Friday, October 1, 2010

ನನ್ನದೊಂದು ವಿನಂತಿ


ಜಗದ ಜನಕೆ ತೋರಿತೊಂದು ಭಾರತ

ಇತಿಹಾಸವೀಗ ಕನಸಾಗಿತ್ತು ಅವಿರತ

ನಿಸರ್ಗ-ಸಗ್ಗ ಜನಮನವೆನಿಸಿ ಬಹುಹಿತ

ವಿಶ್ವ ಸಕಲಕೆ ಮಾದರಿ ಅಂದು ಭಾರತ



ದಂಡು ಹೊರಟವಂದು ಕಂಡುಕೊಳ್ಳಲು ಮಾರ್ಗ

ಹಿಂಡು ಹಿಂಡಾಯ್ತು ಬಂಡುಕೋರರಿಗೂ ಸ್ವರ್ಗ

ಸಾಗರದಾಟಿ ಬಂದು ಮಾರ್ಗ ಹುಡುಕಲು ಹುಮ್ಮಸ್ಸು

ಅಲೆಯಮೇಲಲೆದು ದಾರಿತಪ್ಪಿದನಂದು ಕೊಲಂಬಸ್ಸು



ಸಿಂಧೂ ಕಣಿವೆಯಲ್ಲಿ ಮೆರೆದಿತ್ತು ನಾಗರೀಕತೆ

ಗಂಗಾತೀರ, ಗೋದಾವರಿ ಕೃಷ್ಣೆ ಕಾವೇರಿ ಗೀತೆ

ಎಲ್ಲೆಲ್ಲೂ ನಾಡರಸರು ತುಂಬಿತ್ತೆಲ್ಲೆಡೆ ಮಂದಹಾಸ

ಜನಮನ ಜೀವನದಲ್ಲಿತ್ತು ಕಂಡರಿಯದ ಸಂತಸ



ಹಿಮಾಲ ಮೆಟ್ಟಿಬಂದ ದಾಳಿಕೋರರು ಹಲವರು

ಬಂದು ನೆಲಸಿ ನಾಡಲೊಂದಾದ ಕೆಲ ಅರಸರು

ಬಂದನಾಗ ದಾರಿತೋರಿ ದಕ್ಕನಿಗೆ ವಾಸ್ಕೋಡಗಾಮ

ವೈಮನಸ್ಯ ಬೀಜ ಬಿತ್ತಿ ನಡೆಸಲು ಮಾರಣಹೋಮ


ನಮ್ಮ-ನಮ್ಮಲ್ಲೇ ಕಿತ್ತಾಟ ತಕ್ಕಡಿ ಹಿಡಿದವಗೆ ಜುಟ್ಟು

ಎತ್ತಿ ಕಟ್ಟಿದವ, ಆಮಿಶಗೊಂಡು ಕೊಟ್ಟೆವವಗೆ ಜುಟ್ಟು

ಐನೂರು ವರ್ಷ ಸತತ ಕೊಳ್ಳೆ, ಬರಿದಾಯ್ತು ತುಂಬು ಕಣಜ

ಸ್ವಾತಂತ್ರ್ಯಕೊಟ್ಟರು ಕಂಡು ಎಲ್ಲೆಡೆ ತಹತಹಿಸುವ ಮನುಜ


ಈಗ ಹಿಡಿದಿಹರು ನಮ್ಮವರೇ ನಮ್ಮ ಜುಟ್ಟು

ನಾಡ ಸಂಪದ ಮಾಡಿ ಸ್ವಂತ ಉಳಿಸಿ ಹೊಟ್ಟು

ಪರಕೀಯರಿಗಿಂತ ಕೀಳು ತಂದಿಡುವರು ನಮ್ಮಲ್ಲೇ

ಮತ-ಜಾತಿ ಗಲಭೆ ಅವರ ಬೇಳೆ ಬೇಯುವುದೂ ಇಲ್ಲೇ



ನ್ಯಾಯಾಲಯ ತೂಗಿಹುದು ಎಲ್ಲರ ಬೇಳೆಯ ಈ ಬಗೆ

ಕೊಟ್ಟು ಬೇಳೆ ಒಬ್ಬಗೆ ಬೇಯಿಸಲು ಇಂಧನ ಮತ್ತೊಬ್ಬಗೆ

ಯುವಜನ-ಜನ ಮೆರೆದಿಹರು ಅಪೂರ್ವ ವಿವೇಚನೆ

