Saturday, April 2, 2011

ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ

ಭಾರತಕ್ಕೆ ವಿಶ್ವಕಪ್ ಕ್ರಿಕೆಟ್ ಕಿರೀಟ

ಕಪಿಲವಾಹಿನಿಯ ರಭಸ ಅಂದು
ವಿಶ್ವ ಕ್ರಿಕೆಟ್ ಮಕುಟವ ತಂದು
ಇಪ್ಪತ್ತೆಂಟು ವರ್ಷದ ನಂತರ
ದೋಣಿಯ ನಾಯಕ ನಾವಿಕನಾಗಿ
ಭರತದ ಹರುಷ ಮರುಮಕುಟವು ಇಂದು

ಜ಼ಹೀರ ಮುನಾಫರ ಪ್ರಾರಂಭಿಕ ಬಿಗಿತ
ಕರಾರುವಾಕ್ ಭಜ್ಜಿ ಯುವಿ ಎಸೆತ
ಮಾಡಲು ಅಧಿಕ ಲಂಕನ್ನರ ತುಡಿತ
ತಡೆದರು ಫೀಲ್ಡರುಗಳು ಪ್ರತಿ ಹೊಡೆತ
ಏಕಮಾತ್ರ ಜಯವರ್ಧನೆ ಸೆಂಚುರಿ ಜಿಗಿತ

ಇನ್ನೂರ ಎಪ್ಪತ್ತೈದರ ಗುರಿ ಸವಾಲು
ಸೆಹ್ವಾಗ್ ಸಚಿನ್ ಆಗದೆ ರನ್ ಮಾಡಲು
ವಿರಾಟ ತನ್ನಾಟ ಗಂಭೀರನ ಕಮಾಲು
ಸಾಗತೊಡಗಿತು ದೋಣಿ ತೀರ ಸೇರಲು
ಮೆಲ್ಲ ಮೆಲ್ಲನೆ ತನ್ನಂತಿಮ ಗುರಿ ತಲುಪಲು

ವಿರಾಟನಾಟದ ನಂತರ ನಾಯಕನಾಗಮನ
ಶತಕದ ಬಳಿ ಎಡವಿತು ಗಂಭೀರನ ತನನ
ತನ್ನೆಲ್ಲ ಶಕ್ತಿಯ ಮೆರೆದಿದ್ದ ಯುವಿಯಾಗಮನ
ಹೆಜ್ಜೆ ಹೆಜ್ಜೆಗೂ ಪ್ರತಿ ರನ್ನಿಗೂ ಎಂಥ ಸಂಚಲನ
ಸಂಗಕಾರ ತನ್ನವರೊಂದಿಗೆ ನಡೆಸಲು ಚಿಂತನ

೪೬ ರಲ್ಲಿ ಮಾಲಿಂಗ ಕೊಟ್ಟದ್ದು ಕೇವಲ ೩ ರನ್ನು
ಮುರಳಿಗಲ್ಲ ೪೭ ಸಿಕ್ತು ನಮ್ಮವರಿಗೆ ಕುಲಶೇಖರ ಬನ್ನು
ಯುವಿ ಧೋನಿ ಜಡಿದರು ಒಟ್ಟು ೧೧ ಅಮೂಲ್ಯ ರನ್ನು
ಮಾಲಿಂಗನನ್ನೂ ಬಿಡಲಿಲ್ಲ ೪೮ ರಲ್ಲಿ ಮತ್ತೆ ೧೧ ರನ್ನು
ಬೇಕಿತ್ತು ೫ ಧೋನಿ ಬಾರಿಸಿದ ಸಿಕ್ಸು ಗಳಿಸಿತು ವಿಶ್ವಕಪ್ಪನ್ನು

