Sunday, May 10, 2009

ಪುಟ್ಟಿ


ಪುಟ್ಟಿ
ಪುಟ್ಟ ಕೈ
ಮುದ್ದುಮುಖ
ಮುಚ್ಚಿಕೊಂಡೆ ಏಕೆ?
ಇಟ್ಟ ಮುದ್ದು
ಮೀಸೆಯಂಚು
ಚುಚ್ಚಿತೇನೋ ಹೇಗೆ?
ಕಣ್ಣ ಮುಚ್ಚಿ
ಕಾಡೇ ಗೋಡೇ
ಹುಡುಕೋ ಆಟ ಬೇಕೆ?
ಹೇ ಕಳ್ಳಿ ,,!!
ನೋಡಿತಿರುವಿ
ಬೆರಳ ಸಂದಿಯಲ್ಲಿ
ಹೋಗಿ ಹಿಡಿದು
ಬಿಡುವೆ ಅಕ್ಕನನ್ನು
ಮೂಟೆಸಂದಿಯಲ್ಲಿ
ಅನ್ನ ತಿನಲು ಅಳುವೆ
ಮಣ್ಣ ತಿನಲು ಒಲವೇ?
ಕೇಳಿದ್ದಕ್ಕೆ ನಿನ್ನ ಏಕೆ
ಕಣ್ಣಮುಚ್ಚಿ ಅಳುವೆ?
ಮುದ್ದು ಕೈಯ
ಬಿಡಿಸಿ ನೋಡೆ
ಕಣ್ಣಲಿಲ್ಲ ನೀರು
ಕಣ್ಣ ಹೊಳಪು
ತುಂಟತನ ಕಂಡುನನಗೆ
ಬಂತು ನಗು ಜೋರು (ಶಿವು ರವರ ಛಾಯಾಚಿತ್ರದ ಪ್ರೇರಣೆ)

8 comments:

  1. ಚಿತ್ರಕ್ಕೊಪ್ಪುವ ಕವನ, ಚೆನ್ನಾಗಿದೆ.

    ReplyDelete
  2. ಜಲನಯನ ಸರ್,

    ನೀವು ನಾನು ತೆಗೆದ ಮಗುವಿನ ಫೋಟೊಗೆ ತುಂಬಾ ಸೊಗಸಾದ ಪದ್ಯ ಬರೆದಿದ್ದೀರಿ....

    ನಿಜಕ್ಕೂ ನಾನು ತೆಗೆದ ಫೋಟೊಗಿಂತ ನಿಮ್ಮ ಪದ್ಯ ಹೆಚ್ಚು ಖುಷಿಕೊಡುತ್ತೆ...

    ಸಾದ್ಯವಾದರೆ ನನ್ನ ಉಳಿದ ಲೇಖನಗಳನ್ನು ಓದಿ..ಪ್ರತಿಕ್ರಿಯಿಸಿ...

    ಧನ್ಯವಾದಗಳು....

    ReplyDelete
  3. ತುಂಬಾ ಚೆನ್ನಾಗಿದೆ ಸರ್, ಆ ಮಗುವಿನ ಫೋಟೋದಲ್ಲಿ ಇರೋ ಭಾವನೆಯನ್ನೆಲ್ಲಾ ನೀವೆ ಅರಿತು ಬರೆದಿದ್ದೀರಿ...ನಾ ಈ ಚಿತ್ರ ನೋಡಿದ ಕೂಡಲೇ ಈ ಫೋಟೋ ಎಲ್ಲೋ ನೋಡಿದ್ದೆನಲ್ಲಾ ಎಂದುಕೊಳ್ಳುತ್ತಲಿದ್ದೆ...ನಿಮ್ಮ ಕೊನೆಯ ಸಾಲಿನಲ್ಲಿ ಇದ್ದದ್ದು ತಿಳಿಸಿತು... ಶಿವು ಸರ್ ಗೆ ಧನ್ಯವಾದ ಹೇಳಬೇಕು ಅವರ ಚಿತ್ರ ನಿಮ್ಮಲ್ಲಿ ಕವನ ಮೂಡಿಸಿದೆ...
    ವಂದನೆಗಳು

    ReplyDelete
  4. Thumba chennagide ... chitra adara kavana.. both are good.

    ReplyDelete
  5. ನನ್ನ ಕವನಕ್ಕೆ ಸ್ಪೂರ್ತಿ ಶಿವು ಅವರ ನನ್ನ ಬಹು ಮೆಚ್ಚಿದ ಕ.ಬಿ.ಚಿತ್ರ,
    ಮಕ್ಕಳು ಹೇಳುವುದು ಕಡಿಮೆಯಾದರೂ ಭಾವನೆಗಳು ಮಡುಗಟ್ಟಿ ಹರಿವಂತೆ ಮಾಡುವ ಮುಗ್ಧತೆ, ಚುರುಕುತನ, ತುಂಟತನ
    ಎಂತಹವರಲ್ಲೂ ಈ ಮಟ್ಟಿಗೆ ಸ್ಪೂರ್ತಿ ಹುಟ್ಟುಹಾಕಬಹುದು.
    ಪರಾಂಜಪೆಯವರೂ ಇದಕ್ಕೆ ಆಯಾಮವೊಂದನ್ನು ನೀಡಬಹುದು, ಮನೆಗೆ ಬಂದ್ರಿ ಸಂತೋಷ
    ಶಿವು ಅವರೇ ನಿಮ್ಮ ಛಾಯಾ ಚಿತ್ರ ಅಪ್ರತಿಮ..ನನ್ನ ಕವನ ಅದರ ಪ್ರತಿಮಾ ರೂಪ ಅಷ್ಟೆ,
    ಇದು ಮನಸಿಗೂ ಇಷ್ಟವಾಯ್ತು ಅನ್ನೋದು ನಿಮ್ಮ ಚಿತ್ರಕ್ಕೆ ಸಿಕ್ಕ ಬೋನಸ್ ಅಲ್ವೇ ಶಿವು??
    ಅಗೋ ನೋಡಿ...ಗುರು ಅವರೂ ತಮ್ಮ ಒಪ್ಪಿಗೆ ಕೊಟ್ಟಾಯ್ತು...

    ReplyDelete
  6. ಮಗೂನು ಮುದ್ದಾಗಿದೆ, ಕವನವೂ ಮುಗ್ಧವಾಗಿದೆ.
    -ಧರಿತ್ರಿ

    ReplyDelete
  7. ee magu foto ge neevu bareda 'prathime' odidaaga nanna thammana magana nenapaaythu...he is 4 yrs old now...sariyada bhavavanna hididitta nimage 'hats off' :)

    ReplyDelete