Friday, August 13, 2010

ಜಲನಯನ – ಸಾಫ್ಟಿಂದ ಹಾರ್ಡಿಗೆ,


ಮೀನು - ಜಲಜಾಕ್ಷಿ, ಮೀನಾಕ್ಷಿ ಚಂಚಲಾಕ್ಷಿ ಎಲ್ಲಾ...ಅದರ ಜೊತೆಗೆ ಪ್ರವೃತ್ತಿ ಜೊತೆ ವೃತ್ತಿಯ ಬೆಸುಗೆ..ಇದಕೆ ಸೂಕ್ತ ವೆನಿಸಿದ ಹೆಸರೇ – ಜಲನಯನ. ಮೊದಲಿಗೆ ಬ್ಲಾಗಿನಲ್ಲಿ ಹಲವರು “ಜಲಾನಯನ” ಎಂದೇ ಕಾಮೆಂತಿಸಿದರು...ಕೆಲವರು "ಜಲನಯನ” ಮೇಡಂ ಎಂದರು..ಒಂದು ರೀತಿ ಲಿಂಗ ಪರಿವರ್ತನೆಯನ್ನೂ ಮಾಡಿದರು ಎಂದರೂ ತಪ್ಪಲ್ಲ...!!!



ಕವನ – ನೀಳ್ಗವನ, ಇಡಿಗವನ, ಮಿಡಿಗವನ, ಹನಿಗವನ, ಚುಟುಕ, ನ್ಯಾನೋ ಹೀಗೆ..ಏನೇನೊ ತರ್ಲೆ ಸಹಾ ಮಾಡಿದ್ದುಂಟು ಈ –ಜಲನಯನ. ಅದನ್ನು ಸಾಫ್ಟಲ್ಲಿ ನೋಡಿ..ಬೆನ್ನು ತಟ್ಟಿ ಈಜು ಇನ್ನೂ ದೂರ ದೂರಕೆ ಬೆಳೆಯಲಿ ನಿನ್ನ ಪಯಣ ಎಂದಿರಿ, ಬೆನ್ತಟ್ಟಿದಿರಿ...ಪ್ರೋತ್ಸಾಹಿಸಿದಿರಿ...ಅನಿಸಿದ್ದೂ ಉಂಟು “ಓಹ್ ಕಂಡಿಲ್ಲ ನೋಡಿಲ್ಲ ..ಏನಿದು ನಂಟು..?”



