಿನ್ನಾತ್ಮಹತ್ಯೆಗೆ ನೀನೇ
ಮಾಡಿಕೊಳ್ಳುವೆ ದಾರಿ

ಇನ್ನೊಂದು ಜುಗಲ್ ಬಂದಿ - ಶೋಕಿ
ಶೌಖ್ ಥಾ ಸಿರ್ಫ್ ಬಾತ್ ಕರ್ನೇಕ
ಲಿಯಾ ಮೊಬೈಲ್ ಶಾದೀಸೆ ಪಹಲೆ
ಅಬ್ ಕ್ಯೊಂ ಐಸೆ ಲಗ್ ರಹಾ ಹೈ?
ಹೋಗಯೀ ಮಾಡಲ್ ಪುರಾನಿ
ಕ್ಯೋಂ ನ ಇಸ್ಕೋ ಬದಲ್ಲೇಂ?

ಮದುವೆಗೆ ಮುಂಚೆ ಶೋಕಿ ಮಾತನಾಡಲು
ಕೊಂಡಾಯ್ತು ಮೊಬೈಲೊಂದು ಮಾಡಲ್ಲು
ಇತ್ತೀಚಿಗೇಕೆ ಕೆರೆತ ಮನದಲ್ಲೂ ?
ಹೊಸದೊಂದು ಕೊಳ್ಳೋಣವೇ
ಹಳತಾಯ್ತು ಮಾಡಲ್ಲು.

ಭಂಡ
ದಸ್ ಮಿನಟ್ ಸೆ ಚೀಖ್-ಚೀಖ್
ಪೂಛ್ ರಹಾ ಹೂಂ ತುಮ್ಕೋ ಗುಂಡ
ಕೌನ್ ಆಯಾ ಪಹಲೆ
ಮುರ್ಗಿ ಕಿ ಅಂಡ?
ಚುಪ್-ಚಾಪ್ ಬೋಲಾ ಗುಂಡ
ಮುರ್ಗಿ ಹೊ ಯಾ ಅಂಡ
ಅಪ್ ಹೀ ನೆ ಕಹಾ ಥಾ ಮಾಸ್ಟರ್ ಜೀ
ಚುಪ್ ಹೋಜಾನ ತುಮ್ ಗುಂಡ
ಗರ್ ಪಾಲ ಪಡೆ ತುಮ್ಕೋ
ಕಿಸೀ ಮೂರ್ಖ್ ಸೆ
ಔರ್ ಸಾಮನೆ ಹೋ ಕೋಯಿ ಭಂಡ

ತುಂಟ
ಬೇಡ ನನಗವು ಓಲೆಯುಂಗುರ
ತೋಡಲಾರೆ ನೀನೇನೇ ಹೇಳು ಸುಂದರ
ದುಗುಡತುಂಬಿ ಕೇಳಿದ ಏಕೆ ನನ್ನ ಚಂದಿರ?
ನಿನ್ನ ತುಂಟತನ ಇವುಗಳದೂ
ಎಳೆದು ಪೀಡಿಸ್ತಾವಲ್ಲ ನನ್ನ ಕೂದಲ-ಗುಂಗುರ
(ಗೀತಾ ಅವರ ಮ್ಯೂಸಿಂಗ್ಸ್ ಪೋಸ್ಟ್ ಪ್ರಭಾವಿತ)

Wednesday, October 7, 2009

ಭಾರತೀಯ ವಿಜ್ಞಾನಿ ಡಾ. ವೆಂಕಟರಾಮನ್ ರಾಮಕೃಷ್ಣನ್ ಗೆ ೨೦೦೯ ರ ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ(ಚಿತ್ರ: ಕೃಪೆ ಅಂತರ್ಜಾಲ)

ಭಾರತೀಯ ವಿಜ್ಞಾನಿ ಡಾ. ವೆಂಕಟರಾಮನ್ ರಾಮಕೃಷ್ಣನ್ ಗೆ ೨೦೦೯ ರ ರಸಾಯನ ಶಾಸ್ತ್ರದ ನೋಬೆಲ್ ಪಾರಿತೋಷಕ.


ನಮ್ಮೆಲ್ಲರಿಗೆ ಇದು ಹೆಮ್ಮೆಯ ವಿಷಯ.
ಜೈಹಿಂದ್
ಇವರು ಪ್ರೊಟೀನುಗಳ ಉತ್ಪಾದನೆಗೆ ಬೇಕಾಗುವ ರೈಬೋಸೋಮು ಎಂಬ ನಮ್ಮ ಜೀವಕೋಶಾಂಶಗಳ ಕ್ರಿಯಾ-ಪ್ರಕ್ರಿಯಾ ವಿಧಾನಗಳ ಅಧ್ಯಯನ ಮಾಡಿದ್ದಾರೆ. ಈ ಪಾರಿತೋಷಕವನ್ನು ಮೂವರು ಹಂಚಿಕೊಳ್ಳುತ್ತಿದ್ದು, ಇವರು ಮಿಕ್ಕವರಿಗಿಂತ ಕಿರಿಯರು ಎನ್ನುವುದು ಗಮನಿಸಬೇಕಾದ ಅಂಶ. ಇವರ ಅಧ್ಯಯನ ಆಂಟೀಬಯೋಟಿಕ್ ಗಳು ರೈಬೋಸೋಮುಗಳ ಜೊತೆ ಕೂಡಿಕೊಳ್ಳುವ ಪ್ರಕ್ರಿಯೆಗೆ ಬೆಳಕನ್ನು ಚೆಲ್ಲಿದೆ ಆ ಮೂಲಕ ವಿವಿಧ ಜೀವರಕ್ಷಕ ಔಷಧಿಗಳಿಗೆ ಅದರ ಆವಿಷ್ಕಾರಕ್ಕೆ ದಾರಿಮಾಡಿಕೊಟ್ಟಿದ್ದಾರೆ.
ನಮ್ಮೆಲ್ಲರ ಅಭಿನಂದನೆಗಳು ಡಾ. ರಾಮಕೃಷ್ಣನ್ ಗೆ ಮತ್ತು ಅವರ ಪರಿವಾರಕ್ಕೆ..ಇಡೀ ದೇಶಕ್ಕೆ.

Tuesday, October 6, 2009

ಗೊತ್ತಿಲ್ಲ ಮಗುಅಪ್ಪಾ
ಏನುಮಗು?
ಮಳೆ ಬರಲಿಲ್ಲ ಅಂತ
ಹೋಮ ಹವನ ಮಾಡಿದ್ರಲ್ಲಾ
ಹೌದು ಮಗು
ಮತ್ತೆ ಮಳೆ ಜಾಸ್ತಿ ನಿಲ್ಲಲಿ ಅಂತ
ಹೋಮ ಹವನಾನ ಅಪ್ಪಾ?
ಹೌದು ಮಗು...
ಈಗ ದೇವರುಗಳಿಗೆ ಕನ್ಪ್ಯೂಸ್
ಆಗೊಲ್ಲವೇ?
ಗೊತ್ತಿಲ್ಲ ಮಗು?

ಅಪ್ಪಾ..ಮುಂದಕ್ಕೆ ..
ಹೇಳಪ್ಪಾ ನೀನು..
ಟೀವಿ-ನೈನ್ನೋರಿಗೆ
ಹವಾಮಾನ ಅಂತ ಹೇಳೋಕೆ ಬರೊಲ್ಲವೇ?
ಬರುತ್ತೆ ಮಗು
ಮತ್ತೆ ಯಾಕೆ ? ಅವಮಾನ ಇಲಾಖೆ ಅಂತಾರೆ?
ತಾವು ಅತಿ ಮಳೆ ಮಾಹಿತಿ ಸರ್ಕಾರಕ್ಕೆ
ಕೊಟ್ಟಿದ್ದೀವಿ ಅಂತಾರೆ..ಆದ್ರೂ ಜನಹಾನಿ ಆಯ್ತು
ಅದಕ್ಕೇ ಸರ್ಕಾರ ಅವಮಾನ ಇಲಾಖೆ ಅಂತ
ಹೆಸರು ಬದಲಾಯಿಸ್ತೇ?
ನಿಜವಾಗ್ಲೂ ಗೊತ್ತಿಲ್ಲ ಮಗು

ಹೋಗ್ಲಿ ಬಿಡು ಅಪ್ಪ..
ಮತ್ತೇನೋ ತರ್ಲೆ ನಿಂದು..?
ಮಳೆ ಬರ್ತಾಯಿದ್ದು..ಜನ ಪಡಬಾರದ ಅವಸ್ಥೆ
ಮನಸ್ಸು ಆಳುತ್ತಲ್ಲಪ್ಪಾ
ಹೌದು ಮಗನೇ
ಮತ್ತೆ ಬೆಳೆ-ಮನೆ-ಜೀವ ಹನಿಯಾಗ್ತಿದ್ದರೂ
ಅಧಿಕಾರಿಗಳು ರಜ-ಮಜಾ ಮಾಡ್ತಿದ್ದರಂತೆ?
ಹೌದು..ಹಬ್ಬದ ರಜೆಗಳಿದ್ದವಲ್ಲಾ..?
ಮತ್ತೆ ಸರ್ಕಾರ ಚಿಂತನೇಲಿ ಇತ್ತಂತೆ..?
ಗೊತ್ತಿಲ್ಲ ಮಗು.

Thursday, October 1, 2009

ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!!

ಸಿತಾರಾಂ ರವರ ಬ್ಲಾಗ್ ಓದಿ ನನ್ನ ಅನುಭವವನ್ನು ಹಂಚಿಕೊಳ್ಳಬೇಕೆನಿಸಿತು ಅದಕ್ಕೇ ಈ ಪೋಸ್ಟ್....
ಆದರೆ ನನ್ನ ಅನುಭವವೇ ಬೇರೆ. ನಾನು ಮೊದಲಿಗೆ ನೌಕರಿ join ಆಗಲು ಮಣಿಪುರಕ್ಕೆ ಹೋಗಿತ್ತಿದ್ದೆ. ಗೌಹಾತಿಯಿಂದ ದೀಮಾಪುರಕ್ಕೆ ಬೇರೆ ಟ್ರೈನನ್ನು ಹಿಡಿದು ಲೇಟಾಗಿ ತಲುಪಿದರಿಂದ ಆ ದಿನದ ಮಣಿಪುರಕ್ಕೆ ಹೋಗುವ ಬಸ್ಸುಗಳು ಹೋಗಿಯಾಗಿತ್ತು (ಬೆಳಿಗ್ಗೆ ೭.೩೦ ಒಳಗೆ ಬಸ್ ಸಿಗದಿದ್ದರೆ ಮತ್ತೆ ಮರು ದಿನವೇ). ಸರಿ ಅಲ್ಲಿಯೇ ಇದ್ದ ಸದರ್ನ ಹೋಟೆಲ್ (ಮದ್ರಾಸಿ ಹೋಟೆಲ್ ಅಂತಲೇ ಅದು ಪ್ರಸಿದ್ಧಿ) ನಲ್ಲಿ ರೂಂ ತಗೊಂಡೆ. ಆಗಲೇ ..ಈ ಗೋಪಾಲ ಅನ್ನುವವರ ಪರಿಚಯ ಆಗಿದ್ದು ..ಅವರು ತೀನ್ಸುಕಿಯಾ (ಪೂರ್ವ ಅಸ್ಸಾಂ) ಗೆ ಹೋಗಬೇಕಿತ್ತಂತೆ..ಆದ್ರೆ ದೀಮಾಪುರದಲ್ಲಿ ಇಳಿವಾಗ ಅವರ ಒಂದು ಬ್ಯಾಗನ್ನು ಯಾರೋ ಲಪಟಾಯಿಸಿದ್ದರಂತೆ..ವಾಪಸ್ ಟಿಕೆಟ್ ಸಹಾ ಬ್ಯಾಗಲ್ಲಿದ್ದು ಈಗ ವಾಪಸ್ಸಿಗೆ ಹಣ ಮತ್ತು ಟಿಕೆಟ್ ಇರಲಿಲ್ಲವಂತೆ..ಅವರು ನಾಗಮಂಗಲ (ಮಂಡ್ಯ) ಕಡೆಯವರು ತಮ್ಮ ತಮ್ಮನನ್ನು ನೋಡಲು ಹೋಗುತ್ತಿದ್ದುದು..ಮುನ್ನೂರು ರೂಪಾಯಿ ಕೊಡಿ ನನ್ನ ರಿಟರ್ನ್ ಟಿಕೆಟ್ ಮಾಡಿಸಿಕೊಂಡು ನನ್ನ ತಮ್ಮನ ಬಳಿ ಹಣ ತಗೊಂಡು ನಿಮಗೆ ಕಳುಹಿಸುತ್ತೆನೆ..ಅಂತ.. ಸರಿ ಕನ್ನಡಿಗರು ಅನ್ನೋ ಒಂದೇ ಕಾರಣಕ್ಕೆ (ದೂರದ ಊರಲ್ಲಿ ಕನ್ನಡ ಕೇಳಿಯೂ ಇರಬೇಕು) ನನ್ನ ಮಣಿಪುರದ ಆಡ್ರೆಸ್ ಸಹಾ ಕೊಟ್ಟೆ. ಮಾತನಾಡುತ್ತಾ ನನ್ನ ಹೊಸ ಕೆಲಸದ ಬಗ್ಗೆಯೂ ಹೇಳಿದ್ದೆ. ಸರಿ ..ಆ ಹಣದ ವಿಚಾರ ಎರಡು ತಿಂಗಳ ನಂತರ ಮರೆತೇ ಹೋಯಿತು..ನೀವು ಹೇಳಿದರಲ್ಲಾ ಹಾಗೇ ..ಇದು ನಡೆದದ್ದು ೧೯೮೬ ಮಾರ್ಚ್ ೧೯ರಂದು. ಮುಂದೆ..೧೯೮೬ರ ಡಿಸೆಂಬರ್ ನಲ್ಲಿ ಊರಿಗೆ ಅಕಸ್ಮಾತ್ ಹೋಗಬೇಕಾಗಿ ಬಂತು.. ಕಲ್ಕತ್ತಾವರೆಗೆ ಫ್ಲೈಟ್ ನಲ್ಲಿ ಹೋಗಿ ಅಲ್ಲಿಂದ ಟ್ರೈನ್ ಹಿಡಿಯುವ ಎಂದುಕೊಂಡೆ ಆದರೆ ಅಷ್ಟು ಹಣವಿರಲಿಲ್ಲ..ಸಂಬಳಕ್ಕೆ ಕಾಯುವ ಸಮಯವಿಲ್ಲ...ನನ್ನ ಸ್ನೇಹಿತರಲ್ಲಿ ಕೇಳಿ ತೆಗೆದುಕೊಳ್ಳೋಣ ಎಂದುಕೊಳ್ಳುವಾಗ ಮನಿ ಆರ್ಡರ್ ಬಂತು.ಗೋಪಾಲ್ ಅನ್ನೋರು ೫೦೦ ರೂಪಾಯಿ ಕಳುಹಿಸಿದ್ದಾರೆ ಎಂದ ಪರಿಚಯವಾಗಿದ್ದ ಪೋಸ್ಟ್ ಮ್ಯಾನ್. ನನಗೆ ನೆನಪೇ ಹೋಗಿತ್ತು..ನಂತರ ನೆನಪಾಯ್ತು..ಆದ್ರೆ ಇದೇನು ಸುಮಾರು ೮-೯ ತಿಂಗಳು ಬೇಕಾಯ್ತೇ ? ಕೇಳಿದೆ..ಆಗ ಪೋಸ್ಟ್ ಮ್ಯಾನ್ ಸಾರ್...ಈ ನಿಮ್ಮ ಮನಿಆರ್ಡರ್ ಪೂರ್ತಿ ಪೂರ್ವೋತ್ತರ ಏಳು ರಾಜ್ಯ ನೋಡಿ ಬಂದಿದೆ ಎಂದು ಅದರ ಮೇಲಿದ್ದ ಸೀಲುಗಳನ್ನೆಲ್ಲ ತೋರಿಸಿದ... ನಂತರ ತಿಳಿಯಿತು, ಗೋಪಾಲ್ ನನ್ನ ಆಡ್ರೆಸ್ ಚೀಟಿಯನ್ನು ಕಳೆದುಕೊಂಡಿದ್ದರಂತೆ...ಬರೀ ಹೆಸರು ಅದರಲ್ಲೂ ಪೂರ್ತಿ ಇಲ್ಲ ಆಜಾದ್, scientist, ICAR, Dimapur. ದಿಮಾಪುರ್ ಗೆ ಬಂದ MO ಅಲ್ಲಿನವರು ನಾಗಾಲ್ಯಾಂಡ್ ನ ನಮ್ಮ ICAR ಗೆ ಕಳುಹಿಸಿದರಂತೆ..ಅವರು ಇಲ್ಲಿ ಯಾರೂ ಇಲ್ಲ ಬಹುಷಃ ಇದು ಅರುಣಾಚಲ ICAR ಕೇಂದ್ರದ್ದಿರಬೇಕು ಅಂತ ರೀ ಡೈರೆಕ್ಟ್ ಮಾಡಿದ್ದರಂತೆ..ಅಲ್ಲಿ ಹೊಸದಾಗಿ ಸೇರಿದ್ದ ನನ್ನಂತಹ ಮಿತ್ರರೊಬ್ಬರು ನಮ್ಮ ICAR North-East ಮುಖ್ಯ ಕಚೇರಿ, ಷಿಲಾಂಗಿಗೆ redirect ಮಾಡಿದ್ದಾರೆ..ಅಲ್ಲಿ ನನ್ನ ವಿವರ ತಿಳಿದಿದ್ದರಿಂದ ಮತ್ತೆ redirect ಆಗಿ ಮಣಿಪುರಕ್ಕೆ ಬಂದಿತ್ತು.....!!!! ಅವರಿಗೆ ನನ್ನಿಂದ ೩೦೦ ತೆಗೆದುಕೊಂಡಿದ್ದೂ ಗೊತ್ತಾಗದೇ..೫೦೦ ಕಳುಹಿಸಿದ್ದರು..ಅವರ Adress ಇದ್ದಿದರಿಂದ ನಾನು ಬೆಂಗಳೂರು ತಲುಪಿದ ಮೇಲೆ..ಆ ೨೦೦ ರೂಪಾಯಿಯ ಜೊತೆಗೆ ದೊಡ್ದದೊಂದು ಪತ್ರ ಬರೆದೆ...ಮೊನ್ನೆ ಮೊನ್ನೆವರೆಗೂ ಅವರು letter ಬರೆಯುತ್ತಿದ್ದರು....
ಹೇಗೆ..?? ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!! ನನಗೆ ಇನ್ನೊಂದು ಸ್ನೇಹಿತರಲ್ಲಿ ಹೆಮ್ಮೆಯಾಗುವಂತೆ ಮಾಡಿದ ವಿಷಯ ಅವರು ಕನ್ನಡಿಗರು ಎಂಬುದು.

