Sunday, May 23, 2010

ಗೊತ್ತಿಲ್ಲ ಮಗು

ಅಪ್ಪಾ...


ಏನೊ ಪುಟ್ಟಾ...?


ಲೈಲಾ ಮಜನೂ


ಪ್ರೇಮಿಗಳು ಅಂದ್ರೆ ಹಾಗಿರ್ಬೇಕು ಅಂತಾರೆ ಹೌದಾ..?


ಹೌದು ಕಣೋ..ನಿನಗ್ಯಾಕದು ಈಗ..?


ಅಲ್ಲಪ್ಪಾ ಲೈಲಾಗೋಸ್ಕರ ಮಜನೂ ಹುಚ್ಚನಾದನಂತೆ?


ಹೌದು ಕಣೋ ಹಾಗೆ ಅಂತ ಕಥೆಯಿದೆ..


ಮತ್ತೆ ಈಗ...ಲೈಲಾ ಯಾಕೆ ಹುಚ್ಚಿ ಆಗಿರೋದು..?


ಏನು ಹೇಳ್ತಿದೀಯೋ..? ಯಾವ ಲೈಲಾ..?


ಅದೇನಪ್ಪಾ ಮೊನ್ನೆ ಆಂಧ್ರಕ್ಕೆ ಅಪ್ಪಳಿಸಿದ ಲೈಲಾ


ಅಂತ ಟೀವಿ..ನ್ಯೂಸಿನಲ್ಲಿ ಬಂತಲ್ಲಾ...


ಹಹಹ..ನಂಗೊತ್ತಿಲ್ಲ ಮಗು.


ಅಪ್ಪಾ...


ಏನೋ ಮತ್ತೆ ನಿಂದು...?


ಬಿರುಗಾಳಿ..ಮಳೆ..ಚಂಡಮಾರುತ


ಹೀಗಂದ್ರೆ ನಮಗೆ ಅರ್ಥ ಆಗುತ್ತಲ್ಲಾ..?


ಹೌದು..ಯಾಕೆ ನಿನಗೆ ಅರ್ಥ ಆಗೊಲ್ಲವಾ?


ನನಗೆ ಅರ್ಥ ಆಗುತ್ತಪ್ಪ..ಆದ್ರೂ


ಲೈಲಾ, ಕತ್ರಿನಾ ಅಂತ ನಟಿಯರ ಹೆಸರಿಂದ ಕರೀತಾರಲ್ಲ


ಬಿರುಗಾಳಿ ತರಹ ಎಲ್ಲ ನಟರನ್ನೂ


ಗುಡಿಸಿಬಿಡ್ತಾರಂತಲ್ಲಾ ಅದಕ್ಕಾ....??


ಏಯ್ ಸುಮ್ನೆ ಓದ್ಕೊಳ್ಳೋದ್ ನೋಡೋ


ನಂಗೊತ್ತಿಲ್ಲ...

45 comments:

 1. ಅಜಾದ್ ಅವರೇ,
  ಹ್ಹ ಹ್ಹ ಹ್ಹ ಹ್ಹಾ ........! ನಂಗೊತ್ತಿಲ್ಲಾ ಅಂತಾನೆ ಹೇಳಿಕೊಂಡು, ಎಲ್ಲಾ ವಿಷಯಾನೂ ಹೇಳಿರ್ತೀರ!!
  ಅಪ್ಪ ಮಗನ ಸಂವಾದ (ವಿಷಯಗಳ ನವರಸದೊಂದಿಗೆ) ಓದಲು ಎಷ್ಟು ಚೆನ್ನ. ಗ್ರೇಟ್ , ಚೆನ್ನಾಗಿದೆ....!!!

  ನನ್ನ ಬ್ಲಾಗ್ ಕಡೆ ಸ್ವಲ್ಪ ಇಣುಕಿ, ಮತ್ತೆ ನಿಮ್ಮ ಅಭಿಪ್ರಾಯ ತಿಳಿಸಿ.
  ಧನ್ಯವಾದಗಳು.

