Sunday, September 16, 2012
Tuesday, September 4, 2012
ದಿಲ್ ಕೊ ದೇಖೋ ಚೆಹರಾ ನ ದೇಖೋ
“ಹಾಯ್ ಡೂಡ್” ಹೌ ಆರ್ ಯೂ...?
What yaar what are you doing this evening….??
What Daa…looking smartaaaa!!!!! Accept my friendship….
ಇವು ಖಾಸಾ ಸ್ನೇಹಿತನ ಫೇಸ್ ಬುಕ್ ಗೆ
ಬರ್ತಿದ್ದ ಚಟ್ಪಟಾ ಮೆಸೇಜ್ ಗಳು....
ಹೊಟ್ಟೆ ಉರಿಯೊಲ್ವಾ..?? ಅದೂ ಸುಂದರ
ಹುಡುಗಿಯರು, ಲಲನೆಯರು, ಜಸ್ಟ್ ಮ್ಯಾರೀಡ್ ಹುಡ್ಗೀರು, ದಿಲ್ದಾರ್ ಆಂಟಿಗಳು....
ಅಬ್ಬಬ್ಬಬ್ಬಾ....!!!!
ಗಾಯದ ಮೇಲೆ ಬರೆ ಅನ್ನೋ ಹಾಗೆ ...
ನನಗೊಬ್ರು ಮೆಸೇಜ್ ಹಾಕಿದ್ರು “ಅಂಕಲ್
ನಿಮ್ಮ ಕವನಗಳು ತುಂಬಾ ಚನ್ನಾಗಿರುತ್ತವೆ, ಆದ್ರೆ ನೀವು ಹಾಕೋ ಕೆಲ ರಸಿಕ ಕವನ-ಚುಟ್ಕಗಳು
ನಿಮ್ಮಂತಹ ವಯಸ್ಸಾದವರಿಗೆ ಒಪ್ಪೊಲ್ಲ... ಆದರೂ ಯಂಗ್ ಆಗಿದ್ದಾಗ ನಿಮ್ಮ ಕರಾಮತ್ತು
ಜೋರಾಗಿದ್ದಿರಬಹುದು ಅನ್ನೋದು ಮಾತ್ರಾ ಊಹಿಸ್ಕೋಬಹುದು...!!!
ಛೆ ಛೇ... “ಯಂಗ್ ಆಗಿದ್ದಾಗ..??!!”
ಅಂದ್ರೆ ಹೆಂಗಾಗ್ಬೇಡ ನನಗೆ...??
ಅಲ್ಲ, ನನ್ನ ಸ್ನೇಹಿತ ಅಬ್ಬಬಾ ಅಂದ್ರೆ
ನನಗಿಂತ ಒಂದು ಮೂರ್ನಾಲ್ಕು ವರ್ಷ ಚಿಕ್ಕವನಪ್ಪಾ.., ಹಂಗಂತ ನನ್ನ ಅಂಕಲ್ ಮಾಡಿ... ಅವನನ್ನ “Dude” ಸಿಂಹಾಸನಕ್ಕೆ ಏರ್ಸೋದು ಸರಿನಾ...?? ನೀವೇ ಹೇಳಿ...!!!
ನನಗೆ ನನ್ನ ಸ್ನೇಹಿತನ ಈ ಅಪಾರ ಜನ (ಜನಾನ)
ಮನ್ನಣೆ, ಲವ್ವು ಸಿಕ್ತಾ ಇರೋದರ ಗುಟ್ಟು ಅವನೇ ಬಿಟ್ಕೊಟ್ಟ. ಎತ್ತರಕ್ಕೆ ಗಡದ್ದಾಗಿರೋ ಇವನನ್ನ
ನೋಡಿರೋರು...ಸಾರ್ ನೀವು ಸಿನಿಮಾದಲ್ಲಿ ’ವಿಲನ್’ ಪಾತ್ರ ಯಾಕೆ ಮಾಡಬಾರದು ಅಂತ ಕೇಳಿದ್ರಂತೆ.... ಅದೂ
ಅವನೇ ಹೇಳಿದ್ದು...
ಅಬ್ಬಾ..!! ಹೊಟ್ಟೆಗೆ ಹಾಲು ಸುರಿದಂತೆ
ಆಯ್ತು.. ಉರಿನೂ ಕಮ್ಮಿ ಆಯ್ತು ಅನ್ನಿ...,
ವಿಷಯ ಏನು ಗೊತ್ತಾ..?? ಅವನು ತನ್ನ
ಪ್ರೊಫೈಲಲ್ಲಿ – ಅತ್ಗೆ ತದ್ರೂಪು ಇವ್ನ ಗೆಟಪ್ಪು (ಇವ ನಾನು ತಲೆ ಎತ್ತಿ ನೋಡೋ ಹಾಗೆ ಎತ್ತರದ
ಆಳು...ಇದೂ ಕಾರಣಾನೇ ನನ್ನ ಹೊಟ್ಟೆ ಉರಿಗೆ..ಊಂ...)
