Saturday, December 25, 2010

Saturday, December 18, 2010

ಇತಿಹಾಸದ ಪುಟದಿಂದ ಮಾನವತೆಗೆ ಒಂದು ಪಾಠ

ಮೊಹರಂ ಬಗ್ಗೆ ಓದುವಾಗ ಒಂದು ಸೈಧ್ದಾಂತಿಕ ವಿಷಯ ತಿಳಿಯಿತು...
(ಇಲ್ಲಿ ಧರ್ಮದ ಬಗ್ಗೆ ಯೋಚಿಸುವುದು ಬೇಡ..).ಆಗ ಪೈಗಂಬರ್ ಮೊಹಮ್ಮದರ ನಂತರದ ಮುಂದಾಳತ್ವದ ಪ್ರಶ್ನೆ ಬಂತು, ಸ್ವತಃ ಮೊಹಮ್ಮದರ ಪ್ರಕಾರ ಆಗಿನ ಧರ್ಮ ಮತ್ತು ಸರ್ವಮಾನ್ಯರಲ್ಲಿ ಇಮಾಮ್ಅಬೂಬಕ್ರ್ (ಧರ್ಮ ಮುಂದಾಳತ್ವಕ್ಕೆ ಖಲೀಫಾ ಅನ್ನೋ ಪದವಿ ಸಿಕ್ಕಿದ್ದು ಬೇರೆ ವಿಷಯ), ನಂತರ ಇಮಾಮ್ ಉಮರ್, ಆ ನಂತರ ಇಮಾಮ್ ಉತ್ಮಾನ್ ಮತ್ತೆ ನಾಲ್ಕನೆಯವರು ಸ್ವತಃ ಪೈಗಂಬರರ ಅಳಿಯ ಹಜ್ರತ್ ಇಮಾಮ್ ಆಲಿ. ಹಾಗಾಗಿ ಉಮರ್ (ಆ ವೇಳೆಗೆ ಖಲಿಫಾ ಎಂಬ ಪ್ರಭಾವಿ ಒಡೆತನ ಸಿಕ್ಕಿತ್ತು) ನಂತರದ ಖಲೀಫಾ ಪಟ್ಟ ಹಜ್ರತ್ ಆಲಿ ಗೆ ಸಿಕ್ಕಬೇಕಿತ್ತು ಆದ್ರೆ ಅಧಿಕಾರ, ಧನ ಮತ್ತು ಸ್ವಾಭಾವಿಕವಾಗಿ ಧನದ ಹಿಂದೆ ಹೋಗುವ ಜನ ಬೆಂಬಲವಿದ್ದ ಉತ್ಮಾನರ ದಾಯಾದಿ “ಮುಹಾವಿಯಾ” ಖಲಿಫತ್ವ ಕಿತ್ತುಕೊಂಡ.....ಆಗಲೇ ಜಗಳಗಳು ಪ್ರಾರಂಭವಾಗುವ ಲಕ್ಷಣಗಳು ಕಂಡದ್ದು!! ಶಿಯಾ ಮತ್ತು ಸುನ್ನಿ ನಂಬಿಕೆಯ ಶಾಖೆಗಳು ಒಡೆಯಲು ಪ್ರಾರಂಭವಾಗಿದ್ದು ಎನ್ನಬಹುದು. ಹಜ್ರತ್ ಆಲಿಯವರ ಬೆಂಬಲಿಗರು ಅವರ ಬೆಂಬಲಕ್ಕೆ ನಿಂತರು. ಆದರೆ ಎಲ್ಲ ಪ್ರವಾದಿಗಳ ನಂತರ ಆ ಧರ್ಮದ ಮೂಲ ಸಿದ್ಧಾಂತ ಮತ್ತು ವಿಧೇಯತೆ ಕ್ರಮೇಣ ಮಾಯವಾಗಿ ..ಮೋಹ ಮಾಯೆಗಳು ಧರ್ಮದ ತೊಡಕುಗಳಾಗುತ್ತವಂತೆ ಹಾಗೆಯೇ ಅಂದಿನ ಖಲೀಫನ ಧನ, ಜನ ಬಲದ ಮಧ್ಯೆ ಹಜ್ರತ್ ಆಲಿಯರ ಬೆಂಬಲಿಗರು ಮತ್ತು ನಿಜ ಅನುಯಾಯಿಗಳು ಪ್ರಾಣ ಕಳೆದುಕೊಳ್ಳಲಾರಂಭಿಸಿದರು. ಇಂತಹ ಘಳಿಗೆಯೇ ನಿಜ ಮಾನವತೆ ಧರ್ಮ ಸಾರುವ ಪ್ರವಾದಿಗಳ ಸತ್ವ ಪರೀಕ್ಷೆಯ ಸಮಯ. ತನ್ನ ಅನುಯಾಯಿಗಳ ಮತ್ತು ಅಮಾಯಕರ ಮಾರಣಹೋಮ ತಡೆಯಲು ಹಜ್ರತ್ ಆಲಿಯವರು ಮುಹಾವಿಯಾ ಜೊತೆ ಒಪ್ಪಂದಕ್ಕೆ ಬರುತ್ತಾರೆ. ತಾನು ಅವರ ಖಲೀಫತ್ವಕ್ಕೆ ಸವಾಲನ್ನು ಒಡ್ಡದೇ ಇರಬೇಕಾದರೆ ಮುಹಾವಿಯಾ ತನ್ನವರಿಗೆ ಕಿರುಕುಳ ಕೊಡಬಾರದು ಮತ್ತು ರಕ್ತ ಪಾತ ಮಾಡಬಾರದು, ಹಾಗೂ ತನಗೆ ಧರ್ಮರಕ್ಷಣೆಯ ಹೊಣೆಗಾರಿಕೆ ಕೊಡಬೇಕು ಎಂಬ ಶರತ್ತು ವಿಧಿಸುತ್ತಾರೆ. ಮುಹಾವಿಯಾ ಪೈಗಂಬರರ ಮೇಲಿನ ಗೌರವ ಮತ್ತು ಹಜ್ರತ್ ಆಲಿ ಪೈಗಂಬರರ ಅಳಿಯ ಎನ್ನುವ ಕಾರಣದ ಜೊತೆಗೆ ಅವರ ಬೆಳೆಯುತ್ತಿದ್ದ ಬೆಂಬಲದ ಶಕ್ತಿ ಕುಗ್ಗಿಸಲು ಈ ಶರತ್ತಿಗೆ ಒಪ್ಪುತ್ತಾನೆ. ಇದು ಒಂದು ನಿಜ ಮಾನವತೆ ಮೆರೆದ ಪ್ರವಾದಿಯ ಅಳಿಯ ಹಜ್ರತ್ ಆಲಿಯವರ ವಿವೇಚನೆಯ ನಿದರ್ಶನ.ಆ ಗೌರವಯುತ ಕುಟುಂಬದ ಮೊಮ್ಮಗ ಹಜ್ರತ್ ಆಲಿಯವರ ಮಗ ಹಜ್ರತ್ ಇಮಾಮ್ ಹಸನ್ ಸಮಯದಲ್ಲೂ ಇಂತಹುದೇ ವಿಷಘಳಿಗೆ ಎದುರಾಗುತ್ತದೆ. ’ಮುಹಾವಿಯಾ’ ತೀರಿಕೊಂಡ ಮೇಲೆ ಇಸ್ಲಾಂ ಅನುಯಾಯಿಗಳು ಇಮಾಮ್ ಹುಸೇನರನ್ನು ಖಲೀಫಾ ಮಾಡಲು ಯೋಚಿಸುತ್ತಾರೆ. ಆದರೆ ಆ ವೇಳೆಗಾಗಲೇ ಮದೋನ್ಮತ್ತ, ಸ್ತ್ರೀ ಲೋಲ, ಐಷರಾಮಿ ಮತ್ತು ಮದಿರಾಪ್ರಿಯ ’ಯಜಿದ್’ ಮುಹಾವಿಯಾ ಗದ್ದುಗೆಯನ್ನು ಕಬಳಿಸಿ ಮುಹಾವಿಯಾ ಸತ್ತ ಸುದ್ದಿ ತಿಳಿಯುವುದಕ್ಕೆ ಮುಂಚೆಯೇ ಎಲ್ಲರನ್ನೂ ಧನ-ಜನ ಬಲದಿಂದ ತನ್ನೆಡೆಗೆ ಸೆಳೆದು ಕೊಳ್ಳುತ್ತಾನೆ. ಆದರೆ ಹಿಂದೊಮ್ಮೆ ವಂಚಿತರಾದ ಧರ್ಮ ಸಹಿಷ್ಣು ಮತ್ತು ಹಜ್ರತ್ ಆಲಿಯವರ ಅನುಯಾಯಿಗಳು ಇದನ್ನು ಒಪ್ಪದೇ ಹಜ್ರತ್ ಇಮಾಮ್ ಹಸನ್ ರನ್ನು ಖಲೀಫತ್ವದ ದಾವೇದಾರನೆಂದು ಬಿಂಬಿಸುತ್ತಾರೆ.. ಮೊದಲೇ ಕ್ರೂರಿಯಾದ ಯಜಿದ್ ಎಲ್ಲ ನಂಬಿಕಸ್ಥರ ಮತ್ತು ಆಲಿ-ಹಸನ್ ಪರ ಸಮುದಾಯದ ಮಾರಣ ಹೋಮಕ್ಕೆ ಕೈಹಾಕುತ್ತಾನೆ. ಆಗ ಮತ್ತೊಮ್ಮೆ ಹಜ್ರತ್ ಹಸನ್ ತನ್ನ ತಂದೆಯವರ ಮಾರ್ಗ ಅನುಸರಿಸಿ ತನ್ನವರ ತಂಟೆಗೆ ಬರದೇ ತನ್ನ ಪಾಡಿಗೆ ತನ್ನನ್ನು ಬಿಟ್ಟು ಧರ್ಮದ ಪ್ರಚಾರಕ್ಕೆ ಅಡ್ಡಿಮಾಡದಿದ್ದರೆ ಖಲೀಫತ್ವದ ದಾವೆಯನ್ನು ಹಿಂಪಡೆಯುತ್ತೇನೆ ಎಂದು ರಕ್ತ ಪಾತಕ್ಕೆ ಇತಿಶ್ರೀ ಹಾಡುತ್ತಾರೆ. ಹಜ್ರತ್ ಹಸನ್ ರ ನಂತರ ಅವರ ತಮ್ಮ ಹಜ್ರತ್ ಹುಸೇನರ ಮತ್ತು ಅವರ ಕುಟುಂಬ ಸಹವರ್ತಿಗಳ ಮೇಲೆ ಯಜಿದ್ ನಡೆಸಿದ್ದು ಅತಿ ಕ್ರೂರ ಅಮಾನವೀಯ ನಡವಳಿಕೆ.. ಅದೇ ಕಾರಣಕ್ಕೆ ತೀವ್ರವಾದ ರೂಪದಂತೆ ಶಿಯಾ ಪಂಗಡ ಪ್ರಭಲವಾಗಿದ್ದು,ಇಲ್ಲಿ ಧರ್ಮ ಸಂಸ್ಥಾಪಕರ ಮತ್ತು ನಿಜ ಮಾನವತೆ ಮೆರವವರ ಆದರ್ಶಗಳು ಇಂದಿನ ಸಮಾಜಕ್ಕೆ ಒಂದು ಪಾಠ. ಅಂದು ನಡೆದದ್ದು ಎದುರು-ಬದುರು ಯುದ್ಧ (ಅತೀವ ಸಂಖ್ಯೆಯ ಯಜಿದ್ ಸೈನ್ಯ ಮಾಡಿದ್ದು ಮಾರಣ ಹೋಮ..) ಆದರೆ ಈಗ ಧರ್ಮದ ಹೆಸರಲ್ಲಿ ನಿರಾಯುಧ, ಅಸಹಾಯಕ, ಅಮಾಯಕ ಮತ್ತು ಮುಗ್ಧರನ್ನು ನಿದ್ದೆಯಲ್ಲಿ ಕೊಲ್ಲುವಂತಹ ಹೇಯ ಕಾರ್ಯ. ಮಾನವತೆ ಮತ್ತು ಮಾನವ ಧರ್ಮದ ಮುಂದೆ ನಾವು ಮಾಡಿಕೊಳ್ಳುವ ಧರ್ಮದ ಕಟ್ಟಳೆಗಳು ಗೌಣ ಅಲ್ಲವೇ...?

Saturday, December 11, 2010

ಮತ್ತೆ ಕೆಲವು ನ್ಯಾನೋಗಳು

ಆಸ್ತಿ
ಮೆದು-ಹುಸಿ ನಗು, ತುಂಟನೋಟ
ಪರ(ಮ) ಗುಲಾಮನಾಗಿಸಲು ಸಾಕು ಆಸ್ತಿಏತಿ-ಪ್ರೇತಿ
ಮದುವೆಹೊಸತರಲ್ಲಿ ಎಲ್ಲದರಲ್ಲೂ ಸೌಂದರ್ಯ ಪ್ರೀತಿ
ಹೊಂದಿಕೆಯಾಗದೆ ನಂತರ ಅವ ಏತಿ ಇವಳು ಪ್ರೇತಿಮಗು
ಜೀವನವಾಗಿದ್ದು ನಿನ್ನಿಂದಲೇ ತಾಯಿಗೆ ಸಾರ್ಥಕ
ಬಂದು ನೀನು ಅಪ್ಪನ ಶ್ರಮವಾಗಲಿಲ್ಲ ನಿರರ್ಥಕ


ಗೊತ್ತೇ ಅಗೊಲ್ಲ
ವಿದೇಶದಿಂದ ಬಂದ ಮಂತ್ರೀನ ಕೇಳಿದ್ರು, ಏನ್ತಂದ್ರಿ?
ಶೇವಿಂಗ್ ಮಾಡೋದು, ಕಟ್ ಮಾಡಿದ್ರೆ ಗೊತ್ತೇ ಆಗಲ್ಲಂತ್ರಿದೊಂಬರಾಟ
ಪಟ್ನದಾಗೈತೆ ಒಬ್ಬೊಬ್ಬರ್ದು ಒಂದೊಂದ್ ಥರ ಆಟ
ಇದಾನ್ ಸೌದ್ದಾಗ್ ನಡೀತೈತಿ ದೊಡ್ದೊಡೋರ್ ದೊಂಬ್ರಾಟಲಂಚ ಅದೆಂಥ ಮಂಚ?
ಕೊಡ್ದಿದ್ರೆ ಸಾಗೊಲ್ಲ, ಹಾಕ್ದಿದ್ರೆ ನಡೆಯೊಲ್ಲ, ಕೊಟ್ರೂನೂ ಉಳಿಯೊಲ್ಲ
ಲಂಚಕೊಟ್ಟೋನು ಕೋಡಂಗಿ, ಈಸ್ಕೊಂಡ್ರೆ
 ಈರ್ಬದ್ರ, ತಲುಪಿದ್ದು ಸುಭದ್ರ


ನ್ಯಾನೋ
ನ್ಯಾನೋ ಹತ್ತಿ ಹೊಂಟಿದ್ರು ಟಾಟಾ..
ರಸ್ತೇಲಿ ಕೈಕೊಟ್ಟೂ ಹೇಳ್ತದು ಬರ್ಲಾ...


ಪ್ರಯತ್ನ
ಬೆಪ್ಪೆ ಬರ್ದಿದ್ದೆಲ್ಲ ಅಗೊಲ್ಲ ಕಣೋ ಕವನ
ಬರ್ದ ಪೇಪರ್ ಎಷ್ಟ್ ಹರಿದಿದ್ದೀಯಾ ನೋಡು ಎನ್ನುತ್ತೆ ಮನ

Saturday, December 4, 2010

ನವಂಬರ್ ಸಂಭ್ರಮ

ಸ್ನೇಹಿತರೇ, ಹಿತರೇ...
ನಮ್ಮ ಬೆಡಗಿನ ನಗರಿ, ರಾಜಧಾನಿ ಬೆಂಗಳೂರಿನಲ್ಲಿ ಮರೆಯಾಗುತ್ತಿರುವ ಕನ್ನಡಪರ ಕಾಳಜಿ ನನಗೆ ಈ ರಚನೆಗೆ ಪ್ರೇರಣೆಯಾಯಿತು....ನಾವು ಕಾಲೇಜಿನಲ್ಲಿದ್ದ ಸಮಯದಲ್ಲಿ ಕಡೇ ಪಕ್ಷ ಅಕ್ಟೋಬರ್ ನಿಂದ ಪ್ರಾರಂಭವಾಗುತ್ತಿದ್ದ ಸಂಭ್ರಮ, ಮಂಟಪ ಮತ್ತು ಕಲಾ ವೇದಿಕೆಗಳು, ಕೆ.ಎಸ್.ಆರ್.ಟಿ.ಸಿ ಸಿಂಗಾರಗಳು ಡಿಸೆಂಬರ್ ಅಂತ್ಯದವರೆಗೂ, ಕ್ರಿಮಸ್ ಸಂಭ್ರದ ಜೊತೆಗೂಡುತ್ತಿದ್ದುದು ನೆನಪಿದೆ...ಆದ್ರೆ ಈಗ ನವಂಬರ್ ತಿಂಗಳ ಕಡೆಯ ವಾರವೇ ಕನ್ನಡ ಎಲ್ಲಿ ಹೋಯ್ತು ಅನ್ನೋನೆ ಯೋಚನೆ ಕಾಡುತ್ತೆ....ನಿಮ್ಮ ಪ್ರತಿಕ್ರಿಯೆ..ಟೀಕೆಗೆ ನಾನು ಸಿದ್ಧ......


ನವಂಬರ್ ಸಂಭ್ರಮ

ನವಂಬರ್ ಬಂದ್ರಾಯ್ತು

ಹರಿಯುತ್ತೆ ಕನ್ನಡದ ಮಹಾಪೂರ

ಎಲ್ಲಿರುತ್ತೋ ಕಟ್ಟೆಯೊಡೆಯುತ್ತೆ

ನುಗ್ಗುತ್ತೆ ಗಲ್ಲಿ ಗಲ್ಲಿ ನಿಲ್ಲೊಲ್ಲ ಅನ್ನುತ್ತೆ

ಕೆಂಪು-ಹಳದಿ ಕಹಳೆ ಮೊಳಗುತ್ತೆ

ದೇಣಿಗೆ ಚಂದಾ ಕೊಡುಗೆ ಕೇಳುತ್ತೆ

ಹಾದಿ ಬೀದಿಲೆಲ್ಲಾ, ಗಂಧದಗುಡಿ,

ಹಚ್ಚೇವು ಕನ್ನಡದ ದೀಪ ಮೊಳಗುತ್ತೆ

ಇಂಗ್ಲೀಷ್ ನಾಮಫಲಕಕ್ಕೆ ಬೀಳುತ್ತೆ ಲತ್ತೆ

ಒಂದೇ, ಎರಡೇ, ಬೆಂಗ್ಳೂರೇ ಕನ್ನಡಮಯ

ಐಟಿ ಬಿಟಿ ಗಲ್ಲಿಗಳು ಬಿಕೋ ಅಗುತ್ವೆ

ಡಿಸೆಂಬರ್ ಬರುತ್ತೆ..

