Thursday, October 1, 2009

ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!!

ಸಿತಾರಾಂ ರವರ ಬ್ಲಾಗ್ ಓದಿ ನನ್ನ ಅನುಭವವನ್ನು ಹಂಚಿಕೊಳ್ಳಬೇಕೆನಿಸಿತು ಅದಕ್ಕೇ ಈ ಪೋಸ್ಟ್....
ಆದರೆ ನನ್ನ ಅನುಭವವೇ ಬೇರೆ. ನಾನು ಮೊದಲಿಗೆ ನೌಕರಿ join ಆಗಲು ಮಣಿಪುರಕ್ಕೆ ಹೋಗಿತ್ತಿದ್ದೆ. ಗೌಹಾತಿಯಿಂದ ದೀಮಾಪುರಕ್ಕೆ ಬೇರೆ ಟ್ರೈನನ್ನು ಹಿಡಿದು ಲೇಟಾಗಿ ತಲುಪಿದರಿಂದ ಆ ದಿನದ ಮಣಿಪುರಕ್ಕೆ ಹೋಗುವ ಬಸ್ಸುಗಳು ಹೋಗಿಯಾಗಿತ್ತು (ಬೆಳಿಗ್ಗೆ ೭.೩೦ ಒಳಗೆ ಬಸ್ ಸಿಗದಿದ್ದರೆ ಮತ್ತೆ ಮರು ದಿನವೇ). ಸರಿ ಅಲ್ಲಿಯೇ ಇದ್ದ ಸದರ್ನ ಹೋಟೆಲ್ (ಮದ್ರಾಸಿ ಹೋಟೆಲ್ ಅಂತಲೇ ಅದು ಪ್ರಸಿದ್ಧಿ) ನಲ್ಲಿ ರೂಂ ತಗೊಂಡೆ. ಆಗಲೇ ..ಈ ಗೋಪಾಲ ಅನ್ನುವವರ ಪರಿಚಯ ಆಗಿದ್ದು ..ಅವರು ತೀನ್ಸುಕಿಯಾ (ಪೂರ್ವ ಅಸ್ಸಾಂ) ಗೆ ಹೋಗಬೇಕಿತ್ತಂತೆ..ಆದ್ರೆ ದೀಮಾಪುರದಲ್ಲಿ ಇಳಿವಾಗ ಅವರ ಒಂದು ಬ್ಯಾಗನ್ನು ಯಾರೋ ಲಪಟಾಯಿಸಿದ್ದರಂತೆ..ವಾಪಸ್ ಟಿಕೆಟ್ ಸಹಾ ಬ್ಯಾಗಲ್ಲಿದ್ದು ಈಗ ವಾಪಸ್ಸಿಗೆ ಹಣ ಮತ್ತು ಟಿಕೆಟ್ ಇರಲಿಲ್ಲವಂತೆ..ಅವರು ನಾಗಮಂಗಲ (ಮಂಡ್ಯ) ಕಡೆಯವರು ತಮ್ಮ ತಮ್ಮನನ್ನು ನೋಡಲು ಹೋಗುತ್ತಿದ್ದುದು..ಮುನ್ನೂರು ರೂಪಾಯಿ ಕೊಡಿ ನನ್ನ ರಿಟರ್ನ್ ಟಿಕೆಟ್ ಮಾಡಿಸಿಕೊಂಡು ನನ್ನ ತಮ್ಮನ ಬಳಿ ಹಣ ತಗೊಂಡು ನಿಮಗೆ ಕಳುಹಿಸುತ್ತೆನೆ..ಅಂತ.. ಸರಿ ಕನ್ನಡಿಗರು ಅನ್ನೋ ಒಂದೇ ಕಾರಣಕ್ಕೆ (ದೂರದ ಊರಲ್ಲಿ ಕನ್ನಡ ಕೇಳಿಯೂ ಇರಬೇಕು) ನನ್ನ ಮಣಿಪುರದ ಆಡ್ರೆಸ್ ಸಹಾ ಕೊಟ್ಟೆ. ಮಾತನಾಡುತ್ತಾ ನನ್ನ ಹೊಸ ಕೆಲಸದ ಬಗ್ಗೆಯೂ ಹೇಳಿದ್ದೆ. ಸರಿ ..ಆ ಹಣದ ವಿಚಾರ ಎರಡು ತಿಂಗಳ ನಂತರ ಮರೆತೇ ಹೋಯಿತು..ನೀವು ಹೇಳಿದರಲ್ಲಾ ಹಾಗೇ ..ಇದು ನಡೆದದ್ದು ೧೯೮೬ ಮಾರ್ಚ್ ೧೯ರಂದು. ಮುಂದೆ..೧೯೮೬ರ ಡಿಸೆಂಬರ್ ನಲ್ಲಿ ಊರಿಗೆ ಅಕಸ್ಮಾತ್ ಹೋಗಬೇಕಾಗಿ ಬಂತು.. ಕಲ್ಕತ್ತಾವರೆಗೆ ಫ್ಲೈಟ್ ನಲ್ಲಿ ಹೋಗಿ ಅಲ್ಲಿಂದ ಟ್ರೈನ್ ಹಿಡಿಯುವ ಎಂದುಕೊಂಡೆ ಆದರೆ ಅಷ್ಟು ಹಣವಿರಲಿಲ್ಲ..ಸಂಬಳಕ್ಕೆ ಕಾಯುವ ಸಮಯವಿಲ್ಲ...ನನ್ನ ಸ್ನೇಹಿತರಲ್ಲಿ ಕೇಳಿ ತೆಗೆದುಕೊಳ್ಳೋಣ ಎಂದುಕೊಳ್ಳುವಾಗ ಮನಿ ಆರ್ಡರ್ ಬಂತು.ಗೋಪಾಲ್ ಅನ್ನೋರು ೫೦೦ ರೂಪಾಯಿ ಕಳುಹಿಸಿದ್ದಾರೆ ಎಂದ ಪರಿಚಯವಾಗಿದ್ದ ಪೋಸ್ಟ್ ಮ್ಯಾನ್. ನನಗೆ ನೆನಪೇ ಹೋಗಿತ್ತು..ನಂತರ ನೆನಪಾಯ್ತು..ಆದ್ರೆ ಇದೇನು ಸುಮಾರು ೮-೯ ತಿಂಗಳು ಬೇಕಾಯ್ತೇ ? ಕೇಳಿದೆ..ಆಗ ಪೋಸ್ಟ್ ಮ್ಯಾನ್ ಸಾರ್...ಈ ನಿಮ್ಮ ಮನಿಆರ್ಡರ್ ಪೂರ್ತಿ ಪೂರ್ವೋತ್ತರ ಏಳು ರಾಜ್ಯ ನೋಡಿ ಬಂದಿದೆ ಎಂದು ಅದರ ಮೇಲಿದ್ದ ಸೀಲುಗಳನ್ನೆಲ್ಲ ತೋರಿಸಿದ... ನಂತರ ತಿಳಿಯಿತು, ಗೋಪಾಲ್ ನನ್ನ ಆಡ್ರೆಸ್ ಚೀಟಿಯನ್ನು ಕಳೆದುಕೊಂಡಿದ್ದರಂತೆ...ಬರೀ ಹೆಸರು ಅದರಲ್ಲೂ ಪೂರ್ತಿ ಇಲ್ಲ ಆಜಾದ್, scientist, ICAR, Dimapur. ದಿಮಾಪುರ್ ಗೆ ಬಂದ MO ಅಲ್ಲಿನವರು ನಾಗಾಲ್ಯಾಂಡ್ ನ ನಮ್ಮ ICAR ಗೆ ಕಳುಹಿಸಿದರಂತೆ..ಅವರು ಇಲ್ಲಿ ಯಾರೂ ಇಲ್ಲ ಬಹುಷಃ ಇದು ಅರುಣಾಚಲ ICAR ಕೇಂದ್ರದ್ದಿರಬೇಕು ಅಂತ ರೀ ಡೈರೆಕ್ಟ್ ಮಾಡಿದ್ದರಂತೆ..ಅಲ್ಲಿ ಹೊಸದಾಗಿ ಸೇರಿದ್ದ ನನ್ನಂತಹ ಮಿತ್ರರೊಬ್ಬರು ನಮ್ಮ ICAR North-East ಮುಖ್ಯ ಕಚೇರಿ, ಷಿಲಾಂಗಿಗೆ redirect ಮಾಡಿದ್ದಾರೆ..ಅಲ್ಲಿ ನನ್ನ ವಿವರ ತಿಳಿದಿದ್ದರಿಂದ ಮತ್ತೆ redirect ಆಗಿ ಮಣಿಪುರಕ್ಕೆ ಬಂದಿತ್ತು.....!!!! ಅವರಿಗೆ ನನ್ನಿಂದ ೩೦೦ ತೆಗೆದುಕೊಂಡಿದ್ದೂ ಗೊತ್ತಾಗದೇ..೫೦೦ ಕಳುಹಿಸಿದ್ದರು..ಅವರ Adress ಇದ್ದಿದರಿಂದ ನಾನು ಬೆಂಗಳೂರು ತಲುಪಿದ ಮೇಲೆ..ಆ ೨೦೦ ರೂಪಾಯಿಯ ಜೊತೆಗೆ ದೊಡ್ದದೊಂದು ಪತ್ರ ಬರೆದೆ...ಮೊನ್ನೆ ಮೊನ್ನೆವರೆಗೂ ಅವರು letter ಬರೆಯುತ್ತಿದ್ದರು....
ಹೇಗೆ..?? ಎಲ್ಲಾ..ಹೀಗೇ...ಇರಬೇಕೆಂದೇನೂ ಇಲ್ಲವಲ್ಲ....??!! ನನಗೆ ಇನ್ನೊಂದು ಸ್ನೇಹಿತರಲ್ಲಿ ಹೆಮ್ಮೆಯಾಗುವಂತೆ ಮಾಡಿದ ವಿಷಯ ಅವರು ಕನ್ನಡಿಗರು ಎಂಬುದು.

