Wednesday, July 13, 2011

(ಚಿತ್ರ ಕೃಪೆ: /www.daijiworld.com)

ಕನ್ಡ ಮಾದ್ಯ್ಮಾ

ಮಾದ್ಯ್ಮಾ ಮಾದ್ಯ್ಮಾಅಂತ್ವಟ್ಗುಟ್ಟವ್ರೆ
ಇಂಗ್ಲೀಸೋರೋದ್ರೂ ಕನ್ಡ ಮರ್ತ್ಬುಟ್ಟವ್ರೆ
ಕನ್ನಡ್ದಾಗೆ ಕಲ್ಯೋಕೂ ಕಲ್ಸಾಕೂ
ಆಗಾಣಿಲ್ಲ ಅಂತಾರ್ಯ್ಯಾಕೋ..?
ಪಂಪ, ರನ್ನ, ಪುರಂದರಕನ್ಕ ಕುಮಾರ್ವ್ಯಾಸ
ಇಂಗ್ಲೇಂಡ್ನಾಗ್ ಕುಣುದ್ರಾ ಆಕ್ಕೊಂಡು ಯಾಸ..?


ಆಡ್ಮುಟ್ದೇಯಿರೋ ಸೊಪ್ಪಿಲ್ಲಾಂತಾರೆ
ಎಲ್ಲಾ ಇಸ್ಯ ನನ್ನಂತೋನ್ಗೂ ತಿಳ್ಯಂಗ್
ಮೆದ್ಲಿಗೇ ಕೈ ಆಕಿ ಯೋಳಿಲ್ವಾ ಸರ್ವಜ್ಞ ?
ಮಾತ್ನಾಗೆ ಲೇಕನ್ದಾಗೆ ಲೋಕಾನ ತಿದ್ದುದ್ರು
ಇಂಗ್ಲೀಸ್ಗಂದಾನೆ ಇರ್ನಿಲ್ಲ ಅವ್ರಿರ್ಗೆಲ್ಬಂತು ಇಜ್ಞ??


ಬುಡ್ಬಿಡಿ, ಮನೆಮಾತ್ನೇ ನೆಟ್ಗ್ ಅಡಾಣಿಲ್ಲ
ಪರ್ದೇಸಿ ಬಾಸೆ ಏರಿ ಅತ್ತಾಣಿಲ್ಲ
ಕುಣೀಲಾರ್ದ್ಸೂಳೆ ಡೊಂಕಂತಾಳೆ ನೆಲಾವ
ನೆಟ್ಗೋದ್ಬರ್ದು ಮಾತಾಡಾದ್ಕಲೀರಿ ಕನ್ಡಾವ

Thursday, June 30, 2011

ಬೆಳಕು - ಕತ್ತಲಿನಾಟ

(ಚಿತ್ರ: ಪ್ರಕಾಶ್ ನ ಬ್ಲಾಗ್ ಛಾಯಾ ಚಿತ್ತಾರ)

ಬೆಳಗು ಮಿಣುಕು ದೀಪ ಆವರಿಸಿದಂತೆ ಕತ್ತಲು
ಜಗಮಗಿಸುತ್ತವೆ ತುಂಬಿಸಿ ಬೆಳಕ ಸುತ್ತಲೂ
ಮುಳುಗುವ ಸೂರ್ಯ ಮರಳಿಬರಲು ನಾಂದಿ
ಸಂಜೆಯ ದಿಗಂತದಲಿ ಚೆಲ್ಲಿ ಸೋನಾ ಚಾಂದಿ

ಬೆಳಕು ರಾತ್ರಿಯಲಿ ನಿರಂತರ ಕತ್ತಲಿನಾಟ
ಕತ್ತಲಲಿ ಆದದ್ದು ಸೂರ್ಯನಡಿಗೆಯಲೂ ಕಾಟ
ಝೊಪಡಿಗಳು ಯುಗಕಳೆದರೂ ಕಾಣುತ್ತಿಲ್ಲ ಬೆಳಕು
ಖೋಪಡಿಗಳು ಉರುಳಿದವು ಹೋಗುತ್ತಿಲ್ಲ ಕೊಳಕು

ಅಮಲಲಿ ಓಲಾಡುವರು ಉಳ್ಳವರು ತೆವಲಿನಲಿ
ರಾತ್ರಿಯಲೂ ಗೇಯ್ವರು ಇಲ್ಲದವರು ಬೆವರಿರಲಿ
ಕಂಠಕ್ಕೂ ತುಳುಕುವ ಮದಿರೆ ಚೆಲ್ಲಾಡುವರು ಅವರು ಅನ್ನ
ಬಾಸುಂಡೆ ಬಿದ್ದರೂ ದುಡಿಮೆ ಅನಿವಾರ್ಯ ಇವರೊಡ್ಡಿ ಬೆನ್ನ

Monday, June 20, 2011

ಮತ್ತೆರಡು ಹಾಡುಗಳು



ಮನ-ಮಂದಿರ

(ಪಲ್ ಪಲ್ ದಿಲ್ ಕೆ ಪಾಸ್ ತುಮ್ ರೆಹತೀ ಹೋ..)