ಇರುವ ತನ್ನ ಮಗನ ಫೋಟೋ ಹಾಕಿದ್ದ. ಅದೇ
ತಡ...
ತಕಳಪ್ಪಾ ಎಲ್ಲಾ ಕಡೆಯಿಂದ ಫ್ರೆಂಡ್
ರಿಕ್ವೆಸ್ಟೂ... ಅದ್ರಲ್ಲಿ ೬೦% ಹುಡ್ಗೀರಾದ್ರೆ, ೩೦% ಯಂಗ್ ಆಂಟೀರ್ದು... ಇನ್ನು ೧೦%
ನಮ್ಮಂಥೋರದ್ದು...!! ಯಾಕೆ ಹೇಳಿ..?? ಇವನ ನೆಪದಿಂದಾದ್ರೂ ಲಲನೆಯರು ನನ್ನ ಫ್ರೆಂಡ್
ರಿಕ್ವೆಸ್ಟ್ ಅಕ್ಸೆಪ್ಟ್ ಮಾಡ್ಕೋತಾರೋ ಅನ್ನೋ ಆಸೆಗೆ... ಊಂ....!!
ಹಾಗೇ ಸುಮಾರು ಜನಕ್ಕೆ (ಜನಾನಕ್ಕೆ) ನಾನು
ಇಸಿ ಫ್ರೆಂಡು ಅಂತ ಹೇಳ್ಕೊಂಡೇ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಸ್ಕೊಂಡಿದ್ದೀನಿ... (ಅಂದಹಾಗೆ, ಜನಾನಾ ಅಂದ್ರೆ ಸ್ತ್ರೀ ಸಮೂಹ)
ಈ ಜನಾನೇ ಹೀಗೆ...
ಮುದ್ದಾದ ಮುಖ (ಗೋರಾ ಗಾಲ್) ನೋಡಿದ್ರೆ
ಗೋಲ್ ಆಗಿ ಬಿಡ್ತಾರೆ.
ಅಲ್ಲ ರೀ, ಕರಿಯ ಕೃಷ್ಣನ್ನ ಗೋಪಿಯರು ಮುತ್ಕೋತಾಯಿದ್ರು
ಅಂದ್ರೆ ಹ್ಯಂಗ್ರೀ ನಂಬೋದು...?? ನನ್ನ ನೋಡಿದ್ರೆ ದೂರ ಓಡ್ತಾರೆ...!!!??
ಹೋಗ್ಲಿ ಬಿಡಿ, ಆದರೆ ಈ ನನ್ ಸ್ನೇಹಿತ
ಗುಣದಲ್ಲಿ ಅಪರಂಜಿ ಅದ್ರಲ್ಲಿ ಎರಡು ಮಾತಿಲ್ಲ... ಊಂ..
ಅದು ಅಪರಿಚಿತ ಆದ್ರೂ ಕಷ್ಟದಲ್ಲಿದ್ರೆ
ಕರಗ್ತಾನೆ, ಸಹಾಯಕ್ಕೆ ಮುಂದಾಗ್ತಾನೆ. ಅಪಘಾತ ಆಗಿ ರಸ್ತೆಲಿ ಒದ್ದಾಡೋರನ್ನ ಕಂಡು ಅವ್ರ
ಪ್ರಲಾಪವನ್ನ, ಅವಸ್ಥೆ ನ ವೀಡಿಯೋ, ಫೋಟೋ ಮಾಡಿ ಅಪ್ ಲೋಡ್ ಮಾಡೋ ಆಸಕ್ತಿ ಇರೋ ಜಗಳ ಮಧ್ಯೆ ಇವನು
ಅಪವಾದ. ತಕ್ಷಣ ತನ್ನ ಕಾರ್ ನಿಲ್ಲಿಸ್ತಾನೆ, ಗಾಯಾಳನ್ನ ಆಸ್ಪತ್ರೆಗೆ ಸೇರ್ಸಿ ಅವರಿಗೆ ಚಿಕಿತ್ಸೆ
ಆಗಿ ಯಾರಾದ್ರೂ ಅವರ ಕಡೆಯವರು ಅವರನ್ನ ನೋಡ್ಕೊಳ್ಳೋಕೆ ಬರೋವರೆಗೆ ಕಾಳಜಿ ವಹಿಸ್ತಾನೆ!! ಊಂ...!!
ಇದಲ್ವೇ ಮಾನವತೆ ಮೆರೆಯೋ ಗುಣ..??
ಈಗ ಮೊನ್ನೆ ಪ್ರೊಫೈಲ್ ಚೇಂಜ್ ಮಾಡವ್ನೆ...
ನನಗೆ ಇನ್ನೂ..ಭರ್ತಿ ಸಮಾಧಾನ ಆಯ್ತು..ಆಗ..
ಆದರೆ ಇವನ ಫ್ರೆಂಡ್ ರಿಕ್ವೆಸ್ಟ್
ನಿಂತಿಲ್ಲಾರೀ.... ಊಂ..!!!!
