Saturday, March 12, 2011

ಅಂಜಿದೊಡೆಂತಯ್ಯಾ??

ಅಂಜಿದೊಡೆಂತಯ್ಯಾ??

ನೆಲನಡುಗಿತು ಜಲದ ಒಳಗೆ
ಜಲವು ಸೆಳೆಯಿತು ತನ್ನ ಬಲೆಗೆ
ಮನುಜನೊಂದು ಹುಲ್ಲುಕಡ್ಡಿ
ತರಗೆಲೆಯುದುರಿ ಚದುರಿದಂತೆ
ಭಸ್ಮ ಚಾಚಿ ಅನಿಲಾಗ್ನಿ ಕೆನ್ನಾಲಗೆ

ಎಲ್ಲೋ ಅದುರಿತು ಸಾಗರದೊಳಗೆ
ಭೂ ಪದರಗಳ ತಿಕ್ಕಾಟ ಘಳಿಗೆ
ತಲದ ತಳಮಳ ಅಲೆಯ ಆರ್ಭಟ
ಜಲರಾಶಿಯೇ ಕದಲಿತು ಎಲ್ಲ ಪಲ್ಲಟ
ನಿಸರ್ಗಕಿದು ಸಹಜ ದಿನದ ನಡಿಗೆ

ಭೂಗರ್ಭವೆಲ್ಲಾ ಘನದ್ರವದ ದಲ
ದ್ರವ ಮೇಲೆಬಂದಂತೆ ಘನ ನೆಲ
ಒಳಗುದಿಗೆ ಕೊತಕೊತವು ಸಹಜ
ಘನ ಅದರಂತೆ ನಡುಗಿದರೆ ಮನುಜ
ಪ್ರಕೃತಿಕೇಗೆ ಹೇಳು ನಿನ ಮೇಲೆ ಛಲ?

ಅಣ್ಣನವರ ವಚನ ಎಷ್ಟು ಸಮಂಜಸ
ಬೆಟ್ಟದ ಮೇಲೊಂದ ಮನೆಯಮಾಡಿ!!?
ನಿಸರ್ಗವೇ ಹೊರಗಿಟ್ಟ ದ್ವೀಪಗಳಿವು
ಜಪಾನ್, ಇಂಡೋನೇಶಿಯಾ ಹವಾಯಿ
ಯಾಕಿಲ್ಲೇ ಹೆಚ್ಚು ನಿಸರ್ಗದ ಕವಾಯಿ?
ಅಲ್ಲಿದ್ದ ಮೇಲೆ ಅನುಭವಿಸಬೇಕು ಎಲ್ಲಾ
ಮೃಗಗಳಿಗಂಜಿದೊಡೆಂತಯ್ಯಾ???




Monday, March 7, 2011

ಕೋರಿಕೆ ಸಾವು ಅಥವಾ ಇಚ್ಛಾಮರಣ (ಯೂಥನೇಸಿಯಾ)

