Wednesday, July 14, 2010

ಎರಡುಸಾಲು-ನ್ಯಾನೋಗಳು

(ಚಿತ್ರ: ಅಂತರ್ಜಾಲ ಕೃಪೆ)

ಸ್ನೇಹಿತರೇ, ನಿಮ್ಮೆಲ್ಲರ ಅಭಿಮಾನ, ಸ್ನೇಹ ಮತ್ತು ವಿಶ್ವಾಸಕ್ಕೆ ಮಾರುಹೋಗಿರುವ "ಜಲನಯನ" ತನ್ನ ಬ್ಲಾಗ್ ಪೋಸ್ಟ್ ಗಳ ಶತಕವನ್ನು ಈ ಲೇಖನದ (ಹೊಸ ಪ್ರಯೋಗ) ಮೂಲಕ ಪೂರೈಸುತ್ತಿದೆ.ನೀಳಗವನ, ಇಡಿಗವನ, ಮಿಡಿಗವನ, ಮಿನಿಗವನ, ಚುಟುಕು ಇವೆಲ್ಲದರಂತೆ ...ಎರಡುಸಾಲು-ನ್ಯಾನೋಗಳು ಎಂಬ ಹೊಸ ಪ್ರಯೋಗ (ಗೊತ್ತಿಲ್ಲ ಹೊಸದೋ ಅಥವಾ ನನಗೆ ಹೊಸದೋ ಎಂದು...ಹಹಹ). ಇದರಲ್ಲಿ ಪ್ರತಿಯೊಂದು ನ್ಯಾನೋಗವನದ ಎರಡು ಸಾಲು ಸ್ವತಂತ್ರವಾಗಿದ್ದರೂ ಪೂರ್ಣ ಅರ್ಥ ನೀಡುತ್ತವೆ ಎನ್ನುವುದು ನನ್ನ ಅನಿಸಿಕೆ....ಪ್ರೋತ್ಸಾಹ ..ಮುಂದುವರೆಯುತ್ತದೆಂದು ಆಶಿಸುತ್ತೇನೆ.


ನಿಮ್ಮ ಮುಕ್ತ..(ಚನ್ನಾಗಿಲ್ಲ ಎಂದು ಮುಖದ ಮೇಲೆಯೇ ಹೇಳಿದರೂ ಒಳ್ಳೆಯದೇ...ಯಾಕಂದ್ರೆ ಮತ್ತೆ ಮುಖ ಭಂಗ ಆಗೋ ಸಾಧ್ಯತೆಗಳು ಕಡಿಮೆ ಅಲ್ಲವೇ...?)


ನಿಮ್ಮ - ಜಲನಯನ
ಎರಡುಸಾಲು-ನ್ಯಾನೋಗಳು


ನೋಡವಳಂದಾವ


ಆ ಕಣ್ಣು ಏಕೋ ಏನೋ ಎಂಥಾ ಹೊಳಪು

ಹೃದಯ ಚುಚ್ಚಿಬಿಡುವುದೀ ಬಾಣ ಎಂಥಾ ಚೂಪು
ನಕ್ಕರವಳು ಮುತ್ತಿನಂಥ ಮೋಹಕ ಕೆನ್ನೆಕುಳಿ

ಉರುಳಿಸಲು ಸಾಕು ಅದುವೇ ಖೆಡ್ದದ ಗುಳಿ
ಹುಬ್ಬು ತೀಡಿ ತಂದು ಮುಖಕೆ ಮೆರುಗು

ಕೊಲ್ಲಲೆಂದೇ ಝಳಪು ಬಂತೇ ಆ ಕತ್ತಿಗಲಗು
ನಡೆ, ಜಡೆ ಸೊಂಟ ಬಳಕು ಉಫ್..ಆ ಥಳುಕು

ಅದುರು ಛಳಿಯಲ್ಲೂ ಅದು ಬೆವರಿಳಿಸೋ ಛಳುಕು
ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ

ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ
ನೀಳಗಪ್ಪು ಬೆನ್ನ ಹಿಂದೆ ಜಾರಿ ಬಿದ್ದ ಹಾವಿನಂಥ ಜಡೆ
ಕೇಶರಾಶಿ ಹರಡಿಕೊಂಡ್ರೆ ಆದೀತು ಅದುವೇ ಕೊಡೆ
ನಾಚಿ ನೀರು ಕೆನ್ನೆಗೆಂಪು ನೆಲವ ಕೆರೆವ ಬೆರಳು

ನನಗಿದು ನಿತ್ಯಸತ್ಯ ನೀನಾಗಬೇಡ ಬೆಪ್ಪೆ ಮರಳು

83 comments:

 1. ಶತಕದ ಸಂಭ್ರಮಕ್ಕೆ ಅಭಿನಂದನೆಗಳು
  ನಿಮ್ಮಿಂದ ಇನೂ ಹೆಚ್ಚಿನ ಕವನ, ಲೇಖನಗಳು ಬರುವಂತಾಗಲಿ
  ನ್ಯಾನೋಗವನಗಳು ಸೊಗಸಾಗಿವೆ

  ReplyDelete
 2. ಶುಭಾಶಯಗಳು...ಹೋ... ಸರ್ ಮೊನ್ನೆ ಪಾರ್ಟಿ ಕೊಡಿಸಿದ್ದು ಇದ್ದಕೇನಾ...!!!!! ಅಷ್ಟು ಸಣ್ಣ ಪಾರ್ಟಿ ನೆಡೆಯೋಲ್ಲ.... ದೊಡ್ಡದಾಗಿ ಪಾರ್ಟಿ ತಯಾರಿ ಮಾಡಿ ನಮ್ಮನ್ನ ಕರಿಬೇಕು.......