ಇನ್ನೂ ಖುಷ್ ನನಗೆ ಈಗ, ಯಾಕೆ ?? ಮನುಷ್ಯ
ಅಂತಹವನ್ರೀ, ಮನಸಿಗೆ ಹತ್ತಿರ ಆಗ್ಬಿಡ್ತಾನೆ ಮೊದಲನೇ ಸಲ ಭೇಟಿ ಆದರೂ...!! ಇನ್ನು ಫ್ರೆಂಡ್
ರಿಕ್ವೆಸ್ಟ್ ಅತಿಶಯೋಕ್ತಿ ಆಲ್ಲ ಅಲ್ವಾ???
ಅವನ್ನ ನೋಡಿದ್ರೆ ಮತ್ತೆ ಇನ್ನೊಬ್ಬ ಬ್ಲಾಗ್
ಠಕ್ಕ ಇದ್ದಾನೆ, ಏನು ನಯ?? ಏನು ನಾಜೂಕು ??? ಏನು ಜ್ಞಾನ ಪ್ರದರ್ಶನ...!!! ಅಬ್ಬಬಬ್ಬಾ ,,,,
ಅಷ್ಟೇ ನಯ ವಂಚಕ, (ಇವನ ಹುಡುಕಾಟಕ್ಕೂ ನನ್ನ ಸ್ನೇಹಿತ ಹಲವರಿಗೆ ಹೆಲ್ಪ್ ಮಾಡ್ತಿದ್ದಾನೆ ಅನ್ನೋ
ವಿಷಯ ಬೇರೆ...) ಇವನ ಬಗ್ಗೆ ನೆನಪಿಸ್ಕೊಂಡ್ರೆ...
ನನಗೆ ನೆನಪಾಗೋ..
ಹಿಂದಿ ಹಾಡು....
“ದಿಲ್ ಕೊ ದೇಖೋ ಚೆಹರಾ ನ ದೇಖೋ
ಚೆಹರೋಂನೆ ಲಾಖೋಂಕೊ ಲೂಟಾ...
ದಿಲ್ ಸಚ್ಚಾ ಔರ್ ಚೆಹ್ರಾ ಝೂಟಾ...”
Wednesday, June 27, 2012
ಪುಸ್ತಕವಿದೆ ನೋಡಿರೋ ಅಣ್ಣಗಳಿರಾ.......... ಎನುತಿಹ ಅಪೂರ್ವ ಪುಸ್ತಕ ಪ್ರೇಮಿ ಮಂಡ್ಯ ಜಿಲ್ಲೆಯ ಅಂಕೇಗೌಡರು
ಅಂಕೆಯಿಲ್ಲ ಜ್ಞಾನದಾಹಕೆ
ಸಂಖ್ಯೆಯಿಲ್ಲ ಪುಸ್ತಕವಿಧಕೆ
ಅಂಕೇಗೌಡರಿಗೆ ಸಾಟಿಯಿಲ್ಲ
ಪುಸ್ತಕ ಪ್ರೇಮಿಗೆ ಎದುರಿಲ್ಲ.
ಅಂಕೇಗೌಡರ ಪುಸ್ತಕ ಸಂಗ್ರಹ ಮತ್ತು ಅವರ ಪುಸ್ತಕ ಸಂಗ್ರಹದ ಅಮಿತದಾಹ ನೋಡಿ ನನ್ನ ಮನ ಒಡನೇ ಹೇಳಿದ್ದು ಹೀಗೆ.
“ಭೂಮಿಯೆಂದರೆ ಬಾಯ್ಬಿಡುವ ಮಂತ್ರಿ, ಶಾಸಕರೇ ತುಂಬಿರುವ ದೇಶದ ಮತ್ತು
ಮಣ್ಣನ್ನೇ ಮಾರಿದವರ ಕಂಡ ಕನ್ನಡನಾಡಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂತಹವರೂ
ಕಾಪಾಡಿಕೊಳ್ಳುವ ತನ್ನದೇ ಆದ ೬೦x೪೦ ಸೈಟನ್ನು ಮಾರಿ ಪುಸ್ತಕ ಕೊಂಡವರ ಕಂಡಿರುವಿರಾ?? ಪುಸ್ತಕ ಸಂಗ್ರಹ
ದಾಹ ಅಂಕೇಗೌಡರ ಇಂದಿನ “ಪುಸ್ತಕ ಮನೆ” ಯ ಸ್ಥಾಪನೆಗೆ ಕಾರಣ. ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ
ಎನ್ನುವುದು ನಿಜ, ಅದರಲ್ಲೂ ಸಜ್ಜನಿಕೆ ಮೆರೆವವರೂ ಇದ್ದಾರೆನ್ನುವುದು ಎಲ್ಲವೂ ನಿರಾಶಾದಾಯಕವಲ್ಲ
ಎನ್ನುವುದನ್ನು ತೋರಿಸಿ, ಸಕಾರಾತ್ಮಕ ನಿಲುವು ಜನಸಾಮಾನ್ಯರಲ್ಲಿ ಬೇರೂರುವಂತೆ ಮಾಡುತ್ತದೆ. ಅಂಕೇಗೌಡರ ಆಸಕ್ತಿ, ಜನ-ಜ್ಞಾನದಾನ ಪರ ನಿಲುವಿಗೆ
ಮಾರುಹೋದ ಸ್ಥಳೀಯ ಶಾಸಕರು ಮತ್ತು ಖೋಡೇ ಔದ್ಯಮಿಕ ಸಂಸ್ಥೆಯ ಸಹಾಯದಿಂದ ಒಂದು ಟಾಕೀಸಿನ ಛಾವಣಿಯಡಿ
ಪುಸ್ತಕಗಳ ವರ್ಗೀಕರಣ ಪ್ರಾರಂಭವಾಗಿದೆ.