ಮಾರ್ಚ್ ೭ ರಂದು ಸರ್ವೋಚ್ಛ ನ್ಯಾಯಾಲಯದ ಮಹತ್ತರ ತೀರ್ಪು: ಅರುಣಾ ಶಾನ್ ಭಾಗ್ ರವರ ದಯಾಮರಣದ ಕೋರಿಕೆ ಅರ್ಜಿ ತಿರಸ್ಕೃತ.
ಈ ವಿಷಯ ಹಲವರ ಮನದಲ್ಲಿ ವಿಷಯಗಳ ಗೊಂದಲ ಮೂಡಿಸಿರಬೇಕು, ಅದರಲ್ಲೂ ಜನಸಾಮಾನ್ಯನಿಗೆ ಇದು ಏನು..??!! ಎಂಬ ಸೋಜಿಗ.
ಅರುಣಾ ಶಾನ್ ಭಾಗ್ ಸುಮಾರು ೩೫ ವರ್ಷಗಳಿಂದ ಬದುಕಿಯೂ ಸತ್ತಂತಿರುವ ಸ್ಥಿತಿಯಲ್ಲಿ ಮುಂಬೈನ ಕೆ,ಇ.ಎಮ್. ಆಸ್ಪತ್ರೆಯಲ್ಲಿ ೬೪ ವರ್ಷ ವಯಸ್ಸಿನ ಅರುಣಾ ನರಳುತ್ತಾ ಹಾಸಿಗೆಯಲ್ಲಿ ಬಿದ್ದಿರುವ ಸ್ಥಿತಿ ಎಂತಹವರಿಗೂ ಅಯ್ಯೋ ಅನಿಸದಿರುವುದು ಅಸಾಧ್ಯ. ಸುಮಾರು ೨೯-೩೦ ವಯಸ್ಸಿನ ದಾಯಿ (ನರ್ಸ್) ಆಗಿ ಕೆಲಸ ಮಾಡುತ್ತಿದ್ದ ರೋಗಿಗಗಳ ಸೇವೆಯಲ್ಲಿ ನಿರತಳಾಗಿದ್ದ ಕರ್ನಾಟಕ ಉತ್ತರಕನ್ನಡ ಜಿಲ್ಲೆಯ ಈ ಹೆಣ್ಣುಮಗಳನ್ನು ಕಾಮ ಪೀಪಾಸು ವಾರ್ಡ್ ಬಾಯ್ ಒಬ್ಬ ಅತ್ಯಾಚಾರವೆಸಗುವ ಪೈಶಾಚಿಕ ಕೃತ್ಯದಲ್ಲಿ ಆಕೆಯ ಕೊರಳನ್ನು ನಾಯಿ ಸರಪಳಿಯಿಂದ ಬಿಗಿದ ಕಾರಣ ಆಕೆ ಮಿದುಳಿಂದ ಸಂವೇದನಾ ಸಂಪರ್ಕ ಕಳೆದುಕೊಂಡುದಲ್ಲದೇ ಮಾತೂ ಹೊರಡದಾಯಿತು. ಆಕೆಯ ಮೇಲೆ ಅತ್ಯಾಚಾರ ನಡೆದ ಮಾನಸಿಕ ಆಘಾತ ಆಕೆಯನ್ನು ಮಾತನಾಡದಂತೆ ತಡೆದಿರಬಹುದು ಎಂದು ತಿಳಿಯಲಾಗಿತ್ತು..ಆದರೆ ಅದು ಮಿದುಳಿನಿಂದ ಯಾವುದೇ ಪ್ರತಿಸ್ಪಂದನಾ ಕ್ರಿಯೆಗಳು ನಡೆಯದಾದಾಗ ಇದು ಕೊರಳ ಬಿಗಿತದಿಂದ ಮಿದುಳಿಗೆ ಆಮ್ಲಕನಕ ದೊರೆಯದೇ ಆದ ವೈದ್ಯಕೀಯ ಸಮಸ್ಯೆಯೆಂದು ತಿಳಿಯಿತು. ಡಾಕ್ಟರೊಬ್ಬರನ್ನು ಮದುವೆಯಾಗುವ ಸಂಭ್ರಮದಲ್ಲಿದ್ದ ಹೆಣ್ಣು ನಿರ್ಜೀವಕೊರಡಿನಂತೆ ೩೫ ವರ್ಷಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಬಿದ್ದಿದೆ. ಈ ಹೆಣ್ಣಿನ ಅನಿರ್ವಚನೀಯ ವೇದನೆಯನ್ನು ಮನಗಂಡ ಅರುಣಾಳ ಸ್ನೇಹಿತೆ ಮತ್ತು ಪತ್ರಕರ್ತೆ ಪಿಂಕಿ ವಿನಾನಿ ಅರುಣಾಳ ದಯಾಮರಣ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದಳು. ಕಾನೂನಿನ ತೊಡಕುಗಳು ಅಥವಾ ಪೂರ್ಣ ವಿಶ್ಲೇಷಿತ ಕಾನೂನು ನಿಯಮಾವಳಿಗಳ ಅಭಾವದಿಂದ ಮತ್ತು ಇಂತಹ ತೀರ್ಪಿನ ದುರುಪಯೋಗಗಳ ಸಾಧ್ಯತೆಯನ್ನು ತಡೆಯಲು ಈ ಮನವಿಯನ್ನು ತಿರಸ್ಕರಿಸಲಾಯಿತು.
ದಯಾಮರಣ ಈಗ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಚಲನೆಯಲ್ಲಿದೆ. ದಯಾಮರಣ, ಕೋರಿಕೆ ಸಾವು ಅಥವಾ ಯೂಥನೇಸಿಯಾ ಎಲ್ಲಾ ಇದೇ ಪ್ರಕಾರದ ಅಪ್ರಾಕೃತಿಕ ಮರಣಕ್ಕೆ ಹೆಸರು. ಅಪಘಾತಗಳು, ಆಘಾತಗಳು ಮುಂತಾದುವು ಮನುಷ್ಯನ ಬಲು ವೇದನೆಯ ಮಿದುಳು ನಿಷ್ಕ್ರಿಯತೆಯಿಂದ ಕೂಡಿದ ಹಲವು ಅಂಗವೈಕಲ್ಯ ಅಥವಾ ನಿರುಪಯೋಗಿಯಾಗುವ ಸ್ಥಿತಿಯನ್ನು ಅನಾರೋಗ್ಯದ ಅಂತಿಮ ಸ್ಥಿತಿ (terminal illess) ಎನ್ನುತ್ತಾರೆ. ಇಂತಹ ಅವಸ್ಥೆಯಲ್ಲಿ ರೋಗಿಗೆ ಇಹದ ಯಾವುದೇ ಸ್ಪಂದನೆಯಿರುವುದಿಲ್ಲ ಹಲವರಿಗೆ ಯಾರನ್ನೂ ಗುರುತಿಸುವ ಶಕ್ತಿಯೂ ಇರುವುದಿಲ್ಲ, ಉಸಿರಾಟ ಆಮ್ಲಜನಕದ ಬಾಹ್ಯಪೂರೈಕೆಯಿಂದ ನಡೆಯುತ್ತದೆ. ಹಲವಾರು ಅಂಗಗಳು ಸರಿಯಾಗಿ ಕೆಲಸ ಮಾಡದೇ ಅದಮ್ಯ ವೇದನೆ ಅನುಭವಿಸುತ್ತಾರೆಯಾದರೂ ಅದನ್ನು ಹೇಳಿಕೊಳ್ಳುವ ಸ್ಥಿಯಲ್ಲಿರುವುದಿಲ್ಲ. ಅವರ ಹಿಂಸೆಯನ್ನು ನೋಡಲಾಗದೇ, ಅವರಿಗೆ ಮತ್ತೆ ಆರೋಗ್ಯಪ್ರದಾನ ಮಾಡಬಲ್ಲ ಎಲ್ಲಾ ಸಾಧ್ಯತೆಗಳೂ ಶೂನ್ಯವಾದಾಗ ಅವರಿಗೆ ಶಾಂತ ಮರಣ ಮತ್ತು ಹಿಂಸೆಯಿಂದ ಬಿಡುಗಡೆ ನೀಡಲು ದಯಾಮರಣ ಎಂಬ ಸಿಧ್ಹಾಂತ ಹುಟ್ಟಿಕೊಂಡಿತು. ಈ ಎಲ್ಲ ವಿಷಯ ಗಮನಿಸಿದರೆ ನನಗೆ ಭೀಷ್ಮ ಪಿತಾಮಹರ ಇಚ್ಛಾಮರಣದ ಪೌರಾಣಿಕ ಘಟನೆ ನೆನಪಾಗುತ್ತದೆ.

