Sunday, June 21, 2009

ಬಲು-ಸಹಜಾನ್ರಪ್ಪ ಈಜೋಡಿ


(ಚಿತ್ರದ ಬಳಕೆಗೆ ಧರಿತ್ರಿಯವರ ಅನುಮತಿಕೋರಿ)



ಸುಬ್ಬು-ಸೀನು ಸೈಕಲ್ ಮ್ಯಾಲೆ
ಏರಿಗುಂಟ ಡಾಂಬರು ರಸ್ತೆ ಮ್ಯಾಲೆ
ಹಳ್ಳೀತುಂಬಾ ಎಸ್ರುವಾಸಿ
ಅದಕ್ಕೇ ಜನಾ ಹೇಳ್ತಾರೆ ನೋಡಿ
ಬಲು ಸಹಜಾನ್ರಪ್ಪ ಈ ಜೋಡಿ

ಸುಕ-ಇರ್ಲಿ ದುಃಕ ಬರ್ಲಿ
ಬರಾ ಆಗಲೀ ಕಣಜ ತುಂಬಲಿ
ಸುಬ್ಬಂಗೆ ಸೀನು ಸೀನಂಗೆ ಸುಬ್ಬ
ಅವನಿಗಿಲ್ಲದೇ ಇವನಿಗಿಲ್ಲ ಯಾವ್ದೇ ಹಬ್ಬ

ಬೆಳಗಾಗೆದ್ದು ಸೈಕಲ್ಲೇರಿ
ಎಗ್ಲಿಗೇರ್ಸಿ ಟವಲ್ಲು ಒಂಟಿತ್ತು ಜೋಡಿ
ಜಾತ್ರೆ ಸೇರಿತ್ತು ಹರಿದ
ಮ್ಯಾಲೆ ಹೊಸಳ್ಳಿ ಕೋಡಿ

ಸುಬ್ಬ ಒತ್ತೋದು ಎಬ್ಬೆರಳಿಗೆ ಓಟು
ಸೀನಂಗೆ ಮಲ್ಗೆ ಪಾರ್ಟಿಂದ್ರೆ ಸ್ವೀಟು
ಚುನಾವಣೆ ಮುಗುದ್ರೆ ಮತ್ತದೇ ಸೈಕಲ್ಲು
ರಾಜಕಾರಣೀಗಳೂ ಕಲೀಬೇಕು ಈ ಪ್ರಿನ್ಸಿಪಲ್ಲು

13 comments:

  1. ಜಲನಯನ ಅವರೇ,
    ತುಂಬಾ ಸರಳವಾಗಿ ಮತ್ತು ಸೊಗಸಾಗಿ ಇದೆ ನಿಮ್ಮ ಜೋಡಿ ಪದ!

    ReplyDelete
  2. ಜಲನಯನ ಸರ್,

    ನಿಮ್ಮ ಹೊಸ ಕವನ ಒಂದು ಜಾನಪದ ಶೈಲಿಯಲ್ಲಿದೆಯಲ್ಲವೇ...ಒಂದು ಸೊಗಸಾದ ರಾಗ ಹಾಕಿಬಿಟ್ಟರೇ...ಒಳ್ಳೇ ಹಳ್ಳಿ ಪದವಾಗುವ ಸಾಧ್ಯತೆಗಳು ಇದೆ...ಪ್ರಯತ್ನಿಸಿ ನೋಡಿ ಸರ್...ಮತ್ತೆ ಈ ಜೋಡಿಯ ವಿಚಾರಗಳು ಅರ್ಥವತ್ತಾಗಿಯೇ ಇವೆ...

    ಧನ್ಯವಾದಗಳು...

    ReplyDelete
  3. ಜಾನಪದ ಶೈಲಿಯ ಕವನ ತುಂಬಾ ಹಿಡಿಸಿತು..

    ReplyDelete
  4. ಜಲನಯನ,
    ರಾಜರತ್ನಮ್ ಅವರ ಧಾಟಿಯ ನಿಮ್ಮ ಜಾನಪದ ಶೈಲಿಯ ಹಾಡು ಸೊಗಸಾಗಿದೆ.
    ಲಗ್ನಪತ್ರಿಕೆ ಎನ್ನುವ ಕನ್ನಡ ಸಿನೆಮಾ ಒಂದರಲ್ಲಿಯ ಹಾಡನ್ನು ಇದು ನೆನಪಿಸಿತು:
    "ಸುಬ್ಬು, ಶೀನು, ಶೀನು, ಸುಬ್ಬು!
    ಶೀನು, ಸುಬ್ಬು, ಸುಬ್ಬು, ಶೀನು!
    ಬಲು ಅಪರೂಪಾ ನಮ್ ಜೋಡಿ,
    ಎಂಥ ಕಚೇರಿಗು ನಾವ್ ರೆಡಿ!"