ಚಳಿಗೆ ಬೆಂಗ್ಲೂರ್ ನಡಗುತ್ತೆ
ಕನ್ನಡಾನೂ ನಿಧಾನಕ್ಕೆ ಮರೆಯಾಗುತ್ತೆ

ಗಲ್ಲಿಗಳು ಮತ್ತೆ ತುಂಬ್ಕೋತಾವೆ

ಮತ್ತೆ ಎನ್ನ, ಎವಿಡ, ಎಕ್ಕಡ ವಾಟ್ ಗಳು

ಟಾಕ್ ಎನಿಥಿಂಗ್ ಬಟ್ ನಾಟ್ ಕನ್ನಡ ಗಳು
ಜನವರಿ ತುಂಬಾ ಕೇಕ್ ಗಳು

ಫೆಬ್ರವರಿಲಿ ವ್ಯಾಲಂಟೈನ್ ಡೇಟ್ಸಗಳು

ಮಾರ್ಚ್ ಏಪ್ರಿಲ್ ಎಕ್ಸಾಮ್ ಟೆನ್ಶನ್ ಗಳು

ಜೂನ್ ಜುಲೈ ರೆಸಾರ್ಟ್ ಮಸ್ತಿಗಳು

ಮತ್ತೆ ಇಲ್ಲದ ಮಳೆ ಅಥವ ಅತಿ ಕೊಚ್ಚೆಗಳು

ರಚ್ಚೆ ಹಿಡಿಸೋ ಪೆಚ್ಚು ರಾಜಕೀಯಗಳು

ಮರೆತಹಾಗೆ ಆಗಿರುತ್ತೆ ,,,ಎಲ್ಲಿದೆ.. ಕನ್ನಡ?
ಮತ್ತೆ ಧೂಳು ಕೊಡವಿ ಹೊರಬರೋ ಫ್ಲಾಗ್ಗಳು

ಕನ್ನಡ ಸಿಡಿಗಳು, ಆಡಿಯೋಗಳು

ಯಾಕಂದ್ರೆ ಬಂತಲ್ಲಾ..ನವೆಂಬರ್ರು?

ಮತ್ತದೇ ರಾಜ್ಯೋತ್ಸವ !!!

Thursday, November 25, 2010

ಚಿತ್ರ ಕೃಪೆ: http://www.funlogg.com/
ಚಂಚಲ ನಯನೆ
(ಚಂದನ್ ಸಾ ಬದನ್ ಚಂಚಲ್ ಚಿತವನ್...ಧಾಟಿ)

ಚಂದನದ ಮನ ಚಂಚಲ ನಯನ
ಮೆಲ್ಲಮೆಲ್ಲನೆ ಮೆರೆವ ಹುಸಿನಗುವು
ಎನ್ನ ದೂಷಿಸಬೇಡಿ ಓ ಜನರೇ
ಮರುಳಾದರೆ ಕಂಡು ಆ ವದನ... II ಚಂದನದ ಮನ II
ಆ ಕಾಮನ ಬಿಲ್ಲು ಈ ಹುಬ್ಬು
ಕೆಣ್ ಎವೆಯ ಅಂಚಿನ ಕಡುಗಪ್ಪು
ಹಣೆಯ ಸಿರಿ ಈ ಸಿಂಧೂರ
ತುಟಿಯಾಗಿವೆ ಸುಡುವ ಕೆಂಡಗಳು
ಸೋಕಿದರೂ ಬರಿ ನಿನನೆರಳು
ಬೆಂಗಾಡಲೂ ಅರಳುವ  ಕುಸುಮಗಳು...II ಚಂದನದ ಮನ II
ತನುವೂ ಸುಂದರ ಮನವೂ ಸುಂದರ
ಸುಂದರತೆಯ ಮೂರುತಿ ಈ ಚೆಲುವೆ
ಬೇರಾರಿಗೋ ಹೇಗೋ ನಾನರಿಯೆ
ನನಗಂತೂ ನಿನ್ನದೇ ಸವಿ ನೆನಪು
ಈಗಾಗಲೇ ಬಹಳ ಕಾದಿರುವೆ
ಇನ್ನೂ ನನ್ನನ್ನು ನೀ ಕಾಡದಿರು...II ಚಂದನದ ಮನII

ಮೂರುದಿನದ ಚೂರು-ಪಾರು
ಹುಟ್ಟು ಸಾವು ಎರಡರ ಮಧ್ಯೆ
ಇವೆಯೆಂದರು ಕೇವಲ ದಿನ ಮೂರು
ಆಗಲೂ ಬಹುದು ಎಂದವರು ಅವು ನೂರು
ಪಡೆದರು ಜೀವನದಿ ಚೂರು-ಪಾರು
ಮೂರೇ ಎಂದವರಿಗೆ ಸಿಕ್ಕಿದ್ದು, ಅನಿಸಿದ್ದು
ಅಲ್ಪ ಸ್ವಲ್ಪ ಚೂರು ಮತ್ತೆ ಸಿಕ್ಕಂತೆ ಪಾರು
ಒಂದೇ ಎಂದವರಿಗೆ ಎಲ್ಲಿಯ ಚೂರು?
ಯಾರದೋ ಪಾಲು ಆಗಿರುವಳು, ಪಾರು

Monday, November 8, 2010

ನಗು ನಗುತಾ ನಲೀ ನಲೀ.....

ನಗು ..ಯಾರಿಗೆ ಬೇಡ..? ಎಲ್ಲರಿಗೂ ಇಷ್ಟವೇ....ಇಲ್ಲ ಎಂದಿರಾ,,,,?? ಓಹ್ ನೀವು ತಮಾಶೆ ಮಾಡ್ತಿದ್ದೀರಾ..ಇಲ್ಲ ಅಲ್ವಾ?? ...ಏನೋ ತುಂಬಾ ಗಂಭೀರ ವಿಷಯ ತಲೆ ತಿನ್ತಾ ಇದೆ...!!!???

ಹೌದು ನಗು ಮುಖದಲ್ಲಿ ಒಂದು ರೀತಿಯ ಕಾಂತಿಯನ್ನು ತರುತ್ತದೆ. ಸ್ನೇಹಿತರನ್ನು ತರುತ್ತದೆ, ಮನೋಲ್ಲಾಸ ತರುತ್ತದೆ. ವ್ಯಕ್ತಿತ್ವ ಆಕರ್ಷಣೆಯಲ್ಲಿ ಹಾಸ್ಯ ಸ್ವಭಾವ ಅಥವಾ ನಗುಮುಖದ ವ್ಯಕ್ತಿತ್ವ ಎಲ್ಲಾ ಗುಣಗಳನ್ನೂ ಹಿಂದೆ ಹಾಕುತ್ತದೆಂದು ಸಮೀಕ್ಷೆಗಳು ತಿಳಿಸುತ್ತವೆ. ನಗು ಬಾಲ್ಯಾವಸ್ಥೆಯ ಬೌದ್ಧಿಕ ಮತ್ತು ತಾರ್ಕಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆಂದು ವೈದ್ಯಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಹಿರಿಯರು ಗಂಭೀರ ಸ್ವಭಾದವರು ಸ್ವಲ್ಪ ಹೆಚ್ಚು ಗಂಭೀರರಾದಾಗ ಮನೆಯ ಮಗುವೊಂದನ್ನು ಅವರ ಬಳಿ ಬಿಡುವುದು ಬಹು ಚಾಣಾಕ್ಷ ಉಪಾಯ. ವಾತಾವರಣ ತಿಳಿಯಾಗುವುದಲ್ಲದೇ ಆ ವ್ಯಕ್ತಿಯ ಸ್ವಭಾವದಲ್ಲೂ ಬೇಗನೆ ಬದಲಾವಣೆಯಾಗುವುದರಲ್ಲಿ ಸಂದೇಹವಿಲ್ಲ.

ಹಾಗಾದರೆ ಏನಿದು..? ನಗು,,? ಹಾಸ್ಯ?

ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಉದಾಹರಣೆಗಳ ಮೂಲಕ ಅಧ್ಯಯನ ಮಾಡಿ ಕೆಲವು ಮಹತ್ತರ ಅಂಶಗಳನ್ನು ಕಂಡುಕೊಳ್ಳಲಾಗಿದೆ. ಈ ಎಲ್ಲ ನಿದರ್ಶನಗಳು ಒಂದು ವಿಷಯವನ್ನು ಹೊರಗೆಡಹಿವೆ. ಮಾನವ ಮಿದುಳು ತರ್ಕಗಳಲ್ಲಿ ವಿನ್ಯಾಸಗಳನ್ನು ಗುರುತಿಸಬಲ್ಲುದು. ಈ ತರ್ಕಗಳು ಒಂದು ಗೊತ್ತಾದ ವಿನ್ಯಾಸಕ್ಕೊಳಪಟ್ಟಿರುತ್ತವೆ. ಬಹುಪಾಲು ಈ ತರ್ಕ ವಿನ್ಯಾಸಗಳು ಪರಿಚಿತವಾಗಿರುತ್ತವೆ. ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಅಥವಾ ಬುದ್ಧಿ ಮಿದುಳಿಗೆ ಇರುತ್ತದೆ ಆದರೆ ನಾವು ಊಹಿಸದ ತರ್ಕ ವಿನ್ಯಾಸ ಮಿದುಳಿಗೆ ಪರಿಚಯವಾದಾಗ ಮಿದುಳು ಉಲ್ಲಸಿತಗೊಳ್ಳುತ್ತದೆ. ಇದರ ಪುನರಾವರ್ತನೆ ಈ ಅಲೆಗಳು ಮತ್ತೆ ಮತ್ತೆ ಏಳುವಂತೆ ಮಾಡುತ್ತವೆ...ಇದರ ಬಹು ಸರಳ ಉದಾಹರಣೆ ಮಗುವಿಗೆ ..ಗಿಲಿ ಗಿಲಿ ಗಿಲಿ ಮಾಡಿದಾಗ ಮಗು ಕೇಕೆಹಾಕಿ ನಗುತ್ತದೆ. ಆದರೆ ತರ್ಕವಿನ್ಯಾಸಗಳು ಮಿದುಳಿಗೆ ಪರಿಚಿತವಾಗುವ ಕ್ರಿಯೆ ಬಹುಪಾಲು ಅನಿಯಂತ್ರಿತ ಕ್ರಿಯೆ. ಮಿದುಳಿನ ಪ್ರಿ-ಫ್ರಾಂಟಲ್ ಕಾರ್ಟೆಕ್ಸ್ ಭಾಗದಿಂದ ಸ್ರವಿತ ಎಂಡಾರ್ಫಿನ್ ಎಂಬ ಜೀವರಾಸಾಯನಿಕ ಸಂಯುಕ್ತ ಮನೋಲ್ಲಾಸಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಇದು ಪ್ರಾಣಿ ವಿಕಸನ ಸರಣಿಯ ಬಹು ಮುಖ್ಯ ಬೆಳವಣಿಗೆ. ಇದೇ ಕಾರಣಕ್ಕೆ ಕೇವಲ ಮಾನವ ಜಾತಿ (ಮಂಗ, ಚಿಂಪಾಂಜಿ ಇತ್ಯಾದಿ ಸಹಾ) ನಗುವನ್ನು ಗುರುತಿಸಬಲ್ಲುದು. ಇದೇ ಕಾರಣಕ್ಕೆ ಮಾನವನ ಬುದ್ಧಿ ಶಕ್ತಿ ಎಲ್ಲ ಪ್ರಾಣಿಗಳಿಗಿಂತ ಬಹುಪಾಲು ಹೆಚ್ಚು. ಮಗುವಿನಲ್ಲಿ ಮಾತಿಗೂ ಮುಂಚೆ ನಗು-ತರುವ ವಿಷಯವನ್ನು ಗುರುತಿಸುವ ಶಕ್ತಿ ಬರುತ್ತದೆ. ಅನಿರೀಕ್ಷಿತ ವಿನ್ಯಾಸವನ್ನು ಮಗು ಗಮನಿಸಿದರೆ ಉಲ್ಲಸಿತಗೊಳ್ಳುತ್ತೆ. ಬಹು ಸ್ವಾಭಾವಿಕ ಪ್ರತಿಕ್ರಿಯೆ ಎಂದರೆ ಮಗು ಚಪ್ಪಾಳೆ ಹೊಡೆಯುವುದು...ಅಥವಾ ಮುಖ ಅರಳಿಸುವುದು....ನಿರೀಕ್ಷಿತ ವಿನ್ಯಾಸಕ್ಕೆ ಮಗು ನಗುವುದಿಲ್ಲ ಎನ್ನುವುದನ್ನು ನೀವೂ ಗಮನಿಸಿರಬಹುದು.

ನಗು- ಈ ಕ್ಲಿಷ್ಟ ಸಂಬಂಧಗಳ ಕಾರಣ ವ್ಯಕ್ತಿಯ ಸ್ವಭಾವವನ್ನು ಅವಲಂಬಿಸಿರುತ್ತದೆ. ಒಬ್ಬರಿಗೆ ನಗು ತರಿಸುವುದು ಮತ್ತೊಬ್ಬರಿಗೆ ಗಂಭೀರವಾಗಬಹುದು...ಅದರೆ ಇದು ವಯಸ್ಸು ಮತ್ತು ಅನುಭವ ಹೆಚ್ಚಿದಂತೆ ಬದಲಾಗುತ್ತದೆ. ಹೆಂಗಸರ ನಗು ಸ್ವಾಭಾವಿಕವಾಗಿ ಹಾಡು-ಹಾಡಿದಂತಿದ್ದರೆ ಗಂಡಸರ ನಗು ವಿವಿಧ ಶಬ್ದದೊಂದಿಗೆ ಹೊರಹೊಮ್ಮಬಹುದು. ಹಾಸ್ಯಕ್ಕೆ ಹೆಣ್ಣು ಹೆಚ್ಚು ಪ್ರತಿಕ್ರಿಯಿಸುತ್ತಾಳಂತೆ ಗಂಡಿಗಿಂತ!!. ತಾನು ಮಾತನಾಡುವಾಗ ತನ್ನ ಮುಂದಿನವರು ನಗುವುದಕ್ಕಿಂತ ಹೆಚ್ಚು ಗಂಡು ತಾನೇ ನಗುತ್ತಾನಂತೆ...ಹಹಹ. ಹೆಣ್ಣು ಹೆಚ್ಚು ಪ್ರತಿಕ್ರಿಯಿಸುವ ನಗುವ ಕ್ರಿಯೆಗಳು ಎಂದರೆ ಚೇಷ್ಟೆ ಮತ್ತು ಪ್ರಾಣಿಗಳ ಅಥವಾ ಮಕ್ಕಳ ಹರಕತ್ತುಗಳು. ನಗು ಸರ್ವ ರೋಗ ನಿವಾರಕ ಎಂಬುದು ಅತಿಶಯೋಕ್ತಿ ಅಲ್ಲ. ಹದಿಹರೆಯದ ವರೆಗೆ ಸರಾಸರಿ ದಿನಕ್ಕೆ ೩೦೦ ಬಾರಿ ನಕ್ಕರೆ ವಯಸ್ಕರ ನಗುವ ಸಾಧ್ಯತೆ ಕೇವಲ ಇದರ ಹತ್ತರಷ್ಟು...!!! ನಮ್ಮನ್ನು ನಾವು ಯಾವ ಅತಿ ಪ್ರಯೋಜನಕಾರಿ ಕ್ರಿಯೆಯಿಂದ ದೂರವಿಡುತ್ತಿದ್ದೇವೆ ಗೊತ್ತೆ....??

ನಗು ಮತ್ತು ಹಾಸ್ಯ ಎರಡು ವಿಭಿನ್ನ ಅಂಶಗಳು. ನಗು ಕೇವಲ ಭೌತಿಕ ಕ್ರಿಯೆ..ಶ್ವಾಸಕೋಶದಿಂದ ಜೋರಾಗಿ ಗಾಳಿಯನ್ನು ಹೊರದೂಡುವುದು...ಹ..ಹ..ಹಹಹ್ಹಹ್ಹಹ್ಹ ..ಹಾಹಹ್ಹಾಹಹಾ...ಹೀಗೆ...ಇದನ್ನು ನಾವು ವ್ಯಾಯಾಮದ ಮೂಲಕವು ಮಾಡಬಹುದು. ಆದರೆ ನಗುವೆಂಬ ಸ್ವಾಭಾವಿಕ ಕ್ರಿಯೆಯ ಮೂಲಕ ಮಾಡುವ ಈ ಬೌತಿಕ ಕ್ರಿಯೆ ಹಲವಾರು ಪ್ರಯೋಜನಕಾರಿ ಲಾಭಗಳನ್ನು ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ನೀಡುತ್ತದೆ. ನಗು ಒಂದು ಸಾಂಕ್ರಾಮಿಕ ಅಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ಉಪಯುಕ್ತ ಗುಣ. ಒಂದು ಹಾಸ್ಯ ಚಟಾಕಿ, ಲೇಖನ ಅಥವಾ ಸನ್ನಿವೇಶದ ವೀಡಿಯೋ ನಾವು ಒಬ್ಬರೇ ಓದುವಾಗ ಅಥವಾ ವೀಕ್ಷಿಸುವಾಗ ಹೆಚ್ಚೆಂದರೆ ಸುಮ್ಮನೆ ಮುಗುಳ್ನಗಬಹುದು ಅಥವಾ ಸ್ವಲ್ಪ ನಗಬಹುದು..ಅದೇ ನಮ್ಮ ಬಂಧು ಬಾಂಧವರ ಜೊತೆಗಿದ್ದಾಗ ಹೆಚ್ಚು ಅನುಭವಿಸಿ ನಗುತ್ತೇವೆ ಕಾರಣ ಇದು ನಿಯಂತ್ರಿತ ಸಾಂಕ್ರಾಮಿಕ ಕ್ರಿಯೆ. ಇನ್ನೊಂದು ಬಹು ಆಶ್ಚರ್ಯಕರ ಅಂಶ ನಾವು ಗಮನಿಸಿರುತ್ತೇವೆ...ಏನು ಗೊತ್ತೆ..?? ನಾವು ನಮ್ಮ ಸ್ನೇಹಿತ/ಸ್ನೇಹಿತೆಯರ ಜೊತೆ ಇದ್ದಾಗ ಅನುಭವಿಸಿ ನಗುವಷ್ಟು ಕೇಕೆ ಹಾಕಿ ನಗುವಷ್ಟು ಬೇರೆ ಸಾಂಗತ್ಯದಲ್ಲಿ ಇರಲ್ಲಿಕ್ಕಿಲ್ಲ ಅಲ್ಲವೇ...??