Friday, September 25, 2009

ಪುನರ್ಜನ್ಮ – ಪುನರಪಿ ಜನನಂ ಪುನರಪಿ ಮರಣಂಎಸ್.ಎಲ್.ಭೈರಪ್ಪನವರ ನಾಯಿನೆರಳು ನಾನು ಎರಡನೇ ವರ್ಷ ಬಿ.ಎಫ್.ಎಸ್ಸಿ (ಬ್ಯಾಚುಲರ್ ಅಫ್ ಫಿಶರೀಸ್ ಸೈನ್ಸ್) ಯಲ್ಲಿದ್ದಾಗ ನನ್ನ ಸ್ನೇಹಿತನ ಒತ್ತಡಕ್ಕೆ ತಂದು ಓದಲು ಪ್ರಾರಂಭಿಸಿದ್ದೇ ..ಅದನ್ನು ಮುಗಿಸಿಯೇ ಮಲಗಿದ್ದು..!!! ಕಾದಂಬರಿಯ ಬರವಣಿಗೆ ಮತ್ತು ಓದಿಸಿಕೊಂಡು ಹೋಗುವ ಕಥೆ ಹಾಗೂ ಕಥೆಗಾರನ ಶೈಲಿ (ನನಗೆ ಲೇಖಕನ ಬಗ್ಗೆ ಹೆಚ್ಚು ಅರಿವು ಮೂಡಿದ್ದು ನಂತರವೇ..ಆದ್ದರಿಂದ ಭೈರಪ್ಪನವರ ಹೆಸರಿಂದ ಪ್ರೇರಿತ ಎನ್ನುವಂತಿಲ್ಲ) ನನ್ನ ಆ ನಾನ್-ಸ್ಟಾಪ್ ಮ್ಯಾರಥಾನ್ ಗೆ ಕಾರಣ. ನನ್ನ ಸ್ನೇಹಿತನಿಗೆ ಮರುದಿನ ಬೆಳಿಗ್ಗೆ.. “ಬಹಳ ಚನ್ನಾಗಿದೆಯೋ ಕಾದಂಬರಿ..” ಎಂದುದಕ್ಕೆ ..ಅವನೋ ..ಸ್ಥಬ್ಧ...!!!! “ಸಂಜೇನೇ ಅಲ್ವೇನೋ ತಂದಿದ್ದು ಲೈಬ್ರರಿಯಿಂದ..?? ಅಷ್ಟು ಬೇಗ ಓದ್ಬಿಟ್ಯಾ??” ಹುಬ್ಬೇರಿತ್ತು ಅವಂದು.
ಈಗ ಅದೇ ಕಾದಂಬರಿ ಆಧಾರಿತ ಅದೇ ಹೆಸರಿನ ಚಲನಚಿತ್ರಕ್ಕೆ ಪವಿತ್ರಾ ಲೋಕೇಶ್ ಅದ್ಭುತ ಅಭಿನಯಕ್ಕೆ ರಾಜ್ಯಪ್ರಶಸ್ತಿ ಸಿಕ್ಕಿದೆ ಒಂದೆರಡು ವರ್ಷಕ್ಕೆ ಹಿಂದೆ. ಕಥಾ ವಸ್ತು..ಪುನರ್ಜನ್ಮದ್ದೇ... ಹಲವಾರು ಚಲನಚಿತ್ರಗಳು ಬಂದಿವೆ..ಬಾಲಿವುಡ್, ಸ್ಯಾಂಡಲ್ವುಡ್ ಎಲ್ಲ ವುಡ್ ಗಳಲ್ಲೂ ಬಹುಶಃ. ಇವನ್ನು ಕಂಡವರಿಗೆ ಕಾಡುವುದು...ಸತ್ತಮೇಲೆ ಮನುಷ್ಯ ಮತ್ತೆ ಹುಟ್ಟುತ್ತಾನೆಯೇ..? ಪುನರ್ಜನ್ಮ ಎಂಬುವುದಿದೆಯೇ? ಅದು ಹೇಗೆ ಸಾಧ್ಯ..?? ಅಥವಾ ಇದೊಂದು ಗಿಮಿಕ್ಕೇ?? ಇತ್ಯಾದಿ...
ನಮ್ಮ ಪುರಾಣಗಳು ದೇವತಾ ಸ್ವರೂಪರಿಗೆ ಅವತಾರಗಳನ್ನು ಕೊಟ್ಟು ದೇವತೆಗಳು ಹಲವಾರು ರೂಪಗಳಲ್ಲಿ ಬಂದರು ಎಂದು ಹೇಳುತ್ತವೆ. ಇಲ್ಲಿಯೂ ಕೆಲ ಅವತಾರಗಳು ತಮ್ಮ ಜನ್ಮದ ಬಗ್ಗೆ ತಾವೇ ಹೇಳುವುದು ಕಡಿಮೆಯೇ..ಉದಾಹರಣೆಗೆ ..ರಾಮಾವತಾರ...? ಆದರೆ ಅದೇ ವಿಷ್ಣುವಿನ ಅವತಾರವೆಂದೇ ಪ್ರಸಿದ್ಧಿಯಾಗಿರುವ ಬುದ್ಧ ತನ್ನ ಪುನರ್ಜನ್ಮದ ಬಗ್ಗೆ ನಿಖರವಾಗಿ ಹೇಳುತ್ತಾನೆ...ಹಾಗೆ ನೋಡಿದರೆ..ಪುನರ್ಜನ್ಮದ ಬಗ್ಗೆ ನಿಖರವಾಗಿ ಸೈದ್ಧಾಂತಿಕವಾಗಿ ನಂಬುವುದು ಬೌದ್ಧ ಧರ್ಮವೇ? ಹಿಂದೂ ಧರ್ಮ ಇದನ್ನು ಮೊದಲೇ ಪ್ರತಿಪಾದಿಸಿದೆ.

ಪುನರ್ಜನ್ಮ – ಕಟ್ಟು ಕಥೆಯೇ? ವಾಸ್ತವವೇ??
ಸಾವಿನ ನಂತರ ಮತ್ತೊಂದು ಜನ್ಮ ಇದೆಯೇ? ಅದೇ ಜೀವಿ ಮತ್ತೆ ಹುಟ್ಟುತ್ತದೆಯೇ? ಎನ್ನುವುದು ಹಲವರು ಘಟನಾವಳಿಗಳನ್ನು ನೋಡಿರುವವರಲ್ಲಿ ಅಥವಾ ಕೇಳಿರುವವರಲ್ಲಿ ಕೌತುಕ ಕೆರಳಿಸುವ ಪ್ರಶ್ನೆಗಳು.
ಇನ್ನು ಧರ್ಮಗಳ ಪ್ರಕಾರ, ಕೇವಲ ಹಿಂದೂ ಧರ್ಮ ಸೈದ್ಧಾಂತಿಕವಾಗಿ ಪುನರ್ಜನ್ಮವನ್ನು ಪ್ರತಿಪಾದಿಸಿತು..ಅದೇ ನಿಟ್ಟಿನಲ್ಲಿ ಬೌದ್ಧ ಧರ್ಮವೂ ಈ ನಂಬಿಕೆಯನ್ನು ಧರ್ಮ-ಸಮ್ಮತ ಮಾಡಿತು. ಬುದ್ಧ ತನ್ನ ಶಿಷ್ಯರಿಗೆ ನಿಖರವಗಿ ಈ ಬಗ್ಗೆ ಬೋಧಿಸಿದ್ದಾನೆಂದು ಉಲ್ಲೇಖವಿದೆ. ಒಟ್ಟಿನಲ್ಲಿ ಇದು ಒಂದು ಸರ್ವಕಾಲಿಕ ಕೌತುಕ ಹುಟ್ಟಿಸಿದ ಅಂಶ ಎನ್ನುವುದರಲ್ಲಿ ಸಂಶಯವಿಲ್ಲ.
ಇಲ್ಲಿ ಹಲವಾರು ವಾದಗಳನ್ನು ನಾವು ಪರಿಗಣಿಸೋಣ. ಯಾರೋ ಒಬ್ಬರು ತಾವು ನೋಡದೇ ಇರುವ ಸ್ಥಾನ, ವ್ಯಕ್ತಿ, ಪರಿಸರ, ಘಟನಾವಳಿಯನ್ನು ನಿಖರವಾಗಿ ಹೇಗೆ ವಿವರಿಸಲು ಸಾಧ್ಯ...?? ಅದನ್ನು ಅವರು ಸ್ವತಃ ಅನುಭವಿಸದೇ?? !! ಅದರಲ್ಲೂ ನೆನಪಲ್ಲಿ ಹೆಚ್ಚು ಶೇಖರವಾಗಿರದ ಮಕ್ಕಳು ಅಸಹಜವೆಂಬಂತೆ ತಾವು ಅದಾಗಿದ್ದೆವು, ಅಲ್ಲಿದ್ದೆವು, ಅಂತಹವರ ಗಂಡನೋ ಹೆಂಡತಿಯೋ ಆಗಿದ್ದೆವು..ಎಂದೆಲ್ಲಾ ಹೇಳುವುದು ಹೇಗೆ ಸಾಧ್ಯ?? ಇನ್ನು ಪುನರ್ಜನ್ಮ ಎನ್ನುವಷ್ಟರ ಮಟ್ಟದ್ದಲ್ಲವದರೂ ನಮಗೇ ಕೆಲವೊಮ್ಮೆ ತಾವು ಮೊದಲು ಕಂಡಿರದ ಯಾವುದೋ ಸ್ಥಾನವನ್ನು ನೋಡಿದಾಗ ತೀರಾ ಪರಿಚಿತ ಎನಿಸುವುದು ಏಕೆ? ಕೆಲವರನ್ನು ಮೊದಲೇ ಕಂಡಿಲ್ಲದಿದ್ದರೂ ನಮಗೆ ಅಸಹ್ಯ ಅನಿಸುವುದೇಕೆ? ಕೆಲವರು ತೀರಾ ಹತ್ತಿರದವರು, ಮಿತ್ರರು ಎನಿಸುವುದೇಕೆ?? ಹೀಗೆ ಹತ್ತು ಹಲವು ವಿಜ್ಞಾನಕ್ಕೆ ನಿಲುಕದ ವಿಷಯ ನಮ್ಮನ್ನು ದ್ವಂದ್ವಗಳಿಗೆ ಕೆಡಹುತ್ತವೆ.
ಅಮೇರಿಕೆಯ ವರ್ಜೀನಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಸ್ಟೀವನ್ ಸನ್ ತಮ್ಮ ಅಧ್ಯಯನದ ನಲವತ್ತು ವರ್ಷಗಳನ್ನು ಪುನರ್ಜನ್ಮದ ಸುತ್ತಲ ಪವಾಡ ಸದೃಶ ಘಟನಾವಳಿಗಳನ್ನು ಕೂಲಂಕುಷ ಪರಿಶೀಲನೆ ಮತ್ತು ಅಧ್ಯಯನದಲ್ಲಿ ಕಳೆದಿದ್ದಾರೆ. ಪ್ರಪಂಚದ ಹಲವಾರು ದೇಶಗಳಿಂದ ಘಟನಾವಳಿಗಳನ್ನು ಶೇಖರಿಸಿ, ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ, ಪ್ರಕಟಿಸಿದ್ದಾರೆ. ಇವರು ಪುನರ್ಜನ್ಮಿ ನೀಡಿದ ಅಹವಾಲು, ಹೇಳಿಕೆಗಳನ್ನು ಅಕ್ಷರಶಃ ಪರಿಶೀಲಿಸಿ ವೈದ್ಯಕೀಯ ದಾಖಲೆಗಳನ್ನು ತಾಳೆಹಾಕಿ ಅಧ್ಯಯನ ನಡೆಸಿದ್ದಾರೆ, ಹಲವಾರು ಇಂತಹ ಹೇಳಿಕೆಗಳು ವಾಸ್ತವವಾಗಿ ನಡೆದಿವೆ. ಇಲ್ಲಿ ಇನ್ನೊಂದು ವಾದವೆಂದರೆ, ಪುರ್ಜನ್ಮ ಇದ್ದರೂ ಆ ರೀತಿ ಜನ್ಮ ಪಡೆದವರೆಲ್ಲರಿಗೂ ಹಿಂದಿನ ಜನ್ಮದ ನೆನಪಿರುವುದಿಲ್ಲ. ಆದರೆ ಸತ್ತವರೆಲ್ಲ ಪುನರ್ಜನ್ಮ ಪಡೆಯುತ್ತಾರೆಂದೂ ಏನಿಲ್ಲವಲ್ಲ??!! ಪ್ರೊಫೆಸರ ಅಧ್ಯಯನದ ಪ್ರಕಾರ ಇಂತಹ ನಿಖರ ಪುನರ್ಜನ್ಮದ ನಿದರ್ಶನಗಳಲ್ಲಿ ತಿಳಿದು ಬಂದ ಅಂಶ, ಸತ್ತು ಮತ್ತೆ ಹುಟ್ಟಿದವರು ಅಕಾಲಿಕ ಅಥವಾ ಅತೃಪ್ತ ಅಥವಾ ಘೋರವೆನಿಸುವ ಸಾವಿಗೀಡಾದವರು ಎಂದು. ಅಂದರೆ ಯಾವುದೋ ಅವ್ಯಕ್ತ ಶಕ್ತಿ ಮೃತ ದೇಹದಿಂದ ಮತ್ತೊಂದು ದೇಹಕ್ಕೆ ವರ್ಗಾಯಿತಗೊಂಡು ಪುನರ್ಜನ್ಮದ ನೆನಪುಗಳಿಗೆ ಕಾರಣವಾಗುತ್ತದೆಯೇ?? ಅಥವಾ ಎಲ್ಲ ಪುನರ್ಜನ್ಮಿತ ಜೀವಿ ತನ್ನ ಪೂರ್ವದ ನೆನಪು ಉಳಿಸಿಕೊಂಡಿರುವುದಿಲ್ಲ ಎಂದೇ..?? ಅಥವಾ ಘೋರ ಅತೃಪ್ತ ಆತ್ಮವೇ ಪುನರ್ಜನ್ಮಕ್ಕೆ ಕಾರಣವೇ? ? ಸದ್ಯಕ್ಕೆ ಏನೂ ಹೇಳಲಾಗದು...ಸತ್ತನಂತರವೇ ಇದನ್ನು ನಿಖರವಾಗಿ ಹೇಳಲು ಸಾಧ್ಯ..ಅಂದರೆ ..???!!!
ಇಸ್ಲಾಂ ಅಂತ್ಯದ ನಂತರವೂ ಜೀವ ಇದೆ ಎನ್ನುತ್ತದೆಯಾದರೂ ಪುನರ್ಜನ್ಮವೆನ್ನುವುದು ಇದೆ ಎಂದು ಒಪ್ಪುವುದಿಲ್ಲ ಏಕೆಂದರೆ ಆ ರೀತಿ ನಿರೂಪಿಸಲು ಸಾಧ್ಯವಿಲ್ಲ. ಇಸ್ಲಾಂ ಪ್ರಕಾರ ಸತ್ತವನೇ ಪುನರ್ಜನ್ಮ ಹೊಂದಿದಾತ ಎನ್ನುವುದಕ್ಕೆ ಪುರಾವೆ ಇರುವುದಿಲ್ಲ ಹಾಗೆ ಇದೆ ಎನಿಸಿದರೂ ಅದು ಕೇವಲ ಕಾಕತಾಳೀಯವಾಗಿರಬಹುದು ಎನ್ನುತ್ತದೆ. ಆದರೆ ಸಾವಿನ ನಂತರದ ಜೀವನ ಇದೆ ಎಂತಲೂ ಆ ಜೀವದಲ್ಲಿ ಸುಖ ಅಥವಾ ಕ್ರೂರ ಶಿಕ್ಷೆಗಳು ಈ ಜನ್ಮದ ನಿನ್ನ ಕರ್ಮಗಳನ್ನು ಅವಲಂಬಿಸಿದೆ ಎಂದೂ ಹೇಳುತ್ತದೆ. ನಿನ್ನ ಮರಣಾನಂತರದ ಸ್ಥಿತಿ ಸುಖದಾಯಕ ಆಗಬೇಕಾದರೆ ಈ ಜನ್ಮದಲ್ಲಿ ಒಳ್ಳೆಯ ಕರ್ಮಗಳನ್ನು ಮಾಡು ಎನ್ನುತ್ತದೆ ಆದರೆ ನೀನೇ ಮತ್ತೆ ಹುಟ್ಟಿ ಬರುವೆ ಎನ್ನುವುದಿಲ್ಲ. ನರಕ ಮತ್ತು ಸ್ವರ್ಗ, ಈ ಸಿದ್ಧಾಂತ ಬಹುಶಃ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಕಂಡು ಬರುವ ಸಮಾನ ಅಂಶ. ಕ್ರಿಸ್ಚಿಯನ್ನರೂ ಪುನರ್ಜನ್ಮದ ಬಗ್ಗೆ ನಿಖರವಾಗಿ ಏನೂ ಹೇಳುವುದಿಲ್ಲ, ಕಿಸ್ತನು ಮತ್ತೆ ಜೀವ ಪಡೆದ ಎನ್ನುವರೇ ಹೊರತು, ಪುನರ್ಜನ್ಮ ಪಡೆದ ಎಂದು ಹೇಳಿಲ್ಲ. ಇನ್ನು ಜೊರಾಸ್ಟ್ರಿಯನ್ನರು ಒಂದು ರೀತಿಯ ಜೀವ-ಮರುಕಳಿಕೆಯನ್ನು ಒಪ್ಪುವರಾದರೂ ಖಚಿತವಾಗಿ ಪುನರ್ಜನ್ಮದ ಬಗ್ಗೆ ಹೇಳಿಲ್ಲ.
ಬೌದ್ಧ ಧರ್ಮ ಪುನರ್ಜನ್ಮ ಒಂದು ಸತ್ಯ ಎನ್ನುತ್ತದೆ. ಇನ್ನೂ ಮುಂದುವರೆದು, ಪುನರ್ಜನ್ಮದ ಆರು ಆಯಾಮಗಳು ಸಾಧ್ಯ ಎನ್ನುತ್ತದೆ. ಇವು ದೇವತಾ, ಗಂಧರ್ವ (ಭಾಗಶಃ ದೇವತಾ ಅಥವಾ ಅತಿಮಾನವ), ಮಾನವ, ಪಶು, ಪೈಶಾಚ ಮತ್ತು ದೈತ್ಯ (ನರಕವಾಸಿ) ಎನ್ನುತ್ತದೆ. ಇವುಗಳಲ್ಲಿ ದೇವತಾ, ಗಂಧರ್ವ ಮತ್ತು ಮಾನವ ಆಯಾಮಗಳು ಸುಖದಾಯಿಯಾದರೆ ಪಶು, ಪೈಶಾಚ ಮತ್ತು ದಾನವ ಆಯಾಮಗಳು ಪೀಡಿತ ಅಯಾಮಗಳು ಎನ್ನುತ್ತದೆ. ಮೊದಲನೆಯ ಮೂರು ಆಯಾಮಗಳು ಸುಕರ್ಮಗಳಿಗೆ ಸಿಗುವ ಫಲವಾದರೆ ದುಷ್ಕೃತ್ಯಗಳಿಗೆ ಸಿಗುವ ಫಲ ಪೀಡನಾದಾಯಕ ಆಯಾಮ. ಬುದ್ಧನ ಪ್ರಕಾರ ಆತ್ಮ ಶುದ್ಧಿ, ಯೋಗ ಸಿದ್ಧಿಹೊಂದಿದ ಜೀವಿಗೆ ತನ್ನ ಬುದ್ಧಿ ಅಥವಾ ಜ್ಞಾನವಾಹಕಗಳನ್ನು ನಿಯಂತ್ರಿಸುವ ಅಥವಾ ವರ್ಗಾಯಿಸುವ ಶಕ್ತಿಯಿರುವುದೆಂದೂ, ಅಂತಹ ಜೀವಿ ತನ್ನ ಪುನರ್ಜನ್ಮದಲ್ಲೂ ಪೂರ್ವದ ಎಲ್ಲ ಅರಿವನ್ನು ಉಳ್ಳವರಾಗಿತ್ತಾರೆಂದೂ ಇದು ಕೆಲವರಿಗೆ ಮಾತ್ರ ಸಾಧ್ಯವೆನ್ನಲಾಗಿದೆ.
ಇನ್ನು ವೈಜ್ಞಾನಿಕ ನಿದರ್ಶನಗಳನ್ನು ಪರಿಶೀಲಿಸಿದವರಿಗೂ ಪುನರ್ಜನ್ಮವನ್ನು ಅಲ್ಲಗಳೆಯುವ ಯಾವಿದೇ ತರ್ಕ ಸಿಗದಿದ್ದರೂ ಇದೆಯೆನ್ನಲೂ ಸಾಕಷ್ಟು ಪುರಾವೆಗಳು ಸಿದ್ಧಾಂತಗಳು ಸಿಗುತ್ತಿಲ್ಲ.