  ನ್ಯಾನೋ ಕವನನು ಬರಿಬಹುದು... ? ಈಗ ಗೊತ್ತಾಯ್ತು......ಚೆನ್ನಾಗಿವೆ ಹೀಗೆ ಮುಂದುವರಿಯಲಿ ನಿಮ್ಮ ಪಯಣ....ಬ್ಲಾಗಾಯಣ...

  ReplyDelete
 3. ಶತಕ ವೀರನಿಗೆ ಅಭಿನಂದನೆಗಳು!
  ಚೆಂದದ ನ್ಯಾನೋ ಕವನಗಳು.
  ಹರಿಯಲಿ ಅನವರತ ಹೀಗೆ ತಮ್ಮ ಬ್ಲಾಗಾಯಣ!

  ReplyDelete
 4. ಸಾಗರದಾಚೆಯಿಂದ ಬಂದ ಮೊದಲ ಕರತಾಡನಕ್ಕೆ ನನ್ನ ನಮನ,,,ಗುರೂಜಿ...ಧನ್ಯವಾದ....ನಿಮ್ಮಭಿಮಾನಕ್ಕೆ

  ReplyDelete
 5. ಹಹಹ....ಏನಿದು..ಎಲ್ಲಿಯದೆಲ್ಲಿಗೆ ಬಂಧವಯ್ಯ ...? ಅಲ್ಲ ಬಂಧವಮ್ಮ,,,, ಟ್ರೀಟ್ ಏನಿಲ್ಲ ಹಾಗೇ ಸುಮ್ಮನೆ...ಮತ್ತೆ..ನಿಮ್ಮ ಅಭಿಮಾನದ ಮುಂದೆ ಶಿರಬಾಗುವೆವು ನಾವು...ಅದರಲ್ಲೂ ನನ್ನನ್ನು ಮೈದಾನಕ್ಕೆ ತಂದುಬಿಟ್ಟಿದ್ದು ನೀವು ತಾನೇ..? ಧನ್ಯವಾದಗಳು ನಿಮಗೂ ಮತ್ತು ಮಯೇಸಣ್ಣಂಗೂ....ಹಹಹ..

  ReplyDelete
 6. ಸೀತಾರಾಂ..ನಿಮ್ಮ ಪ್ರೋತ್ಸಾಹದ ನುಡಿ-ಸಾಲುಗಳು ನಮ್ಮ ಎಲ್ಲರ ಟಾನಿಕ್ಕುಗಳು ...ಧನ್ಯವಾದ...ನಿಮ್ಮ ಅಭಿಮಾನಕ್ಕೆ

  ReplyDelete
 7. ಅಭಿನಂದನೆಗಳು. "ನ್ಯಾನೋ" ಸಾಲುಗಳು ಚುರುಕಾಗಿವೆ..ಚೆನ್ನಾಗಿವೆ.

  ReplyDelete
 8. ನಾರಾಯಣ್ ಭಟ್ ಸರ್, ಧನ್ಯವಾದಗಳು ನಿಮ್ಮ ನಿರಂತರ ಬೆನ್ನು ತಟ್ಟುವಿಕೆಗೆ...

  ReplyDelete
 9. ಅಝಾದ್ ಭಾಯ್ - ಶತಕ ಬಾರಿಸಿದ ನಿಮಗೆ ಶುಭಾಶಯಗಳು.. ನ್ಯಾನೋ ಕವನಗಳೂ ಚೆನ್ನಾಗಿವೆ.. ಹೀಗೆ ಬರಿತಾ ಇರಿ.. ನಿಮ್ಮ ಈ ಶತಕಗಳು ಶತಮಾನದೊರೆಗೆ ಸಾಗಲಿ..

  ReplyDelete
 10. ಶತಕಕ್ಕೆ ಅಭಿನಂದನೆಗಳು. ಶತಕದ ಶತಕವೂ ಸೊಗಸಾಗಿದೆ!

  ReplyDelete
 11. ಶುಭಾಶಯ, ಚೆನ್ನಾಗಿವೆ ನ್ಯಾನೋ ಕವಿತೆಗಳು

  ReplyDelete
 12. ಭಳಿರೇ ಪರಾಕ್ರಮ ಕಂಠೀರವ, ತಾವು ಶತಕ ಬಾರಿಸಿದ್ದಕ್ಕೆ ಅನೇಕ ಸವಲತ್ತು ಪಡೆದು ಹಾಗೇ ಮಲಗುವ ನಮ್ಮ ಕ್ರಿಕೆಟಿಗರು ನಾಚಬೇಕು! ಹೊಸ ರುಚಿ ಚೆನ್ನಾಗಿದೆ, ರಸವತ್ತಾಗಿದೆ, ತಮ್ಮ ಬರಹ ಕಾರ್ಯ ಮುಂದುವರಿಯಲಿ ಎಂದು ಆಶಿಸುವುದರೊಂದಿಗೆ ಸದ್ಯಕ್ಕೆ ಧನ್ಯವಾದಗಳು.