Monday, March 28, 2011

ಚುನಾವಣೆ


ಚುನಾವಣೆ ಬಂತಂದ್ರೆ ಚನ್ಪಟ್ಣ ಜನ ಖುಶೋ ಖುಶ್ಶು

ಮಾರ ಬೀರ ಎಂಕ ಮಂಕ ಬಾರಲ್ಕುಂತ್ರೆ ನೀರೋ ನೀರು

ಅಕ್ಕಮ್ಮ, ರುಕ್ಕಮ್ಮ, ಶಾರದಕ್ಕ ಸುಬ್ಬಿರ ಬೀರೋ ತುಂಬಿ ಸ್ಯಾಲೆ

ಕಂಠಿ, ಬಂಟಿ, ನಾಣಿ, ಶಾರಿ ಓಗ್ತಾರೆ ತೆಗದ್ರೆ ಮೇಷ್ಟ್ರೇ ಬರದ ಶಾಲೆ



ದುಡ್ಡು ಬೇಕು ಮಾಡ್ಕೋ ಬೇಕು ಹ್ಯಾಂಗಾರಾ ಆಗ್ಲಿ

ದುಡ್ಕೋ ಬೇಕು ಸುಲ್ಕೋ ಬೇಕು ಹ್ಯಾಂಗಾರಾ ಆಗ್ಲಿ

ಮ್ಯಾಲ್ಕುಂತವ್ರಿಗೆ ಬ್ಯಾರೆ ಕಡೆ ಗೆಲ್ಬೇಕು ಹ್ಯಾಂಗಾರಾ ಆಗ್ಲಿ

ಎಲ್ಲಾರೂ ಒಂದೇ !! ನ್ಯಾಯ ನೀತಿ ಹಂಗಿರ್ಲಿ ಹ್ಯಾಂಗಾರಾ ಆಗ್ಲಿ



ಜನ ಬೋ ಮುಗ್ದರು ಆರಿಸ್ತಾರೆ ನಾಯ್ಕ ನಮ್ಮನ್ನೆಲ್ಲ ಕಾಯ್ತಾನೆ ಅಂತ

ಗೆದ್ ಮ್ಯಾಲೆ ಬರ್ತಾನೆ ನಮ್ ಸಮಸ್ಯೇನಾ ಕಿವಿ ಕೊಟ್ ಕೇಳ್ತಾನೆ ಅಂತ

ಎಲ್ಲಾ ಖುಶಿ ಪಡ್ತಾರೆ ಬಂದ ನಮ್ ನಾಯ್ಕ ನಮ್ ಅಹ್ವಾಲು ಕೇಳಾಕೆ ಅಂತ

ಜಗ್ಲಿ ಅಜ್ಜ ನಗ್ತಾನೆ ಮೀಸೇಲೇ..ಗೊತ್ತವಂಗೆ ನಾಯ್ಕ ಬಂದಿದ್ದು ಓಟ್ ಕೇಳಾಕಂತ



ನಾಯಕನ್ನ ಗೆಲ್ಸಿದ್ರು ಓದ್ದಪಾ ಕಿತ್ತಾಡ್ಕೊಂಡು ತಮ್ತಮ್ಮಲ್ಲೇ ಜನ

ಮರ್ತೇ ಬಿಡ್ತಾರೆ ಕಿತ್ತಾಡಿದ್ದನ್ನ, ಒಂದಾಗ್ತಾರೆ ನಡೆದೈತೆ ಇಂಗೇ ಜೀವನ

ಕಿತ್ತಾಡಿದ್ದ ಮರೆಯೋಕೆ ಬಿಡೊಲ್ರು ಈ ನಾಯಕ್ರು ಪಾರ್ಟಿ ಬದ್ಲಾಯಿಸೋದು

ತರ್ತಾರೆ ಬೈ ಎಲಕ್ಸನ್ನು ಈವಾಗ ಅಳ್ಳಿಲಿ ಶಾಸ್ವತ ಒಬ್ರನ್ನೊಬ್ರು ಗುರಾಯ್ಸೋದು


Friday, March 18, 2011

ಕೆಲವು ಛಾಯಾ ಚಿತ್ರಗಳಿಗೆ - ಭಾವನಾವೋಂಕಾ ರಂಗ್ ಅಕ್ಷರ್ ಕೆ ಸಂಗ್

Foto: Digwas Hegde

फ़ासला

खामॊशियॊं की गेहराइयॊं में
चुबन सी है बे दर्द तन्हाइयॊं में
अकेले ही चलना है, पतझड के साये
फ़ासले तो हॊते हैं इन दूरियॊं में

में कैसे कह्दूं के पहूंचूंगा तुम तक
चला हूं और चलना है उन मंज़िलॊं तक
पता तो है लेकिन रास्ते कठिन है
हौंसलॆ बुलंद है, सब सतायॆंगे कब तक