ನಿರೀಕ್ಷಿತ ಹಾಸ್ಯ ನಗು ತರಲು ವಿಫಲವಾಗುತ್ತೆ ಎನ್ನುವುದಕ್ಕೆ ಪದೇ ಪದೇ ಕೇಳಿದ ಜೋಕ್ ಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಉದಹರಿಸಬಹುದು. ಕೆಲವರು ಕಚಗುಳಿ ಇಡುವುದರಿಂದ ಹಾಸ್ಯ ಅಥವಾ ನಗು ಬರುತ್ತೆ ಎನ್ನಬಹುದು...ಆದ್ರೆ ಇದೂ ಪೂರ್ತಿ ನಿಜವಲ್ಲ..ಏಕೆ..?? ನಮಗೆ ನಾವೇ ಕಚಗುಳಿಯಿಟ್ಟುಕೊಂಡರೆ ನಗು ಬರುವುದಿಲ್ಲ,,,,!!! ಬೇರೆಯವರು ಇಟ್ಟಾಗ ಅದು ಅನಿರೀಕ್ಷಿತವಾಗುತ್ತೆ ಹಾಗಾಗಿ ನಗು ಬರುತ್ತೆ. ನಗು ತರುವ ಕಾರಣ ಯಾವ ಪ್ರಕಾರದ್ದೇ ಆದರೂ ನಗುತರುವ ಅಥವಾ ಉಂಟುಮಾಡುವ ಪರಿಣಾಮ ಒಂದೇ ಆಗಿರುತ್ತೆ. ನಾವು ನಕ್ಕಾಗ ಶರೀರಕ್ರಿಯಾ ಸ್ರಾವಕಗಳು ರಕ್ತದೊಳಕ್ಕೆ ಹರಿದುಬರುತ್ತವೆ. ರಕ್ತಪರಿಚಲನೆ ಹೆಚ್ಚಾಗುತ್ತೆ ..ಅದೇ ಕಾರಣಕ್ಕೆ ಕೇಕೆ ಹಾಕಿ ನಕ್ಕಾಗ ಮುಖ ಕೆಂಪಾಗುವುದು...ಮೂಗು, ಕಿವಿ ಕೆಂಪು ಮತ್ತು ಬಿಸಿಯಾಗುತ್ತವೆ. ಶ್ವಾಸ ದೀರ್ಘವಾಗುತ್ತದೆ, ಶ್ವಾಸಕೋಶದ ಆಳದಿಂದ ಗಾಳಿ ಹೊರಬರುತ್ತದೆ ಅಲ್ಲಿನ ಜೀವಕೋಶಗಳಿಗೆ ಪರಿಶುದ್ಧ ಆಮ್ಲಜನಕ ಸಿಗುತ್ತದೆ, ಮಿದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯಾಗುತ್ತದೆ. ಮನೋಲ್ಲಾಸ ಮತ್ತು ಆಹ್ಲಾದಕರ ಸ್ಥಿತಿಗೆ ಕಾರಣವಾದ ಶರೀರಸ್ರಾವಕ “ಎಂಡಾರ್ಫಿನ್” ಪ್ರಮಾಣ ಹೆಚ್ಚಾಗುತ್ತದೆ, ಮ್ಲಾನತೆ (ಸ್ಯಾಡ್ ನೆಸ್) ನಿವಾರಕ ಶರೀರಕಿಯಾಸ್ರಾವಕ “ಸೆರಟೋನಿನ” ಹೆಚ್ಚು ಕ್ರಿಯಾಶೀಲವಾಗುತ್ತದೆ. ಈ ಮೂಲಕ ನೂರಾರು ಶರೀರ ಕ್ರಿಯೆಗಳು ನವಚೈತನ್ಯಕ್ಕೆ ಒಳಗಾಗುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಸಹಿದಯಿ ಸದಭಿರುಚಿಯ ನಡವಳಿಕೆ ಹೇಗಿರಬೇಕು ಎನ್ನುವುದಕ್ಕೆ ಕೆಲವು ಸೂತ್ರಗಳನ್ನು ಗುರುತಿಸಲಾಗಿದೆ.

 ಇನ್ನೊಬ್ಬರನ್ನು ಅಭಿನಂದಿಸುವುದು ಮೊದಲಾಗಬೇಕು...ನಂತರ ಸಕ್ಕರೆಯಲ್ಲಿ ಬೆರೆತ ಔಷಧಿಯಂತೆ ಸಲಹೆಯನ್ನು ನೀಡಬಹುದು (ಹಾಗೊಂದು ವೇಳೆ ಆ ವ್ಯಕ್ತಿಯ ಒಳಿತಿಗೆ ಬೇಕೆನಿಸಿದರೆ). ಯಾರನ್ನೇ ಆಗಲಿ ಮೊದಲಿಗೇ ಟೀಕೆ ಮಾಡುವುದು ಸಹಿದಯಿಯ ಲಕ್ಷಣವಲ್ಲ.

 ನಮ್ಮ ನಿಲುವಿನಲ್ಲಿ ಮೃದು ಧೋರಣೆ ತೋರುವುದು, ಅಥವಾ ಕಠಿಣತೆಯ ಅವಶ್ಯಕತೆಯಿದ್ದಾಗ ಅದಕ್ಕೆ ಮೃದು ಪೀಠಿಕೆ ಹಾಕುವುದು...ಇದು ಮುಂದಿನ ಕ್ರಮ ಕಠಿಣವಾದರೂ ಪ್ರತಿರೋಧ ಹೆಚ್ಚಿರುವುದಿಲ್ಲ

 ಆಭಾರ ವ್ಯಕ್ತಪಡಿಸುವಲ್ಲಿ ಜಿಪುಣತೆ ತೋರಬಾರದು ಏಕೆಂದರೆ ಎದ್ದು ತೋರುವ ಇಂತಹ ಘಟನೆಗಳು ಪರಸ್ಪರ ಸಂಬಂಧಗಳನ್ನು ಹೆಚ್ಚು ಸಧೃಡಗೊಳಿಸುತ್ತವೆ.

 ಉದಾರತೆ ಸಾಧ್ಯವಾದಲ್ಲಿ ವ್ಯಕ್ತಪಡಿಸುವುದು ಒಂದು ಐಛ್ಚಿಕ ಗುಣ

 ಕ್ಷಮೆ ಒಂದು ಗುಣವಾಗಲಿ ಏಕೆಂದರೆ ಕ್ಷಮಿಸುವ ಮೂಲಕ ನಿಮ್ಮ ವೈರತ್ವದ ಅಂತ್ಯವಾಗುತ್ತದೆ ಮನ ಶಾಂತವಿರುತ್ತದೆ.

 ಈ ಎಲ್ಲಾ ಗುಣಗಳನ್ನು ಬೆಳೆಸಿಕೊಳ್ಲಬೇಕೆಂದರೆ ಮನೋಲ್ಲಾಸಿತಗೊಂಡಿರಬೇಕು...ಅಂದರೆ ’ಎಂಡಾರ್ಫಿನ್’ ರಕ್ತದಲ್ಲಿ ತುಂಬಿರಬೇಕು,,,ಅಂದರೆ ಮನಸು ನಗುತಿರಬೇಕು....ಬಹುಸುಲಭದ ದೇಹಾರೋಗ್ಯದ ಈ ಮಾರ್ಗ ಅನುಸರಿಸೋಣ....ನಗೋಣ ನಗುತಾ ಬಾಳೋಣ....
ಇಲ್ಲಿ ಡಿ.ವಿ.ಜಿ.ಯವರ ಒಂದು ಕವಿತೆಯ ಸಾಲುಗಳು (ಮನಮುಕ್ತಾ ರ ಸಹಾಯದಿಂದ) ನಿಮ್ಮೆಲ್ಲರಿಗೆ....ನಗುವಿನ ಮಹತ್ವ ಸಾರೋದಕ್ಕೆ..
ನಗುವನ್ನು ಕುರಿತು ಡಿ. ವಿ. ಜಿ.ಯವರ ಕವನ.
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ,
ನಗುವ ಕೇಳುತ ನಗುವುದತಿಶಯದ ಧರ್ಮ,
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳ್ಳೊ- ಮ೦ಕುತಿಮ್ಮ

http://www.youtube.com/watch?v=Fv7CVQ5077Q


Friday, October 22, 2010

ಶತ ವಿಕ್ರಮನ – ಅಸಹಾಯಕತೆ ಯೋ ಅಪ್ರಬುಧ್ಧತೆಯೋ

(ಚಿತ್ರ ಕೃಪೆ: ಚಂದಮಾಮ ಅಂತರ್ಜಾಲ) 

ಕಪಿಲಾಪುರದ ಕಥೆಯಾಕೋ ಈ ಮಧ್ಯೆ ಇಡೀ ಭೂಭಾಗದಲ್ಲಿ ನಗೆಪಾಟಲಾಗತೊಡಗಿತ್ತು...ಪ್ರಜೆಗಳು ಕಪಿಲಾಪುರ ಏಕೆ ಹೀಗೆ ದಿಕ್ಕಿಲ್ಲದೆ ನಡೆಯುತ್ತಿದೆ ? ತಿಳಿಯದಾಗಿತ್ತು. ಭೇತಾಳನ ಬೆನ್ನಹಿಂದೆ ಬಿದ್ದಿದ್ದ ಶತವಿಕ್ರಮ ಯಾಕೋ ಕಿಂಕರ್ತವ್ಯ ಮೂಢನಾಗಿದ್ದಾನೆ...ಪುರಕ್ಕೆ ಹಿಡಿದ ಭೂತವನ್ನು ಬಿಡಿಸೋದೋ..ಪುರವನ್ನು ಕಾಡುತ್ತಿದ್ದ ಪಾಳೆಯಗಾರರನ್ನು ನಿಗ್ರಹಿಸೋದೋ..ಹದಗೆಟ್ಟ ರಸ್ತೆಗಳಲ್ಲಿ ನಾರುವ ಕೊಳೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೋ..ತನ್ನ ಕೋಟೆಯನ್ನು ಕಾಯುವ ಕೊತ್ವಾಲರ ಸ್ವಯಂಘೋಷಿತ ಸ್ವಾಯತ್ವಕ್ಕೆ ಸವಾಲಾಗಿ ಅವರನ್ನು ನಿಯಂತ್ರಿಸುವುದೋ,,,,ಹೋ,,,!!!  confusionnoo…
ಆದ್ರೂ ಶತ ವಿಕ್ರಮ ಭೇತಾಳನ್ನು ಹುಡುಕಲು ಹೊರಟೇಬಿಟ್ಟ.... ಮರಗಳೇ ಇಲ್ಲವಾಗಿವೆ...ಸರಿಯಾಗಿ ಮಳೆಕಾಣದೆ..ಬೀಡು ಮರಳುಗಾಡಾಗಿದೆ....ಭೂಮಿ ಅಗೆದು ಧೂಳೆಬ್ಬಿಸಿದ ಬಂಡವಾಳಶಾಹಿ ಭೂ ಕೊರೆತ ಧಣಿಗಳು ನಿರಂಕುಶರಾಗಿದ್ದಾರೆ...ಹೆಚ್ಚು ಹೇಳಿದ್ರೆ.. “ಲೋ ದಾಸಯ್ಯ ನಿನ್ನ ಹರಿಕಥೆ ಸುಮ್ನೆ ಮುಂದುವರೆಸ್ತೀಯೋ ಇಲ್ಲ ನಿನ್ನ ಕಾಲಕೆಳಗಿರೋ ಕಂಬಳೀನ ನಿನಗೆ ಕೊಟ್ಟದ್ದನ್ನ ಮತ್ತೆ ಪರಿಶೀಲಿಸಿ ಅದನ್ನ ಎಳೀಯೋದೋ ಹೇಳು” ಅಂತ ಧಮ್ಕಿ ಹಾಕ್ತಾರೆ....

ಶತವಿಕ್ರಮನಿಗೆ ಈಗ ಪೀಕಲಾಟಕ್ಕೆ ಇಟ್ಕೊಳ್ತು...ಅವನ ರಾಜ್ಯದ ಮರಗಳೆಲ್ಲ ಬೋಳಾಗೋಕೆ ಶುರುಹಚ್ಚಿದ್ವು, ಭೂಮಿ ಟೊಳ್ಳಾಗುತ್ತಿತ್ತು, ಬಿಟ್ರೆ ಭೇತಾಳ ಬಂದು ಸಿಂಹಾಸನಾನ ಆವ್ರಿಸ್ಕೊಂಡು ಮುಂದಿನ ಶತವಿಕ್ರಮನಾಗಿಬಿಡ್ತಾನೆ...ಏನು ಮಾಡೋದು..? ಎಲ್ಲಿ ಈ ಭೇತಾಳ....?

ತಾನು ಆಸೆ ಆಮಿಷ ಒಡ್ಡಿ, ಜನರು ತಮ್ಮಲ್ಲೇ ಹೊಡೆದಾಡಿ ಪ್ರಾಣಹಾನಿ ಮಾಡಿಕೊಂಡು ಚುನಾಯಿಸಿ ಕಳುಹಿಸಿದ ವಿರೋಧಪಕ್ಷದವರನ್ನ ರಾಜಿನಾಮೆ ಕೊಡಿಸಿ.....ಅಲ್ಲಿ ಅವನನ್ನೋ ಅಥವಾ ಇನ್ನೊಬ್ಬನ್ನನ್ನೋ ಹಣ ಚೆಲ್ಲಿ ಮತ್ತೆ ಗೆಲ್ಲಿಸಿ ತನ್ನ ಪಕ್ಷದ ಬಲ ಹೆಚ್ಚಿಸ್ಕೊಂಡ್ರೆ......ಈಗ ಪಕ್ಷದವರೇ ಗುಂಪಾಗಿ ಗುಳೆ ಹೋಗಿದ್ದಾರೆ...ನನ್ನ ಆಸ್ಥಾನ ಸೌಧದ ಸುತ್ತ ಮಾಟ ಮಂತ್ರ ನಡೆದಿದೆ...ಇದು ಆ ಭೇತಾಳನ ತಂತ್ರಾನೇ ಇರ್ಬೇಕು...ಎಲ್ಲಿ ಹುಡ್ಕೋದು ಇವನನ್ನ,,,?? ಛೇ...

ಕೊನೆಗೆ, ಲೋಕಪಾಲರ ಅಫೀಸಿನ ಹಳೆಯ ಹಗರಣಗಳ ಧೂಳು ತಿನ್ನುತ್ತಾ ಬಿದ್ದಿದ್ದ ಕಡತಗಳ ಒಂದು ಕೊಠಡಿಯ ಸೀಲಿಂಗ್ ಫ್ಯಾನಿಗೆ ಜೋತು ಬಿದ್ದಿದೆ ಅಂತ ನಂಬಲರ್ಹ ಮೂಲಗಳಿಂದ ತಿಳಿದು ಅಲ್ಲಿಗೆ ಹೋಗಿ ಲೋಕಪಾಲರು ಬರೋಕೆ ಮುಂಚೆ ಅಲ್ಲಿಂದ ಭೇತಾಳನ್ನ ಎತ್ತಿ ಹೆಗಲಿಗೇರಿಸಿ .. ಶಾಶಕರ ಭವನದ ಹಿಂದಿನ ಶವಾಗಾರಕ್ಕೆ ಹೊರಟ....

ರಾಜ್ಯದಲ್ಲಿ ಏನೇ ನಡೆದರೂ ಜಪ್ಪಯ್ಯ ಎನ್ನದ, ಗಣಿ-ಧಣಿ ಎಂಬ ಜೋಡಿ-ಪದ ಕೇಳಿದೊಡನೇ ಕೆರಳಿ ಕೇರಳದ ಸಿಂಹ (ಹಹಹ ಕೇರಳದಲ್ಲಿ...ಸಿಂಹ...ಎಂಥಾ ವಿರೋಧಾಭಾಸ ಎನ್ನಬೇಡಿ...!!) ಆಗುವ ವಿರೋಧ ಪಕ್ಷಗಳಂತೆ ಅಲ್ಲಿವರೆಗೂ ಸುಮ್ಮನಿದ್ದ ಭೇತಾಳ ಮಾತನಾಡತೊಡಗಿತು.

“ಎಲೈ ಶತ ವಿಕ್ರಮ, ...ನಿದ್ದೆ ಮಾಡುತ್ತಿದ್ದ ನಿನಗೆ ಹಾಗೋ ಹೀಗೋ .... ಸಿಂಹಾಸನ ಸಿಕ್ಕಿ ಬಿಡ್ತು....ನಿನ್ನ ಮುತ್ತಜ್ಜ ಇಮ್ಮಡಿ ವಿಕ್ರಮ ಬಹು ಮೇಧಾವಿ ಅವನ ಹೆಸರಿನಿಂದಲೇ ನಿನಗೆ ಈ ಪಟ್ಟವೂ ಹೇಗೋ ಸಿಕ್ತು ..ಆದ್ರೆ ಇದನ್ನು ಉಳಿಸಿಕೊಳ್ಳಲು ಉಳುವವನ ಮನೆ ಬಗ್ಗೆ ಮಾತನಾಡಿ ಈಗ ಅವನ ಬುಡಕ್ಕೇ ನೇಗಿಲು ಹರಿಸಿದ್ದೀಯಾ...ನಿನಗೆ ತರವಲ್ಲ..., ಅಲ್ಲಯ್ಯ ..ರೈತನಿಗೆ ಉಳುವ ಭೂಮಿ ಕೊಡಬೇಕಾದ ನೀನು ಕೊರೆದ ಭೂಮಿ ಕೊಡೋದ್ರಲ್ಲೇ ಇಡೀ ವ್ಯವಸ್ಥೆಯನ್ನ ದಿಕ್ಕಾಪಾಲು ಮಾಡ್ತಿದ್ದೀಯಲ್ಲ ತರವೇ..? ನನಗೆ ಕಥೆ-ಗಿಥೆ ಹೇಳೋ ಮೂಡಿಲ್ಲ... ನಿನ್ನದೇ ಕಥೆಯಿಂದ ಆಯ್ದ ಭಾಗಗಳ ನನ್ನ ಸಂಶಯಗಳ ಕಂತೆಯನ್ನು ನೀನು ನೂರು ಜನ್ಮ ಎತ್ತಿದರೂ ಬಿಡಿಸಲಾರೆ...ಆದ್ರೂ ಕಂತು ಕಂತಿನಲ್ಲೇ ..ಕೇಳು.., ಪ್ರಯತ್ನಿಸು ಉತ್ತರಿಸೋಕೆ....."
ಭೇತಾಳ ವಿರೋಧ ಪಕ್ಷದವರಂತೆ ಸಮಸ್ಯೆ ಬಗೆ ಹರಿಸುವುದರ ಬಗ್ಗೆ ಸಲಹೆ ಕೊಡುವುದನ್ನು ಬಿಟ್ಟು ಪುಃಖಾನು ಪುಃಖ ಪ್ರಶ್ನೆಗಳ ಬಾಣಬಿಡಲಾರಂಭಿಸಿದ.

