Tuesday, November 13, 2012
Saturday, October 13, 2012
ಕಿತ್ತೂರು ಚನ್ನಮ್ಮನ ಪುನರ್ಜನ್ಮ..???
ಕಿತ್ತೂರು ಚನ್ನಮ್ಮನ ಪುನರ್ಜನ್ಮ..???
ಆ ದಿನ ಬೆಳಿಗ್ಗೆ ಎಂದಿನಂತೆ ೫.೩೦ ಎದ್ದು ಸ್ಕೂಲಿಗೆ ಹೋಗಬೇಕಾಗಿದ್ದ ನನ್ನ ಮಗಳು
ಸುರಯ್ಯಾನನ್ನು ಮೂರನೇ ಬಾರಿ..ಹತ್ತು ನಿಮಿಷದೊಳಗೆ ಎಚ್ಚರಿಸಿದ್ದೆ.. ಆಗ್ಲೇ ೬.೦ ಆಗುತ್ತಾ ಇತ್ತು.
“ಬೇಟೂ..ಉಠೋ..ಟೈಮ್ ಹುವಾ ಮಾ...ರೆಡಿ ನೈ ಹೋನಾ ಕ್ಯಾ ಸ್ಕೂಲ್ಕು ಜಾನೇ..?” ಸ್ವಲ್ಪ
ಎತ್ತರದ ದನಿಯಲ್ಲೇ ಹೇಳಿ -
ನಾನೂ ಬ್ರಶ್ ಮಾಡಿ ಬಂದೆ, ಅರೆ..!! ಇನ್ನೂ ಎದ್ದಿಲ್ಲ... ಈಗ ಕೋಪ ಬಂತು...
“ಸುರೂ...” ಕೂಗಿದೆ ಒತ್ತು ಕೊಟ್ಟು ’ರೂ’ ಅಕ್ಷರಕ್ಕೆ..
ತಡಬಡಾಯಿಸಿ ಎದ್ದಳು ಸುರು, ಎಂದಿನಂತೆ ಮೊದಲು ಅವಳೇ ಅಲಾರ್ಮ್ ತೆಗೆದು, ಅದನ್ನು ಆಫ್ ಮಾಡಿ
ಎದ್ದು ನನ್ನ ಎಬ್ಬಿಸ್ತಾ ಇದ್ದವಳು ಈ ದಿನ ಯಾಕೆ..?? ನನಗೂ ಯೋಚನೆ ಆಗೋದು ಸಹಜ ಅಲ್ವೇ..??
ಯಾಕೋ ಲವಲವಿಕೆ ಕಡಿಮೆ ಇತ್ತು... ಅವಳಮ್ಮನೂ ಎದ್ದಿರಲಿಲ್ಲ... ಅರೆ ಇದೇನು..?? ನಾನೇ ಏನಾದರೂ
ತಪ್ಪು ಮಾಡ್ತಿದ್ದೀನಾ..???
“ರೀ ..ಈ ದಿನ ಶುಕ್ರವಾರ ಅಲ್ವಾ !! ರಜಾ ಮಲಗ್ಲಿ ಬಿಡಿ...ಇಷ್ಟು ಬೇಗ ಯಾಕೆ
ಎಚ್ಚರಿಸ್ತೀರಾ” ಅನ್ನೋ ಥರ ನನ್ನ ನೋಡಿದ್ಲು ಮಲಗಿದ್ದಲ್ಲಿಂದಲೇ ನನ್ನವಳು...
ಎದ್ದು ಕುಂತ ನನ್ನ ಮಗಳು.. ಮಂಕು ಮಂಕಾಗೇ ಇದ್ದದ್ದು ನೋಡಿ... ಸ್ವಲ್ಪ ಆತಂಕ ಆಯ್ತು, ಹಣೆ
ಮುಟ್ಟಿ ನೋಡಿದೆ, ತಣ್ಣಗಿತ್ತು. ಸಮಾಧಾನ ಆಯ್ತು.
“ಓಕೆ ಬೇಟೂ ..ಮಲಗು.. ಹಾಲಿಡೇ ಅಲ್ವಾ..ಓಕೆ...ಮಲಗು” ಎಂದೆ..
ಸುರು ನನ್ನ ಕೈಹಿಡಿದು ಕುಳ್ಳರಿಸಿಕೊಂಡಳು ಹಾಸಿಗೆ ಮೇಲೆ..
“ಅಬ್ಬೂ ನಾನು ಬ್ರಿಟೀಶರ್ಸನ್ನ ನೋಡಿದ್ದೀನಿ.., ಬಹಳ ಕೆಟ್ಟವರು ಅವರು, ನಮ್ಮ ನಮ್ಮಲ್ಲೇ
ಜಗಳ ತಂದಿಟ್ಟು ತಮ್ಮ ವಸಾಹತು ಸಾಮ್ರಾಜ್ಯ ಮಾಡಿದ್ದೇ ಅಲ್ಲದೇ..ನಮ್ಮ ರಾಜ್ಯದಲ್ಲೂ ನಮ್ಮವರನ್ನೇ
ನನ್ನ ವಿರುದ್ಧ ಎತ್ತಿ ಕಟ್ಟಿದರು”.... !!!!!!!!!!!!!! ??????
ತಕ್ಷಣ ಮತ್ತೆ ಅವಳ ಹಣೆ ಮುಟ್ಟಿದೆ..ಗಾಬರಿಯಾಯ್ತು... ತಣ್ಣಗಿತ್ತು ಹಣೆ!!
“ಏನಾಯ್ತು ಬೇಟೂ...ಯಾಕೆ?? ಕನಸು ಕಂಡ್ಯಾ??”
“ಇಲ್ಲ ಅಬ್ಬು, ನನಗೆ ನನ್ನ ಹಿಂದಿನ ಜನ್ಮದ ನೆನಪಾಗ್ತಿದೆ,...”