  ReplyDelete
 2. ಎಸ್ಸೆಸ್ಕೆ ಮೇಡಂ (ನೀವು ಹೆಸರು ಹೇಳೋವರೆಗೂ ಹೀಗೇ ನನ್ನ ವರಸೆ....ಹಹಹ)...
  ಗೊತ್ತಿಲ್ಲ ಅಂತ ಹೇಳೋ ಮಾತಲ್ಲೇ ಹಲವಾರು ಗೊತ್ತಿರುವ ಅಥವಾ ಗೊತ್ತುಮಾಡಿಸುವ ವಿಷಯಗಳು ಅಡಗಿರುತ್ತವೆ ಎನ್ನುವುದನ್ನು ಹಹಹಹ...ಇರುವ ನಿಮಗೆ ಹೇಳಬೇಕಾಗಿಲ್ಲ......ಅಂದಹಾಗೆ ನಿಮ್ಮಲ್ಲಿ ಇಣುಕಿ..ಕೆಣಕಿ..ಮತ್ತೆ ನಿಮಗೆ ಉತ್ತರ ಕೊಡುತ್ತಿದ್ದೇನೆ...

  ReplyDelete
 3. ನಿಮ್ಮ "ನ೦ಗೊತ್ತಿಲ್ಲ ಮಗು" ಸರಣಿ ನನಗಿಷ್ಟ. ಬಹಳ ದಿನವಾಗಿತ್ತು ನಿಮ್ಮ ಬ್ಲಾಗಿಗೆ ಬ೦ದು, ಇ೦ದು ಇಣುಕಿದಾಗ ಅದೇ ಸಿಕ್ಕಿತು. ಚೆನ್ನಾಗಿದೆ.

  ReplyDelete
 4. ಜಲನಯನ,
  ಮಗೂಗೆ ಗೊತ್ತಿರೋ ವಿಷಯ ನಮಗೆ ಗೊತ್ತಾಗಲ್ಲ ನೋಡಿ, ಅಲ್ಲೇ ಇರೋದು fun!

  ReplyDelete
 5. ಸಕ್ಕತಾಗಿದೆ....ಲೈಲಾ majanoo....

  ReplyDelete
 6. ಅಜಾದ್ ಸರ್,
  ಇದುವರೆಗೂ ಗೊತ್ತಿಲ್ಲ ಗೊತ್ತಿಲ್ಲ ಅಂತಾನೆ ಬಂದ್ರಿ. ಆದ್ರೆ ಒಂದನ್ನಾದರೂ ಬಿಟ್ರಾ? ಎಲ್ಲಾ ಹೇಳಿಬಿಟ್ಟಿರಿ.
  ಅದ್ಬುತ ಸರ್
  ಹೀಗೆ ಮುಂದುವರೆಯಲಿ ನಿಮ್ಮ ಪ್ರಶ್ನೋತ್ತರ ರಸಾಯನ!

  ReplyDelete
 7. ಮಗುವಿನ ಬಾಯಿಮ್ದ ಸತ್ಯವನ್ನೇ ಹೊರಡಿಸಿಬಿಟ್ಟಿರಲ್ಲಾ ಸರ್ !

  ReplyDelete
 8. Seetaaram sir...dhnyavaadaaree nimmee pratikriyege...

  ReplyDelete
 9. ಪರಾಂಜಪೆ ಸರ್, ಬಹಳ ದಿನಗಳ ನಂತರ ಬಂದಿರಿ...ಹೌದು ಬ್ಲಾಗ್ ಸಮಾವೇಶಕ್ಕೆ ನಿಮ್ಮ ಸಲಹೆಗಳನ್ನು ಖಂಡಿತಾ ನಿರೀಕ್ಷಿಸುತ್ತೇವೆ

  ReplyDelete
 10. ಸುನಾಥ್ ಸರ್...ಧನ್ಯವಾದ ...ಎಮ್ದಿನಂತೆ ತೂಕದ ಆದರೂ ಬಹು ಚೇತೋಹಾರಿ ಮಾತುಗಳು...ಹಾಗೆಯೇ ನಿಮ್ಮ ಸಹಾಯ ನಮ್ಮ ಬ್ಲಾಗ್ ಮಿತ್ರರ ಆಯ್ದ ಬರಹಗಳ ಭಾಷೆಯ ಅಮ್ತಿಮ ಘಟ್ಟದ ಪರಿಶೀಲನೆಗೆ...ಬೇಕಾಗುತ್ತೆ..ನಿಮ್ಮ ಮೈಲ್ ಸಿಗಲಿಲ್ಲ ಅದಕ್ಕೆ ಇಲ್ಲೇ ವಿನಂತಿಸುತ್ತಿದ್ದೇನೆ.. ತೇಜಸ್ವಿನಿಯವರು ನಿಮ್ಮೊಂದಿಗಿರುತ್ತಾರೆ...ತಮ್ಮ ಅಂಕಿತ ಹಾಕಿ ಈ ಮನವಿಗೆ...