ಫಾಸ್ಲಾ

ಖಾಮೋಶಿಯೋಂ ಕೀ ಗೆಹರಾಯಿಯೋಂ ಮೆ
ಚುಬನ್ ಸೀ ಹೈ ಬೇದರ್ದ್ ತನ್ಹಾಯೀಯೋಂ ಮೆ
ಅಕೇಲೇ ಹೀ ಚಲ್ನಾ ಹೈ, ಪತ್ ಝಡ್ ಕೆ ಸಾಯೆ
ಫಾಸ್ಲೆ ತೋ ಹೋತೋ ಹೈಂ ಇನ್ ದೂರಿಯೋಂ ಮೆ

ಮೈಂ ಕೈಸೆ ಕಹ್ ದೂಂ ಕೆ ಪಹೂಂಚೂಂಗಾ ತುಮ್ ತಕ್
ಚಲಾ ಹೂಂ ಔರ್ ಚಲ್ನಾ ಹೈ ಉನ್ ಮಂಜಿಲೋಂ ತಕ್
ಪತಾ ತೊ ಹೈ ಲೆಕಿನ್ ರಾಸ್ತೆ ಕಠಿನ್ ಹೈ
ಹೌಂಸಲೇ ಬುಲಂದ್ ಹೈಂ, ಸಬ್ ಸತಾಯೇಂಗೆ ಕಬ್ ತಕ್


Foto: Chitra

सेतु


सॆतुओं के बंधे नहर के किनारे
चलेंगे हम इन सॆतुवॊंके सहारे
आपस के बंधन हैं दॊ दिल जुडेंगे
न काटो, न भेदो न तोडो यह बंधन
इधर से उधर न जासकेंगे बेचारे

 
नहर तो नहर है बहता यह पानी
पानी ही जीवन है और है निरंतर कहानी
पेढ, पौदे, जलच्रर, आदमी और जानवर
टिके हैं बस इस पानी के बल पर
न रॊको न टोको न कलुशित करो तुम
रहने दो सेतु, यह नहर और बहने दो पानी

ಸೇತು

ಸೇತುವೋಂಕೆ ಬಂಧೆ ನಹರ್ ಕೆ ಕಿನಾರೆ
ಚಲೇಂಗೆ ಹಮ್ ಇನ್ ಸೇತುವೋಂಕೆ ಸಹಾರೆ
ಆಪಸ್ ಕೆ ಬಂಧನ್ ಹೈಂ ದೋ ದಿಲ್ ಜುಡೇಂಗೆ
ನ ಕಾಟೊ, ನ ಭೇದೋ, ನ ತೋಡೋ ಎಹ್ ಬಂಧನ್
ಇಧರ್ ಸೆ ಉಧರ್ ನ ಜಾ ಸಕೇಂಗೆ ಬೆಚಾರೆ

ನಹರ್ ತೊ ನಹರ್ ಹೈಂ ಬಹತಾ ಎಹ್ ಪಾನೀ
ಪಾನೀ ಹೀ ಜೀವನ್ ಹೈ ಔರ್ ಹೈ ನಿರಂತರ್ ಕಹಾನೀ
ಪೇಡ್, ಪೌಧೇ, ಜಲಚರ್, ಆದಮೀ ಔರ್ ಜಾನವರ್
ಟಿಕೆ ಹೈಂ ಬಸ್ ಇಸ್ ಪಾನೀ ಕೆ ಪಲ್ ಬರ್
ನ ರೋಕೋ, ನ ಟೋಕೋ, ನ ಕಲುಶಿತ್ ಕರೋ ತುಮ್
ರಹನೆ ದೋ ಸೇತು, ಎಹ್ ನೆಹರ್ ಔರ್ ಬೆಹನೇ ದೋ ಪಾನೀ


Foto: Prakash Hegde (ಇಟ್ಟಿಗೆ ಸಿಮೆಂಟ್)

कलि

शर्माति कलियॊं को तो देखो
अंधेरों में भी चहरे खिलेंगे
सूरज की किरणॊं को तो आना ही हॊगा
मुस्काती कलियां कैसे हंस पडेंगे
मुस्काते होंट और चम-चमाती लाली
किरण के छूने से खिली नज़ूक सी कलियों

ಕಲಿ
ಶರ್ಮಾತೀ ಕಲಿಯೋಂಕೊ ತೊ ದೇಖೋ
ಅಂಧೇರೋಂ ಮೆಂ ಭೀ ಚೆಹರೇ ಖಿಲೇಂಗೆ
ಸೂರಜ್ ಕೀ ಕಿರಣೋಂಕೋ ತೋ ಆನಾ ಹೀ ಹೋಗಾ
ಮುಸ್ಕಾತೀ ಕಲಿಯಾಂ ಕೈಸೆ ಹಂಸ್ ಪಡೇಂಗೆ
ಮುಸ್ಕಾತೆ ಹೋಂಟ್ ಔರ್ ಚಮ್-ಚಮಾತೀ ಲಾಲೀ
ಕಿರಣ್ ಕೆ ಛೂನೇ ಸೆ ಖಿಲೀ ನಾಜೂಕ್ ಸೀ ಕಲಿಯಾಂ







Saturday, March 12, 2011

ಅಂಜಿದೊಡೆಂತಯ್ಯಾ??

