Friday, October 22, 2010

ಶತ ವಿಕ್ರಮನ – ಅಸಹಾಯಕತೆ ಯೋ ಅಪ್ರಬುಧ್ಧತೆಯೋ

(ಚಿತ್ರ ಕೃಪೆ: ಚಂದಮಾಮ ಅಂತರ್ಜಾಲ) 

ಕಪಿಲಾಪುರದ ಕಥೆಯಾಕೋ ಈ ಮಧ್ಯೆ ಇಡೀ ಭೂಭಾಗದಲ್ಲಿ ನಗೆಪಾಟಲಾಗತೊಡಗಿತ್ತು...ಪ್ರಜೆಗಳು ಕಪಿಲಾಪುರ ಏಕೆ ಹೀಗೆ ದಿಕ್ಕಿಲ್ಲದೆ ನಡೆಯುತ್ತಿದೆ ? ತಿಳಿಯದಾಗಿತ್ತು. ಭೇತಾಳನ ಬೆನ್ನಹಿಂದೆ ಬಿದ್ದಿದ್ದ ಶತವಿಕ್ರಮ ಯಾಕೋ ಕಿಂಕರ್ತವ್ಯ ಮೂಢನಾಗಿದ್ದಾನೆ...ಪುರಕ್ಕೆ ಹಿಡಿದ ಭೂತವನ್ನು ಬಿಡಿಸೋದೋ..ಪುರವನ್ನು ಕಾಡುತ್ತಿದ್ದ ಪಾಳೆಯಗಾರರನ್ನು ನಿಗ್ರಹಿಸೋದೋ..ಹದಗೆಟ್ಟ ರಸ್ತೆಗಳಲ್ಲಿ ನಾರುವ ಕೊಳೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೋ..ತನ್ನ ಕೋಟೆಯನ್ನು ಕಾಯುವ ಕೊತ್ವಾಲರ ಸ್ವಯಂಘೋಷಿತ ಸ್ವಾಯತ್ವಕ್ಕೆ ಸವಾಲಾಗಿ ಅವರನ್ನು ನಿಯಂತ್ರಿಸುವುದೋ,,,,ಹೋ,,,!!!  confusionnoo…
ಆದ್ರೂ ಶತ ವಿಕ್ರಮ ಭೇತಾಳನ್ನು ಹುಡುಕಲು ಹೊರಟೇಬಿಟ್ಟ.... ಮರಗಳೇ ಇಲ್ಲವಾಗಿವೆ...ಸರಿಯಾಗಿ ಮಳೆಕಾಣದೆ..ಬೀಡು ಮರಳುಗಾಡಾಗಿದೆ....ಭೂಮಿ ಅಗೆದು ಧೂಳೆಬ್ಬಿಸಿದ ಬಂಡವಾಳಶಾಹಿ ಭೂ ಕೊರೆತ ಧಣಿಗಳು ನಿರಂಕುಶರಾಗಿದ್ದಾರೆ...ಹೆಚ್ಚು ಹೇಳಿದ್ರೆ.. “ಲೋ ದಾಸಯ್ಯ ನಿನ್ನ ಹರಿಕಥೆ ಸುಮ್ನೆ ಮುಂದುವರೆಸ್ತೀಯೋ ಇಲ್ಲ ನಿನ್ನ ಕಾಲಕೆಳಗಿರೋ ಕಂಬಳೀನ ನಿನಗೆ ಕೊಟ್ಟದ್ದನ್ನ ಮತ್ತೆ ಪರಿಶೀಲಿಸಿ ಅದನ್ನ ಎಳೀಯೋದೋ ಹೇಳು” ಅಂತ ಧಮ್ಕಿ ಹಾಕ್ತಾರೆ....

ಶತವಿಕ್ರಮನಿಗೆ ಈಗ ಪೀಕಲಾಟಕ್ಕೆ ಇಟ್ಕೊಳ್ತು...ಅವನ ರಾಜ್ಯದ ಮರಗಳೆಲ್ಲ ಬೋಳಾಗೋಕೆ ಶುರುಹಚ್ಚಿದ್ವು, ಭೂಮಿ ಟೊಳ್ಳಾಗುತ್ತಿತ್ತು, ಬಿಟ್ರೆ ಭೇತಾಳ ಬಂದು ಸಿಂಹಾಸನಾನ ಆವ್ರಿಸ್ಕೊಂಡು ಮುಂದಿನ ಶತವಿಕ್ರಮನಾಗಿಬಿಡ್ತಾನೆ...ಏನು ಮಾಡೋದು..? ಎಲ್ಲಿ ಈ ಭೇತಾಳ....?