"ನಿನ್ನ ಕಪಿಲಾಪುರದ ಸಿಂಹಾಸನಾರೂಢನಾಗುವ ಸಮಯದ ನಿನ್ನ ದುಡಿವ ಅನ್ನದಾತನ ಉದ್ಧಾರದ ದೀಕ್ಷೆಗೇಕೆ ತಿಲಾಂಜಲಿ ಕೊಟ್ಟೆ..? ಕಪಿಲಾಪುರದ ಅವ್ಯವಹಾರ ಬಯಲಿಗೆ ತರೋ ಲೋಕಪಾಲನಿಗೆ ಕೇವಲ ಇಲಿ, ಬೆಕ್ಕುಗಳನ್ನು ಹಿಡಿಯುವ ಅಧಿಕಾರ ಕೊಟ್ಟು ತೋಳ ಮತ್ತು ಕಪಟ ನರಿಗಳ ದಂಡಿಸುವ ಹಕ್ಕನ್ನು ಏಕೆ ಕೊಡಲಿಲ್ಲ..? "

"ವಿರೋಧಪಕ್ಷದವರನ್ನು ಆಮಿಷವೊಡ್ಡಿ ನೀನು ಸೆಳೆದದ್ದು ಲೋಕ ನೋಡಿದೆ.., ಅದೇ ಕೆಲಸದ ಕೇವಲ ಒಂದಂಶ ವಿರೋಧಿಗಳು ಮಾಡಿದಾಗ ಏಕೆ ಸಿಡಿಮಿಡಿಯಾದೆ..? ಎಲ್ಲ ದೇವಾನು ದೇವತೆಗಳೂ ಮೀಟಿಂಗ್ ಮಾಡೋ ಮಟ್ಟಕ್ಕೆ ...ದೇವಸ್ಥಾನಗಳ ಸುತ್ತಿಬಿಟ್ಟೆ....??!! ಅಧಿಕಾರ ಹಣಕ್ಕೆ ಆಸೆಪಟ್ಟು ಮತ್ತೆ ಗೆಲ್ಲುವ ಲವಲೇಶವೂ ನಂಬಿಕೆಯೇ ಇರದ ಸದಸ್ಯರನ್ನು ನೀನು ಸೆಳೆದ್ದುದರಲ್ಲಿ ಘನತೆಯೇನೂ ಇಲ್ಲ ..ಆದರೆ ನಿನ್ನವರ ಗುಂಪೊಂದು ಸಿಡಿಯಿತು ಅಂದರೆ ನಿನ್ನ ಆಳ್ವಿಕೆಯಲ್ಲಿ ಏನೋ ಲೋಪವಿದೆಯೆಂದು ಅರಿತರೂ ಮತ್ತೆ ನಿನ್ನ ಹಳೆಯ ಚಾಳಿಗಿಳಿದು...ಈಗಲೇ ನೆಲಕಚ್ಚಿರುವ ನಿನ್ನ ನಾಡಿನ ಘನತೆ ಪ್ರಜೆಗಳ ಆಶಯವನ್ನು ಪಾತಾಳಕ್ಕೆ ತುಳಿಯುವುದು ನ್ಯಾಯವೇ..??......

ಇದನ್ನು ತಿಳಿದೂ ನೀನು ಹೇಳದೇ ಹೋದರೆ ನಿನ್ನ ಪಕ್ಷದವರೆಲ್ಲಾ ಗುಂಪು-ಗುಂಪು ಗುಂಪುಗಾರಿಕೆ ಮಾಡಿ ನಿನ್ನ ಆಸ್ಥಾನವನ್ನ ಅಲ್ಲಾಡಿಸಿಬಿಟ್ಟಾರು ಜೋಕೆ,,,,”

ಶತವಿಕ್ರಮನಿಗೆ ರೇಗಿತು...“ನೀನು ಕೇಳಿದ್ದಕ್ಕೆಲ್ಲಾ ಉತ್ತರಕೊಡೋಕೆ ಜವಾಬ್ದಾರಿಯುತ ಅಧಿಕಾರಿಯಲ್ಲ ...ನನ್ನ ರಾಜ್ಯಾಳ್ವಿಕೆಯನ್ನು ಕಾಪಾಡಿಕೊಳ್ಳೋದು ನನಗೆ ಮೊದಲ ಕರ್ತವ್ಯ ಉಳಿದ ಮಿಕ್ಕಿದ್ದೆಲ್ಲ ಗೌಣ,,,,” ಎಂದಾಗ ...

“ಮೂಢ, ನೀನು ಹೀಗೇ ವಿರೋಧಪಕ್ಷಕ್ಕೂ ಉತ್ತರಕೊಡದೇ ಪ್ರಜೆಗಳ ಸಮಸ್ಯೆಗಳನ್ನೂ ಪರಿಹರಿಸದೇ ಉಡಾಫೆಯಲ್ಲೇ ಕಾಲ ಕಳೆ...!! ಈಗ ನೀನು ಮೌನ ಮುರಿದೆ...ಅದಕ್ಕೆ ಇದೋ ನಾನು ಹೊರಟೆ...” ಎನ್ನುತ್ತಾ ಶತವಿಕ್ರಮನ ಹೆಗಲಿಂದ ಮಾಯವಾಯಿತು.

Monday, October 18, 2010

ವಂಡರ್-ಕಣಯ್ಯಾ...ವಂಡರ್ರು...!!!

.

ವಂಡರ್-ಕಣಯ್ಯಾ...ವಂಡರ್ರು...!!!
ಮಗ ಹೇಳ್ದ...”ಅಲ್ಲಪ್ಪ ವೆಂಡರ್ ಕಣ್ಣು...!! “ನಾನಂದೆ “ಹೌದಾ... ??”


“ಹೌದು ವೆಂಡರ್ ಅಂದ್ರೆ ಮಾರಾಟಗಾರ ಅಂತಲ್ಲವಾ..?? ಹಂಗಂದ್ರೆ...??!!”


ಅದೇ ಕಣಯ್ಯ ನಮ್ಮ ಮನೆಗೆ ಪೇಪರ್ ಹಾಕೋ ಶಿವು “ಏನೋ ಬರ್ದಿದ್ದೀನಿ..ಒಂದು ಬುಕ್ಕು....ಓದಿ ಸಾ...ಅದನ್ನೇಯ್ಯಾ ಮೊನ್ನೆ ಬಿಡುಗಡೆ ಮಾಡ್ಸಿದ್ದು..ನಿಮ್ಮನ್ನ ಇನ್ವೈಟ್ ಮಾಡಿದ್ದು...” ಅಂತ ಹೇಳಿದ್ದನಲ್ಲಾ...ಆ ಪುಸ್ತಕಾನೇ...ಹೂಂ ಮತ್ತೆ...


ನಾನು ಯೋಚನೆಮಾಡತೊಡಗಿದೆ......


ಅಲೆ ಇವನಾ..ಅಲ್ಲ ಕಣ್ ಕಣ್ ಬಿಟ್ಕೊಂಡ್ ತಿಂಗಳಾ ತಿಂಗಳಾ ಪೇಪರ್ ದುಡ್ಗೆ ಮನೆ ಹತ್ರ ಬರ್ತಿದ್ದೋನಿಗೆ,,,ಫೋಟೋಗ್ರಫಿ ಪ್ರಶಸ್ತಿ ಬಂದೈತೆ ಅಂದಾಗ .”ಏಯ್..ಏನೋ ಬಿಡು ಯಾರೂ ಇರ್ಲಿಲ್ಲವೇನೋ ಒಳ್ಲೆ ಫೋಟೋಗ್ರಾಫರ್ಸು ಕಾಂಪಿಟೆಶನಲ್ಲಿ” ಅಂದ್ಕೊಂಡೆ...ಆವೊತ್ತು...ಮತ್ತೆ ಅದೇ ಶಿವು..ಇಂಗ್ಲೀಷೋರ್ನೂ ಮೆಚ್ಚಿಸೋ ಹಾಗೆ ಫೋಟೋ ತೆಗ್ದು ಮತ್ತೆ ತಗೊಂಡಾಗ ಪ್ರಶಸ್ತೀನಾ..


ಊಂ...ಏನೋ ಐತಪ್ಪ ಈ ಹುಡ್ಗನ ಹತ್ರ ಪ್ರತಿಭೆ ಥರದ್ದು ಅನ್ಸಿತ್ತು...ಮತ್ತೆ ಮತ್ತೆ ಸುಮಾರು ಪ್ರಶಸ್ತಿ ಬಂದಿದ್ದು ..ನೋಡಿ ಹೌದಪ್ಪ ..!! ಒಪ್ಕೋ ಬೇಕಾದ್ದೇ ಅನ್ನಿಸ್ತು....


ಅದೆಲ್ಲ ಸರಿ ಮೊನ್ನೆ ಮೊನ್ನೆ ಬರಿಯೋಕೆ ಶುರು ಮಾಡಿದ್ದಿನಿ ಅಂದಂಗಿತ್ತು...ಮತ್ತೆ ನೋಡಿದ್ರೆ......... ???


ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ ಇವರು ನೀಡುವ ಬೇಂದ್ರೆ ಗ್ರಂಥ ಬಹುಮಾನ-೨೦೧೦, ಕ್ಕೆ ಕೆ.ಶಿವು ರವರ “ವೆಂಡರ್ ಕಣ್ಣು” ಆಯ್ಕೆಯಾಗಿದೆ


ಅಂತ ಸುದ್ದಿ..ಓದಿ....ಓ...!!!! ತಕಳಪ್ಪಾ...ಇಲ್ಲೂ ಬಾರಿಸ್ಬಿಟ್ಟ ಸಿಕ್ಸರಾ....!!! ಅನ್ಸಿ...ಫೋನಾಯಿಸಿಯೇ ಬಿಟ್ಟೆ...


ನಮಸ್ಕಾರ ಶಿವು (ನನಗೇ ಗೊತ್ತಿಲ್ಲದೇ..ಸ್ವಲ್ಪ ಗಾಂಭೀರ್ಯ ಮತ್ತೆ ಗೌರವ ತುಂಬಿತ್ತು ನನ್ನ ದನಿಯಲ್ಲಿ..!!)..ಅಭಿನಂದನೆಗಳು..ಕಣಪ್ಪಾ.....


ನಮಸ್ಕಾರ ಸಾ...(ಅದೇ ಮುಗ್ಧ ಮುಖ ಕಣ್ಣಮುಂದೆ ಬಂದಿತ್ತು) ಸೈಂಟಿಸ್ಟ್ ರಾಮಣ್ಣನೋರು ಅಲ್ವಾ.. ಎಲ್ಲಾ ನಿಮ್ಮ ಆಶೀರ್ವಾದ ಸಾ...ಏನೋ,, ಬರ್ದೆ..ಅವರಿಗೆ ಇಷ್ಟ ಆಯ್ತು...ಎಲ್ಲಾ ಹಿರಿಯರ ಆಶೀರ್ವಾದ...... ತುಂಬಾ ಥ್ಯಾಂಕ್ಸು ಸಾ ಫೋನ್ ಮಾಡಿದ್ದಕ್ಕೆ ...ನಿಮ್ಮಂತೋರ ಆಶೀರ್ವಾದ ಹೀಗೇ ನಮ್ಮ ಮೇಲೆ ಇರ್ಲಿ ಸಾ...


ಹೌದು..ಸಂಶಯವೇ ಬೇಡ...ಅದೇ..ಶಿವು..ಹಾಗೇ ಇದ್ದಾನೆ...ಅದೇ ವಿನಯ..ಮುಗ್ಧತೆ...ಅನ್ನಿಸಿತು ನನಗೆ ..ಇಲ್ಲಾಂದ್ರೆ..ಒಂದು ಮಾಮೂಲಿ ಬಹುಮಾನ ಬಂದ್ರೆ ಸಾಕು ಈಗಿನ ಯುವಕರ ತಲೆ ಒಂದು ಕಡೆ ನಿಲ್ಲೊಲ್ಲ....


ಆಯ್ತಪ್ಪ..ಶುಭವಾಗಲಿ...ನಿನ್ನ ಕೃಷಿ ಹೀಗೇ ಫಲ ನಿಡ್ತಾ ಇರ್ಲಿ....


ಫೋನಿಟ್ಟೆ.....ಟೇಬಲ್ ಮೇಲೆ ಇಟ್ಟಿದ್ದ ಶಿವು ನ “ವೆಂಡರ್ ಕಣ್ಣು” ಕೈಗೆತ್ತಿಕೊಂಡೆ......


Saturday, October 9, 2010

ತೋರು ನಾಡು ದೇಶ ಏನೆಂದು

ಚಿತ್ರ ಕೃಪೆ: http://www.tailoredtanning.co.uk/vitamind.htm


ನೇಸರನೇರುವತ್ತ ಕತ್ತಲು ಸರಿಯುತಿದೆ
ಎಲ್ಲೋ ಯಾರೋ ಮಲಗಿ ಏಳುವಂತಿದೆ
ಘೋರವರಿತ ಬೆಚ್ಚಿಕನಸ ಕರಗುವಂತಿದೆ
ಎತ್ತಲೆತ್ತಲೋ ಇತ್ತು ಕತ್ತಲುರುಳುವಂತಿದೆ

ಸೂರ್ಯಹೊರಳಲು ಸಾಕು ನರಿ ಊಳಿಡಲು
ತೋಳಗಳ ಹಿಂಡು ಕುರಿದೊಡ್ಡಿಗೆ ನುಸುಳಲು
ನಾಯಿಗಳು ಮಲಗಿವೆ ತಿಂದು ಕವಿದು ಅಮಲು
ತಿಂದ ಧಣಿಗಳು ಮತ್ತೆ ತಿನ್ನಲೆಂದೇ ಬಿಟ್ಟು ಬಿಳಲು

ಕೊಟ್ಟು ಮತ ಆಸೆ ಆಮಿಶವೆಲ್ಲಕೆ ಬಲಿಯಾಗಿ ಅಂದು
ನಿಮ್ಮ ನಿಂತ ನೆಲಕುಸಿಯೆ ಸರಿಯಿಲ್ಲವೇ ಇಂದು?
ವಿದ್ಯೆವಿವೇಕವಿದ್ದೂ ಅವಿವೇಕಿಯ ಗೆಲಲು ಬಿಟ್ಟದ್ದು
ರೈತನ ಕೊಲುವರು ಗಣಿ ಅರಣ್ಯ ದೋಚುವರೆನ್ನುವುದು
ಹೊಣೆಗೇಡಿತನಕ್ಕೆಡೆಯಿಲ್ಲ ಅಳುವುದು ಸಲ್ಲ, ಬಿದ್ದರೆ ಗುದ್ದು

ಏನಿಲ್ಲ ನಮ್ಮಲ್ಲಿ, ಬುದ್ಧಿ, ಶಕ್ತಿ, ನಿಸರ್ಗ ಸಂಪತ್ತು?
ಎಂತಹ ವಿಪತ್ತಿಗೂ ಇದೆ ಎದೆಯೊಡ್ಡುವ ತಾಕತ್ತು
ಎಲ್ಲ ಶಕ್ತಿ ಒಟ್ಟುಗೂಡಿಸುವ ಯೋಜನೆಯೊಂದು ಸಾಕು
ಕತ್ತಲಜೊತೆ ಗುದ್ದಾಟ, ಸಾಕು ನಿರಂತರ ಕಸರತ್ತು
ತಡಬೇಡ ತಿಳಿಯಲಿ ನಾಡು ದೇಶ ಏನೆಂದು ಜಗತ್ತು

Sunday, October 3, 2010

ಆಕಾಶ ಗಂಗೆಯಲ್ಲಿ ಮತ್ತೊಂದು ಭೂಮಿ!!