ಕೆಲವು ದಾಖಲೆಯಾಗಿರುವ ನಿದರ್ಶನಗಳನ್ನು ಗಮನಿಸೋಣ.
ಅಮೇರಿಕೆಯ ಶ್ರೀಮತಿ ರೂಥ್ ಸಿಮೋನ್ಸ್ ಎನ್ನುವಾಕೆ ತನ್ನ ನೂರು ವರ್ಷಕ್ಕೂ ಹಿಂದಿನ ಐರ್ಲೆಂಡಿನ ಜನ್ಮದ ಬಗ್ಗೆ ನಿಖರ ಮಾಹಿತಿ ನೀಡಿದ್ದಾಳೆ, ಪರಿಶೀಲನೆ ನಂತರ ಈ ಎಲ್ಲ ಮಾಹಿತಿ ಅಕ್ಷರಶಃ ನಿಜವೆಂದು ತಿಳಿದುಬಂತು, ಮತ್ತೂ ಅಚ್ಚರಿಯೆಂದರೆ ಆಕೆ ಯಾವತ್ತೂ ಅಮೇರಿಕಾ ಬಿಟ್ಟು ಬೇರೆ ದೇಶಕ್ಕೆ ಹೋಗೇ ಇಲ್ಲದ್ದು.
ಇನ್ನೂ ಅಶ್ಚರ್ಯದ ನಿದರ್ಶನ ಇಂಗ್ಲೇಂಡಿನ ಶ್ರಿಮತಿ ನಾವೋಮಿ ಎಂಬಾಕೆಯದು. ಈಕೆ ತನ್ನ ಹಿಂದಿನ ಎರಡು ಜನ್ಮಗಳ ವಿವರಗಳನ್ನು ನಿಖರವಾಗಿ ನೀಡಿದ್ದಾಳೆ. ತಾನು ಏಳನೇ ಶತಮಾನದಲ್ಲಿ ಐರಿಶ್ ಮಹಿಳೆಯಾಗಿ ಗ್ರೀಹಾಲ್ಘ್ ಎಂಬ ಹಳ್ಳಿಯಲ್ಲಿ ಜೀವಿಸಿದ್ದಳೆಂದೂ, ತಾನು ೧೯೦೨ ರಲ್ಲಿ ಆಂಗ್ಲ ನರ್ಸ್ ಮಹಿಳೆಯಾಗಿ ಡೌನ್ ಹಾಮ್ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದಳೆಂದು ಹೇಳಿದ್ದಾಳೆ. ಈ ಎರಡೂ ವಿವವರಗಳೂ ನಿಜವಾಗಿದ್ದವು.
ನಮ್ಮಲ್ಲಿಯೇ ಬೆಂಗಳೂರಿನ ನಿಮ್ಹಾನ್ಸ್ (ಮಾನಸಿಕ ಆಸ್ಪತ್ರೆ) ನಲ್ಲಿರುವ ಮನಶಾಸ್ತ್ರಜ್ಞ ಡಾ. ಪಶ್ರೀಚಾ ಸ್ಟಿವನ ಸನ್ರ ಜೊತೆ ಅಧ್ಯಯನ ನಡೆಸಿದ ಮತ್ತು ಪುನರ್ಜನ್ಮವನ್ನು ಪರೀಕ್ಷಿಸಿದವರಲ್ಲಿ ಒಬ್ಬರು. ಅವರೇ ವಿವರಿಸಿರುವ ನಿದರ್ಶನ ಮಹಾರಾಸ್ಟ್ರದ ಉತ್ತರೆ ಎಂಬುವರ ಕುರಿತದ್ದು. ಆಕೆ ಇದ್ದಕ್ಕಿದ್ದಂತೆ ತಮಗೆ ಗೊತ್ತಿರದ ಬಂಗಾಳಿ ಭಜನ್ ಹಾಡಲು ಪ್ರಾರಂಭಿಸಿದ್ದು ಮತ್ತು ೧೧೦ ವರ್ಷಕ್ಕೆ ಹಿಂದೆ ತಾನು ಅಂದಿನ ಬಂಗಾಳದ ಚಟ್ಟೋಪಾದ್ಯಾಯ ಕುಟುಂಬದಲ್ಲಿ ಶಾರದೆಯಾಗಿದ್ದಳೆಂದೂ ಹೇಳಿದ್ದು ಇವು ನಿಜವಾಗಿದ್ದವೆಂದೂ ತಿಳಿಸಿದ್ದಾರೆ.
ಇನ್ನೂ ವಿಸ್ಮಯಕಾರಿ ನಿದರ್ಶನ ಈಗಲೂ ಸೇವೆ ನಿರತ ಭೋಪಾಲಿನ ನವೀನ ಕಾಲೇಜಿನ ಪ್ರಾಂಶುಪಾಲೆ ಡಾ. ಸ್ವರ್ಣಲತಾ ತಿವಾರಿಯವರದ್ದು. ಇವರಿಗೆ ತಮ್ಮ ಮೂರು ಜನ್ಮಗಳ ವಿವರಗಳು ತಿಳಿದಿವೆ..!!!!! ಈ ನಿದರ್ಶನ ಪ್ರಪಂಚದ ಏಳು ಅಧ್ಯಯನಾಧೀನ ನಿದರ್ಶನಗಳಲ್ಲಿ ಒಂದಾಗಿದೆ.
ಮೊದಲಿಗೆ ಆಕೆ ಮಧ್ಯಪ್ರದೇಶದ ಕತ್ನಿ ಎಂಬಲ್ಲಿ ನದಿಯೊಂದನ್ನು ದಾಟುವಾಗ ಒಮ್ಮೆಗೇ ನೆನಪಾದ ಪುನರ್ಜನ್ಮ ಆಗ ಆಕೆಗೆ ನಾಲ್ಕು ವರ್ಷ ವಯಸ್ಸು.. ಆಕೆ ತಾನು ಬಿಯಾ ಪಾಥಕ್ ಎಂದು ಹೇಳಿ ತಂದೆ ತಾಯಿಯರಲ್ಲಿ ಆತಂಕಕ್ಕೆ ಎಡೆಮಾಡಿ ಅವರು ಮನಶಾಸ್ತ್ರಜ್ಞರನ್ನು ಕಂಡು ತಮ್ಮ ಮಗಳಬಗ್ಗೆ ವಿಚಾರಿಸಿದಾಗ ಆಕೆ..ಪೂರ್ಣ ಆರೋಗ್ಯವಂತಳೆಂದೂ ಅವಳಿಗೆ ಪುನರ್ಜನ್ಮದ ನೆನಪು ಬಂದಿದೆಯೆಂದೂ ...ಹೇಳಿದರು.. ವಿಚಾರಿಸಿದಾಗ ಬಿಯಾ ಪಾಥಕ್ ಎಂಬಾಕೆ ಸತ್ತ ಒಂಭತ್ತು ವರ್ಷಗಳ ನಂತರ (೧೯೪೮) ಸ್ವರ್ಣಲತಾ ಹುಟ್ಟಿದೆಂದೂ ತಿಳಿದು ಬಂತು. ಬಿಯಾ ಪಾಥಕ್ ಸತ್ತು ಅಸ್ಸಾಂ ನಲ್ಲಿ ಸಿಲಹಟ್ ಎಂಬಲ್ಲಿ ೧೯೪೦ ರಲ್ಲಿ ಕಮಲೆಶ್ ಎಂಬ ಹೆಣ್ಣುಮಗಳಾಗಿ ಜನಿಸಿ ೧೯೪೭ ರಲ್ಲಿ ಹೃದಯಾಘಾತದಿಂದ ಸತ್ತಳೆಂದೂ ತಿಳಿಯಿತು.
ಮೂರು ಜನ್ಮ- ಈಗಿನ- ಸ್ವರ್ಣಲತಾ (ಹುಟ್ಟಿದ್ದು ೧೯೪೮)
ಅದಕ್ಕೂ ಹಿಂದೆ ಕಮಲೆಶ್ ಅಸ್ಸಾಂ ನಲ್ಲಿ (ಹುಟ್ಟಿದ್ದು ೧೯೪೦ ಸತ್ತದ್ದು ೧೯೪೭)
ಅದಕ್ಕೂ ಹಿಂದೆ ಬಿಯಾ ಪಾಥಕ್ ಆಗಿ ಕತ್ನಿ, ಮಧ್ಯಪ್ರದೇಶದಲ್ಲಿ (ಸತ್ತದ್ದು ೧೯೩೯)
ಸ್ವರ್ಣಲತಾರ ವಿವರಗಳನ್ನು ಸ್ಟಿವನಸನ್ ಪರಿಶೀಲಿಸಿ ಎಲ್ಲಾ ಸತ್ಯವೆಂದು ಕಂಡುಕೊಂಡಿದ್ದಾರೆ...!!!

ಈ ಎಲ್ಲ ವಿಷಯಗಳನ್ನು ಎಷ್ಟು ಆಸಕ್ತಿ, ಕೌತುಕತೆಯಿಂದ ನೀವು ಓದುವಿರೋ ತಿಳಿಯದು,,,ನನಗಂತೂ ಈ ಲೇಖನವನ್ನು ಮುಗಿಸುವ ವೇಳೆಗೆ ನನ್ನದೂ ಯಾವುದಾದರೂ ಪುನರ್ಜನ್ಮವೇ ??? ಎನಿಸಲಾರಂಭಿಸಿದೆ..!!!! ಹಹಹ
(ನಿಮಗೆ ಆಶ್ಚರ್ಯ ಎನಿಸಬಹುದು..ಈ ಲೇಖನ ಒಂದೇ ಉಸಿರಿನಲ್ಲಿ...ಮೂರು ತಾಸು..ಮಾಹಿತಿ ಸಂಗ್ರಹಿಸಿ ಬರೆದದ್ದು..ಪ್ರಾರಂಭ ರಾತ್ರಿ ೧೦ಕ್ಕೆ ಮುಕ್ತಾಯ ೧೨.೫೫ಕ್ಕೆ..!!!)
I am thankful to Uday for a correction, also request you to forward this many of your friends for feedback.

Friday, September 18, 2009

ಸೋರುತಿಹುದು ಮನೆಯ ಮಾಳಿಗೆ.....ದಾರುಗಟ್ಟಿ ಮಾಳ್ಪರಿಲ್ಲ


All hopes lost, search for drowned Bangalore boy called off

1 post - 1 author - Last post: 17 hours agoThe entire episode has brought to light the callous attitude of Bangalore's civic authorities in failing to fence the open storm water ...www.thaindian.com/.../all-hopes-lost-search-for-drowned-bangalore-boy-called-off_100249261.html - 17 hours ago - Similar -
All hopes lost, search for drowned Bangalore boy called off ...

18 Sep 2009 ... Bangalore, Sep 18 (IANS) The search operation to find the body of ... Vijay is the second boy to die in the last few months after falling in a drain. ... in failing to fence the open storm water drains that dot the city. ...www.sindhtoday.net/news/1/51635.htm - 17 hours ago - Similar -
All hopes lost, search for drowned Bangalore boy called off
ಸೋರುತಿಹುದು ಮನೆಯ ಮಾಳಿಗೆ.....ದಾರುಗಟ್ಟಿ ಮಾಳ್ಪರಿಲ್ಲ
ಎಲ್ಲಿದೆ ವ್ಯವಸ್ಥೆ? ಯಾರು ಹೊಣೆ? ಮತ ಹಾಕಿ ಮತು ಕೆಡಿಸಿಕೊಳ್ಳಬೇಕೆ? ಯಾಕಂದ್ರೆ ಮತ ಹಾಕದವರಿಗೆ ಇದು ಅರಿವಾಗದು..ಎತ್ತರದ ಮಹಡಿಗಳಲ್ಲೋ..ವಿಪತ್ತುಗಳೆಂದರೇನೆಂಬ ಅರಿವೇ ಇಲ್ಲದೆ ಬೆಳೆವಲ್ಲೋ ಇರುತ್ತಾರೆ..ಬಡವ ಮತವನ್ನು ತನ್ನ ಹೊಟ್ತೆಗೆ ಹಾಕುವ ಅನ್ನವೆನ್ನುವಷ್ಟರ ಮಟ್ಟಿಗೆ ನಿಯ್ಯತ್ತಿನಿಂದ ಹಾಕಿ --ಈ ಪಾಡು ಪಡುತ್ತಾನೆ......
ಹೌದು ಸ್ವಾಮಿ...ಮನಸ್ಸು ಅತ್ತು ಅತ್ತು ಹರಿದು ಹಂಚಿಹೋಗಿರುವ ದುಃಖ ತಪ್ತ ಲಕ್ಷ್ಮಮ್ಮ ಮತ್ತು ವರದರಾಜು ದಂಪತಿಗಳನ್ನು ಕೇಳಿ...ಕೇವಲ ಹದಿನೆಂಟು ತಿಂಗಳ ಕರುಳ ಕುಡಿ ನೀರಿನಲ್ಲಿ ಕೊಚ್ಚಿಹೋಗಿ ಇಂದಿಗೆ ಮೂರು ದಿನ...ಬದುಕಿರುತ್ತಾನೆಂಬ ಭ್ರಮೆಯೂ ಈಗ ಬತ್ತಿಹೋಗಿದೆ...ಇನ್ನು ದೇಹ ಸಿಕ್ಕರೂ..ಅದನ್ನು ನೋಡುವ ಮನೋಸ್ಥೈರ್ಯ ಅವರಿಗಿರಲಾರದು..ತಾಯಿ ಕರಳು ಇಂಚಿಂಚೂ ಕತ್ತರಿಗೆ ಸಿಕ್ಕಂತೆ..ರಕ್ತ ಸಿಕ್ತವಾಗಿದ್ದರೂ ಅತಿಶ್ಯೋಕ್ತಿ ಅಲ್ಲ...(ಈ ಬ್ಲಾಗ್ ಬರಿಯುವಾಗ ದೂರದ ಕುವೈತಿನಲ್ಲಿರುವ ನನ್ನ ಕಣ್ಣಲ್ಲಿ ನೀರು ಹನಿಯಾಗುವುದನ್ನು ನಾನು ತಡೆಯಲಾಗಲಿಲ್ಲ..ಇನ್ನು ಆ ತಂದೆ ತಾಯಿಯ ಪಾಡೇನು..?? ದೇವರೇ..ಆ ದಂಪತಿಗಳಿಗೆ..ದುಃಖ ತಡೆಯುವ ಶಕ್ತಿ ಕೊಡು...).
ನಮ್ಮ ಸರ್ಕಾರ ನಿದ್ರಿಸುತ್ತಿದೆಯೇ?? ನಮ್ಮ ಬೊಬ್ಬಿರಿಸಿ ಬೊಬ್ಬಿಡುವ (ಬಾಡೂಟದ ಬೊಂಬಾಯಿಗಳು) ಮಹಾನಗರ ಪಾಲಿಕೆಯ ಮಹಾ ವೈಫಲ್ಯಗಳಿಗೆ...ಏನು ಹೇಳ ಬೇಕು. ಪ್ರತಿಷ್ಟೆಯನ್ನೇ ಬಂಡವಾಳವೆನ್ನುವ ಸರ್ಕಾರ ಅತಂತ್ರದ ಆಡಳಿತವಿರುವ ಬಿ.ಬಿ.ಎಂ.ಪಿ. ಚುನಾವಣೆಗಳನ್ನು ಮುಂದೂಡುತ್ತಲೇ ಇದೆ...ಗೊತ್ತು ಗುರಿಯಿಲ್ಲದ ಮ.ನ.ಪಾ. ಕೆಯ ಅಧಿಕಾರಿಗಳು ತಮ್ಮನ್ನಾಳುವ ಭಾವೀ ಕಾರ್ಪೊರೇಟರುಗಳ ಜೀ-ಹುಜೂರಿಯಲ್ಲಿರುವಾಗ ಎಳೆ ಕಂದಮ್ಮಗಳ ಆರ್ತ ನಾದ ಎಲ್ಲಿ ಕೇಳಿಸುತ್ತೆ???
ಹೋಗಲಿ..ಬಿಡಿ..ಏನೋ ಆಯಿತು ಎನ್ನಲು ಹೊಸದಲ್ಲವಲ್ಲಾ..ಇದು.. ಈಗ ೧೯ ತಿಂಗಳ ಹಸುಗೂಸು ವಿಜಯ ಯಮಕೂಪದಂತೆ ಬಾಯ್ದೆರೆದು ಗುಮ್ಮನಂತಿರುವ ಚರಂಡೀ ಡ್ರೌನ್ ಮ್ಯಾನ್ ಹೋಲುಗಳ ಬಲಿಯಾದ ಮೂರೇ ತಿಂಗಳಿಗೆ ಮುಂಚೆ ಆರು ವರ್ಷದ ಅವಿನಾಶ್ ಎಂಬ ಇನ್ನೊಂದು ಕಂದಮ್ಮ ಬಲಿಯಾಗಿದ್ದು ನೆನಪಿಂದ ಮಾಸೇ ಇಲ್ಲ ಅಷ್ಟರಲ್ಲೇ ಈ ಅವಘಡ. ಪ್ರಕಾಶ್ ಮತ್ತು ಭಾರತೀದೇವಿಯರ ಏಕಮಾತ್ರ ಪುತ್ರನನ್ನು ನುಂಗಿ ನೀರ್ಕುಡಿದ ಈ ವ್ಯವಸ್ಥೆಯನ್ನು ಸರಿಪಡಿಸುವ ಆಶ್ವಾಸನೆಗಳ ಸುರಿಮಳೆಯೇ ಆಯಿತು. ಅಷ್ಟೇ ಏಕೆ ಇದಕ್ಕೆ ಐದು ದಿನ ಮುಂಚೆ ಅರವತ್ತರ ಇಳಿವಯಸ್ಸಿನ ಹಿರಿಯರೊಬ್ಬರು ತಮ್ಮ ಸ್ಕೂಟರ್ ಸಮೇತ ಇಂತಹುದೇ ಕೂಪದೊಳಕ್ಕೆ ಬಿದ್ದು ಸತ್ತದ್ದು ನೆನೆಪಿಲ್ಲವೇ? ಇನ್ನು ನೀರಾವರಿ ಬೋರ್-ಬಾವಿಗಳ ಕಥೆಯೂ ಒಂದು ದುರಂತವೇ..ಆಟವಾಡುವ ಕಂದಮ್ಮಗಳು ಬಲಿಯಾಗಿವೆ. ಏಕೆ ಈ ಪರಿ ನೀರವ ಮೌನ ಅಧಿಕಾರಿಗಳಿಂದ..?? ನಮ್ಮ ಶ್ರೇಯೋಭಿಲಾಷೆಯೇ ತನ್ನ ಜೀವಾಳ ಎನ್ನುವ ಸರ್ಕಾರದಿಂದ...???!! ಇನ್ನೂ ಎಷ್ಟು ಬಲಿ ಬೇಕು ಇವರಿಗೆ??
ಅಲ್ಲಿ ನಾಡಿನಲ್ಲಿರುವ ನಮ್ಮವರು ಎಚ್ಚೆತ್ತುಕೊಳ್ಳಬೇಕು...ಬಡಿದೆಬ್ಬಿಸಬೇಕು..ವ್ಯವಸ್ಥೆಯನ್ನು...ಆದರೆ ಕಣ್ತೆರೆದು ನಿದ್ರಿಸುವವರನ್ನು ಹೇಗೆ ತಾನೆ ಎಚ್ಚರಿಸುವುದು..ಹೇಗೆ..ಹೇಗೆ..ಹೇಗೆ..ತಿಳಿಸುವುದು ಇವರಿಗೆ...ನಮ್ಮ ಮಗುವೂ ಮಗುವೇ..ನಮ್ಮ ಕನಸುಗಳೂ ನಿಮ್ಮ ಕನಸುಗಳಂತೆಯೇ..ಎಂದು.????

Friday, September 4, 2009

ಕವಿತೆಯೆಂದರೇನು?

ಕವಿತೆ,
ಕೆಲವು ಪದಗಳ ಸಾಲೇ?
ಸಾಲಿನ ಕೊನೆಯ ಪ್ರಾಸವೇ?
ಪ್ರಾಸದೊಳಗಿನ ಭಾವವೇ?
ಭಾವದೊಳಗಿನ ಕಲ್ಪನೆಯೇ?
ಕಲ್ಪನೆಗೊಂದು ಚಿಂತನೆಯೇ?
ಚಿಂತನದೊಳಿಹ ವಿಷಯವೇ?
ವಿಷಯದ ಹಿಂದಿನ ಘಟನೆಯೇ?
ಘಟನೆಗೊಂದು ತರ್ಕವೇ?
ತರ್ಕಕ್ಕೆ ನಿಲುಕದ ಸತ್ಯವೇ?
ಸತ್ಯದೊಳಗಿನ ಸೌಂದರ್ಯವೇ?
ಸೌಂದರ್ಯವೆಂಬ ಕನಸೇ?
ಕನಸಿಂದ ದೊರೆತ ಸ್ಪೂರ್ತಿಯೇ?
ಸ್ಪೂರ್ತಿಯಿಂದ ಹುಟ್ಟಿದ ಪದಗಳೇ?
ಪದಗಳ ಅಂತರಾಳವೇ?
ಅಂತರಾಳದಲ್ಲಡಿಗಿದ ದುಗುಡ ದುಮ್ಮಾನವೇ?
ಮಾನಕಂಜಿದ ಸಮ್ಮಾನವೇ?
ಸಮ್ಮಾನ ಗಿಟ್ಟಿಸಿಸಿದ ವಿಪರ್ಯಾಸವೇ?
ವಿಪರ್ಯಾಸ ತರಿಸಿದ ಪರ್ಯಾಯವೇ?
ಪರ್ಯಾಯ ಹೇಳಲಿಚ್ಛಿಸಿದ್ದೇ?
ಹೇಳಲಿಚ್ಛಿಸುದೇ ಬರೆದುದೇ?
ಬರೆದುದೇ ಒಂದು ಕವಿತೆಯೇ?
ಕವಿತೆಯೆಂದರೇನು? ???