28 comments:

 1. ತುಂಬ ಚೆನ್ನಾಗಿದೆ...ಒಳ್ಳೆ ಜನ ಇದ್ದೆ ಇದ್ದಾರೆ...
  ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು....

  ReplyDelete
 2. ಆಝಾದ್ ಸರ್...

  ನೀವೆನ್ನುವದೂ ನಿಜ...
  ಎಲ್ಲರೂ ಹಾಗೆ ಇರಬೇಕೆಂದೇನೂ ಇಲ್ಲ...

  ಹೀಗೂ ಇರುತ್ತಾರೆ...

  ಒಬ್ಬರಿಂದ ಒಬ್ಬರು ಸ್ಪೂರ್ತಿ ಪಡೆದು ಬರೆಯುವದು ಬ್ಲಾಗಿಗರ ಒಳ್ಳೆಯ ..
  ಆರೋಗ್ಯಕರವಾದ ವಾತಾವರಣವನ್ನು ಸೂಚಿಸುತ್ತದೆ...
  ಇದು ಇನ್ನಷ್ಟು ಆಗಲಿ...

  ಅಭಿನಂದನೆಗಳು ಆಝಾದ್ ಸರ್...

  ನೀವು ಅಲ್ಲೂ ಸಹ ಕನ್ನಡಿಗರನ್ನು ಕಂಡಿದ್ದು ಹೆಮ್ಮೆ ಅನಿಸಿತು...

  ReplyDelete
 3. ಈ ತರಹದ ಲೇಖನಗಳು ಬೇಕೆ ಬೇಕು... ಇಂತಹ ಜನರು ಇರುವುದರಿಂದಲೇ ಒಳ್ಳೆಯತನ ಅನ್ನುವುದು ಉಳಿದಿರುವುದು....

  ReplyDelete
 4. ಒಳಿತು ಕೆಡುಕು ಒಂದೇ ನಾಣ್ಯದ ಎರಡು ಮುಖಗಳಿದ್ದಂತೇ. ಕೆಲವರು ಒಂದೇ ಮುಖವನ್ನು ಮಾತ್ರ ಕಂಡಿರುತ್ತಾರೆ. ಇನ್ನು ಕೆಲವರು ಎರಡೂ ಮುಖಗಳ ಪರಿಚಿತರು. ಒಂದೇ ಮುಖ ಕಂಡವರಿಗೆ ಇನ್ನೊಂದು ಮುಖ ಕಾಣಲು ಅಂತಹ ಸಮಯ ಒದಗಬೇಕಷ್ಟೇ. ಎಲ್ಲವುದಕ್ಕೂ ಕಾಲವೇ ಉತ್ತರ. ಪ್ರಾಮಾಣಿಕತೆಯಿಂದ ನಿಮಗೆ ಅವರು ಕಳುಹಿಸಿದ ಹಣ ಬಹು ಅಮೂಲ್ಯವೇ ಸರಿ.