ಚಿತ್ರ ಕೃಪೆ:ಅಂತರ್ಜಾಲ

“ಗ್ಲೀಜಿ-581 G” ಎಂಬ ಭೂಮಿಯಂತಹ ಗ್ರಹ ಸೌರವ್ಯೂಹದಿಂದ ಸುಮಾರು 20 ಪ್ರಕಾಶವರ್ಷ (ಲೈಟಿಯರ್ಸ್) ದೂರದಲ್ಲಿ ಇದೆಯೆಂದು ದಿನಾಂಕ 29 ಸೆಪ್ಟಂಬರ್ ನ ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನಾಶನಲ್ ಸೈನ್ಸ್ ಫೌಂಡೇಶನ್ ನ ಎಡ್ವರ್ಡ್ ಸೀಡೆಲ್ ಪ್ರಕಾರ ಈ ಗ್ರಹ ಜೀವಿಗಳನ್ನು ಹೊಂದಿದೆ ಎನ್ನುವುದು ತಿಳಿದು ಬಂದರೆ ಮಾನವ ಕಂಡು ಹಿಡಿದ ವೈಜ್ಞಾನಿಕ ವಿಸ್ಮಯಗಳಲ್ಲಿ ಇದು ಪ್ರಮುಖವಾಗುತ್ತದೆ. ಈ ಗ್ರಹ ಭೂಮಿಗಿಂತ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚು ತೂಕವಿದ್ದು ತನ್ನ ಕಕ್ಷೆಯ ಮೇಲೆ ತಿರುಗುವುದು ಬಹುಶಃ ಅನುಮಾನವಾಗಿದೆ ಹಾಗಾಗಿ ಈ ಗ್ರಹದ ಒಂದು ಭಾಗ ಯಾವಾಗಲೂ ಸೂರ್ಯ (ಅಲ್ಲಿನ ಸೂರ್ಯ..ನಮ್ಮ ಸನ್ ಅಲ್ಲ..ಹಹಹ!!!) ನ ಕಡೆ ಇದ್ದು ಬೆಳಕಿರುತ್ತೆ ಮತ್ತೊಂದು ಪಾರ್ಶ್ವ ಕತ್ತಲಲ್ಲಿ...!! ಇದರಿಂದ ಸೂರ್ಯನೆಡೆಯ ಭಾಗದ ಶಾಖ ಸುಮಾರು 160 ಡಿಗ್ರಿ ಸೆಲ್ಸಿಯಸ್ ಇದ್ದು ಕತ್ತಲ ಭಾಗದಲ್ಲಿ -12 ರಿಂದ 21ಡಿ.ಸೆ. ಇರಬಹುದೆಂದು ಅಂದಾಜಿಸಲಾಗಿದೆ. ಗುರುತ್ವಾಕರ್ಷಣ ಶಕ್ತಿಯಿರುವ ಗ್ರಹವಾಗಿದ್ದು ಇಲ್ಲಿ ಘನಭಾಗವಿದ್ದು ಭೂಮಿಯಂತಿರಬಹುದು ಮತ್ತು ನೀರೂ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಅಂಶ ಗೊತ್ತೆ...ಈ ಭೂಮಿ ತನ್ನ ಸೂರ್ಯನಿಂದ ಬಹು ಹತ್ತಿರವಿದ್ದು ಅದರ ಸುತ್ತ ಪ್ರದಕ್ಷಿಣೆಗೆ ಕೇವಲ 37 ದಿನ ಬೇಕಾಗುತ್ತೆ..!!! ಅಂದರೆ ಆ ಭೂಮಿಯ ಒಂದು ವರ್ಷ ನಮ್ಮ 37 ದಿನಕ್ಕೆ ಸಮ....!!!!ಈ ಗಾಗಲೇ ನಮ್ಮ ರಾಜ್ಯದ ಹಲವಾರು ಸಹೋದರರು ಅಪ್ಪ-ಮಕ್ಕಳು ತಮ್ಮ ಅಸ್ಟ್ರೋನಾಟ್ ಸೂಟುಗಳನ್ನ ರೆಡಿಮಾಡಿಸ್ಕೋತಾ ಇದ್ದಾರಂತೆ...ಯಾವುದೇ ಭೂ ಕಾಯಿದೆ ಇಲ್ಲ...ಗಣಿ ಕಾಯಿದೆ ಇಲ್ಲ ಎಲ್ಲಾ ಫ್ರೆಶ್ ಫ್ರೆಶ್...ಯಾರಿಗುಂಟು..ಯಾರಿಗಿಲ್ಲ.....ಜೈ-ಗ್ಲೀಜಿ,,,,,

Friday, October 1, 2010

ನನ್ನದೊಂದು ವಿನಂತಿ


ಜಗದ ಜನಕೆ ತೋರಿತೊಂದು ಭಾರತ

ಇತಿಹಾಸವೀಗ ಕನಸಾಗಿತ್ತು ಅವಿರತ

ನಿಸರ್ಗ-ಸಗ್ಗ ಜನಮನವೆನಿಸಿ ಬಹುಹಿತ

ವಿಶ್ವ ಸಕಲಕೆ ಮಾದರಿ ಅಂದು ಭಾರತದಂಡು ಹೊರಟವಂದು ಕಂಡುಕೊಳ್ಳಲು ಮಾರ್ಗ

ಹಿಂಡು ಹಿಂಡಾಯ್ತು ಬಂಡುಕೋರರಿಗೂ ಸ್ವರ್ಗ

ಸಾಗರದಾಟಿ ಬಂದು ಮಾರ್ಗ ಹುಡುಕಲು ಹುಮ್ಮಸ್ಸು

ಅಲೆಯಮೇಲಲೆದು ದಾರಿತಪ್ಪಿದನಂದು ಕೊಲಂಬಸ್ಸುಸಿಂಧೂ ಕಣಿವೆಯಲ್ಲಿ ಮೆರೆದಿತ್ತು ನಾಗರೀಕತೆ

ಗಂಗಾತೀರ, ಗೋದಾವರಿ ಕೃಷ್ಣೆ ಕಾವೇರಿ ಗೀತೆ

ಎಲ್ಲೆಲ್ಲೂ ನಾಡರಸರು ತುಂಬಿತ್ತೆಲ್ಲೆಡೆ ಮಂದಹಾಸ

ಜನಮನ ಜೀವನದಲ್ಲಿತ್ತು ಕಂಡರಿಯದ ಸಂತಸಹಿಮಾಲ ಮೆಟ್ಟಿಬಂದ ದಾಳಿಕೋರರು ಹಲವರು

ಬಂದು ನೆಲಸಿ ನಾಡಲೊಂದಾದ ಕೆಲ ಅರಸರು

ಬಂದನಾಗ ದಾರಿತೋರಿ ದಕ್ಕನಿಗೆ ವಾಸ್ಕೋಡಗಾಮ

ವೈಮನಸ್ಯ ಬೀಜ ಬಿತ್ತಿ ನಡೆಸಲು ಮಾರಣಹೋಮ


ನಮ್ಮ-ನಮ್ಮಲ್ಲೇ ಕಿತ್ತಾಟ ತಕ್ಕಡಿ ಹಿಡಿದವಗೆ ಜುಟ್ಟು

ಎತ್ತಿ ಕಟ್ಟಿದವ, ಆಮಿಶಗೊಂಡು ಕೊಟ್ಟೆವವಗೆ ಜುಟ್ಟು

ಐನೂರು ವರ್ಷ ಸತತ ಕೊಳ್ಳೆ, ಬರಿದಾಯ್ತು ತುಂಬು ಕಣಜ

ಸ್ವಾತಂತ್ರ್ಯಕೊಟ್ಟರು ಕಂಡು ಎಲ್ಲೆಡೆ ತಹತಹಿಸುವ ಮನುಜ


ಈಗ ಹಿಡಿದಿಹರು ನಮ್ಮವರೇ ನಮ್ಮ ಜುಟ್ಟು

ನಾಡ ಸಂಪದ ಮಾಡಿ ಸ್ವಂತ ಉಳಿಸಿ ಹೊಟ್ಟು

ಪರಕೀಯರಿಗಿಂತ ಕೀಳು ತಂದಿಡುವರು ನಮ್ಮಲ್ಲೇ

ಮತ-ಜಾತಿ ಗಲಭೆ ಅವರ ಬೇಳೆ ಬೇಯುವುದೂ ಇಲ್ಲೇನ್ಯಾಯಾಲಯ ತೂಗಿಹುದು ಎಲ್ಲರ ಬೇಳೆಯ ಈ ಬಗೆ

ಕೊಟ್ಟು ಬೇಳೆ ಒಬ್ಬಗೆ ಬೇಯಿಸಲು ಇಂಧನ ಮತ್ತೊಬ್ಬಗೆ

ಯುವಜನ-ಜನ ಮೆರೆದಿಹರು ಅಪೂರ್ವ ವಿವೇಚನೆ

ಸೊಪ್ಪು ಹಾಕದೆ ಮನಮುರಿವರ ಮತ್ತೊಂದು ಅಲೋಚನೆಆಶಯ ನನ್ನದು, ಜಗದಲಿ ಮೆರೆವ ಶಕ್ತಿಯ ದೇಶ

ವಿವೇಚನೆ ಮತ್ತೂ ಪ್ರಖರಗೊಳ್ಳಲಿ ಬೆಳಗುಪ್ರಕಾಶ

ಆಗಲೊಂದೇ ಧ್ಯೇಯ ದೇಶದ ಬಹುಮುಖ ಪ್ರಗತಿ

ನಡೆಯಲೊಂದೇ ನ್ಯಾಯ, ಎಲ್ಲರ ಸುಖದ ಭಾರತಿ

Thursday, September 23, 2010

ಅಬ್ಬಬ್ಬಾ ಖಾರ.!!!...ಕಣ್ಣು ಮೂಗಲ್ಲಿ ನೀರು ಸುರಿಸೊಷ್ಟು...!!!!


ಚಿತ್ರ ಕೃಪೆ: 4.bp.blogspot.com

.
.ಸ್.ಸ್....ಅಸ್ಸೋ....ಅಬ್ಬಬ್ಬಾ...ಖಾರ..ಖಾರ.....!!!

ಯಾವುದಾದ್ರೂ ತಿಂಡಿ ಖಾರವಾಗಿದ್ರೆ ಅದು ಸಹಿಸೋಕೂ ಆಗದಷ್ಟು ಅಂದ್ರೆ.....ಮೇಲಿನ ಉದ್ಗಾರ ನಿಮಗೆ ಹೊಸದೇನಲ್ಲ...ನೀವೂ ಅನುಭವಿಸಿರ್ತೀರಾ, ಇಲ್ಲ ಅಪ್ಪಿ ತಪ್ಪಿ ಉಪ್ಪಿಟಿನಲ್ಲೋ ಮತ್ಯಾವುದೋ ತಿಂಡಿಯಲ್ಲೋ ಹಸಿರು ಬಟಾಣಿ ಅಥವಾ ಹಸಿರು ಹುರುಳಿಕಾಯಿ ಅಂತ ಅಂದ್ಕೊಂಡು ಹಚ್ಚಿದ ಮೆಣಸಿನಕಾಯಿಯನ ತಿಂದು ಬಾಯ್ಬಾಬಿ ಬಿಟ್ಟು ನೀರು ಕುಡಿದಿರ್ತೀರ...ಕಣ್ಣೊರೆಸಿರ್ತೀರ...ಮೂಗಲ್ಲಿನ ನೀರು ಬೀಳ್ಸಿರ್ತೀರ...ಅಲ್ವಾ...?!!

ಹೌದು.., ಖಾರ ಅಂದ್ರೆ ತಕ್ಷಣ ಕಣ್ಣಿನ ಮುಂದೆ ನಿಲ್ಲೋದು ಮೆಣಸಿನಕಾಯಿಯ ಚಿತ್ರ.

ಖಾರ...?? ಏನಿದು...?? ಇಂಗ್ಲೀಷರಿಗೆ ಇದನ್ನ ವರ್ಣಿಸೋಕೆ ಆಗದೆ ’ಹಾಟ್’ ಅಂತಾರೆ..!!

ಅಯ್ಯೋ..ಮೂದೇವಿ ಬಿಸಿ ಎಂತದ್ದು..??!! ಖಾರ ಅನ್ನೋಕಾಗಲ್ವಾ ಅಂತ ಊರಿಗೆ ಬಂದಿದ್ದ ನನ್ನ ವಿಲಾಯಿತಿ ಸ್ನೇಹಿತ ಚೋಟು ಮೆಣಸಿನ ಕಾಯಿ ಚೂರನ್ನು ತಪ್ಪಿ ತಿಂದು ಕೆಂಪು ಕೆಂಪು..ಆಗಿ ಬಾಯಿ..ಬಾಯಿ...ಆಂ...ಎನ್ನುತ್ತಾ ಹಾಟ್ ಹಾಟ್ ಎಂದಾಗ ಅಜ್ಜಿ ಎಂತ ಹೇಳುತ್ತೆ ಅದು ? ಎಂದಿದ್ದಕ್ಕೆ ಬಿಸಿ..ಬಿಸಿ ಅಂತ ಯಥಾವತ್ ತರ್ಜುಮೆ ಮಾಡಿದ್ದೆ ...ಆಗ ಹೇಳಿದ್ದು ಅಜ್ಜಿ...

ಹಾಂ ವಿಷಯಕ್ಕೆ ಬರೋಣ...,

ಖಾರ..ಎಲ್ಲಿಂದ ಬರುತ್ತೆ?

ಖಾರ, ಎಲ್ಲರೂ ತಿಳಿದ ಹಾಗೆ ಒಂದು ಸ್ವಾದವಲ್ಲ...ಇದನ್ನು ಟೇಸ್ಟ್ ಎನ್ನಲಾಗದು ...ಕಪ್ಪು ಹೇಗೆ ಒಂದು ವರ್ಣ ಅಲ್ಲವೋ ಹಾಗೆ. ಖಾರದಾಯಕ ಗುಣ “ಕ್ಯಾಪ್ಸಾಸಿನ್” ಎಂಬ ರಾಸಾಯನಿಕ ತತ್ವದಿಂದ ಬರುತ್ತದೆ. ಚರ್ಮ ಮತ್ತು ವಿಶೇಷತಃ ನಾಲಿಗೆಯ ಮೇಲಿನ ’ಶಾಖ’ಕ್ಕೆ ಸ್ಪಂದಿಸುವ ಕೋಶಿಕೆಗಳನ್ನು ಕೆಣಕುವ ಗುಣ ಈ ರಾಸಾಯನಿಕ ಅಂಶಕ್ಕೆ ಇರುತ್ತದೆ ಇದು ಅಂತಹ ಕೋಶಿಕೆ ಮತ್ತು ನರತಂತುಗಳ ಮೂಲಕ ಮಿದುಳಿಗೆ ತಪ್ಪು-ಕಲ್ಪಿತ ಸಂದೇಶವನ್ನು ರವಾನೆ ಮಾಡುವುದರಿಂದ “ಖಾರ” ದ ಸ್ವಾದಾನುಭವವಾಗುತ್ತದೆ. ಇದು ಬೆವರುವಿಕೆ (ಶಾಖದ ಪರಿಣಾಮ)ಯನ್ನು ಪ್ರಚೋದಿಸುತ್ತದೆ ಈ ಕ್ರಿಯೆಗೆ ’ಎಂಡಾರ್ಫಿನ್’ ಎಂಬ ಸ್ರಾವಕ ಕಾರಣವಾಗಿರುತ್ತದೆ. ಹಾಗಾಗಿ ಖಾರ ಉರಿಯನ್ನು ಉಂಟುಮಾಡುವುದಲ್ಲದೇ ಎಂಡಾರ್ಫಿನ್ ಉತ್ಪತ್ತಿ ಮತ್ತು ಬೆವರುವಿಕೆಗೆ ದಾರಿ ಮಾಡುತ್ತದೆ.

ಹಿಂದಿನ ದಿನಗಳಲ್ಲಿ ಖಾರತ್ವ ಅಳೆಯೋಕೆ ಆಸ್ವಾದಕರನ್ನು ಅಥವಾ ಸ್ವಾದ ವಿಶೇಷಜ್ಞರನ್ನ ನೇಮಿಸಿ ಅವರು ಸ್ವಾದ ನೋಡಿ ಎಷ್ಟು ಖಾರ ಎನ್ನುವುದನ್ನು ಅಳತೆಪಟ್ಟಿಯ ಆಧಾರದಲ್ಲಿ, ಅಂದರೆ ಹೋಲಿಕೆ ಆಧಾರ, ಖಾರವಿಲ್ಲ, ಕಡಿಮೆ ಖಾರ, ಸ್ವಲ್ಪ ಖಾರ, ಮಧ್ಯಮ ಖಾರ, ಹೆಚ್ಚು ಖಾರ ಅತಿ ಹೆಚ್ಚು ಖಾರ, ಅಸಹ್ಯ ಖಾರ ಹೀಗೆ ವರ್ಗೀಕರಣದ ಮೂಲಕ ಅಳತೆಪಟ್ಟಿ ತಯಾರಿಸಲಾಗುತ್ತಿತ್ತು. ಕ್ರಿ.ಶ.1912 ರಲ್ಲಿ ವಿಲ್ಬರ್ ಸ್ಕೋವಿಲೆ ಎಂಬ ಅಮೆರಿಕಾ ತಜ್ಞ ಖಾರದಾಯಕ ಗುಣ ’ಕ್ಯಾಪ್ಸಾಸಿನಾಯ್ಡ್ಸ’ ಎಂಬ ಅಂಶ/ಘಟಕದ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆಂದು ಸಾಧಿಸಿದ. ಆ ನಂತರ ಯಾವುದೇ ಸಸ್ಯಜನ್ಯ ಅಥವಾ ’ಕ್ಯಾಪ್ಸಾಸಿನಾಯ್ಡ್ಸ’ ಅಂಶವುಳ್ಳ ತಿಂಡಿ, ಆಹಾರ ಪದಾರ್ಥ, ತರಕಾರಿ ಇತ್ಯಾದಿಗಳ ಖಾರತ್ವವನ್ನು ’ಕ್ಯಾಪ್ಸಾಸಿನಾಯ್ಡ್ಸ’ ಪ್ರಮಾಣದ ಅಧಾರದ ಮೇಲೆ ಸ್ಕೋವಿಲೆ ಖಾರಾಂಶ (ಸ್ಕೋವಿಲೆ ಹೀಟ್ ಯೂನಿಟ್ಸ್, SHU) ಗಳು ಎಂದು ಹೇಳಲಾಗುತ್ತದೆ.

ಇನ್ನು ಮೆಣಸಿನಕಾಯಿ, ಖಾರ ಅಂದ್ರೆ ಮೆಣಸಿನಕಾಯಿಯೇ ಅಲ್ಲವೇ...? ಇದರಲ್ಲಿ ಹಲವಾರು ವಿಧಗಳು, ಬಣ್ಣಗಳು, ರೂಪಗಳು,,,, ಹಸಿಕಾಯಿ, ಒಣಕಾಯಿ, ಬೀಜ, ಇತ್ಯಾದಿ.