  ReplyDelete
 13. ನ್ಯಾನೋ ಕವಿತೆಗಳು ಮುದ ನೀಡುವಂತಿವೆ.ಶತಕದ ಸಂಭ್ರಮ ಸಹಸ್ರದಾಚೆಗೂ ಮುಂದುವರಿಯಲಿ ಎನ್ನುವ ಹಾರೈಕೆ.

  ReplyDelete
 14. ಶುಭಾಶಯಗಳು..ತುಂಬಾ ಚೆನ್ನಾಗಿವೆ ನಾನೋ ಕವನಗಳು..

  ReplyDelete
 15. ಅಜಾದ್,

  ಶತಕದ ಮೆಟ್ಟಿಲಿಗೆ ಅಭಿನಂದನೆಗಳು. ಅದಕ್ಕೆ ತಕ್ಕಂತೆ ನ್ಯಾನೋ ಸೊಗಸಾದ ಕವಿತೆಗಳು.

  ReplyDelete
 16. ಶತಕ ಸಿಡಿಸಿದ್ದಕ್ಕೆ ಅಭಿನಂದನೆಗಳು..
  ಬೊಂಬಾಟ್ ಪ್ರಯತ್ನ..

  ReplyDelete
 17. aazaad sir,
  shatakakke abhinandanegaLu..... nyano kavana chennaagide arthavoo ide sir....
  dvishataka hoDeyiri....

  ReplyDelete
 18. ಜಲನಯನ ಅವರೇ..ಅಭಿನಂದನೆಗಳು..ಶತಕಕ್ಕೆ ಮತ್ತು ಈ ಸೊಗಸಾದ ನ್ಯಾನೋ ಕವನಕ್ಕೆ! ಸಖತ್ತಾಗಿ ಅರ್ಥ ಕೊಡುತ್ತೆ ಬೀದಿ.. ಹೀಗೆ ನ್ಯಾನಾಯಣ ಮುಂದುವರೆಯಲಿ!

  ReplyDelete
 19. ಪ್ರಯೋಗಗಳು ನಡೆಯುತ್ತಿದ್ದರಲ್ಲವೇ ಉತ್ತಮ ಫಲಿತಾಂಶ ದೊರಕುವುದು !?. ಅದು ನಿಮ್ಮ ಶತಕದ ಸಂಭ್ರಮದಲ್ಲಿ prove ಆಗಿದೆ. ಶುಭ ಹಾರೈಕೆಗಳು.

  ReplyDelete
 20. ಶತಕ ಬಾರಿಸಿದ ದೊರೆಗೆ ಅಭಿನಂದನೆಗಳು.....
  ಒಳ್ಳೆ ಪ್ರಯತ್ನ.....
  ಮುಂದುವರೆಯಲಿ....

  ReplyDelete
 21. ಶತಮಾನದ ಸಂಭ್ರಮಕ್ಕೆ ಅಭಿನಂದನೆಗಳು
  ನಿಮ್ಮಿಂದ ಇನ್ನು ಹೆಚ್ಚಿನ ಕವನಗಳು ಮೂಡಿಬರಲೆಂದು ಹಾರೈಸುತ್ತಾ,

  ವಸಂತ್

  ReplyDelete
 22. ಸಚಿನ್ ತರ ಡಬಲ್ ಬೇಗ ಬಾರಿಸಿ...:)
  ನಿಮ್ಮವ,
  ರಾಘು.

  ReplyDelete
 23. ಅಟ್ಟೆ, ಮಟ್ಟೆ, ಕೋಳಿಮೊಟ್ಟೆ.........ಟೂ ಟೂ ಟೂ..
  ಆನೆ ಮೇಲೆ, ಕುದುರೆ ಮೇಲೆ, ಕತ್ತೆ ಮೇಲೆ, ಒಂಟೆ ಮೇಲೆ.....
  ಅಜಾದ್ ಮೇಲೆ ಟೂ ಟೂ ಟೂ.......!

  ನಾನು ನನ್ನ ಹೆಸರನ್ನ ಹೇಳಿಲ್ಲ ನಿಜ ಆದರೆ ಹೇಳುತ್ತೀನಿ ಅಂತ ತಿಳಿಸಿದ್ದೀನಿ.
  ಆದರೆ ನಿಮ್ಮ ಹಾಗೆ ತಪ್ಪು ತಪ್ಪು ವಿವರ ನೀಡಿಲ್ಲ....!
  ನಾನು ಎಷ್ಟು ಖುಷಿಯಾಗಿದ್ದೆ, ಮೊದಲನೇ ಸಲ, ಒಬ್ಬರು ಬ್ಲಾಗ್ ಫ್ರೆಂಡ್ ಜೊತೆ ಫೋನ್ ನಲ್ಲಿ
  ನೇರವಾಗಿ ಮಾತಾಡಬಹುದು ಅಂತ, ಆದರೆ ........ನೀವು........ಮಾಡಿದ್ದೇನು?
  ಬಿಡಿ ಪರವಾಗಿಲ್ಲ, ನಾನು upset ಆಗಿರುವೆ. ಅದಕ್ಕೆ ನಿಮ್ಮ ಜೊತೆ ಟೂ ಬಿಟ್ಟಿರುವುದು!!!
  ನೀವು ಕೊಟ್ಟಿರುವ ಹೊಸ ನಂಬರ್ ಗೆ ಫೋನ್ ಮಾಡಲ್ಲ, ಈ ಮೇಲ್ ಕಳಿಸೋಲ್ಲ,
  ಅಷ್ಟೇ ಅಲ್ಲ ಇನ್ನು ಮೇಲೆ ನಿಮ್ಮ ಬ್ಲಾಗ್ ಕಡೆ ಬರೋಲ್ಲ, ಬಂದರೂ ಲೇಖನ ಓದೋಲ್ಲ,
  ಓದಿದರೂ ಪ್ರತಿಕ್ರಿಯೆ ಬರೆಯೋಲ್ಲ ಯಾಕೆಂದರೆ ನಿಮ್ಮ ಜೊತೆ ಟೂ..................ಟೂ!!