ಕವಿತೆ
ಕವಿತೆ ಕವಿ
ತಾ ತೆರೆದ ಮನ
ವಿ (ಆ)ಷಯ ಕ್ಷಣ
ಕ್ಷಣ ತುಡಿತದ
ಭಾಷೆ ಸುರುಳಿ
ಬಿಚ್ಚಿಡುವ ಸರಪಳಿ
ಅನಿಸಿದ್ದು ಬರೆ
ಬರೆದದ್ದು ತೆರೆ
ತೆರೆವವನದೊಂದು ಪರಿ
ಹೆಪ್ಪುಗಟ್ಟಿದ ಭಾವ
ಮಂಥಿಸಲು ಕವನ
ಬಿಂಬಿಸಲು ಕಥನ
ಮನತುಂಬಿ
ಹೊನಲು ಗೀತೆ
ಮನಸೀಳಿ ಲೇಖಾಂಕವಿತೆ

ಅವನು-ಅವಳು
ಅವನು ಕಥೆ-
ರಸ-ನೀರಸ
ಏಳು-ಬೀಳು
ಪುಟಗಟ್ಟಲೆ ಗೋಳು
ಅಲ್ಲೊಂದು
ಇಲ್ಲೊಂದು
ರಸಿಕತೆಯ ಓಳು
ಕೊನೆಗೊಂದೇ
ಉಳಿದದ್ದು ಹೇಳೋಕೆ
ಯಾಕದ್ರೂ ಬೇಕು
ಬಾಳಬೇಕು ಈ ಬಾಳು?

ಅವಳು ಕವಿತೆ-
ಸುಂದರ ಸವಿತೆ
ಬಲು ಆಕರ್ಷಿತೆ
ಪುಟವೆಲ್ಲಿ..ಪದಗಳು?
ಕಣ್ಣಲ್ಲೇ ನುಡಿಗಳು
ತುಟಿ ಬರೆವ ಸಾಲುಗಳು
ನಕ್ಕರೆ ಉದುರುವ
ಬಹುಮೂಲ್ಯ ಮುತ್ತುಗಳು
ಲತಾಂಗಿ, ಸುಕೋಮಲೆ
ಬಿಂಬವೊಂದೇ..
ಸಾವಿರ ಕನಸಲೂ
ಅದಕೇ ಇವಳು
ನಡೆದಾಡುವ
ಜೀವಂತ ಕವಿತೆ.

ದಾಂಪತ್ಯ
ಅವಳಜೊತೆ ಅವನು
ಬೆಸೆದ ಸಾಂಗತ್ಯ
ಕಥೆಯಲ್ಲಿ ಬೆರೆತ ಕವಿತೆ
ಒಂದು ವಾಸ್ತವದ ಭಾಷೆ
ಮತ್ತೊಂದು ಬಾಳರಸ
ಹಿಂಗಿಸಲು ತೃಷೆ
ಮಹಾಕಾವ್ಯದ ರಚನೆಗೆ
ಇಬ್ಬರೂ ಸಮ, ಹೇಳಲಾದೀತೆ?
ಇದು ಕಥನ ಇದೇ ಕವಿತೆ?

Saturday, August 29, 2009

ಕ್ಲಿಪ್ಪಿಂಗ್ ಪೂರಕ ಪೋಸ್ಟ್

ಸುನಾಥ್ ಸರ್ ರವರ ಕ್ಲಿಪ್ ಗೆ ಪ್ರತಿಕ್ರಿಯೆ ನನ್ನ ಈ ಪೂರಕ ಪೋಸ್ಟ್ ಗೆ ಕಾರಣ.
ಮನಸ್ಸಿನ, ಮಿದುಳಿನ ಮತ್ತು ಆರೋಗ್ಯದ ಅಗೋಚರ ಸಂಬಂಧಗಳನ್ನು ಹಲವರು ನಂಬುವುದಿಲ್ಲ. ಅಂತಹವರಿಗೆ ನನ್ನ ನೇರ ಪ್ರಶ್ನೆ...ಹುಚ್ಚು ಏಕೆ ಹಿಡಿಯುತ್ತೆ?? ಇದು ಕೇವಲ ಮನಸ್ಸು, ಮಿದುಳಿಗೆ ಸಂಬಂಧಿಸಿದ್ದು ಅದೇ ರೋಗ ಎನ್ನುತ್ತೇವೆ ನಾವು...ಈ ಕ್ಲಿಪ್ಪಿಂಗ್ ನಲ್ಲಿ ಹೇಳಿದಂತಹ ಪ್ರೋಟಿನ್ ಪೆಪ್ಟೈಡುಗಳು ನೇರ ಪ್ರಭಾವ ಬೀರುವ ಖಾಯಿಲೆ ಇದು. ದುಃಖವಾದಾಗ ಕಣ್ಣೀರೇಕೆ? ಇನ್ನೊಂದು ಪ್ರಶ್ನೆ? ಇಲ್ಲಿಯೂ ಭಾವನೆ (ಮನಸು) ಸ್ರಾವಕ ಪ್ರೋಟಿನುಗಳ ಮೂಲಕ ಮಿದುಳಿಗೆ ಸಂದೇಶ ತಲುಪಿಸಿ ಕಣ್ಣಿರನ್ನು ಸುರಿಸುವಂತೆ ಮಾಡುತ್ತದೆ. ಆದ್ದರಿಂದ ಸುಖೀ ಮನಸು, ಆಹ್ಲಾದಕತೆ ಲಾಭಕರ ಪ್ರೋಟೀನುಗಳನ್ನು ಉತ್ಪಾದಿಸಬಹುದಲ್ಲ .? ಇವು ರೋಗ ಕಾರಕಗಳನ್ನು ತಡೆಯಬಹುದಲ್ಲ...?? ಇದೇ ವಿಷಯವನ್ನು ಈ ವೀಡಿಯೋದಲ್ಲಿ ಪ್ರತಿಪಾದಿಸಲಾಗಿದೆ. ಎಲ್ಲದಕ್ಕೂ ಸಮತೋಲನಾಸ್ಥಿತಿ ಎಂಬುದು ನಿರ್ಣಾಯಕ. ಅತೀ ಮಾರಕಗಳು ಈ ಸಮತೋಲನಾಸ್ಥಿತಿಯ ರೇಖೆಗಿಂತ ಮೀರಿ ಪ್ರಭಾವ ಬೀರುವುದರಿಂದ ಶಿಘ್ರ ನಷ್ಟಕ್ಕೆ ಕಾರಣವಾಗುತ್ತವೆ. ರೋಗಕಾರಕಗಳ ಪ್ರಭಾವ ಈ ದೇಹ ಸಮತೋಲನಾಸ್ಥಿತಿ ರೇಖೆಯನ್ನು ದಾಟಿದಾಗಲೇ ರೋಗ ತಲೆದೋರುವುದು. ಆರೋಗ್ಯ ಸಮತೋಲನಾ ಮಟ್ಟ ಪ್ರತಿಜೀವಿಯಲ್ಲೂ ಒಂದೊಂದು ಮಟ್ಟದ್ದಾಗಿರುತ್ತೆ, ಇದಕ್ಕೆ ಕೆಲವು ವಿಷಯಗಳು ಪೂರಕ ಶಕ್ತಿ ಕೊಟ್ಟರೆ ಮತ್ತೆ ಕೆಲವು ವಿರುದ್ಧವಾಗಿ ಆ ಮಟ್ಟವನ್ನು ಕ್ಷೀಣಗೊಳಿಸಿ ದೇಹ ರೋಗಕ್ಕೆ ಸುಲಭದ ತುತ್ತಾಗುವಂತೆ ಮಾಡುತ್ತವೆ. ಪ್ರತಿ ರೋಗದ ನಿರ್ವಹಣೆಯಲ್ಲಿ ಇದೇ ಅಂಶಗಳನ್ನು ಪರಿಗಣಿಸಲಾಗುತ್ತದೆ. ಉತ್ತಮ ಆಹಾರ, ಶುದ್ಧ ಪರಿಸರ, ಉತ್ತಮ ಆಚಾರ ಮತ್ತು ಆಹ್ಲಾದಕರ ಮನಸ್ಥಿತಿ ಎಲ್ಲವೂ ದೇಹಾರೋಗ್ಯ ಸಮತೋಲನಾ ಸ್ಥಿತಿಯನ್ನು ಉನ್ನತ ಮಟ್ಟಕೇರಿಸಿ ರೋಗಕಾರಕಗಳು ಬಹುಶ್ರಮ ಪಡುವಂತೆ ಮಾಡುವುದಲ್ಲದೇ ರೋಗತಲೆದೋರುವಿಕೆಗೆ ವಿಳಂಬವನ್ನುಂಟು ಮಾಡುತ್ತವೆ. ಈ ಹೆಚ್ಚಿದ ಸಮಯಾವಕಾಶದಲ್ಲಿ ದೇಹ ತನ್ನ ನಿರ್ದಿಷ್ಟ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ ಹೀಗಾಗಿ ರೋಗವನ್ನು ತಡೆಯಲಾಗುತ್ತದೆ.

Friday, August 28, 2009

ಬ್ಲಾಗು-ಬಳಗಕ್ಕೆ, ಸ್ವೈನ್-ಫ್ಲೂ ಕ್ಲಿಪ್ಪಿಂಗ್

ಇದು ಒಂದು ಮಾಹಿತಿಯ ಕ್ಲಿಪ್ಪಿಂಗ್ ನೋಡಿ ನಿಮ್ಮ ಪ್ರತಿಕ್ರಿಯೆ ನೀಡಿ.

Friday, August 21, 2009

ಹಂದಿ ಜ್ವರ ಪೂರಕ ಪೋಸ್ಟ್

ಶಿವು ಬೆಂಗಳೂರಿಗೆ ಬಂದೂ ನಿಮ್ಮನ್ನು ಭೇಟಿಯಾಗಲಾಗಲಿಲ್ಲ ಆದರೆ ಹಂದಿ ಜ್ವರದ ಉಗಮ ಕಂಡೆ ಅಲ್ಲಿ. ಮೊದಲ ಬಲಿ lady teacher ಗೆ ವೈದ್ಯಕೀಯ ಸೂಕ್ತ ಚಿಕಿತ್ಸೆ ಸಿಕ್ಕಿದ್ದು ತಡವಾಯ್ತು ಎಂದೇ ನನ್ನ ಅನಿಸಿಕೆ, ಇಲ್ಲಿ ಇನ್ನೊಂದು ಅಂಶ ಹಂದಿ ಜ್ವರ ಒಂದೇ ಇದ್ದಲ್ಲಿ ಮಾರಣಾಂತಕವಾಗುವ ಸಾಧ್ಯತೆ ಕಡಿಮೆ ಅದರ ಜೊತೆಗೇ ಸೋಂಕುವ ಇತರೆ ರೋಗಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು (ರೋನಿಶ) ಹಂಚಿಬಿಟ್ಟು ಹಂದಿ ಜ್ವರ ವೈರಸ್ ನತ್ತ ನಿರೋಧಕತೆ ಕ್ಷೀಣವಾಗಿ ಮರಣ ಅನಿವಾರ್ಯವಾಗುತ್ತದೆ. ಅದಕ್ಕೇ ಹಂದಿಜ್ವರದ ತಡೆಗೆ ಉತ್ತಮ ಆಹಾರ ವಿಟಮಿನ್ ಸಿ ಅಧಿಕ ಸೇವನೆ (ಮೆಗಾ ಡೋಸ್ ಎನ್ನುತ್ತಾರೆ) ಮತ್ತು ಹೆಚ್ಚು ನೀರಿನ ಸೇವನೆ ಬಹು ಸಹಾಯಕ. ರೋಗ ನಿರೋಧಕಗುಣ ಗುಣ ಮತ್ತು ಸಾಮಾನ್ಯ ಸೋಂಕುಗಳನ್ನು ವಿರೋಧಿಸುವ ಮೂಲಗಳ ಉದ್ದೀಪನೆಗೆ ಸಹಾಯವಾಗುತ್ತೆ. ವೈರಸ್ ನಂದಿಸುವ ಔಷಧಿ ತಾಮಿಫ್ಲೂ ಹಂದಿ ಜ್ವರ ಬಳಲಿತರಿಗೆ ಎಷ್ಟು ಬೇಗ ಕೊಟ್ಟರೆ ಅಷ್ಟೇ ಬೇಗ ನಮ್ಮ ರೋನಿಶ ದ ಹಂಚುವಿಕೆ ನಿಲ್ಲುತ್ತೆ ಮತ್ತು ಈರೋಗ (ಇತರ ರೋಗಗಳ ವಿಷಯದಲ್ಲೂ) ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಈ ಪ್ರಶ್ನೆ ನನಗೆ ನನ್ನ ಬ್ಲಾಗ್ ಪೋಸ್ಟ್ ಗೆ ಪೂರಕ ಪೋಸ್ಟ್ ಹಾಕುವಂತೆ ಮಾಡಿದೆ. ನನ್ನ ಈ ಲೇಖನ ಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಿದರೆ ಧನ್ಯ.

ಹಂದಿಜ್ವರ- ಮಂದಿಗ್ಯಾಕೆ...?? ಭೇತಾಳ ಉವಾಚ

ಶತ ವಿಕ್ರಮನ ವಿಕ್ರಮಗಳು ಏಕೋ ..ಸ್ವಲ್ಪ ಢೀಲಾಗಿವೆ ಎನಿಸುವಾಗಲೇ ಹಂದಿಜ್ವರ ಎಂಬ ಭೇತಾಳ ಆಡಳಿತಾರೂಢರ ಬೆನ್ನು ಹತ್ತಿರುವುದು ಶತ ವಿಕ್ರಮ ಚುರುಕಾಗಲು ಕಾರಣವಾಗಿರಬಹುದು. ಅದಕ್ಕೋ ಏನೋ...ಗಂಭೀರ ಮತ್ತು ಸಿಟ್ಟಿನ ಮುಖಭಾವಹೊತ್ತ ಶತವಿಕ್ರಮ ನಿಮ್ಹಾನ್ಸ್ ನ ಹೊರ ವಲಯದ ಬೋಗನ್-ವಿಲ್ಲ ಕ್ಕೆ ನೇತುಬಿದ್ದು ತನ್ನ ಹತ್ತಿರ ಮೂಗಿಗೆ ಬಟ್ಟೆ, ಮುಸುಕು, ಮಾಸ್ಕ್, ಟಿಸ್ಯು ಪೇಪರ್ ಹೀಗೆ ಯಾವುದೋ ಒಂದನ್ನು ಅಡ್ಡವಿಟ್ಟು ಬರುವವರ ನಿರೀಕ್ಷೆಯಲ್ಲಿದ್ದ ಎಚ್-೧-ಎನ್-೧ ಭೇತಾಳನನ್ನು ಜಗ್ಗದೇ ಹೆದರದೇ, ಮೂಗಿಗೆ ಕೈಯನ್ನು ಅಡ್ಡವಿಟ್ಟುಕೊಳ್ಳದೇ ಬಂದು ಎತ್ತಿ ಹೆಗಲಿಗೇರಿಸಿ ರಸ್ತೆಯ ಸಿಗ್ನಲ್ ಅನ್ನೂ ಗಮನಿಸಿದೇ ಹೊರಡುವ ಆಂಬುಲೆನ್ಸ್ ವ್ಯಾನಿನಂತೆ ವಿಲ್ಸನ್ ಗಾರ್ಡನ್ ನ ವಿದ್ಯುತ್ ಚಿತಾಗಾರದತ್ತ ಹೊರಟನು. ಎಚ್-೧ಎನ್-೧ ಮಾತನಾಡತೊಡಗಿತು.


“ನಾನು ಎಂತಹ ವಿಷಾಣು ಎಂದು ತಿಳಿದಿದ್ದರೂ.. ನಿನ್ನದು ಸಾಹಸ ಎನ್ನಲೋ? ಶುದ್ಧ ಮೊಂಡುತನ ಎನ್ನಲೋ?? ಅರ್ಥವಾಗುತ್ತಿಲ್ಲ. ಆದರೂ ನಿನ್ನ ಈ ಧೈರ್ಯವನ್ನು ಮೆಚ್ಚದೇ ಇರಲಾರೆ. ನಿನ್ನಷ್ಟೇ ನಿಷ್ಠೆ..ಏಕಾಗ್ರತೆ..ಸಾಧಿಸಿ ತೋರುವ ಛಲ ನಮ್ಮ ಆಡಳಿತಾರೂಢರಲ್ಲಿದ್ದಿದ್ದರೆ ನಾನು ಮಹಾ ಮಾರಿ ಆಗೋ ಲಕ್ಷಣ ತೋರ್ತಾ ಇರ್ಲಿಲ್ಲ. ನಿಜಕ್ಕೂ ನಿನ್ನ ಪ್ರಯತ್ನ ಅಭಿನಂದನಾರ್ಹ. ನಿನ್ನ ಈ ಪ್ರಯತ್ನಕ್ಕೆ ಸರ್ಕಾರದ ಜೊತೆ ಅನಿವಾರ್ಯ, ಸದ್ಯಕ್ಕೆ ಸರ್ಕಾರಕ್ಕೆ ಉಪಚುನಾವಣೆ ಮುಖ್ಯ.. ಅದೇನೇ ಇರಲಿ, ನಿನ್ನ ವ್ಯರ್ಥ ಪ್ರಯತ್ನದ ಹಾದಿಯ ಶ್ರಮದ ಅರಿವಾಗದಂತೆ ನನ್ನ ಜಾತಿಯ ಕಥೆಯನ್ನು ಹೇಳುತ್ತೇನೆ ಕೇಳು” ಎಂದು ತನ್ನ ಕಥೆಯನ್ನು ಹೇಳಲಾರಂಭಿಸಿತು.