ನನ್ನ ಗಾಬರಿ ಜಾಸ್ತಿ ಆಯ್ತು, ನನ್ನವಳು ಪುಣ್ಯಕ್ಕೆ ರಜೆ ಆದ್ದರಿಂದ ಮತ್ತೆ
ನಿದ್ರಿಸಿದ್ದಳು, ಇಲ್ಲವಾಗಿದ್ದರೆ ಅತ್ತೇ ಬಿಡ್ತಾ ಇದ್ದಳು.
“ಇಲ್ಲ ಪುಟ್ಟಾ, ಕನಸು ಕಂಡಿರಬೇಕು...!!” ಅಂದೆ.
“ಇಲ್ಲ ಅಬ್ಬೂ ನನಗೆ ಪೂರ್ತಿ ನೆನಪಾಗ್ತಿದೆ,... ಸಂಗೊಳ್ಳಿಯನ್ನ ಹಿಡಿದು ಗಲ್ಲಿಗೆ
ಹಾಕಿದ್ರು.. ಎಂಥ ಕ್ರೂರಿಗಳು... ನಾನು ಹೇಗೋ ತಪ್ಪಿಸ್ಕೊಂಡು ಕಾಡಿಗೆ ಹೋಗಿದ್ದೆ, ಅಲ್ಲೂ
ಬಿಡಲಿಲ್ಲ ನನ್ನ ಬೆನ್ನಹಿಂದೆ ಬಿದ್ದರು.. ನನ್ನ ಹಾಗೇ ಇದ್ದ ಸುಂದರಮ್ಮನನ್ನ ಕೊಂದು ನಾನೇ ಸತ್ತೆ
ಅಂತ ಗುಲ್ಲೆಬ್ಬಿಸಿ...ನನ್ನ ರಾಜ್ಯಾನೂ ಕಬಳಿಸಿದ್ದರು.........
ನಾನೂ ಇನ್ನೂ ಶಾಕ್ ನಿಂದ ಹೊರಬಂದಿರ್ಲಿಲ್ಲ... ನನ್ನ ಮಗಳಿಗೆ ಇದೇನಾಗಿದೆ...? ನಿಜಕ್ಕೂ
ಪುನರ್ಜನ್ಮದ ನೆನಪಾಯ್ತಾ?? ಅಂದರೆ ಇವಳು ಕಿತ್ತೂರು ಚನ್ನಮ್ಮ ಆಗಿದ್ದಳಾ...???
ತಲೆ ಕೊಡವಿಕೊಂಡೆ... ಆದರೆ ಅವಳು ಎಂದಿನಂತೆ ಶಾಂತವಾಗೇ ಇದ್ದಳು, ಸ್ವಲ್ಪ ಸಮಯ ನಿದ್ದೆ
ಮಂಪರು ಇದ್ದಿದ್ದು ಬಿಟ್ಟರೆ ...!! ನನಗೆ ಟೆನ್ಶನ್...!!!
“ಅಲ್ಲಮ್ಮಾ ..ಕನಸು ಕಂಡಿರಬೇಕು ನೀನು...” ಎಂದೆ...
ಇಲ್ಲಾ ಅಬ್ಬೂ...ನನಗೆ ಸುಮಾರು ವಿಷಯಗಳು ನೆನಪಾಗ್ತಿವೆ... ಎನ್ನುತ್ತಾ ಚನ್ನಮ್ಮ
ಕಾರಾಗೃಹದಿಂದ ತಪ್ಪಿಸಿಕೊಂಡದ್ದು ತನ್ನಂತೇ ಇದ್ದ ಸುಂದರಮ್ಮ ಮತ್ತಿತರ ಬಂಟರ ಜೊತೆ ಕಾಡಿಗೆ
ಹೋಗಿದ್ದು..ಹೀಗೆ ಹತ್ತು ಹಲವು ಚರಿತ್ರಕಾರರು ಅರಿತಿರದ ವಿಷಯ ಹೇಳತೊದಗಿದಳು... ಅವಳ ಮುಖದಲ್ಲಿ
ವಿಶೇಷ ಕಾಂತಿ ಕಾಣುತ್ತಿತ್ತು... ನನಗಿಂತಾ ನೂರು ಪಾಲು ಹೆಚ್ಚು ಮನೋ ಸ್ಥೈರ್ಯ, ಗಾಂಭೀರ್ಯ ಅವಳ
ಮಾತುಗಳಲ್ಲಿ ನೋಡಿ ..ನನಗೆ ನಿಜಕ್ಕೂ ಗಾಬರಿ, ಆಶ್ಚರ್ಯ, ಸಂತಸ ಎಲ್ಲಾ ಒಟ್ಟಿಗೆ
ಆಗಲಾರಂಭ್ಸಿಸಿತು... !!!, ಅವಳು ತಿಳಿಸಿದ ಕೆಲವು ವಿಷಯಗಳು ಚರಿತ್ರೆಯ ಗೊತ್ತಿರುವ ವಿಷಯಗಳಿಗೆ ಹಲವು
ಆಯಾಮ ಕೊಡುವಂತಿದ್ದವು.
“ಸುರು ಬೇಟಾ...ನೀನು..ನನ್ನ ಮಗಳು..ನಿನ್ನ ಹೆಸರು ಸುರಯಾ, ನೀನೀಗ ಕುವೈತಲ್ಲಿದ್ದೀಯಾ
...ಅನ್ನೋದು ಗೊತ್ತಲ್ಲ..??” ಎಂದೆ ಅವಳ ಮುಖವನ್ನೇ ಆತಂಕ ಭಯದಿಂದ ನೋಡ್ತಾ...
“ಹೌದು ಅಬ್ಬೂ, ನಾನು ಸುರಯ್ಯ ನಿನ್ನ ಮಗಳು, ಗೊತ್ತು..., ಆದ್ರೂ ಹಳೆಯದು ಬಹಳ ಸ್ಪಷ್ಟವಾಗಿ
ನೆನಪಾಗ್ತಿದೆ....”