ಇಲ್ಲಿಗೆ ನಮ್ಮ ಭೇಟಿ ಆಗಿದ್ದು ನಿಜಕ್ಕೂ ಒಂದು ಮರೆಯಲಾಗದ ಮತ್ತು
ಧನ್ಯ ಅನುಭವ. ಇದಕ್ಕೆ “ನಮ್ಮೊಳಗೊಬ್ಬ ’ಬಾಲು’” ಹಾಗೂ ಪ್ರಕಾಶ್ ಹೆಗ್ಗಡೆ (ಇಟ್ಟಿಗೆ ಸಿಮೆಂಟ್)
ಕಾರಣೀಭೂತರು, ನಮ್ಮ ಹೃದಯಪೂರ್ವಕ ಧನ್ಯವಾದ ಈ ಮಿತ್ರರಿಗೆ.
ಅಂಕೇಗೌಡರ ಜ್ಞಾನದೇಗುಲದ ವಿಳಾಸ:
ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ,
ಪಾಂಡವಪುರ ತಾಲುಕ್, ಮಂಡ್ಯ ಜಿಲ್ಲೆ
ದೂರವಾಣಿ: 9242822934.
ಮಾನವನಾಗಿ ಹುಟ್ಟಿ ಪ್ರಾಣಿ ಪಕ್ಷಿಗಳಂತೆ ಜೀವಿಸದೇ, ಹೆತ್ತವರ, ಹೊತ್ತನೆಲದ ಮತ್ತು ಸಮಾಜದ ಹಿತಕಾಗಿ ಏನಾದರೂ ಮಾಡಲೇಬೇಕಾಗಿರುವುದನ್ನು ಎಲ್ಲರೂ ಮನಗಾಣಬೇಕು, ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವ ಉತ್ಕಟಾಕಾಂಕ್ಷೆಯ ಅಂಕೇಗೌಡರ ವ್ಯಕ್ತಿತ್ವ ನಿಜಕ್ಕೂ ಅನುಕರಣೀಯ, ನಮನೀಯ, ಶ್ಲಾಘನೀಯ.
ಪುಸ್ತಕಾಲಯಕ್ಕೆ ಭೇಟಿ ನೀಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಮ್.ಎನ್ ವೆಂಕಟಾಚಲಯ್ಯನವರು "ಪುಸ್ತಕ ಪ್ರೇಮಿ ಅಂಕೇಗೌಡರು ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು. ಈ ಪುಸ್ತಕಾಲಯವು ಭೂಮಿಯ ಮೇಲಿನ ಸಾರಸ್ವತ ಜ್ಞಾನಲೋಕವೆನಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.
ಒಡಿಶಾದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾ.ಮೂ. ವಿ. ಗೋಪಾಲ ಗೌಡರು ಅಂಕೇಗೌಡರ ಪುಸ್ತಕಾಲಯ ಕಂಡು ನಿಬ್ಬೆರಗಾಗಿ "ಅಂಕೇಗೌಡರ ಪುಸ್ತಕ ಸಂಗ್ರಹದ ಸಾಧನೆ ಅಮೋಘವಾದುದು, ಇಂಥ ಅಮೂಲ್ಯವಾದ ಜ್ಞಾನ ಭಂಡಾರಕ್ಕೆ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಜ್ಞಾನ ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ" ಎಂದು ಹೇಳಿದ್ದಾರೆ.
ಗೌಡರ ಜ್ಞಾನದಾನದ ಈ ಅಭೂತಪೂರ್ವ ಮಾರ್ಗವನ್ನು, ಅವರ ಆಸಕ್ತಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ೫೦ ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ.
ಅಂಕೇಗೌಡರ ಜ್ಞಾನದೇಗುಲದ ವಿಳಾಸ:
ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ,
ಪಾಂಡವಪುರ ತಾಲುಕ್, ಮಂಡ್ಯ ಜಿಲ್ಲೆ
ದೂರವಾಣಿ: 9242822934.