ನನ್ನ ಬ್ಲಾಗ್ ಲೋಕಕ್ಕೆ ವಸ್ತುತಃ ಕೊಂಡು ಬಂದ ಶ್ರೇಯ ಸುಗುಣಾ ಮಹೇಶ್ ಗೆ ಸೇರಬೇಕು.. ಇದು ಒಬ್ಬರೇ..ಇಬ್ಬರೇ..ಇಬ್ಬರಾದ ಒಬ್ಬರೇ..? ಒಬ್ಬರಾದ ಇಬ್ಬರೇ...ಓಫ್ ..ಏನಿದು ಕಂಫ್ಯೂಶನ್?!! ಎನ್ನಬೇಡಿ..ನನಗೂ ಹಾಗೇ ಅನಿಸಿತ್ತು ಆಗ. ಬ್ಲಾಗಲ್ಲಿ ಬ್ಲಾಗಿಸುತ್ತಾ ಸಾಗಿದ ಜಲನಯನಕ್ಕೆ ಜೊತೆಯಾದದ್ದು “ಭಾವಮಂಥನ” ಮತ್ತು “Science & share” ಬ್ಲಾಗ್ ಸೋದರಿಯರು. ಬ್ಲಾಗ್ ಪೋಸ್ಟ್ ಗಳ ಶತಕ ಬಾರಿಸಿದ ’ಜಲನಯನ’ ವನ್ನು ಸಾಫ್ಟ್ ನಿಂದ ಹಾರ್ಡ್ ಗೆ ತರುವ ಯೋಚನೆ ನನಗೆ ಬರಲು ಕಾರಣ ನಮ್ಮ ಮಿತ್ರರಾದ ಪ್ರಕಾಶ್ ಮತ್ತು ಶಿವು. ಅವರ ಪುಸ್ತಕಗಳ ಬಿಡುಗಡೆಯಿಂದ ಪ್ರೇರಿತನಾಗಿ...ಅವರ ಮಟ್ಟದ ಲೇಖಕ-ಬ್ಲಾಗಿ ಅಲ್ಲದಿದ್ದರೂ ಅವರ ಪ್ರೋತ್ಸಾಹದಿಂದ ಜಲನಯನದ ಕವನಗಳ ಸಂಕಲನವನ್ನು ಮುದ್ರಿತ ರೂಪದಲ್ಲಿ ತರಬೇಕೆಂಬ ಹಂಬಲ ಬಲಿಯಿತು. ಪರಿಣಾಮ....ಇದೇ ಆಗಸ್ಟ್ ೨೨ ರಂದು ಕನ್ನಡ ಭವನ (ರವೀಂದ್ರ ಕಲಾಕ್ಷೇತ್ರದ ಬಳಿ) ದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಜಲನಯನ” ಹೆಸರಾಂತ ಸಾಹಿತಿ ಚುಟುಕ ಸಾಮ್ರಾಟ್, ಕೃಷಿ ತಜ್ಞ (ಬೆಂಗಳೂರು ಕೃ.ವಿ.ವಿ. ಯಲ್ಲಿ ೩-೪ ವರ್ಷ ನನಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದವರು) ಎಚ್.ಡುಂಡಿರಾಜ್ ರವರ ಅಮೃತಹಸ್ತದಿಂದ ಬಿಡುಗಡೆಗೊಳ್ಳುತ್ತಿದೆ. ಈ ಮೂಲಕ ನಾನು ಶ್ರೀಎಚ್.ಡುಂಡಿಯವರಿಗೆ ನನ್ನ ಆಭಾರಗಳನ್ನು ವ್ಯಕ್ತಪಡಿಸಿ.. ತಮ್ಮೆಲ್ಲರನ್ನೂ ಈ ಸಮಾರಂಭಕ್ಕೆ ಆಮಂತ್ರಿಸುತ್ತೇನೆ. ನನ್ನ ಜೊತೆಗೆ ನಮ್ಮೆಲ್ಲರ ಮಿತ್ರ ಕೆ.ಶಿವು ಸಹಾ ತಮ್ಮ “ಗುಬ್ಬಿ-ಎಂಜಲು” ಪುಸ್ತಕವನ್ನೂ ಬಿಡುಗಡೆ ಮಾಡುತ್ತಿದ್ದಾರೆ..ಹಾಗಾಗಿ ಜೋಡಿ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಹಾಜರಿ ಮತ್ತು ಪ್ರೋತ್ಸಾಹದ ಬೆಂಬಲ ಕೋರುತ್ತೇವೆ.



ಜಲನಯನಕ್ಕೆ ನಯನ ಮನೋಹರ ಮುಖಪುಟದ ವಿನ್ಯಾಸ ಮಾಡಿಕೊಟ್ಟ ಶ್ರೀಮತಿ ಸುಗುಣಾ ಮಹೇಶ್ (ಕುವೈತ್ ನ ನಮ್ಮ ಕನ್ನಡ ಕೂಟದ ಸಹ ಸದಸ್ಯರು) ರವರಿಗೆ ನನ್ನ ಕೃತಜ್ಞತೆಗಳು. ನಮ್ಮ ಹಸ್ತ ಪ್ರತಿಯನ್ನು ಹಸನುಗೊಳಿಸಿ ಭಾಷೆಯನ್ನು ಸರಿಪಡಿಸಿ..ಕರಡು ಮತ್ತು ಮದ್ರಣ-ಸಿದ್ಧಗೊಳಿಸಿದ್ದೇ ಅಲ್ಲದೇ ಆಕರ್ಷಕ ಬೆನ್ನುಡಿಯನ್ನೂ ಬರೆದ ನಮ್ಮೆಲ್ಲರ ಬ್ಲಾಗ್ ಮಿತ್ರ ಬೆಂಗಳೂರಿನ ಡಾ. ಬಿ.ಆರ್.ಸತ್ಯನಾರಾಣರವರ ಸಹಾಯ ಸಹಕಾರಗಳು ಸ್ತುತ್ಯಾರ್ಹ. ಈ ಪುಸ್ತಕಗಳು ಕೆ.ಶಿವುರವರ “ತುಂತುರು” ಪ್ರಕಾಶನದಡಿ ಪ್ರಕಾಶಿತಗೊಳ್ಳುತ್ತಿರುವಿದು ಇನ್ನೊಂದು ವಿಶೇಷ. ಮುಂದೆ ತಮ್ಮ ಕೃತಿಗಳನ್ನು ಮುದ್ರಿಸಿ ಪ್ರಕಾಶಿಸಲು ಇಚ್ಛಿಸುವ ನಮ್ಮ ಮಿತ್ರರಿಗೆ ಶಿವುರವರ ತುಂತುರು ಪ್ರಕಾಶನ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ.