ಸ್ವಲ್ಪ ಸಮಾಧಾನವಾದರೂ ಗಾಬರಿ ಹೋಗಲಿಲ್ಲ...
“ಓಕೆ ಬೇಟಾ... ಓಕೆ..ಓಕೆ.. ಎಲ್ಲೂ ಈ ವಿಷಯ ಹೇಳಬೇಡ..ಅದರಲ್ಲೂ ನಿನ್ನ ಕನ್ನಡ ಕೂಟದ ಕನ್ನಡ
ಕ್ಲಾಸಲ್ಲಿ ಯಾರಿಗೂ ಹೇಳಬೇಡ...ಅಯ್ತಾ...!! ಓಕೆ..ಬೇಟೂ...” ಎಂದೆ. ನನ್ನ ಆತಂಕ ಕಡಿಮೆ
ಆಗಿರ್ಲಿಲ್ಲ, ಎಸಿ ಇದ್ರೂ ಮೈ ಬೆವರುತಿತ್ತು......
ಏನು ಮಾಡುವುದು?? ಇವಳು ತುಂಬಾ ಸ್ಪಷ್ಟವಾಗಿ ಪುನರ್ಜನ್ಮ ಪಡೆದ ಹಾಗೆ ಕಾಣುತ್ತಿದೆ...
ಎಲ್ಲೂ ಓದಿರದ ಇವಳಿಗೆ ಚನ್ನಮ್ಮನ ವಿಷಯ ನಾನೂ ಹೇಳಿಲ್ಲ, ಅವಳ ಸ್ಕೂಲಲ್ಲೂ ಯಾವ ಪಠ್ಯವಿಷಯದಲ್ಲೂ
ಬಂದಿಲ್ಲ....!!!!! ಎಷ್ಟೊಂದು ವಿಷಯ ಹೇಳ್ತಿದ್ದಾಳಲ್ಲಾ... ಈ ಸುಂದರಮ್ಮ ಯಾರು??? ನಾನೂ
ಓದಿದ್ದು ನೆನಪಿಲ್ಲ.....!!! ಹೇಗೆ?? ಏನು??? ತಲೆ ಸುತ್ತತೊಡಗಿತು ಎಲ್ಲಾ ಯೋಚನೆ ಮನಸಿಗೆ
ಬಂದು................
..................................................
“ಅಬ್ಬೂ...ಅಬ್ಬೂ....!!! ಅಬ್ಬೂ....” ನನ್ನ ತೋಳನ್ನು ಜೋರಾಗಿ ಅಲುಗಾಡಿಸಿದಳು ಸುರು,
“ಅಬ್ಬೂ ಇನ್ನೂ ಏಳಲ್ವಾ..?? ನನ್ನ ಕನ್ನಡ ಕ್ಲಾಸಿದೆ ಅಲ್ವಾ ೯.೩೦ ಗೆ... ಮರೆತ್ರಾ..???
ಹಾಂ..ಆಂ...ಎಸ್ ಬೇಟೂ... !! ವಾಸ್ತವಕ್ಕೆ ತಂದಿದ್ದು ನನ್ನ ಮಡದಿ ಕಾಫಿ ರೆಡಿ ಇದೆ ಬನ್ನಿ
ಎನ್ನುವ ಮಾತು.... !!!!
ಅಯ್ಯೋ... !!! ಅಲಾರ್ಮ್ ಹೊಡೆದಾಗ ಎದ್ದು ಮತ್ತೆ ಮಲಗಿದವನಿಗೆ ಈ ಕನಸು ಬಿತ್ತಾ....???
ಕಣ್ಣುಜ್ಜಿದೆ, ಸುರು ತನ್ನ ಕನ್ನಡ ಕ್ಲಾಸಿನ ಪುಸ್ತಕ ಕೈಲಿ ಹಿಡಿದಿದ್ದು ಹೊರಡೋಕೆ ರೆಡಿ
ಆಗಿದ್ದಳು...
“ಬೇಟೂ...ಚನ್ನಮ್ಮನ ವಿಷಯ ಮರೆತೆಯಾ...??” ಎಂದೆ
“ಯಾವ ಚನ್ನಮ್ಮ ??? ಅಬ್ಬೂ...!!! ಆಶ್ಚರ್ಯದಿಂದ ಅವಳು ನನ್ನತ್ತ ಪ್ರಶ್ನೆ ಎಸೆದಾಗಲೇ
“ಅಬ್ಬಾ..!!!” ನಿರಾಳ... ಈ ವರೆಗೂ ಕನಸು ಕಂಡಿದ್ದೆ ನಾನು...
ನಗುತ್ತಾ ಎದ್ದು ಹೋದೆ ಮುಖ ತೊಳೆದು ಕಾಫಿ ಕುಡಿದು ಸುರುನ ಕನ್ನಡ ಕ್ಲಾಸಿಗೆ ಕರೆದುಕೊಂಡು
ಹೋಗಲು.
ಹಲ್ಲುಜ್ಜುತ್ತಾ ನೆನಪು ಮಾಡ್ಕೊಂಡೆ ಸುರು ಹೋದ ಸಲ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ
ಕಿತ್ತೂರು ಚನ್ನಮ್ಮನ ಪಾತ್ರ ಮಾಡಿದ್ದು.
Sunday, September 30, 2012
ಕವಿಗೋಳ್
(John Keats, Pic Source: Web ಚಿತ್ರ : ಅಂತರ್ಜಾಲದ ಕೃಪೆ)
ಕವಿಗೋಳ್
ಕವಿಗಳು ಬಯ್ತಾರೆ ನ್ಯೂಟನನ್ನ
ಕಾಮನ್ಬಿಲ್ಲಂದಾನೇ ಕೆಡಿಸ್ಬಿಟ್ನಣ್ಣ
ಗುಂಡ ಅಂದ, ಏನ್ಬಣ್ಣ ಬಳುದ್ನಾ ಅವ್ನು?
