Saturday, December 4, 2010

ನವಂಬರ್ ಸಂಭ್ರಮ

ಸ್ನೇಹಿತರೇ, ಹಿತರೇ...
ನಮ್ಮ ಬೆಡಗಿನ ನಗರಿ, ರಾಜಧಾನಿ ಬೆಂಗಳೂರಿನಲ್ಲಿ ಮರೆಯಾಗುತ್ತಿರುವ ಕನ್ನಡಪರ ಕಾಳಜಿ ನನಗೆ ಈ ರಚನೆಗೆ ಪ್ರೇರಣೆಯಾಯಿತು....ನಾವು ಕಾಲೇಜಿನಲ್ಲಿದ್ದ ಸಮಯದಲ್ಲಿ ಕಡೇ ಪಕ್ಷ ಅಕ್ಟೋಬರ್ ನಿಂದ ಪ್ರಾರಂಭವಾಗುತ್ತಿದ್ದ ಸಂಭ್ರಮ, ಮಂಟಪ ಮತ್ತು ಕಲಾ ವೇದಿಕೆಗಳು, ಕೆ.ಎಸ್.ಆರ್.ಟಿ.ಸಿ ಸಿಂಗಾರಗಳು ಡಿಸೆಂಬರ್ ಅಂತ್ಯದವರೆಗೂ, ಕ್ರಿಮಸ್ ಸಂಭ್ರದ ಜೊತೆಗೂಡುತ್ತಿದ್ದುದು ನೆನಪಿದೆ...ಆದ್ರೆ ಈಗ ನವಂಬರ್ ತಿಂಗಳ ಕಡೆಯ ವಾರವೇ ಕನ್ನಡ ಎಲ್ಲಿ ಹೋಯ್ತು ಅನ್ನೋನೆ ಯೋಚನೆ ಕಾಡುತ್ತೆ....ನಿಮ್ಮ ಪ್ರತಿಕ್ರಿಯೆ..ಟೀಕೆಗೆ ನಾನು ಸಿದ್ಧ......


ನವಂಬರ್ ಸಂಭ್ರಮ

ನವಂಬರ್ ಬಂದ್ರಾಯ್ತು

ಹರಿಯುತ್ತೆ ಕನ್ನಡದ ಮಹಾಪೂರ

ಎಲ್ಲಿರುತ್ತೋ ಕಟ್ಟೆಯೊಡೆಯುತ್ತೆ

ನುಗ್ಗುತ್ತೆ ಗಲ್ಲಿ ಗಲ್ಲಿ ನಿಲ್ಲೊಲ್ಲ ಅನ್ನುತ್ತೆ

ಕೆಂಪು-ಹಳದಿ ಕಹಳೆ ಮೊಳಗುತ್ತೆ

ದೇಣಿಗೆ ಚಂದಾ ಕೊಡುಗೆ ಕೇಳುತ್ತೆ

ಹಾದಿ ಬೀದಿಲೆಲ್ಲಾ, ಗಂಧದಗುಡಿ,

ಹಚ್ಚೇವು ಕನ್ನಡದ ದೀಪ ಮೊಳಗುತ್ತೆ

ಇಂಗ್ಲೀಷ್ ನಾಮಫಲಕಕ್ಕೆ ಬೀಳುತ್ತೆ ಲತ್ತೆ

ಒಂದೇ, ಎರಡೇ, ಬೆಂಗ್ಳೂರೇ ಕನ್ನಡಮಯ

ಐಟಿ ಬಿಟಿ ಗಲ್ಲಿಗಳು ಬಿಕೋ ಅಗುತ್ವೆ

ಡಿಸೆಂಬರ್ ಬರುತ್ತೆ..

ಚಳಿಗೆ ಬೆಂಗ್ಲೂರ್ ನಡಗುತ್ತೆ
ಕನ್ನಡಾನೂ ನಿಧಾನಕ್ಕೆ ಮರೆಯಾಗುತ್ತೆ

ಗಲ್ಲಿಗಳು ಮತ್ತೆ ತುಂಬ್ಕೋತಾವೆ

ಮತ್ತೆ ಎನ್ನ, ಎವಿಡ, ಎಕ್ಕಡ ವಾಟ್ ಗಳು

ಟಾಕ್ ಎನಿಥಿಂಗ್ ಬಟ್ ನಾಟ್ ಕನ್ನಡ ಗಳು
ಜನವರಿ ತುಂಬಾ ಕೇಕ್ ಗಳು

ಫೆಬ್ರವರಿಲಿ ವ್ಯಾಲಂಟೈನ್ ಡೇಟ್ಸಗಳು

ಮಾರ್ಚ್ ಏಪ್ರಿಲ್ ಎಕ್ಸಾಮ್ ಟೆನ್ಶನ್ ಗಳು

ಜೂನ್ ಜುಲೈ ರೆಸಾರ್ಟ್ ಮಸ್ತಿಗಳು

ಮತ್ತೆ ಇಲ್ಲದ ಮಳೆ ಅಥವ ಅತಿ ಕೊಚ್ಚೆಗಳು

ರಚ್ಚೆ ಹಿಡಿಸೋ ಪೆಚ್ಚು ರಾಜಕೀಯಗಳು

ಮರೆತಹಾಗೆ ಆಗಿರುತ್ತೆ ,,,ಎಲ್ಲಿದೆ.. ಕನ್ನಡ?
ಮತ್ತೆ ಧೂಳು ಕೊಡವಿ ಹೊರಬರೋ ಫ್ಲಾಗ್ಗಳು

ಕನ್ನಡ ಸಿಡಿಗಳು, ಆಡಿಯೋಗಳು

ಯಾಕಂದ್ರೆ ಬಂತಲ್ಲಾ..ನವೆಂಬರ್ರು?

ಮತ್ತದೇ ರಾಜ್ಯೋತ್ಸವ !!!