ಪ್ರಪಂಚದಲ್ಲಿ ಅತಿ ಖಾರವಾದ ಮೆನಸಿನಕಾಯಿ ಭಾರತದಲ್ಲಿ ಸಿಗುತ್ತದೆಂದರೆ ನಂಬುತ್ತೀರಲ್ಲವೇ...ಆದ್ರೆ ಅದು ಬಿಸಿಲ ತಾಪದ ರಾಜಸ್ಥಾನದಲ್ಲಿಯೋ ಅಥವಾ ಖಾರ ತಿನ್ನೊದಕ್ಕೇ ಹೆಸರಾದ ಕರ್ನಾಟಕದ ಬಳ್ಳಾರಿ, ಬ್ಯಾಡಗಿಯಿಂದಲೋ ದೊರೆಯುವಂಥದಲ್ಲ....ಹಸಿರುಸಿರಾಡುವ ಪೂರ್ವೋತ್ತರ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಗಳಲ್ಲಿ ದೊರೆಯುತ್ತವೆ. ಇವುಗಳನ್ನು “ನಾಗಾ ಜೋಲಾಕಿಯ” ಮೆಣಸಿನ ಕಾಯಿ ಎನ್ನುತ್ತಾರೆ. “ಗಿನ್ನೆಸ್ ದಾಖಲೆ ಪುಸ್ತಕ” ದಲ್ಲಿ ಈ ಮೆಣಸಿನಕಾಯನ್ನು ವಿಶ್ವದಲ್ಲೇ ಅತಿ ಹೆಚ್ಚು ಖಾರದ ಮೆಣಸಿನಕಾಯಿ ಎಂದು ಮಾನ್ಯತೆ ನೀಡಲಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಮಾರುವ ’ಇಮಾ’ ಗಳು ಹಿಕ್ಕಳದ ಸಹಾಯದಿಂದ ಅವನ್ನು ಹಿಡಿದು ತೂಕಕ್ಕೆ ಹಾಕುತ್ತಾರೆ. ಅತಿ ಖಾರವನ್ನು ಇಷ್ಟಪಡದ ಮಂದಿ “ನಾಗಾ ಜೋಲಾಕಿಯ” ಮೆಣಸಿನ ಕಾಯಿತೊಟ್ಟಿಗೆ ದಾರಕಟ್ಟಿ ಒಲೆಯ ಮೇಲ್ಭಾಗದಲ್ಲಿ ತೂಗುಬಿಟ್ಟು ಸಾಂಬಾರೊಳಕ್ಕೆ ಕೇವಲ ಮುಳುಗಿಸಿ ಎತ್ತುವುದರಿಂದ ಸಾಕಷ್ಟು ಖಾರ ಸಾಂಬಾರಿಗೆ ಹಾಕಿದಂತಾಗುತ್ತದಂತೆ !!!

ಈಗ ನಮ್ಮ “ನಾಗಾ ಜೋಲಾಕಿಯಾ” ದ ಖಾರತ್ವದ ಸ್ಕೋರು ಎಷ್ಟು ನೋಡೋಣವೇ...???

ಕ್ಯಾಪ್ಸಾಸಿನ್ ಶುದ್ಧ ಪುಡಿ                                            15-16 ದಶ ಲಕ್ಷ ಎಸ್.ಎಚ್.ಯು.

ನಾಗಾ ಬಿಹು ಜೊಲೊಕಿಯಾ                                       0.85 – 1.07 ದಶ ಲಕ್ಷ ಎಸ್.ಎಚ್.ಯು.

ಗುಂಟೂರು, ಜಮೈಕನ್ ಹಾಟ್ ಮೆಣಸಿನಕಾಯಿ              0.10 – 0.35 ದಶ ಲಕ್ಷ ಎಸ್.ಎಚ್.ಯು

ಭಾರತದ ಮತ್ತು ಥಾಯ್ ಮೆಣಸಿನಕಾಯಿ                      0.05 – 0.10 ದಶ ಲಕ್ಷ ಎಸ್.ಎಚ್.ಯು

ಪೆಮಿಂಟೋ ಅಥವಾ ಚೆರ್ರಿ ಮೆಣಸಿನಕಾಯಿ                           100 – 500 ಎಸ್.ಎಚ್.ಯು.

ಕ್ಯಾಪ್ಸಿಕಂ ದಪ್ಪ (ಬೆಲ್) ಮೆಣಸಿನಕಾಯಿ                                  0  ಎಸ್.ಎಚ್.ಯು

Sunday, September 19, 2010

ಮಗು-ಕೊಡು ನಿನ್ನಗು ನಮಗೂ

(ಚಿತ್ರ ಕೃಪೆ : ಪ್ರಕಾಶ -ಇಟ್ಟಿಗೆ ಸಿಮೆಂಟು  

ಕೇವಲ ಒಮ್ಮೆ ನೀ ನಗು

ನೀನಾಗಿಯಲ್ಲ, ಆಗಿ ಮಗು

ತೊಡೆ ಗೆರೆ-ಮುಖದ ಬಿಗು

ಮನತುಂಬಿ ನೀನೊಮ್ಮೆ ನಗು.

ಮತ್ತೆ ಬಂದರೇನು? ಎರಗಿ ಆಪದ

ಗುನುಗುನಿಸು ನಗುವಿನಾಪದ

ಕಣ್ಣಲಿ ಮಿಂಚು ಸುಳಿವಿಗಾಸ್ಪದ

ನಕ್ಕರೆ ಅದೇ ನಿಜ ಸಂಪದ.


ನೀನಕ್ಕರೆ ಮಗು ನಗುವುದು
ಮನ ಅರಳಿ ಕೊಡುವುದಾಮುದು

ಸಂಕಟ ನೂರು ಬರಬಹುದು

ಮಾಡಿಕೋ ನಗು ಆಮದು.


ನಕ್ಕರೆಂದರು ಅದೇ ಸ್ವರ್ಗ
ಈ ನೀಮಕೆ ಬದ್ಧರೆಲ್ಲ ವರ್ಗ

ಮುದಗೊಂಡ ಮನದ ಮಾರ್ಗ

ಕೊಳ್ಳಬೇಕಿಲ್ಲ ದತ್ತ ನಿಸರ್ಗ.

Thursday, September 16, 2010

ಜಲನಯನ - ಗುಬ್ಬಿ ಎಂಜಲಿಗೆ


(ಚಿತ್ರ ನಮ್ಮೊಳಗೊಬ್ಬ ಬಾಲು ಕೃಪೆ)
ನಯನದಾಳಕ್ಕೆ ನಲಿವಿತ್ತ
ಮನದಾಳಕ್ಕೆ ಮುದವಿತ್ತ
ಬ್ಲಾಗ್-ಬ್ಲಾಗೇತರ ಮಿತ್ರರಿಗೆ ಸಲಾಂ.
ತುಂತುರಾಗಿ ಹನಿಸಿ
ಎಲ್ಲವನೂ ನಿರ್ವಹಿಸಿ
ಕನಸ ನನಸಾಗಿಸಿದ ಶಿವುಗೆ ಸಲಾಂ.
ಜೊತೆಬಂದು ಜೊತೆಯಾದ
ಹಿತಮಾತು ಸಹಕಾರ ಎಲ್ಲದಕೂ
ಪರ್ಯಾಯವಾದ
ಸುಗುಣ, ಮಹೇಶ್, ಪ್ರವೀಣ್
ನಿಮ್ಮೆಲ್ಲರಿಗೆ ಆತ್ಮೀಯ ಸಲಾಂ.
ಎಲ್ಲರ ನಗಿಸು ಪ್ರಕಾಶ
ಯುವಸ್ನೇಹಿ ಸಾವಕಾಶ
ಅನಿರಾಘುಶಿಪ್ರನವೀನ್ನಾಗ್ ಗೆ ಸಲಾಂ.
ದೂರದಿಂದ ಬಂದು ಪ್ರೋತ್ಸಾಹಿಸಿದ
ಉದಯ್, ಚೇತು, ಟಿ.ಡಿ.ಕೆ, ಸೀತಾರಾಂ.
ಎಳವತ್ತಿ, ಬಾಲು, ದಿನಕರ್ ಎಲ್ಲರಿಗೂ ಸಲಾಂ
ಪಕ್ಕು, ಶಶಿ, ಸುಮನ, ಶ್ಯಾಮಲ, ನಿಶ,
ಎಸ್ಸೆಸ್ಕೆ, ದಿವ್ಯಾ, ವಿಆರ್ಬಿ, ದಿಲೀಪ್ರಗತಿ
ಗುರು, ಪರಾಂಜಪೆ, ಉಮೇಶ್, ಜಯಕ್ಕ, ಸುಧಿ,
ಸುಘೋಶ್, ಗುಬ್ಬಚ್ಚಿ, ಅಶೋಕ್ ಮತ್ತೆಲ್ಲರ
ಮನದಾಳದ ಪ್ರೋತ್ಸಾಹಕೆ ಸಲಾಂ
ಎಲ್ಲರ ತುಂಬು ಪ್ರೋತ್ಸಾಹಕೆ
ಜಲನಯನದ ಜೊತೆ
ಗುಬ್ಬಿ ಎಂಜಲ ಕಥೆ..
ಮತ್ತೊಮ್ಮೆ ಮಗದೊಮ್ಮೆ
ಸಲಾಂ ...ಸಲಾಂ.

Friday, August 13, 2010

ಜಲನಯನ – ಸಾಫ್ಟಿಂದ ಹಾರ್ಡಿಗೆ,


ಮೀನು - ಜಲಜಾಕ್ಷಿ, ಮೀನಾಕ್ಷಿ ಚಂಚಲಾಕ್ಷಿ ಎಲ್ಲಾ...ಅದರ ಜೊತೆಗೆ ಪ್ರವೃತ್ತಿ ಜೊತೆ ವೃತ್ತಿಯ ಬೆಸುಗೆ..ಇದಕೆ ಸೂಕ್ತ ವೆನಿಸಿದ ಹೆಸರೇ – ಜಲನಯನ. ಮೊದಲಿಗೆ ಬ್ಲಾಗಿನಲ್ಲಿ ಹಲವರು “ಜಲಾನಯನ” ಎಂದೇ ಕಾಮೆಂತಿಸಿದರು...ಕೆಲವರು "ಜಲನಯನ” ಮೇಡಂ ಎಂದರು..ಒಂದು ರೀತಿ ಲಿಂಗ ಪರಿವರ್ತನೆಯನ್ನೂ ಮಾಡಿದರು ಎಂದರೂ ತಪ್ಪಲ್ಲ...!!!ಕವನ – ನೀಳ್ಗವನ, ಇಡಿಗವನ, ಮಿಡಿಗವನ, ಹನಿಗವನ, ಚುಟುಕ, ನ್ಯಾನೋ ಹೀಗೆ..ಏನೇನೊ ತರ್ಲೆ ಸಹಾ ಮಾಡಿದ್ದುಂಟು ಈ –ಜಲನಯನ. ಅದನ್ನು ಸಾಫ್ಟಲ್ಲಿ ನೋಡಿ..ಬೆನ್ನು ತಟ್ಟಿ ಈಜು ಇನ್ನೂ ದೂರ ದೂರಕೆ ಬೆಳೆಯಲಿ ನಿನ್ನ ಪಯಣ ಎಂದಿರಿ, ಬೆನ್ತಟ್ಟಿದಿರಿ...ಪ್ರೋತ್ಸಾಹಿಸಿದಿರಿ...ಅನಿಸಿದ್ದೂ ಉಂಟು “ಓಹ್ ಕಂಡಿಲ್ಲ ನೋಡಿಲ್ಲ ..ಏನಿದು ನಂಟು..?”ನನ್ನ ಬ್ಲಾಗ್ ಲೋಕಕ್ಕೆ ವಸ್ತುತಃ ಕೊಂಡು ಬಂದ ಶ್ರೇಯ ಸುಗುಣಾ ಮಹೇಶ್ ಗೆ ಸೇರಬೇಕು.. ಇದು ಒಬ್ಬರೇ..ಇಬ್ಬರೇ..ಇಬ್ಬರಾದ ಒಬ್ಬರೇ..? ಒಬ್ಬರಾದ ಇಬ್ಬರೇ...ಓಫ್ ..ಏನಿದು ಕಂಫ್ಯೂಶನ್?!! ಎನ್ನಬೇಡಿ..ನನಗೂ ಹಾಗೇ ಅನಿಸಿತ್ತು ಆಗ. ಬ್ಲಾಗಲ್ಲಿ ಬ್ಲಾಗಿಸುತ್ತಾ ಸಾಗಿದ ಜಲನಯನಕ್ಕೆ ಜೊತೆಯಾದದ್ದು “ಭಾವಮಂಥನ” ಮತ್ತು “Science & share” ಬ್ಲಾಗ್ ಸೋದರಿಯರು. ಬ್ಲಾಗ್ ಪೋಸ್ಟ್ ಗಳ ಶತಕ ಬಾರಿಸಿದ ’ಜಲನಯನ’ ವನ್ನು ಸಾಫ್ಟ್ ನಿಂದ ಹಾರ್ಡ್ ಗೆ ತರುವ ಯೋಚನೆ ನನಗೆ ಬರಲು ಕಾರಣ ನಮ್ಮ ಮಿತ್ರರಾದ ಪ್ರಕಾಶ್ ಮತ್ತು ಶಿವು. ಅವರ ಪುಸ್ತಕಗಳ ಬಿಡುಗಡೆಯಿಂದ ಪ್ರೇರಿತನಾಗಿ...ಅವರ ಮಟ್ಟದ ಲೇಖಕ-ಬ್ಲಾಗಿ ಅಲ್ಲದಿದ್ದರೂ ಅವರ ಪ್ರೋತ್ಸಾಹದಿಂದ ಜಲನಯನದ ಕವನಗಳ ಸಂಕಲನವನ್ನು ಮುದ್ರಿತ ರೂಪದಲ್ಲಿ ತರಬೇಕೆಂಬ ಹಂಬಲ ಬಲಿಯಿತು. ಪರಿಣಾಮ....ಇದೇ ಆಗಸ್ಟ್ ೨೨ ರಂದು ಕನ್ನಡ ಭವನ (ರವೀಂದ್ರ ಕಲಾಕ್ಷೇತ್ರದ ಬಳಿ) ದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಜಲನಯನ” ಹೆಸರಾಂತ ಸಾಹಿತಿ ಚುಟುಕ ಸಾಮ್ರಾಟ್, ಕೃಷಿ ತಜ್ಞ (ಬೆಂಗಳೂರು ಕೃ.ವಿ.ವಿ. ಯಲ್ಲಿ ೩-೪ ವರ್ಷ ನನಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದವರು) ಎಚ್.ಡುಂಡಿರಾಜ್ ರವರ ಅಮೃತಹಸ್ತದಿಂದ ಬಿಡುಗಡೆಗೊಳ್ಳುತ್ತಿದೆ. ಈ ಮೂಲಕ ನಾನು ಶ್ರೀಎಚ್.ಡುಂಡಿಯವರಿಗೆ ನನ್ನ ಆಭಾರಗಳನ್ನು ವ್ಯಕ್ತಪಡಿಸಿ.. ತಮ್ಮೆಲ್ಲರನ್ನೂ ಈ ಸಮಾರಂಭಕ್ಕೆ ಆಮಂತ್ರಿಸುತ್ತೇನೆ. ನನ್ನ ಜೊತೆಗೆ ನಮ್ಮೆಲ್ಲರ ಮಿತ್ರ ಕೆ.ಶಿವು ಸಹಾ ತಮ್ಮ “ಗುಬ್ಬಿ-ಎಂಜಲು” ಪುಸ್ತಕವನ್ನೂ ಬಿಡುಗಡೆ ಮಾಡುತ್ತಿದ್ದಾರೆ..ಹಾಗಾಗಿ ಜೋಡಿ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಹಾಜರಿ ಮತ್ತು ಪ್ರೋತ್ಸಾಹದ ಬೆಂಬಲ ಕೋರುತ್ತೇವೆ.ಜಲನಯನಕ್ಕೆ ನಯನ ಮನೋಹರ ಮುಖಪುಟದ ವಿನ್ಯಾಸ ಮಾಡಿಕೊಟ್ಟ ಶ್ರೀಮತಿ ಸುಗುಣಾ ಮಹೇಶ್ (ಕುವೈತ್ ನ ನಮ್ಮ ಕನ್ನಡ ಕೂಟದ ಸಹ ಸದಸ್ಯರು) ರವರಿಗೆ ನನ್ನ ಕೃತಜ್ಞತೆಗಳು. ನಮ್ಮ ಹಸ್ತ ಪ್ರತಿಯನ್ನು ಹಸನುಗೊಳಿಸಿ ಭಾಷೆಯನ್ನು ಸರಿಪಡಿಸಿ..ಕರಡು ಮತ್ತು ಮದ್ರಣ-ಸಿದ್ಧಗೊಳಿಸಿದ್ದೇ ಅಲ್ಲದೇ ಆಕರ್ಷಕ ಬೆನ್ನುಡಿಯನ್ನೂ ಬರೆದ ನಮ್ಮೆಲ್ಲರ ಬ್ಲಾಗ್ ಮಿತ್ರ ಬೆಂಗಳೂರಿನ ಡಾ. ಬಿ.ಆರ್.ಸತ್ಯನಾರಾಣರವರ ಸಹಾಯ ಸಹಕಾರಗಳು ಸ್ತುತ್ಯಾರ್ಹ. ಈ ಪುಸ್ತಕಗಳು ಕೆ.ಶಿವುರವರ “ತುಂತುರು” ಪ್ರಕಾಶನದಡಿ ಪ್ರಕಾಶಿತಗೊಳ್ಳುತ್ತಿರುವಿದು ಇನ್ನೊಂದು ವಿಶೇಷ. ಮುಂದೆ ತಮ್ಮ ಕೃತಿಗಳನ್ನು ಮುದ್ರಿಸಿ ಪ್ರಕಾಶಿಸಲು ಇಚ್ಛಿಸುವ ನಮ್ಮ ಮಿತ್ರರಿಗೆ ಶಿವುರವರ ತುಂತುರು ಪ್ರಕಾಶನ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ.

ವಿಶೇಷ ಸೂಚನೆ: ನಮ್ಮ ಕಾರ್ಯಕ್ರಮದ ನಂತರ ನಾವು ಕೈಗೊಳ್ಳಬೇಕೆಂದುಕೊಂಡಿದ್ದ ಬ್ಲಾಗಿಗರ ಸಮಾವೇಶದ ಬಗ್ಗೆ ಹಿರಿಯ ಬ್ಲಾಗಿಗರ ಜೊತೆ ನಾವೆಲ್ಲ ಸೇರಿ ಒಂದು ವಿಚಾರ ಮಂಥನದ ಕಾರ್ಯಕ್ರಮದ ಯೋಚನೆಯನ್ನೂ ನಮ್ಮ ಹಿರಿಯ ಬ್ಲಾಗಿಗಳು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟು ಹೆಚ್ಚು ಹೆಚ್ಚು ಬ್ಲಾಗಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೋರಿಕೆ.


Monday, August 2, 2010

ನನ್ನವಳು ನನಗೆ ತಲ್ಲಾಖ್ ಎನ್ನೋ ಸ್ಥಿತಿಗೆ ನನ್ನನ್ನು ತಂದಿದ್ದು ಯಾರು?