ಕಲ್ಪ್ನೆ ಮಾಡಾಕಾಗ್ದೋವ್ನು ಇಂಗೆ
ಗೂಬೆ ಕೂಡ್ಸಿದ್ರೆ ಇಜ್ಞಾನಿಗಳ್ಮೇಲೆ ಎಂಗೆ?
ಇನ್ನೊಬ್ಬ ಅಂತಾನೆ ರುದ್ಯಾ ಪಂಪಂತೆ
ರಕ್ತಾನ ಪುಟ್ಬಾಲಿಲ್ದೇನೆ ಎತ್ತಾದಂತೆ
ಕವಿ ಯಾಕೋ ಒಸಿ ಅಚ್ಕಂಡವ್ನೆ ಮನ್ಸಿಗೆ
ರುದ್ಯದ್ ಮಾತ್ ಎಂಗ್ತರ್ಲಿ ನಾ ಕನ್ಸಿಗೆ?
ನಮ್ರಾಮಣ್ಣ ಅಂದ ಬೆಳಕ್ನಾಗೆ ಏಳ್ಬಣ್ಣ
ನೋಡ್ಬೇಕಂದ್ರೆ ಕೊಡ್ತೀನಿ ಪ್ರಿಜ಼ಂ ಕಣ್ಣ
ಕವಿ ಕೂತ ತಲೆಮ್ಯಾಲೆ ಕೈ ಒತ್ಕೊಂಡು
ಗುಲಾಬಿನಾ ಎಂಗಪ್ಪಾ ಕೊಡ್ಲಿ ಕಿತ್ಕಂಡು?
ನಮ್ ಜಲ್ನಯ್ನಾ ಯೋಳ್ತಾರೆ ಇನ್ನೊಂದಿಸ್ಯಾ
ಸ್ವಾತಿ ಅನಿ ಅಲ್ಲೋ ಮಾಡೋದ್ಮುತ್ತು ಬಸ್ಯಾ
ಮಳ್ಕಣ ಸೇರ್ಕಂಡ್ರೆ ಚಿಪ್ನಾಗೆ, ಆಗೋದು ಮುತ್ತು
ಕವಿಗೋಳ್, ಎಂಗ್ಮುಗ್ಸೋದು ಈ ಕವ್ನದ್ ಸುತ್ತು
Sunday, September 16, 2012
Tuesday, September 4, 2012
ದಿಲ್ ಕೊ ದೇಖೋ ಚೆಹರಾ ನ ದೇಖೋ
“ಹಾಯ್ ಡೂಡ್” ಹೌ ಆರ್ ಯೂ...?
What yaar what are you doing this evening….??
What Daa…looking smartaaaa!!!!! Accept my friendship….
ಇವು ಖಾಸಾ ಸ್ನೇಹಿತನ ಫೇಸ್ ಬುಕ್ ಗೆ
ಬರ್ತಿದ್ದ ಚಟ್ಪಟಾ ಮೆಸೇಜ್ ಗಳು....
ಹೊಟ್ಟೆ ಉರಿಯೊಲ್ವಾ..?? ಅದೂ ಸುಂದರ
ಹುಡುಗಿಯರು, ಲಲನೆಯರು, ಜಸ್ಟ್ ಮ್ಯಾರೀಡ್ ಹುಡ್ಗೀರು, ದಿಲ್ದಾರ್ ಆಂಟಿಗಳು....
ಅಬ್ಬಬ್ಬಬ್ಬಾ....!!!!
ಗಾಯದ ಮೇಲೆ ಬರೆ ಅನ್ನೋ ಹಾಗೆ ...
ನನಗೊಬ್ರು ಮೆಸೇಜ್ ಹಾಕಿದ್ರು “ಅಂಕಲ್
ನಿಮ್ಮ ಕವನಗಳು ತುಂಬಾ ಚನ್ನಾಗಿರುತ್ತವೆ, ಆದ್ರೆ ನೀವು ಹಾಕೋ ಕೆಲ ರಸಿಕ ಕವನ-ಚುಟ್ಕಗಳು
ನಿಮ್ಮಂತಹ ವಯಸ್ಸಾದವರಿಗೆ ಒಪ್ಪೊಲ್ಲ... ಆದರೂ ಯಂಗ್ ಆಗಿದ್ದಾಗ ನಿಮ್ಮ ಕರಾಮತ್ತು
ಜೋರಾಗಿದ್ದಿರಬಹುದು ಅನ್ನೋದು ಮಾತ್ರಾ ಊಹಿಸ್ಕೋಬಹುದು...!!!
ಛೆ ಛೇ... “ಯಂಗ್ ಆಗಿದ್ದಾಗ..??!!”
ಅಂದ್ರೆ ಹೆಂಗಾಗ್ಬೇಡ ನನಗೆ...??
ಅಲ್ಲ, ನನ್ನ ಸ್ನೇಹಿತ ಅಬ್ಬಬಾ ಅಂದ್ರೆ
ನನಗಿಂತ ಒಂದು ಮೂರ್ನಾಲ್ಕು ವರ್ಷ ಚಿಕ್ಕವನಪ್ಪಾ.., ಹಂಗಂತ ನನ್ನ ಅಂಕಲ್ ಮಾಡಿ... ಅವನನ್ನ “Dude” ಸಿಂಹಾಸನಕ್ಕೆ ಏರ್ಸೋದು ಸರಿನಾ...?? ನೀವೇ ಹೇಳಿ...!!!
ನನಗೆ ನನ್ನ ಸ್ನೇಹಿತನ ಈ ಅಪಾರ ಜನ (ಜನಾನ)
ಮನ್ನಣೆ, ಲವ್ವು ಸಿಕ್ತಾ ಇರೋದರ ಗುಟ್ಟು ಅವನೇ ಬಿಟ್ಕೊಟ್ಟ. ಎತ್ತರಕ್ಕೆ ಗಡದ್ದಾಗಿರೋ ಇವನನ್ನ
ನೋಡಿರೋರು...ಸಾರ್ ನೀವು ಸಿನಿಮಾದಲ್ಲಿ ’ವಿಲನ್’ ಪಾತ್ರ ಯಾಕೆ ಮಾಡಬಾರದು ಅಂತ ಕೇಳಿದ್ರಂತೆ.... ಅದೂ
ಅವನೇ ಹೇಳಿದ್ದು...
