Monday, April 12, 2010
ತಿಳಿ ನೀರು - ನಿರ್ಮಲ ಕೊಳ
ತಿಳಿ ನೀರು- ನಿರ್ಮಲ ಕೊಳ
ಮುಳುಗಿ ಏಳ್ತಾನೆ ಸೂರ್ಯಾನೂ
ತಾಳಲಾರದೆ ಬಿಸಿಲ ಝಳ
ಕೊಳದಲ್ಲಿ ಹತ್ತು ಹಲವು ಜಾತಿ
ಕೆಂಪು, ಹಳದಿ, ಹಸಿರು, ಕಪ್ಪು ಮೀನು
ದೊಡ್ಡದು ಚಿಕ್ಕದಕ್ಕೆ ಹೇಳ್ತು ಮೆದುವಾಗಿ
ನನ್ಪಾಡ್ಗೆ ನಾನಿರ್ತೀನಿ ಇರ್ಬೌದಲ್ಲ ನೀನೂ
ಆಮೆನೂ ಇತ್ತು ಅಲ್ಲೇ ವಾಸವಾಗಿ
ಮೊಸಳೇನೂ ಬರ್ತಿತ್ತು, ಹೋಗ್ತಿತ್ತು
ತಂಟೆಯಿಲ್ಲ ತಕರಾರಿಲ್ಲ ಎಲ್ಲಾ ಇದ್ವು ಹಾಯಾಗಿ
ಕೆಂಪು ಕಪ್ಪಿಗೆ ಹಲೋ ಅಂದ್ರೆ
ಹಳದಿ ಹಸಿರಿಗೆ ಚಲೋ ಅನ್ತಿತ್ತು ಆಟಕ್ಕೆ
ಅವರವರ ಲೋಕದಲ್ಲಿ ಹಾಯಾಗಿದ್ವು
ಗುರಿಯಾಗದೇ ಯಾವುದೇ ಕಾಟಕ್ಕೆ
ಆಗೊಮ್ಮೆ ಆಗ್ಬಾರ್ದು ಆಗೇ ಹೋಯ್ತು
ಸೂರ್ಯ ತನ್ನ ಬಿಸಿಲಲ್ಲಿ ತಾನೇ ಸುಡ್ತು
ಕಪ್ಪು ಮೋಡ ಆಕಾಶದಲ್ಲಿ ಗುಡುಗು ಸಿಡ್ಲು
ಗಾಳಿ ಮಳೆಗೆ ಹಾರಿದ್ವು ಎಷ್ಟೋ ಗುಡ್ಲು
ಅಲ್ಲೆಲ್ಲಿಂದ್ಲೋ ಹರ್ದು ಬಂತು ಅಪಾರ ನೀರು
ಬಗ್ಗಡ ಆಯ್ತು ತಿಳಿಯಾಗಿದ್ದ ಕೊಳದ ನೀರು
Thursday, March 25, 2010
ಒಂದ್ಗುಟ್ಕು ಆಕ್ಕೊಂಡ್ರೆ ಬ್ಲಾಗು
ನನ್ಪಾಡಿಗ್ ನಾನಿದ್ದೆ
ಸಂಸೋದ್ನೆ ಮಾಡ್ತಿದ್ದೆ
ಅದೂ ಇದೂ ಬರೀತಿದ್ದೆ
ಕವ್ನಾಂತ ಒಂದಿಷ್ಟು ಗೀಚ್ತಿದ್ದೆ
ನಾಟ್ಕದ್ದೂ ಗೀಳು ಇದ್ದದ್ದೇ
ಬಾಳ್ವೇಗೆ ಸಂಸೋದ್ನೆ
ಉಲ್ಲಾಸ್ಕೇ ಗೀಚೋದ್ನೆ
ಮಾಡ್ಕಂಡ್ ನನ್ಲೋಕ್ದಾಗೆ
ಅಕ್ಕಿಯಂಗೆ ಇರ್ತಿದ್ದೆ
ಗೀಚಿದ್ದು ಪೇಪರ್ನ್ನಾಗಿಡ್ತಿದ್ದೆ
ಆವಾಗಾವಾಗ ಬರ್ದಿದ್ದು ನಾನೇ ಓದ್ತಿದ್ದೆ
ನನ್ನ್ ಬೆನ್ನ ನಾನೇ ತಟ್ತಿದ್ದೆ.