ತಾನು ಆಸೆ ಆಮಿಷ ಒಡ್ಡಿ, ಜನರು ತಮ್ಮಲ್ಲೇ ಹೊಡೆದಾಡಿ ಪ್ರಾಣಹಾನಿ ಮಾಡಿಕೊಂಡು ಚುನಾಯಿಸಿ ಕಳುಹಿಸಿದ ವಿರೋಧಪಕ್ಷದವರನ್ನ ರಾಜಿನಾಮೆ ಕೊಡಿಸಿ.....ಅಲ್ಲಿ ಅವನನ್ನೋ ಅಥವಾ ಇನ್ನೊಬ್ಬನ್ನನ್ನೋ ಹಣ ಚೆಲ್ಲಿ ಮತ್ತೆ ಗೆಲ್ಲಿಸಿ ತನ್ನ ಪಕ್ಷದ ಬಲ ಹೆಚ್ಚಿಸ್ಕೊಂಡ್ರೆ......ಈಗ ಪಕ್ಷದವರೇ ಗುಂಪಾಗಿ ಗುಳೆ ಹೋಗಿದ್ದಾರೆ...ನನ್ನ ಆಸ್ಥಾನ ಸೌಧದ ಸುತ್ತ ಮಾಟ ಮಂತ್ರ ನಡೆದಿದೆ...ಇದು ಆ ಭೇತಾಳನ ತಂತ್ರಾನೇ ಇರ್ಬೇಕು...ಎಲ್ಲಿ ಹುಡ್ಕೋದು ಇವನನ್ನ,,,?? ಛೇ...

ಕೊನೆಗೆ, ಲೋಕಪಾಲರ ಅಫೀಸಿನ ಹಳೆಯ ಹಗರಣಗಳ ಧೂಳು ತಿನ್ನುತ್ತಾ ಬಿದ್ದಿದ್ದ ಕಡತಗಳ ಒಂದು ಕೊಠಡಿಯ ಸೀಲಿಂಗ್ ಫ್ಯಾನಿಗೆ ಜೋತು ಬಿದ್ದಿದೆ ಅಂತ ನಂಬಲರ್ಹ ಮೂಲಗಳಿಂದ ತಿಳಿದು ಅಲ್ಲಿಗೆ ಹೋಗಿ ಲೋಕಪಾಲರು ಬರೋಕೆ ಮುಂಚೆ ಅಲ್ಲಿಂದ ಭೇತಾಳನ್ನ ಎತ್ತಿ ಹೆಗಲಿಗೇರಿಸಿ .. ಶಾಶಕರ ಭವನದ ಹಿಂದಿನ ಶವಾಗಾರಕ್ಕೆ ಹೊರಟ....

ರಾಜ್ಯದಲ್ಲಿ ಏನೇ ನಡೆದರೂ ಜಪ್ಪಯ್ಯ ಎನ್ನದ, ಗಣಿ-ಧಣಿ ಎಂಬ ಜೋಡಿ-ಪದ ಕೇಳಿದೊಡನೇ ಕೆರಳಿ ಕೇರಳದ ಸಿಂಹ (ಹಹಹ ಕೇರಳದಲ್ಲಿ...ಸಿಂಹ...ಎಂಥಾ ವಿರೋಧಾಭಾಸ ಎನ್ನಬೇಡಿ...!!) ಆಗುವ ವಿರೋಧ ಪಕ್ಷಗಳಂತೆ ಅಲ್ಲಿವರೆಗೂ ಸುಮ್ಮನಿದ್ದ ಭೇತಾಳ ಮಾತನಾಡತೊಡಗಿತು.