ನನ್ನೀ ಮನದಲ್ಲೇ ನೀ ಮನೆಮಾಡಿರುವೆ
ಜೀವನ ಸುಖದಾಹ ನೀನೆಂದಿರುವೆ...ssss //೨//

ಪ್ರತಿ ಸಂಜೆ ಕಣ್ಣಿನಲಿ, ನಿನ್ನ ಸೆರಗಿನ ಹಾರಾಟ
ಪ್ರತಿ ರಾತ್ರಿ ಕನಸುಗಳ, ಸವಿ ನೆನಪಿನ ಚಲ್ಲಾಟ
ನನ ಉಸುರಿನ ಸೆಳೆತದಲಿ, ನಿನ ಮಧುರ ಸುವಾಸನೆಯು
ಮೈನವಿರೇಳಿಸುವಾ ಆವಾಹಕ ಭಾವನೆಯು
ನಿನ್ನೆದೆಯಾ ಬಡಿತದಲಿ ಪ್ರೇಮಾಂಕುರ ಗೀತೆಯಿದೇ..sssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//

ನಿನ್ನೆ ನಿನ್ನ ಕಂಡಿದ್ದೆ, ನನ್ನ ಮನಸಿನ ಅಂಗಳದಿ
ಅನಿಸಿತು ನೀನಂದಂತೆ, ನನ ಬಂಧಿಸು ತೋಳಿನಲಿ
ಇವು ಎಂಥಾ ಕನಸುಗಳು, ಇದು ಎಂಥಾ ಬಂಧನವು
ಬಲು ದೂರವೆನಿಸಿದರೂ ಬಹು ಹತ್ತಿರ ಭಾವನೆಯೂ
ನಾ ಯೋಚಿಸುತ್ತಲೆ ಇರುವೆ, ಭಯಭಯದಿ ಹೇಳಿರುವೆ ..ssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//

ನಿನಗನಿಸುತಲಿರಬಹುದು, ನನದೇಕೀಪರಿ ಪ್ರೇಮ
ಅಥವಾ ಹುಚ್ಚನೋ ಇವನು, ನನಗಿದು ಸಮ್ಮತವೇ
ಮರುಳಾದವನಾ ಮಾತ, ಮರುಳಾದವನೇ ಬಲ್ಲ
ಜ್ವಾಲೆಯ ದಹಿಸುವ ಸುಖವ ಅರಿತಿದೆ ಈ ಪತಂಗ
ನೀ ಹೀಗೆ ಸುಡುತಿಲಿರು ನನ್ನ ಮತ್ತೆ ಮತ್ತೆ ಕನಸಿನಲಿ..ssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//



ಸನಿಹ
(ರಿಮ್ ಝುಮ್ ಗಿರೆ ಸಾವನ್ - ಧಾಟಿ)

ಚುಮುಚುಮುಚುಮು ಛಳಿಯಲಿ
ಬಿಸಿಯುಸಿರಿರೆ ಬಳಿಯಲಿ...
ಹೇಗೆ ನಾನು ಮರೆಯಲೀ...
ಇರುತಿರೆ ನೀ ಸನಿಹದಲಿ...//ಚುಮು ಚುಮುಚುಮು//

ನಿನ ಬಳೆಯ ಕಲಕಲನಾದ
ಮುಂಗುರುಳ ಲಾಸ್ಯವಿನೋದ
ಮನದಾಳದಾಸೆಯನಿಂದು
ಮುದಗೊಳಿಸಿವೆ ಬಳಿ ಬಂದು
ಮರೆಯಾಗಿದೆ ಮುಖ ಸೆರಗಲಿ
ಮಂದಸ್ಮಿತೆ ನಗುವಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//