ನಿಜವಾಗಿಯೂ ವೇದನೆಯಿಂದ ಯಾತನೆಯಿಂದ ಒಂದು ಜೀವಕ್ಕೆ ಮುಕ್ತಿ ನೀಡುವುದಾದರೆ ದಯಾಮರಣ ಯಾಕಾಗಬಾರದು....?

ಏನಂತೀರಿ...?

ಯೂಥನೇಸಿಯಾ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ......
http://www.euthanasia.com/index.html


Thursday, March 3, 2011

ನಂಗೊತ್ತಿಲ್ಲ ಮಗು

(ಚಿತ್ರ ಕೃಪೆ: ಅಂತರ್ಜಾಲ)
ನಂಗೊತ್ತಿಲ್ಲ ಮಗು

ಅಪ್ಪಾ ..
ಏನು ಪುಟ್ಟಾ?
ಕನಸಿನ ಕನ್ಯೆ ಅಂದ್ರೆ ಏನಪ್ಪಾ..?
ಅಂದ್ರೆ ,.. ಡ್ರೀಮ್ ಗರ್ಲ್ ಅಂತಾ
ಹಂಗಂತ ನಮ್ಮ ಎಮ್ಮೆ ಎಲ್ಲೇ ಒಬ್ರು ಇಲ್ಲಿಗೆ
ಬಂದಿದ್ರಲ್ಲಾ ಆಂಟಿ ಒಬ್ರು ಅವರನ್ನ ಕೇಳಿದ್ದಕ್ಕೆ
ಅವ್ರು ಮಂಕಾಗಿ ಮೇಲೆ ಕೆಳಗೆ ನೋಡಿದ್ರು...??!!
ಅವ್ರಿಗೆ ಕನ್ನಡ ಬರೊಲ್ಲ ಅಲ್ವಾ ಅದಕ್ಕೆ..
ಮತ್ತೆ ಅವರನ್ನ  ಕನ್ನಡಿಗರು ಯಾಕೆ ಆಯ್ಕೆ ಮಾಡಿದ್ದು ಅಪ್ಪಾ
ನಮ್ಮಲ್ಲಿ ಅಂತಹ ಕನ್ನಡಿಗರೇ ಇಲ್ವಾ...?
ನಂಗೊತ್ತಿಲ್ಲ ಮಗು.

ಅಪ್ಪಾ...ಇನ್ನೊಂದು ಸಂದೇಹ...!!
ಏನಪ್ಪ ಅದು ನಿನ್ನ  ಡೌಟು?
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ
ನಾರಾಯಣ ಮೂರ್ತಿಯವರನ್ನ ಆಹ್ವಾನಿಸಿದ್ದಾರಂತೆ?
ಹೌದು ಕಣೋ ಅವರು ನಮ್ಮ ಬೆಂಗಳೂರನ್ನ ಭೂಪಟದಲ್ಲಿ ಎದ್ದು ಕಾಣೋಹಾಗೆ ಮಾಡಿದ ಮಹಾನ್ ಉದ್ಯಮಿ ಅಲ್ಲವಾ ಅದಕ್ಕೆ..
ಮತ್ತೆ ..ಕನ್ನಡ ಸಮ್ಮೇಳನಕ್ಕೆ ಕನ್ನಡ ಸಾಹಿತಿ ಕಲಾವಿದರು
ಸಿಗಲಿಲ್ಲವಾ..? ಮತ್ತೆ ಹೇಮಾಮಾಲಿನಿ ಆಂಟಿಗೇ ಹೇಳ್ಬಹುದಿತ್ತು
ನಂಗೊತ್ತಿಲ್ಲ ಮಗು