“ಎಲೈ ಶತ ವಿಕ್ರಮ, ...ನಿದ್ದೆ ಮಾಡುತ್ತಿದ್ದ ನಿನಗೆ ಹಾಗೋ ಹೀಗೋ .... ಸಿಂಹಾಸನ ಸಿಕ್ಕಿ ಬಿಡ್ತು....ನಿನ್ನ ಮುತ್ತಜ್ಜ ಇಮ್ಮಡಿ ವಿಕ್ರಮ ಬಹು ಮೇಧಾವಿ ಅವನ ಹೆಸರಿನಿಂದಲೇ ನಿನಗೆ ಈ ಪಟ್ಟವೂ ಹೇಗೋ ಸಿಕ್ತು ..ಆದ್ರೆ ಇದನ್ನು ಉಳಿಸಿಕೊಳ್ಳಲು ಉಳುವವನ ಮನೆ ಬಗ್ಗೆ ಮಾತನಾಡಿ ಈಗ ಅವನ ಬುಡಕ್ಕೇ ನೇಗಿಲು ಹರಿಸಿದ್ದೀಯಾ...ನಿನಗೆ ತರವಲ್ಲ..., ಅಲ್ಲಯ್ಯ ..ರೈತನಿಗೆ ಉಳುವ ಭೂಮಿ ಕೊಡಬೇಕಾದ ನೀನು ಕೊರೆದ ಭೂಮಿ ಕೊಡೋದ್ರಲ್ಲೇ ಇಡೀ ವ್ಯವಸ್ಥೆಯನ್ನ ದಿಕ್ಕಾಪಾಲು ಮಾಡ್ತಿದ್ದೀಯಲ್ಲ ತರವೇ..? ನನಗೆ ಕಥೆ-ಗಿಥೆ ಹೇಳೋ ಮೂಡಿಲ್ಲ... ನಿನ್ನದೇ ಕಥೆಯಿಂದ ಆಯ್ದ ಭಾಗಗಳ ನನ್ನ ಸಂಶಯಗಳ ಕಂತೆಯನ್ನು ನೀನು ನೂರು ಜನ್ಮ ಎತ್ತಿದರೂ ಬಿಡಿಸಲಾರೆ...ಆದ್ರೂ ಕಂತು ಕಂತಿನಲ್ಲೇ ..ಕೇಳು.., ಪ್ರಯತ್ನಿಸು ಉತ್ತರಿಸೋಕೆ....."
ಭೇತಾಳ ವಿರೋಧ ಪಕ್ಷದವರಂತೆ ಸಮಸ್ಯೆ ಬಗೆ ಹರಿಸುವುದರ ಬಗ್ಗೆ ಸಲಹೆ ಕೊಡುವುದನ್ನು ಬಿಟ್ಟು ಪುಃಖಾನು ಪುಃಖ ಪ್ರಶ್ನೆಗಳ ಬಾಣಬಿಡಲಾರಂಭಿಸಿದ.

"ನಿನ್ನ ಕಪಿಲಾಪುರದ ಸಿಂಹಾಸನಾರೂಢನಾಗುವ ಸಮಯದ ನಿನ್ನ ದುಡಿವ ಅನ್ನದಾತನ ಉದ್ಧಾರದ ದೀಕ್ಷೆಗೇಕೆ ತಿಲಾಂಜಲಿ ಕೊಟ್ಟೆ..? ಕಪಿಲಾಪುರದ ಅವ್ಯವಹಾರ ಬಯಲಿಗೆ ತರೋ ಲೋಕಪಾಲನಿಗೆ ಕೇವಲ ಇಲಿ, ಬೆಕ್ಕುಗಳನ್ನು ಹಿಡಿಯುವ ಅಧಿಕಾರ ಕೊಟ್ಟು ತೋಳ ಮತ್ತು ಕಪಟ ನರಿಗಳ ದಂಡಿಸುವ ಹಕ್ಕನ್ನು ಏಕೆ ಕೊಡಲಿಲ್ಲ..? "

"ವಿರೋಧಪಕ್ಷದವರನ್ನು ಆಮಿಷವೊಡ್ಡಿ ನೀನು ಸೆಳೆದದ್ದು ಲೋಕ ನೋಡಿದೆ.., ಅದೇ ಕೆಲಸದ ಕೇವಲ ಒಂದಂಶ ವಿರೋಧಿಗಳು ಮಾಡಿದಾಗ ಏಕೆ ಸಿಡಿಮಿಡಿಯಾದೆ..? ಎಲ್ಲ ದೇವಾನು ದೇವತೆಗಳೂ ಮೀಟಿಂಗ್ ಮಾಡೋ ಮಟ್ಟಕ್ಕೆ ...ದೇವಸ್ಥಾನಗಳ ಸುತ್ತಿಬಿಟ್ಟೆ....??!! ಅಧಿಕಾರ ಹಣಕ್ಕೆ ಆಸೆಪಟ್ಟು ಮತ್ತೆ ಗೆಲ್ಲುವ ಲವಲೇಶವೂ ನಂಬಿಕೆಯೇ ಇರದ ಸದಸ್ಯರನ್ನು ನೀನು ಸೆಳೆದ್ದುದರಲ್ಲಿ ಘನತೆಯೇನೂ ಇಲ್ಲ ..ಆದರೆ ನಿನ್ನವರ ಗುಂಪೊಂದು ಸಿಡಿಯಿತು ಅಂದರೆ ನಿನ್ನ ಆಳ್ವಿಕೆಯಲ್ಲಿ ಏನೋ ಲೋಪವಿದೆಯೆಂದು ಅರಿತರೂ ಮತ್ತೆ ನಿನ್ನ ಹಳೆಯ ಚಾಳಿಗಿಳಿದು...ಈಗಲೇ ನೆಲಕಚ್ಚಿರುವ ನಿನ್ನ ನಾಡಿನ ಘನತೆ ಪ್ರಜೆಗಳ ಆಶಯವನ್ನು ಪಾತಾಳಕ್ಕೆ ತುಳಿಯುವುದು ನ್ಯಾಯವೇ..??......