ನನ್ನ ಮೂಲ -ಫ್ಲೂ ಕಾರಕ ಅತಿಸೂಕ್ಷ್ಮಜೀವಾಣು (ವೈರಸ್). ಇವು ಬ್ಯಾಕ್ಟೀರಿಯಾಗಿಂತ (ಎರಡು ಮೈಕ್ರಾನ್ ಗಿಂತ ಅಂದರೆ ೦.೦೦೨ ಮಿ.ಮೀಗಿಂತ) ಚಿಕ್ಕವು. ಅತಿಸೂಕ್ಷ್ಮಾಣು ಜೀವಿಗಳಲ್ಲಿ ಎರಡು ವಿಧ - ಡಿ.ಎನ್.ಎ. ವೈರಸ್ ಮತ್ತು ಆರ್.ಎನ್.ಎ. ವೈರಸ್. ವೈರಸ್ ತನ್ನ ವಂಶಾಭಿವೃದ್ಧಿಗೆ ಮತ್ತೊಂದು ಜೀವಕೋಶವನ್ನು ಅವಲಂಬಿಸುತ್ತವೆ. ಡಿ.ಎನ್.ಎ. ವೈರಸ್ ತನ್ನ ವಂಶಾಭಿವೃದ್ಧಿಗೆ ಬೇಕಾದ ಎಲ್ಲ ಮಾಹಿತಿಯನ್ನುಳ್ಳ ಡಿ.ಎನ್.ಎ. ಎಂಬ ರಾಸಾಯನಿಕ ತತ್ವವನ್ನು ಆಶ್ರಯದಾತ ಜೀವಕೋಶದಲ್ಲಿ (ಆಜೀಕೋ) ಅಳವಡಿಸಿ ತನ್ನ ಪೂರ್ಣ ರೂಪಕ್ಕೆ ಅವಶ್ಯವಾದ ಪ್ರೋಟೀನುಗಳನ್ನು ಆಜೀಕೋ ಉತ್ಪಾದಿಸುವಂತೆ ಮಾಡಿ ಪೂರ್ಣಗೊಂಡು ಆಜೀಕೋ ದಿಂದ ಹೊರಬರುತ್ತದೆ, ಇನ್ನೊಂದು ಆಜೀಕೋ ಮತ್ತೊಂದು ಹೀಗೆಯೇ ಆ ಜೀವಿಯಿಂದ ಮತ್ತೊಂದು ಜೀವಿ ಹೀಗೆ ಹರಡುತ್ತದೆ. ಈ ಪ್ರಕ್ರಿಯೆಯಲ್ಲಿ ಆಜೀಕೋ ಗೆ ಅಥವಾ ಅದನ್ನು ಹೊಂದಿದ ಜೀವಿಯ ಅಸಹನೆ, ಅನಾರೋಗ್ಯ ಕೊನೆಗೆ ಅವಸಾನಕ್ಕೆ ಕಾರಣವಾಗುತ್ತದೆ. ಇನ್ನು ಆರ್.ಎನ್.ಎ. ವೈರಸ್ ಗಳು ಮೊದಲಿಗೆ ಡಿ.ಎನ್.ಎ. ಆಗಿ ರೂಪಾಂತರಗೊಂಡು ನಂತರ ತನ್ನ ವಂಶಾಭಿವೃದ್ಧಿಯನ್ನು ಮುಂದುವರೆಸುತ್ತದೆ. ಆರ್.ಎನ್.ಎ ವೈರಸ್ ನ ರೂಪಾಂತರದ ಸಮಯದಲ್ಲಿ ಆಗುವ ಕೆಲವು ಸ್ವಾಭಾವಿಕ ತಪ್ಪುಗಳು ಹೊಸ ಆರ್.ಎನ್.ಎ. ವೈರಸ್ ನ ಹುಟ್ಟಿಗೆ ಕಾರಣವಾಗಬಹುದು. ಫ್ಲೂ ಕಾರಕ ವೈರಸ್ ಗಳು ಆರ್.ಎನ್.ಎ ವೈರಸ್ ಗಳಾಗಿರುವುದರಿಂದ ರೂಪಾಂತರದ ಕಾರಣ ಮಾನವ ಮತ್ತು ಇತರ ಜೀವಿಗಳ ಸ್ವಾಭಾವಿಕ ರೋಗನಿರೋಧಕ ಗುಣಕ್ಕೆ ಸವಾಲಾಗಿ ಅದನ್ನು ತಪ್ಪುದಾರಿಗೆಳೆದು ರೋಗಹರಡುವಲ್ಲಿ ಯಶಸ್ವೀ ಎನಿಸುತ್ತವೆ. ಪದೇ ಪದೇ ಮಾರ್ಪಾಡುಗಳಿಗೆ ಈಡಾಗುವ ಆರ್.ಎನ್.ಎ. ವೈರಸ್ ಈ ಗುಣದ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ಇದೇ ಕಾರಣಕ್ಕೆ ಲಸಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿಲ್ಲ ಎನ್ನಬಹುದು.
ಇನ್ನು...ನನ್ನ ಅತಿ ಹೊಸ ರೂಪದ ಫಲಿತವೇ ಹಂದಿಜ್ವರದ ವೈರಸ್..ಎಚ್-೧-ಎನ್-೧. ಇದು ನೀವು ಮನುಷ್ಯರು ಕೊಟ್ಟ ಹೆಸರೇ...ಹಂದಿಗಳಲ್ಲಿ ಬರುತ್ತಿದ್ದ ಫ್ಲೂ ಮನುಷ್ಯರಿಗೆ ಬಂದದ್ದೇ ಈ ರೂಪಕ್ಕೆ ಕಾರಣ. ಇನ್ ಫ್ಲುಯೆಂಜಾ ಎ, ಬಿ ಮತ್ತು ಸಿ ಎಂದು ಮೂರು ವಿಧಗಳು. ಎ ಮೂಲತಃ ಹಂದಿಗಳಲ್ಲಿ ಕಂಡುಬರುವುದು, ಬಿ ಹಂದಿಗಳಲ್ಲಿ ಇಲ್ಲದ್ದು ಮತ್ತು ಸಿ ಹಂದಿಗಳಲ್ಲಿ ಅಪರೂಪದ್ದು. ೧೯೧೮ ರಲ್ಲಿ ಹಂದಿ ಮತ್ತು ಮಾನವನಲ್ಲಿ ಒಟ್ಟಿಗೇ ಕಂಡುಬಂದ ಇನ್ ಫ್ಲುಯೆಂಜಾ ಎ ಜ್ವರ ಬಹುಶಃ ಇಂದಿನ ಹಂದಿ ಜ್ವರದ ಮೂಲ ಎನ್ನಬಹುದು.ನನ್ನ ಹೊಸ ರೂಪದ ಮೂಲ ಮೆಕ್ಸಿಕೋ ಮತ್ತು ಅಮೇರಿಕಾ.. ಹಂದಿಗಳು ಹಕ್ಕಿ ಜ್ವರದ ವೈರಸ್ ಮತ್ತು ಮಾನವ ಇನ್ ಫ್ಲೂಯೆಂಜಾ ವೈರಸ್ ಎರಡನ್ನೂ ತನ್ನಲ್ಲಿ ಬೆಳೆಸುವ ಮತ್ತು ತನ್ನ ವೈರಸ್ ಜೊತೆಗೆ ಅಧಿಕ ರೂಪಾಂತರಕ್ಕೆ ಕಾರಣವಾಗುವ ಸಾಧ್ಯತೆಗಳನ್ನು ೧೯೧೮ ರ ನಂತರದ ಘಟನಾವಳಿಗಳು ಧೃಢಪಡಿಸುತ್ತವೆ...!!! ಅದೇ ಕಾರಣಕ್ಕೆ ಹಂದಿಗಳ ರಕ್ತದಲ್ಲಿ ಈ ವಿವಿಧ ವೈರಸ್ ಗಳ ವಿರುದ್ಧದ ಪ್ರತಿವಿಷವಸ್ತು (ಆಂಟಿಬಾಡಿ) ಕಂಡುಬಂದಿದೆ. ಗುಂಪುಪ್ರತಿರೋಧಕತೆ (ಹರ್ಡ್ ಇಮ್ಯುನಿಟಿ) ಇಂತಹ ರೋಗಗಳಿಗೆ ಉತ್ತಮ ಸ್ವಾಭಾವಿಕ ಪರಿಹಾರ.


ನನ್ನ ಹರಡುವಿಕೆಯನ್ನು ತಡೆಯುವುದು, ನನ್ನ ಅಸ್ತಿತ್ವವನ್ನು ಅತಿಶೀಘ್ರ ಪತ್ತೆಹಚ್ಚುವುದು, ಸೂಕ್ತ ಚಿಕಿತ್ಸೆಯನ್ನು ಅತಿ ತ್ವರಿತ ಅವಧಿಯೊಳಗೆ ನೀಡುವುದು ನನ್ನಿಂದಾಗುವ ರೋಗ ಮತ್ತು ಜೀವಹಾನಿಯನ್ನು ತಡೆಯಲು ಬಹುಮುಖ್ಯ ಅಂಶಗಳು.
ಹೀಗನ್ನುತ್ತಿರುವಂತೆ..ಭೇತಾಳ ತನ್ನ ತಪ್ಪಿನ ಅರಿವಾಗಿ ಅವಡುಗಚ್ಚಿ ಸುಮ್ಮನಾಯಿತು...ಆದರೆ ಆ ವೇಳೆಗಾಗಲೇ ಮಹತ್ವ ಮಾಹಿತಿಯನ್ನು ಶತವಿಕ್ರನಿಗೆ ನೀಡಿತ್ತು..ಮುಗುಳ್ನಕ್ಕ ಶತ ವಿಕ್ರಮ ..”ಅಯ್ಯೋ ಮಂಕೇ ನಮ್ಮ ಸಂಶೋಧಕರು ಇದನ್ನೆಲ್ಲ ಅರಿತಿದ್ದಾರೆ ಆದ್ರೆ ನಮ್ಮ ರಾಜಕಾರಣಿಗಳು ತಮ್ಮ ಆಪ್ತರಿಗೆ ಈ ರೋಗ ಬರುವವರೆಗೂ ಎಚ್ಚರಗೊಳ್ಳುವುದಿಲ್ಲ”
ಎನ್ನುತ್ತಿರುವಂತೆಯೇ...”ಮೌನ ಮುರಿದು ನಮ್ಮ ಅಗ್ರೀಮೆಂಟ್ ಮುರಿದಿದ್ದೀಯಾ...ಅಗೋ ಅಲ್ಲೊಬ್ಬ ಬಕರಾ ಬರ್ತಿದ್ದಾನೆ ಅವನಲ್ಲಿ ಎಚ್-೧-ಎನ್-೧ ಬೀಜ ಬಿತ್ತುತ್ತೀನಿ..ಸಾಧ್ಯ ಅದ್ರೆ ಅವನ್ನ ಉಳಿಸ್ಕೋ” ಎನ್ನುತ್ತಾ ..ಕರ್ಕಶವಾಗಿ ಕೂಗುತ್ತಾ ಹಾರಿಹೋಯಿತು.
ಶತ ವಿಕ್ರಮ ಮಂತ್ರಿಯಾಗಿದ್ದ ತನ್ನ ಮಾವ ಕಂತ್ರಿ ವಿಕ್ಕಣ್ಣನ ಮನೆಕಡೆ ಹೆಜ್ಜೆಹಾಕಿದ ಆ ಹೊಸ -ಬಕರಾ- ನ ಮತ್ತು ಅಂತಹವರನ್ನು ಉಳಿಸಲು.

Tuesday, July 28, 2009

ಗುಂಗಲ್ಲಿ ನುಂಗಣ್ಣ ಹೇಳಿದ್ದೇನು????

(ವೆಬ್ ನ ಚಿತ್ರಕ್ಕೆ ಬಬಲ್ ಶೀರ್ಷಿಕೆ ಕನ್ನಡೀಕರಿಸಿ ಕೊಟ್ಟಿದ್ದೇನೆ)


ನಮಸ್ಕಾರ ...ನಾನು ನುಂಗಣ್ಣ...ಗೊತ್ತಾಗ್ಲಿಲ್ವ...?? ನಿಮ್ಮನೇಲಿದ್ದೇ..ನೀವು ಕೊಟ್ಟ್ರೂ ಕೊಡದೇ ಇದ್ರೂ ..ನನ್ಗೆ ಬೇಕಾದಷ್ಟೇನು ತಲೆಮಾರುಗಳಿಗೆ ಆಗೊಸ್ಟನ್ನ ಗುಡ್ಡೆ ಹಾಕ್ತಾ ನುಂಗ್ತಾ ಇದ್ದೀನಿ...??!! ಗೊಅತ್ತಾಗ್ಲಿಲ್ಲ್ವ?? ಅಲ್ರೀ ..ಏನೋ ಒಂದ್ಸ್ವಲ್ಪ ತಿಂದಿದ್ದಕ್ಕೆ ಗುಂಜಣ್ನನ್ನ ತಿಂದ..ತಿಂದ..ಅಂತ ಗೋಳಾಡ್ಸಿದ್ರಿ..ಪತ್ರಿಕೇಲಿ ಬರೆಸಿದ್ರಿ..?? ಅದ್ಯಾರೋ ಲೋಕಕ್ಕೇ ಆಯುಕ್ತರಂತೆ...(ಮನೇಲಿ ಮಂಚದಲ್ಲಿ ವರ್ಷಗಳಿಂದ ಸೇರ್ಕೋಂಡು ಸ್ವಲ್ಪ..ಸ್ವಲ್ಪ..ತಿಳಿದೂ.ಏನೋ ಬಿಡು ಹೋಗ್ಲಿ ಅಂತ ಅನ್ಕೊಳ್ಳೋಹಾಗೆ ರಕ್ತ ಕುಡೀತಿರೋ ತಿಗಣೇನೇ ಏನೂ ಮಾಡಾಕಾಗ್ದೇ ಇರೋರು ಎಂಥ ಲೋಕಕ್ಕೆ..ಎಂಥ ಆಯುಕ್ತರು...!!!???) ಅವರನ್ನ ಬಿಟ್ಟು ಆಯ್ಕಂಡ್ ತಿನ್ನೋ ಕೋಳೀ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ..ಪಾಪ...ಗುಂಜಣ್ನ..ಎನೋ ವ್ಯವಸ್ಥೆಗೆ ಕಟ್ಟುಬಿದ್ದು..ಬೇಕಂತಲೋ...ಬೇಡ ಅಂತಲೋ..ಏನೋ ...ಸ್ವಲ್ಪ ತಿಂದದ್ದಕ್ಕೆ..ಇದ್ದ ಬದ್ದ ಮಾನ ಹೋಯ್ತು..ಅಂತ ಅಷ್ಟು ವರ್ಷ ಕೆಲಸ ಮಾಡ್ತಿದ್ದ ಕಛೇರಿಯಲ್ಲೇ ಹಗ್ಗಕ್ಕೆ ಕೊರಳ್ಕೊಟ್ಟು ಜೋತು ಬಿದ್ದ....ನಿಮಗೆ ತಾಕತ್ತಿದ್ದರೆ ನಮ್ಮಂಥ ನುಂಗಣ್ನಗಳ ಮೇಲೆ ಬಿಡ್ರಿ ನಿಮ್ಮ ಬ್ರಹ್ಮಾಸ್ತ್ರ..??!! ಅದ್ಕ್ಕೂ ತಾಕತ್ತು ..ಕಿಮ್ಮತ್ತು...ದಿಲ್ಲು...ದಮ್ಮು ಎಲ್ಲ ಬೇಕು. ಅಷ್ಟೆಲ್ಲಾ ಯಾಕೆ...ಐದು ವರ್ಷಕ್ಕೊಂದಾವರ್ತಿ ನಿಮ್ಮ ಹತ್ರ ಬಂದು..ಗೆದ್ದರೆ ನಿಮ್ಮ ಮಗನಿಗೆ ಆ ಕೆಲಸ ಕೊಡಿಸುತ್ತೀವಿ...ನಿಮ್ಮ ತಮ್ಮನಿಗೆ ಏಜೆನ್ಸಿ ಕೊಡಿಸ್ತೀವಿ..ನಿಮ್ಮ ಅಕ್ರಮ ಸೈಟನ್ನ ಸಕ್ರಮ ಮಾಡ್ತೀವಿ ಅಂತ ಬಂದು ನಿಮ್ಮ ಓಟು ಗಿಟ್ಟಿಸ್ಕೊಂಡು..ಮೆರೆಯೋ ಮಿನಿಸ್ಟ್ರು ಅವರಿಗೆ ಸಪೋರ್ಟ್ ಕೊಡೋ ಬಿಜಿನೆಸ್ ಟೈಕೂನುಗಳು..ಅವರಿಗೆ ಕುಮ್ಮಕ್ಕು ಕೊಡೋ ಆಫೀಸರುಗಳು..ಇವ್ರಿಗೆ ಎಂದಾದ್ರೂ ತಿಂದ ತಿಂದ ಅಂತ ಹೇಳಿದ್ದೀರಾ..?? ಗುಂಜಣ್ಣನ್ನ ಯಾಕ್ರೀ ಹೇಳ್ತೀರಾ..ತಿಂದ..ಗುಡ್ದೆ ಹಾಕ್ದ ಅಂತ..?? ಅವನೇನ್ರೀ ಗುಡ್ಡೆ ಹಾಕ್ದ..?? ಅಸಲು ಗುಡ್ಡೆ ಅಂದ್ರೆ ಏನು ಅಂತ್ಲೇ ಗೊತ್ತಿಲ್ಲ ಅವನಿಗೆ.
ನಾನು ಹೇಳ್ತೀನಿ ಕೇಳಿ...ಹಣ ಇದೆ ಅಂತ ರೈತ ಬೆಳೆದದ್ದನ್ನ ಆರು ಕಾಸಿಂದು ಮೂರ್ಕಾಸಿಗೆ ಕೊಂಡ್ಕೊಂಡು, ಅದ್ದಕ್ಕೆ ಕುಮ್ಮಕ್ಕು ಕೊಡೋಕೆ ಫುಡ್ ಇನ್ಸ್ ಪೆಕ್ಟರಿಗೆ ತಿನ್ಸಿ, ದೊಡ್ಡ ದೊಡ್ಡ ಗೋಡೌನು ಕಟ್ಸಿ ಅದನ್ನ ಕಟ್ಟೋದಕ್ಕೆ ಕಾರ್ಪೊರೇಶನ್ ಅಧಿಕಾರಿಗಳಿಗೆ ತಿನ್ಸಿ, ಸವಲತ್ತು ಅಂತ ವಿದ್ಯುತ್ ಇಲಾಖೆ ಆಫೀಸರಿಗೆ ತಿನ್ಸಿ, ಲಕ್ಷ ಲಕ್ಷ ಟನ್ ದವಸ ಗೋದಾಮುಗಳಲ್ಲಿ ತುಂಬಿಟ್ಟು..ಕೃತಕ ಅಭಾವ ಸೃಷ್ಠಿಸಿ ಒಪ್ಪೊತ್ತಿನ ಊಟಕ್ಕೇ ಪರದಾಡೋ ಎಷ್ಟೋ ಬಡವರು ಹಸಿವಿಂದ ಸಾಯೋ ಸ್ಥಿತಿಗೆ ತರ್ತಾರಲ್ಲ...ಭಾರಿ ಕಳ್ಳ ವರ್ತಕರು ಅವ್ರು ನಿಜವಾದ ನುಂಗಣ್ಣಗಳು...
ಸಾವಿರಾರು ವಾಹನ ಓಡಾಡೋ ಸೇತುವೆಗಳು, ಬೆಳೆಗೆ ಹನಿಸೋ- ದಾಹ ತಣಿಸೋ ನೀರು ಹರಿಸೋ ಕಾಲುವೆಗಳು, ಸಾರ್ವಜನಿಕ ಕಟ್ಟಡಗಳು, ರಸ್ತೆಗಳು ಹೀಗೆ ಎಲ್ಲದರಲ್ಲೂ ಗೋಲ್ ಮಾಲ್ ಮಾಡಿ ಗುಡ್ಡೆ ಹಾಕೋ ದೊಡ್ಡ ದೊಡ್ಡ ಖದೀಮ ಕಂಟ್ರ‍ಾಕ್ಟರುಗಳು ..ಅವ್ರು ನಿಜವಾದ ನುಂಗಣ್ಣಗಳು.
ಮಕ್ಕಳ ಊಟದಲ್ಲಿ ಅಕ್ರಮ, ರೋಗಿಗೆ ಕೊಡೋ ಔಷದಿಯಲ್ಲಿ ಕಲಬೆರಕೆ, ಸ್ವಾತಂತ್ರ್ಯ ಹೋರಾಟಗಾರರ. ವಯೋವೃದ್ಧರ ಮಾಶಾಸನದಲ್ಲಿ ಗೋಲ್ ಮಾಲ್, ಕಿಡ್ನಿ ಕದ್ದು ಮಾರೋ ಕಾಂಡ, ಹೆಣ್ಣುಮಕ್ಕಳ ಮಾರಾಟ, ಹೆಣ್ಣಿನ ಅಸಹಯಾಕತೆಯನ್ನ ಕ್ಯಾಶ್ ಮಾಡಿಕೊಳ್ಳೋ ಬಿಚೌಲಿಗಳ ಬಾಸುಗಳು ಇವ್ರು ನಿಜವಾದ ನುಂಗಣ್ಣಗಳು......
ಇವ್ರೆಲ್ಲರಿಗೆ...ಸುಪ್ರೀಂ..ನಾನು...ಸರ್ಕಾರದ ಭಾಗವಾಗಿದ್ದು ನಾನು ಮಾಡಿದ್ದೇ ಶಾಸನ, ನಾನು ಹೇಳಿದ್ದೇ ವೇದ ವಾಕ್ಯ...ನಿಮ್ಮ ಕೈಗೆ ಬಿಲ್ಲು ಕೊಡೋನೂ ನಾನೆ, ಬ್ರಹ್ಮಾಸ್ತ್ರ ದಯಪಾಲಿಸೋನೂ ನಾನೇ..ಇವೆಲ್ಲವುಗಳ ಸೂತ್ರ ನನ್ನ ಕೈಲಿ..ಒಂದು ಬಾರಿ ನಿಮ್ಮ ಭಿಕ್ಷೆ ಪಡೆದರೆ..ಐದು ವರ್ಷ ನನ್ನ ನೀವಲ್ಲ ...ನಿಮ್ಮಪ್ಪ ಅಲ್ಲ ..ಆ ಬ್ರಹ್ಮ ಬಂದ್ರೂ ಅಲುಗಾಡಿಸೋಕಾಗಲ್ಲ...
ಅಂಥ ಪರಮ ಮಹಾ ನುಂಗಣ್ಣ ...ನಾನು. ಗೊತ್ತಾಯ್ತೇ..??
ಈಗ್ಲೂ ಸಮಯ ಇದೆ ಎಚ್ಚೆತ್ತುಕೋ..... ಮನುಷ್ಯ ಸ್ವಭಾವ ಸದಭಿರುಚಿ ಸಂಸ್ಕಾರವಂತ ಆಗಿದ್ದು ನಿಜಕಾಳಜಿ ಮಾನವತೆಯಿದ್ದರೆ ಅವನಿಗೆ ಅಂಜಿಕೆಯಿರುತ್ತೆ..ಒಳಗೊಂದು ಹೊರಗೊಂದು ಇರದವರು ನಂಬಿಕಾರ್ಹರು. ವಿವೇಚನೆಯಿಂದ ಮತ ಯಾಚಿಸುವವರ ಮತ್ತು ಮತಕ್ಕಾಗಿ ಅಂಗಲಾಚುವವರ ನಡುವಿನ ಅಂತರ ತಿಳಿದುಕೋ.....ಯಾಕೆ ಗೊತ್ತೆ.?? ಹಾಗೊಮ್ಮೆ ನಿನ್ನ ಚುನಾಯಿತ ದೂರ್ಥನಾಗಿದ್ದು ಗೆದ್ದರೆ...ನಿನ್ನ ಮೇಲೆ ಸವಾರಿ ಮಾಡ್ತಾನೆ...ಅದೇ ನಿನ್ನ ಆಯ್ಕೆ ಅರ್ಹ ಅಭ್ಯರ್ಥಿ ಗೆಲುವಿಗೆ ಕಾರಣವಾದರೆ ನಿನ್ನ ಅಭಿಲಾಶೆಗಳ ಸವಾರಿ ನೀನು ಮಾಡಬಹುದು.