  ReplyDelete
 11. ತುಂಬಾ ಚೆನ್ನಾಗಿ ಇದೆ ನಿಮ್ಮ "ಗೊತ್ತಿಲ್ಲ ಮಗು" ಸೀರೀಸ್, ಮುಂದುವರಿಸಿ ... :-)

  ReplyDelete
 12. ಸಾರ್ , ಒಳ್ಳೆ ಕಿಲಾಡಿ ಮಗು ರೀ ..ಪ್ರಶ್ನೆಯಲ್ಲೇ ಉತ್ತರ ಇಟ್ಟಿರುತ್ತೆ .. ಅಪ್ಪನ ಧರ್ಮಸಂಕಟ ನೋಡಿ ಅಯ್ಯೋ ಪಾಪ ಅನ್ನಿಸುತ್ತೆ ..ಹ ಹ ಹ ..ಅಂತು ನಿಮ್ಮ ಕಿಲಾಡಿ ಮಗುವಿನ ಕಲ್ಪನೆಗೆ ಏನು ಹೇಳಲಿ . ಸಾಗಲಿ ಹೀಗೆ ಮುಂದೆ ಗೊತ್ತಿದ್ದೂ ಉತ್ತರಿಸಲಾಗದ ಅಸಹಾಯಕ ಅಪ್ಪನ ಹಾಗೂ ಪ್ರಶ್ನೆಯಲ್ಲೇ ಎಲ್ಲವನ್ನು ಕಕ್ಕುವ ಕಿಲಾಡಿ ಮಗುವಿನ ಸಂವಾದ ...

  ಮನಸಾರೆ

  ReplyDelete
 13. ಮಯೇಸಣ್ಣ ..ಲೈಲಾನೂ ಬ್ಯಾಡ ..ಕತ್ರೀನಾ ನೂ ಬ್ಯಾಡ ಅಂತ ಈಗ ಎಷ್ಟೋ ಜನ ಹುಚ್ಹರು ಶಾಣ್ಯಾರಾಗವ್ರಂತೆ...

  ReplyDelete
 14. ಪ್ರವೀಣ್ ಧನ್ಯವಾದ ..ಮಕ್ಕಳ ಮಾತುಗಳಿಗೆ ಕೆಲವೊಮ್ಮೆ ನಿಜವಾಗಿಯೂ ಉತ್ತರ ಇರೊಲ್ಲ ನಮ್ಮಹತ್ರ...

  ReplyDelete
 15. ಸುಬ್ರಮಣ್ಯ...ಗೊತ್ತಿಲ್ಲ ಮಗು (I dont know son) ನನಗೆ ಬಹು ಪ್ರಿಯವಾಗಿದ್ದ ಕಾಲಂ ಎಕ್ಸ್ ಪ್ರೆಸ್ ನಲ್ಲಿ. ..ಇದು ಜೀವಂತ ಆಗಿದ್ದು ನನ್ನ ಮಗಳ ಪ್ರಶ್ನಾವಳಿ ನೋಡಿ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

  ReplyDelete
 16. ಗುರು...ಹೇಗಿದ್ದೀರಿ...ಬಹಳ ದಿನಗಳಿಂದ ನೋಡಲಿಲ್ಲ ನಿಮ್ಮನ್ನ ...ನಮ್ಮ ಬ್ಲಾಗರ್ಸ್ ಸಮಾವೇಶ ನೆನಪಿದೆ ತಾನೇ...ಧನ್ಯವಾದ ನಿಮ್ಮ ಈ ಪ್ರತಿಕ್ರಿಯೆಗೆ.