ಇದನ್ನು ತಿಳಿದೂ ನೀನು ಹೇಳದೇ ಹೋದರೆ ನಿನ್ನ ಪಕ್ಷದವರೆಲ್ಲಾ ಗುಂಪು-ಗುಂಪು ಗುಂಪುಗಾರಿಕೆ ಮಾಡಿ ನಿನ್ನ ಆಸ್ಥಾನವನ್ನ ಅಲ್ಲಾಡಿಸಿಬಿಟ್ಟಾರು ಜೋಕೆ,,,,”

ಶತವಿಕ್ರಮನಿಗೆ ರೇಗಿತು...“ನೀನು ಕೇಳಿದ್ದಕ್ಕೆಲ್ಲಾ ಉತ್ತರಕೊಡೋಕೆ ಜವಾಬ್ದಾರಿಯುತ ಅಧಿಕಾರಿಯಲ್ಲ ...ನನ್ನ ರಾಜ್ಯಾಳ್ವಿಕೆಯನ್ನು ಕಾಪಾಡಿಕೊಳ್ಳೋದು ನನಗೆ ಮೊದಲ ಕರ್ತವ್ಯ ಉಳಿದ ಮಿಕ್ಕಿದ್ದೆಲ್ಲ ಗೌಣ,,,,” ಎಂದಾಗ ...

“ಮೂಢ, ನೀನು ಹೀಗೇ ವಿರೋಧಪಕ್ಷಕ್ಕೂ ಉತ್ತರಕೊಡದೇ ಪ್ರಜೆಗಳ ಸಮಸ್ಯೆಗಳನ್ನೂ ಪರಿಹರಿಸದೇ ಉಡಾಫೆಯಲ್ಲೇ ಕಾಲ ಕಳೆ...!! ಈಗ ನೀನು ಮೌನ ಮುರಿದೆ...ಅದಕ್ಕೆ ಇದೋ ನಾನು ಹೊರಟೆ...” ಎನ್ನುತ್ತಾ ಶತವಿಕ್ರಮನ ಹೆಗಲಿಂದ ಮಾಯವಾಯಿತು.

43 comments:

  1. ಜಲನಯನ,
    ಮರಗಳೇ ಉಳಿಯದ ಬರಡು ನಾಡಿನ ಬೇತಾಳವು ಲೋಕಾಯುಕ್ತರ ಸೀಲಿಂಗ್ ಫ್ಯಾನಿಗೆ ಜೋತು ಬಿದ್ದದ್ದು ತುಂಬ ವಾಸ್ತವ ಚಿತ್ರಣ. ಇದನ್ನು ಕಲ್ಪಿಸಿಕೊಂಡ ನಿಮಗೆ ನನ್ನ ಅಭಿನಂದನೆಗಳು. ನಿನ್ನೆ ಬೇತಾಳವಿದ್ದದ್ದು ಇಂದು ಶತವಿಕ್ರಮನಾಗುತ್ತದೆ, ಇಂದಿನ ವಿಕ್ರಮ ನಾಳಿನ ಬೇತಾಳ! ಭಲೇ, ತುಂಬ ಸ್ವಾರಸ್ಯವಾಗಿದೆ ಈ ಬೇತಾಳ ಪಂಚವಿಂಶತಿ!

    ReplyDelete
  2. ಇನ್ನು ಮುಂದೆಲ್ಲಾ ಹೀಗೇ! ಸಕಾಲಿಕ ಮತ್ತು ನೈಜಚಿತ್ರಣ! ಚೆನ್ನಾಗಿದೆ, ಧನ್ಯವಾದಗಳು

    ReplyDelete
  3. ಅಜಾದ್,
    ಬೇತಾಳ ಮತ್ತು ವಿಕ್ರಮನ ಪ್ರಸಂಗದಲ್ಲಿ ನಮ್ಮ ರಾಜ್ಯದ ಸದ್ಯದ ಪರಿಸ್ಥಿತಿ ಒಗಟನ್ನು ಬಿಡಿಸಲು ಪ್ರಯತ್ನಿಸಿದ್ದೀರಿ. ಚೆನ್ನಾಗಿದೆ. ಇನ್ನಷ್ಟು ಹರಿತವಾಗಿ ಬಂದರೆ ಇತ್ತ ಬೇತಾಳನಿಗೂ ಅತ್ತ ವಿಕ್ರಮನಿಗೂ ತಲೆಕೆಡುವಂತೆ ಇನ್ನಷ್ಟು ಹರಿತವಾಗಿ ಬಂದರೆ ಮತ್ತಷ್ಟು ಮಜವಿರುತ್ತದೆ. ಮುಂದೆ ಇವೆರಡನ್ನು ನಿರೀಕ್ಷಿಸೋಣವೇ....

