Saturday, March 12, 2011

ಅಂಜಿದೊಡೆಂತಯ್ಯಾ??

ಅಂಜಿದೊಡೆಂತಯ್ಯಾ??

ನೆಲನಡುಗಿತು ಜಲದ ಒಳಗೆ
ಜಲವು ಸೆಳೆಯಿತು ತನ್ನ ಬಲೆಗೆ
ಮನುಜನೊಂದು ಹುಲ್ಲುಕಡ್ಡಿ
ತರಗೆಲೆಯುದುರಿ ಚದುರಿದಂತೆ
ಭಸ್ಮ ಚಾಚಿ ಅನಿಲಾಗ್ನಿ ಕೆನ್ನಾಲಗೆ

ಎಲ್ಲೋ ಅದುರಿತು ಸಾಗರದೊಳಗೆ
ಭೂ ಪದರಗಳ ತಿಕ್ಕಾಟ ಘಳಿಗೆ
ತಲದ ತಳಮಳ ಅಲೆಯ ಆರ್ಭಟ
ಜಲರಾಶಿಯೇ ಕದಲಿತು ಎಲ್ಲ ಪಲ್ಲಟ
ನಿಸರ್ಗಕಿದು ಸಹಜ ದಿನದ ನಡಿಗೆ

ಭೂಗರ್ಭವೆಲ್ಲಾ ಘನದ್ರವದ ದಲ
ದ್ರವ ಮೇಲೆಬಂದಂತೆ ಘನ ನೆಲ
ಒಳಗುದಿಗೆ ಕೊತಕೊತವು ಸಹಜ
ಘನ ಅದರಂತೆ ನಡುಗಿದರೆ ಮನುಜ
ಪ್ರಕೃತಿಕೇಗೆ ಹೇಳು ನಿನ ಮೇಲೆ ಛಲ?

ಅಣ್ಣನವರ ವಚನ ಎಷ್ಟು ಸಮಂಜಸ
ಬೆಟ್ಟದ ಮೇಲೊಂದ ಮನೆಯಮಾಡಿ!!?
ನಿಸರ್ಗವೇ ಹೊರಗಿಟ್ಟ ದ್ವೀಪಗಳಿವು
ಜಪಾನ್, ಇಂಡೋನೇಶಿಯಾ ಹವಾಯಿ
ಯಾಕಿಲ್ಲೇ ಹೆಚ್ಚು ನಿಸರ್ಗದ ಕವಾಯಿ?
ಅಲ್ಲಿದ್ದ ಮೇಲೆ ಅನುಭವಿಸಬೇಕು ಎಲ್ಲಾ
ಮೃಗಗಳಿಗಂಜಿದೊಡೆಂತಯ್ಯಾ???