Monday, February 28, 2011

ಆಯೆಗಾ ಸವೇರಾ

ಚಿತ್ರ: ಪ್ರಕಾಶ್ ಹೆಗ್ಗಡೆ

ಮೈಂ ಬೈಠೀ ಕಿನಾರೆ ಝೀಲ್ ಕೆ
ಕಿ ಖಾಮೋಶೀ ಭೀ ಚುಭ್ ರಹೀ ಥೀ
ಮೇರೀ ಬೇಚೈನಿ ಕೆ ಕಂಪನ್
ಹಲ್ಕೆ ಸೆ ತರಂಗ್ ಶಾಂತ್ ಸತಹ್ ಪರ್
ಪರ್ ಉಸ್ ಪರ್ ಕ್ಯೋಂ ಮೆರಾ ಗುಸ್ಸಾ?
ಮೇರಾ ತಡ್ ಪನ್ ಮೇರೀ ಬೇಚೈನೀ ಕೋ
ನಹೀಂ ಹೋರಹಾ ಸಹನ್
ಸರ್ ಪರ್ ಕಾ ಸೂರಜ್ ಸುನಹ್ರಾ ಹುವಾ
ಢಲ್ ಸುನಹ್ರೀ ಶಾಮ್ ಛಾಯೆಗಾ ಅಂಧೇರಾ
ವಾದಾ ತೊ ಕಿಯಾ ಹೈ,,ಆಯೆಗಾ ಪಿಯಾ
ಭಲೇ ಹೀ ರಾತ್ ಢಲ್ ಜಾಯ್
ಔರ್ ರ್ಕ್ಯೋಂ ನ ಹೋ...
ಆಯೆಗಾ ಸವೇರಾ


Friday, February 25, 2011

ನಿನ್ನಯಾ ಆ ಕಣ್ಣ ನೋಟ ,......ಮತ್ತೊಂದು ಕರವೋಕೆಗೆ



ನಿನ್ನಯಾ ಆ ಕಣ್ಣ ನೋಟ

(ಆಪ್ ಕೀ ನಜರೋಂ ನೆ ಸಮಝಾ)

ನಿನ್ನಯಾ ಆ ಕಣ್ಣ ನೋಟ
ನಿನ್ನವಳೇ ನಾನೆಂದಿದೆ
ಎದೆಯ ಬಡಿತವೇ ಕ್ಷಣಕೆ ನಿಲ್ಲು
ಗುರಿಯ ತಲುಪಿದೆ ಎಂದಿದೆ...sss //ನಿನ್ನಯಾ ಆ ಕಣ್ಣ ನೋಟ//

ಹಾಂ ನನಗಿದು ಸಮ್ಮತ
ನಿನ್ನಯ ಈ ಅಭಿಮತ
ಏನೇ ಹೇಳು ಕಂಬನೀ
ಬಿಸಲಲಿರುವುದೇ ಇಬ್ಬನೀsss
ನಿನ್ನನಗಲಿ ಹೇಗೆ ಇರಲಿ
ಶಶಿಯ ಪುಲಕಿತೆ ಶರಧಿ ನಾ sss//ನಿನ್ನಯಾ ಆ ಕಣ್ಣ ನೋಟ//

ನಿನ್ನ ಪಯಣಕೆ ನೆಲೆಯು ನಾನು
ನನ್ನ ಪಯಣಕೆ ನೀನಿರು
ನನ್ನ ನೀನು ಮರೆತರೂ
ಹೇಗೆ ಮರೆಯಲಿ ನಿನ್ನ ನಾ ssss
ಕರಗಿ ಬೆರೆತೆ ನನ್ನ ಉಸಿರಲಿ
ಬಿಡಲಿ ಹೇಗೆ ಉಸಿರು ನಾsss//ನಿನ್ನಯಾ ಆ ಕಣ್ಣ ನೋಟ//

ನಿನ್ನ ಛಾಯೆ ನನ್ನ ಮೇಲೆ
ನನ್ನ ಮಾಯೆ ನಿನ್ನಲಿ
ನನ್ನ ನೀನು ಸೆಳೆದರೇ
ನಿನ್ನ ಸೆಳೆಯದೇ ಇರೆನು ನಾss
ಸೂಜಿಗಲ್ಲಿನದೇನು ತಪ್ಪು
ಸೆಳೆದು ಬಿಡಲದು ಕಬ್ಬಿಣಾsss// ನಿನ್ನಯಾ ಆ ಕಣ್ಣ ನೋಟ//

Tuesday, February 22, 2011

ಮತ್ತೊಂದು ಕರವೋಕೆ..ಪ್ರಿಯರಿಗೆ...



