Wednesday, July 28, 2010

ಗೊತ್ತಿಲ್ಲ ಮಗು

(ಚಿತ್ರ ಕೃಪೆ : ಅಂತರ್ಜಾಲ)

ಅಪ್ಪಾ..ಏನು ಮಗು..?


ಮಳೆಗಾಲ..ಕೆಲವುಕಡೆ ಎಡೆಬಿಡದ ಮಳೆ ಅಂತೆ...


ಹೌದು ಕಣೋ ರೈತರಿಗೆ ನಿರಾಳ..


ಆದ್ರೆ ಅಪ್ಪ?


ಏನು ನಿನ್ನ ರಾಗ?


ಪ್ರತಿ ಸಲವೂ ಗೊಬ್ಬರಗಳಿಗೆ ಪರದಾಟ ತಪ್ಪಿದ್ದಲ್ಲ


ಹೌದು ಕಣೋ ಸರ್ಕಾರ ವ್ಯವಸ್ಥೆ ಮಾಡುತ್ತಲ್ಲಾ..


ಅಲ್ಲಪ್ಪ ಅವರ ತಿಪ್ಪೆ ಇವರು ಇವರ ತಿಪ್ಪೆ ಅವರು ಅಗೆಯುತ್ತಿದ್ದಾರಲ್ಲ


ಸರ್ಕಾರದಲ್ಲಿರೋರಿಗೆ ಇದಕ್ಕೆ ಸಮಯ ಸಿಗುತ್ತಾಪ್ಪಾ..?


ಗೊತ್ತಿಲ್ಲ ಮಗು.


ಅಪ್ಪಾ..


ಮತ್ತಿನ್ನೇನೋ..


ದಂಡಿ ಯಾತ್ರೆ ಅಂದ್ರೆ ಏನಪ್ಪಾ..?


ದಂಡಿ ಅಲ್ಲವೋ ದಾಂಡಿ...ಮಹಾತ್ಮ ಗಾಂಧಿ


ಉಪ್ಪಿಗೆ ಹಾಕಿದ್ದ ಶುಲ್ಕ ವಿರೋಧಿಸಿ ಬ್ರಿಟೀಶರ ವಿರುದ್ಧ ನಡೆಸಿದ್ದ ಪಾದ ಯಾತ್ರೆ


ಹಾಗಾದ್ರೆ ಈಗ ನಮ್ಮ ರಾಜಕಾರಣಿಗಳು ಮಾಡ್ತಿರೋದು


ದಂಡ ಯಾತ್ರೆನಾ ಅಪ್ಪಾ..?


ಗೊತ್ತಿಲ್ಲ ಮಗು


ಅಪ್ಪಾ..ಇನ್ನೊಂದೇ..ಡೌಟು...


ಏನಪ್ಪಾ ಅದು, ಕೇಳು...


ತಿರುಪತಿಗೆ ಹೋದವರು ಬುಂಡೆ ಹೊಡಿಸ್ಕೋತಾರಲ್ಲಾ ಯಾಕೆ?


ಅದು ಅವರ ಹರಕೆ ಆಗಿರುತ್ತೆ ನಮ್ಮ ಪಾಪ ತೊಳಿ ದೇವರೇ ಅಂತ


ಮತ್ತೆ ನಮ್ಮ ಮಂತ್ರಿಗಳೊಬ್ಬರ ಪಾಪ ಹೆಚ್ಚಾಗಿತ್ತ


ಟೀವಿಯಲ್ಲಿ ಬುಂಡೆ ತೋರಿಸ್ಕೊಂಡು ಇದ್ರಲ್ಲಾ..?


ನಂಗೊತ್ತಿಲ್ಲ ಮಗು..


ಇದು ನಿಜವಾಗ್ಲೂ ಕಡೇದು


ಹೇಳು...ಯಾಕಂದ್ರೆ ನೀನು ಕೇಳೋದಕ್ಕಿಂತಾ ಹೇಳೋದೇ ಹೆಚ್ಚು


ಅಲ್ಲಪ್ಪ..ಪಾದ ಯಾತ್ರೆ ಪ್ರತಿಭಟನೆ ರೂಪ ಅಂತಾರಲ್ಲಾ?