ಮೀಟಿದೆ ಮನವೀಣೆಯನಂದು
ನವಿರಾದ ನಿನ ಬೆರಳಲ್ಲಿ
ಮರುದನಿಸಿದೆ ಸನಿಹವು ಇಂದು
ಸುಮಧುರ ಇನಿಗಾನವು
ನಿನ ನೆನಪು ಮನದಲಿ
ಒನಪು ಸದಾ ಕಣ್ಣಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//


Sunday, May 29, 2011

ಚಿತ್ರ ಕೃಪೆ: ಅಂತರ್ಜಾಲ

ಹೆಂಡ್ತಿ – ಪ್ರೇಯಸಿ

ಹೆಂಡ್ತಿ ಟೀವಿ ಇದ್ದಂಗೆ..
ಸ್ಟೇಸನ್ನು ಬತ್ತೈತೆ ಅದ್ರ ಜನ್ಕ ಆಕ್ದಂಗೆ
ಒಂದ್ವಿಸ್ಯ ಯೋಳಾಕೆ ಸುತ್ತು ಬಳ್ಸು
ಮದ್ ಮದ್ಯೆ ಜಾಯೀರಾತು ಹಳ್ಸು
ಅತ್ ನಿಮ್ಸದ್ ಕತೆ ..ಎಳಿತಾನೇ ಇರ್ತಾರೆ
ಅತ್ ವರ್ಸ ಆದ್ರೂ ಮುಗಿಯೊಲ್ಲ ಅಂತಾರೆ

ಆದ್ರೆ ,..ಅವ್ಳು ಪ್ರೇಯ್ಸಿ.. ಬಿಡಿ ಕೇಳ್ ಬ್ಯಾಡಿ!
ಎಂಗಿದ್ರೂ ಏನಂದ್ರೂ ಮಾಡ್ತಾಳೆ ಮೋಡಿ
ಮುಂಚೆ ದುಡ್ಡಿರೋರ್ಗೆ ಸಿಗ್ತಿತ್ತು ಆ ಗತ್ತು
ಈವಾಗ ಎಲ್ಲಾರ್ಗೂ ಮೊಬೈಲ್ ದೇ ಮತ್ತು
ಅವ್ಳೂ ಅಂಗೆಯಾ ಮೊಬೈಲ್ ಇದ್ದಂಗೆ
ನೋಕಿಯಾ, ಎಲ್ಜಿ, ಸಾಮ್ಸಂಗ್ ಎಚ್ ಟಿ ಸಿ ಓಗಿ
ಬೆಳ್ಳಾಗೇ ಆಡ್ಸೋ ಐ ಪೋನ್ ಬಂದಂಗೆ


Monday, May 16, 2011

ಪರದೇಸಿ



ಪರದೇಸಿ
(ಎಕ್ ಪರದೇಸಿ ಮೇರಾ ದಿಲ್ ಲೇಗಯಾ...ಜಾತೆ ಜಾತೆ....ಶೈಲಿ)

ಒಬ್ಬ ಪರದೇಸಿ ನನ್ನ ಹೃದಯ ಕದ್ದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು/೨/
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//

ನನ್ನ ಪರದೇಸಿಯ ಪರಿಯನೆಂತು ಹೇಳಲಿ
ವಜ್ರದಂಥ ದೇಹ ಅವನ್ದು ಮಿಂಚು ಅವನ ಕಣ್ಣಲಿ
ನನ್ನ ಚಿತ್ತ ಬುದ್ಧಿಯನ್ನು ಕೊಂಡು ಹೋದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//

ನಿನ್ನ ಕನಸ ಹೊತ್ತು ಎಷ್ಟೋ ಜನ ಹುಚ್ಚರಾದ್ರು
ಕೊಟ್ಟು ಬಿಡು ದರುಶನ ಬಂದು ಒಮ್ಮೆಯಾದ್ರೂ
ನಯನದ ಪ್ರಕಾಶ ಅವನೇ ಕದ್ದು ಹೋದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾಕೊಟ್ಟನು..
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//

ಕರೆದು ನಿಲಿಸಲೇ ನಿನ್ನ ಕಣ್ಣ ಮುಂದೆ ಅವನಾ
ನಿಲ್ಸಿದರೆ ಮುಂದೆ ನಿನ್ನ ಕೊಡುವೆಯಾ ಬಹುಮಾನ್
ಬಹುಮಾನ ಏನ ಕೊಡಲಿ ಎಲ್ಲಾ ಕದ್ದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//

Sunday, May 1, 2011

ಈ ನನ ಹೃದಯ


ಸ್ನೇಹಿತರೇ, ಈ ದೇವಾನಂದ್ ಹಾಡು ಬಹಳ ಹಿಡಿಸಿದ ಇನ್ನೊಂದು ಗೀತೆ...ಇದರ ಭಾವಾನುವಾದದ ಕರವೋಕೆ..ನಿಮಗಾಗಿ...ನಿಮ್ಮ ಅಭಿಪ್ರಾಯಕ್ಕೆ ಕಾಯ್ತೇನೆ....ಓಕೆ...??!!