ವಿಶೇಷ ಸೂಚನೆ: ನಮ್ಮ ಕಾರ್ಯಕ್ರಮದ ನಂತರ ನಾವು ಕೈಗೊಳ್ಳಬೇಕೆಂದುಕೊಂಡಿದ್ದ ಬ್ಲಾಗಿಗರ ಸಮಾವೇಶದ ಬಗ್ಗೆ ಹಿರಿಯ ಬ್ಲಾಗಿಗರ ಜೊತೆ ನಾವೆಲ್ಲ ಸೇರಿ ಒಂದು ವಿಚಾರ ಮಂಥನದ ಕಾರ್ಯಕ್ರಮದ ಯೋಚನೆಯನ್ನೂ ನಮ್ಮ ಹಿರಿಯ ಬ್ಲಾಗಿಗಳು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟು ಹೆಚ್ಚು ಹೆಚ್ಚು ಬ್ಲಾಗಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೋರಿಕೆ.


57 comments:

  1. ನಿಮ್ಮ ಬ್ಲಾಗ್ ಹೆಸರನ್ನು ಲಿಂಗ ಪರಿವರ್ತನೆಗೆ ಬಳಸಿದ ಮಹಾನುಭಾವ ಗಂಡು ಸಂತಾನಗಳನ್ನು ನೋಡಿ ನಗು ಬಂತು ! ನಿಮ್ಮಿಂದ ಅನೇಕ ಕೃತಿಗಳು ಸಾಫ್ಟ್ ಆಗಿ ಆಮೇಲೆ ಹಾರ್ಡ್ ಆಗಲಿ, [ ಶಿವು ಎಂಬ ವ್ಯಕ್ತಿ ನನಗೆ ಅಷ್ಟಾಗಿ ಗೊತ್ತಿಲ್ಲ, ಗೊತ್ತಿಲ್ಲದೆಯೂ ಅವರ ಬ್ಲಾಗಿನಲ್ಲಿ ಸೇರಿ, ಓದಿ ಪ್ರತಿಕ್ರಿಯೆ ಹಾಕಿದ್ದೆ ಮೊದಲೆಲ್ಲ-ಇತ್ತೀಚಿಗೆ ಬಂದು ಮಾಡಿದ್ದೇನೆ! ಅವರಿಗೂ ಒಳ್ಳೆಯದಾಗಲಿ ] ಧನ್ಯವಾದಗಳು.

    ReplyDelete
  2. ಕಾರ್ಯಕ್ರಮ ಯಶಸ್ವಿಯಾಗಲಿ. ನಾನು ಬರುತ್ತಿದ್ದೇನೆ.

    ReplyDelete
  3. nimmellarannu nodalu maisoorinda baruttidene.

    ReplyDelete
  4. Thanku bhayya.... khandita baruve... :-) nimgu all the bestu... :-)

    ReplyDelete
  5. ವಿ.ಆರ್.ಬಿ. ನಿಮ್ಮ ಅಭಿಮಾನಕ್ಕೆ ಶರಣು...ನಿಮ್ಮಂಥ ಸಕ್ರಿಯ ಮತ್ತು ಪ್ರತಿಭಾವಂತ ಬ್ಲಾಗಿ ಎಲ್ಲ ಬ್ಲಾಗಿಗರ ಲೇಖನಗಳಿಗೆ ಪ್ರತಿಕ್ರಿಯೆ ಪ್ರೋತ್ಸಾಹ ನೀಡುತ್ತಿರುವುದು ಆರೋಗ್ಯಕರ ಬ್ಲಾಗಿಂಗ್ ಗೆ ನಾಂದಿ....ತಪ್ಪದೇ ಬನ್ನಿ ನಮ್ಮ ಈ ಕಾರ್ಯಕ್ರಮಕ್ಕೆ

    ReplyDelete
  6. ಸೀತಾರಾಂ ಸರ್, ನೀವು ಬರಲು ಒಪ್ಪಿರುವುದಕ್ಕೆ ನಮಗೆ ಅತೀವ ಸಂತಸ ಸಕ್ರಿಯರಲ್ಲಿ ಹಿರಿಯ ಬ್ಲಾಗಿ ನೀವು ನಿಮ್ಮ ಪ್ರೋತ್ಸಾಹ ಹೀಗೇ ಸಾಗಲಿ...ಎಲ್ಲರ ಪ್ರಯತ್ನಕ್ಕೂ.