ನನ್ನ ಆ ಹುಡುಗಿ


(ದಿಲ್ ಕೆ ಝರೋಕೋಂ ಮೆ ತುಝ್ ಕೋ ಬಿಠಾಕರ್)


ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ
ವಧುವಂತೆ ನಿನ್ನ ನೆನಪನ್ನು ಸಿಂಗರಿಸಿ
ಬಚ್ಚಿಟ್ಟುಕೊಳ್ಳುವೆನೇ, ಹುಡುಗಿ
ಹೃದಯದಲಿ ಮನದನ್ನೆ//೨//


ನಾಳೆ ನನಗೆ ನೀನು ಪರಕೀಯಳಾದ್ರೂ
ನಿನರೂಪ ಮನಸಿಂದ ಹೋಗದು ಎಂದೂ
ಹೂ ಪಲ್ಲಕಿಯಲಿ ನಿನ್ನ ಬೀಳ್ಕೊಟ್ರೂ
ನಿನ್ನ ನೆನಪು ಈ ಮನಬಿಟ್ಟು ಬರದು// ನಾಳೆ ನನಗೆ...//೨//
ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ.....//ಪ//


ನಿನ್ನ ಅಧರದ್ವಯ ಮಧುಪಾತ್ರೆ ಬಾಲೆ
ಈಗಲೂ ನನಗದು ನಶೆಯ ಮಧುಶಾಲೆ
ನಿನ್ನಯ ಮುಂಗುರುಳ ಘನಛಾಯೆ ಇನ್ನೂ
ನನ್ನನ್ನು ಕಾಡುವ ಬಲು ಮೋಹ ಮಾಯೆ// ನಿನ್ನ ಅಧರದ್ವಯ ಮಧುಪಾತ್ರೆಬಾಲೆ//೨//

ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ.....//ಪ//


ನೀನನ್ನ ಪ್ರೀತಿಯ ಧಿಕ್ಕರಿಸಿದೆಯಾದ್ರೂ
ಅದಕಾಗಿ ನಿನಮೇಲೆ ಆಕ್ಷೇಪವಿರದು
ಕಣ್ಣಲಿ ನಿನ್ನಯ ಪ್ರತಿಬಿಂಬ ತುಂಬಿ
ಜಪಿಸುವೆ ನಿನ ನಾಮ ಜೀವನ ಪೂರ್ತಿ//ನೀ ನನ್ನ ಪ್ರೀತಿಯ ಧಿಕ್ಕರಿಸಿದೆಯಾದ್ರೂ//೨//


ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ
ವಧುವಂತೆ ನಿನ್ನ ನೆನಪನ್ನು ಸಿಂಗರಿಸಿ
ಬಚ್ಚಿಟ್ಟುಕೊಳ್ಳುವೆನೇ, ಹುಡುಗಿ
ಹೃದಯದಲಿ ಮನದನ್ನೆ//೨//

Monday, February 14, 2011


(ಚಿತ್ರ ಕೃಪೆ: ಅಂತರ್ಜಾಲ, web foto)

ಪ್ರೀತಿಯೋ ಪ್ರೇಮವೋ.?
ಬಿಟ್ಟ ಕಣ್ಣ ಹೊಳಪ
ನಕ್ಕು ಬಾಯಲಿ ಬಳಪ
ಚೊಕ್ಕ ಚೋಲಿಯ ಸೆಳೆತ
ಆಗಿದ್ದು ನಮ್ಮ ಕಣ್ಣ ಮಿಳಿತ
ಅದು ಮುಗ್ಧ ಬಾಲ್ಯದ ಭಾವ
ಪ್ರೀತಿಯೋ ಪ್ರೇಮವೋ ಯಾವುದು..?