ಮಾನವನಾಗಿ ಹುಟ್ಟಿ ಪ್ರಾಣಿ ಪಕ್ಷಿಗಳಂತೆ ಜೀವಿಸದೇ, ಹೆತ್ತವರ, ಹೊತ್ತನೆಲದ ಮತ್ತು ಸಮಾಜದ ಹಿತಕಾಗಿ ಏನಾದರೂ ಮಾಡಲೇಬೇಕಾಗಿರುವುದನ್ನು ಎಲ್ಲರೂ ಮನಗಾಣಬೇಕು, ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವ ಉತ್ಕಟಾಕಾಂಕ್ಷೆಯ ಅಂಕೇಗೌಡರ ವ್ಯಕ್ತಿತ್ವ ನಿಜಕ್ಕೂ ಅನುಕರಣೀಯ, ನಮನೀಯ, ಶ್ಲಾಘನೀಯ.
ಪುಸ್ತಕಾಲಯಕ್ಕೆ ಭೇಟಿ ನೀಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಮ್.ಎನ್ ವೆಂಕಟಾಚಲಯ್ಯನವರು "ಪುಸ್ತಕ ಪ್ರೇಮಿ ಅಂಕೇಗೌಡರು ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು. ಈ ಪುಸ್ತಕಾಲಯವು ಭೂಮಿಯ ಮೇಲಿನ ಸಾರಸ್ವತ ಜ್ಞಾನಲೋಕವೆನಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.
ಒಡಿಶಾದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾ.ಮೂ. ವಿ. ಗೋಪಾಲ ಗೌಡರು ಅಂಕೇಗೌಡರ ಪುಸ್ತಕಾಲಯ ಕಂಡು ನಿಬ್ಬೆರಗಾಗಿ "ಅಂಕೇಗೌಡರ ಪುಸ್ತಕ ಸಂಗ್ರಹದ ಸಾಧನೆ ಅಮೋಘವಾದುದು, ಇಂಥ ಅಮೂಲ್ಯವಾದ ಜ್ಞಾನ ಭಂಡಾರಕ್ಕೆ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಜ್ಞಾನ ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ" ಎಂದು ಹೇಳಿದ್ದಾರೆ.
ಗೌಡರ ಜ್ಞಾನದಾನದ ಈ ಅಭೂತಪೂರ್ವ ಮಾರ್ಗವನ್ನು, ಅವರ ಆಸಕ್ತಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ೫೦ ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ.
ಅಂಕೇಗೌಡರ ಮನದ ಎಲ್ಲಾ ಇಚ್ಛೆಗಳನ್ನೂ ಪೂರ್ಣಗೊಳಿಸಿ ನಾಡಿನಲ್ಲೇ ಏಕೆ ಇಡೀ
ದೇಶದಲ್ಲೇ ವ್ಯಕ್ತಿಯೊಬ್ಬರ ಪ್ರಯತ್ನಫಲದ ಅಪೂರ್ವ ಪುಸ್ತಕಾಲಯವಾಗಿ ಅಂಕೇಗೌಡ ಪುಸ್ತಕ
ಪ್ರತಿಷ್ಠಾನ ರೂಪುಗೊಳ್ಳಲಿ ಎಂದು ನಾವೆಲ್ಲಾ ಹಾರೈಸೋಣ ಮತ್ತು ಈ ನಿಟ್ಟಿನಲ್ಲಿ ನಮ್ಮಿಂದಾಗುವ
ಸಹಾಯಕ್ಕೆ ಮುಂದಾಗೋಣ.. ಏನೆನ್ನುವಿರಿ ಸ್ನೇಹಿತರೇ..??
Saturday, June 2, 2012
ಸ್ನೇಹಿತರೇ, ಇದೊಂದು ಹೊಸ ಪ್ರಯೋಗ, ನಿಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಇದ್ದರೆ ಮುಂದುವರೆಸುವ ಯೋಚನೆಯಿದೆ. ಇದಕ್ಕೆ "ಬಟಾಣಿ-ಚಿಕ್ಕಿ" ಎಂದು ಹೆಸರಿಸಿದ್ದೇನೆ. ಇಲ್ಲಿ ಒಂದು ಮೂಲ ವಿಷಯ ಮತ್ತು ಅದರಲ್ಲಿ ಸಣ್ಣ ಸಣ್ಣ ಸ್ವತಂತ್ರ ಭಾವ ತುಣುಕುಗಳು. ಕವನ ಶೀರ್ಷಿಕೆ ಜತೆ-ಬಟಾಣಿ ಚಿಕ್ಕಿ
ಇಲ್ಲಿ ಒಂದು ಮಾದರಿ ನಿಮ್ಮ ಮುಂದೆ
ನೋಡವಳಂದಾವ-ಬಟಾಣಿ ಚಿಕ್ಕಿ: ಕವನ ಹೆಣ್ಣಿನಂದವನ್ನು ಕುರಿತಾಗಿದ್ದು ಚೂರುಗಳಲ್ಲಿ ಸ್ವತಂತ್ರ ಭಾವ ಪ್ರಕಟಣೆ..."ಕಣ್ಣ ಹೊಳಪು", "ಖೆಡ್ಡಾ-ಗುಳಿ", ಇತ್ಯಾದಿ.....
ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಸ್ವಾಗತ.