ಸೊಪ್ಪು ಹಾಕದೆ ಮನಮುರಿವರ ಮತ್ತೊಂದು ಅಲೋಚನೆ



ಆಶಯ ನನ್ನದು, ಜಗದಲಿ ಮೆರೆವ ಶಕ್ತಿಯ ದೇಶ

ವಿವೇಚನೆ ಮತ್ತೂ ಪ್ರಖರಗೊಳ್ಳಲಿ ಬೆಳಗುಪ್ರಕಾಶ

ಆಗಲೊಂದೇ ಧ್ಯೇಯ ದೇಶದ ಬಹುಮುಖ ಪ್ರಗತಿ

ನಡೆಯಲೊಂದೇ ನ್ಯಾಯ, ಎಲ್ಲರ ಸುಖದ ಭಾರತಿ

49 comments:

  1. ನಿಮ್ಮ ಆಶಯವೇ ನನ್ನದೂ ಸಹಾ! ಚೆನ್ನಾಗಿ ಹೇಳಿದ್ದಿರಾ...

    ReplyDelete
  2. ಆಜಾದ್,
    ನಿಮ್ಮ ಆಶಯಕ್ಕೆ ನನ್ನ ತುಂಬು ಹೃದಯದ ಹಾರೈಕೆಯಿದೆ. ನಾವೆಲ್ಲಾ ಕೂಡಿ ,ಒಂದಾಗಿ ದೇಶವನ್ನು ಒಗ್ಗೂಡಿಸುವ ಪ್ರಯತ್ನ ಮಾಡ ಬೇಕಿದೆ .
    ಸ್ವಾರ್ಥಿ, ಕಪಟ ರಾಜಕಾರಣಿಗಳನ್ನು ಒಂದು ದಾರಿಗೆ ತಂದ ಹೊರತು ನಮ್ಮ ದೇಶ ಉದ್ಧಾರವಾಗದು .

    ReplyDelete
  3. ಸಿತಾರಾಂ ಸರ್...ನಮ್ಮೆಲ್ಲರ ಆಶಯ ಮತ್ತೆ ಮಿಕ್ಕವರ ಆಶಯ...ಎಲ್ಲಾ ಕೂಡಿದರೆ...?? ಓಹ್ ಅಪೂರ್ವ ಕಲ್ಪನೆ ಆಗದಿರಲಿ...

    ReplyDelete
  4. ಚಿತ್ರಾ ಧನ್ಯವಾದ...ಹೌದು ನಮ್ಮೆಲ್ಲ್ರರ ಆಶಯ..ಇದೇ...ಆದ್ರೆ ಛೆ ಛೆ...ಈಗಷ್ಟೇ ನೋಡಿದೆ ನ್ಯೂಸ್...ಕಟ್ಟಾ ಪಕ್ಕಾ ಅವ್ಯವಹಾರ ಮಾಡಿದ್ರೂ ಸಿ.ಎಂ ಸಾಹೇಬ್ರು ಮಕ್ಕಳು ಮಾಡಿದ್ದಕ್ಕೆ ಅಪ್ಪಯಾಕೆ ಹೊಣೆಯಾಗಬೇಕು ಎನ್ನುವುದೇ..? ಎಲ್ಲಿಗೆ ಸಾಗಿದೆ ಮಂತ್ರಿಗಳ ಪಯಣ....??

    ReplyDelete
  5. ಆಜಾದ್ ಭಾಯಿ,
    ತು೦ಬಾ ಸು೦ದರ ಆಶಯ...ಎಲ್ಲರೂ ಒಗ್ಗಟ್ಟಿನಿ೦ದ ದೇಶದ ಉನ್ನತಿಗಾಗಿ ಹಾರೈಸೋಣ.
    ಸಮಯ ನೋಡಿ ಒಗ್ಗಟ್ಟನ್ನು ಮುರಿದು ಸ್ವಾರ್ಥ ಸಾಧಿಸಿಕೊಳ್ಳಬಯಸುವ ರಾಜಕಾರಣಿಗಳ ಕುಬುದ್ಧಿಗೆ ಆಸ್ಪದ ಕೊಡಬಾರದು.
    ವ೦ದನೆಗಳು.