ಅಬ್ಬಾ..!! ಹೊಟ್ಟೆಗೆ ಹಾಲು ಸುರಿದಂತೆ
ಆಯ್ತು.. ಉರಿನೂ ಕಮ್ಮಿ ಆಯ್ತು ಅನ್ನಿ...,
ವಿಷಯ ಏನು ಗೊತ್ತಾ..?? ಅವನು ತನ್ನ
ಪ್ರೊಫೈಲಲ್ಲಿ – ಅತ್ಗೆ ತದ್ರೂಪು ಇವ್ನ ಗೆಟಪ್ಪು (ಇವ ನಾನು ತಲೆ ಎತ್ತಿ ನೋಡೋ ಹಾಗೆ ಎತ್ತರದ
ಆಳು...ಇದೂ ಕಾರಣಾನೇ ನನ್ನ ಹೊಟ್ಟೆ ಉರಿಗೆ..ಊಂ...)
ಇರುವ ತನ್ನ ಮಗನ ಫೋಟೋ ಹಾಕಿದ್ದ. ಅದೇ
ತಡ...
ತಕಳಪ್ಪಾ ಎಲ್ಲಾ ಕಡೆಯಿಂದ ಫ್ರೆಂಡ್
ರಿಕ್ವೆಸ್ಟೂ... ಅದ್ರಲ್ಲಿ ೬೦% ಹುಡ್ಗೀರಾದ್ರೆ, ೩೦% ಯಂಗ್ ಆಂಟೀರ್ದು... ಇನ್ನು ೧೦%
ನಮ್ಮಂಥೋರದ್ದು...!! ಯಾಕೆ ಹೇಳಿ..?? ಇವನ ನೆಪದಿಂದಾದ್ರೂ ಲಲನೆಯರು ನನ್ನ ಫ್ರೆಂಡ್
ರಿಕ್ವೆಸ್ಟ್ ಅಕ್ಸೆಪ್ಟ್ ಮಾಡ್ಕೋತಾರೋ ಅನ್ನೋ ಆಸೆಗೆ... ಊಂ....!!
ಹಾಗೇ ಸುಮಾರು ಜನಕ್ಕೆ (ಜನಾನಕ್ಕೆ) ನಾನು
ಇಸಿ ಫ್ರೆಂಡು ಅಂತ ಹೇಳ್ಕೊಂಡೇ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಸ್ಕೊಂಡಿದ್ದೀನಿ... (ಅಂದಹಾಗೆ, ಜನಾನಾ ಅಂದ್ರೆ ಸ್ತ್ರೀ ಸಮೂಹ)
ಈ ಜನಾನೇ ಹೀಗೆ...
ಮುದ್ದಾದ ಮುಖ (ಗೋರಾ ಗಾಲ್) ನೋಡಿದ್ರೆ
ಗೋಲ್ ಆಗಿ ಬಿಡ್ತಾರೆ.
ಅಲ್ಲ ರೀ, ಕರಿಯ ಕೃಷ್ಣನ್ನ ಗೋಪಿಯರು ಮುತ್ಕೋತಾಯಿದ್ರು
ಅಂದ್ರೆ ಹ್ಯಂಗ್ರೀ ನಂಬೋದು...?? ನನ್ನ ನೋಡಿದ್ರೆ ದೂರ ಓಡ್ತಾರೆ...!!!??
ಹೋಗ್ಲಿ ಬಿಡಿ, ಆದರೆ ಈ ನನ್ ಸ್ನೇಹಿತ
ಗುಣದಲ್ಲಿ ಅಪರಂಜಿ ಅದ್ರಲ್ಲಿ ಎರಡು ಮಾತಿಲ್ಲ... ಊಂ..
ಅದು ಅಪರಿಚಿತ ಆದ್ರೂ ಕಷ್ಟದಲ್ಲಿದ್ರೆ
ಕರಗ್ತಾನೆ, ಸಹಾಯಕ್ಕೆ ಮುಂದಾಗ್ತಾನೆ. ಅಪಘಾತ ಆಗಿ ರಸ್ತೆಲಿ ಒದ್ದಾಡೋರನ್ನ ಕಂಡು ಅವ್ರ
ಪ್ರಲಾಪವನ್ನ, ಅವಸ್ಥೆ ನ ವೀಡಿಯೋ, ಫೋಟೋ ಮಾಡಿ ಅಪ್ ಲೋಡ್ ಮಾಡೋ ಆಸಕ್ತಿ ಇರೋ ಜಗಳ ಮಧ್ಯೆ ಇವನು
ಅಪವಾದ. ತಕ್ಷಣ ತನ್ನ ಕಾರ್ ನಿಲ್ಲಿಸ್ತಾನೆ, ಗಾಯಾಳನ್ನ ಆಸ್ಪತ್ರೆಗೆ ಸೇರ್ಸಿ ಅವರಿಗೆ ಚಿಕಿತ್ಸೆ
ಆಗಿ ಯಾರಾದ್ರೂ ಅವರ ಕಡೆಯವರು ಅವರನ್ನ ನೋಡ್ಕೊಳ್ಳೋಕೆ ಬರೋವರೆಗೆ ಕಾಳಜಿ ವಹಿಸ್ತಾನೆ!! ಊಂ...!!
ಇದಲ್ವೇ ಮಾನವತೆ ಮೆರೆಯೋ ಗುಣ..??
ಈಗ ಮೊನ್ನೆ ಪ್ರೊಫೈಲ್ ಚೇಂಜ್ ಮಾಡವ್ನೆ...