    ReplyDelete
  7. ಬಾಲು..ಮೈಸೂರಿಂದ ನಮಗಾಗಿ ನಮ್ಮ ಕಾರ್ಯಕ್ರಮಕ್ಕೆ ಆಗಮಿಸುವ ನಿಮಗೆ ತುಂಬು ಹೃದಯದ ಸ್ವಾಗತ

    ReplyDelete
  8. ಪರಾಂಜಪೆ ಸರ್, ಧನ್ಯವಾದ ನಿಮ್ಮ ಅಭಿಮಾನ ಮತ್ತು ಆತ್ಮೀಯತೆಗೆ

    ReplyDelete
  9. ದಿವ್ಯಾ..ನೀನು ಬರದೇ ಇರಲು ಸಾಧ್ಯವೇ ಇಲ್ಲ...ಆದ್ರೂ ನಮ್ಮ ಧನ್ಯವಾದ ನಿನ್ನ ಪ್ರೋತ್ಸಾಹಕ ಮಾತಿಗೆ.

    ReplyDelete
  10. ಸಾಫ್ಟ್ ನಿಂದ ಹಾರ್ಡ್ ಆಗ್ತಿರೋ ನಿಮ್ಗೆ ಶುಭಾಶಯಗಳು..ನಿಮ್ಮೆಲ್ಲರ ಜೊತೆಗೂಡಲು
    ನಾವು ಬರುತ್ತೇವೆ!!

    ReplyDelete
  11. ಹಹಹ ನನ್ನ ಕವನಗಳು ಹಾರ್ಡ್ ಆಗ್ತಿರೋದು ಸುಮನಾವ್ರೆ...ನಾನಲ್ಲ...ನಾನು ಅದೇ ಸಾಫ್ಟೇ...ಹಹಹ ಧನ್ಯವಾದ ನಿಮ್ಮೆಲ್ಲರ ಆಗಮನ ನಮಗೆ ಶಕ್ತಿ ಬಂದಂತೆ.

    ReplyDelete
  12. ಆಜಾದ್ ಸರ್...
    '' ಜಲನಯನ ೧'' ಕ್ಕೆ ಶುಭಾಶಯ..... ನಿಮ್ಮ ಅಭಿಯಾನ ಹೀಗೆ ಮುಂದುವರಿಯಲಿ...... ನಾನು ಖಂಡಿತ ಬರುತ್ತಿದ್ದೇನೆ..... ಮಂಗಳೂರಿನಿಂದ/ ಭಟ್ಕಳದಿಂದ.... ಬ್ಲಾಗ್ ಓದುವ.... ಬರೆಯುವ ಎಲ್ಲಾ ಸ್ನೇಹಿತರಿಗೂ ವಿನಂತಿ ಎಂದರೆ... ಖಂಡಿತ ಎಲ್ಲರು ಬನ್ನಿ.... ಒಮ್ಮೆ ಎಲ್ಲರು ಸೇರೋಣ.....

    ReplyDelete
  13. ಆಜಾದ್ ಭಾಯಿ,
    ನಿಮ್ಮಕವನ ಸ೦ಕಲನದ ಬಿಡುಗಡೆ ತಿಳಿದು ಖುಶಿಯಾಯ್ತು..ಶುಭಾಶಯಗಳು.
    ಶಿವು ಅವರಿಗು ಶುಭಾಶಯಗಳು.

    ReplyDelete
  14. ಛಾಯಕಂನಡಿ'ಯಲ್ಲೇ ನೋಡಿದೆ..
    ನಿಮ್ಮ ಸಂಕಲನದ ಮುಖಪುಟ ವಿನ್ಯಾಸ ವಿಶೇಷವಾಗಿದೆ..

    ReplyDelete
  15. ತುಂಬಾ ಸಂತಸದ ವಿಷಯ, ಪುಸ್ತಕ ಬಿಡುಗಡೆಯ ದಿನಕ್ಕಾಗಿ ಕಾಯುತ್ತಾ . . .