Thursday, July 23, 2009

ಬ್ಲಾಗಾಯಣ

ಈ- ಮೈಲು, ವೆಬ್ಬು, ಗಬ್ಬು..ಅಂತೆಲ್ಲಾ ಅನ್ನೋರಿಗೆ..ಬ್ಲಾಗು ಅನ್ನೋ ಇನ್ನೊಂದು ವ್ಯವಸ್ಥೆ ಇದೆ ಅನ್ಸಿದ್ದು..ಅಥ್ವಾ ನೋಡಿದ್ದು..ಆ ನಂತರ ಅದರ ದಾಸರಾಗಿದ್ದು ..ಈಗ ಚರಿತ್ರೆ ಆಗ್ತಾ ಇದೆ.
ಪಿ.ಬಿ.ಎಸ್ ರಿಗೆ ಈಗ ಹಳೇ ಹಾಡು ಹಾಡೋಕೆ ಹೇಳಿದ್ರೆ...
"ಬ್ಲಾಗೊಂದ ತೋರ್ಸುವೇ
ಪುಟಾಣಿ ಮಕ್ಕಳೇ..ಬ್ಲಾಗಿದ್ದು ತನಗೆ
ಬ್ಲಾಗಾಗದ್ದು ಪರರಿಗೆ" ಅಂತಿದ್ರೋ..ಏನೋ..!!
ಬ್ಲಾಗಿದ್ದಿದ್ರೆ..ಸೀತೆ ಸ್ವಯಂವರದ ಅನೌನ್ಸ್ ಮೆಂಟು ಪ್ರೆಸಿಡೆಂಟ್ ಜನಕ್ಸ್ ಬ್ಲಾಗಿಸ್ತಿದ್ದ್ರೋ ಏನೋ..??
ಬ್ಲಾಗುಗಳ ಇಂಟರಾಕ್ಷನ್ ಫಾಲೋಗಳ ಮೂಲಕ ದುರ್ಯೋಧನ್ಸ್ ಪಾಂಡವ್ಸ್ ನ ಫ್ಯಾಂನ್ಸಿಡ್ರೆಸ್ನಲ್ಲೇ ಪರ್ಮನೆಂಟಾಗಿ ಇರೋ ಹಂಗೆ ಮಾಡ್ತಿದ್ದನೋ ಏನೋ..?
ಬ್ಲಾಗು ಅನ್ನೋದು..ಈಗ್ಗೂ ನನ್ ತಲೇಗೆ ಸರಿಯಾಗಿ ಹೋಗಿಲ್ಲ, ಯಾರ್ಯಾರೋ ಬ್ಲಾಗ್ ಮಾಡ್ತಾರೆ ಅಂತ ನಾನೂ ಬ್ಲಾಗನ್ನ ಕೂಡಿ, ಕಳೆದು, ಗುಣಿಸಿ ಈಗ ಬ್ಲಾಗಿಸ್ತಿದ್ದೀನಿ.
ಅಜ್ಜಿ ಮಕ್ಕಳಿಗೆ ಕಥೆ ಹೇಳೋವಾಗ..."ಒಂದಾನೊಂದು ಬ್ಲಾಗ್ ರಾಜ್ಯದಲ್ಲಿ ಒಬ್ಬ ಬ್ಲಾಗ್ ರಾಜ, ಇಬ್ಬರು ಬ್ಲಾಗ್ ರಾಣಿಯರಿದ್ದರು. ಅವರಿಗೆ ..." ಅಂತೆಲ್ಲಾ ಹೇಳೋ ಕಾಲ ದೂರಾ ಏನಿಲ್ಲ.
ನಮ್ಮ ಹಳ್ಳಿ ಗಮಾರ ದೋಸ್ತು (ಪಿ.ಯು.ಸಿ ಲೇ ಸುಸ್ತಾಗಿದ್ದಾನೆ) ಮೊನ್ನೆ ವರೆಗೂ ಕಂಪ್ಯೂಟರು, ಇ-ಮೈಲ್ ಏನೂ ಗೊತ್ತಿಲ್ಲದೇ ಇದ್ದವನು...ಮೊನ್ನೆ ಬ್ಲಾಗಿನ ಬಗ್ಗೆ ಏನು ಹೇಳ್ದ ಗೊತ್ತೇ..?
“ಈವಾಗ ಈ ಬ್ಲಾಗು ಎಷ್ಟೊಂದು ಪಾಪುಲರ್ ಆಗ್ತಾ ಐತೆ ಅಂದ್ರೆ...ರಾಜಕಾರಣಿಗಳು..ತಮ್ಮ ಚುನಾವಣಾ ಪ್ರಚಾರಾನ ಬ್ಲಾಗಿಸೋಕೆ ಶುರು ಹಚ್ಚೌವ್ರೆ, ನಮ್ಮ ಚುನಾವಣಾಧಿಕಾರಿ ತಾನೂ ಏನ್ ಕಡಿಮೆ ಇಲ್ಲ ಅನ್ನೋ ಹಂಗೆ ರಾಜ್ಕಾರ್ಣಿಗಳ
ಬ್ಲಾಗನ್ನ ಬ್ಯಾನ್ ಮಾಡಿ ತಿಳಿಸೋಕೆ ಅಂತ್ಲೇ ಇನ್ನೊಂದು ಬ್ಲಾಗು ಸುರು ಹಚ್ಚೇಬಿಟ್ಟವ್ರೆ”.
ನಮ್ಮ ಪೂರ್ವ ರಾಷ್ಟ್ರಪತಿಗಳು (ಕಲಾಂ ಸಾಹೇಬ್ರು) ಬ್ಲಾಗ್ ಮಾಡಿಯೇ ಸ್ಕೂಲ್ ಮಕ್ಕಳಲ್ಲಿ ದೇಶಾಭಿಮಾನ, ದೇಶದ ಬಗ್ಗೆ ಸಾಮಾನ್ಯ ಅರಿವಳಿಕೆ (general awareness) ತರೋದಕ್ಕೆ ಪ್ರಯತ್ನಿಸಿದ್ದು ಎಲ್ಲಾ ತಿಳಿದಿರೋದೇ..
ಅಮಿತಾಬ್ ಬಚ್ಚನ್ ತನ್ನ ಬ್ಲಾಗ್ ಮೂಲಕ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದದ್ದು ನೋಡಿದ್ರೆ ಬೆಳೀತಿರೋ ಬ್ಲಾಗಾಭಿಮಾನ, ಬ್ಲಾಗಪಾರಂಗತಿ, ಇತ್ಯಾದಿ ಬಗ್ಗೆ ಯೋಚಿಸ್ಬೇಕಾಗುತ್ತೆ.
ಕೆಲಸದ application ನಲ್ಲಿ ಈಗ ಇ-ಮೈಲ್ ಅಡ್ರೆಸ್ ಜೊತೆಗೆ ಬ್ಲಾಗ್ ಅಡ್ರೆಸ್ ಸಹಾ ಕೇಳುವ ಸಮಯಾನೂ ಬಂದಿದೆ. Interview ನಲ್ಲಿ can you show your blog posting items on your laptop...?? ಅಂತ ಕೇಳ್ಬಾರ್ದಲ್ಲವೇ..?? ಅದಕ್ಕೇ..ಈವರೆಗೂ ಯಾವುದೇ ಬ್ಲಾಗ್ open ಮಾಡ್ದೇ ಇದ್ರೆ ತಕ್ಷಣ ಮಾಡೀ ಈ ಕೆಲಸ...ಅದ್ರಲ್ಲೂ ನೌಕರಿ ಹುಡುಕೋ ಭಾವೀ ನೌಕರರು.
ಮತ್ತೆ ಮದ್ವೆ ಹುಡ್ಗೀರನ್ನ ನೋಡೋಕೆ ಹೋಗೋ ಗಂಡುಗಳು ನಿಮ್ಮದು ಅಂತ ಯಾವುದಾದರೂ ಬ್ಲಾಗ್ ಇದೆಯಾ..?? ಅಂತ ಕೇಳಿಬಿಟ್ಟರೆ,,..?? ಅಪ್ಪ ಕೊಡೋ ಕಾರು, ಹತ್ತು ಲಕ್ಷ ರಕಂ ಎಲ್ಲ ಹೋಗಿ ಅಪ್ಪ-ಅಮ್ಮನ ಮರ್ಯಾದೆ ಜಖಂ ಆಗೋದಿಲ್ಲವೇ..??

ಟ್ಯೂಶನ್ ಪರಿಪಾಠ ಬೆಳೆಸಿಕೊಳ್ತಾ ಇರೋ ಟೀಚರ್ಗಳಿಗೆ ಬ್ಲಾಗಿನ ಮೂಲಕ ಸರ್ಕಾರದ, ಆಡಳಿತ ಮಂಡಳಿಯ ಕಣ್ಣಿಗೆ ಮಣ್ಣೆರೆಚೋದು ಸುಲಭ ಆಗ್ತಾ ಇದೆ. ಜೋಡಿಗಳು ಮೈಲ್ ಗಳ ಮೂಲಕ ಪರಸ್ಪರ ವಿಷಯ ವಿನಿಮಯ ಮಾಡ್ಕೋತಾ ಇದ್ದದ್ದು ಹೋಗಿ ಈವಾಗ...ಬ್ಲಾಗುಗಳನ್ನ ಸೃಷ್ಠಿಸಿಕೊಂಡು ತಮ್ಮ ಕೆಲಸಾನ ಇನ್ನೂ ಪರಿಣಾಮಕಾರಿ ಮಾಡ್ಕೋತಾ ಇದ್ದಾರೆ. ಹಾಂ..ಹಾಂ..ಖಾಸಗಿ ವಿಷಯಕ್ಕೆ.. ಇ-ಮೈಲ್ ಇದ್ದದ್ದೇ..?? ಬ್ಲಾಗು ಪಬ್ಲಿಕ್ ಅಲ್ವೇ...!!!!

ಸಾಹಿತ್ಯ ಕ್ಷೇತ್ರದಲ್ಲಿ ಬ್ಲಾಗಾಯಣದ ಪರಿಣಾಮ ಬಹಳವಾಗಿಯೇ ಆಗಿದೆ ಎಂದರೆ ತಪ್ಪಿಲ್ಲ. ಕವಿಗಳು ತಮ್ಮ ಕವನಗಳನ್ನ, ಲೇಖನಗಳನ್ನ ಬ್ಲಾಗಿನ ಮೂಲಕ ಪರಿಚಯಿಸುತ್ತಿದ್ದಾರೆ. ಕನ್ನಡದವರು ತಮ್ಮ ಇ-ಸಿರಿವಂತಿಕೆಯನ್ನು ಇಲ್ಲೂ ಮೆರೆದಿದ್ದಾರೆ...ಯುವಕವಿ ಬ್ಲಾಗ್ ಸ್ಪಾಟ್ ಡಾಟ್ ಕಾಂ, ಚುಟುಕು ಬ್ಲಾಗ್ ಸ್ಪಾಟ್ ಡಾಟ್ ಕಾಂ, ವ್ಯಂಗ್ಯ ಬ್ಲಾಗ್ ಸ್ಪಾಟ್ ಡಾಟ್ ಕಾಂ, ಹೀಗೆ..ಹಲವಾರು..ಬ್ಲಾಗುಗಳು....
ಇದು ಒಂದು ಹಿತಕರ ಬೆಳವಣಿಗೆಯೇ ಸರಿ. ಇದೇ ತರಹ ವಿಷಯ ವಿನಿಮಯಕ್ಕೂ ತಮ್ಮಲ್ಲಿನ ಶೇಖರಿತ ಮಾಹಿತಿಗಳನ್ನು ವಿನಿಮಯಿಸಿಕೊಳ್ಳಲು ಬ್ಲಾಗ್ ಬಹಳ ಸಹಕಾರಿಯಾಗುತ್ತಿದೆ.
ಬ್ಲಾಗೆಂಬ ಮಹತ್ವಪೂರ್ಣ ಮಾಧ್ಯಮವನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಅರೋಗ್ಯಕರ ಸಮಾಜದ ಬೆಳವಣಿಗೆಗೆ ಪ್ರಯೋಗಿಸಬೇಕು.

Saturday, July 18, 2009

ಕೆಲವು ಚುಟುಕಗಳು

ಕನಸು
ಕಣ್ಣು
ಮುಚ್ಚಿದಾಗ
ಕಾಣುವುದು

ಹೆಂಡತಿ
ತಾಳಿಕಟ್ಟಿದವಗೆ
ತಾಯಿ
ಇಳಿವಯಸ್ಸಿನಲ್ಲಿ

ಕವಿ
ಕಂಡರೂ
ಕಾಣದ್ದನ್ನು
ವಿವರಿಸಿದವ

ಕಣ್ಣೀರು
ನೋವಿಗೂ
ನಲಿವಿಗೂ
ಒಂದೇ ಉತ್ತರ

ತುಂಟಾಟ
ವಯಸ್ಸರಿಯದೇ
ಎಲ್ಲರೂ ಆಡುವ
ಆಟ

ರಾಜಕಾರಣಿ
ರೊಟ್ಟಿ ಜಗಳದಲ್ಲಿ
ಬೆಕ್ಕುಗಳಿಗೆ
ರೊಟ್ಟಿ ಹಂಚಿದವ

ಈಗಿನ ಮಕ್ಕಳು
ಬಾಲ್ಯದಲಿ- ಬೇಡಿ ಕಾಡುವರು
ಯವ್ವನದಲಿ - ಕಾಡಿ ಬೇಡುವರು
ಮದುವೆ ಮಕ್ಕಳಾದರೆ - ಕಾಡಿ ಕಾಡುವರು
ವೃದ್ಧಾಶ್ರಮಕೆ ಓಡಿಸುವರು

ಲಂಚ
ಕೊಂಚ
ಇನ್ನೂ ಕೊಂಚ
ಎಂದು ತಿಂದ
LUNCHಉ

Wednesday, July 15, 2009

ಗೊತ್ತಿಲ್ಲ ಮಗು

ಅಪ್ಪಾ..
ಏನು ಮಗು..?
ನಾನು.. ರಾಮು.. ಗೆಳೆಯರಾದ್ರೆ
ಏನಪ್ಪ ತಪ್ಪು...??
ಯಾರು ಹೇಳಿದ್ರು ತಪ್ಪು ಅಂತ..?
ಗೆ.. ಎಳೆಯರಾದ್ರೆ ತಪ್ಪಿಲ್ಲ
ಗೆ.. ಬೆಳೆದಮೇಲೆ ಸರಿಯಲ್ಲ..??
ಅದೇ ಗೇ...ಒಳ್ಳೆಯದಲ್ಲ
ನಮ್ಮ ಸಂಸ್ಕೃತಿ ಕಲಿಸಿದ್ದಲ್ಲ ಅಂತಾರಲ್ಲ?
ನಂಗೊತ್ತಿಲ್ಲ ಮಗು...


ಅಪ್ಪಾ...
ಹೇಳು ಮಗು
ಕೋಟಿ ಕೋಟಿ ಅಂತ ಅಕ್ರಮ ಆಸ್ತಿ
ಲೋಕಾಯುಕ್ತರು ಹಿಡೀತಿದಾರಲ್ಲ..?
ಇದೆಲ್ಲಾ ಲಂಚದ ಹಣಾ..ಆಸ್ತೀನೇ..??
ಹೌದಪ್ಪ ಅದಕ್ಕೇ ಅವರನ್ನ ಹಿಡಿಯೋದು..
ಮತ್ತೆ ಅವರಿಗೆ ಶಿಕ್ಷೆ ನಮಗೆ ಕೊಡೋಕೆ ಆಗೊಲ್ಲ
ಅಂತಾರಲ್ಲಾ ..ಮತ್ತೆ ಯಾರು..ಸರ್ಕಾರ ಕೊಡುತ್ತಾ..??

ಹೌದು ಮಗು ಸರ್ಕಾರಾನೇ ಕೊಡ್ಬೇಕು..
ಮತ್ತೇ..ಅಕ್ರಮ ಸಕ್ರಮ ಮಾಡ್ತೀವಿ ಅಂತಾರಲ್ಲ ಮಂತ್ರಿಗಳು...??
ನಂಗೊತ್ತಿಲ್ಲ ಮಗು.

Friday, July 10, 2009

ಭೇತಾಳನೊಂದಿಗೆ....ಸ್ಪಷ್ಠನೆ...(ಪೂರಕ)

ನನಗೆ ಖುಷಿ ತಂದ ಪ್ರತಿಕ್ರಿಯೆ ಎಸ್ಸೆಸ್ಕೇಯವರದು
.....ನಾನು ಬರೆದುದು ಬಹುಷಃ ಸ್ಪಷ್ಠವಾಗಿಲ್ಲ ಎನ್ನುವುದು ಇದರಿಂದ ಅರ್ಥವಾಯಿತು...ಅದಕ್ಕಾಗಿ ಈ ಪೂರಕ ಬ್ಲಾಗ್ ಪೋಸ್ಟ್ ಮಾಡುತ್ತಿದ್ದೇನೆ

ಭೇತಾಳ ಒಂದು ಮನೋಧರ್ಮದ ಸಂಕೇತವಾಗಿ..ಇಲ್ಲಿ ಪ್ರಯೋಗವಾಗಿದೆ...ಇದು ಒಂದು ನಕಾರಾತ್ಮಕ ಮನೋಧರ್ಮ, ವಿನಾಶಕಾರೀ ಮನೋಧರ್ಮ ಎನ್ನಬಹುದು. ಅಂದರೆ ಅದಕ್ಕೆ ಯಾವುದೇ ಗೊತ್ತಾದ ಪಂಗಡ, ಜಾತಿ, ಧರ್ಮ, ದೇಶ ಇತ್ಯಾದಿಗಳ ಬೇಧ ಭಾವವಿರುವುದಿಲ್ಲ, ಈ ಭೇತಾಳವನ್ನು ನಿಗ್ರಹಿಸುವುದು ವ್ಯಕ್ತಿಗೆ ಎಷ್ಟು ಅಗತ್ಯವೋ ಅಷ್ಟೇ ಅನಿವಾರ್ಯ ಜನಾಂಗಕ್ಕೆ, ಪಂಗಡಕ್ಕೆ, ಜಾತಿಗೆ, ಧರ್ಮಕ್ಕೆ, ನಾಡಿಗೆ, ದೇಶಕ್ಕೆ...ಇದೆಲ್ಲ ಮಾನವ ಧರ್ಮದ ಉಳಿವಿಗೆ...
ಈ ರೀತಿಯ ವಿಶ್ಲೇಷಣಾ ಪ್ರತಿಕ್ರಿಯೆಗಳು ನಮ್ಮ ಬ್ಲಾಗನ್ನು ಮತ್ತು ನಮ್ಮ ಪ್ರಸ್ತಾವನಾ ಶೈಲಿಯನ್ನೂ ಸುಧಾರಣೆ ಮಾಡುತ್ತೆ...,
ಧನ್ಯವಾದಗಳು ಎಸ್ಸೆಸ್ಕೇ...

ಭೇತಾಳನೊಂದಿಗೆ ಒಂದು ಸಂಭಾಷಣೆಶತವಿಕ್ರಮ- ಭೇತಾಳರ ನನ್ನ ಅಸಂಬದ್ಧ ಪ್ರಲಾಪಗಳನ್ನು...ಸದ್ಯಕ್ಕೆ ನಿಲ್ಲಿಸುವ ಯೋಜನೆಯಂತೂ ಇಲ್ಲ, ಹಾಂ...!!! ಬೋರ್..ಆದ್ರೂ..ನನ್ನ ಸಹವಾಸ ಮಾಡಿದ್ದಕ್ಕೆ ಸಹಿಸ್ಕೋಬೇಕು ನೀವು...ಯಾಕೆ..?? ಸಹಿಸ್ಕೊಂಡು..ನಿಮ್ಮ ಕವನಗಳು, ಕಥೆಗಳು, ವ್ಯಥೆಗಳಿಗೆ ಬ್ಲಾಗುಗಳಿಗೆ ಸ್ಪಂದಿಸೊಲ್ಲವೇ..?? ನಾನೂ..????!!!
ತಲಹಟೆ ಸಾಕು....ಮುಂದಕ್ಕೆ ಬರಿ ಅಂತೀರಾ..?? ಏನು?...ಏನೋ ಬಹಳ ಬರಿಯೋನ ತರಹ ಬೊಗಳೆ ಬಿಟ್ಕೋತೀಯಲ್ಲಾ..?? ವಿಕ್ರಮನ ಸಂತತಿ ಶತ ಆದ್ರೂ...ಭೇತಾಳ ಹ್ಯಾಗೇ..ಬರೀ ಭೇತಾಳ, ಶತಭೇತಾಳ, ಸಹಸ್ರ ಭೇತಾಳ, ಇತ್ಯಾದಿ ಯಾಕಲ್ಲ..?? .. ಅಂತಿದ್ದೀರಾ..?? ..ರೀ ಸ್ವಾಮಿ...ಬೊಗಳೆ ಈವಾಗ ನಿಮ್ಮದೋ...ನನ್ನದೋ..ಹೇಳಿ..???
ಅಲ್ರೀ...ಪಾಪಿ ಚಿರಾಯು ...ಅಂತ ಪುರಾಣಗಳ ಕಾಲದಿಂದಲೇ ಹೇಳಿದ್ದಾರಲ್ಲವೇ...??!! ಓಕೆ..ಓಕೆ... ಕಾಲೆಳೆಯೋದು ಸಾಕು ಅಂದ್ರಾ..??? ಸರಿ ವಿಷಯಕ್ಕೆ ಬರೋಣ...