  ReplyDelete
 17. ಮನಸಾರೆಯವರು...ಮನಮೆಚ್ಚಿ ಹಾಕಿದ ಪ್ರತಿಕ್ರಿಯೆಗೆ ಧನ್ಯವಾದ... ಹೌದು ಈ ಸರಣಿ ನಿಮಗೆ ಇಷ್ಟವಾದಂತೆ ನನಗೂ ಪ್ರಿಯವಾದುದು..ಮತ್ತೆ ..ಹೇಗೆ ನಡೆದಿದೆ ಹೊಸ ಕೆಲಸ..?

  ReplyDelete
 18. hahaha chennagide....laila anta pakisthanadavaru ittadadantte avaranne keLbeku....

  ReplyDelete
 19. ಅಮ್ಮ ,
  ಈ ಆಜಾದ್ ಮಾಮಾ ಅದು ಹೇಗೆ ಒಂದೊಂದೇ ಹುಡುಕಿ ಹುಡುಕೀ ಇಷ್ಟು ಚೆನ್ನಾಗಿ ಬರೀತಾರಮ್ಮಾ ?

  ನಿಜಕ್ಕೂ ನಂಗೊತ್ತಿಲ್ಲ ಮಗೂ .

  ReplyDelete
 20. ಮನಸು ಮೇಡಂ...ಲೈಲಾ ಪಾಕಿಸ್ತಾನಿ ಅಲ್ರೀ...ಅರಬಸ್ತಾನದವಳು....ಆದ್ರೆ ಕರ್ತಿನಾ ನಮ್ಮವಳೇ ನೋಡಿ ಮತ್ತೆ,

  ReplyDelete
 21. ಸುಧೇಶ್ ನಿಮ್ಮ ಪ್ರತಿಕ್ರಿಯೆ ಮತ್ತೆ ಪ್ರೋತ್ಸಾಹಕ್ಕೆ ಧನ್ಯವಾದ..ಬ್ಲಾಗ್ ಸಮಾವೇಶದ ಲೇಖನ ತಯಾರಿ ಮಾಡ್ತಿದ್ದೀರೋ ಇಲ್ಲವೋ..ಮೊದಲ್ಲು ನಿಮ್ಮ ಅನಿಸಿಕೆ ತಿಳ್ಸಿ.

  ReplyDelete
 22. ಥ್ಯಾಂಕ್ಸ್ ಚಿತ್ರಕ್ಕ...ನಿನ್ನ ಪರಿಯನು ಮೆಚ್ಚಿದೆ...ಅಕ್ಕಯ್ಯ..ಸಾರಿ ತಂಗ್ಯಮ್ಮ..ಏನೋ ..? ಒಟ್ನಲ್ಲಿ ನಿಮ್ಮ ಮಗಳಿಗೆ ಮಾಮ....ಹಹಹ...
  ಮತ್ತೆ ಅವಳನ್ನ ನನ್ನ ಮಗಳ ಜೊತೆಗೆ ಪ್ರಶ್ನೆ ಕೇಳೋಕೆ ಬಿಡ್ಬೇಡೀ

  ReplyDelete
 23. ಆಜದರೆ,
  ಮೊನ್ನೆ ನಮ್ಮ ಹಳ್ಳಿಲಿರೋ ಅತ್ತೆಗೆ ಫೋನ್ ಮಾಡದಾಗ್, ಏನ್ ಅತ್ತೆವ್ವ ಲೈಲಾ ಬಂದದಿಳಂತೆ ಅಂದೇ...
  ಅವರು ಹೌದು ತಾಯಿ.. ಇಗ ಹಿಂದಿ ಹಿಂದೆ ಮಜ್ನು ನು ಬರ್ತಾನೆ ಅಂದ್ಲು :ಪ
  ತುಂಬಾ ಚೆನಾಗಿ ಬರದಿರೀ... ಗುಡ್ ಒನ್ :)

  ReplyDelete
 24. Manasa....
  ಅಲ್ರೀ ..ಲೈಲಾನ ಮನೆಕಡೆ ಬಿಟ್ಕೋಬ್ಯಾಡವ್ವ ಅಂತ ಬುದ್ಧಿ ಹೇಳಿದ್ರೋ ಇಲ್ವೋ ಅಜ್ಜಿ...ನಿಮಗ...ಹಾಹಾಹಹ

  ReplyDelete
 25. :-)
  Azad avare!!
  SrikanthgU ondu doubt. adyaake chaMDamaarutakke hengasara heasaru antaa...
  nimma baLi uttara idre hELi please
  :-)
  malathi S

  ReplyDelete
 26. This comment has been removed by the author.