    ReplyDelete
  4. nice one sir.... prastuta naija vishaya...

    ee shatavikramana adalitadalli jana inna yen yen nodbekagideyo.. yen yen agoguttu namam naadu.. neneskondre bhaya agutte...

    ReplyDelete
  5. ಬೇತಾಳನ ಕುಲದವರನ್ನೆಲ್ಲಾ ಒಂದೊಂದು ರಾಜ್ಯದಲ್ಲಿ ಬಿಟ್ಟು ಇಂಥಾದ್ದೇ ಹಲವಾರು ಪ್ರಶ್ನೆಗಳನ್ನು ಆಯಾ ರಾಜ್ಯದ ಲೋಕಲ್ ವಿಕ್ರಮಾದಿತ್ಯರಿಗೆ ಕೇಳುವಂತೆ ಮಾಡಿದರೂ ಎಲ್ಲಾ ರಾಜರ ಉತ್ತರ ಹೀಗೆಯೇ ಇರುತ್ತದೆ ! ಸಿಂಹಾಸನವನ್ನು ಕಾಪಾಡಿಕೊಳ್ಳುವುದೇ ಪರಮೋಚ್ಛ ಕರ್ತವ್ಯ ಎಂಬುದು ರಾಜರುಗಳ ಅಲಿಖಿತ ನಿಯಮ !
    ರಾಜ್ಯಾಡಳಿತವನ್ನು ಭೇತಾಳನಿಗೆ ಕೊಡುವುದು ಉತ್ತಮ !

    ReplyDelete
  6. ಕರ್ನಾಟಕದ ಹಾಳು ರಾಜಕಾರಣ
    ನಿಮ್ಮ ಈ ಬೇತಾಳನ ಕತೆಗೆ ಪ್ರೇರಣೆ ..! ಚನ್ನಾಗಿದೆ..! ಚನ್ನಾಗಿದೆ..!

    ReplyDelete
  7. ತು೦ಬಾ ಚೆನ್ನಾಗಿದೆ, ಇ೦ದಿನ ನೈಜ ಸ್ಥಿತಿಯನ್ನು ವಿಡ೦ಬಿಸಿ ಬರೆದ ಬೇತಾಳ-ವಿಕ್ರಮ ಕಥೆ.

    ReplyDelete
  8. ವಿಕ್ರಮ-ಬೇತಾಳದ ಲೇಟೆಸ್ಟ್ ಕತೆ ಚೆನ್ನಾಗಿದೆ !
    ಹೀಗೆ ಪ್ರಶ್ನೆ ಕೇಳುತ್ತಾ ಹೋದರೆ ಬೇತಾಳಕ್ಕೂ ಒಂದು ೨೫ ಕೋ ತಳ್ಳಬಹುದು..
    ಹಾಗೇ ನರಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ..

    ReplyDelete
  9. ತುಂಬಾ ಪಂಚಿಂಗ್ ಬರಹ ...ಹೊಸತನವಿದೆ ..ಈಗಿನ ರಾಜಕೀಯ ದೊಂಬರಾತವನ್ನ ಚನ್ನಾಗಿ ವಿವರಿಸಿರುವಿರಿ

    ReplyDelete
  10. ಈಗಿನ ರಾಜಕೀಯ &ರಾಜಕಾರಣ ಹೀಗೆ ನಡೆಯುತ್ತಿದೆಯಲ್ಲ...ಸತ್ಯವಾದ ಸಂಗತಿಯನ್ನೇ ಹೇಳಿದ್ದಿರಿ

    ReplyDelete
  11. ಏನು ಆಜಾದ್ ಭಾಯಿ ಇದನ್ನು ಬರೆದೀದಿರಿ...ಎಷ್ಟು ಡೀಲ್ ಆಗಿದೆ
    ಇವತ್ತು ಕನ್ನಡಪ್ರಭದಲ್ಲಿ ಒಂದು ಜೋಕ್ ಇತ್ತು. ಕರ್ನಾಟಕದ ಬಾಲಕರ ಮುಂದಿನ ಗುರಿ ಶಾಸಕರಾಗೋದಂತೆ
    ಯಾಕಂದ್ರೆ ಇದ್ರೂ ರೊಕ್ಕ ಬಿದ್ರೂ ರೊಕ್ಕ...!

    ReplyDelete
  12. ಸುನಾಥಣ್ಣ..ಭೇತಾಳನ ಮೂಲಕ ವಿಕ್ರಮನ ಕಥೆಗಳು ಮಕ್ಕಳಿಗೆ ನೀತಿ ಬೋಧಕಗಳಾಗಿದ್ದವು.ಇಂದಿನ ಸ್ಥಿತಿಯಲ್ಲಿ ವಿಕ್ರಮರಿಗೂ ಭೇತಾಳಗಳಿಗೂ ವ್ಯತ್ಯಾಸವಿಲ್ಲ...ನಿಮ್ಮ ತಪ್ಪದ ಕಾಮೆಂಟಿಗೆ..ಧನ್ಯವಾದ

    ReplyDelete
  13. ವಿ.ಅರ್.ಬಿ ಸರ್, ತಿಪ್ಪೆ ತಿಪ್ಪೆನೇ ಕಸ ಕಸಾನೇ ಅನ್ನೋ ಹಾಗೆ ಆಗಿಬಿಟ್ಟಿದೆ ಇಂದಿನ ರಾಜಕಾರಣ....ನಮ್ಮಲ್ಲಿ ಕಸವನ್ನು ಎತ್ತಿ ಹುಗಿಯುವ ಧ್ಯೈರ್ಯ ಯಾವಾಗ ಹುಟ್ಟುತ್ತೋ..ತಿಳಿಯದು...ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  14. ಶಿವು ಧನ್ಯವಾದ, ನಿಮ್ಮ ಕಾರ್ಯಕ್ರಮಕ್ಕೆ ಶುಭಕೋರುತ್ತೇನೆ.

    ReplyDelete
  15. ತರುಣ್, ವ್ಯವಸ್ಥೆಯ ಅವಸ್ಥೆ ...ಏನೋ ಪ್ರಯತ್ನ ಇದನ್ನು ಭೇತಾಳ-ವಿಕ್ರಮರ ಮೂಲಕ. ಧನ್ಯವಾದ ಪ್ರತಿಕ್ರಿಯೆಗೆ.

    ReplyDelete
  16. ಚಿತ್ರಾ, ಹೌದು ಒಂದೇ ವ್ಯತ್ಯಾಸ ಅಂದ್ರೆ ಕೆಲವೆಡೆ ಭೇತಾಳಾನೇ ಕುಂತಿದ್ದಾನೆ ಹೆಗಲ ಮೇಲೆ ಅಷ್ಟೆ...ಹಹಹ ಥ್ಯಾಂಕ್ಸ್ ಪ್ರತಿಕ್ರಿಯೆಗೆ

    ReplyDelete
  17. ಮಂಜು ಕಥೆ, ಕವಿತೆ, ವಿಡಂಬನೆ, ವ್ಯಂಗ್ಯಚಿತ್ರ ಎಲ್ಲಕ್ಕೂ ಪ್ರೇರಣೆ (ಋಣಾತ್ಮಕ ಗುಣ) ರಾಜಕಾರಣ ಆಗ್ತಿರೋದು ವಿಪರ್ಯಾಸ...ಧನ್ಯವಾದ.

    ReplyDelete
  18. ಪರಾಂಜಪೆ ಸರ್, ವಿಡಂಬನೆಗೆ ಪ್ರೇರಣೆಗೆ ಕೊರತೆಯಿಲ್ಲ ..ದಿನಕ್ಕೊಂದು ಕಾಂಡ....ಹಹಹ ಧನ್ಯವಾದ.

    ReplyDelete
  19. ಅಪ್ಪ-ಅಮ್ಮ ಸಹಾ ಪ್ರಭಾವಿತರಾಗಿದ್ದಾರೆ ಈ ಹೊಲಸು ರಾಜಕಾರಣದಲ್ಲಿ...ಅಲ್ವಾ,,,ಧನ್ಯವಾದ.

    ReplyDelete
  20. ಶ್ರೀಕಾಂತ್ ಧನ್ಯವಾದ ನನ್ನ ಕೆಲವು ವಿಷಯ ಪ್ರಸ್ತಾಪದ ಮಾಧ್ಯಮಗಳಲ್ಲಿ ಭೇತಾಳ-ವಿಕ್ರಮ ಕಥೆಯೂ ಒಂದು...ಧನ್ಯವಾದ ನಿಮ್ಮ ಅನಿಸಿಕೆಗೆ.

    ReplyDelete
  21. ಶಶಿ, ಮಗು-ಮಗುವಿನ ಬಾಯಲ್ಲೂ ಮಂತ್ರಿಗಳ ಕಂತ್ರಿಗಿರಿ...ಶಾಸಕನ ಭಂಡತನದ ಮಾತೇ...ಹೌದು ನಾರುತ್ತಿದೆ..ಎಲ್ಲಾ...ಧನ್ಯವಾದ ಪ್ರತಿಕ್ರಿಯೆಗೆ.