  ReplyDelete
 24. जॊ था दिलमें उस्कॊ जगादिया
  दिल जलाता था जो उस्कॊ भुलादिया
  एक एक करके गूंदा तो माला बनी
  बनिया हूं मैं एक एक कर शतक बजादिया
  ರಮೇಶ್ ನಿಮ್ಮ ಪ್ರೋತ್ಸಾಹಕ ನುಡಿಗೆ ಧನ್ಯವಾದ......

  ReplyDelete
 25. ಸುನಾಥಣ್ಣ...ನಿಮ್ಮ ಅಭಿಮಾನ ಹಿತನುಡಿ, ಪ್ರೋತ್ಸಾಹಗಳಿಗೆ ಚಿರ ಋಣಿ....ನಿಮ್ಮ ಈ ಪ್ರೋತ್ಸಾಹ ಎಲ್ಲ ಬ್ಲಾಗ್ ಸ್ನೇಹಿತರಲ್ಲಿ ಇಟ್ಟಿರುವುದು ನಮ್ಮೆಲ್ಲರ ಸುಕೃತ.

  ReplyDelete
 26. ಪರಾಂಜಪೆಯವರೇ...ನಿಮ್ಮ ಬೆನ್ನುತಟ್ಟುವಿಕೆ ನಮ್ಮ ಶಕ್ತಿವರ್ಧಕ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 27. ವಿಆರ್ ಬಿ. ನಿಮ್ಮ ಬೆಂಬಲ ಸದಾ ನಮ್ಮೊಮ್ದಿಗಿರುವುದು ನಮ್ಮ ಅದೃಷ್ಟ.. ಧನ್ಯವಾದ.

  ReplyDelete
 28. ಡಾ.ಟಿ.ಕೆ.ಯವರೇ...ಶತಕದ ಬ್ಲಾಗ್ ಪೋಸ್ಟಿಗೆ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

  ReplyDelete
 29. ಪ್ರಗತಿ..ನಿಮ್ಮ ಈ ಆಗಮನ ಅದೂ ಜಲನಯನದ ಶತಕ ಸಂಭ್ರಮದಲ್ಲಿ ಮತ್ತು ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು

  ReplyDelete
 30. ವನಿತಾ..ನನ್ನೀ ಪಯಣದಲ್ಲಿ ನಿಮ್ಮಂಥ ಸ್ನೇಹಿತರ ಪಾತ್ರ ಅತಿ ಮಹತ್ವದ್ದು...ಧನ್ಯವಾದ

  ReplyDelete
 31. ಶಿವು..ನಿಮ್ಮ ಅಭಿಮಾನಕ್ಕೆ ನಮನ...ಈ ಸಂಭ್ರಮದಲ್ಲಿ ನೀವೆಲ್ಲ ಪಾಲುದಾರರು.

  ReplyDelete
 32. ದಿಲೀಪ್ ನಿಮ್ಮ ಪ್ರತಿಕ್ರಿಯೆ..ಪ್ರೋತ್ಸಾಹ,,ನನಗೆ ಉತ್ಸಾಹದಾಯಕ...

  ReplyDelete
 33. ದಿನಕರ್..ಶತಕದ ರನ್ ಒಂದು ಒಳ್ಳೆಯ ಪೋಸ್ಟಿನೊಂದಿಗಾಗಲಿ ಎಂಬ ಆಸೆ ಇತ್ತು.. ಅದು ಆಗಿದೆ ಎನ್ನುವುದು ನಿಮ್ಮೆಲ್ಲರ ಪ್ರತಿಕ್ರಿಯೆಯಿಂದ ಸಾಬೀತಾಗಿದೆ.

  ReplyDelete
 34. ಸುಮನಾ..ನಿಮ್ಮ ಅಭಿಮಾನ ಮತ್ತು ಪ್ರೋತ್ಸಾಹಗಳಿಗೆ ಧನ್ಯವಾದಗಳು.

  ReplyDelete
 35. ಸುಬ್ರಮಣ್ಯ.. ನಿಮ್ಮ ಮಾತು ಮತ್ತು

  ReplyDelete
 36. ಮಹೇಶ್ ಹೌದು ಇದು ಒಂದು ಮಹತ್ತರ ಘಟ್ಟ...ಧನ್ಯವಾದ ನಿಮ್ಮ ಪ್ರೋತ್ಸಾಹಾಕೆ.

  ReplyDelete
 37. ವಸಂತ ನಿಮ್ಮ ಪ್ರೋತ್ಸಾಕ್ಕೆ ಮತ್ತು ಅನಿಸಿಕೆಗೆ ಧನ್ಯವಾದ

  ReplyDelete
 38. ರಾಘು ಸಚಿನ ಡಬಲ್, ಲಾರಾ ಟ್ರಿಪಲ್...ಎಲ್ಲ ಸಾಧ್ಯ ನಿಮ್ಮಂಥರ ಪ್ರೋತ್ಸಾಹದಿಂದ ಸಾಧ್ಯ.