  ReplyDelete
 27. ಶ್ರೀಕಾಂತ್..ನೀವೂ ಹೆಂಗಸರನ್ನ ಕೆಟ್ಟೋರು ಅನ್ನೋ ತರಹ ಯಾಕೆ ಹೇಳ್ತೀರಾ,,,? ಎಲ್ಲಿ ಎಲ್ಲದಕ್ಕೂ ಹೆಂಗಸರ ಹೆಸರು ...?? ಚಂಡ ಮಾರುತಾ...? ಇದು ಗಂಡಸಿಗೆ ಸಂಬಂಧಿಸಿದ್ದು...ಚಂಡಿ ಮಾರುತ ಅಲ್ಲ....
  ಹಹಹಹ...ಮಾಲತಿಯವರು ಈಗ ಖುಷ ಅನ್ಸುತ್ತೆ....ಒಂದಕಾದರೂ ಗಂಡಸರ ಹೆಸರು ಅಂತ...ಭೂಕಂಪ...ಭೂಕಂಪಿ ಅಲ್ಲ...ಅಗ್ನಿ ಪರ್ವತ ...ಗಂಡಸೇ...ದೆವ್ವ...ಹೆಣ್ಣು ದೆವ್ವ ಅನ್ನದೇ ಇದ್ರೆ....ದೆವ್ವ ಅಂದ್ರೆ ಗಂಡಸೇ...

  ReplyDelete
 28. ಜಲನಯನ.,

  ಮೊನ್ನೆ ಮೊನ್ನೆ ಇದೇ ವಿಷಯದ ಬಗ್ಗೆ F.M.ನಲ್ಲಿ ಹೇಳ್ತಿದ್ರು..

  ReplyDelete
 29. ಗುರು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

  ReplyDelete
 30. ಅಜಾದ್,

  ಮತ್ತೆ ತಡವಾಗಿ ಬರುತ್ತಿದ್ದೇನೆ. ನಿಮಗೆ ಕಾರಣ ಗೊತ್ತು. ಅನೇಕ ಕೆಲಸಗಳಲ್ಲಿ ಸಿಕ್ಕಿಹಾಕಿಕೊಂಡು ತಡವಾಗಿದೆ. ಮತ್ತೆ ನಿಮ್ಮ ಈ "ಗೊತ್ತಿಲ್ಲ ಮಗು" ನನ್ನ ಫೇವರೇಟ್. ಅದು ಯಾವಾಗಲೂ ಚೆನ್ನಾಗಿರುತ್ತದೆ. ಅದನ್ನೂ ನಾನು ಯಾವತ್ತಿಗೂ ಮಿಸ್ ಮಾಡಿಕೊಳ್ಳೋದಿಲ್ಲ..
  ಧನ್ಯವಾದಗಳು.

  ReplyDelete
 31. ಶಿವು...ಬರೋದು ಮುಖ್ಯ ಬ್ಲಾಗ್ ಪ್ರಪಂಚದಲ್ಲಿ ಅನ್ನೋದು ತಡವಾಗಿಯಾದರೂ ಗೊತ್ತಾಗಿದೆ ನನಗೆ...ಹಹಹ..ಹೆಸರಿಗೆ ಎಷ್ಟೋ ಬ್ಲಾಗಿಗಗಳು ಇದ್ದಾರೆ ೬-೧೦ ತಿಂಗಳಾದರೂ ಬ್ಲಾಗ್ ಅಪ್ ಡೇಟ್ ಮಾಡೊಲ್ಲ...ಅಲ್ಲವಾ..?
  ನಿಮ್ಮ ವ್ಯಸ್ತತೆಯ ಮಧ್ಯೆ ಬಂದು ಕಾಮೆತ್ತಿಸಿದ್ದೀರಿ ಅದೇ ಹೆಚ್ಚು...ಧನ್ಯವಾದ

  ReplyDelete
 32. ರವಿಕಾಂತ್ರೇ..ಧನ್ಯವಾದ ..ಮಕ್ಕಳೂ ನಮ್ಮನ್ನ ಅವಿವೇಕಿಗಳು ಅನ್ನೋದು ಸಾಬೀತು ಮಾಡ್ತಾರೆ ಅನ್ನೋಕೆ ಅವರ ಸಿಂಪಲ್ ಪ್ರಶ್ನೆಗೆ ನಾವು ನಿರುತ್ತರಿಗಳಾಗೋದೇ ಸಾಕ್ಷಿ..