    ReplyDelete
  6. ನಿಮ್ಮ ವಿನಂತಿಗೆ ನಮ್ಮ ಮನ್ನಣೆ ಇದೆ.

    ReplyDelete
  7. ತುಂಬಾ ಸುಂದರ ಆಶಯ ಸರ್

    ದಿನಕರ ದೇಸಾಯಿಯವರು ಹೇಳಿದ ಮಾತು ನೆನಪಿಗೆ ಬರುತ್ತಿದೆ...

    ''ಮನುಕುಲದ ರಕ್ತಮಯ ಇತಿಹಾಸ ಕೂಗಿತ್ತು
    ನೆಲವು ನಂದನವಾಗಲೇನು ಬೇಕು?
    ತಿಳಿವು ತುಂಬಿದ ಕಣ್ಣು, ಅರಿವು ತುಂಬಿದ ಎದೆಯು
    ಛಲವನರಿಯದ ಬದುಕು ಇಷ್ಟೇ ಸಾಕು''

    ಅಂತ

    ಸುಂದ ಕವನ

    ReplyDelete
  8. ಆಜಾದ್ ನಿಮ್ಮ ಕವಿತೆಯ ಆಶಯ ಛಂದಅದ ಹಿಂಗಾಗಲಿ ಇದು ನಮ್ಮ ಕನಸು

    ReplyDelete
  9. ಮನಮುಕ್ತಾ..ನಿಮ್ಮ ಮುಕ್ತ ಹಾರೈಕೆ ಮತ್ತು ಕೈಜೋಡಿಸುವ ಪ್ರೋತ್ಸಾಹಕ್ಕೆ ಶರಣು,,,ಇದು ಎಲ್ಲರಲ್ಲಿ ಮೂದಬೇಕಾದ ಭಾವನೆ,,,

    ReplyDelete
  10. ಗುಬ್ಬಚ್ಚಿ ಸತೀಶ್...ನಿಮ್ಮ ಬಳಗ - ಗುಬ್ಬಚ್ಚಿ ಬಳಗ...ನಮ್ಮ ಜೊತೆಗಿರಲಿ...
    ಧನ್ಯವಾದ

    ReplyDelete
  11. ಡಾ, ಗುರು ಧನ್ಯವಾದ ನಿಮ್ಮ ಆಶಯ ನಮ್ಮ ಆಶಯ ಎಲ್ಲರ ಆಶಯ,,,

    ReplyDelete
  12. This comment has been removed by the author.

    ReplyDelete
  13. ಉಮೇಶ್ ಸರ್, ನೀವೂ ಬಂದರೆ ನಮ್ಮ ಬಲ ಹೆಚ್ಚಿದಂತೆ...

    ReplyDelete
  14. ನಿಮ್ಮ ಆಶಯ ಮತ್ತು ವಿನಂತಿಗೆ,,, ನಮ್ಮ ಬೆಂಬಲವಿದೆ..... ನಮ್ಮ ಭಾರತ ದೇಶ,,,, ಎಲ್ಲರಿಗೂ ಮಾದರಿ ಆಗಬೇಕು.......ಶಾಂತಿ,,, ಸಾಮರಸ್ಯಗಳ ... ನಾಡಾಗಬೇಕು ... ಇದರಿಂದಲೇ ಪ್ರಗತಿ ಕಾಣುವುದು ಸಾಧ್ಯ...

    Guru

    ReplyDelete
  15. ಸಂದರ್ಭೋಚಿತ ಸುಂದರ ಕವನಕ್ಕೊಂದು ಧನ್ಯವಾದಗಳು sir

    ReplyDelete
  16. ಜಲನಯನ,
    ಇದು ಎಲ್ಲ ಆದರ್ಶವಾದಿ ಭಾರತೀಯರ ಕನಸು. ಈ ಕನಸು ನನಸಾಗಲು ಪ್ರಯತ್ನಿಸೋಣ!

    ReplyDelete
  17. ಗುರು, ಆಶಯಕ್ಕೆ ನಿಮ್ಮದೂ ವಿನಂತಿ ಸೇರಿದರೆ ಸೋನೆ ಪೆ ಸುಹಾಗ...ಅಲ್ಲವೇ..? ಧನ್ಯವಾದ...