    ReplyDelete
  22. ಉಮೇಶ್ ಸರ್, ಡೀಲ್ ಡಿಲ್ ಗಳಲ್ಲಿ ಕೋಟ್ಯಾನು ಕೋಟಿ ವ್ಯವಹಾರ,,,ಎಲ್ಲಿಂದ ಬರಬೇಕು ಇದೆಲ್ಲಾ...ಎಲ್ಲ ನಮ್ಮ ನಿಮ್ಮ ಹಣವೇ..? ಅಲ್ವಾ..? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  23. ಆ ಕಾಲದಲ್ಲಿ ಬೇತಾಳ ಒ೦ದೇ ಇತ್ತು. ಅದೇ ಪ್ರಶ್ನೆ ಕೇಳುತ್ತಿತ್ತು..
    ಈಗ ಕಾಲ ಬದಲಾಗಿ ಊರು ತು೦ಬಾ ರಾಜರೇ ಬೇತಾಳದ೦ತೆ ಇದ್ದಾರೆ. ಪ್ರಶ್ನೆಗಳನ್ನು ನಾವು ಕೇಳ ಬೇಕಿದೆ.....!!!

    ವ೦ದನೆಗಳು.

    ReplyDelete
  24. ಆಜಾದ್ ಭಾಯಿ,
    ಈಗಿನ ರಾಜಕಾರಣವನ್ನು ಚೆನ್ನಾಗಿ ವಿನೋದದಲ್ಲಿ ವಿಡ೦ಬಿಸಿದ್ದೀರಿ.
    ಬೇತಾಳನಿಗೂ ಮರ ಸಿಕ್ಕದೆ ಪಿಕಲಾಟಕ್ಕಿಟ್ಟು ಕೊ೦ಡಿತಲ್ಲ..ನೇತಾಡಲು ಸೀಲಿ೦ಗ್ ಫ್ಯಾನೇ ಗತಿ..ಗಣಿ ದಣಿಗಳ ಹೊಟ್ಟೆಪಾಡು..ಲೋಕಪಾಲನಿಗೆ ಇಲಿಬೆಕ್ಕು ಹಿಡಿಯುವ ಅಧಿಕಾರ..ಲೋಕ(ರಾಜ್ಯ)ಪಾಲರ ಕೆಲಸವನ್ನು ಚೆನ್ನಾಗಿ ವರ್ಣಿಸಿಬಿಟ್ಟಿದ್ದೀರಿ. ವಾಹ್!

    ReplyDelete
  25. samayakke sariyaada lekhana, kavana, appa maguvina sambhashaNe ivella baari chalo bariteeri sir.... chennagide indina lekhana

    ReplyDelete
  26. ವಿಜಯಶ್ರೀ ನಿಜ ಒಬ್ಬ ಭೇತಾಳ ಅಲ್ಲ ಹಾಗೇ ಒಬ್ಬ ವಿಕ್ರಮ ಆಲ್ಲ,,,ಹಾಗೆ ನೋಡಿದ್ರೆ ನಮ್ಮಲ್ಲಿ ಇರುವ ಭೇತಾಳಗಳಿಗೆ ಇವರು ನಿಜವಾಗಿಯೂ ವಿಕ್ರಮರೇ ಅನ್ನಿಸುತ್ತೆ...?? ತಮ್ಮ ಕುರ್ಚಿಯನ್ನು ಕಾಪಾಡುವುದರಲ್ಲೇ ಇಡೀ ಜೀವನ ಕಳೆಯೋರನ್ನ ವಿಕ್ರಮರು ಅನ್ನೋದಾದ್ರೂ ಹೇಗೆ...? ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  27. ಅದ್ಭುತ ವಿಡಂಬನೆ.
    ತಮ್ಮ ಪ್ರಶ್ನೆಗಳಿಗೆ ಉತ್ತರ ಒಂದೇ- ಸ್ವಹಿತಾಸಕ್ತಿ ರಕ್ಷಣೆ ಮತ್ತು ಸಾಧ್ಯವಾದಷ್ಟು ಗಂಟು ಮಾಡುವದು.

    ReplyDelete
  28. ಅರೆಅರೆರೆ.. ಎಂಥ ಲೇಖನ ಕೊಟ್ರಿ.. ಚೆನಾಗಿದೆ...
    ನನ್ನ 'ಮನಸಿನಮನೆ'ಗೂ ಬನ್ನಿ..

    ReplyDelete
  29. Ajaad sir,

    Hmm Shatavikrama .. Bembidada betaLa.. sarvadikara.. kutumba moha .. adikarada daaha..