    ReplyDelete
  5. ಎಸ್ಸೆಸ್ಕೆ
    ದಿಟ ಅಂದ್ರೆ ಸ್ವಾಮಿ ಅಳ್ಳಿ ಬಾಷೆವಳ್ಗೆ ಕಪ್ಟ ಇರಲ್ಲ..ಮನಸ್ಗೆ ಬಂದದ್ದು ಬಾಯ್ಗೆ ಬರ್ತದೆ ಅಲ್ವಾ..?
    thanks ನಿಮ್ಮ ಅನ್ನಿಸಿಕೆಗೆ..ಮತ್ತು ತಿಳಿಸಿದಕ್ಕೆ

    ReplyDelete
  6. ಶಿವು ..ಧನ್ಯವಾದ..ನಿಮ್ಮ ಮನಬಿಚ್ಚುನುಡಿಗೆ..ನಿಮ್ಮ ಚಿತ್ರಗಳನ್ನೂ ಬಳಸಿ ಗ್ರಾಮ್ಯ ಕವನ ರಚಿಸುವ ಇಛ್ಚೆ..ಮಾಡಲೇ ಪ್ರಯತ್ನ...??

    ReplyDelete
  7. ಜ್ಞಾನಮೂರ್ತಿ ಯವರೇ...ಇದು ನನ್ನ ಮೆಚ್ಚಿನ ಅಳ್ಳಿ ಬಾಷೆ...ಮೆಚ್ಚಿದ್ದಕ್ಕೆ ಧನ್ಯವಾದಗಳು

    ಸುನಾಥ್ ಸರ್ ಕನ್ನಡದ ರತ್ನರಿಗೆ ಹೋಲಿಸಿ- ಸಮುದ್ರದಲ್ಲಿನ ಜಲಸಾಗರದ ಬಿಂದುವಿಗೆ ಸಮನಾದರೂ ನನ್ನ ಪ್ರಯತ್ನ ಸಫಲ, ಹೌದು..ನನಗೆ ತುಂಬಾ ಇಷ್ಟವಾದ
    ಚಿತ್ರ ಅದು..ಅದ್ರ ಪ್ರಭಾವವೇ ಆಗಿರಬೇಕು ಈ ಶಬ್ದಗಳ ಬಳಕೆ

    ReplyDelete
  8. ಜಲನಯನ ಸರ್,

    ನನ್ನ ಚಿತ್ರಗಳು ನಿಮಗೇ ಸ್ಪೂರ್ತಿ ನೀಡುವಂತಿದ್ದರೇ ಖಂಡಿತ ಅವನ್ನು ನಿಮ್ಮ ಬರವಣಿಗೆಗೆ ಬಳಸಿಕೊಳ್ಳಿ....

    ಮತ್ತೆ ಈ ಕೆಳಗಿನ ಲಿಂಕಿಗೆ ಹೋಗಿ....ಅಲ್ಲಿ ನಾನು ಕ್ಲಿಕ್ಕಿಸಿದ ಎಲ್ಲಾ ಫೋಟೋಗಳು ಸಿಗುತ್ತವೆ....

    http://www.flickr.com/photos/shivuimages

    ಧನ್ಯವಾದಗಳು.

    ReplyDelete
  9. ಶಿವು,
    ತುಂಬಾ thanks, ಇವನ್ನ ನನ್ನ folder ನಲ್ಲಿ ಶೇಖರಿಸಿ ಇಟ್ಟ್ಕೋತೇನೆ...ಭಾವಕ್ಕೆ ಕಾವು ಸಿಕ್ಕಾಗಲೆಲ್ಲಾ...ಬರೆಯುತ್ತೇನೆ ಮತ್ತೆ...ಬ್ಲಾಗ್ ನಲ್ಲಿ ಹಾಕ್ತೇನೆ...ಸರೀನಾ...ಧನ್ಯವಾದ ಮತ್ತೊಮ್ಮೆ.

    ReplyDelete
  10. ನಿಮ್ಮಾ ಹಾಡು ಚೆನ್ನಾಗಿದೆ...
    ಜಾನಪದ ಧಾಟಿಯಲ್ಲಿ ಹಾಡಬಹುದೇನೋ...

    ಅಭಿನಂದನೆಗಳು...

    ReplyDelete
  11. ಪರಾಂಜಪೆಯವರೇ, ಗ್ರಾಮ್ಯ ಭಾಷೆಯದ್ದು ದಿಖಾವೆಯಿಲ್ಲದ ಶುದ್ದ ಮನಸ್ಸಿನ ಮಾತು...ಅದ್ಕೇಯ ನಮ್ಮ ಅಳ್ಳಿ ಬಾಸೆ ಅಂದ್ರೆ ನನ್ಗೆಲ್ಲ್ಲಿಲ್ದ ಬೋ ಪಿರೀತಿ...thanks

    ReplyDelete
  12. ಪ್ರಕಾಶ್, ನಿಮ್ಮ ಸುಲಲಿತ ಆಡು ಭಾಷೆಯ ಸಂಭಾಷಣೆಯ ಮುಂದೆ ನಾವು ಜೀರೋ...ಬಿಡಿ...ಏನೋ ಒದ್ಸೊಲ್ಪ ಬರೆಯೋ ಚಟ..ಬರೆದ ಮೇಲೆ..ಬೇರೆಯೋರಿಗೆ ಬೋರ್-ಮಾಡೊ ಭಂಡ ಧೈರ್ಯ....thanks ನಿಮ್ಮ ಪ್ರತಿಕ್ರಿಯೆಗೆ..

    ReplyDelete