    ReplyDelete
  18. ಸೌಮ್ಯ..ನೀವು..ಜಲನಯನಕ್ಕೆ ಬಂದಿರಿ, ಸ್ವಾಗತ ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...,

    ReplyDelete
  19. ಸುನಾಥಣ್ಣ...ಹಿರಿಯ ಆದರ್ಶವಾದಿ ದಾರ್ಶನಿಕರು ನಿಮ್ಮಂಥ ಮೇಧಾವಿಗಳು ಯುವ ಪೀಳಿಗೆಯ ದಿಶಾ ನಿರ್ದೇಶನಕ್ಕಿಳಿದರೆ...ರಾಜಕೀಯ ದುರ್ನಡತೆಯ ದಿಕ್ಕುತಪ್ಪಿಸುವ ದಿಶಾನಿರ್ದೇಶನದಿಂದ ಯುವ ಜನತೆ ದೂರಾಗುತ್ತೆ...ಗಾಂಧೀಜೀಯ ಕನಸು ನನಸಾಗುತ್ತೆ.

    ReplyDelete
  20. ನಮ್ಮ ಮನದ ಆಶಯವನ್ನು ನಿಮ್ಮ ಮಾತಿನಲ್ಲಿ ಹೇಳಿದಿರಿ, ಸು೦ದರ ಸಾಲುಗಳಲ್ಲಿ..
    ಶುಭಾಶಯಗಳು ಅಜಾದ್ ಸರ್.

    ಅನ೦ತ್

    ReplyDelete
  21. ಅಜಾದ್ ಸರ್;ತುಂಬಾ ಒಳ್ಳೆಯ ಕವನ.ನಿಮ್ಮ ಆಶಯವೇ ನಮ್ಮೆಲ್ಲರ ಆಶಯ.ಧನ್ಯವಾದಗಳು.

    ReplyDelete
  22. ಆಜಾದು...

    ಬಹಳ ಸೊಗಸಾದ ಕವನ...
    ಅದರ ಆಶಯಗಳು ನಮ್ಮೆಲ್ಲರ ಆಶಯ..

    ಅಭಿನಂದನೆಗಳು..

    ReplyDelete
  23. ಆಜಾದ್ ಸರ್,
    ನಿಮ್ಮ ಆಶಯ ಭಾರತದ ಆಶಯವಾಗಲಿ ಸರ್...... ಹಾಗೆ ಸರ್ವ ಜನ ಸಮನ್ವಯ ಭಾವ ಬೆಳೆಯಲಿ..... ನಮ್ಮ ದೇಶ ಜಗತ್ತಿಗೆ ಮಾದರಿಯಾಗಲಿ..... ನಿಮ್ಮ ಕವನದ ಆಶಯಕ್ಕೆ ಧನ್ಯವಾದ ಸರ್...

    ReplyDelete
  24. ಸುಂದರ ಕವನ ಆಜಾದ್ ಭಯ್ಯಾ... ಜೈ ಹೊ...

    ReplyDelete
  25. nimma aashaya nammellara bharatiyara ashya agali sir.... jai bharath... nimma ashaya nammallarigu tilisi nammaagu ashaya tumbida nimma e kavana mattu nimagu danyavaada sir....

    ReplyDelete
  26. ಸ್ವಲ್ಪ cunfuse ಆಯಿತು ,ಎಲ್ಲಾ ಓದಿದಮೇಲೆ ಅರ್ಥವಾಯಿತು ಸರ್ ದೇಶದ ಮೇಲಿನ ಪ್ರೀತಿ ತುಂಬಾ ಸೊಗಸಾಗಿದೆ . ಸುಂದರ ಸಾಲುಗಳು ....