    Shata vikrama yaru bhetala yaru anta neevu ogataagi helidaroo prapanchakke gottiro satya..

    idanna odidare avaru mutti nodikollabeku.. chennagi bardiddeera.. next innu strong agi moodi barali mutti kooda nodkobardu haage...

    ottu namma rajyakke bhoota hididide aste :(

    Dhanyavaada
    Pravi

    ReplyDelete
  30. ಮನಮುಕ್ತಾ ಧನ್ಯವಾದ ಹೌದು ಬೆಂಗಳೂರಲ್ಲಿ ಮರ ಗಿಡ ಕಾಣೆಯಾಗ್ತಿವೆ...ಇನ್ನು ಸೀಲಿಂಗ್ ಫ್ಯಾನೇ ಗತಿ ಅಲ್ಲವಾ..?

    ReplyDelete
  31. ವಸಂತ್..ರಾಜಕಾರಣವೊಂದೇ ..ಎಲ್ಲ ಕಲೆ ಪ್ರಾಕಾರಗಳಿಗೆ ಸ್ಪೂರ್ತಿಕೊಡುವ ವೈವಿಧ್ಯತೆಹೊಂದಿರುವ ವಿಷಯ...ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ

    ReplyDelete
  32. ಮನಸು ಏನು ಹೇಳಿದ್ರೂ ನಮಗೆ ಸ್ಪೂರ್ತಿದಾಯಕವೇ,,,,ಧನ್ಯವಾದ..

    ReplyDelete
  33. ಸೀತಾರಾಂ ಸರ್...ಧನ್ಯವಾದ ಹೇಗೆ ನಡೀತಿದೆ...ಕೆಲ್ಸ,,,ನಾಡಿನ ರಾಕ್ಯೋತ್ಸವದ ಸಂದರ್ಭದಲ್ಲಾದರೂ ಸುಮ್ಮನಿರ್ತಾವೋ ಏನೋ ಏತಿಗಳು ನೊಡೋಣ,,,

    ReplyDelete
  34. ಗುರು, ನಿಮ್ಮಲ್ಲಿಗೆ ಬರ್ತೀನಿ ಖಂಡಿತಾ....ಆದ್ರೆ ನನ್ನಲ್ಲಿಗೆ ಬರುವುದು ನಿಮ್ಮ ತಪ್ಪದ ಕ್ರಿಯೆ..ಅದಕ್ಕೆ ಋಣಿ...ಥ್ಯಾಂಕ್ಸು...

    ReplyDelete
  35. ಪ್ರವೀಣ್ ಧನ್ಯವಾದ ಕಣ್ರಿ...ನಮ್ಮ ಪುಢಾರಿಗೋಳು...ಎಲ್ಲ ಗೋಳಿಗೂ ಕಾರಣ ಅನ್ನೋದು ಸಿದ್ಧವಾದ ವಿಷಯ...ಮತ್ತೆ ಇವರಿಂದ ಎಲ್ಲರಿಗೂ ಗೋಳಾಗೋದೂ ಅಷ್ಟೇ ಸತ್ಯ,,,ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  36. Thumba creative aagi eegina vidhyamaanavannu chitrisida pari thumba ishta aayithu...!

    ReplyDelete
  37. ಇಂದಿನ ರಾಜಕಾರಣದ ನೈಜಿ ಚಿತ್ರವನ್ನು ನೀವು ಲೇಖನದ ಮೂಲಕ ಸರಹೊರಟಿದ್ದಿರ ಶುಭವಾಗಲಿ

    ಹಾಗೇ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ ...

    ReplyDelete
  38. ಸುಧೇಶ್ ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ ಉತ್ತರ ಹಾಕಿದ್ದೆ ಯಾಕೋ ಗಾಯಬ್...ಹಹಹಹ...ನಮ್ಮ ಭೇತಾಳ ಬಂದು ಬೀಳ್ಸಿರಬೇಕು...ಹಹಹ

    ReplyDelete
  39. ಸತೀಶ್... ಥ್ಯಾಂಕ್ಸ್ ರೀ...ನಿಮ್ಮವಳ ಲೋಕದಲ್ಲಿ ಏನಿದೆಯೋ ವಿಶೇಷ ನೋಡ್ತೀನಿ ಇರಿ...

    ReplyDelete
  40. ರವಿಕಾಂತ್ ಧನ್ಯವಾದ ರೀ...

    ReplyDelete
  41. ವೆಂಕಟ್, ಧನ್ಯವಾದ..ನನ್ನ ಜಲನಯನಕ್ಕೆ ಸ್ವಾಗತ ನಿಮಗೆ...

    ReplyDelete