ನನಗೆ ಇನ್ನೂ..ಭರ್ತಿ ಸಮಾಧಾನ ಆಯ್ತು..ಆಗ..
ಆದರೆ ಇವನ ಫ್ರೆಂಡ್ ರಿಕ್ವೆಸ್ಟ್
ನಿಂತಿಲ್ಲಾರೀ.... ಊಂ..!!!!
ಇನ್ನೂ ಖುಷ್ ನನಗೆ ಈಗ, ಯಾಕೆ ?? ಮನುಷ್ಯ
ಅಂತಹವನ್ರೀ, ಮನಸಿಗೆ ಹತ್ತಿರ ಆಗ್ಬಿಡ್ತಾನೆ ಮೊದಲನೇ ಸಲ ಭೇಟಿ ಆದರೂ...!! ಇನ್ನು ಫ್ರೆಂಡ್
ರಿಕ್ವೆಸ್ಟ್ ಅತಿಶಯೋಕ್ತಿ ಆಲ್ಲ ಅಲ್ವಾ???
ಅವನ್ನ ನೋಡಿದ್ರೆ ಮತ್ತೆ ಇನ್ನೊಬ್ಬ ಬ್ಲಾಗ್
ಠಕ್ಕ ಇದ್ದಾನೆ, ಏನು ನಯ?? ಏನು ನಾಜೂಕು ??? ಏನು ಜ್ಞಾನ ಪ್ರದರ್ಶನ...!!! ಅಬ್ಬಬಬ್ಬಾ ,,,,
ಅಷ್ಟೇ ನಯ ವಂಚಕ, (ಇವನ ಹುಡುಕಾಟಕ್ಕೂ ನನ್ನ ಸ್ನೇಹಿತ ಹಲವರಿಗೆ ಹೆಲ್ಪ್ ಮಾಡ್ತಿದ್ದಾನೆ ಅನ್ನೋ
ವಿಷಯ ಬೇರೆ...) ಇವನ ಬಗ್ಗೆ ನೆನಪಿಸ್ಕೊಂಡ್ರೆ...
ನನಗೆ ನೆನಪಾಗೋ..
ಹಿಂದಿ ಹಾಡು....
“ದಿಲ್ ಕೊ ದೇಖೋ ಚೆಹರಾ ನ ದೇಖೋ
ಚೆಹರೋಂನೆ ಲಾಖೋಂಕೊ ಲೂಟಾ...
ದಿಲ್ ಸಚ್ಚಾ ಔರ್ ಚೆಹ್ರಾ ಝೂಟಾ...”
Wednesday, June 27, 2012
ಪುಸ್ತಕವಿದೆ ನೋಡಿರೋ ಅಣ್ಣಗಳಿರಾ.......... ಎನುತಿಹ ಅಪೂರ್ವ ಪುಸ್ತಕ ಪ್ರೇಮಿ ಮಂಡ್ಯ ಜಿಲ್ಲೆಯ ಅಂಕೇಗೌಡರು
ಅಂಕೆಯಿಲ್ಲ ಜ್ಞಾನದಾಹಕೆ
ಸಂಖ್ಯೆಯಿಲ್ಲ ಪುಸ್ತಕವಿಧಕೆ
ಅಂಕೇಗೌಡರಿಗೆ ಸಾಟಿಯಿಲ್ಲ
ಪುಸ್ತಕ ಪ್ರೇಮಿಗೆ ಎದುರಿಲ್ಲ.
ಅಂಕೇಗೌಡರ ಪುಸ್ತಕ ಸಂಗ್ರಹ ಮತ್ತು ಅವರ ಪುಸ್ತಕ ಸಂಗ್ರಹದ ಅಮಿತದಾಹ ನೋಡಿ ನನ್ನ ಮನ ಒಡನೇ ಹೇಳಿದ್ದು ಹೀಗೆ.
“ಭೂಮಿಯೆಂದರೆ ಬಾಯ್ಬಿಡುವ ಮಂತ್ರಿ, ಶಾಸಕರೇ ತುಂಬಿರುವ ದೇಶದ ಮತ್ತು
ಮಣ್ಣನ್ನೇ ಮಾರಿದವರ ಕಂಡ ಕನ್ನಡನಾಡಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂತಹವರೂ
ಕಾಪಾಡಿಕೊಳ್ಳುವ ತನ್ನದೇ ಆದ ೬೦x೪೦ ಸೈಟನ್ನು ಮಾರಿ ಪುಸ್ತಕ ಕೊಂಡವರ ಕಂಡಿರುವಿರಾ?? ಪುಸ್ತಕ ಸಂಗ್ರಹ
ದಾಹ ಅಂಕೇಗೌಡರ ಇಂದಿನ “ಪುಸ್ತಕ ಮನೆ” ಯ ಸ್ಥಾಪನೆಗೆ ಕಾರಣ. ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ
ಎನ್ನುವುದು ನಿಜ, ಅದರಲ್ಲೂ ಸಜ್ಜನಿಕೆ ಮೆರೆವವರೂ ಇದ್ದಾರೆನ್ನುವುದು ಎಲ್ಲವೂ ನಿರಾಶಾದಾಯಕವಲ್ಲ
ಎನ್ನುವುದನ್ನು ತೋರಿಸಿ, ಸಕಾರಾತ್ಮಕ ನಿಲುವು ಜನಸಾಮಾನ್ಯರಲ್ಲಿ ಬೇರೂರುವಂತೆ ಮಾಡುತ್ತದೆ. ಅಂಕೇಗೌಡರ ಆಸಕ್ತಿ, ಜನ-ಜ್ಞಾನದಾನ ಪರ ನಿಲುವಿಗೆ
ಮಾರುಹೋದ ಸ್ಥಳೀಯ ಶಾಸಕರು ಮತ್ತು ಖೋಡೇ ಔದ್ಯಮಿಕ ಸಂಸ್ಥೆಯ ಸಹಾಯದಿಂದ ಒಂದು ಟಾಕೀಸಿನ ಛಾವಣಿಯಡಿ
ಪುಸ್ತಕಗಳ ವರ್ಗೀಕರಣ ಪ್ರಾರಂಭವಾಗಿದೆ.