  ReplyDelete
 5. ತುಂಬಾ ಚೆನ್ನಾಗಿದೆ,,
  ಹೌದು,, ಒಳ್ಳೆಯವರು ಎಲ್ಲಾ ಕಡೆಯೂ ಇರುತ್ತಾರೆ..
  ಈ ತರದ ಅನುಭವಗಳು ಪ್ರಪಂಚದಲ್ಲಿ ಇನ್ನೂ ಮಾನವೀಯತೆ ಉಳಿದಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತವೆ..
  ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

  ReplyDelete
 6. ಮಹೇಶ್, ನಾವು ಒಳ್ಳೆಯದನ್ನು ಮಾದಬೇಕೆನ್ನಬೇಕಾದರೆ..ಕೆಲವೇ ಆದರೂ ಸರಿಯೇ..ಧನಾತ್ಮಕಗಳನ್ನು ನೋಡಬೇಕಂತೆ...ಋಣಾತ್ಮಕಗಳನ್ನಲ್ಲ.

  ReplyDelete
 7. ಪ್ರಕಾಶ್ ನಿಮ್ಮ ಮಾತು ಸತ್ಯ್...ನನಗೆ ನನ್ನ (ಪ್ರಾಥಮಿಕ) ಗುರು ಹೇಳಿದ್ದ ಮಾತು ನೆನಪಾಯ್ತು ನಿಮ್ಮ ಮಾತು ಕೇಳಿ...ನೀನು ಸಾಧಿಸಬೇಕಾದ್ದನ್ನು..ನಿನಗಿಂತ ಮೇಲಿರುವ ಹೆಚ್ಚುಸಾಧಿಸಿರುವವರನ್ನು ನೋಡಿ ನಿರ್ಧರಿಸಿಕೋ, ನಿನ್ನಲ್ಲಿ ಧನ್ಯತಾ ಭಾವ ಬರಬೇಕೆಂದರೆ ನಿನಗಿಂತ ಹೀನ ಸ್ಥಿತಿಯವನನ್ನು ನೋಡು ಎಂದು...ಬಹುಶಃ ನಮ್ಮನ್ನು ವಂಚಿಸಿದವರನ್ನು ಉದಹರಣೆಯಾಗಿಟ್ಟುಕೊಂಡು ಎಲ್ಲಾ ಹೀಗೇ ಎನ್ನುವುದಕ್ಕಿಂತ ಕೆಲವರು ಹೀಗೇ ಎಂದೂ...ಕೆಲವೇ ಒಳ್ಳೆಯಗುಣವಂತರಿದ್ದರೂ ಅವರನ್ನೇ ಉದಹರಿಸುವುದು ಒಳ್ಳೆಯದು...

  ReplyDelete
 8. ಮನಸು ಮೇಡಂ...ನೀವು ಹೇಳೋದು ಖರೆ...ನಕಾರಾತ್ಮಕಗಳನ್ನು ಹೇಳಿ ನಮ್ಮನ್ನು ಎಚ್ಚರಿಸುವುದು ಎಷ್ಟು ಮುಖ್ಯವೇ ಅದಕ್ಕಿಂತ ಮುಖ್ಯ ನಮ್ಮ ಯುವ ಪೀಳಿಗೆಯಲ್ಲಿ ಸಕಾರಾತ್ಮಕಗಲನ್ನು ಹುಟ್ಟುಹಾಕುವುದು....ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..