    ReplyDelete
  27. ಕವನದೊಟ್ಟಿಗೆ ನಿಮ್ಮ ಅಭಿಲಾಷೆಯೂ ಚೆನ್ನಾಗಿದೆ ಜೈ ಭಾರತಾಂಬೆ

    ReplyDelete
  28. ಸುಂದರ ಸಾಲುಗಳು, ನಿಮ್ಮ ಕವನದ ಆಶಯಕ್ಕೆ ಧನ್ಯವಾದ

    ReplyDelete
  29. ಉತ್ತಮ ಕವನ..
    "ಅರವತ್ತು ವರ್ಷಗಳ ಹಿಂದೆ ನಾವು ಬ್ರಿಟಿಷರ ಕೈಕೆಳಗೆ ಗುಲಾಮರು,
    ಇಂದು ನಮ್ಮವರ ಕೈಕೆಳಗೆ ನಾವು ಗುಲಾಮರು..
    ಇದಕ್ಕೆ ಹೆಸರು ಸ್ವಾತಂತ್ರ್ಯ.." ಎಂಬ ಸಂಭಾಷಣೆ ನೆನಪಾಗುತ್ತದೆ...[ಚಿತ್ರ: ವೀರಪ್ಪನಾಯ್ಕ..:]

    ನನ್ನ ಗೆಳತಿ ಈಗ ವಿ.ಸಿ.ಫಾರ್ಮ್ ನಲ್ಲಿ ದ್ವಿತೀಯ ವರ್ಷದ ಬಿ.ಎಸ್ಸಿ. [ಅಗ್ರಿ.] ಓದುತ್ತಿದ್ದಾಳೆ..
    ನೀವು ಯಾವಾಗ, ಯಾವ ವಿಷಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಿರಿ ಎಂದು ತಿಳಿಸಿದರೆ ನಾನು ವಿಚಾರಿಸುತ್ತೇನೆ..

    ReplyDelete
  30. This comment has been removed by the author.

    ReplyDelete
  31. ಚಂದವಾದ ಸ್ವಲ್ಪ ಉದ್ದವಾದ ಕವನ ಚನ್ನಾಗಿ ಮೂಡಿ ಬಂದಿದೆ ಸರ್

    ಆಶಯಗಳ ಸಾಲು ಸೊಗಸಾಗಿದೆ

    ಜೈ ಹೋ

    ReplyDelete
  32. ಸುಂದರ ಕವನ..ನಿಮ್ಮ ಕವನದ ಆಶಯದಂತೆ ನಮ್ಮ ಆಶಯ ಕೂಡ. ಧನ್ಯವಾದಗಳು ಸರ್...

    ReplyDelete
  33. ವಸಂತ್ ಹೋಲಿಕೆಯ ಯತ್ನ ಮಾಡಿದೆ ನಮ್ಮನ್ನು ದೋಚುವವರ ಪರಿ ಹೇಗಿತ್ತು ಮತ್ತೆ ಈಗ ಹೇಗಿದೆ ಎಂದು.....ಧನ್ಯವಾದ

    ReplyDelete
  34. ಆಜಾದ್,

    ಎಂತಹ ಅದ್ಭುತ ಆಶಯ !
    ಬೇಗ ನನಸಾಗಲಿ ನಮ್ಮಲ್ಲೆರ ಉದ್ದೇಶ..

    ಚೆಂದದ ಕವನಕ್ಕೆ ಧನ್ಯವಾದಗಳು

    ReplyDelete
  35. ಅನಂತ್ ರಾಜ್ ಸರ್ ಕೇವಲ ಪೀಪಾಸುಗಳನ್ನು ಬಿಟ್ಟರೆ ಎಲ್ಲರ ಆಶಯವೂ ಒಂದೇ ನಾವೂ ಚನ್ನಾಗಿರುವ ಜೊತೆಗೆ ದೇಶವೂ ಅಭಿವೃದ್ಧಿಗೊಳ್ಲಲಿ ಎಂದು ಆದರೆ ನಮ್ಮನ್ನಾಳುವವರ ಆಶಯ ದೇಶ ಎಕ್ಕುಟ್ಟುಹೋದರೂ ಪರವಾಗಿಲ್ಲ ತಾವು ಎಂದೂ ಸಿರಿಯಲ್ಲಿ ತೇಲಾಡಬೇಕು

    ReplyDelete
  36. ಡಾಕ್ಟ್ರೇ ನಿಮ್ಮ ಮನೋಭಲಾಷೆಯ ಕೂಗು ನಮ್ಮ ಕೂಗಿನೊಂದಿಗೆ ಎಲ್ಲೆಲ್ಲೂ ಎಲ್ಲರೂ ಸೇರಿದರೆ...ಓಹ್..ಸಾರ್ಥಕ...