ನೋಡವಳಂದಾವ – ಬಟಾಣಿ ಚಿಕ್ಕಿ
ಕಣ್ಣ ಹೊಳಪು
ಆ ಕಣ್ಣು ಏಕೋ ಏನೋ ಎಂಥಾ ಹೊಳಪು
ಹೃದಯ ಚುಚ್ಚಿಬಿಡುವುದೀ ಬಾಣ ಎಂಥಾ ಚೂಪು
ಖೆಡ್ಡಾ-ಗುಳಿ
ನಕ್ಕರವಳು ಮುತ್ತಿನಂಥ ಮೋಹಕ ಕೆನ್ನೆಕುಳಿ
ಉರುಳಿಸಲು ಸಾಕು ಅದುವೇ ಖೆಡ್ದದ ಗುಳಿ
ಹುಬ್ಬು-ಗತ್ತಿ
ಹುಬ್ಬು ತೀಡಿ ತಂದು ಮುಖಕೆ ಮೆರುಗು
ಕೊಲ್ಲಲೆಂದೇ ಝಳಪು ಬಂತೇ ಆ ಕತ್ತಿಗಲಗು
ಬಳುಕು-ಛಳುಕು
ನಡೆ, ಜಡೆ ಸೊಂಟ ಬಳಕು ಉಫ್..ಆ ಥಳುಕು
ಅದುರು ಛಳಿಯಲ್ಲೂ ಅದು ಬೆವರಿಳಿಸೋ ಛಳುಕು
ಕೋಗಿಲೆ-ಉಲಿಕೆ
ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ
ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ
ಜಡೆ-ಹೆಡೆ-ಕೊಡೆ
ನೀಳಗಪ್ಪು ಬೆನ್ನ ಹಿಂದೆ ಜಾರಿ ಬಿದ್ದ ಹಾವಿನಂಥ ಜಡೆ
ಕೇಶರಾಶಿ ಹರಡಿಕೊಂಡ್ರೆ ಆದೀತು ಅದುವೇ ಕೊಡೆ
ಕೆಂಪು ನೀರೆ
ನಾಚಿ ನೀರು ಕೆನ್ನೆಗೆಂಪು ನೆಲವ ಕೆರೆವ ಬೆರಳು
ನನಗಿದು ನಿತ್ಯಸತ್ಯ ನೀನಾಗಬೇಡ ಬೆಪ್ಪೆ ಮರಳು
Monday, May 21, 2012
ನಂಗೊತ್ತಿಲ್ಲ ಮಗಾ
ನಂಗೊತ್ತಿಲ್ಲ ಮಗಾ
ಪುಟ್ಟಾ..ಏನ್ಲಾ ಮಾಡ್ತಿದ್ದಿಯಾ?
ಏನಿಲ್ಲಪ್ಪಾ.. ಒಸಿ ಟೀವಿ ನೋಡ್ತಾ ಇವ್ನಿ,,, ತೋಳ ಬಂತು
ತೋಳ ಟೀವಿನಾಗೆ ಕತೆ ಬತ್ತಾ ಐತೆ
ಅಪ್ಪಾ..ಒಂದ್ಯಿಸ್ಯ..... ಅಲ್ಲಾ ಆ ಹೈದ ಸುಮ್ ಸುಮ್ನೆ
ಯಾಕೆ ಆಟೊಂದ್ ಕಿತ ಅಳ್ಳಿ ಜನ್ಗೊಳ್ನ ’ತೋಳ ಬಂತಪ್ಪೋ ತೋಳ’ ಅಂತ ಎದಿರ್ಸಿದ್ದು.... ಅದ್ಕೇಯಾ
ನಿಜ್ಕೂ ತ್ವಾಳ ಬಂದ್ರೂ ಯಾರೂ ಸಾಯಕ್ಬರ್ನಿಲ್ಲ
ಊಂ ಕಣ್ಮಗ, ಅದ್ಕೇ ಯೋಳೋದು ಒಂದಪ ಸುಳ್ ಯೋಳಿದ್ರೂ
ಓಗ್ಲಿ ಬಿಡು ಏನೋ ತಪ್ಪಾಗ್ಯದೆ ಅಂತ ಮನ್ನಿಸ್ತಾರೆ...ಕಿತಾ ಕಿತಾ ಅಂಗೇ ಮಾಡಿದ್ರೆ..ಅದ್ನ ಜನ
ಅಚ್ಕೊಳ್ಳೊಲ್ಲ...ಅಂತವ್ರನ್ನ ನಂಬಾಕೂ ಓಗಲ್ಲ...
ಊಂ... ನಮ್ಮಾಜಿ ಮುಮಂ ಗ್ಳೂ ಆಟೊಂದು ಒಳ್ಳೆ ಎಸ್ರ್
ಮಾಡಿದ್ರು, ಜನ ಆಸೀರ್ವಾದಾನೂ ಮಾಡಿದ್ರು..... ಈ ಪಾಟಿ ತಮಾಸಿ ಮಾಡಿ ಜನಾನ ಯಾಮರ್ಸಿ .. ಈವಾಗ
ಅಯ್ಯೋ ತ್ವಾಳ ಬಂದೈತಿ ನನ್ಕಾಪಾಡ್ರಿ ಅಂದ್ರೆ...ಯಾರೂ ನಂಬಾಕಿಲ್ಲ ಅಲ್ವಾ???