  ReplyDelete
 9. ತೆಜಸ್ವಿನಿಯವರೇ ಹೌದು ನೋಡಿ ನಾಣ್ಯ ಮೌಲ್ಯ..ಎರಡೂ ಮುಖದಿಂದ ಕೂಡಿಯೇ..ಕಪ್ಪಿನ ಮಧ್ಯೆ ಬಿಳುಪು ಎದ್ದು ಕಾಣುತ್ತೆ...ಕೆಟ್ಟವರ ಮಧ್ಯೆ ಸ್ವಲ್ಪ ಒಳಿತನ್ನು ಮಾಡಿದರೂ ಅಮೋಘ್ಹ ಎನಿಸುತ್ತೆ..ನಿಮಗೆ ನಿಜ ಹೇಳಬೇಕೆಂದರೆ...ನನ್ನ ಸ್ವಾಭಿಮಾನ ಆ ದಿನ ನನ್ನನ್ನು ಬೇರೆಯವರಲ್ಲಿ ಹಣ ಬೇಡುವುದಕ್ಕೆ ಅಡ್ಡಿಯಾಗುತ್ತಿತ್ತು....ಒಳ್ಲೆಯ ಸಮಯಕ್ಕೆ ಹಣ ಬಂತು...ಅದು ೫೦೦ ಅಲ್ಲ ೫೦೦೦ ಕಂಡಿತು ಅಂದು ನನಗೆ, ಏಕೆಂದರೆ ಬೆಂಗಳೂರ ವರೆಗಿನ ಸೆಕೆಂಡ್ ಕ್ಲಾಸ್ ರೈಲ್ ಟಿಕೆಟ್ ೧೧೦-೧೨೦ ಇದ್ದಿದ್ದು ಆಗ..ಆದರೆ ಫ್ಲೈಟ್ ಟಿಕೆಟ್ ೫೦೦ ರ ಆಸುಪಾಸಿತ್ತು.

  ReplyDelete
 10. ಚೇತನಾ...ನೀವು ತಪ್ಪದೆ ನನ್ನ ಬ್ಲಾಗ್ ಓದುತ್ತಿದ್ದೀರಿ...ವಿಶೇಷ ಧನ್ಯವಾದ ಹೇಳಲೇಬೇಕಾದದ್ದೇ. ನಿಮ್ಮ ಪ್ರತಿಕ್ರಿಯೆಗೂ ಧನ್ಯವಾದ. ನಿಜ ಇಂತಹ ಕೆಲವು ಅಪ್ರಾಮಾಣಿಕರಿಂದ ಪ್ರಾಮಾಣಿಕರನ್ನೂ ನಾವು ಕೆಲವೊಮ್ಮೆ ಅನುಮಾನಿಸುವಂತಾಗಿದೆ...

  ReplyDelete
 11. ಜಲನಯನರವರೇ ನೀವು ಹೇಳಿದ್ದು ಅಕ್ಷರಶಃ ಸತ್ಯ ಜಗತ್ತಿನಲ್ಲಿ ಒಳ್ಳೇಯದು ಇದೆ . ಕೆಟ್ಟದ್ದು ಇದೇ. ಎರಡನ್ನು ಸ್ವೀಕರಿಸುತ್ತಾ ಒಳ್ಳೇಯದು ಆದಾಗ ಉಬ್ಬದೇ, ಕೆಟ್ಟದ್ದು ಆದಾಗ ಕುಗ್ಗದೇ ನಮ್ಮ ವಿಶ್ವಾಸ, ನ೦ಬಿಕೆ ಹಾಗೂ ನಮ್ಮತನವನ್ನು ಬಿಡದೇ ಮು೦ದುವರಿಸಬೇಕು. ತಮ್ಮ ಅನುಭವ ವಿಶ್ವಾಸಕ್ಕೇ ದಾರಿ ದೀಪವಾದರೇ, ನನ್ನ "ಕೊಟ್ಟವನು ಕೋಡ೦ಗಿ" ಲೇಖನ ಮಾನವೀಯ ಮಿಡಿತಗಳ ಮಧ್ಯೆ ವಹಿಸಬೇಕಾದ ಜಾಗ್ರತೆಗೆ ಎಚ್ಚರಿಕೆಯ ಗ೦ಟೆಯಾಗಿದೆ. ಧನ್ಯವಾದಗಳು.

  ReplyDelete
 12. This comment has been removed by the author.

  ReplyDelete
 13. ಸೀತಾರಾಂ ಸರ್, ಹೌದು ನಿಮ್ಮ ಮಾತು ಬಹಳ ಸಮಂಜಸ ಅದರಲ್ಲೂ ಇಂದಿನ ಮರೆಯಾಗುತ್ತಿರುವ ಮೌಲ್ಯಾಧಾರಿತ ಜೀವನ ಶೈಲಿಗೆ, ಸಮಾಜಕ್ಕೆ. ನಮ್ಮ ಒಳ್ಳೆ ಮುಖದ ಪ್ರಾತ್ಯಕ್ಷಿಕೆ ಅಗತ್ಯ... ನಿಮ್ಮ ಅನಿಸಿಕೆಗೆ ಧನ್ಯವಾದಗಳು

  ReplyDelete
 14. ಅನುಭವಜನ್ಯ ಬರಹ, ಚೆನ್ನಾಗಿದೆ.