ಹೌದು... ಅದೇ ಅಲ್ವಾ ಈಗ ನಡೆದಿರೋದು..


ಮತ್ತೆ ಅದನ್ನ ಪ್ರತಿಭಟಿಸೋಕೆ ಸಮಾರಂಭ ಮಾಡ್ತೀವಿ ಅಂತಾರಲ್ಲ


ಗೊತ್ತಿಲ್ಲ ಮಗು.

58 comments:

 1. ಸಕತ್ತಾಗಿದೆ..
  ಕನ್ನಡ ಟಿವಿ ಚಾನೆಲ್ ನೋಡದೇನೆ live visuals ಕಣ್ಣ ಮುಂದೆ ಹಾದು ಹೋಯ್ತು..!!

  ReplyDelete
 2. ಜಲನಯನ ಅದ್ಭುತವಾಗಿ ಬರೆಯುತ್ತಾರೆ !ಆಲ್ವಾ ಅಪ್ಪಾ?
  ಹೌದು ಮಗೂ,ಅವರು ಮಾಮೂಲಾಗಿ ಬರೆಯೋದೆ ಹಾಗೆ!

  ReplyDelete
 3. ಅಪ್ಪ ಮಗು ಸ೦ಭಾಷಣೆ...ಖರೆ...ಇದೆ ನೋಡ್ರಿ..ಬರಹ ಎ೦ದಿನ೦ತೆ..super.

  ReplyDelete
 4. ಅಪ್ಪ ಮತ್ತು ಮಗಳ ಸಂಭಾಷಣೆ ಉತ್ತಮವಾಗಿ ಮೂಡಿಬಂದಿದೆ ಮತ್ತು >>ಮತ್ತೆ ನಮ್ಮ ಮಂತ್ರಿಗಳೊಬ್ಬರ ಪಾಪ ಹೆಚ್ಚಾಗಿತ್ತ ಟೀವಿಯಲ್ಲಿ ಬುಂಡೆ ತೋರಿಸ್ಕೊಂಡು ಇದ್ರಲ್ಲಾ..?<< ಈ ಸಾಲೂ ತುಂಬಾ ಅರ್ಥಕ್ಕೆ ಪುಷ್ಠಿ ನೀಡುತ್ತದೆ ಧನ್ಯಾವದಗಳು ಜಲನಯನ ಸರ್.

  ReplyDelete
 5. This comment has been removed by the author.

  ReplyDelete
 6. ನಗೆಯು ಬರುತಿದೆ ಎನಗೆ ನಗೆಯು ಬರುತಿದೆ, ಆಜಾದರ ಬರಹ ಓದಿ ಬುಂಡೆ ಹೊಡೆದ ಧಣಿಯ ನೆನೆದು, ಸಕತ್ತಾಗಿದೆ, ಥ್ಯಾಂಕ್ಸ್

  ReplyDelete
 7. ಹಹ್ಹಹ್ಹಾ... ಚೆನ್ನಾಗಿದೆ.. ದಂಡಯಾತ್ರೆ...

  ReplyDelete
 8. nimma magooge ellaanoo gottide matte prashne keLatte..... nimage ellaanoo gottiratte, aadare heLakke aagalla.... ide alvaaa sir samasye.....

  endinante sooopar......

  ReplyDelete
 9. ಅಪ್ಪಾ..ಇನ್ನೊಂದೇ..ಡೌಟು...
  ಏನಪ್ಪಾ ಅದು, ಕೇಳು...
  ತಿರುಪತಿಗೆ ಹೋದವರು ಬುಂಡೆ ಹೊಡಿಸ್ಕೋತಾರಲ್ಲಾ ಯಾಕೆ?
  ಅದು ಅವರ ಹರಕೆ ಆಗಿರುತ್ತೆ ನಮ್ಮ ಪಾಪ ತೊಳಿ ದೇವರೇ ಅಂತ
  ಮತ್ತೆ ನಮ್ಮ ಮಂತ್ರಿಗಳೊಬ್ಬರ ಪಾಪ ಹೆಚ್ಚಾಗಿತ್ತ
  ಟೀವಿಯಲ್ಲಿ ಬುಂಡೆ ತೋರಿಸ್ಕೊಂಡು ಇದ್ರಲ್ಲಾ..?
  ನಂಗೊತ್ತಿಲ್ಲ ಮಗು..