ಒಂದ್ಸರ್ತಿ ‘ಮನ್ಸು' ಅಚ್ಬುಡ್ತು
ಬ್ಲಾಗ್ಲೋಕಕ್ಕೆ ನನ್ನ ತಂದ್ಬುಡ್ತು
ಮೊದ್ಮೊದ್ಲು ಒಂದೊಂದು
ಆಮೇಲಾಮ್ಯಾಕೆ ಹತ್ತೊಂದು
ಸ್ನೇಯಿತ್ರು ಅತ್ಸ್ ಬುಟ್ರು ಅಟ್ಟ..
ಬಲ್ ಬರೀತೀ ಅಂದ್ಬುಟ್ರು
ನಾನೂ ಅತ್ತೇ ಬುಟ್ಟೆ..ಅಟ್ಟ
ಮುಟ್ತಾ ಓದೆ ಒಂದೊಂದೇ ಘಟ್ಟ
ಈಗ ಬ್ಲಾಗ್ ಅಂದ್ರೆ ಒಂದ್ರೀತಿ
ಕುಡ್ಕಂಡoಗೆ ಕಂಠ್ಮಟ್ಟ
ಇಂಗೇ ಬಂದ್ಬುಟ್ರೆ ಮೂಡು
ಮೂಡ್ತಾದೆ ಬರಹ್ದಾಗೆ ಕೋಡು
ಪದ್ಗೋಳ್ ಹಿಡೀತಾವೆ ಜಾಡು
ಸೇರೇ ಬಿಡ್ತಾವೆ ಬ್ಲಾಗನ್ನೋ ಬೀಡು.
ಎಂಡ ಎಂಡ್ತಿ ಆಗೋಯ್ತು ಅಳ್ತು
ಬ್ಲಾಗ್ ಅನ್ನೋ ಚಟಕ್ಕೆ
ಜಲನಯನ ಬೀಳ್ತು.
ನನ್ಪಾಡಿಗ್ ನಾನಿದ್ದೆ
ಸಂಸೋದ್ನೆ ಮಾಡ್ತಿದ್ದೆ
ಅದೂ ಇದೂ ಬರೀತಿದ್ದೆ
ಕವ್ನಾಂತ ಒಂದಿಷ್ಟು ಗೀಚ್ತಿದ್ದೆ
ನಾಟ್ಕದ್ದೂ ಗೀಳು ಇದ್ದದ್ದೇ
ಬಾಳ್ವೇಗೆ ಸಂಸೋದ್ನೆ
ಉಲ್ಲಾಸ್ಕೇ ಗೀಚೋದ್ನೆ
ಮಾಡ್ಕಂಡ್ ನನ್ಲೋಕ್ದಾಗೆ
ಅಕ್ಕಿಯಂಗೆ ಇರ್ತಿದ್ದೆ
ಗೀಚಿದ್ದು ಪೇಪರ್ನ್ನಾಗಿಡ್ತಿದ್ದೆ
ಆವಾಗಾವಾಗ ಬರ್ದಿದ್ದು ನಾನೇ ಓದ್ತಿದ್ದೆ
ನನ್ನ್ ಬೆನ್ನ ನಾನೇ ತಟ್ತಿದ್ದೆ.
ಒಂದ್ಸರ್ತಿ ‘ಮನ್ಸು' ಅಚ್ಬುಡ್ತು
ಬ್ಲಾಗ್ಲೋಕಕ್ಕೆ ನನ್ನ ತಂದ್ಬುಡ್ತು
ಮೊದ್ಮೊದ್ಲು ಒಂದೊಂದು
ಆಮೇಲಾಮ್ಯಾಕೆ ಹತ್ತೊಂದು
ಸ್ನೇಯಿತ್ರು ಅತ್ಸ್ ಬುಟ್ರು ಅಟ್ಟ..
ಬಲ್ ಬರೀತೀ ಅಂದ್ಬುಟ್ರು
ನಾನೂ ಅತ್ತೇ ಬುಟ್ಟೆ..ಅಟ್ಟ
ಮುಟ್ತಾ ಓದೆ ಒಂದೊಂದೇ ಘಟ್ಟ
ಈಗ ಬ್ಲಾಗ್ ಅಂದ್ರೆ ಒಂದ್ರೀತಿ
ಕುಡ್ಕಂಡoಗೆ ಕಂಠ್ಮಟ್ಟ
ಇಂಗೇ ಬಂದ್ಬುಟ್ರೆ ಮೂಡು
ಮೂಡ್ತಾದೆ ಬರಹ್ದಾಗೆ ಕೋಡು
ಪದ್ಗೋಳ್ ಹಿಡೀತಾವೆ ಜಾಡು
ಸೇರೇ ಬಿಡ್ತಾವೆ ಬ್ಲಾಗನ್ನೋ ಬೀಡು.