ಇಲ್ಲಿಗೆ ನಮ್ಮ ಭೇಟಿ ಆಗಿದ್ದು ನಿಜಕ್ಕೂ ಒಂದು ಮರೆಯಲಾಗದ ಮತ್ತು
ಧನ್ಯ ಅನುಭವ. ಇದಕ್ಕೆ “ನಮ್ಮೊಳಗೊಬ್ಬ ’ಬಾಲು’” ಹಾಗೂ ಪ್ರಕಾಶ್ ಹೆಗ್ಗಡೆ (ಇಟ್ಟಿಗೆ ಸಿಮೆಂಟ್)
ಕಾರಣೀಭೂತರು, ನಮ್ಮ ಹೃದಯಪೂರ್ವಕ ಧನ್ಯವಾದ ಈ ಮಿತ್ರರಿಗೆ.
ಅಂಕೇಗೌಡರ ಜ್ಞಾನದೇಗುಲದ ವಿಳಾಸ:
ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ,
ಪಾಂಡವಪುರ ತಾಲುಕ್, ಮಂಡ್ಯ ಜಿಲ್ಲೆ
ದೂರವಾಣಿ: 9242822934.
ಮಾನವನಾಗಿ ಹುಟ್ಟಿ ಪ್ರಾಣಿ ಪಕ್ಷಿಗಳಂತೆ ಜೀವಿಸದೇ, ಹೆತ್ತವರ, ಹೊತ್ತನೆಲದ ಮತ್ತು ಸಮಾಜದ ಹಿತಕಾಗಿ ಏನಾದರೂ ಮಾಡಲೇಬೇಕಾಗಿರುವುದನ್ನು ಎಲ್ಲರೂ ಮನಗಾಣಬೇಕು, ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವ ಉತ್ಕಟಾಕಾಂಕ್ಷೆಯ ಅಂಕೇಗೌಡರ ವ್ಯಕ್ತಿತ್ವ ನಿಜಕ್ಕೂ ಅನುಕರಣೀಯ, ನಮನೀಯ, ಶ್ಲಾಘನೀಯ.
ಪುಸ್ತಕಾಲಯಕ್ಕೆ ಭೇಟಿ ನೀಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಮ್.ಎನ್ ವೆಂಕಟಾಚಲಯ್ಯನವರು "ಪುಸ್ತಕ ಪ್ರೇಮಿ ಅಂಕೇಗೌಡರು ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು. ಈ ಪುಸ್ತಕಾಲಯವು ಭೂಮಿಯ ಮೇಲಿನ ಸಾರಸ್ವತ ಜ್ಞಾನಲೋಕವೆನಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.
ಒಡಿಶಾದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾ.ಮೂ. ವಿ. ಗೋಪಾಲ ಗೌಡರು ಅಂಕೇಗೌಡರ ಪುಸ್ತಕಾಲಯ ಕಂಡು ನಿಬ್ಬೆರಗಾಗಿ "ಅಂಕೇಗೌಡರ ಪುಸ್ತಕ ಸಂಗ್ರಹದ ಸಾಧನೆ ಅಮೋಘವಾದುದು, ಇಂಥ ಅಮೂಲ್ಯವಾದ ಜ್ಞಾನ ಭಂಡಾರಕ್ಕೆ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಜ್ಞಾನ ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ" ಎಂದು ಹೇಳಿದ್ದಾರೆ.
ಗೌಡರ ಜ್ಞಾನದಾನದ ಈ ಅಭೂತಪೂರ್ವ ಮಾರ್ಗವನ್ನು, ಅವರ ಆಸಕ್ತಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ೫೦ ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ.
ಅಂಕೇಗೌಡರ ಜ್ಞಾನದೇಗುಲದ ವಿಳಾಸ:
ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ,
ಪಾಂಡವಪುರ ತಾಲುಕ್, ಮಂಡ್ಯ ಜಿಲ್ಲೆ
ದೂರವಾಣಿ: 9242822934.
ಮಾನವನಾಗಿ ಹುಟ್ಟಿ ಪ್ರಾಣಿ ಪಕ್ಷಿಗಳಂತೆ ಜೀವಿಸದೇ, ಹೆತ್ತವರ, ಹೊತ್ತನೆಲದ ಮತ್ತು ಸಮಾಜದ ಹಿತಕಾಗಿ ಏನಾದರೂ ಮಾಡಲೇಬೇಕಾಗಿರುವುದನ್ನು ಎಲ್ಲರೂ ಮನಗಾಣಬೇಕು, ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವ ಉತ್ಕಟಾಕಾಂಕ್ಷೆಯ ಅಂಕೇಗೌಡರ ವ್ಯಕ್ತಿತ್ವ ನಿಜಕ್ಕೂ ಅನುಕರಣೀಯ, ನಮನೀಯ, ಶ್ಲಾಘನೀಯ.
ಪುಸ್ತಕಾಲಯಕ್ಕೆ ಭೇಟಿ ನೀಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಮ್.ಎನ್ ವೆಂಕಟಾಚಲಯ್ಯನವರು "ಪುಸ್ತಕ ಪ್ರೇಮಿ ಅಂಕೇಗೌಡರು ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು. ಈ ಪುಸ್ತಕಾಲಯವು ಭೂಮಿಯ ಮೇಲಿನ ಸಾರಸ್ವತ ಜ್ಞಾನಲೋಕವೆನಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.
ಒಡಿಶಾದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾ.ಮೂ. ವಿ. ಗೋಪಾಲ ಗೌಡರು ಅಂಕೇಗೌಡರ ಪುಸ್ತಕಾಲಯ ಕಂಡು ನಿಬ್ಬೆರಗಾಗಿ "ಅಂಕೇಗೌಡರ ಪುಸ್ತಕ ಸಂಗ್ರಹದ ಸಾಧನೆ ಅಮೋಘವಾದುದು, ಇಂಥ ಅಮೂಲ್ಯವಾದ ಜ್ಞಾನ ಭಂಡಾರಕ್ಕೆ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಜ್ಞಾನ ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ" ಎಂದು ಹೇಳಿದ್ದಾರೆ.
ಗೌಡರ ಜ್ಞಾನದಾನದ ಈ ಅಭೂತಪೂರ್ವ ಮಾರ್ಗವನ್ನು, ಅವರ ಆಸಕ್ತಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ೫೦ ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ.
ಅಂಕೇಗೌಡರ ಮನದ ಎಲ್ಲಾ ಇಚ್ಛೆಗಳನ್ನೂ ಪೂರ್ಣಗೊಳಿಸಿ ನಾಡಿನಲ್ಲೇ ಏಕೆ ಇಡೀ
ದೇಶದಲ್ಲೇ ವ್ಯಕ್ತಿಯೊಬ್ಬರ ಪ್ರಯತ್ನಫಲದ ಅಪೂರ್ವ ಪುಸ್ತಕಾಲಯವಾಗಿ ಅಂಕೇಗೌಡ ಪುಸ್ತಕ
ಪ್ರತಿಷ್ಠಾನ ರೂಪುಗೊಳ್ಳಲಿ ಎಂದು ನಾವೆಲ್ಲಾ ಹಾರೈಸೋಣ ಮತ್ತು ಈ ನಿಟ್ಟಿನಲ್ಲಿ ನಮ್ಮಿಂದಾಗುವ
ಸಹಾಯಕ್ಕೆ ಮುಂದಾಗೋಣ.. ಏನೆನ್ನುವಿರಿ ಸ್ನೇಹಿತರೇ..??
Saturday, June 2, 2012
ಸ್ನೇಹಿತರೇ, ಇದೊಂದು ಹೊಸ ಪ್ರಯೋಗ, ನಿಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಇದ್ದರೆ ಮುಂದುವರೆಸುವ ಯೋಚನೆಯಿದೆ. ಇದಕ್ಕೆ "ಬಟಾಣಿ-ಚಿಕ್ಕಿ" ಎಂದು ಹೆಸರಿಸಿದ್ದೇನೆ. ಇಲ್ಲಿ ಒಂದು ಮೂಲ ವಿಷಯ ಮತ್ತು ಅದರಲ್ಲಿ ಸಣ್ಣ ಸಣ್ಣ ಸ್ವತಂತ್ರ ಭಾವ ತುಣುಕುಗಳು. ಕವನ ಶೀರ್ಷಿಕೆ ಜತೆ-ಬಟಾಣಿ ಚಿಕ್ಕಿ
ಇಲ್ಲಿ ಒಂದು ಮಾದರಿ ನಿಮ್ಮ ಮುಂದೆ
ನೋಡವಳಂದಾವ-ಬಟಾಣಿ ಚಿಕ್ಕಿ: ಕವನ ಹೆಣ್ಣಿನಂದವನ್ನು ಕುರಿತಾಗಿದ್ದು ಚೂರುಗಳಲ್ಲಿ ಸ್ವತಂತ್ರ ಭಾವ ಪ್ರಕಟಣೆ..."ಕಣ್ಣ ಹೊಳಪು", "ಖೆಡ್ಡಾ-ಗುಳಿ", ಇತ್ಯಾದಿ.....
ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಸ್ವಾಗತ.
ನೋಡವಳಂದಾವ – ಬಟಾಣಿ ಚಿಕ್ಕಿ
ಕಣ್ಣ ಹೊಳಪು
ಆ ಕಣ್ಣು ಏಕೋ ಏನೋ ಎಂಥಾ ಹೊಳಪು
ಹೃದಯ ಚುಚ್ಚಿಬಿಡುವುದೀ ಬಾಣ ಎಂಥಾ ಚೂಪು
ಖೆಡ್ಡಾ-ಗುಳಿ
ನಕ್ಕರವಳು ಮುತ್ತಿನಂಥ ಮೋಹಕ ಕೆನ್ನೆಕುಳಿ
ಉರುಳಿಸಲು ಸಾಕು ಅದುವೇ ಖೆಡ್ದದ ಗುಳಿ
ಹುಬ್ಬು-ಗತ್ತಿ
ಹುಬ್ಬು ತೀಡಿ ತಂದು ಮುಖಕೆ ಮೆರುಗು
ಕೊಲ್ಲಲೆಂದೇ ಝಳಪು ಬಂತೇ ಆ ಕತ್ತಿಗಲಗು
ಬಳುಕು-ಛಳುಕು
ನಡೆ, ಜಡೆ ಸೊಂಟ ಬಳಕು ಉಫ್..ಆ ಥಳುಕು
ಅದುರು ಛಳಿಯಲ್ಲೂ ಅದು ಬೆವರಿಳಿಸೋ ಛಳುಕು
ಕೋಗಿಲೆ-ಉಲಿಕೆ
ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ
ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ
ಜಡೆ-ಹೆಡೆ-ಕೊಡೆ
ನೀಳಗಪ್ಪು ಬೆನ್ನ ಹಿಂದೆ ಜಾರಿ ಬಿದ್ದ ಹಾವಿನಂಥ ಜಡೆ
ಕೇಶರಾಶಿ ಹರಡಿಕೊಂಡ್ರೆ ಆದೀತು ಅದುವೇ ಕೊಡೆ
ಕೆಂಪು ನೀರೆ
ನಾಚಿ ನೀರು ಕೆನ್ನೆಗೆಂಪು ನೆಲವ ಕೆರೆವ ಬೆರಳು
ನನಗಿದು ನಿತ್ಯಸತ್ಯ ನೀನಾಗಬೇಡ ಬೆಪ್ಪೆ ಮರಳು
Subscribe to:
Posts (Atom)



