Wednesday, September 28, 2011

ಮತ್ತೊಂದು ಕರವೋಕೆ...ದೇಶ-ನಾಡಿಗೆ

 ನನ್ನ ನೆಚ್ಚಿನ ದೇಶ ಭಕ್ತಿಯ ಗೀತೆಗಳಲ್ಲಿ ಒಂದು...

”ನಯಾ ದೌರ್” ಹಿಂದಿ ಚಿತ್ರದ ಹಾಡು ,...ಈ ಕರವೋಕೆಗೆ ಪ್ರೇರಣೆ...


 
ಭಾರತಿ - ತನುಜಾತೆ

ಈ ದೇಶವು ವೀರ ಜವಾನರದು, ರಣ ಧೀರರದು ಧೀಮಂತರದು
ಈ ದೇಶದ ಜಯವನು, ಈ ದೇಶದ ಜಯವನು ಬಯಸೋಣ
ಈದೇಶದ ಸೇವೆಗೆ ದುಡಿಯೋಣ....ಓ...ಓ... 
//ಪ// ಈ ದೇಶವು ವೀರ ಜವಾನರದು //ಪ//

ಇಲ್ಲಿ ವೀರರ ಶೌರ್ಯಕೆ ಎಣೆಯಿಲ್ಲ, ಇಲ್ಲಿ ದೇಶ ದ್ರೋಹಿಗೆ ಮಣೆಯಿಲ್ಲ
ಪರಂಗಿ ಮಣಿದರು ... ಪರಂಗಿ ಮಣಿದರು ಅಹಿಂಸೆಗೆ,
ಬಾಪೂಜಿ ಕನಸಿನ ಸ್ವರಾಜ್ಯಕೆ.. ಓ...sss. ಓ.sssss
//ಪ// ಈ ದೇಶವು ವೀರ ಜವಾನರದು //ಪ//

ಇಲ್ಲಿ ಹಿಂದು ಮುಸ್ಲಿಂ ಕ್ರೈಸ್ತರು, ಜೈನ ಬೌದ್ಧ ಸಿಂಧಿ ಸಿಕ್ಖರು
ಎಲ್ಲಾ ಸೋದರರಂತೆ.. ಎಲ್ಲಾ ಸೋದರರಂತೆ ಸಾಗಿಹರು,
ದೇಶ ಪ್ರೇಮವ ಮೆರೆದಿಹರು...ಓ...sss. ..ಓ.sss
//ಪ// ಈ ದೇಶವು ವೀರ ಜವಾನರದು //ಪ//

ಕನ್ನಡ ತೆಲುಗು ತಮಿಳು ಮಲೆಯ, ದಕ್ಷಿಣದ ಸವಿ ಭಾಷೆಗಳು
ಮರಾಠಿ ಬಂಗಾಲಿ..... ಮರಾಠಿ ಬಂಗಾಲಿ ಗುಜ್ರಾತಿ ಒರಿಯಾ
ನಮ್ಮ ಸುತ್ತಲ ಭಾಷೆಗಳು........ಓ.ssss ..ಓ....sss
//ಪ// ಈ ದೇಶವು ವೀರ ಜವಾನರದು //ಪ//

ಸಾಹಿತ್ಯ ಸಂಸ್ಕೃತಿಯ ಬೀಡು ಇದು, ಶಾಸ್ತ್ರಿಯ ಕನ್ನಡ ನುಡಿಯಿದು
ಜ್ಞಾನಪೀಠಗಳ...  ಜ್ಞಾನಪೀಠಗಳ ಸಿರಿಯಿದು
ಮಾಹಿತಿ ತಂತ್ರದ ಸೆಲೆಯಿದು......ಓ..sssss ಓ...sss
//ಪ// ಈ ದೇಶವು ವೀರ ಜವಾನರದು //ಪ//