  ReplyDelete
 39. This comment has been removed by the author.

  ReplyDelete
 40. ಎಸ್ಸೆಸ್ಕೆ.....ಅರೆರೆ..ಏನಿದು ಅಟ್ಟೆ ಮೊಟ್ಟೆ ಲೊಟ್ಟೆ... ತಪ್ಪು ಮಾಹಿತಿ ಏನಿಲ್ಲ...ಅದು ಏರ್ಟೆಲ್ ಹಗರಣ...ಮತ್ತು ಅವರನ್ನು ಬೇಡಿಕೊಂಡರೂ ಆ ನಂಬರ್ ನಮಗೆ ಸಿಗಲಿಲ್ಲ. ಹಾಗಾದಿ ಡೋಕೋಮೋ ನಂಬರ್ ಕೊಟ್ಟೆ....ನಿಮ್ಮ ಪ್ರತಿಕ್ರಿಯೆಗೆ ಧನ್ಯಾದ.

  ReplyDelete
 41. ಟೂ ಬಿಟ್ಟಿದ್ದಿಕ್ಕೆ ಬೇಜಾರಾಯಿತಾ?
  ಸರಿ ಸಾರೀ, ಈಗ ಸೇ (friends) ಸರಿನಾ?!

  ಹೊಸ ಪ್ರಯತ್ನ ಬಹಳ ಸೊಗಸಾಗಿದೆ.
  ಶತಕಕ್ಕೆ ಸಹಸ್ರಾಭಿವಂದನೆಗಳು !

  ReplyDelete
 42. Super Azadare,

  ಶತಕಕ್ಕೆ ಸಾವಿರ ಅಭಿನಂದನೆಗಳು :)

  ReplyDelete
 43. ಎಸ್ಸೆಸ್ಕೆ...ನಿಮ್ಮಂತಹ ಸ್ನೇಹಿತ್ರು ಠೂ ಬಿಟ್ರೆ ಸಂತೋಷ ಆಗುತ್ತೆ ಯಾಕಂದ್ರೆ ನಿಜ ಸಂಬಂಧಗಳು ಈ ತರಹದ ಠೂ ಬಿಡೋದನ್ನ ಮತ್ತೂ ಬಿಗಿಯಾಗೋದರ ಸಂಕೇತ ಅಂತಾರೆ...ನಿಮ್ಮ ಈ ಕಾಮೆಂಟಿಂದಾನೇ ಸಾಬೀತಾಯ್ತಲ್ಲ..ಹಹಹ.....ಖುಷಿಯಾಗಿದ್ರೆ...ಹೆಸರು ಹೇಳಿ,...ಇಲ್ಲ ಮೈಲ್ ಹಾಕಿ....ಪ್ಲೀಸ್.....

  ReplyDelete
 44. ಮಾನಸ..ಆ ದಿನ ಫೋನ್ ಮಾಡಿ ಮಧ್ಯರಾತ್ರಿ ತಲೆ ತಿಂದೆ ಅಂತಾ ಬೇಜಾರಿಂದ ಕಾಮೆಂಟ್ ಹಾಕಿಲ್ಲ ಅಂದ್ಕೋತಾ ಇದ್ದೆ....ಬಟ್ ಐ ಯಾಮ್ ರಾಂಗ್ ಅನ್ನೋ ತರಹ ಬಂದಿದೆ ನಿಮ್ಮ ಪ್ರತಿಕ್ರಿಯೆ...ಇದಕ್ಕೆ ಮತ್ತೊಮ್ಮೆ ಧನ್ಯವಾದಗಳು.

  ReplyDelete
 45. ನಿಮ್ಮ ಪ್ರಾಯೋಗ ಹೊಸದಾಗಿದೆ ತುಂಬಾ ಇಷ್ಟ ಆಯ್ತು ನಿಮ್ಮ ಶತಕಕ್ಕೆ ಶುಭಾಷಯಗಳು :)

  ReplyDelete
 46. Tank you Manju....aatmeeyara shubha haaraikegale jalanayanada kannu bareyoke nodoke odoke...

  ReplyDelete
 47. ಜಲನಯನ ,
  ಅಭಿನಂದನೆಗಳು..
  ನ್ಯಾನೋ ಸಾಲುಗಳು ನವಿರಾಗಿವೆ..

  ReplyDelete
 48. ಗುರು, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....

  ReplyDelete
 49. ಶತಕದ ಸ೦ಬ್ರಮದಲ್ಲಿ ಚೆ೦ದದ ನ್ಯಾನೊ ಹನಿಗಳನ್ನು ಉದುರಿಸಿದ್ದೀರ.. ಅಭಿನ೦ದನೆಗಳು.. ಸರ್..

  ReplyDelete
 50. ಧನ್ಯವಾದಗಳು ವಿಜಯಶ್ರೀ ನಿಮ್ಮ ಪ್ರೋತ್ಸಾಹಭರಿತ ಪ್ರತಿಕ್ರಿಯೆಗಳು ನನ್ನ ಈ ಶತಕದ ಪ್ರತಿ ಹೆಜ್ಜೆಗೂ ಹುರುಪುತುಂಬಿವೆ...