"ಟ್ರಿನ್..ಟ್ರಿನ್...ಟ್ರಿನ್..ಟ್ರಿನ್..ಟ್ರಿನ್..ಟ್ರಿನ್.."ಯಾವ್ದೋ ಲೋಕಲ್ ಫೋನು...ಮಹೇಶ್, ಇಲ್ಲ ಸುಗುಣಾವ್ರೇ ಸಾಮಾನ್ಯವಾಗಿ ಕಾಲ್ ಮಾಡೋದು...ಆದ್ರೆ ಅವ್ರು ನನ್ನ ಲ್ಯಾಂಡ್ ಲೈನಿಗೆ ..ಮಾಡೊಲ್ಲವಲ್ಲ..??..ಅಂತ ಸುಮ್ಮನಾದೆ...ಅಷ್ಟರಲ್ಲಿ ನಿಂತಿತ್ತು ಟಿನ್ ಟ್ರಿನ್,,..ಸರಿ ನಾನು ನನ್ನ ಕೆಲಸ್ದಲ್ಲಿ.......ಅಲ್ಲಲ್ಲ...ಚಾಟ್ ಗೆ ಎಲ್ಲಿದೆ ಸಮಯ...?? ಅಡುಗೆ ಮನೆಯಲ್ಲಿ..!! ಯಾಕೆ ? ಈ ಕೆಲ್ಸ ಯಾವಾಗ್ಲಿಂದ ಅಂದ್ರ...?? ಅಯ್ಯೋ ..ರಜಗಳು ಇಲ್ಲಿ ಜೂನ್ ನಿಂದ, ಫ್ಯಾಮಿಲಿನ ಮದನಪಲ್ಲಿಗೆ ಬಿಟ್ಟು ಬಂದಿದ್ದೆ..... ಇನ್ನು ಕೂಳಿಗೆ ಈ ಮರಳುಗಾಡಿನಲ್ಲಿ?? ಮಾಡಿದ್ದುಣ್ಣೋ ಮಹರಾಯ ಅಂತ ನಾನು ಮಾಡಿದ್ದನ್ನ ನಾನೇ ತಿನ್ನಬೇಕಲ್ಲ? ಅದಕ್ಕೆ..ಈಗ ಹೆಚ್ಚು ಸಮಯ ಕೇರಾಫ್ ಕಿಚನ್.ಮತ್ತೆ "ಟ್ರಿನ್..ಟ್ರಿನ್.....ಟ್ರಿನ್..ಟ್ರಿನ್......ಟ್ರೀನ್,,ಟ್ರೀನ್..." ಯಾಕೋ ಫೋನಿಗೂ ಕೋಪ ಬಂತಾ ಅನ್ನಿಸ್ತು ಇಲ್ಲ ಅಂದ್ರೆ ಟ್ರಿನ್ ಅನ್ನೋದು ಹೋಗಿ ಟ್ರೀನ್ ಅಂತ ಕಿರ್ಚೋದು ಯಾಕೆ...? ಸರಿ ಹೊಸ ಹ್ಯಾಂಡ್ಸ್-ಫ್ರೀ ತಂದಿದ್ದು ಮತ್ತೆ ಕೋಪ ಮಾಡ್ಕೊಂಡ್ ಕೆಳ್ಗೆ ಬಿದ್ರೆ ಕಷ್ಟ ಅಂತ ಬೇಗ ಬಂದು ಫೋನ್ ಎತ್ತಿದೆ."ಹಲೋ..." ಕ್ಯಾ ಕರ್ ರ್ರೈ..?" no doubtಉ ಅಬಿದಾದೇ ಫೋನು...!! ಬಹುಶಃ ನನ್ನ ಮಗಳು- ಸುರು "ಅಬ್ಬ" ಬರೋದ್ರೊಳಗೆ ಬೆಂಗಳೂರಿಗೆ ಹೋಗೋಣ ಅಂತ ಅವ್ರಮ್ಮನ ಹತ್ರ ಹೇಳಿರ್ಬೇಕು ಅದಕ್ಕೆ ಅಬಿದಾ ನನಗೆ ಎಮರ್ಜೆನ್ಸಿ ಕಾಲ್ ....ಹೌದು ..ಅವಳೇ ...ನನ್ನನ್ನ ಮೊದಲಿಗೆ ನೋಡಿದ್ರೆ/ಫೋನಾಯಿಸಿದ್ರೆ "ಸಲಾಂ ಅಲೇಕುಮ್" ಅನ್ತಾ ಇದ್ಲು...??!! ಯಾಕೆ.. ? ಮತ್ತೆ "ಹಲೋ..." ಕ್ಯಾ ಕರ್ ರ್ರೈ..?" ಅಂತ ಕೇಳಿದ್ರಲ್ಲಿ ಕಾಳಜಿಗಿಂತ...ಏನೋ ...ಮಾಡಬಾರದ್ದು ಮಾಡ್ತಿದ್ದೀನಿ ಅನ್ನೋ ಹೆಂಡತಿರಿಗೆ ಇರಬೇಕಾದ ದರ್ಪದಲ್ಲಿ ಕೇಳಿದ್ಲು...."ಕಿಚನ್ ನಲ್ಲಿದ್ದೀನಿ ಉಪ್ಪಿಟ್ಟು ಮಾಡ್ತಿದೀನಿ.... ಶುಕ್ರವಾರ ಅಲ್ವಾ..ನಮಾಜ್ ಗೆ ಮುಂಚೆ ಮನೆ ಸ್ವಲ್ಪ ಕ್ಲೀನ್ ಮಾಡೋಣ ಅಂತ ಸ್ವಲ್ಪ ಬೇಗಾನೇ ತಿಂಡಿ ರೆಡಿ ಮಾಡ್ತಿದ್ದೀನಿ..." ಅಂದೆ.."ಯಾಕೆ ಮೋಹಿನಿ ಬರ್ಲಿಲ್ಲವಾ..??"ಅರೆ..ಇದೇನಪ್ಪಾ...??!! ನನ್ನವಳು ಹೋಗೋಕೆ ಮುಂಚೆ ಯಾರಿಗಾದ್ರೂ ಕೆಲಸದವಳಿಗೆ ಹೇಳಿದ್ಲಾ...ಕೈ ಜಿಗುಟಿಕೊಂಡೆ.."ಆಹ್" ನೋವಾಯ್ತು...ಅಂದ್ರೆ not a dream !! ಎಲ್ಲದಕ್ಕೂ ನನ್ನನ್ನೇ ಕೇಳುತ್ತಾ ತಾನೇ ಯಾವುದೇ ನಿರ್ಧಾರ ತಗೊಳ್ಳದ ಇವ್ಳು..ಕೆಲ್ಸದವಳಿಗೆ ಹೇಳೋದಾ..??!! ಹೇಗೆ ಸಾಧ್ಯ..?? no way..!! ಆದ್ರೂ...ಆಶ್ಚರ್ಯ..ಸಂತೋಷ ಎರಡೂ ಒಟ್ಟಿಗೆ.."ಯಾವ ಮೋಹಿನಿ..? ನೀನು ಯಾರ್ಗಾದ್ರೂ ಹೇಳಿದ್ಯಾ.."...ಕೇಳಿದೆ"ನೀವೇ ಹೇಳಿದ್ದೀರಲ್ಲಾ ಯಾವ್ದೋ ಮಿಟಕಲಾಡೀಗೆ...ಅದಕ್ಕೇನೇನೋ ಕೆಲ್ಸ ಇದೆ... ಬೇಗ ಕುವೈತ್ ಗೆ ಹೋಗಬೇಕು ಅಂತ ....ನಮ್ಮಮಗಳು ’ಸುರು..’ಅಬ್ಬ’ ಇನ್ನೊಂದೆರಡು ದಿನ ಇರಿ” ಅಂದ್ರೂ "ಇಲ್ಲ ಬೇಟ ಕೆಲ್ಸ ಇದೆ ಮತ್ತೆ ಆಗಸ್ಟ್ ನಲ್ಲಿ ಬೇಗ ಬರ್ತೀನಲ್ಲಾ" ..ಅಂತ ಸಬೂಬು ಹೇಳಿ ಬಂದಿದ್ದು..?? ಎಷ್ಟು ದಿನದಿಂದ ನಡೀತಿದೆ ಎಲ್ಲಾ..?? ಇಲ್ಲಾಂದ್ರೆ ಎರಡು ದಿನಕ್ಕೆ ಒಂದು ಸರ್ತಿ..ಫೋನ್ ಮಾಡಿ ಅಬಿದಾ ಆ ಅಡುಗೆ ಹೇಗೆ ಮಾಡೋದು ?..ಈ ಅಡುಗೆ ಹೇಗೆ ಮಾಡೋದು? ಅಂತ ಕೇಳ್ತಿದ್ರಿ...ಈಗ.. ನಾಲ್ಕು ದಿನ ಆದ್ರೂ ಫೋನ್ ಇಲ್ಲ..ಸರಿ ಕೆಲ್ಸದ ಒತ್ತಡ ಮಾಡ್ತಾರೆ ಅಂದ್ಕೊಂಡಿದ್ದೆ.....ಇಂಥಾ ಘನಾಂದಾರಿ ಕೆಲ್ಸ ಅಂತ ಅಂದ್ಕೊಂಡಿರ್ಲಿಲ್ಲ!!."ಕೋಪ ಅಳು ಎಲ್ಲ ಒಟ್ಟಿಗೆ ಇತ್ತು..ಅವಳ ಧ್ವನಿಯಲ್ಲಿ...ಸಿಕ್ಕಾ ಪಟ್ಟೆ ರಬ್ಬರ್ ಬ್ಯಾಂಡ್ ಚ್ಯೂವಿಂಗ ಗಮ್ ಥರ ಎಳೆಯೋ ಟಿ.ವಿ. ಸೀರಿಯಲ್ ಕಥೆ ಒಂದೇ ಎಪಿಸೋಡಲ್ಲಿ ಮುಗಿಸುವ ಚಾಕ ಚಕ್ಯತೆ ಇತ್ತು ಅವಳ ಆರೋಪದಲ್ಲಿ...ಎಲ್ಲವನ್ನೂ ಸಾರಾ ಸಗಟಾಗಿ ಎಂಥವರ ಕಣ್ಣಿಗೂ (ಕಿವಿಗೇ ಏನು?) ನಾಟುವಂತೆ ಹೇಳಿ..ಬುಸುಗುಡ್ತಾ ಇದ್ಲು..ನನಗೋ.. ಏಸಿಯಲ್ಲೂ –ಬಿಸಿ ಬೆವರು ಶುರು..!!!"ಅಲ್ಲ ಮಾರಾಯ್ತೀ...ಯಾವ ಮೋಹಿನಿ...." ನನ್ನ ಮಾತನ್ನ ತುಂಡರಿಸ್ತಾ..."ಹೆಸರೆತ್ತಬೇಡಿ..,, ಮೋಹಿನಿ ಅಂತೆ..ಮೋಹಿನಿ..!! ಅದೂ ಎಂಥ ಹೆಸ್ರು... ನಿಮಗೇನ್ರೀ ನಾನು ಕಡಿಮೆ ಮಾಡಿದ್ದೆ.?..ಅದೂ ನನ್ನ ಎತ್ತರಕ್ಕೆ ಬೆಳೆದು ನಿಂತಿರೋ ಮಗಳಿರೋವಾಗ...."ಅವಳ ಮುಸು ಮುಸಿ ಅಳು ಜಾಸ್ತಿಯಾಯ್ತು....ಆ ಕಡೆ ನನ್ನ ಅಕ್ಕ ಮತ್ತೆ ಅಮ್ಮ ಅವಳನ್ನ ಸಮಾಧಾನ ಮಾಡ್ತಿದ್ದದ್ದು ಸ್ಪಷ್ಟವಾಗಿ ಕೇಳ್ತಿತ್ತು..“ಬೇಟಾ..ಆಜಾದು ಚಿನ್ನದಂತ ಹುಡುಗ ಏನೋ ಗಲತ್ ಆಗಿದೆ" ಅಂತ ನನ್ನಮ್ಮ  "ನಾವು ನಿಧಾನಕ್ಕೆ ಮಾತ್ನಾಡ್ತೀವಿ...ಈಗ ಸುಮ್ಮನಾಗು.....ನನಗೆ ಕೊಡು ಫೋನ್”ಅಂತ ಅಕ್ಕ ಫೋನ್ ತಗೊಂಡದ್ದು ಗೊತ್ತಾಯಿತು."ಅಕ್ಕ ..ಏನಕ್ಕ ಇವಳು ಹೇಳ್ತಿರೋದು...ಯಾರದು ಮೋಹಿನಿ...?" ನನ್ನ ಆತಂಕ ತೋಡಿಕೊಂಡೆ ನನ್ನಕ್ಕನ ಹತ್ರ..."ನೋಡು ಆಜಾದು, ಈಗ ಮಾತ್ನಾಡೊದು ಬೇಡ..ಅಬಿದಾ ಅಪ್-ಸೆಟ್ ಆಗಿದ್ದಾಳೆ..ನಾನು ಸಮಜಾಯಿಶ್ ಹೇಳ್ತೀನಿ...ನಿನ್ನ ಮಗಳು-ಸುರೂನ ಅವಳ ಚಿಕ್ಕಪ್ಪ ತೋಟಕ್ಕೆ ಕರ್ಕೊಂಡು ಹೋಗಿದ್ದಾನೆ ಅವಳು ಇದ್ದಿದ್ದ್ರೆ ಮಗಳೇ ಸಮಾಧಾನ ಮಾಡ್ತಿದ್ಳು....ನೀನು ವರಿ ಮಾಡ್ಕೋ ಬೇಡ....., ಅಲ್ವೋ, ನೀನು ಕೆಲ್ಸದವಳನ್ನ ಮನೆ ಕೆಲಸಕ್ಕೆ ಹೇಳ್ತೀನಿ ಅಂತ ಅಬಿದಾಗೆ ಒಂದು ಮಾತು ಹೇಳಬಾರ್ದ..?? ಅದೂ..ಎಂಥ ಹೆಸರಿನವಳಿಗೆ ಹೇಳಿದ್ದೀಯಾ ನೋಡು...ಛೀ..ಮೋಹಿನಿ..ಅಂತೆ,,ಮೋಹಿನಿ...""ಅಲ್ಲಕ್ಕ ಅದು..." ನಾನು ಮಾತನಾಡೋದಕೂ ಬಿಡ್ಲಿಲ್ಲ...ಅಕ್ಕ"ನೋಡೋ ಈಗ ಮೊದಲು ಆ ಮೋಹಿನೀನ ಕೆಲಸದಿಂದ ಬಿಡ್ಸು...ನಾನು ಅಬಿದಾ ಹತ್ರ ಮಾತನಾಡ್ತೀನಿ..ಮತ್ತೆ ಎರಡು ದಿನ ಬಿಟ್ಟು ಅವಳಿಗೆ ಫೋನ್ ಮಾಡಿ ಹೇಳು ಯಾರೂ ಇಲ್ಲ..ಅವಳನ್ನ ಕೆಲಸದಿಂದ ಬಿಡಿಸಿದೆ ಅಂತ......ಆಯ್ತಾ..? ಈಗ ನಾನು ಫೋನ್ ಇಡ್ತೀನಿ..."ಇದೇನಪ್ಪಾ ಇದು...ಬೆಳ್ ಬೆಳಿಗ್ಗೆ....ಉಪ್ಪಿಟ್ಟು ಮಾಡೋಣ ಅಂತ ಇದ್ರೆ ಎಲ್ಲಾ ಚಿತ್ರಾನ್ನ ಆಗಿ ಕೂತಿದೆ...ಹೌದು ಏನಿದು..? ಮೋಹಿನಿ..ಯಾರಿದು ಮೋಹಿನಿ...??.. ತಲೆ ಚಿಟ್ಟು ಹಿಡೀತಿತ್ತು..ಸ್ಟೌವ್ ಆಫ್ ಮಾಡಿ ಬಿಸಿ ಬಿಸಿ ಇನ್ಸ್ಟಾಂಟ್ ಕಾಫಿ ಮಾಡಿ ಹೀರುತ್ತ ಸೋಫಾದಲ್ಲಿ ಧೊಪ್ಪೆಂದು ಕುಂತೆ...ಯೋಚನೆ ನಿಲ್ಲಲಿಲ್ಲ...."ಅರೆ..!! ಹೌದಲ್ಲಾ..!! ಮೂರು-ನಾಲ್ಕು ದಿನದ ಹಿಂದೆ ಬಜ್ ನಲ್ಲಿ ಹೀಗೇ ತಮಾಶೆ ಮಾಡ್ತಾ.."ಏನ್ರೀ ಆಜಾದ್ರೇ..ಒಬ್ರೇ ಮನೇಲಿ ಅಂತೀರಾ..ಭಾಭಿನಾ ಬಿಟ್ಟು ಬಂದು.., ರಾತ್ರಿ ಹೆದ್ರಿಕೆ ಆಗೊಲ್ಲವಾ..." ಅಂತ ಯಾರೋ ಕೇಳಿದ್ರು..?"ಅದಕ್ಕೆ ನಾನು..."ಬರ್ತಾಳಲ್ಲ ಮೋಹಿನಿ"...ಅಂದಿದ್ದೆ..ಅವರು..."ದಿನವೂ ಬರ್ತಾಳಾ..?""ಹೌದು..ಆ ಗೆಜ್ಜೆ ಆ ಮಧುರ ಕೂಗು...ಬಾ..ರಾ...ಬಾ..ರಾ..." ಅಂತ ನಾನಂದಿದ್ದೆ..."ಹಾಗಾದ್ರೆ ಅಬಿದಾಗೆ ಫೋನ್ ಮಾಡಿ ಹೇಳ್ತೇನೆ ತಡೀರಿ..." ಅವರು ಹೇಳಿದ್ರು"ಅವಳಿಗೂ ಗೊತ್ತು ಹೇಳಿ ಪರ್ವಾಗಿಲ್ಲ" ಅಂದಿದ್ದೆ......ಓಹ್...ಇದು ಇವ್ರದ್ದೇ ಕೆಲ್ಸ....ನನ್ನ ಬಜ್ ನಲ್ಲಿ ನನ್ನ ಇಂಡಿಯಾ ನಂಬರ್ ನೋಡಿ ಫೋನ್ ಮಾಡಿ ತಮಾಶೆ ಮಾಡಿರ್ತಾರೆ..ನಾನು ಆ ಸಿಮ್ ಕಾರ್ಡ್ ಇದ್ದ ಫೋನ್ ಅಬಿದಾಗೆ ಕೊಟ್ಟಿದ್ದೆ..ನಾನು ಸಂಪರ್ಕ ಮಾಡೋಕೆ.....ಹಾಂ.. ಹೀಗೇ ಆಗಿದೆ..., ಇವರು ವಿಷಯ ಪೂರ್ತಿ ಹೇಳೋಕೆ ಆಗಿಲ್ಲವೋ ಅಥವಾ ಏನೋ ಎಡವಟ್ಟು ಆಗಿದೆ... ನನಗೆ ಎಲ್ಲಾ ಅರ್ಥವಾಗತೊಡಗಿತ್ತು....ತಕ್ಷಣ ನೆಟ್ ಓಪನ್ ಮಾಡಿ ಆ ದಿನದ ಬಜ್ ನ ಎಲ್ಲ ಸಂಭಾಷಣೇನಾ ವರ್ಡ್ ನಲ್ಲಿ ಪೇಸ್ಟ್ ಮಾಡಿ ಸುರುಗೆ ಮೈಲ್ ಮಾಡಿದೆ.  ಎಡವಟ್ಟು ಏನು ಅಂತ ವಿವರಿಸಿ ನನ್ನ ತಮ್ಮನಿಗೂ ಒಂದು ಕಾಪಿ ಹಾಕಿ...ಸುರುಗೆ ಸಂಜೆ ಫೋನ್ ಮಾಡ್ತೇನೆ ಅಂತ ಮೈಲ್ ನಲ್ಲಿ ತಿಳಿಸಿ ಮೈಲ್ ಮಾಡಿ...ಅರ್ಧ ಸಮಾಧಾನದ ನಿಟ್ಟುಸಿರು ಬಿಟ್ಟೆ...ಆ ಸಂಜೆ ಮೂರು ಇಪ್ಪತ್ತಾಗಿತ್ತು, ಸಂಜೆ ನಾಲ್ಕೂವರೆಗೆ ಫೋನ ಮಾಡೋಣ ಅಂತ ಚಪಾತಿಗೆ ಹಿಟ್ಟು ಕಲಸಿಡಲು ಕಿಚನ್ ಗೆ ಹೋದೆ..."ಟ್ರಿನ್ ಟ್ರಿನ್..ಟ್ರಿನ್.."ಏನಿದು ಅಬಿದಾಳದ್ದೇ ಫೋನು...ಹೆದರುತ್ತಾ ಫೋನು ಎತ್ತಿದೆ"ಅಸ್ಸಲಾಮು ಅಲೇಕುಮ್" ಅಬಿದಾಳ ದ್ವನಿ ..ಮೆದುವಾಗಿತ್ತು... ಧೈರ್ಯ ಬಂತು.."ವಾಲೈಕುಮ್ ಅಸ್ಸಲಾಮ್ ಡಿಯರ್..." ನಾನು ಇನ್ನೂ ಮುಂದಿನ ಶಬ್ದ ಹೇಳುವುದಕ್ಕೆ ಮುಂಚೆ..."ಮಾಫ್ ಕರೋ ಡಿಯರ್, ನಾನು ನಿಮ್ಮನ್ನ ತಪ್ಪು ತಿಳಿದೆ...ಯಾರೋ ಹೇಳಿದ್ರು ಅಂತ... ನನ್ನದೂ ತಪ್ಪಿದೆ..
ಆ ದಿನ ನಿಮ್ಮ ಫ್ರೆಂಡ್ ಇರ್ಬೇಕು ಅವರು ಫೋನು ಮಾಡಿ "ಭಾಭಿ ತಮಾಷೆ ಗೊತ್ತಾ...? ನಿಮ್ಮವ್ರು ಕುವೈತಲ್ಲಿ ಮೋಹಿನಿ ಅನ್ನೋಳನ್ನ ಕೆಲ್ಸಕ್ಕೆ ಇಟ್ಕೊಂಡಿದ್ದಾರೆ..." ಅನ್ನೋದ್ರಲ್ಲಿ ಫೋನ್ ಕಟ್ ಆಗಿತ್ತು...ನನಗೆ ಹೆಂಗಸಿನ ದ್ವನಿ, ಹೇಳಿದ್ದು ನಿಮ್ಮ ಬಗ್ಗೆ...ಮೋಹಿನಿ ಅನ್ನೋಳನ್ನ ಇಟ್ಕೊಂಡಿದ್ದಾರೆ ... ಇಷ್ಟೇ ಕಿವಿಗೆ ಹೋಗಿದ್ದು....ಕೆಲಸದವಳು ಅನ್ನೋದನ್ನ ಗಮನಿಸಲೇ ಇಲ್ಲ....I am very very sorry..."ಅಬ್ಬಾ...ಎಂಥ ಹಾಲು ಕುಡಿದ ಅನುಭವ...!! ನಾನೆಂದೆ.."its Ok dear...misunderstand ಆಗುತ್ತೆ ...ಹೌದೂ.... ನಿನಗೆ ಇದೆಲ್ಲಾ...ಹೇಗೆ ??"."ಸುರುಗೆ ನೀವು ಕಳ್ಸಿದ ಮೈಲ್ ಸಿಕ್ತು ಅವಳು ಅವಳ ಅತ್ತೆ ಏನೇನೋ ಮಾತನಾಡ್ತಾ ಇದ್ರು..ಆ ಮೇಲೆ ನಿಮ್ಮ ತಮ್ಮನ ಫೋನ್ ಬಂತು...ಮತ್ತೆ ಸುರು ನನ್ನ ಕರೆದು...ನಿಮ್ಮ ಮೈಲ್ ತೋರಿಸಿದಳು....ನನಗೆ ಆಗ್ಲೆ ಅರ್ಥ ಆಗಿದ್ದು ಎಂಥ ಮೂರ್ಖಳು ನಾನು ನಿಮ್ಮನ್ನು ಅಪಾರ್ಥ ಮಾಡ್ಕೊಂಡೆ...sorry" ಎಂದಳು ನಗುತ್ತಾ...ಅಬ್ಬಾ...ಶುಕ್ರವಾರದ ನಮಾಜ್ ನಲ್ಲಿ ನನ್ನ ಪ್ರಾರ್ಥನೆ ದೇವರಿಗೆ ಮುಟ್ಟಿತು ಎಂದುಕೊಂಡು...ಕೀಟಲೆ ಮಾಡಿದೆ ನನ್ನವಳಿಗೆ.."ಹಾಗಾದ್ರೆ ಮೋಹಿನೀನ ನಾಳೆಯಿಂದ ಬರೋಕೆ ಹೇಳ್ಲಾ ಮನೇಗೆ..?"ನಗುತ್ತಾ ಅವಳು.." ಯಾಕೆ? ಈಗ್ಲೇ ಹೇಳಿ.... ರಂಜಾನ್ ಬರ್ತಿದೆ ನಿಮ್ಮ ಉಪವಾಸದ ೭-೮ ದಿನಗಳ ಅಡುಗೆನಾದ್ರು ಮಾಡಿ ಹಾಕ್ತಾಳೆ....ಹಹಹ..."ಇದು ಒಂದು ಬಜ್.ಚಾಟ್ ಎರಡರ ..ಕಪೋಲ ಕಲ್ಪಿತ..ಇದನ್ನೇ ನೆವಮಾಡಿ ನನ್ನವಳಿಗೆ ಫೋನ್ ಮಾಡೋರಿಗೆ ಎಚ್ಚರಿಕೆ......