ನಮ್ಮ ಶತ ವಿಕ್ರಮ ಮುಳ್ಳಿನಜಾಲಿ ಮರಕ್ಕೆ..ಮುಳ್ಳು ಚುಚ್ಚುತಾಯಿದ್ರೂ ಚುಚ್ಚಿಸ್ಕೊಂಡೇ ನೇತಾಡ್ತ ಜೋತು ಬಿದ್ದಿದ್ದ ಭೇತಾಳನ್ನ ಇಳಿಸಿ ಹೆಗಲಿಗೇರಿಸಿ ಶವದವ್ಯಾನಿನ ಕಡೆ ಹೊರಟಾಗ..ಐದು ವರ್ಷ ಸಂಸದನಾಗಿ, ವಿಧಾನ ಸಭಾ ಸದಸ್ಯನಾಗಿ..ಸದನದಲ್ಲಿ ತನ್ನ ಕೆಲಸ ಏನೂ ಇಲ್ಲ ಅನ್ನೋ ತರಹ ಗಡದ್ದಾಗಿ ನಿದ್ದೆ ಮಾಡಿ..ಚುನಾವಣೆ ಹತ್ರ ಬಂದಹಾಗೆ...ತಲೆ ಬುಡ ಇಲ್ಲದ ತನಗೇ ತಿಳಿಯದ ವಿಷಯಗಳ ಮೇಲೆ ಪ್ರಶ್ನೆ ಕೇಳೋ ಸದಸ್ಯನಂತೆ...ಸುಮ್ಮನೆ ಹೆಣದಂತಿದ್ದ ಭೇತಾಳ ಮಾತನಾಡತೊಡಗಿದಾಗ...
ಲೋ...ನಿನ್ನ..ಕಥೆ ಕೇಳೀ..ಕೇಳೀ..ತಲೆ ಶೂಲ ಆಗಿ ನನ್ನ ದೇಹಾನೆಲ್ಲ ಚುಚ್ಚುತ್ತೆ...ಅದನ್ನ ಬಿಡು...ನಿನ್ನ ಜೊತೆ..ಸ್ವಲ್ಪ ಲೋಕಾಭಿರಾಮ ಮಾತಾಡ್ತೇನೆ...ಆಯ್ತಾ..?? ಎಂದ ಶತ ವಿಕ್ರಮ ಎಂದಿನಂತೆ ಕಥೆ-ಗಿಥೆ ಎನ್ನುವ ಭೇತಾಳನನ್ನು ತಡಿಯುತ್ತಾ...
ಸರಿ ಹೇಳು ಅದೇನು ಹೇಳೀಯೋ...
ಎಂದಿತು ಭೇತಾಳ
ಅಲ್ಲ..ನಿಮ್ಮ ಭೇತಾಳ ಲೋಕದಲ್ಲಿ...ಮಳೆ ಇಲ್ಲ್ದಿದ್ರೆ ಏನ್ಮಾಡ್ತೀರಿ...??
ತಲೆಇಲ್ದೇ ಹರಟ್ತಿರೋನು..ನೀನು ಈಗ..!!. ಅಲ್ಲ, ಶತವಿಕ್ರಮ...ಮಳೆಇಲ್ದಿದ್ರೆ..ನೀವು..ಮಾನವರು ತಲೆಕೆಡಿಸಿಕೊಳ್ಳೋದು...ನಮ್ಗೆ ಯಾಕೆ ಬೇಕು...ಮಳೆ? ಸತ್ತ ಮನುಜ, ಪ್ರಾಣಿಗಳನ್ನು ತಿನ್ನುತ್ತಾ...ರಕ್ತ ಕುಡಿಯೋ ನಮ್ಮ ಜನಕ್ಕೆ ನಿಮ್ಮಂಥ ತಾಪತ್ರಯ ಇಲ್ಲ. ನಿಮ್ಮ ಒಂದು ಜನಾಂಗದವರ ಮೇಲೆ ಮತ್ತೊಂದು ಜನಾಂಗದವರನ್ನ ಎತ್ತಿ ಕಟ್ತೀವಿ...ಒಬ್ಬರೊನ್ನಬ್ಬರು ಹೊಡ್ದು ಸಾಯ್ಸೋ ಹಾಗೆ ಮಾಡ್ತೀವಿ...ಮಕ್ಕಳು ಮರಿ ಅಂತ ಭೇದ ಇಲ್ಲ ನಮಗೆ...ಒಟ್ಟಿನಲ್ಲಿ ಮಾನವ ನಾಶ ಆಗ್ಬೇಕು...ಮಾನವೀಯತೆ ನಾಶ ಆಗ್ಬೇಕು...
ಮತ್ತೆ...ನಿಮಗೆ ನಮ್ಮ ಹಾಗೆ ನಿಮಗೆ ಸಾವು..ಅಥವಾ ಆ ತರಹ ಏನೂ ಇರಲ್ವಾ...?
ನೋಡಿದ್ಯಾ ಮತ್ತೆ..??!! ನಿಮ್ಮ ಪೂರ್ವಜರ ಬುದ್ಧಿವಂತಿಕೆಯಲ್ಲಿ...ಹತ್ತನೇ ಒಂದು ಪಾಲೂ ನಿನ್ನಲ್ಲಿಲ್ಲ ನೋಡು...ಅದ್ಕೇ ಅಲ್ವೇ ನಮ್ಮಂಥ ಭೇತಾಳಗಳು ನಿಮ್ಮಲ್ಲೇ ಇದ್ದು ನಿಮ್ಮ-ನಿಮ್ಮಲ್ಲೇ ಜಗಳ ತಂದಿಟ್ಟು ನಿಮ್ಮ ಸಂತತೀನೇ ನಾಶ ಮಾಡ್ತಿದ್ದರೂ ಅರ್ಥ ಆಗ್ತಾ ಇಲ್ಲ ನಿಮಗೆ.....ಹೂಂ...ಸರಿ ಬಿಡು..., ನಮಗೆ ಸಾವು ಇಲ್ಲ...!!! ನಿಮ್ಮ ಸಾವು ನಮಗೆ ಇನ್ನಷ್ಟು ಆಯಸ್ಸನ್ನ ಕೊಡುತ್ತೆ...ನಾವೆಲ್ಲಿರ್ತೇವೆ ಅಂತ ನಿಮಗೆ ತಿಳಿಯೊಲ್ಲ...ಆ ತರಹ ತಿಳ್ಕೋಂಡೋರಿದ್ರೆ...ಅವರ ಬಗ್ಗೆ ನಿಮ್ಮಲ್ಲಿ ಅನುಮಾನಗಳು ಬರೋಹಾಗೇ ನಿಮ್ಮ ಬುದ್ಧಿಯನ್ನ ಆವರಿಸ್ಕೋತೀವಿ...ಹೀಗೆ..ನಮಗೆ ಸಾವು ಅನ್ನೋದೇ ಇರೋಲ್ಲ... ಇನ್ನು ಒಂದು ಜನಾಂಗ ಬುದ್ಧಿವಂತರಾಗಿದ್ರೆ ಅವ್ರಲ್ಲೇ ಕೆಲವರ ತಲೆ ಕೆಡೋ ಹಾಗೆ ಮಾಡಿ ಇನ್ನೊಂದು ಜನಾಂಗದ ವಿರುದ್ಧ ಎತ್ತಿ ಕಟ್ತೀವಿ...ಆ ಜನಾಂಗಲ್ಲೇ ಕ್ಯಾನ್ಸರ್ ಉದ್ಭವ ಮಾಡ್ತೀವಿ...ಮೊದಲೇ ಎಚ್ಚೆತ್ಕೊಂಡ್ರೆ ಸರಿ...ಇಲ್ಲ ಅಂದ್ರೆ ಅದನ್ನ ಇನ್ನೂ ಹರಡ್ತೀವಿ...ಇಡೀ ಜನಾಂಗ ಮಾನವ ಕುಲದ ಶತೃ ಅನ್ನೋ ತರಹ ಎಲ್ಲವನ್ನ ಬದಲಾಯಿಸ್ತೀವಿ... ಹಾಗೂ ಒಂದ್ವೇಳೆ ಎರಡೂ ಜನಾಂಗ ಚೇತರ್ಸಿಕೊಂಡ್ರೆ ಮೂರನೇದಕ್ಕೆ ಹೋಗ್ತೀವಿ...ನಮಗೆ ಸೀಮೆಗಳು.,,ಎಲ್ಲೆಗಳು, ಮೇರೆಗಳು ಇರೊಲ್ಲ..
ಎಲ್ಲ ಜನಾಂಗಗಳೂ ಸರಿಯಾದರೆ...ಆ ದೇಶ ಬಿಟ್ಟು ಇನ್ನೊಂದಕ್ಕೆ ಹೋಗಿ ಅದನ್ನ ಚನ್ನಾಗಿರೋ ದೇಶದ ವಿರುದ್ಧ ಮಸಲತ್ತು ಮಾಡೋ ಹಾಗೆ ಮಾಡ್ತೀವಿ...ಒಂದು ಕಾಲದಲ್ಲಿ...ಶಕ್ತಿ ಆಗಿದ್ದ ರಷ್ಯಾ ಈಗೇನಾಗಿದೆ..?? ತಾನೇ ಅಂತ ಬೀಗ್ತಾ ಇದ್ದ ಸದ್ದಾಮ್ ಕಥೆ ಏನಾಯ್ತು?? ಎತ್ತರಕ್ಕೆ..ಇನ್ನೂ ಎತ್ತರಕ್ಕೆ ಅಂತಾ ಇದ್ದ ಅಮೇರಿಕ್ಕನ್ನರ ಗರ್ವ ಮುರಿಯೋಕೆ ಉನ್ನತ ಕಟ್ಟಡಗಳೆರಡನ್ನೂ ಕ್ಷಣಮಾತ್ರದಲ್ಲಿ ಧ್ವಂಸಮಾಡಲಿಲ್ವೇ..??? ಹಹಹ....
ತುಂಬಾ ವಿಕಾರವಾಗಿ ನಕ್ಕಿತು..ಭೇತಾಳ
ಏ..ನಿಲ್ಸೋ..ನಿನ್ನ ಸ್ವಯಂ ಶಂಖ....ಏನಾಯ್ತು..ಕಟ್ಟಡ ಉರುಳ್ಸಿದ್ರಿ...ಆದ್ರೆ ನೀವು ನಾಶ ಆದ್ರಾ...ನಿಮ್ಮ ಕುಲದವರನ್ನ ಪ್ರಪಂಚ ಗುರ್ತಿಸ್ತಾ..???
ನಿನ್ನ ತಲೆ...ಅದೇ..ತಪ್ಪು ನಿನ್ನದು...ನಾವೆಲ್ಲಿ ನಾಶ ಆದ್ವಿ..ನಿಮ್ಮ ಮನುಷ್ಯಾನೇ ನಾಶ ಆಗಿದ್ದು...ನಾವು ನಮ್ಮ ಕೆಲಸ ಮುಗಿದ ತಕ್ಷಣ..ಆ ದೇಹ ಬಿಟ್ವಿ ಇನ್ನೊಂದಕ್ಕೆ ಸೇರ್ಕೊಂಡ್ವಿ...ಪ್ರಭಾಕರ, ವೀರಪ್ಪನ್, ಕಸಬ್ ಸ್ನೇಹಿತರು..ಎಲ್ಲ ಸತ್ತರು...ಆದ್ರೆ ನಾವು...!!! ಪೆದ್ದ...ಬದ್ಕೇ ಇದ್ದೀವಿ...ನಿಮ್ಮ ಮಧ್ಯದಲ್ಲೇ ಇದ್ದೀವಿ....ಹಹಹ...ಹಹಹ...ಹಿ..ಹಿ..ಹಿ..
ಎನ್ನುತ್ತಾ,,,ಕರ್ಕಷವಾಗಿ ಕೂಗುತ್ತಾ ...ಇನ್ನು ಇವನ ಮಾತು ಕೇಳಿದ್ರೆ..ನಮ್ಮ ಬುಡಕ್ಕೇ ತರ್ತಾನೆ ನೀರು...ಅದರಲ್ಲೂ ಈ ವಿಕ್ರಮ ವಂಶದಿಂದ ಸ್ವಲ್ಪ ದೂರಾನೇ ಇರ್ಬೇಕು...ಎಂದುಕೊಳ್ಳುತ್ತಾ ...ಶತವಿಕ್ರಮನ ಭುಜಬಿಟ್ಟು...ಹಾರಿ...ಜಾಲಿಮರದಕಡೆಗೆ ಹೊರಟಿತು.
ಈ ಭೇತಾಳಕ್ಕೆ ಇದರ ವಂಶಕ್ಕೆ ಒಂದು ಗತಿ ಕಾಣಿಸ್ಲೇ ಬೇಕು..ಇಲ್ಲ ಅಂದ್ರೆ ನಮ್ಮ ಮನುವಂಶಕ್ಕೆ ಉಳಿಗಾಲ ಇಲ್ಲ ..ಎಂದುಕೊಂಡ ಶತ ವಿಕ್ರಮ ಮತ್ತೆ ಜಾಲಿ ಮರದೆಡೆಗೆ ಹೆಜ್ಜೆ ಹಾಕಿದ.

Tuesday, July 7, 2009

ನನ್ನವರು


(ವೆಬ್ ಚಿತ್ರ)
ನನ್ನ ಕಣ್ಣಲ್ಲಿ ಉಕ್ಕಿರಲಿಲ್ಲ
ಇನ್ನೂ ನೀರು...
ಕಕ್ಕುಲತೆಯಿಂದ ಅಮ್ಮನೆಂದಳು
ಯಾಕೆ ಕಂದ..? ಏನುಬಿತ್ತು
ಕಣ್ಣಿಗೆ ಕಣ ಚೂರು..??
ತನ್ನ ಸೆರಗನ್ನು ಬಾಯಿಗಿಟ್ಟು
ಕಾವುಕೊಟ್ಟು ನನ್ನ ಕಣ್ಣಿಗೆ
ಒತ್ತಿ ಹಿತವಾಗಿ ಸವರಿದಳು
ಕಣ್ಣಗಲಿಸಿ ಊದಿದಳು...!!
ತಣ್ಣೀರಲಿ ತೊಳೆಯಲೇ ಎಂದೆಲ್ಲಾ
ಹುಲುಬಿದಳು..ತನ್ನ ಕಣ್ಣಿಗೇ
ಎನೋ ಬಿದ್ದಂತೆ
ನನ್ನ ಕಣ್ಣು
ತೇವವಾಗುವುದಕ್ಕೆ ಮೊದಲೇ
ಹನಿಗೂಡಿತ್ತು ಅವಳ ಕಣ್ಣು.
ಅವಳು ಮಮತೆಯ ಮಾತೆ.
ಅಪ್ಪ
ಕಂಡ ಇದನೆಲ್ಲ...
ಏನು ಮಾಡ್ಕೊಂಡ್ಯೋ..?
ಗಮನ ಇಟ್ಟು ಕೆಲ್ಸಮಾಡು
ಎಷ್ಟು ಸರ್ತಿ ಹೇಳಿಲ್ಲ ನಿನಗೆ??
ಸ್ವಲ್ಪ ನೀರು ಚಿಮುಕಿಸಿ
ಕನ್ನಡಿ ಒರೆಸೋದು ಬಿಟ್ಟು
ಊದಿದರೆ ಕಣ ಚೂರು
ಬರದೇ ಇರುತ್ಯೇ ಕಣ್ಣೀರು..?
ಏನು, ಹೇಗೆ ಯಾವಾಗ
ಮಾಡಬೇಕೆಂದು ಬದುಕ
ಕಲಿಸುವನೀತ
ನನ್ನ ಜನ್ಮದಾತ.
ಅಣ್ಣನೆಂದ
ಆತ್ರ ಇವನಿಗೆ, ನಾನೆಲ್ಲಿ
ಮೊದಲು ಕನ್ನಡಿ ತಗೋತೀನೋಂತ
ಯಾವುದನ್ನೂ ಸರಿಯಾಗಿ
ಮಾಡೊಲ್ಲಾಂತಾನೆ..
ಕೊಡು ನಾನು ಒರೆಸ್ಕೊಡ್ತೀನಿ
ಬಯ್ದು ಕಾಳಜಿ-ಪ್ರೀತಿ ತೋರಿಸಿದ್ದ
ನನ್ನ ಅಗ್ರಜ.
ಯಾಕೋ ಅಣ್ಣ
ನನ್ಗೆ ಹೇಳಿದ್ರೆ ಒರೆಸ್ಕೊಡ್ತಿರ್ಲಿಲ್ಲವೇ?
ಅಮ್ಮ ಬಿಡಮ್ಮ, ನಾನ್ನೋಡ್ತೀನಿ
ಅಣ್ಣನ ಕಣ್ಣಿಗೆ ನೀರ್ ಹಾಕ್ತೀನಿ..
ಅಂತಾಳೆ ಪ್ರೀತಿಯ ತಂಗಿ
ಮನೆಯಲ್ಲಿ ಎಲ್ಲರೂ ಪ್ರೀತಿಸುವವರೇ
ಆದರೆ ಒಬ್ಬೊಬ್ಬರದೂ
ಒಂದೊಂದು ತೆರನಾದ ಭಂಗಿ

Friday, July 3, 2009

ಕನಸಲ್ಲೇ ಇರಲು ಬಿಡಿಅನ್ನಕೆ ಬೇಕಾದ ಮಾಡೋದಕೆ ನಾವು
ಚಿನ್ನ ತೆಗೆಯೋದಕ್ಕೆ ನಾವು
ಕನ್ನ ಕೊರ್ದು ಬಾಚ್ಕೊಂಡು
ದರ್ಬಾರು ಮಾಡೋಕೆ ನೀವು

ಅಕ್ಷರ ಕಲಿಸೋರು ನಾವು
ಮತ್ಸರ ಉಡುಗಿಸೋರು ನಾವು
ನಮ್ಮ ಶತೃಗಳ ಜೊತೆ ವ್ಯವಹಾರ
ಮಾಡಿ ಮಜಾ ಮಾಡೋಕೆ ನೀವು

ಕರೆಂಟಿಲ್ಲದ ಮನೇಲಿ ನಾವು
ಬಂಜರಲ್ಲಿ ಬೆಳಿಯೋಕೂ ನಾವು
ಓದೋಮಕ್ಕಳಿಗೆ ದೀಪಾನೂ ಕೊಡ್ದೋರು..
ಕತ್ತಲಲ್ಲಿ ಪರ್ದಾಡೋರು ನಾವು
ಸಾವ್ರಾರು ದೀಪಾನ ಹಗಲಲ್ಲೂ
ಮನೇ ತುಂಬ ಉರಿಸೋರು ನೀವು

ನೂರು ಜನ ತಿನ್ನೋದನ್ನ ಚಲ್ಲಾಡಿ
ತಿಂದೂ ತಿನ್ನದಹಾಗೆ ಒಬ್ಬರೇ ತಿಂತೀರ
ಒಬ್ಬರು ಚಲ್ಲಾಡಿ ತಿನ್ನೋದು ಕೊಡಿ
ಹತ್ತು ಬಡವ್ರ ಹೊಟ್ಟೆ ತುಂಬುತ್ತೆ
ಅನ್ನೋದನ್ನ ಯಾಕೆ ಮರೀತೀರಾ?
ಸಾವ್ರ ದೀಪ..ಒಂದೇ ಮನೆ
ಒಂದೊಂದಾದ್ರೂ ದೀಪ ಸಾವ್ರ ಮನೆ
ಬೆಳ್ಗುತ್ತೆ.. ಬೆಳ್ಯುತ್ತೆ ಇಷ್ಟಾದರೂ ಕಲೀತೀರಾ..?