  ReplyDelete
 51. ಅಭಿನಂದನೆಗಳು. ಉತ್ತಮ ಪ್ರಯತ್ನ ನ್ಯಾನೋದ ಮೂಲಕ....

  ReplyDelete
 52. ನಿಮ್ಮ ಅಭಿಮಾನ, ಪ್ರೋತ್ಸಾಹ ಹೀಗೇ ನಿರಂತರವಿರಲಿ ತೇಜಸ್ವಿನಿಯವರೇ ಜಲನಯನದ ಮೇಲೆ....ನ್ಯಾನೋಗಳು ನಿಮಗೆ ಇಷ್ಟವಾದುದಕ್ಕೆ ಧನ್ಯವಾದ

  ReplyDelete
 53. ನೂರು ಬರಹ ದಾಟಿದ್ದಕ್ಕೆ ಅಭಿನಂದನೆಗಳು. ನ್ಯಾನೋ ಕವನಗಳು ಚೆನ್ನಾಗಿವೆ

  ReplyDelete
 54. ಶತಕದ ಸಂಭ್ರಮಕ್ಕೆ ಅಭಿನಂದನೆಗಳು. ತುಂಬಾ ಚೆನ್ನಾಗಿವೆ ನಾನೋ ಕವನಗಳು.

  ReplyDelete
 55. ಚೆನ್ನಾಗಿಲ್ಲ ಅಂತ(ಸುಳ್ಳು) ಹೇಳಿದರೆ ನಮಗೇ ಮುಖಭಂಗ ಆದೀತು. ಬಹಳ ಚೆನ್ನಾಗಿದೆ.

  ReplyDelete
 56. ದೀಪಸ್ಮಿತಾ ನಿಮ್ಮ ಕರತಾಡನಕ್ಕೆ ದ್ವಿಶತಕವನ್ನು ಹೊಡೆಸುವ ಶಕ್ತಿ ಇದೆ...ಈ ಪ್ರೋತ್ಸಾಹ ಅಭಿಮಾನಕ್ಕೆ ಮನಃಪೂರ್ವಕ ಧನ್ಯವಾದಗಳು.

  ReplyDelete
 57. ನಿಶಾ, ನಿಮ್ಮ ಅಭಿಮಾನಕ್ಕೆ ವಂದನೆಗಳು..ಪ್ರೋತ್ಸಾಹಕ್ಕೆ ಧನ್ಯವಾದಗಳು....

  ReplyDelete
 58. ಸಾಗರಿ, ಬರೆದದ್ದೆಲ್ಲಾ ಚನ್ನಾಗಿರಬೇಕೆಂದೇನಿಲ್ಲ...ಅಲ್ಲವಾ..? ಇದು ಹೊಸ ಪ್ರಯೋಗವಾದ್ದರಿಂದ ನಿಮ್ಮ ಅನಿಸಿಕೆ ಪ್ರಾಮಾಣಿಕವಾಗಿರಲೆಂದು ಹೇಳಿದೆ ಅಷ್ಟೆ....ಹಹಹ....ಅಂದರೆ ...ಬೆನ್ನು ತಟ್ಟಿಕೊಳ್ಳಲೇ....???!!! ಧನ್ಯವಾದ

  ReplyDelete
 59. Shataka pooraisidakke dhanywadagalu... hosa prayoga chennagide azad bhai..
  Keep Writing...

  ReplyDelete
 60. ಸ್ವಾಗತ, ಸುಸ್ವಾಗತ ನವೀನರಿಗೆ....ಜಲನಯನಕ್ಕೆ....ಬಡವನಮನೆಗೆ ಭಾಗ್ಯದೇವತೆ ಬಂದಹಾಗೆ ಬಂದಿರಿ ...ಪ್ರೋತ್ಸಾಹದ ಎರಡು ಮಾತು ಮತ್ತು ಅಭಿನಂದನಾ ನುಡಿ ಧನ್ಯವಾಯ್ತು ನನ್ನ ಶತಕದ ನ್ಯಾನೋ ಕವನ.

  ReplyDelete
 61. first of all congratulations sir.

  "ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ
  ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ"
  ಸರ್,ಯಾರವರು ನಿಮ್ಮ ಗುರಿಯನ್ನ ನೆಲಕೆ ಬೀಳಿಸಿದವರು ? :-)
  'ಉಲಿಕೆ' ಎಂಬ ಪದದ ಉಪಯೋಗ , ಸಾಲುಗಳನ್ನ ಇನ್ನೊಮ್ಮೆ ಓದುವಂತೆ ಮಾಡಿತು.
  ನಿಮ್ಮ ಹೊಸ ಪ್ರಯೋಗ ಚೆನ್ನಾಗಿದೆ.

  ReplyDelete
 62. ಎನ್ನಾರ್ಕೆ, ನಿಮ್ಮ ಅಭಿಮಾನಕ್ಕೆ ಶರಣು...ಕೋಗಿಲೆ ಉಲಿಯುವಿಕೆ- ಗೆ ನನಗೆ ತೋರಿದ ಮೋಟು ಪದ ಉಲಿಕೆ...ತಪ್ಪಿದ್ದರೆ ದಯಮಾಡಿ ತಿಳಿಸಿ.... ಗುರಿ ತಪ್ಪೋಕೆ ಅದು ಯಾರಾದರೂ ಆಗಬಹುದು....ಧನ್ಯವಾದ

  ReplyDelete
 63. ಶುಭಾಶಯಗಳು..:)

  ಪ್ರಯತ್ನ ಚೆನ್ನಾಗಿದೆ.. ಕವನ(ಗಳು) ಮುದ್ದಾಗಿದೆ(ವೆ).