Wednesday, July 28, 2010

ಗೊತ್ತಿಲ್ಲ ಮಗು

(ಚಿತ್ರ ಕೃಪೆ : ಅಂತರ್ಜಾಲ)

ಅಪ್ಪಾ..ಏನು ಮಗು..?


ಮಳೆಗಾಲ..ಕೆಲವುಕಡೆ ಎಡೆಬಿಡದ ಮಳೆ ಅಂತೆ...


ಹೌದು ಕಣೋ ರೈತರಿಗೆ ನಿರಾಳ..


ಆದ್ರೆ ಅಪ್ಪ?


ಏನು ನಿನ್ನ ರಾಗ?


ಪ್ರತಿ ಸಲವೂ ಗೊಬ್ಬರಗಳಿಗೆ ಪರದಾಟ ತಪ್ಪಿದ್ದಲ್ಲ


ಹೌದು ಕಣೋ ಸರ್ಕಾರ ವ್ಯವಸ್ಥೆ ಮಾಡುತ್ತಲ್ಲಾ..


ಅಲ್ಲಪ್ಪ ಅವರ ತಿಪ್ಪೆ ಇವರು ಇವರ ತಿಪ್ಪೆ ಅವರು ಅಗೆಯುತ್ತಿದ್ದಾರಲ್ಲ


ಸರ್ಕಾರದಲ್ಲಿರೋರಿಗೆ ಇದಕ್ಕೆ ಸಮಯ ಸಿಗುತ್ತಾಪ್ಪಾ..?


ಗೊತ್ತಿಲ್ಲ ಮಗು.


ಅಪ್ಪಾ..


ಮತ್ತಿನ್ನೇನೋ..


ದಂಡಿ ಯಾತ್ರೆ ಅಂದ್ರೆ ಏನಪ್ಪಾ..?


ದಂಡಿ ಅಲ್ಲವೋ ದಾಂಡಿ...ಮಹಾತ್ಮ ಗಾಂಧಿ


ಉಪ್ಪಿಗೆ ಹಾಕಿದ್ದ ಶುಲ್ಕ ವಿರೋಧಿಸಿ ಬ್ರಿಟೀಶರ ವಿರುದ್ಧ ನಡೆಸಿದ್ದ ಪಾದ ಯಾತ್ರೆ


ಹಾಗಾದ್ರೆ ಈಗ ನಮ್ಮ ರಾಜಕಾರಣಿಗಳು ಮಾಡ್ತಿರೋದು


ದಂಡ ಯಾತ್ರೆನಾ ಅಪ್ಪಾ..?


ಗೊತ್ತಿಲ್ಲ ಮಗು


ಅಪ್ಪಾ..ಇನ್ನೊಂದೇ..ಡೌಟು...


ಏನಪ್ಪಾ ಅದು, ಕೇಳು...


ತಿರುಪತಿಗೆ ಹೋದವರು ಬುಂಡೆ ಹೊಡಿಸ್ಕೋತಾರಲ್ಲಾ ಯಾಕೆ?


ಅದು ಅವರ ಹರಕೆ ಆಗಿರುತ್ತೆ ನಮ್ಮ ಪಾಪ ತೊಳಿ ದೇವರೇ ಅಂತ


ಮತ್ತೆ ನಮ್ಮ ಮಂತ್ರಿಗಳೊಬ್ಬರ ಪಾಪ ಹೆಚ್ಚಾಗಿತ್ತ


ಟೀವಿಯಲ್ಲಿ ಬುಂಡೆ ತೋರಿಸ್ಕೊಂಡು ಇದ್ರಲ್ಲಾ..?


ನಂಗೊತ್ತಿಲ್ಲ ಮಗು..


ಇದು ನಿಜವಾಗ್ಲೂ ಕಡೇದು


ಹೇಳು...ಯಾಕಂದ್ರೆ ನೀನು ಕೇಳೋದಕ್ಕಿಂತಾ ಹೇಳೋದೇ ಹೆಚ್ಚು


ಅಲ್ಲಪ್ಪ..ಪಾದ ಯಾತ್ರೆ ಪ್ರತಿಭಟನೆ ರೂಪ ಅಂತಾರಲ್ಲಾ?


ಹೌದು... ಅದೇ ಅಲ್ವಾ ಈಗ ನಡೆದಿರೋದು..


ಮತ್ತೆ ಅದನ್ನ ಪ್ರತಿಭಟಿಸೋಕೆ ಸಮಾರಂಭ ಮಾಡ್ತೀವಿ ಅಂತಾರಲ್ಲ


ಗೊತ್ತಿಲ್ಲ ಮಗು.

Wednesday, July 14, 2010

ಎರಡುಸಾಲು-ನ್ಯಾನೋಗಳು

(ಚಿತ್ರ: ಅಂತರ್ಜಾಲ ಕೃಪೆ)

ಸ್ನೇಹಿತರೇ, ನಿಮ್ಮೆಲ್ಲರ ಅಭಿಮಾನ, ಸ್ನೇಹ ಮತ್ತು ವಿಶ್ವಾಸಕ್ಕೆ ಮಾರುಹೋಗಿರುವ "ಜಲನಯನ" ತನ್ನ ಬ್ಲಾಗ್ ಪೋಸ್ಟ್ ಗಳ ಶತಕವನ್ನು ಈ ಲೇಖನದ (ಹೊಸ ಪ್ರಯೋಗ) ಮೂಲಕ ಪೂರೈಸುತ್ತಿದೆ.ನೀಳಗವನ, ಇಡಿಗವನ, ಮಿಡಿಗವನ, ಮಿನಿಗವನ, ಚುಟುಕು ಇವೆಲ್ಲದರಂತೆ ...ಎರಡುಸಾಲು-ನ್ಯಾನೋಗಳು ಎಂಬ ಹೊಸ ಪ್ರಯೋಗ (ಗೊತ್ತಿಲ್ಲ ಹೊಸದೋ ಅಥವಾ ನನಗೆ ಹೊಸದೋ ಎಂದು...ಹಹಹ). ಇದರಲ್ಲಿ ಪ್ರತಿಯೊಂದು ನ್ಯಾನೋಗವನದ ಎರಡು ಸಾಲು ಸ್ವತಂತ್ರವಾಗಿದ್ದರೂ ಪೂರ್ಣ ಅರ್ಥ ನೀಡುತ್ತವೆ ಎನ್ನುವುದು ನನ್ನ ಅನಿಸಿಕೆ....ಪ್ರೋತ್ಸಾಹ ..ಮುಂದುವರೆಯುತ್ತದೆಂದು ಆಶಿಸುತ್ತೇನೆ.


ನಿಮ್ಮ ಮುಕ್ತ..(ಚನ್ನಾಗಿಲ್ಲ ಎಂದು ಮುಖದ ಮೇಲೆಯೇ ಹೇಳಿದರೂ ಒಳ್ಳೆಯದೇ...ಯಾಕಂದ್ರೆ ಮತ್ತೆ ಮುಖ ಭಂಗ ಆಗೋ ಸಾಧ್ಯತೆಗಳು ಕಡಿಮೆ ಅಲ್ಲವೇ...?)


ನಿಮ್ಮ - ಜಲನಯನ
ಎರಡುಸಾಲು-ನ್ಯಾನೋಗಳು


ನೋಡವಳಂದಾವ


ಆ ಕಣ್ಣು ಏಕೋ ಏನೋ ಎಂಥಾ ಹೊಳಪು

ಹೃದಯ ಚುಚ್ಚಿಬಿಡುವುದೀ ಬಾಣ ಎಂಥಾ ಚೂಪು
ನಕ್ಕರವಳು ಮುತ್ತಿನಂಥ ಮೋಹಕ ಕೆನ್ನೆಕುಳಿ

ಉರುಳಿಸಲು ಸಾಕು ಅದುವೇ ಖೆಡ್ದದ ಗುಳಿ
ಹುಬ್ಬು ತೀಡಿ ತಂದು ಮುಖಕೆ ಮೆರುಗು

ಕೊಲ್ಲಲೆಂದೇ ಝಳಪು ಬಂತೇ ಆ ಕತ್ತಿಗಲಗು
ನಡೆ, ಜಡೆ ಸೊಂಟ ಬಳಕು ಉಫ್..ಆ ಥಳುಕು

ಅದುರು ಛಳಿಯಲ್ಲೂ ಅದು ಬೆವರಿಳಿಸೋ ಛಳುಕು
ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ

ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ
ನೀಳಗಪ್ಪು ಬೆನ್ನ ಹಿಂದೆ ಜಾರಿ ಬಿದ್ದ ಹಾವಿನಂಥ ಜಡೆ
ಕೇಶರಾಶಿ ಹರಡಿಕೊಂಡ್ರೆ ಆದೀತು ಅದುವೇ ಕೊಡೆ
ನಾಚಿ ನೀರು ಕೆನ್ನೆಗೆಂಪು ನೆಲವ ಕೆರೆವ ಬೆರಳು

ನನಗಿದು ನಿತ್ಯಸತ್ಯ ನೀನಾಗಬೇಡ ಬೆಪ್ಪೆ ಮರಳು

Thursday, July 8, 2010

ಎಲ್ಲಾ ಮಾಯವೋ

ಕಾಡು..ಕಾಡಿದ್ದು ನಾಡು
ನಾಡು ನೋಡಿದ್ದು ಬೀಡು
ಬೀಡು ಈಗಾಯ್ತು ಮತ್ತೆ ಕಾಡು
ಇಲ್ಲ ಮರ ಗಿಡ, ಹಸಿರು
ತೋರಿ ಎತ್ತರಗಳ ಕಾಂಕ್ರೀಟು ಜಾಡು.

ಕಾಡು, ಎಲ್ಲಿವೆ ನೋಡು
ನೋಡುತ್ತಿರುವಂತೆ ಮಾಯ
ಮರ, ಬಂದವು ಗಿಡ, ಕೃಷಿಗೆ
ಸಾಯೋ ಸ್ಥಿತಿಗೆ ವ್ಯವಸಾಯ.

ಕೆರೆಯಾದವು ಮರೆ,
ತೊರೆ ನೆಲಬಿರಿದಿರೆ
ಒತ್ತುವರಿಕೆ ಸುತ್ತುವರಿದು
ಮಾಫಿಯಾ ಕೊಳ್ಳೆ ಸುಲಿದು.

ಹೊಲ-ಗದ್ದೆ ಮಾರಿ ಮೆದ್ದೆ
ಹಣದಾಸೆ, ಈಗ- ಇಲ್ಲ ಆಹಾರ ನಿದ್ದೆ
ಆಗ ನಿನ್ನ ಕೂಲಿ
ಈಗಾಗಿರುವ ನಿನ್ನದೇ ಸಿರಿಯ ಮಾಲಿ.

ಬಿಡುತ್ತಿಲ್ಲ ಭೂ ಗರ್ಭವನೂ
ಅಗೆದು ಹೊರಹಾಕಿ ಕರುಳನೂ
ಅಯ್ಯೋ ಮರುಳೇ..ಏಕೆ ತೋಡುತಿರುವೆ
ನಿನ್ನವನತಿ ಗೋರಿಯ ಕುಳಿಯನ್ನು ನೀನೇ?

ಈಗಲೂ ಕಾಲ ಮಿಂಚಿಲ್ಲ
ತಾಯವಳು ಮನ್ನಿಸುವಳು ಎಲ್ಲ
ನೆಡು - ಬೆಳೆಯಲಿ ಕಾಡು
ರೈತ-ಕಾರ್ಮಿಕ ಬೆಳಗಲು ನಾಡು
ಅನ್ನ, ಗಾಳಿ, ನೀರಿಗೆ ಬೇಕು ಎಲ್ಲ
ಸತ್ತಾಗ ಕೊಂಡುಹೋಗುವುದೇನಿಲ್ಲ
ದಡಿಮಣ್ಣು ಹಿಡಿ ಬೂದಿ ಕಡೆಗಷ್ಟೇ ಎಲ್ಲಾ