    ReplyDelete
  16. ದಿನಕರ್ ಧನ್ಯವಾದ...ಹಾಗೇ ಸ್ವಾಗತ..ನಿಮ್ಮೆಲ್ಲರ ಆಗಮನ ನಮಗೆ ಹುಮ್ಮಸ್ಸನ್ನು ತಂದಿದೆ.

    ReplyDelete
  17. ಮನಮುಕ್ತಾರವರಿಗೆ ನಿಮ್ಮ ಅತ್ಮೀಯತೆಗೆ ಧನ್ಯವಾದ ನಿಮ್ಮನ್ನು ನಿರೀಕ್ಷಿಸುತ್ತೇವೆ...

    ReplyDelete
  18. ಕತ್ತಲೆ ಮನೆ (ನಿಮ್ಮ ಹೆಸರು ತಿಳಿದಿದ್ದರೆ ಚನ್ನಾಗಿರುತ್ತಿತ್ತು...) ನಿಮಗೆ ಸ್ವಾಗತ ನಮ್ಮ ಕಾರ್ಯಕ್ರಮಕ್ಕೆ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  19. ಎನ್ನಾರ್ಕೆ ಸರ್, ನಿಮ್ಮ ನಿರೀಕ್ಷೆ ಖಂಡಿತಾ ಮಾಡುತ್ತೇವೆ...ಧನ್ಯವಾದ

    ReplyDelete
  20. ಪುಸ್ತಕ ಬಿಡುಗಡೆ ಸಮಾರಂಭ ಸಾಂಗವಾಗಿ ನೆರವೇರಲಿ

    ReplyDelete
  21. ಜಲನಯನ,
    ನಿಮಗೆ ಹಾಗು ಶಿವುಗೆ ಶುಭಾಶಯಗಳು. ಸಮಾರಂಭ ಸೊಗಸಾಗಿ ಜರುಗಲಿ ಎಂದು ಹಾರೈಸುತ್ತೇನೆ.

    ReplyDelete
  22. ಧನ್ಯವಾದ ವನಿತಾ...ನಿಮ್ಮ ರಿಮೋಟ್ ಪ್ರೋತ್ಸಾಹ ನಮ್ಮ ಲೇಖನವನ್ನು ಪ್ರಮೋಟ್ ಮಾಡುವುದು....

    ReplyDelete
  23. ಸುಗಾವಿಯವರೇ ಧನ್ಯವಾದ ನಿಮ್ಮ ಹಾರೈಕೆಗೆ...

    ReplyDelete
  24. ಸುನಾಥಣ್ಣ ನಿಮ್ಮ ಆಗಮನವಾಗಿದ್ದಿದ್ದರೆ ನಮಗೆ ದುಪ್ಪಟ್ಟು ಖುಷಿಯಾಗುತ್ತಿತ್ತು...ನಿಮ್ಮ ಹಾರೈಕೆ ಆಶೀರ್ವಾದಗಳನ್ನು ಕಾರ್ಯಕ್ರಮಕ್ಕೆ ಎಂದಿರುವ ನಿಮ್ಮ ಆತ್ಮೀಯತೆಗೆ ಧನ್ಯವಾದ.

    ReplyDelete
  25. all the best sir.... Air ticket sikta illa sikkare kandita barutteve...

    ReplyDelete
  26. ಅರೆರೆ...ಏನಿದು...??!! ಶಾಕ್ ಕೊಡೋಕೂ ಬರುತ್ತಾ...ಹಹಹ..ಖಂಡಿತಾ ನಿಮಗೆ ಸಿಗದಿದ್ದ್ರೆ ಒಂದು ಚಾರ್ಟೆಡ್ ಫ್ಲೈಟೇ ಹೊರಡ್ಸೋದು....

    ReplyDelete
  27. ಶ್ವೇತಾ...ನಿಮ್ಮ ಆಗಮನಕ್ಕೆ ಎದುರುನೋಡುತ್ತೇವೆ..ಸ್ವಾಗತಂ...

    ReplyDelete
  28. All the bestu...
    Missing the functionu.....