  ReplyDelete
 15. ಜಗತ್ತಿನಲ್ಲಿ ಮಳೆ ಬೆಳೆ ಆಗುವುದು ಇಂತಹ ಒಳ್ಳೆ ಜನರಿಂದಲೇ.
  nice post da
  :-)
  malathi S

  ReplyDelete
 16. ಪರಾಂಜಪೆಯವರ..ಪ್ರೋತ್ಸಾಹದಾಯಕ ಮಾತಿಗೆ ಧನ್ಯವಾದ...

  ReplyDelete
 17. ಮಾಲ್ತಿಯ ಮಾತು..ಅನಿಸಿಕೆ...thank da...ನಿಜ ಒಳ್ಳೆಯವರಿಂದಲೇ ನಿಂತಿದೆ ಇನ್ನೂ ಧರ್ಮ...ಧನ್ಯವಾದ

  ReplyDelete
 18. ಆಜಾದ್ ಸರ್,

  ಮದುವು ಫೋಟೊ ಮತ್ತು ದಿನಪತ್ರಿಕೆ ವಿತರಣೆ ಕೆಲಸದಿಂದಾಗಿ ಬ್ಲಾಗಿಗೆ ತಡವಾಗಿ ಬರುತ್ತಿದ್ದೇನೆ.

  ನಿಮ್ಮ ಲೇಖನವನ್ನು ಓದುವ ಮೊದಲು ಸೀತಾರಾಮ್‍ರವರ ಲೇಖನವನ್ನು ಓದಿದೆ. ಅದರಿಂದ ಸ್ಪೂರ್ತಿಪಡೆದ ಬರೆದ ನಿಮ್ಮ ಲೇಖನವನ್ನು ಓದಿದೆ. ನಂತರ ನನಗನ್ನಿಸಿದ್ದು ಈ ಪ್ರಪಂಚದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎರಡು ಇರುತ್ತದೆ. ನಾವು ಹೆಚ್ಚು ಕೆಟ್ಟದ್ದನ್ನು ನೋಡುವುದರಿಂದ ಅದರ ಬಗ್ಗೆ ಯೋಚಿಸುತ್ತೇವೆ, ಮಾತಾಡುತ್ತೇವೆ. ಆದ್ರೆ ಒಳ್ಳೆ ಮುಖಗಳು ಅನುಭವಗಳು ಆದಾಗ ಹೀಗೆ ಹಂಚಿಕೊಳ್ಳಬೇಕು. ಇಂಥವರು ಇರುವುದರಿಂದಲೇ ಮಳೆ ಬೆಳೆ ಚೆನ್ನಾಗಿ ಆಗುತ್ತಿದೆ ಎಂದು ನನ್ನ ಭಾವನೆ.

  ಒಂದು ಅರ್ಥಪೂರ್ಣ ಲೇಖನವನ್ನು ಕೊಟ್ಟಿದ್ದೀರಿ..ಧನ್ಯವಾದಗಳು

  ReplyDelete
 19. ಶಿವು..ದೇರ್ ಆಯೆ ಪರ್ ದುರುಸ್ತ್ ಆಯೆ..ಅಂತ ಹಿಂದಿಯಲ್ಲಿ ನುಡಿಮಾತಿದೆ..ಅಂದರೆ ತಡವಾದ್ರೂ ಬರಬೇಕಾದವರು ಬಂದ್ರು ಅಂದಹಾಗೆ. ನಿಮ್ಮ ಮಾತು ನಿಜ..ಇದನ್ನೇ ಹಲವು ಮಿತ್ರರೂ ಅಭಿಪ್ರಾಯಪಟ್ಟಿದ್ದಾರೆ....ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ..

  ReplyDelete
 20. ನಿಜ ರೀ.
  ಒಳ್ಳೆಯವರು ಇರ್ತಾರೆ.
  ಆದರೆ ಕೆಟ್ಟವರಿಂದ ಒಳ್ಳೆಯವರು ಯಾರು, ಕೆಟ್ಟವರು ಯಾರು ಅಂತ ಗೊತ್ತಾಗೊಲ್ಲ..
  ಅದೇ ಪ್ರಾಬ್ಲಮ್... :(

  ReplyDelete
 21. ತುಂಬಾ ಒಳ್ಳೆಯ ಲೇಖನ.. ನಿಜ ಒಳ್ಳೆ ಜನ ಇರುತ್ತಾರೆ ಎನ್ನುವದಕ್ಕೆ ಇದೆ ಸಾಕ್ಷಿ ಅಲ್ಲವಾ ಸರ್.