ಇದ್ದೋರು ಇಲ್ದೋರ್ಗೆ ಕೊಡೋದು ಕಲಿತ್ರೆ
ಇದ್ದೋರು-ಇಲ್ದೋರು ಅನ್ನೋ ಭೇದ ಇರುತ್ತಾ?
ಕುರ್ಚೀಲಿ ಕೂತು ದರ್ಬಾರ ಮಾಡೋರು
ಗುಡ್ಲಲ್ಲಿರೋರ ಸುಖ-ದುಃಖ ಅರಿತರೆ
ಹೊಟ್ಟೇಗಿಲ್ದೆ ಸಾಯೋರು, ಬಟ್ಟೇ ಇಲ್ದೇ ಬೇಯೋರು....,
ಓಹ್..ಹೀಂಗೂ ನನ್ ಕನಸು ನನಸಾಗ್ತದಾ,,??
ಹಗಲ್ಗನಸು ಅಲ್ಲ ಇದು ಎದ್ದು ನೋಡು ನನಸು....!!
ಅಂತ ಯಾರಾದರೂ ನನ್ನ ಎಚ್ಚರಿಸೋ ಕಾಲ ಬರುತ್ತಾ???
ಹಾಗೊಂದು ವೇಳೆ ..ಇಲ್ಲ ಅಂದ್ರೆ....
ನನ್ನನ್ನ ನನ್ನ ಕನಸಲ್ಲೇ ವಿಹರಿಸಲು ಬಿಡಿ.

Thursday, June 25, 2009

ಮೋಡಕ್ಕೆ ಏಣಿ


(With Permission from Shivu for using the photo)

ಮೋಡಕ್ಕೆ ಏಣಿ
ಹಾಕಿದ್ದಾರೆ ನೋಡಿ
ಪಾಪು ಪುಟ್ಟಿ ಪುಟಾಣಿ
ಮನ ಹಿರಿದು
ತನು ಕಿರಿದು
ಕನಸುಗಳಿಗೆ ಎಲ್ಲೆ-ಎಲ್ಲಿ?
ಅದಕೇ ಏರಿಸಿ
ಆಕಾಶಕ್ಕೇ ಏಣಿ
ರಾಮ, ಜೋಸೆಫ್ ರಹೀಮ
ಸುಳಿಯೋದೇ ಇಲ್ಲ ಇವರಲ್ಲಿ
ಧರ್ಮ-ತಲೆಹಿಡುಕ ಖದೀಮ
ಮರವಿಲ್ಲ್-ಮೇಲೆ ಮರಕೋತಿ
ಕುಂಟಾ ಬಿಲ್ಲೆ ಬುತ್ತಿ-ಆಟ ಚಪಾತಿ
ಮಡಿಯಿಲ್ಲ ಗಡಿಯಿಲ್ಲ
ಜತೆಗೂಡಿ ತಿನ್ನುವರಲ್ಲ
ಹೀಗೆ ಬೇಡ ಹಾಗೆ ಇರು
ಅದು ಸಲ್ಲ ಇಲ್ಲಿ ಸೇರು
ಮಕ್ಕಳಿಗೆ ಬೋಧಿಸುವ
ಪರಿ ಪರಿ ಪೀಡಿಸುವ
ನಮ್ಮ ಸಂಕುಚಿತತೆ ಹೇರುವ
ನಿಜ-ಜೀವನದ ಪಾಠಕ್ಕೆ
ಹೋಗಿ ಸೇರಬೇಕಲ್ಲವೇ
ನಾವೂ ಅವರ ಆಟಕ್ಕೆ??

Sunday, June 21, 2009

ಬಲು-ಸಹಜಾನ್ರಪ್ಪ ಈಜೋಡಿ


(ಚಿತ್ರದ ಬಳಕೆಗೆ ಧರಿತ್ರಿಯವರ ಅನುಮತಿಕೋರಿ)ಸುಬ್ಬು-ಸೀನು ಸೈಕಲ್ ಮ್ಯಾಲೆ
ಏರಿಗುಂಟ ಡಾಂಬರು ರಸ್ತೆ ಮ್ಯಾಲೆ
ಹಳ್ಳೀತುಂಬಾ ಎಸ್ರುವಾಸಿ
ಅದಕ್ಕೇ ಜನಾ ಹೇಳ್ತಾರೆ ನೋಡಿ
ಬಲು ಸಹಜಾನ್ರಪ್ಪ ಈ ಜೋಡಿ

ಸುಕ-ಇರ್ಲಿ ದುಃಕ ಬರ್ಲಿ
ಬರಾ ಆಗಲೀ ಕಣಜ ತುಂಬಲಿ
ಸುಬ್ಬಂಗೆ ಸೀನು ಸೀನಂಗೆ ಸುಬ್ಬ
ಅವನಿಗಿಲ್ಲದೇ ಇವನಿಗಿಲ್ಲ ಯಾವ್ದೇ ಹಬ್ಬ

ಬೆಳಗಾಗೆದ್ದು ಸೈಕಲ್ಲೇರಿ
ಎಗ್ಲಿಗೇರ್ಸಿ ಟವಲ್ಲು ಒಂಟಿತ್ತು ಜೋಡಿ
ಜಾತ್ರೆ ಸೇರಿತ್ತು ಹರಿದ
ಮ್ಯಾಲೆ ಹೊಸಳ್ಳಿ ಕೋಡಿ

ಸುಬ್ಬ ಒತ್ತೋದು ಎಬ್ಬೆರಳಿಗೆ ಓಟು
ಸೀನಂಗೆ ಮಲ್ಗೆ ಪಾರ್ಟಿಂದ್ರೆ ಸ್ವೀಟು
ಚುನಾವಣೆ ಮುಗುದ್ರೆ ಮತ್ತದೇ ಸೈಕಲ್ಲು
ರಾಜಕಾರಣೀಗಳೂ ಕಲೀಬೇಕು ಈ ಪ್ರಿನ್ಸಿಪಲ್ಲು

Tuesday, June 9, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ದೊಡ್ಡ ದೊಡ್ಡ ಪದವೀಲಿ ಇರೋರ್ಗೆ
ಹಾಂ..ಇರೋರ್ಗೆ..??
ಮಾನ ಅನ್ನೋದು ತುಂಬಾ ಇರುತ್ತಾ??
ಹೌದಪ್ಪಾ..ಅದ್ಕೇ ಅಲ್ವ ಅವರು ಆ ಪದವೀಲಿರೋದು..
ಹಂಗಾರೆ..ಮಾನ ನಷ್ಟ ಮೊಕದ್ದಮೆ ಹಾಕಿದ್ರೆ
ಹೋದ ಮಾನ ವಾಪಸ್ ಬಂದ್ಬಿಡುತ್ತಾ..?
ಗೊತ್ತಿಲ್ಲ ಮಗು.

ಅಪ್ಪಾ
ಹೇಳು ಮಗು
ಜೊoಡ್ ಬೆಳೆದ ಬೆಂಗ್ಳೂರ್ ಕೆರೆ ಅಸಹ್ಯ ಅಲ್ವಾ..?
ಹೌದಪ್ಪ..ಉದ್ಯಾನ ನಗರೀಗೆ ದೃಷ್ಠಿ-ಬೊಟ್ಟು..
ಬಿ.ಬಿ.ಎಮ್.ಪಿ. ಗೆ ಇದನ್ನ ಕ್ಲೀನ್ ಮಾಡೋಕೆ
ಅಭಿಶೇಕ್ ನಂತಹ ಕಂದಮ್ಮಗಳ ಬಲಿಬೇಕಾ?
ಗೊತ್ತಿಲ್ಲ ಮಗು

ಅಪ್ಪಾ
ಏನಪ್ಪಾ ರಾಜ?
ರಾಜ ಅಂತೀಯ ಮತ್ತೆ ಏನ್ಕೇಳಿದ್ರೂ
ಅದುಬೇಡ..ಇದು ಆಮೇಲೆ ಅಂತೀಯಾ..
ನೀನು ದೊಡ್ದವನಾಗು ಆಮೇಲೆ ನೀನೇ ರಾಜ
ಅದ್ಕೇನಾ ರಾಜಕಾರಣಿ ಮಂತ್ರಿ ಆದ್ಮೇಲೆ
ಇದು ಈಗಲ್ಲ..ಅದು ಆಗೊಲ್ಲ ಅನ್ನೋದು..?
ನಂಗೊತ್ತಿಲ್ಲ ಮಗು

ಅಪ್ಪಾ
ಇನ್ನೂ ಏನೋ ನಿಂದು ತರಲೆ?
ನೋಡ್ದ್ಯಾ ಮಕ್ಕಳ ಪ್ರಶ್ನೆಗೆ ಉತ್ತರಿಸೋದು
ದೊಡ್ದವರ ಕರ್ತವ್ಯ ಅಂತಾರಲ್ಲವಾ?
ಹೌದಪ್ಪ..ಕೇಳು..ಅದೇನ್ಕೇಳ್ತೀಯೋ..
ಸ್ಕೂಲಲ್ಲಿ ಹುಡುಗ ಚೇಸ್ಟೆ ಮಾಡ್ದ ಅಂತ
ಮೇಸ್ಟ್ರು ಅವನ್ನ ಹೊಡ್ದಿದ್ದಕ್ಕೆ ಮೇಸ್ಟ್ರನ್ನ ಕೆಲ್ಸದಿಂದ
suspend ಮಾಡ್ಸಿ ಬಿಟ್ರಲ್ಲಾ ಅವನ ಪೋಷಕರು?
ಹೌದಪ್ಪಾ..ತೀರಾ ಅತಿಯಾಯ್ತು ಬಿಡು..
ಮತ್ತೆ ಬೇರೆ ದೇಶದಲ್ಲಿದ್ದು ಓದ್ತಾಯಿರೋ ಭಾರತೀಯರ್ನ
ಯಾರೋ ದಾರಿಹೋಕರು ಹಿಗ್ಗಾ-ಮುಗ್ಗಾ ಹೊಡ್ದ್ರೂ
ಸುಮ್ಮನಿದ್ದೀವಲ್ಲಾ ನಾವು..ಇದು ಅತಿ ಅಲ್ವಾ?
ನಂಗೊತ್ತಿಲ್ಲ ಮಗು

Sunday, June 7, 2009

ರನ್- ಅಂದ್ರ‍ೇನು..??

ದೃಶ್ಯ-1

ಮೋಹನ್: ಹಲೋ..ಹಲೋ..ರುಕ್ಮಣಿಯಮ್ಮನೋರೆ...ಆಗ್ಲೆ ರನ್ ಶುರು ಆಗ್ಬಿಟ್ಟಿದೇರೀ..ಎಲ್ಲಿದೀರಾ...?? ಹಲೋ..ನಿಮ್ಮ ಜೊತೆ..ರೋಸಿ ಮೇಡಂ ಬರ್ತೀನಿ ಅಂದಿದ್ರಲ್ಲಾ...ಅವ್ರನೂ ಕರ್ಕೊಂಡ್ ಬನ್ನಿ...ಆಯ್ತಾ...ಹಲೋ...ಹಲೋ...ಮರೀಬೇಡ್ರಿ..ನೀವ್ ಬರೋಕೆ ಆಗೊಲ್ಲ ಅನ್ನೋಂಗಿದ್ರೆ...ರೋಸಿ ಅವ್ರಿಗೆ ಹೇಳಿ..ಮೋಹನ್ ಪಾರ್ಕಿನತ್ರ ಕಾಯ್ತಾ ನಿದಾನಕ್ಕೆ ಓಡ್ತಿರ್ತಾರೆ ಜಾಯಿನ್ ಆಗು ಅಂತ...ಓಕೆ...ಮರೀಬೇಡಿ...

ರುಕ್ಮಣಮ್ಮ: ಹಲೋ..ಮೋಹನ್ ಸರ್..ಹಲೋ.. ಹಾಂ ಕೇಳ್ಸ್ತಾ ಇದೆ..ಹಾಂ...ಬರ್ತೀನಿ....ಹಲೋ..ಯಾರು ರೋಸೀನಾ...ಓಕೆ..(ಸ್ವಗತ-ಬಿಳಿ ಚರ್ಮ ಅಂದ್ರೆ ಹಲ್ಗಿಂಜ್ತಾನೆ...ಈ ಬಾಸ್ ಗಳೇ ಹಿಂಗೆ....)..ಹಾಂ...ಹಲೋ ಸರ್..ಇಲ್ಲ..ಇಲ್ಲ...ನಾನೂ ಬರ್ತೀನಿ...ಏನಂದ್ರಿ...ಇಲ್ಲ ಸರ್ ಅವ್ಳನ್ನೂ ಕರ್ಕೊಂಡ್ಬರ್ತೀನಿ....ಓಕೆ...

ರೋಸಿ: (ತನ್ನ ಮೊಬೈಲ್ ಮೆಸೇಜ್ ನೋಡ್ತಾ..ಸ್ವಗತ) what a silly fellow..why he is calling this old lady ,??...Oh...he wants me to be precise...for me business is more important..let me run with him....to please.
ದೃಶ್ಯ-2


ಮೊದಲ್ನೇ ಮೇಡಂ: (ಜೋರಾಗಿ..) ಮೂರ್ತಿ ಸರ್..ನಿಲ್ಲಿ ನಾವೂ ಬರ್ತೀವಿ...ಹಲೋ..ಸರ್...
ಎರಡ್ನೇ ಮೇಡಂ: ಮೂರ್ತಿ ಸರ್ ..ಸರಸೂ ಮೇಡಂ ಒಂದೆರಡ್ದ್ಮೊಳ ಮಲ್ಲಿಗೆ ಪಾರ್ಕ್ ಹತ್ರ ಕೊಂಡ್ಕೊಂಡು ಬರೋಕೆ ನಮ್ಮನೇವ್ರಿಗೆ ಹೇಳಿ ಅಂದ್ರು..ನೀವು ಕಾಣ್ಲಿಲ್ಲ ಅದ್ಕೇ ನಾನೇ ಕೊಡ್ಕೊಂಡೆ..ನೀವು ಕೊಟ್ಟ್ಬಿಡಿ ಸರ್....
ಮೂರ್ತಿ: ರೀ..ಶೇಖರ್..ಬನ್ನಿ ಬೇಗ ಬೇಗ ಹೋಗೋಣ ಇವರ ಇಬ್ರ ಕೈಗೆ ಸಿಕ್ಕರೆ..ಉಳ್ದಿರೋ ಒಂದೆರಡು ಕೂದ್ಲೂ ತಳೇಲಿ ಉಳಿಯೊಲ್ಲ ಅವರ ಕುಯ್ದಾಟಕ್ಕೆ ಪರಚ್ಕೋತೀವಿ,...ನಮ್ಮ ಆಫೀಸ್ ಗೆಸ್ಟ್ ರೋಸಿ ಬರ್ತಾಳೆ ಅಂದ್ಕೊಂಡ್ರೆ ಇವ್ರು ಗಂಟು ಬೀಳ್ತಾ ಇದ್ದಾರೆ...
ಶೇಖರ್: ಹೌದ್ರಿ ಮೂರ್ತಿ...ನಮ್ ಬಾಸ್ ಬಿಡ್ಕೊಡ್ತಾನೆಯೇ ರೋಸೀನಾ...ಅಲ್ನೋಡಿ..ಅಲ್ಲೇ ಪಾರ್ಕ ಹತ್ರ waiting ಕಾಯ್ಕೊಂಡು.ದೃಶ್ಯ-3

ರವಿ: ಲೇ ರಮೇಶ ನಿಂತ್ಕೊಳ್ಳೋ...ಬಾ ಅಂತ ಹೇಳಿ..ಒಬ್ಬನೇ ಹೊರಬಿಟ್ಯಾ...?? (ಸ್ವಗತ....ಬಡ್ಡಿ ಮಗ...ಬಾ ಅಂತ ಹೇಳಿ ಡೌಗಳು ಸಿಕ್ಕಿದ್ವು ಅಂತ ತಪ್ಪಿಸ್ಕೊಂಡ್ ಹೋಗೋದು ನೋಡು).
ರಮೇಶ: ಶಮಾ..ಸುಮಾ...ಬೇಗ ಬೇಗ ಹೆಜ್ಜೆ ಹಾಕಿ...ಇದೇನು ವಾಕಿಂಗ್ ರೇಸಾ..ಜಾಗ್ ಮಾಡಿ...(ಸ್ವಗತ...ಬೇಗ ಹೋಗ್ಬೇಕು... ಆನನ್ಮಗ ರವಿ ನೋಡ್ಬಿಟ್ಟ)ದೃಶ್ಯ-4

ಪತ್ರ ಕರ್ತೆ: ನಮಸ್ಕಾರ ಸರ್ ಈ ವಯಸ್ಸಿನಲ್ಲಿ ನಿಮಗೆ ರನ್ ನಲ್ಲಿ paricipate ಮಾಡ್ಬೇಕು ಅಂತ ಅನ್ಸಿದ್ದು ಯಾಕೆ ನಿಮಗೆ??....
VeteRUN: ನನಗೆ ರನ್ ಮಾಡೂದು ಅಂದ್ರೆ ಬಹಳ ಇಷ್ಟ..ಯಾಕಂದ್ರೆ ನಾನು ನೌಕರಿ ಪ್ರಾರಂಭಿಸಿದ್ದು ‘ರನ್ನರ್‘ ಆಗಿಯೇ....
ಪತ್ರಕರ್ತೆ: ಅಂದ್ರೆ ನೀವು ಅಥ್ಲೆಟ್ ಆಗಿದ್ರಾ...?
VeteRUN: ಅಲ್ಲಮ್ಮಾ...‘ಬ್ರಿಟೀಶರ ಕಾಲ್ದಲ್ಲಿ ರನ್ನರ್ ಅಂದ್ರೆ...postman ಕೆಲಸ...ಹಹಹಹ
ಪಕ್ಕದಾತ: (ನಗುತ್ತಾ..ಯಜಮಾನ್ರು ಜೋಕ್ ಮಾಡ್ತಿದ್ದಾರೆ...) ಹಹಹಹ
VeteRUN: (ಕೋಪದಿಂದ)..ನಿಮ್ಮ ತಲೆ...ಸುಮ್ಮನಿರ್ರೀ..ಗೊತ್ತಿಲ್ಲ ಅಂದ್ರೆ ಮಾತ್ನಾಬಾರ್ದು....Runner = Postman ಗೊತ್ತಾ...
ಪತ್ರಕರ್ತೆ: ಅಂದ್ರೆ...ಇಷ್ಟೊಂದು ಜನ ಪೋಸ್ಟ್ ಮ್ಯಾನ್ (ಉಮನ್) ಗಳು ಓಡ್ತಾ ಇದ್ದಾರಲ್ಲಾ ಯಾಕೆ...??
VeteRUN: (ಹಹಹ) ಇದು..ಜೋಕು...ಇವಾಗ ನಗ್ರೀ...(ಪಕ್ಕದವರಿಗೆ)...ಎಸ್ ಮೇಡಂ ಇದು ಜೋಕೂ ಆಗ್ಬಹುದು...ಸೀರಿಯಸ್ಸೂ ಆಗ್ಬಹುದು...


ನಮ್ಮ ಪರಿಸರ ನಿಸರ್ಗ ಇದರ ಬಗ್ಗೆ ಕಾಳಜಿ ಜನಸಾಮಾನ್ಯರಲ್ಲಿ ಜಾಗೃತಿ ತರಲಿ ಎನ್ನೋ ಉದ್ದೇಶಕ್ಕೆ ಈ ರನ್ ನಿಯೋಜಿಸಿರುವುದು...ಅದನ್ನ ಹಾಗೇ ಗಂಭೀರವಾಗಿ ತಗಂಡು.. ಜನ ಕಾರ್ಯ ತತ್ಪರರಾದ್ರೆ...ಸೀರಿಯಸ್ಸು...ಇಲ್ಲ..ಇವರತರಹ..(ಪಕ್ಕದವರನ್ನು ತೋರಿಸಿ) ಜೋಕು ಅಂದ್ಕಂಡ್ರೆ ಜೋಕು....ಇಷ್ಟು ಜನ postman..postwomen ಅಂದ್ರಲ್ಲಾ..ನಿಜ..ಇವರೆಲ್ಲಾ ಈ ಸಂದೇಶವನ್ನ ಜನಕ್ಕೆ ತಲಪಿಸೋಕೆ ರನ್ ಮಾಡೋದು..ಇನ್ನು ಇವರು (ಪಕ್ಕದವರನ್ನು ನೋಡಿ..ವ್ಯಂಗದಿಂದ) ಎಷ್ಟು ಸೀರಿಯಸ್ಸಾಗಿ ಇದನ್ನು ತಗೋತಾರೆ ಅನ್ನೋದರ ಮೇಲೆ ನಿಮ್ಮ ಟಿಪ್ಪಣಿಗೆ ಅರ್ಥ ಕೊಡಬಹುದು.
ಪತ್ರಕರ್ತೆ: ಧನ್ಯವಾದ ಸರ್.
[ಶಿವು ಅವರ ಬ್ಲಾಗ್ ನಿಂದ (ಅವರ ಅಪ್ಪಣೆಯಿದೆ ಅಂದ್ಕೋತೀನಿ) ತೆಗೆದು ಬ್ಲಾಗಿಸಿದ್ದೀನಿ]