ಅಲ್ವಾ ಮತ್ತೆ.. ಜನಾನೂ ಶ್ಯಾನೆ ಬುದ್ದಿ
ಕಲ್ತ್ಕಂಡವ್ರೆ... ಶ್ಯಾಲೆ, ದುಡ್ಡು, ಎಂಡ, ಇಂತಾವೆಲ್ಲಾ ಈಸ್ಕೊಂಡೂ...ಒತ್ತೋ ಕಡೆ ಓಟ್
ಒತ್ತಾಕೋ ಮಟ್ಟಕ್ ಬಂದವ್ರೆ... ತ್ವಾಳ ಅಂತ
ಅಂದ್ಕಂಡು ಕುರಿ ಬಂಡ ಕತ್ತರ್ಸಿ ಮಾರ್ಕೊಂಡು, ಬಲ್ತ್ ಮ್ಯಾಲೆ ಕಟ್ಕನ್ಕೊಟ್ಟು ದುಡ್ಮಾಡೋ ಕುರಿ ಕಾಯೊರ್ನ ನಂಬಾಕಿಲ್ಲ...
ಆದ್ರೆ...ಅವರು ನಾನು ಬೋ ಸಾಚಾ, ಬೇಕಾದ್ರೆ ಸ್ವಾಮಿಗಳ್ನ
ಕೇಳಿ ಅಂತ ಯೋಳ್ತಾರಲ್ಲಾ... ಸ್ವಾಮ್ಗೋಳು ಶಾಮೀಲಾ ಅಂಗಾರೆ...?
ನಂಗೊತ್ತಿಲ್ಲ ಮಗ
Saturday, May 5, 2012
ಕಾಯ್ತಾ ಇವ್ನಿ ಬತ್ತದಾ ಮಳೆ...???
Foto: Internet
ಕಾಯ್ತಾ ಇವ್ನಿ ಬತ್ತದಾ ಮಳೆ...???
ಅಪ್ಪ ಯೋಳ್ತಿದ್ದ – ಯಪ್ಪಾ ಯಾ ಪಾಟಿ ಮಳೆ!!
ತೊಯ್ದು ತೊಯ್ದು ಬುರ್ದೆ ಆಗ್ಬುಟ್ಟೈತೆ ಇಳೆ
ಕೆರೆ ಕೋಡಿ ಓಯ್ತಿತ್ತಂತೆ, ಒಂದೇ ವಾರದಲ್ಲಿ
ದಾಟೋಕೋದ ಕುರಿ ದನ ಕೊಚ್ಚೋಗ್ನೀರಲ್ಲಿ.
ವಾರದಿಂದ ಮುದ್ಕ ಆಕಾಸ ನಿಟ್ಟಿಸ್ತಾ ಇರ್ತಾನೆ
ಯಪ್ಪೋ ಒಳೀಕ್ಬಾ, ಬೋ ಬಿಸ್ಲು ಸೂರ್ಯ ಸುಡ್ತಾನೆ
ನನ್ಮಾತು ಕೇಳಾಂಗಿಲ್ಲ ರೈತನ್ಮನ್ಸು ರೋಸಿದ್ರೆ ಇಂಗೆ
ಯೋಳ್ತಾನೆ ಮೂರ್ನೇ ವರ್ಸ ಬರ್ಗಾಲ ಬಂದ್ರೆ ಎಂಗೆ?