ಅಂಜಿದೊಡೆಂತಯ್ಯಾ??

ನೆಲನಡುಗಿತು ಜಲದ ಒಳಗೆ
ಜಲವು ಸೆಳೆಯಿತು ತನ್ನ ಬಲೆಗೆ
ಮನುಜನೊಂದು ಹುಲ್ಲುಕಡ್ಡಿ
ತರಗೆಲೆಯುದುರಿ ಚದುರಿದಂತೆ
ಭಸ್ಮ ಚಾಚಿ ಅನಿಲಾಗ್ನಿ ಕೆನ್ನಾಲಗೆ

ಎಲ್ಲೋ ಅದುರಿತು ಸಾಗರದೊಳಗೆ
ಭೂ ಪದರಗಳ ತಿಕ್ಕಾಟ ಘಳಿಗೆ
ತಲದ ತಳಮಳ ಅಲೆಯ ಆರ್ಭಟ
ಜಲರಾಶಿಯೇ ಕದಲಿತು ಎಲ್ಲ ಪಲ್ಲಟ
ನಿಸರ್ಗಕಿದು ಸಹಜ ದಿನದ ನಡಿಗೆ

ಭೂಗರ್ಭವೆಲ್ಲಾ ಘನದ್ರವದ ದಲ
ದ್ರವ ಮೇಲೆಬಂದಂತೆ ಘನ ನೆಲ
ಒಳಗುದಿಗೆ ಕೊತಕೊತವು ಸಹಜ
ಘನ ಅದರಂತೆ ನಡುಗಿದರೆ ಮನುಜ
ಪ್ರಕೃತಿಕೇಗೆ ಹೇಳು ನಿನ ಮೇಲೆ ಛಲ?

ಅಣ್ಣನವರ ವಚನ ಎಷ್ಟು ಸಮಂಜಸ
ಬೆಟ್ಟದ ಮೇಲೊಂದ ಮನೆಯಮಾಡಿ!!?
ನಿಸರ್ಗವೇ ಹೊರಗಿಟ್ಟ ದ್ವೀಪಗಳಿವು
ಜಪಾನ್, ಇಂಡೋನೇಶಿಯಾ ಹವಾಯಿ
ಯಾಕಿಲ್ಲೇ ಹೆಚ್ಚು ನಿಸರ್ಗದ ಕವಾಯಿ?
ಅಲ್ಲಿದ್ದ ಮೇಲೆ ಅನುಭವಿಸಬೇಕು ಎಲ್ಲಾ
ಮೃಗಗಳಿಗಂಜಿದೊಡೆಂತಯ್ಯಾ???




Monday, March 7, 2011

ಕೋರಿಕೆ ಸಾವು ಅಥವಾ ಇಚ್ಛಾಮರಣ (ಯೂಥನೇಸಿಯಾ)