  ReplyDelete
 22. ಆಜಾದ್ ಸಾರ್
  ಎಲ್ಲಾ ಥರಾ ಜನಾನೂ ಇರುತ್ತಾರೆ. ಈ ಥರಾ ನಂಬಿ ನಾನೂ ತುಂಬಾ ಸಲಾ ಮೋಸ ಹೋಗಿದ್ದೇನೆ.ಹಾಗೆಯೇ ಅಪನಂಬಿಕೆಯಿಂದಲೇ ಕೊಟ್ಟ ಹಣ ಮರಳಿಸಿ ನನ್ನನ್ನು ಬೆಪ್ಪು ಮಾಡಿದ ಪ್ರಾಮಾಣಿಕ ಜನರೂ ಇದ್ದಾರೆ

  ReplyDelete
 23. ಸಿವಪ್ರಕಾಶ್ -ನಿಮ್ಮ ಮಾತು ನಿಜ ಆದ್ರೆ ಸಹಾಯ ಮಾಡಬೇಕಾದ್ರೆ..ಯೋಚ್ನೆ ಮಾಡೋದ್ರಲ್ಲಿ ತಪ್ಪಿಲ್ಲ ಲ್ಲವಾ...ಒಂದು ವೇಳೆ ತಪ್ಪು ನಿದರ್ಶನದ ಆಧಾರ ನಮ್ಮನ್ನು ತಪ್ಪುದಾರಿಗೆ ಎಲೆಯೋ ಸಾಧ್ಯತೆ ಇರುತ್ತಲ್ಲ ಅದಕ್ಕೆ. ಧನ್ಯವಾದ ಪ್ರತಿಕ್ರಿಯೆಗೆ.

  ReplyDelete
 24. ಗೋಪಾಲ್..ನನಗೆ ಸಹಾಯ ಮಾಡ್ಬೆಕು ಅನ್ಸಿದ್ದಕ್ಕೆ ಸ್ವಾರ್ಥನೂ ಕಾರಣ ಅಂದ್ಕೋಳಿ..ಯಾಕಂದ್ರೆ..ಆ ಪರಿಸ್ಥಿತಿ ನಮಗೂ ಬಂದರೆ ಯಾರಾದರೂ ಸಹಾಯ ಮಾಡ್ಲಿ ಅಂತ...ಹಾಗೇ ಸಹಾಯ ತಗೊಂಡವರು ಸರಿಯಾಗಿ ನೆಡಕೊಂಡರೆ no problem..ಅಲ್ಲವಾ,?

  ReplyDelete
 25. ರೂಪಾರೀ, ಬಹಳ ದಿನ ಆಯ್ತು ನಮ್ಮ ಬ್ಲಾಗ್ ಕಡೆ ನೀವು ಬಂದು...ಧನ್ಯವಾದ..ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ..ಹಹಹ..
  ಕೊಟ್ಟೋನು ಕೋಡಂಗಿ..ಇಸ್ಕೊಂಡವನು ಈರಭದ್ರ...ಗಾದೇನ ಅಷ್ಟು ಅನುಭವದ ನೀರೆರೆದೇ ಮಾಡಿದ್ದಾರೆ ಅನ್ಸುತ್ತೆ. ನಿಮ್ಮ ಮುಂದಿನ ಕಥೆಗೆ ಇದೇನಾದರೂ ಪ್ರೇರಣೆ ಆಗಬಹುದಾ??

  ReplyDelete
 26. ಹೀಗೆ ಒಳ್ಳೆಯವರು ಕೆಟ್ಟೋರು ಎಲ್ಲ್ರೂ ಇರೊದ್ರಿಂದಲೇ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಅಂತಲೇ ತಿಳಿಯಲ್ಲ.

  ReplyDelete
 27. neevu tumbaa bhaavanaa jeevi antha kaanutte, baravnigeyalli novu, kaalaji yeddu kaanuttide. keep it up

  ReplyDelete
 28. abhedya spelling sari yilla bhe mahaapraana balasbeku... dya alpapraana

  ReplyDelete