  ReplyDelete
 64. ಶ್ರವಣ, ನಿಮ್ಮ ಅಭಿಮಾನಕ್ಕೆ ಧನ್ಯವಾದ ಹಾಗೇ ನ್ಯಾನೋ ಪ್ರಯೋಗಕ್ಕೆ ನಿಮ್ಮ ಅಂಕಿತ ಹಾಕಿದ್ದಕ್ಕೆ ಸಹಾ.

  ReplyDelete
 65. ಅಜೇಯ ಶತಕ ಬಾರಿಸಿದ್ದಕ್ಕೆ ಅಭಿನಂದನೆಗಳು.. ನ್ಯಾನೋ ಕವನಗಳು ಚೆನ್ನಾಗಿವೆ..

  ReplyDelete
 66. ಆಜಾದ್ ಭಾಯಿ,
  ಶತಕದ ಆನ೦ದಕ್ಕೆ ಅಭಿನ೦ದನೆಗಳು.ಚೆ೦ದದ ಕವನ...ಹೀಗೆಯೇ ಉತ್ತಮ ಬರಹಗಳು ನಿಮ್ಮಿ೦ದ ಹೊರ ಬರಲಿ. ಮು೦ದಿನ ಶತಕದ ಆನ೦ದ ಬೇಗನೆ ಸಿಗಲಿ..
  ಕಳೆದ ದಿನಗಳಲ್ಲಿ ನೀವು ನನ್ನ ಬರಹಕ್ಕೆ ಹಾಕಿದ ಪ್ರತಿಕ್ರಿಯೆಗಳಿ೦ದ ನಾನು ಬರೆಯುವುದರ ಬಗ್ಗೆ ನಿಮಗಿರುವ ಕಳಕಳಿ ತಿಳಿದು ಬ೦ತು. ಧನ್ಯವಾದಗಳು. ಪ್ರಯತ್ನಿಸುತ್ತೇನೆ..ನಿಮ್ಮ ಕಳಕಳಿಯ ಭಾವನೆಗೆ ನಾನು ಕೃತಜ್ನಳು.

  ReplyDelete
 67. nice one sir..
  haage century hodeduddakke congrats...
  keep writing...

  ReplyDelete
 68. ರವಿಕಾಂತ್ ಧನ್ಯವಾದ ನಿಮ್ಮ ಬೆಂಬಲ ಪ್ರೋತ್ಸಾಹ ಮತ್ತು ಅಭಿಮಾನಕ್ಕೆ.

  ReplyDelete
 69. ಮನಮುಕ್ತಾ ನಿಮ್ಮ ಮುಕ್ತ ಮಾತಿಗೆ ಪ್ರತಿಕ್ರಿಯೆಗೆ ಮತ್ತು ನಿಮ್ಮ ಅಭಿಮಾನಕ್ಕೆ ಧನ್ಯವಾದ.

  ReplyDelete
 70. ಶಿಪ್ರಕಾಶ್ ಏನೋ ಆಗಾಗ್ಗೆ ಬಂದು ಚಪಾಳೆ ತಟ್ಟಿ ಪ್ರೋತ್ಸಾಹ ಅಂತ ಮಾಡೋ ನಿಮ್ಮಂಥ ಗೆಳೆಯರ ಆಶೀರ್ವಾದ...ಇದ್ದರೆ ಶತಕ ಯಾವ ಮೂಲೆಗೆ...? ಧನ್ಯವಾದ

  ReplyDelete
 71. ಜಲನಯನರೆ,
  ಮೊದಲನೇದಾಗಿ ಶತಕ ಪೂರೈಸಿದ್ದಕ್ಕಾಗಿ ಆಭಿನ೦ದನೆಗಳು.ನಿಮ್ಮ ಕವನ ಚೆನ್ನಾಗಿದೆ. ಬರಲಿ ಮತ್ತಷ್ಟು ಶತಕಗಳು :)

  ReplyDelete
 72. ಚಂದ್ರು ಧನ್ಯವಾದ ನಿಮ್ಮ ಈ ಮೊದಲ ಭೇಟಿಗೆ ಮತ್ತು ಪ್ರತಿಕ್ರಿಯೆಗೆ.

  ReplyDelete
 73. ಆಜಾದ್ ಸಾರ್....
  ಹಾರ್ದಿಕ ಅಭಿನಂದನೆಗಳು ಶತಕ ಪೂರೈಸಿದ್ದಕ್ಕೆ..... ನ್ಯಾನೋ ಪ್ರಯೋಗ ಇಷ್ಟ ಆಯಿತು.... ತಡವಾದರು ಪರವಾಗಿಲ್ಲ ಅಂತ ... ಅಭಿನಂದಿಸಿದ್ದೇನೆ...... ತಪ್ಪು ತಿಳಿಯೋಲ್ಲವಲ್ಲ.... :-)

  ಶ್ಯಾಮಲ

  ReplyDelete
 74. ಮೊದಲಿಗೆ ಹಾರ್ದಿಕ ಶುಭಾಶಯಗಳು .
  ಎರಡನೆಯದಾಗಿ , ಇಷ್ಟು ತಡವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ.

