ನೀರು, ನೀನಿರುವಂತೆ ಅಲ್ಲಲ್ಲಿ
ಸೆರೆ, ಆಸರೆ, ಪರಿಪರಿಯಲ್ಲಿ
ಜಲವಿದೆ ಜೀವವಿದೆ, ಜಲ ಜೀವವಿದೆ
ದುಡಿ, ದುಡಿಮೆ, ದಣಿವಲ್ಲಿ
ಕೊಡೆ, ಆಕಡೆ, ದೋಣಿಯಲ್ಲಿ
ಹರಿ ಹೊರೆ ಹಾಯಲ್ಲಿ.. ಬಾಯಿಲ್ಲಿ
ಬಾಳು ಬದುಕು ಬಾಲ್ಯದಲ್ಲಿ
ಧರೆಗೆ ಧೋರನೆ ಮಳೆಯಿಲ್ಲಿ
ಒರೆಗೆ, ಆಸರೆಗೆ ಹೂವಲ್ಲಿ..
ನೆನೆದು ನೊಂದು ನಲಿವಲ್ಲಿ
ಆಕಾಶ ಆಧಾರ ಆಯಾಸದಲ್ಲಿ
ಗಮ್ಯದೆಡೆ ಗಳಿಕೆಯೆಡೆ ಕಾಯುವಲ್ಲಿ
ಹರಸು ಹರಕೆಗಳ ಹೂವಲ್ಲಿ
ಬರಬೇಡ ಬರುತಿರು ಹದವಾಗಿ
ಜೀವ ಜೀವನದ ಹೂವಾಗಿ
ಕಾಡದಿರು ನಿತ್ಯಭಯದ ಹಾವಾಗಿ
(ಈ ಕವನಕ್ಕೆ - ಸಂಗೀತ ಅಳವಡಿಕೆ ಮತ್ತು ಹಾಡು ಕೃತಕ ಬುದ್ಧಿಮತ್ತೆ ಮೂಲಕ)
ನೀರು, ನೀನಿರುವಂತೆ ಅಲ್ಲಲ್ಲಿ
ಸೆರೆ, ಆಸರೆ, ಪರಿಪರಿಯಲ್ಲಿ
ಜಲವಿದೆ ಜೀವವಿದೆ, ಜಲ ಜೀವವಿದೆ
No comments:
Post a Comment