ಎಂಡ ಎಂಡ್ತಿ ಆಗೋಯ್ತು ಅಳ್ತು
ಬ್ಲಾಗ್ ಅನ್ನೋ ಚಟಕ್ಕೆ
ಜಲನಯನ ಬೀಳ್ತು.
Tuesday, March 16, 2010
ನಂಗೊತ್ತಿಲ್ಲ...ಹೋಗೋ ತರ್ಲೆ... ಓದ್ಕೋ ಹೋಗು
ಚಿತ್ರಗಳು ಅಂತರ್ಜಾಲ ಕೃಪೆ...
(ಒಂದು ಚಿತ್ರ ಅಚಾತುರ್ಯದಿಂದ ಕ್ಲಿಕ್ ಆಗಿತ್ತು ಕ್ಷಮೆ ಇರಲಿ)
ಅಂಕಲ್
ಏನು ಪುಟ್ಟಾ..?
ಬಿಡದಿಗೆ ಹೋಗಿದ್ರಾ...?
ಇಲ್ಲಲ್ಲಪ್ಪಾ..ಯಾಕೋ..ಹಾಗೆ ಕೇಳ್ದೆ..?
ಅಲ್ಲ ಯಾರೋ ಎಳೆ ವಯಸಿನ ಸ್ವಾಮಿಗಳು ಅವ್ರಂತೆ ಅಲ್ಲಿ...!!
ಏನೋ ಗೊತ್ತಿಲ್ಲ ಪುಟ್ಟ...ಹೂಂ..ಯಾರೋ ಹೇಳಿದ್ದು ನೆನಪೈತೆ...
ಅಲ್ಲ ಅಂಕಲ್ ಟಿವಿ, ಪೇಪರ್ ಎಲ್ಲದ್ರಲ್ಲೂ ಅದೇ ಸುದ್ದಿ ನೀವು ನೋಡಿಲ್ಲ್ವಾ..?
ಇಲ್ಕಣ್ ಪುಟ್ಟ...ಕಬ್ಬು ಕೊಯ್ಲಾಗೈತೆ ..ಗಾಣ ಆಡಿಸ್ಬೇಕು...ಪುರ್ಸತ್ತಿಲ್ಲ
ಅದೇ ಅಂಕಲ್ ಅಲ್ಲಿ ಉಗಾದಿ ಸಮಯದಲ್ಲಿ ರಾಸಲೀಲೆ ಯಾಕಾಯ್ತು ನಿಮ್ಮನ್ನ ಕೇಳೋಕೆ..
ಜನ್ಮಾಷ್ಠಮೀಲೀ..ರಾಸಲೀಲೆ ಓಕೆ...ಉಗಾದಿ ಸಮಯದಲ್ಲಿ ಯಾಕೆ...?
ಅಯ್ಯೋ ಅಂಕಲ್ ನಿಮಗೆ ಬೇಸಾಯ..ನೈಸ್ ರೋಡು ಹೊಲ ಗದ್ದೆ ಕಬಳಿಕೆ ಇದೇ ಚಿಂತೆ
ಅಯ್ಯೋ ದೊಡ್ಡ ಕತೇನೇ ಆಗಿದೆ ಅಲ್ಲಿ ....ಗೊತ್ತಿಲ್ಲವಾ...?
ನಮ್ಗೊತ್ತಿಲ್ಲ ಮಗು... ಅಗೋ ನಿಮ್ಮಪ್ಪ ಬಂದ ಅವ್ರನ್ನೇ ಕೇಳು...
ಅಯ್ಯೋ ನಮ್ಮಪ್ಪಂಗೆ ಇವೆಲ್ಲಾ ಗೊತ್ತಾಗೊಲ್ಲ..ನಂಗೊತ್ತಿಲ್ಲ ಮಗು ಅಂತಾರೆ..