ಮಾರ್ಚ್ ೭ ರಂದು ಸರ್ವೋಚ್ಛ ನ್ಯಾಯಾಲಯದ ಮಹತ್ತರ ತೀರ್ಪು: ಅರುಣಾ ಶಾನ್ ಭಾಗ್ ರವರ ದಯಾಮರಣದ ಕೋರಿಕೆ ಅರ್ಜಿ ತಿರಸ್ಕೃತ.
ಈ ವಿಷಯ ಹಲವರ ಮನದಲ್ಲಿ ವಿಷಯಗಳ ಗೊಂದಲ ಮೂಡಿಸಿರಬೇಕು, ಅದರಲ್ಲೂ ಜನಸಾಮಾನ್ಯನಿಗೆ ಇದು ಏನು..??!! ಎಂಬ ಸೋಜಿಗ.
ಅರುಣಾ ಶಾನ್ ಭಾಗ್ ಸುಮಾರು ೩೫ ವರ್ಷಗಳಿಂದ ಬದುಕಿಯೂ ಸತ್ತಂತಿರುವ ಸ್ಥಿತಿಯಲ್ಲಿ ಮುಂಬೈನ ಕೆ,ಇ.ಎಮ್. ಆಸ್ಪತ್ರೆಯಲ್ಲಿ ೬೪ ವರ್ಷ ವಯಸ್ಸಿನ ಅರುಣಾ ನರಳುತ್ತಾ ಹಾಸಿಗೆಯಲ್ಲಿ ಬಿದ್ದಿರುವ ಸ್ಥಿತಿ ಎಂತಹವರಿಗೂ ಅಯ್ಯೋ ಅನಿಸದಿರುವುದು ಅಸಾಧ್ಯ. ಸುಮಾರು ೨೯-೩೦ ವಯಸ್ಸಿನ ದಾಯಿ (ನರ್ಸ್) ಆಗಿ ಕೆಲಸ ಮಾಡುತ್ತಿದ್ದ ರೋಗಿಗಗಳ ಸೇವೆಯಲ್ಲಿ ನಿರತಳಾಗಿದ್ದ ಕರ್ನಾಟಕ ಉತ್ತರಕನ್ನಡ ಜಿಲ್ಲೆಯ ಈ ಹೆಣ್ಣುಮಗಳನ್ನು ಕಾಮ ಪೀಪಾಸು ವಾರ್ಡ್ ಬಾಯ್ ಒಬ್ಬ ಅತ್ಯಾಚಾರವೆಸಗುವ ಪೈಶಾಚಿಕ ಕೃತ್ಯದಲ್ಲಿ ಆಕೆಯ ಕೊರಳನ್ನು ನಾಯಿ ಸರಪಳಿಯಿಂದ ಬಿಗಿದ ಕಾರಣ ಆಕೆ ಮಿದುಳಿಂದ ಸಂವೇದನಾ ಸಂಪರ್ಕ ಕಳೆದುಕೊಂಡುದಲ್ಲದೇ ಮಾತೂ ಹೊರಡದಾಯಿತು. ಆಕೆಯ ಮೇಲೆ ಅತ್ಯಾಚಾರ ನಡೆದ ಮಾನಸಿಕ ಆಘಾತ ಆಕೆಯನ್ನು ಮಾತನಾಡದಂತೆ ತಡೆದಿರಬಹುದು ಎಂದು ತಿಳಿಯಲಾಗಿತ್ತು..ಆದರೆ ಅದು ಮಿದುಳಿನಿಂದ ಯಾವುದೇ ಪ್ರತಿಸ್ಪಂದನಾ ಕ್ರಿಯೆಗಳು ನಡೆಯದಾದಾಗ ಇದು ಕೊರಳ ಬಿಗಿತದಿಂದ ಮಿದುಳಿಗೆ ಆಮ್ಲಕನಕ ದೊರೆಯದೇ ಆದ ವೈದ್ಯಕೀಯ ಸಮಸ್ಯೆಯೆಂದು ತಿಳಿಯಿತು. ಡಾಕ್ಟರೊಬ್ಬರನ್ನು ಮದುವೆಯಾಗುವ ಸಂಭ್ರಮದಲ್ಲಿದ್ದ ಹೆಣ್ಣು ನಿರ್ಜೀವಕೊರಡಿನಂತೆ ೩೫ ವರ್ಷಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಬಿದ್ದಿದೆ. ಈ ಹೆಣ್ಣಿನ ಅನಿರ್ವಚನೀಯ ವೇದನೆಯನ್ನು ಮನಗಂಡ ಅರುಣಾಳ ಸ್ನೇಹಿತೆ ಮತ್ತು ಪತ್ರಕರ್ತೆ ಪಿಂಕಿ ವಿನಾನಿ ಅರುಣಾಳ ದಯಾಮರಣ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದಳು. ಕಾನೂನಿನ ತೊಡಕುಗಳು ಅಥವಾ ಪೂರ್ಣ ವಿಶ್ಲೇಷಿತ ಕಾನೂನು ನಿಯಮಾವಳಿಗಳ ಅಭಾವದಿಂದ ಮತ್ತು ಇಂತಹ ತೀರ್ಪಿನ ದುರುಪಯೋಗಗಳ ಸಾಧ್ಯತೆಯನ್ನು ತಡೆಯಲು ಈ ಮನವಿಯನ್ನು ತಿರಸ್ಕರಿಸಲಾಯಿತು.
ದಯಾಮರಣ ಈಗ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಚಲನೆಯಲ್ಲಿದೆ. ದಯಾಮರಣ, ಕೋರಿಕೆ ಸಾವು ಅಥವಾ ಯೂಥನೇಸಿಯಾ ಎಲ್ಲಾ ಇದೇ ಪ್ರಕಾರದ ಅಪ್ರಾಕೃತಿಕ ಮರಣಕ್ಕೆ ಹೆಸರು. ಅಪಘಾತಗಳು, ಆಘಾತಗಳು ಮುಂತಾದುವು ಮನುಷ್ಯನ ಬಲು ವೇದನೆಯ ಮಿದುಳು ನಿಷ್ಕ್ರಿಯತೆಯಿಂದ ಕೂಡಿದ ಹಲವು ಅಂಗವೈಕಲ್ಯ ಅಥವಾ ನಿರುಪಯೋಗಿಯಾಗುವ ಸ್ಥಿತಿಯನ್ನು ಅನಾರೋಗ್ಯದ ಅಂತಿಮ ಸ್ಥಿತಿ (terminal illess) ಎನ್ನುತ್ತಾರೆ. ಇಂತಹ ಅವಸ್ಥೆಯಲ್ಲಿ ರೋಗಿಗೆ ಇಹದ ಯಾವುದೇ ಸ್ಪಂದನೆಯಿರುವುದಿಲ್ಲ ಹಲವರಿಗೆ ಯಾರನ್ನೂ ಗುರುತಿಸುವ ಶಕ್ತಿಯೂ ಇರುವುದಿಲ್ಲ, ಉಸಿರಾಟ ಆಮ್ಲಜನಕದ ಬಾಹ್ಯಪೂರೈಕೆಯಿಂದ ನಡೆಯುತ್ತದೆ. ಹಲವಾರು ಅಂಗಗಳು ಸರಿಯಾಗಿ ಕೆಲಸ ಮಾಡದೇ ಅದಮ್ಯ ವೇದನೆ ಅನುಭವಿಸುತ್ತಾರೆಯಾದರೂ ಅದನ್ನು ಹೇಳಿಕೊಳ್ಳುವ ಸ್ಥಿಯಲ್ಲಿರುವುದಿಲ್ಲ. ಅವರ ಹಿಂಸೆಯನ್ನು ನೋಡಲಾಗದೇ, ಅವರಿಗೆ ಮತ್ತೆ ಆರೋಗ್ಯಪ್ರದಾನ ಮಾಡಬಲ್ಲ ಎಲ್ಲಾ ಸಾಧ್ಯತೆಗಳೂ ಶೂನ್ಯವಾದಾಗ ಅವರಿಗೆ ಶಾಂತ ಮರಣ ಮತ್ತು ಹಿಂಸೆಯಿಂದ ಬಿಡುಗಡೆ ನೀಡಲು ದಯಾಮರಣ ಎಂಬ ಸಿಧ್ಹಾಂತ ಹುಟ್ಟಿಕೊಂಡಿತು. ಈ ಎಲ್ಲ ವಿಷಯ ಗಮನಿಸಿದರೆ ನನಗೆ ಭೀಷ್ಮ ಪಿತಾಮಹರ ಇಚ್ಛಾಮರಣದ ಪೌರಾಣಿಕ ಘಟನೆ ನೆನಪಾಗುತ್ತದೆ.

