Thursday, June 6, 2013

ಯಾರೋ ಬಂದಂತೆ.....

ಚಿತ್ರ: ವಖ್ತ್ (೧೯೬೫) ಗಾಯಕಿ: ಆಶಾ ಭೋಂಸಲೆ
ಸಂಗೀತ – ರವಿ
ಕೌನ್ ಆಯಾ ಕೆ ನಿಗಾಹೋಂ ಮೆ.....

ಯಾರೋ ಬಂದಂತೆ...

ಯಾರೋ ಬಂದಂತೆ ಮನಸು ಹಿಡಿತ ತಪ್ಪಿ ಜಾರುತಿದೆ
ತನು ಮನ ಬಳಸಿ ನನ್ನ ಬರ ಸೆಳೆದು ಹಾಡುತಿದೆ...II2II
                                ಯಾರೋ ಬಂದಂತೆ....

ನನ್ನವನ ಬರುವ ಸುದ್ದಿ ತರುತಲಿದೆ ತಂಗಾಳಿ..II2II
ಮೈ ನವಿರೇಳಿಸೋ ನೆನಪು ತರುವ ತಂಗಾಳಿ .II2II
……………………………ಆ ಆ ಆ ಆ ಆ...
                   ತನುವೂ ತೂಗಿದೇ...
ತನುವೂ ತೂಗಿದೆ ಮನ ಮುದದಿಂದ ಹಾಡುತಿದೆ
ಇನಿಯನ ಸನಿಹ ಬಯಸಿ ನನ್ನನು ಇದು ಕಾಡುತಿದೆ
                   ಯಾರೋ ಬಂದಂತೆ IIII
ಯಾರ ಕೈ ಸ್ಪರ್ಶಕೆ ಈ ಬಾಹುಗಳು ಬಾಗುತಿವೆ II2II
ಯಾರ ಕಾಣಲು ಕಣ್ಣು ಕನಸುಗಳು ಸಾಗುತಿವೆ II2II
…………………….ಓಓಓಓ....
                   ಯಾರೋ ಎಳೆದಂತೇ...
ಯಾರೋ ಎಳೆದಂತೆ ನನ್ನ ಸೆರಗಲ್ಲೂ ತುಡಿತವಿದೆ
ತನು ಮನ ಬಳಸಿ ನನ್ನ ಬರ ಸೆಳೆದು ಹಾಡುತಿದೆ..

                   ಯಾರೋ ಬಂದಂತೆ  IIII