    ReplyDelete
  29. ಏನ್ ಮಯೇಸಣ್ಣ ಎತ್ತಾಕ್ಕೊಂಡ್ ಓಗಾಕ್ ಸುಪಾರಿ ಕೊಡ್ಬೇಕಾಯ್ತದೆ ಆಮ್ಯಾಕೆ...ಅಟ್ಟೇಯಾ..ಊಂ...ಉಸಾರು ....

    ReplyDelete
  30. ರೀ...ರೀ...ರೀ...ಎಸ್ಸೆಸ್ಕೆ...????? ಮೊದಲೇ ತಲೆ ಕೆಟ್ಟ್ ಕೆರ ಆಗೈತೆ...ನೀವು ಇಂಗೇ ಎಸ್ರು ಪಸ್ರು ಯೋಳಲ್ಲ ಅಂದ್ರೆ ಓಗ್ಲಿ ಅತ್ತಾಗೆ..ಒಂದ್ ನೆಟ್ಟಕ್ಕೆ ಏನಾರ ಗೀಚೋದಲ್ವಾ...ಸಣ್ಮಕ್ಕಳು ...ಕೊಚ್ಚನ್ ಕೇಳೋವಂಗೆ ನಾಲ್ಕೈದು ಕುಡ್ಗೋಲ್ ಆಕ್ಬುಟ್ರೇ ಬುಟ್ಟೇನಾ,,,ಇರಿ ವಸಿ ಬೆಂಗ್ಳೂರ್ಗ್ ಬಂದ್ಮ್ಯಾಕೆ ಯೋಳ್ತೀವ್ನಿ....

    ReplyDelete
  31. ಮುಖಪುಟ ಚೆನ್ನಾಗಿದೆ ಜಲನಯನ ಸರ್....

    ನಿಮಗೆ ನನ್ನ ಶುಭ ಹಾರೈಕೆಗಳು..

    ReplyDelete
  32. ಮೊದಲಿಗೆ ನಿಮಗೆ ಅಭಿನಂದನೆಗಳು... ನಾನೂ ಬರಬೇನ್ದಿದ್ದೇನೆ... ನೋಡೋಣ..

    ReplyDelete
  33. ಆಜಾದ್ ಅವರೇ,
    ಅಭಿನಂದನೆಗಳು. ಯಶಸ್ಸು ಎಂದಿಗೂ ತಮ್ಮೊಂದಿಗಿರಲಿ. ಜಲನಯನದ ಮುಖಪುಟ ವಿನ್ಯಾಸ ಬಹಳ ಚೆನ್ನಾಗಿದೆ. ಪುಸ್ತಕ ಓದುವ ಹಂಬಲ ಬಹಳ ಇದೆ.

    ReplyDelete
  34. ಸುಧೇಶ್ ನಿಮ್ಮ ಹಾರೈಕೆ ನಮಗೆ ಸದಾ ಹುಮ್ಮಸ್ಸಿಗೆ ಹಾದಿ..ಧನ್ಯವಾದ

    ReplyDelete
  35. ರವಿಕಾಂತ್ ಸರ್ ಧನ್ಯವಾದ ನಿಮ್ಮ ಹಾರೈಕೆಗೆ...ನಿಮ್ಮನ್ನೆಲ್ಲಾ ನೋಡುವ ಆಶಯ ಈಡೇರುತ್ತೆ ಎಂದುಕೊಳ್ಳುತ್ತೇನೆ..

    ReplyDelete
  36. ಸಾಗರಿಯವರೇ...ಪುಸ್ತಕ ಓದುವ ನಿಮ್ಮ ಇಛ್ಛೆಯೂ ಪೂರೈಸುತ್ತೆ ನೀವು ಆಗಸ್ಟ್ ೨೨ ಕ್ಕೆ ಕನ್ನಡ ಭವನಕ್ಕೆ ಬಂದು ನಮಗೆ ಪ್ರೋತ್ಸಾಹ ನೀಡಿದರೆ....ಧನ್ಯವಾದ

    ReplyDelete
  37. ಅಭಿನಂದನೆಗಳು Sir..:)

    ReplyDelete
  38. ಸರ್

    ಕಾರ್ಯಕ್ರಮಕ್ಕೆ ಇಲ್ಲಿನ್ದನೆ ಶುಭ ಕೋರುವೆ

    ಯಶಸ್ಸು ನಿಮ್ಮದಾಗಲಿ

    ReplyDelete
  39. ಶ್ರವಣ್ ಧನ್ಯವಾದ ಬಿಡುವುಮಾಡಿಕೊಂಡು ಬನ್ನಿ,,,,
    ನಿಮ್ಮ ಪ್ರೋತ್ಸಾಹ ಪ್ರತ್ಯಕ್ಷವಾಗಲಿ..