  ReplyDelete
 33. @ ಆಜಾದ್ ಸರ್ ...

  ಹ್ಹ ಹ್ಹ ಹ್ಹ ....ಬಹಳ ಚೆನ್ನಾಗಿದೆ.....ಧನ್ಯವಾದಗಳು ....

  ReplyDelete
 34. nangottilla magu tumbaa kaata kodta ide

  chennagide doctre

  ReplyDelete
 35. maguge laila baggenu gottu :) appaniginta jasti maguge gottu.. hosa jamana..

  chennagide

  pravi

  ReplyDelete
 36. ಯಾರ್ ಜೊತೆ ಮಾತಾಡಿದ್ರು ಮಕ್ಕಳ ಜೊತೆ ಮಾತಾಡೋದು ಕಷ್ಟ :)

  ReplyDelete
 37. ಅಶೋಕ್...ಧನ್ಯವಾದ ರೀ, ನಿಮ್ಮ ಪ್ರತಿಕ್ರಿಯೆಗೆ...ಮಕ್ಕಳು ನನ್ನ ಪ್ರಿಯ ಸಬ್ಜೆಕ್ಟ್ ...ಈ ನಂಗೊತ್ತಿಲ್ಲ ಮಗುಗೆ ಮಕ್ಕಳ ಪ್ರಶ್ನೆಗಳೇ ಸ್ಫೂರ್ತಿ

  ReplyDelete
 38. ಡಾ.ಗುರು...ಸ್ವಲ್ಪ ಗ್ಯಾಪ್ ನಂತರ ಮತ್ತೆ ಬ್ಲಾಗ್ ಸರ-ಸರ ಸಡಗರ...ಅಲ್ಲವಾ...ಧನ್ಯವಾದ ,,ಇಣುಕಿ ನಿಮ್ಮ ನಲ್ಮೆಯ ಮಾತನ್ನು ಹಾಕಿದ್ದಕ್ಕೆ.

  ReplyDelete
 39. ಪ್ರವೀಣ್ ಭಟ್ರೇ, ಮಕ್ಕಳು ಏನೇನು ಕಲೀತಾರೆ ಅನ್ನೋದು ನಮಗೆ ತಿಳಿಯೋಹೊತ್ತಿಗೆ ನಾವು ಗೊತ್ತಿಲ್ಲ-ಪ್ಪ ಆಗೋಗಿರ್ತೀವಿ...ಹಹಹ...ನಿಜ..ಜಮಾನ -ನಯಾ ಜಮಾನ

  ReplyDelete
 40. ಮಂಜು, ಥ್ಯಾಂಕ್ಸಪ್ಪ ನಿನ್ನ ಪ್ರತಿಕ್ರಿಯೆಗೆ...ಮತ್ತೆ
  ಹೌದು ಮಕ್ಕಳ ಜೊತೆ ಪಂಗ ..
  ಹುಶಾರಾಗಿರ್ಬೇಕು ಮಾಡ್ತಾರೆ ಮಂಗ

  ReplyDelete
 41. ಅಜಾದ್ ಸರ್
  ನಿಮ್ಮ ಕವಿತೆ ತುಂಭಾ ಚೆನ್ನಾಗಿರೋ ಕವಿತೆಯಾಗಿದೆ.
  ಧನ್ಯವಾದಗಳೂ

  ReplyDelete
 42. ಕನಸು ಮೇಡಂ ಬಹಳ ಅಪರೂಪದ ಕನಸು ಬಿದ್ರೆ...ಒಂದು ಕ್ಷಣಕ್ಕೆ ...ಬೆಚ್ಚಿಬೀಳ್ತೇವೆ ಅಲ್ಲವಾ...? ಹಹಹಹ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

  ReplyDelete