    ReplyDelete
  37. ಪ್ರಕಾಶ್ ಆಶಯ ವ್ಯಕ್ತಪಡಿಸುವಾಗ ...ನಮ್ಮನಾಳುವ ಅರಸರ ಹೊಲಸು ನೋಡುತ್ತಿರಬೇಕಾದುದೂ ನಮ್ಮ ದುರದೃಷ್ಟ ಅಲ್ಲವಾ...? ಧನ್ಯವಾದ

    ReplyDelete
  38. ದಿನಕರ್ ಇದೂ ಒಂದು ನೋಡಬೇಕಾದ ಅಂಶ ಅಷ್ಟೇ..ಯಾರು ಎಷ್ಟು ಕೀಳು ಅನ್ನೋದು ರಾಜಕೀಯದಲ್ಲಿ...ಹಹಹ ಇಂತಹವರ ಆಶಯ ಒಂದೇ...ಹಣ ಮಾಡೋದು.

    ReplyDelete
  39. ಪ್ರಗತಿ ಧನ್ಯವಾದ..ನಮ್ಮ ಕೆಲ್ಸ ನಾವು ಮೋಡೋಣ ಅಚ್ಚುಕಟ್ಟಾಗಿ ಅಲ್ವಾ...ಧನ್ಯವಾದ

    ReplyDelete
  40. ತರುಣ ತುಂಬಾ ಥ್ಯಾಂಕ್ಸ್...ಇನ್ನೊಮ್ಮೆ ...ನಿಮ್ಮ ಅಭಿಪ್ರಾಯಕ್ಕೆ

    ReplyDelete
  41. ಸತೀಶ್ ಗೌಡ...ಗೊಂದಲ ನಾನು ಹೇಳುವುದರಲ್ಲಾ ಅಥವಾ ಬರೆಯುವುದಾ ವಿಚಾರ ಇದ್ದರೆ ನಿಸ್ಸಂಕೋಚಾಅಗಿ ತಿಳಿಸಿ. ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  42. ಮನಸು ಮನಸಾರೆ ಮಾತಿಗೆ ಧನ್ಯವಾದ

    ReplyDelete
  43. ನಿಶಾ,..ಆಶಯ ಒಪ್ಪಿದ್ರಿ ಅಲ್ವಾ...ಧನ್ಯವಾದ

    ReplyDelete
  44. ಗುರು..ಧನ್ಯವಾದ...ಹಹಹ...ಅರೆರೆ..ಈಗ ವ್ಯಾಸಂಗ ಮಾಡಿತ್ತಿರುವವ್ವರಿಗೆ ಗೊತ್ತಿರೊಲ್ಲ...ನಾನು ಇದ್ದ ಕಾಲಮಾನವೇ ಬೇರೆ...ಅದು 1984-86 ಅ ಸಮಯ. ಹಹಹಹ

    ReplyDelete
  45. ಮಂಜು ಕವನ ಉದ್ದವಾಯ್ತಾ...?? ಬೋರ್ ಹೊಡೆಸುತ್ತಾ ಅಥ್ವಾ ಏನಾದ್ರೂ ಸಂದೇಶ ರವಾನಿಸುತ್ತಾ.

    ReplyDelete
  46. ಶಶಿ ಎಲ್ಲರ ಆಶಯ್ ಒಂದೆ ನೀವೂ ಸೇರಿದಿರಲ್ಲಾ ನಮ್ಮ ಜೊತೆ ಅಷ್ಟು ಸಾಕು..ಧನ್ಯವಾದ

    ReplyDelete
  47. ಶಿವು ನನ್ನ ಬ್ಲಾಗ್ ಗೆ ಸ್ವಾಗತ....ಧನ್ಯವಾದ ನಿಮ್ಮ ಅನಿಸಿಕೆಗೆ...

    ReplyDelete
  48. ಅಜಾದ್ ಸರ್,

    ನಿಮ್ಮ ಆಶಯವೇ ನಮ್ಮ ಆಶಯ...ತುಂಬಾ ಸುಂದರ ಕವನ ಸರ್...

    ReplyDelete
  49. ಧನ್ಯವಾದ ಅಶೋಕ್...ಈಗ ನೋಡಿದೆ ನಿಮ್ಮ ಪ್ರತಿಕ್ರಿಯೆ...

    ReplyDelete