ಈ ನನ ಹೃದಯ

ಈ ನನ ಹೃದಯಾ
ತಪ್ಪಿದೆ ಹಳಿಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

ಚೆಲುವೆಯ ಕಂಡು ಗೆಳೆಯಾ
ನೀಡದೇ ಒಂದೂ ಸುಳಿಯಾ
ತಪ್ಪಿಸಿತದು ಬಡಿತಾ ಎದೆಯಲಿ ತುಡಿತಾ//೨//
ಬಲು ಮುಗ್ಧಾ ಈ ನನ ಹೃದಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

ಇದೊಂದು ಹುಚ್ಚು ಕುದುರೆ
ಕುಣಿಯುತ್ತೆ ಆಗಿ ಚಿಗುರೆ
ತಾನೇ ಮರೆಯುತಾ ನನ್ನನ್ನೇ ಮರೆಸುತ್ತೆ//೨//
ಈ ಹುಚ್ಚಿಗೆ ಔಷಧಿ ಏನಯ್ಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

ಮನಸೆಲ್ಲಿ ಕೇಳುತ್ತೆ
ನೋಡಿದ್ದು ಬೇಡುತ್ತೆ
ಕಂಡದ್ದೆಲ್ಲಾ ತನಗೇ ಬೇಕೆಂದು ಬಯಸುತ್ತೆ //೨//
ಮನಸಿನ ಮಾತಾ, ನೀ ಕೇಳಬೇಡಯ್ಯಾ
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

ಸೇರಿದ್ರೆ ಎರಡು ಹೃದಯ
ಆಗುತ್ತೆ ಅಲ್ಲೇ ಪ್ರಳಯ
ಇನ್ನೆಲ್ಲಿ ನನ ಹೃದಯ ಹಾಳಾದೆ ಗೆಳೆಯಾ //೨//
ಮನಸಿನ ಮನಸು ಮನಸಿಗೆ ಗೊತ್ತು
ಹಿಡಿತಕೆ ತರಲು, ತಗಲುತ್ತೆ ಸಮಯಾ //ಪ//

Wednesday, April 27, 2011

(ಚಿತ್ರ ಕೃಪೆ: ಇಟ್ಟಿಗೆ ಸಿಮೆಂಟ್)

ಬಾ ಹೂಬನಕೆ ಇನಿಯಾ


ಮುಳ್ಳು ಹರಿತೆಲೆಯ ತಲೆ

ಚುಚ್ಚುವುದು ಬಂದರೆ

ಅನುಮತಿಯಿಲ್ಲದಲೇ

ನಾಜೂಕು ಕಾಂಡ

ಮುಳ್ಳಿದ್ದರೂ ಭ್ರಮರ ಭಂಡ

ನುಸುಳುವುದು ಮಕರಂದಕಾಗಿ

ಹೆದರಿದ ಪತಂಗ ನೋಡುತಿರೆ ಮಂಕಾಗಿ

ಭರ ಭ್ರಮರದ ಸಂಭ್ರಮ,

ನಾಚಿದ ಕೆಂದುಟಿ ತೆರೆದ ಸುಮ

ಇನ್ನೂ ಮುಚ್ಚಿದ ಗರಿ ಬಿಚ್ಚದ ಮೊಗ್ಗು

ನೋಡುತಿದೆ ಅಳೆದಳೆದು

ಕಳೆದುಕೊಂಡರೂ ಗಳಿಸಿದ ತನ್ನಕ್ಕನ

ಗಳಿಸಿದರೂ ಕಳಕೊಂಡ ಭ್ರಮರನ

ನಸುನಕ್ಕು ಅರಿತಂತೆ ಓಲಾಡಿಸಿ ತಲೆ

ಕಾಯುತಿದೆ ಮತ್ತೆ ಬರುವ ರವಿಗಾಗಿ

ರವಿತರುವ ಪುಳಕ ಸುಳಿವ ಋತುಗಾಗಿ

ಆ ಕಿರಣದಾಗಮನ ಭೃಂಗಸಂಗಕಾಗಿ