ಬೆಳೆದಂತೆ ಮಗದೊಂದು ಮಿಡಿತ
ಅವಳತ್ತಳು ಬಿದ್ದರೆ ನನಗೆ ಹೊಡೆತ
ಕಾಣದಾಗೆ ಒಂದಿನ ಏನೋ ತುಡಿತ
ಹೀಗೂ ನಡೆದಿದ್ದು ಕಿಶೋರ ದಿನ
ಅರ್ಥವಿತ್ತೇ ಅದಕ್ಕೂ ಆದಿನ
ಪ್ರೀತಿಯೋ ಪ್ರೇಮವೋ ಅದು..?

ನಮಗೆ ಮರೆಯದ ಅದೊಂದು ಘಟ್ಟ
ಇಬ್ಬರೂ ಬೆಳೆದು ನಿಂತು ಎದೆಮಟ್ಟ
ಸಫಲಿಸದೆ ವಿದ್ಯೆ, ಇದ್ದಲ್ಲೇ ನಿಂತಳು
ಗೆದ್ದರೂ ತೇವಗೊಂಡವು ನನ್ನ ಕಂಗಳು
ಅನಿಸತೊಡಗಿತ್ತು ಅರ್ಥವಾಗದ್ದು ಏಕೆ ಹೀಗೆ?
ಪ್ರೀತಿಯೋ ಪ್ರೇಮವೋ ಇದು..?

ಕಳೆದು ಹತ್ತಾರು ವರುಷ, ಸಿಕ್ಕಳಂದು ಷಮಾ
ಕಣ್ಣು ಸೇರಿದ್ದು, ಗುರುತಿಸಿದ್ದು ನೆನಪುಗಳ ಜಮಾ
ಯಾವುದೋ ಹೊಲದ, ಎಲ್ಲೋ ಹೊಸೆದ, ಬತ್ತಿಯ ಹೊತ್ತು
ಅಪ್ಪ-ಅಮ್ಮನ ಮಾಡಿದ ಗಾಜ ಬುರುಡೆಯ ಸುತ್ತು
ಷಮಾಳ ಆಸೆಗಳಿಗೆ ಕಿಡಿ, ನೆನಪಿಗೆ ಹತ್ತಿ ಧೂಳು
ಆಗಿ ಬಾಲ, ಕಿಶೋರ, ಪ್ರೌಢ ಮನಸುಗಳ ಹೋಳು
ಪ್ರೀತಿಯೋ, ಪ್ರೇಮವೋ ..ಅಂದು...?

ಧಾರೆ ಜೀವನದಿ ಹಿರಿಯರಾಣತಿ ಹರಿವಿನೊಂದಿಗೆ ತಾನು
ಅರಿಯದ, ಅರಿವಾದ ಅರಿತರೇನೂ ಮಾಡಲಾಗದ ನಾನು
ಮಾಲ್ ನ ಜಂಗುಳಿಯಲಿ ನಿಂತಂತೆ ಮರುಕಳಿಸಿ ನೆನಪು
ಬಂದರು ಷಮಾಳ ಅವರು, ಜೊತೆಗೆ ಬೆಳೆದ ಮಕ್ಕಳಿಬ್ಬರು
ನನ್ನವಳು ತನ್ನೆತ್ತರಕೆ ಬೆಳೆದ ಮಗಳ ಜತೆಗೆ ನಾವು ಮೂವರು
ಇದಲ್ಲವೇ ಜೀವನ? ವಿರೋಧಗಳ ನಡುವೆಯೂ ಬಾಳು ?
ಸಹನಾತೀತ ಕ್ಷಣ, ಕಳೆದರೆ- ಅನಿಸದು ಹಿಂದಿನದು ಗೋಳು.
ಇದಲ್ಲವೇ ಪ್ರೀತಿ ಪ್ರೇಮ ಎಂದೂ ಎಂದೆಂದೂ..?