ಬೋ ..ಅಂತ ಅರ್ಚೋದು ದನ್ಗೋಳು ದನದಟ್ಟಿಲಿ
ಒಟ್ಟೆ ಬೆನ್ತಾಕೈತೆ ಕುರಿಗೋಳು ಬಡ್ವಾಗವೆ ಕುಂತಲ್ಲಿ
ಗೌಡಂಗೆ ಅಂಬ್ಲಿ ದಾಸೋವ ಮಾಡಾಕೆ ಯೋಸ್ನೆನಂತೆ
ಅಕ್ಪಕ್ಕದ್ ಅಳ್ಳಿ ಬಡ್ಮಕ್ಳು ಮಂದಿ ಬತ್ತಾರೆ ಸಂತೆ ಸಂತೆ
ಬಡ್ಕಲಾಗಿರೋ ನಾಗೇಸಾ ಮಂಡ್ರಾಯ್ನ್ ಎತ್ಕಂಬಂದ
ಸಿದ್ದೇಸ ಮಂಗ್ಳಾರ್ತಿ ಎತ್ತೋದು ಐಕ್ಳು ಕುಣ್ಯೊದ್ಚಂದ
ಉಯ್ಯೋ ಉಯ್ಯೋ ಮಂಡ್ರಾಯ ಬಾಳೆ ತ್ವಾಟಕ್ನೀರಿಲ್ಲ
ಉಯ್ಯೋ ಉಯ್ಯೋ ಮಂಡ್ರಾಯ ಬತ್ತ ಒಣ್ಗಿ ಓಯ್ತಲ್ಲಾ
ಇದ್ಕಿದ್ದಂಗೆ ಮಟ್ಮಟ ಮದ್ಯಾನ್ನ ಕವ್ಕಂಬತ್ತು ಕತ್ಲಾ
ಮಲ್ಗಿದ್ದಪ್ಪ ಎದ್ದ ಕುಸ್ಕುಸಿ, ಕೂಗ್ದ ಎಂಕ್ಟ ಮಳ್ಬತ್ಲಾ
ಅವ್ಮಾನ ಇಲಾಕೆವ್ರು ಅಂದವ್ರೆ ವಾರಪೂರಾ ಇಂಗೇ
ಅಪ್ಪಾಂದ ಬಾಲಾ ನನ್ಮೀಸೆಯೂ ಬೆಳ್ಗಾಗಿಲ್ಲ ಅಂಗೇ
ನೋಡ್ತಾ ನೋಡ್ತಾ ಕಪ್ಮೋಡ ಕವ್ಕೊಂಡ್ವು ಆಕಾಸಾ
ದಪ್ ದಪಾ ಬಿತ್ತು ಅನಿ ನೋಡೀ ಕುಸೀನಾ ಎಂಕ್ಟೇಸಾ?
ಬಿರ್ದಿದ್ ನೆಲ ಸೊಳ್ ಅಂತ ಈರ್ಕೊಳ್ತು ಬಿದ್ದಿದ್ದನಿ
ಘಮ್ ಅಂತು ಮಣ್ ವಾಸ್ನೆ, ಓಣಿತುಂಬಾ ಅಪ್ಪಂದನಿ
ಗುಡ್ಗು, ಸಿಡ್ಲು, ದೋ ಮಳೆ, ಕುಣೀತು ಅಪ್ಪನ್ಬಿಳಿ ಮೀಸೆ
ಅಂದ ಮಾಡಮ್ಮೀ ಮೆಣ್ಸಿನ್ ಕಾಯ್ ಬಜ್ಜಿಗಾಗೈತೆ ಆಸೆ
ಸಂಜೆ ಗಂಟ ಬುಡ್ನೇ ಇಲ್ಲ ಸುರೀತಾನೇ ಇತ್ತು ಮಳೆ
ಆಕಾಸ್ದಾಗೂ ಕಮ್ಮೀನೇ ಆಗ್ಲಿಲ್ಲ ಕವ್ದಿದ್ಮೋಡದ್ ಬೆಳೆ
Sunday, April 15, 2012
ಎದೆಯ ಮಿಡಿತ (ಮತ್ತೊಂದು ಕರವೋಕೆ)
ದಿಲ್ ತಡಪ್ ತಡಪ್ ಕೆ ಕೆಹ್ ರಹಾ ಹೈ...
ಚಿತ್ರ: ಮಧುಮತಿ, ಸಂಗೀತ: ಸಲೀಲ್ ಚೌಧರಿ, ಗಾಯಕರು: ಮುಖೇಶ್,
..........ಎದೆಯ ಮಿಡಿತದ ಹಿಡಿತ...........
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss.../೨/
ನೀನೇ ಇರದ ಮರದ ತಂಪ ಸೊಂಪು ಸೋತಿದೇss
ಸುಮದ ಮಧುರ ಸುಧೆಯ ಇಂದು ಬನವು ಬಯಸಿದೇss /ನೀನೇ ಇರದ/
ಇಂದು ಬನವು ಬಯಸಿದೆ /೨/ (ಗಂಡು
ದನಿ)
ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ../೨/
ನೀನು ಬಂದು ನನ್ನ ಜೀವ ಹಿತವ ಕಂಡಿದೇ
ಜೀವಿಸಿಹೆನು ನಿನ್ನ ಪ್ರೀತಿ ಉಸಿರ ತುಂಬಿದೇ..ss /ನೀನು ಬಂದು/
ಪ್ರೀತಿ ಉಸಿರ ತುಂಬಿದೇ/೨/
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss... (ಗಂಡು ದನಿ)ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ (ಹೆಣ್ಣು ದನಿ)
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ..
ಮುಗುಳು ನಗೆಯ ಬೀರೋ ನಿನ್ನ ಸೊಬಗು ಇಲ್ಲಿದೇ..
ನಾನು ಎಲ್ಲೋ ಹೃದಯವೆಲ್ಲೋ ಒಂದೂ ತಿಳಿಯದೇ ss.../೨/ (ಗಂಡು ನಂತರ ಹೆಣ್ಣು ದನಿ)
ಎಲ್ಲೋ ಒಂದೂ
ತಿಳಿಯದೇ../೨/
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss... (ಗಂಡು)ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss .. (ಹೆಣ್ಣು)
Subscribe to:
Posts (Atom)