ಏನೋ ಅದು ತರ್ಲೆ ನಿಂದು....ಏನು ಶಂಕರೇಗೌಡ್ರ ತಲೆ ತಿನ್ತಾ ಇದ್ದಾನೆ ,,?
ಅಯ್ಯೋ ಅದೇನೋ ಸ್ವಾಮಿ ಅಂತೆ ಯುಗಾದಿ ಸಮಯದಾಗೆ ರಾಸಲೀಲೆ ಅಂತೆ...
ನನಗೇನೂ ಗೊತ್ತಿಲ್ಲ ಅಂದೆ.......
ಏನದು...ಮೇಷ್ಟ್ರೆ...?
ಅಯ್ಯೋ ಅದೊಂದು ಅವಾಂತರ ಬಿಡಿ ವಾಕ್ ಹೋಗ್ತೀವಲ್ಲ ಆಗ ಹೇಳ್ತೀನಿ..
ಅದಲ್ಲಪ್ಪಾ.....!!!
ಅದೇನೋ ನಿನ ರಾಗ....?
ಮತ್ತೆ ಟಿವಿ ಸಂದರ್ಶನ ಕೊಟ್ಟು ಸ್ವಾಮಿಗಳು ಎರಡೇ ಮಾತು ಕನ್ನಡದಲ್ಲಿ ಹೇಳಿದ್ದು
ಆಮೇಲೆ ಪೂರ್ತಿ ಇಲಿ ತಿಂದಹಾಗೆ ಇಂಗ್ಲೀಷು..ಯಾಕಪ್ಪಾ ಬಿಡದಿ ಕರ್ನಾಟಕದಲ್ಲೇ ಅಲ್ವಾ ಇರೋದು..?
ಹೌದು ಕಣೋ...
ಮತ್ತೆ ಅವ್ರಿಗೆ ಸರಿಯಾಗಿ ಕನ್ನಡಾನೇ ಬರೋಲ್ಲ ಇನ್ನು ಭಕ್ತರಿಗೆ ಏನು ಉಪದೇಶ ಮಾಡ್ತಾರೆ..?
ಗೊತ್ತಿಲ್ಲ ಕಣೋ...
ಮತ್ತೆ..ಯಾಕೆ ಹೀಂಗಾಯ್ತು ಅಂತ ಟಿ.ವಿ.ಯವರು ಕೇಳಿದ್ರೆ...ಇನ್ನುಮುಂದೆ ಕೇರ್ಫುಲ್ ಆಗಿ ಇರ್ತೀನಿ..
ಎಲ್ಲಾ ಕೇರ್ ಫುಲ್ ಆಗಿ ಮಾಡ್ತೀನಿ ಅಂದ್ರಲ್ಲಾ...??
ಅಂದ್ರೆ..ವೀಡಿಯೋ ..ಫೋಟೋ ತೆಗೆಯೋಕೆ ಆಗದ ಹಾಗೆ ಅಂತಾನಾ...?
ಲೇ...ತರ್ಲೆ ಕಣೋ ನೀನು,..ಹೋಗು ಓದ್ಕೋ....
...................ನಿಜಕ್ಕೂ ಆಗ್ತಾ ಇರೋದು ಏನು...ಯಾರನ್ನ ಕೇಳಿದ್ರೂ ನಮಗೆ ಗೊತ್ತಿಲ್ಲ ಅಂತಾರಲ್ಲಾ ಈ ವಿಷಯದಲ್ಲಿ.....ಹಾಂ....??!!
Monday, March 15, 2010
ಆತ್ಮೀಯರೇ ನಿಮಗೆಲ್ಲ ಯುಗಾದಿಯ ಮನಃಪೂರ್ವಕ ಹಾರ್ದಿಕ ಶುಭಾಷಯಗಳು
ಆದಿ ಅಂತ್ಯಕಾಗುವ ಗಾದಿ
ಗಾದಿಯೇರಲಿದೆ ಉಗಾದಿ
ಕಹಿಗಣಿಮಾಡೋ ಗಾದಿ
ವರುಷ ಹರುಷಕಿದು ಗಾದಿ
ಅಂದಿತ್ತು ಇಂದಿದೆ ಮುಂದಾಗುವುದು
ಬಲಿತು ನೆರೆತು ಬಂದರೂ ಸಾವು
ಮಳೆಯಿರಲಿ ಬರಬರಲಿ
ಚಿಗುರೊಡೆವುದು ಮಾವು
ಗರಿಗರಿಯಾಗಿ ಆಲೆಮನೆ ಬೆಲ್ಲ
ನೋವುಂಡವಗೆ ಬೇವೇನು..?