    ReplyDelete
  40. ಗುರು...ಥ್ಯಾಂಕ್ಸ್..ನಿಮ್ಮ ಅಭಿಮಾನ ಆತ್ಮೀಯತೆ..ಪ್ರೋತ್ಸಾಹಗಳು ಹೀಗೆ ಇರಲಿ...ನಿಮಗೆ ಕ್ಲಿಪ್ಸನ್ನು ಕಳುಹಿಸುತ್ತೇನೆ..

    ReplyDelete
  41. kaarykrama yashashwiyaagali..Nimagu haagu Shivu avrigoo hridaya purvaka abhinandanegalu..nangu elrunu meet aagbeku anno aase ide...Mumbainalli male jaasti illade, fligt ella sari timege idre khandita baruttene....

    ReplyDelete
  42. "ಜಲನಯನ" ಒಳ್ಳೆಯ ಹೆಸರು.

    ಆದರೆ ನಾನೂ ಬರುತ್ತೇನೆ.

    ನನ್ನ ಬ್ಲಾಗ್ www.nallanalle.blogspot.com ಗೆ ಭೇಟಿ ನೀಡಿ.

    ReplyDelete
  43. Hi Ajad sir...

    nimminda innu intaha tumba baravanige barali...

    karyakrama yashasviyagali.. urige hoguttiruva karana baralaguvudilla .. kshameyirali

    pravi

    ReplyDelete
  44. Ashok
    Thanks...nimma blog nodilla ee madhye swalpa busy aagi bitte...barteeni omme...
    Thanks nimma haaraikege

    ReplyDelete
  45. Praveen dhanyavaada nimma haaraike nammondigedeyella...neevoo pratyaksha iddiddare chennagirtittu....

    ReplyDelete
  46. Shipra.....nimmanna noduva matte interact maado nanna june tingla aase neraveralilla ee sarti sigona matte neevella illadiddare hege aagutte kaaryakrama??

    ReplyDelete
  47. ಆಜಾದ್ ಅವರೆ,
    ನಿಮ್ಮ ಕವನ ಸಂಕಲನ ಬಿಡುಗಡೆಯಾಗುತ್ತಿರುವ ಸಂಧರ್ಭದಲ್ಲಿ ನನ್ನ ಶುಭ ಹಾರೈಕೆಗಳು.

    ReplyDelete
  48. ನಾರಾಯಣ್ ಸರ್...ತಮ್ಮಂಥವರ ಆಶೀರ್ವಾದ ನತ್ತು ಹಾರೈಕೆಗೆ ಧನ್ಯವಾದ...ದಯಮಾಡಿ ಕಾರ್ಯಕ್ರಮಕ್ಕೆ ಬನ್ನಿ,,,

    ReplyDelete
  49. ಬಂದಿದ್ದೆ.
    ಭೇಟಿಯಾಗಿದ್ದೆ... ನಿಮ್ಮನ್ನೂ ಅನ್ಯ ಅನೇಕ ಬ್ಲಾಗಿಗರನ್ನೂ...
    ಸಂತಸಗೊಂಡಿದ್ದೆ.
    ಧನ್ಯವಾದಗಳು.
    -ಆತ್ರಾಡಿ ಸುರ‍ೇಶ ಹೆಗ್ಡೆ
    ಆಸುಮನ http://athradi.wordpress.com

    ReplyDelete
  50. ಆಸು ಸರ್, ತುಂಬಾ ಸಂತೋಷವಾಯ್ತು...ನೀವು ಬಂದದ್ದು ನಮಗೆ ಪ್ರೋತ್ಸಾಹ ನೀಡಿದ್ದು...

    ReplyDelete
  51. ಗಿಳಿಯರ್ ನಿಮ್ಮ ಸಂತೋಷ ನಮ್ಮೆಲ್ಲರ ಭಾಗ್ಯ ಧನ್ಯವಾದ

    ReplyDelete
  52. ವಸಂತ್...ನಾನು ಮೈಲ್ ನಿಮಗೆ ಮಾಡಲಾಗಲ್ಲ ಕ್ಷಮಿಸಿ..

    ReplyDelete