  ನೀರಲ್ಲಿ ಕಣ್ಣಿಟ್ಟವರೇ ನಿಮ್ಮ ಬ್ಲಾಗಿಗೆ ಸಂಭ್ರಮದ ಪುಳಕ !
  ಹಚ್ಚಿಟ್ಟಿದ್ದೀರಿ ಶತಕದ ಫಲಕ

  ಅಂದುಕೊಂಡೆ ನಾನು ಬರೆಯುವೆ ನ್ಯಾನೋ ಕವಿತೆ
  ಆದರೆ ಕ್ಷಮಿಸಿ ,ಮಳೆಯಿಲ್ಲ ನೋಡಿ, ಬತ್ತಿದೆ ಹೊಳೆಯ ಒರತೆ !

  ಮತ್ತೊಮ್ಮೆ ಮನಃ ಪೂರ್ವಕ ಅಭಿನಂದನೆಗಳು ! ನ್ಯಾನೋ ಪಾಲನೆ ಮುಂದುವರೆಯಲಿ !

  ReplyDelete
 75. ನಿಮ್ಮ ಹೊಸ ಪ್ರಯತ್ನದ ನ್ಯಾನೋ ಚೆಂದಾಗಿ ಬಂದಿದೆ ಮುಂದುವರೆಸಿ :)

  ReplyDelete
 76. ಶ್ಯಾಮಲಾ...ನ್ಯಾನೋ ಕವನ ಹೀಗೇ ಮನಸ್ಸಿಗೆ ಇದ್ದಕ್ಕಿದ್ದಂತೆ ಬಂದ ಆಲೋಚನೆ...ಇದು ನಿಮಗೆ ಇಷ್ಟವಾಯಿತು..ಸಂತೋಷ...ಹಾಗೇ ನಿಮ್ಮ ಹಾರೈಕೆಗೆ ಧನ್ಯವಾದ

  ReplyDelete
 77. ಚಿತ್ರಾ...ಹಹಹ...ನಿಮ್ಮ ಛಾಪು ಇಲ್ಲೂ ಬಿಟ್ರಿ...ನೋ ಕ್ಷಮೆ..ಥ್ಯಾಂಕ್ಸ್...
  ನೀರಿನಲ್ಲಿ ಕಣ್ಣಿಟ್ಟರೆ.. ಕಣ್ಣಿನಲ್ಲಿ ನೀರಿರುವುದು..ಸ್ವಾಭಾವಿಕ...ಆಯಿತು ನಿಮ್ಮ ಪ್ರತಿನ್ಯಾನೋ ನಾನು ಧನ್ಯೋ...
  ನನ್ನ ಮನಃಪೂರ್ವಕ ಧನ್ಯವಾದಗಳು.

  ReplyDelete
 78. ಗುರುಪ್ರಸಾದ್ ಧನ್ಯವಾದ ನನ್ನ ಜಲನಯನಕ್ಕೆ ನಿಮ್ಮ ಪ್ರತಿಕ್ರಿಯೆಗೆ....ನಿಮ್ಮ ಹಾರೈಕೆಗೂ...

  ReplyDelete
 79. ಆಜಾದ್ ಸರ್,

  ನಿಮ್ಮ ನ್ಯಾನೋಗವನಗಳು ಸೊಗಸಾಗಿವೆ...ಶತಕ ವೀರರಿಗೆ ಹೃದಯ ಪೂರ್ವಕ ಶುಭಾಶಯಗಳು. ನಿಮ್ಮಿಂದ ಇನ್ನು ಹಲವಾರು ಕವನ,ಲೇಖನಗಳು ಪ್ರಕಟವಾಗಲಿ...ನಿಮ್ಮ ಬರವಣಿಗೆಯು ನನಗೆ ತುಂಬಾ ಇಷ್ಟ.. ನಿಮ್ಮ ಬ್ಲಾಗ್ ನ ಮೂಲಕ ಹೆಚ್ಚಿನ ರೀತಿಯ ಜ್ಞಾನ ಪಸರಿಸಲಿ..ಧನ್ಯವಾದಗಳು...

  ReplyDelete
 80. ಅಶೋಕ್...ತುಂಬಾ ಥ್ಯಾಂಕ್ಸ್ ನಿಮ್ಮ ಅಭಿಮಾನಕ್ಕೆ...ನ್ಯಾನೋ ಹಾಗೇ ಮನಸ್ಸಿಗೆ ಬಂದ ಒಂದು ಅನಿಸಿಕೆ..ಇದು ಬೇರೊಂದು ರೂಪದಲ್ಲಿ ಪ್ರಯೋಗದಲ್ಲಿದ್ದರೂ ಇರಬಹುದು...ಆದ್ರೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

  ReplyDelete
 81. ಮೊನ್ನೆ ಸುಧಾ ಪತ್ರಿಕೆಯಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ ನಿಮ್ಮ ನೆನಪಾಯಿತು... ತುಂಬಾ ಸುಂದರವಾಗಿ ಹಾಗು ವಿಶಿಷ್ಟವಾಗಿ ಬರೆಯುತ್ತೀರಿ ಅಭಿನಂದನೆಗಳು

  ReplyDelete
 82. ಸೌಮ್ಯ ಧನ್ಯವಾದ ನಿಮ್ಮ ಅಭಿಮಾನಕ್ಕೆ ಆತ್ಮೀಯತೆಗೆ...

  ReplyDelete