ತಾಳಿದವಗೆ ಬೆಲ್ಲದ ಜೇನು
ಬಿರಿದನೆಲ ಮತ್ತೆಜೀಗುಡುವುದು
ಕಾಲುವೆಗದ್ದೆ ನೀರುಣುವುದು
ಮಾವಿನ ತಳಿರು, ಬಾಳೆಯ ಹಸಿರು
ಕೆಸರುಂಡ ಕೈ, ಕೆನೆಹಾಲು ಮೊಸರು
ಮನವರಳಲಿ, ತನು ಚಿಗುರಲಿ
ನಮ್ಮನಿಮ್ಮಲ್ಲಿಗೆ ಚೈತ್ರ ಶುಭತರಲಿ
ನವ ವರ್ಷದ ಸೊಗಡಿನಂದಕೆ
ಸಾಕ್ಷಿಯಾಗಲಿ ಈ ಉಗಾದಿ
ಆದಿ ಅಂತ್ಯಕಾಗುವ ಗಾದಿ
Monday, March 8, 2010
ಮಾ ತುಝೆ ಸಲಾಂ
(ಪ್ರಕಾಶ್ ನ ಇಟ್ಟಿಗೆ ಸಿಮೆಂಟಿಗೂ ಸಲಾಂ)
ಅಣುವಾಗಿ, ಕಣವಾಗಿ ಬೆಳೆವೆ ಜೀವವಾಗಿ
ಅವಳೊಡಲಲಿ ಅವಳ ಕರುಳ ಕುಡಿಯಾಗಿ
ಮಮ್ಮಲತೆಯ ಮರುಗುಡಿಯ ಮರಿಯಾಗಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ಅಲ್ಲಿ ಅವಳ ರಕ್ತವೇ ಜೀವ - ನನಗೆ ಜನ್ಮ
ನೋವಿನಲೂ ನಲಿವಳು ಪಡೆದು ಮರುಜನ್ಮ
ಬಸಿರಲಿ ರಕ್ತ ಉಸಿರಲಿ ಮೊಲೆಯೂಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ನೀಡಿ ಸೆರಗಾಸರೆ ತಾ ನೆನೆದರೂ ಮಳೆಯಲಿ
ಮಡಿಲ ಬಿಸಿ ತಾ ಸೊರಗಿದರೂ ಛಳಿಯಲಿ
ಮೊಲೆಯುಣಿಕೆಗೆ ದಣಿವಿಲ್ಲ ಹಸಿವಿದ್ದರೂ ಒಡಲಲಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ಕೇಳುವಳು ಕಂದಾ ಹಸಿವೆಯೇ ಹೇಳು?
ಬಿದ್ದೆಯಾ ಪುಟ್ಟಾ ಆಯಿತೇ ಗಾಯ ಹೇಳು?
ಅಲ್ಲಿ ಗಾಜಿನ ಚೂರಿದೆ ನಾ ಬರುವೆ ತಾಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
ನೋಯಿಸಿದರೂ ಅವಳ ಮನ ಹಲವೊಮ್ಮೆ
ಅಮ್ಮ ಎಂದೊಡನೆ ನಕ್ಕು ಬಿಡುವಳು ಎಲ್ಲಮರೆತು
ಮುತ್ತಿಗಾಗಿ ಹೆತ್ತವಳ ರಕ್ತ ಕಣ್ಣೀರಿಗೆ ಕಾರಣವಾದರೂ
ಅಮ್ಮಾ ತಪ್ಪಾಯ್ತು ಎಂದೊಡನೆ ಅಪ್ಪಿಕೊಂಡುಬಿಡುವಳು
ಅಮ್ಮಾ ತಪ್ಪಾಯ್ತು ಎಂದೊಡನೆ ಅಪ್ಪಿಕೊಂಡುಬಿಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?
Thursday, March 4, 2010
ನಿಜವಾಗ್ಲೂ ಗೊತ್ತಿಲ್ಲ ಮಗು
ಅಪ್ಪಾ...
ಏನ್ ಮಗಾ?
ನಿತ್ಯಾನಂದ ಅಂದರೆ ಏನಪ್ಪಾ?