ನಿಜವಾಗಿಯೂ ವೇದನೆಯಿಂದ ಯಾತನೆಯಿಂದ ಒಂದು ಜೀವಕ್ಕೆ ಮುಕ್ತಿ ನೀಡುವುದಾದರೆ ದಯಾಮರಣ ಯಾಕಾಗಬಾರದು....?

ಏನಂತೀರಿ...?

ಯೂಥನೇಸಿಯಾ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ......
http://www.euthanasia.com/index.html


Thursday, March 3, 2011

ನಂಗೊತ್ತಿಲ್ಲ ಮಗು

(ಚಿತ್ರ ಕೃಪೆ: ಅಂತರ್ಜಾಲ)
ನಂಗೊತ್ತಿಲ್ಲ ಮಗು

ಅಪ್ಪಾ ..
ಏನು ಪುಟ್ಟಾ?
ಕನಸಿನ ಕನ್ಯೆ ಅಂದ್ರೆ ಏನಪ್ಪಾ..?
ಅಂದ್ರೆ ,.. ಡ್ರೀಮ್ ಗರ್ಲ್ ಅಂತಾ
ಹಂಗಂತ ನಮ್ಮ ಎಮ್ಮೆ ಎಲ್ಲೇ ಒಬ್ರು ಇಲ್ಲಿಗೆ
ಬಂದಿದ್ರಲ್ಲಾ ಆಂಟಿ ಒಬ್ರು ಅವರನ್ನ ಕೇಳಿದ್ದಕ್ಕೆ
ಅವ್ರು ಮಂಕಾಗಿ ಮೇಲೆ ಕೆಳಗೆ ನೋಡಿದ್ರು...??!!
ಅವ್ರಿಗೆ ಕನ್ನಡ ಬರೊಲ್ಲ ಅಲ್ವಾ ಅದಕ್ಕೆ..
ಮತ್ತೆ ಅವರನ್ನ  ಕನ್ನಡಿಗರು ಯಾಕೆ ಆಯ್ಕೆ ಮಾಡಿದ್ದು ಅಪ್ಪಾ
ನಮ್ಮಲ್ಲಿ ಅಂತಹ ಕನ್ನಡಿಗರೇ ಇಲ್ವಾ...?
ನಂಗೊತ್ತಿಲ್ಲ ಮಗು.

ಅಪ್ಪಾ...ಇನ್ನೊಂದು ಸಂದೇಹ...!!
ಏನಪ್ಪ ಅದು ನಿನ್ನ  ಡೌಟು?
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆಗೆ
ನಾರಾಯಣ ಮೂರ್ತಿಯವರನ್ನ ಆಹ್ವಾನಿಸಿದ್ದಾರಂತೆ?
ಹೌದು ಕಣೋ ಅವರು ನಮ್ಮ ಬೆಂಗಳೂರನ್ನ ಭೂಪಟದಲ್ಲಿ ಎದ್ದು ಕಾಣೋಹಾಗೆ ಮಾಡಿದ ಮಹಾನ್ ಉದ್ಯಮಿ ಅಲ್ಲವಾ ಅದಕ್ಕೆ..
ಮತ್ತೆ ..ಕನ್ನಡ ಸಮ್ಮೇಳನಕ್ಕೆ ಕನ್ನಡ ಸಾಹಿತಿ ಕಲಾವಿದರು
ಸಿಗಲಿಲ್ಲವಾ..? ಮತ್ತೆ ಹೇಮಾಮಾಲಿನಿ ಆಂಟಿಗೇ ಹೇಳ್ಬಹುದಿತ್ತು
ನಂಗೊತ್ತಿಲ್ಲ ಮಗು

Monday, February 28, 2011

ಆಯೆಗಾ ಸವೇರಾ

ಚಿತ್ರ: ಪ್ರಕಾಶ್ ಹೆಗ್ಗಡೆ

ಮೈಂ ಬೈಠೀ ಕಿನಾರೆ ಝೀಲ್ ಕೆ
ಕಿ ಖಾಮೋಶೀ ಭೀ ಚುಭ್ ರಹೀ ಥೀ
ಮೇರೀ ಬೇಚೈನಿ ಕೆ ಕಂಪನ್
ಹಲ್ಕೆ ಸೆ ತರಂಗ್ ಶಾಂತ್ ಸತಹ್ ಪರ್
ಪರ್ ಉಸ್ ಪರ್ ಕ್ಯೋಂ ಮೆರಾ ಗುಸ್ಸಾ?
ಮೇರಾ ತಡ್ ಪನ್ ಮೇರೀ ಬೇಚೈನೀ ಕೋ
ನಹೀಂ ಹೋರಹಾ ಸಹನ್
ಸರ್ ಪರ್ ಕಾ ಸೂರಜ್ ಸುನಹ್ರಾ ಹುವಾ
ಢಲ್ ಸುನಹ್ರೀ ಶಾಮ್ ಛಾಯೆಗಾ ಅಂಧೇರಾ
ವಾದಾ ತೊ ಕಿಯಾ ಹೈ,,ಆಯೆಗಾ ಪಿಯಾ
ಭಲೇ ಹೀ ರಾತ್ ಢಲ್ ಜಾಯ್
ಔರ್ ರ್ಕ್ಯೋಂ ನ ಹೋ...
ಆಯೆಗಾ ಸವೇರಾ