ಯಾವಾಗಲೂ ಆನಂದವಾಗಿರೋದು
ಸ್ವಾಮಿ ನಿತ್ಯಾನಂದವಾಗಿರೋದು ಅಂದ್ರೆ
ರಾಸಲೀಲೆಯಲ್ಲಿರೋದು ಅಂತಾರಲ್ಲಪ್ಪಾ?
ನಂಗೊತ್ತಿಲ್ಲ ಮಗು.
ಅಪ್ಪಾ...
ಏನೋ ಮಗಾ?
ನನ್ನನ್ನ ಸ್ಕೂಲಿನಲ್ಲಿ ಬಿ.ಟಿ. ಅಂತಾರಲ್ಲಪ್ಪ..
ಯಾಕೋ..? ನೀನೇನ್ಮಾಡ್ದೆ..??
ಕ್ಲಾಸ್ನಲ್ಲೂ ಹೀಗೇ ಪ್ರಶ್ನೆ ಕೇಳ್ತೀನಿ ಅಂತ ಹಾಗಂತಾರೆ..
ಅಂದ್ರೆ ಬಲು ತರಲೆ...ಅಂತ ಕಣೋ...
ಅದಕ್ಕೇನಾ ರೈತರು ಬಿ.ಟಿ. ಬದನೆ ಬೇಡ ಅಂತ ಪ್ರತಿಭಟಿಸಿದ್ದು
ನಂಗೊತ್ತಿಲ್ಲ ಮಗು.
ಅಪ್ಪಾ ...
ಇನ್ನೂ ಏನೋ ತರಲೆ ನಿಂದು...?
ನೋಡಿದ್ಯಾ ನೀನೂ ನನ್ನ ಬಿ.ಟಿ. ಅನ್ತೀಯ..!
ಸಾರಿ ಕಣೋ..ಪುಟ್ಟ..ಹೇಳು ಏನು ಪ್ರಶ್ನೆ ನಿಂದು..?
ಒಬ್ಬ ಮಿನಿಸ್ಟ್ರು ಬಿ.ಟಿ. ಬದನೆ ಬೇಕು ಅಂತಾರೆ ಇನ್ನೊಬ್ರು ಬೇಡ ಅಂತಾರೆ
ಹೌದು ಕಣೋ ರೈತರಿಗೆ ಬೇಡ ಆದ್ರೆ ವ್ಯಾಪಾರಿಗೆ ಬೇಕು..
ಹಾಗದ್ರೆ ಈರುಳ್ಳಿ ಒಂದು ರಾಜ್ಯ ಸರ್ಕಾರಾನ ಬೀಳಿಸ್ತು
ಹಾಗೇನೆ..ಈ ಬದನೆಕಾಯಿ ಕೇಂದ್ರ ಸರ್ಕಾರಾನ ಬೀಳ್ಸುತ್ತಾ..?
ನಂಗೊತ್ತಿಲ್ಲ ಮಗು.
Thursday, February 25, 2010
ಒಂದು ತುಂಬಿತು
ಗೆಳೆಯರೇ, ತುಂಬು ಹೃದಯದ ಆಭಾರಗಳನ್ನು ಈ ದಿನ ನನ್ನ ಬ್ಲಾಗ್ ಜಗತ್ತಿನ ಒಂದು ವರ್ಷ ತುಂಬಿದ ಸಮಯದಲ್ಲಿ ಈ ಮೂಲಕ ಅರ್ಪಿಸುವುದು ನನ್ನ ಆದ್ಯ ಕರ್ತವ್ಯ....ಹುಡುಗಿಯಾಗಿ..ಕೆಲವರು ನನ್ನಲ್ಲಿ love ಕಂಡರೆ..ಸ್ನೇಹಿತೆಯಾಗಿ ಕೆಲವರು...ಮಿತ್ರನನ್ನು ಕೆಲವರು ಗುತಿಸಿದರೆ..ಸಹಬ್ಲಾಗಿಯನ್ನು ಮತ್ತೆ ಹಲವರು..ಎಲ್ಲರದೂ ಆಪ್ಯಾಯತೆ, ಅಭಿಮಾನ, ತುಂಬು ಮನಸ್ಸಿನ ಹಾರೈಕೆ, ಆಶೀರ್ವಾದ, ಪ್ರೋತ್ಸಾಹ...ಪದಗಳ ಅಭಾವ ಕಾಡುತ್ತೆ ನಿಮ್ಮ ಆತ್ಮೀಯತೆಯ ಮುಂದೆ.
ನನ್ನನ್ನು ಈ ಲೋಕಕ್ಕೆ ಪರಿಚಯಿಸಿದವರು ನನ್ನ ಸ್ನೇಹಿತೆ-ಸ್ನೇಹಿತ ದಂಪತಿಗಳು, (ಮೃದುಮನಸು-ಸವಿಗನಸು). ಅವರಿಗೆ ಮೊದಲ ನಮನ...ಸವಿಗನಸನ್ನು ಕಾಣಲು ಪುಸಲಾಯಿಸಿದ್ದು ಮೊದಲಿಗೆ ನಾನೇ ಎನ್ನುವುದು ಬೇರೆ ವಿಷಯ...ಹಹಹ...
ಕೆಲವರು ಪ್ರತಿಕ್ರಿಯೆಯಲ್ಲಿ ಮೇಡಮ್ ಜಲನಯನವ್ರೇ ತುಂಬಾ ಚನ್ನಾಗಿ ಬರೀತೀರಿ..ಎಂದಾಗ ...ನಾನು ಮೊದಲಿಗೆ ನಾಟಕದಲ್ಲಿ ಹೆಣ್ಣಿನ ಪಾತ್ರ ಮಾಡಿದ್ದು ನೆನಪಾಗಿ ನಾಚಿಕೊಂಡೆ ಬೆಪ್ಪಾಗಿ...ಹಹಹ...ಆಮೇಲೆ..ನಡೆದದ್ದನ್ನು ಒಂದು ನನ್ನ ಬ್ಲಾಗಿನಲ್ಲಿ ನಿಮಗೆ ತಿಳಿಸಿದ್ದೇನೆ...

ಶಿವು, ಪ್ರಕಾಶ, ಡಾ. ಗುರು, ಸುನಾಥ್ ಸರ್, ಸೀತಾರಾಂ, ದಿನಕರ್ ಮೊಗೇರ್, ಶಿವಪ್ರಕಾಶ್, ಶಿವಶಂಕರ್ ಎಳವತ್ತಿ, ಮಹೇಶ್, ಹೀಗೆ ಇನ್ನೂ ಅತ್ಮೀಯ ಹಲವರು ಆ ಮೊದಲ ದಿನಗಳಿಂದಲೇ ನನ್ನೊಂದಿಗಿದ್ದರೆ..ನನ್ನನ್ನು ಅಣ್ಣನೆಂದು ಕರೆಯುವ ಮಮತೆಯ ತಂಗಿಯರು ಚಿತ್ರಾ, ರಂಜಿತಾ, ವಿದ್ಯಾ(ಇಬ್ಬರಿದ್ದಾರೆ), ರಂಜನಾ, ರೂಪಶ್ರೀ, ಚೇತನ, ...ಹೀಗೇ... ಇನ್ನು ಪ್ರಬುದ್ಧ ಸಲಹೆ-ವಿನಿಮಯಗಳಿಗೆ...ಯಾವಾಗಲೂ ನನ್ನ ಬ್ಲಾಗಿನೊಂದಿಗೆ ಒಂದಾದವರು - ತೇಜಸ್ವಿನಿ, ಚಿತ್ರಾ, ಸುಮ, ಸುಮನ, ಚುಕ್ಕಿಚಿತ್ತಾರ, ರೂಪ, ರೂಪश्री, ಮನಸಾರೆ, ಮಾಲತಿ, ಆಕಾಶ ಬುಟ್ಟಿ, ...ಎಲ್ಲರನ್ನೂ ಹೆಸರಿಸಲು ಆಗ್ತಿಲ್ಲ...ಎಲ್ಲರೂ ಸಮಭಾಗಿಗಳು...
ನನ್ನ ಬ್ಲಾಗ್ ಜೀವನದ ತಿರುವು..ಬಹಳ ಭಾವುಕ ಎನ್ನಬಹುದ್ದಾದ್ದು..ಈಗಾಗಲೇ ಲೇಖನವಾಗಿ ನಿಮಗೆ ತಿಳಿದಿದೆ..ನನ್ನ ಮಂಗಳೂರಿನ ಮತ್ತು ಬೆಂಗಳೂರಿನ ಡಿಸೆಂಬರ್ ಪ್ರವಾಸದ ಸಮಯದಲ್ಲಿ, ದಿನಕರ್ ದಂಪತಿಗಳನ್ನು, ಶಿವು ದಂಪತಿಗಳನ್ನು ಮತ್ತು ಪ್ರಕಾಶ್ (ಅವನ ಮನೆಗೆ ಹೋಗಲಿಲ್ಲವೆಂದು ಅವನ ಕೋಪ ನನ್ನನ್ನು ಬೀಳ್ಕೊಡುವವರೆಗೂ ಇತ್ತು ಅನ್ನಿ..) ಎಲ್ಲರನ್ನೂ ಭೇಟಿ ಮಾಡಿದ್ದು.....
ಈಗ ನಿಮ್ಮೊಂದಿಗೆ ಮಹತ್ತರ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ....
ಹಲವು ಬ್ಲಾಗ್ ಮಿತ್ರರು ಬ್ಲಾಗ್-ಬಳಗದ ಒಂದು ಸಮ್ಮಿಲನ ಏಕೆ ಮಾಡಬಾರದು ಎನ್ನುವುದನ್ನು ಪ್ರಸ್ತಾಪಿಸಿರುವುದು... ನನ್ನ ಎಲ್ಲ ಮಿತ್ರರು ಅವರ ಬ್ಲಾಗ್ ಫಾಲೋಯರ್ಸ್ ಗಳು (ಹಿಂಬಾಲಕರು ಅನ್ನೋದು ಯಾಕೋ ಸರಿ ಕಾಣ್ಲಿಲ್ಲ ಅದಕ್ಕೆ ಅಂಗ್ಲಕ್ಕೆ ಮೊರೆ..ಹಹಹ..ಮೂರ್ಖ ಅನ್ನೋದಕ್ಕಿಂತ fool ಅಂದ್ರೆ ,ಅಷ್ಟಾಗಿ ಮನಸ್ಸಿಗೆ ಹಚ್ಕೊಳ್ಳಲ್ಲ ಅಂತ).
ಜೂನ್ ಅಂತ್ಯದ ಅಥವಾ ಜುಲೈ ಮೊದಲ ವಾರದಲ್ಲಿ ಇದನ್ನು ಆಯೋಜಿಸುವುದರಿಂದ ವಿದೇಶದಲ್ಲಿರುವ ಮಿತ್ರರು ಬರಲೂ ಅನುವಾಗಬಹುದೆಂದು ನನ್ನ ಯೋಚನೆ..ನಿಮ್ಮ ಅನಿಸಿಕೆಗಳನ್ನು ಖಂಡಿತಾ ನನಗೆ ಅಥವಾ ಪ್ರಕಾಶ್ (ಇಟ್ಟಿಗೆ ಸಿಮೆಂಟು) ಗೆ ಮೈಲ್ ಮೂಲಕ ತಿಳಿಸಿ.. ಒಂದು ದಿನದ (ಬೆಳಿಗ್ಗೆ 9 ರಿಂದ ಮದ್ಯಾನ್ಹ 2 ರ ವರೆಗೆ ಮಾಡಿ..ಮದ್ಯಾನ್ಹದ ಊಟದ ನಂತರ ಮುಕ್ತಾಯ) ಕಾರ್ಯಕ್ರಮ ಹೇಗಿರುತ್ತೆ...ನಮ್ಮ ಪರಿಚಯ, ಕೆಲವು ಚರ್ಚೆ, ಒಂದಷ್ಟು ಕವನ-ಕಥೆ ವಿಚಾರ ಹೀಗೆ.
ನಿಮ್ಮೆಲ್ಲರ ಅಭಿಮಾನಕ್ಕೆ ಮತ್ತೊಮ್ಮೆ ವಂದಿಸಿ...ನಮ್ಮ ಬ್ಲಾಗ್-ಸಮೇಳನದ ಬಗ್ಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೇನೆ.
ನಿಮ್ಮವ......
ಡಾ. ಆಜಾದ್
(ಜಲನಯನ, ಭಾವ-ಮಂಥನ ಮತ್ತು science & share ಬ್ಲಾಗ್ ಗಳ ಒಡೆಯ)
Mails: azadis@hotmail.com; suruaz@gmail.com

Subscribe to:
Posts (Atom)