  :D :D... idu tumba ista aaytu...

  ReplyDelete
 10. ಪಾಪ, ನಮ್ಮ ಮಂತ್ರಿಗಳ ಮಂಡೇನ ಚೆನ್ನಾಗಿ ಬೋಳಿಸ್ಬಿಟ್ರಿ!

  ReplyDelete
 11. suuuper saar suuuuuuuuuuuuper . ..........ha.ha.ha.

  ReplyDelete
 12. ವನಿತಾ, ನಮ್ಮ ಸಿನಿಮಾದವರೆಲ್ಲಾ ಪಲ್ಟಿ ಇವರ ಮುಂದೆ...ಟೀವಿ ಲಿ, ಮನರಂಜನೆ ಅಂತ ಇದ್ರೆ ಅದು ಕೇವಲ ರಾಜಕೀಯದಿಂದ...ಹಹಹ

  ReplyDelete
 13. ಡಾ, ಟ್.ಡಿ.ಕೆ. ನೀರಲ್ಲಿದ್ದೇ ಜಲನಯನ ಇಷ್ಟೊಂದು ನೆಲದಮೇಲೆ ನಡೆಯೋದನ್ನ ನೋಡಿದೆ ಅದಕ್ಕೇ ಬಚಾವ್...ಧನ್ಯವಾದ.

  ReplyDelete
 14. ಮಗು ಖರೆ ಕೇಳ್ತದೆ ನೋಡ್ರಿ ಅದಕ್ಕೆ ಸೊಲ್ಪ ಗೊಂದಲ...ಅನ್ಸರ್ ಕೊಡೋಕೆ...ಧನ್ಯವಾದ..ಮನಮುಕ್ತಾರೇ

  ReplyDelete
 15. ವಸಂತ್ ಯಾರು ಎಷ್ಟೇ ಸಮರ್ಥನೆ ನೀಡಿದ್ರೂ...ಜನಕ್ಕೆ ಯಾರು ಎಷ್ಟು ಅಂತ ಗೊತ್ತು ಆದ್ರೆ ಏನು ಮಾಡೋದು..ಇರೋರೆಲ್ಲಾ ಕಳ್ಳರೇ...ಹಹಹ

  ReplyDelete
 16. ವಿ,ಅರ್.ಬಿ. ಧನ್ಯವಾದ..ಬಹಳ ಹೇಸಿಗೆ ಅನ್ಸುತ್ತೆ ಆದ್ರೆ ಆ ಪರಿಸ್ಥಿತಿ ತಮ್ದುಕೊಂಡದ್ದು ನಾವೇ ಅನ್ನೋದೂ ನಗ್ನ ಸತ್ಯ ಅಲ್ಲವಾ..?

  ReplyDelete
 17. ಪ್ರಗತಿ, ಧನ್ಯವಾದ ನನ್ನ ಜಲನಯನದ ಪ್ರೋತ್ಸಾಹಕ್ಕೆ...ನಮ್ಮ ರಾಜಕಾರಣಿಗಳು ಸಾಬೀತು ಮಾಡ್ತಿದ್ದಾರೆ "ನೋಡಿ ಸ್ವಾಮಿ ನಾವಿರೋದು ಹಿಂಗೇ" ಅಂತ...

  ReplyDelete
 18. ದಿನಕರ್ ಏನ್ಮಾಡೋದು ..? ಇದೊಂದೇ ಅಲ್ಲ ಮತ್ತೆ ಹಲವು ವಿಷಯಗಳು ನಿಮಗೆ ಗೊತ್ತಿರುತ್ತೆ ಆದ್ರೆ ಅದರ ಉತ್ತರ ಪಬ್ಲಿಕ್ ಮಾಡೋಕೆ ಆಗೊಲ್ಲ..ಹಾಗೇ ಮಗುವಿನ ಪ್ರಶ್ನೆಗೂ ಉತ್ತರಿಸೋದೂ ಸುಲಭ ಅಲ್ಲ...ಧನ್ಯವಾದ

  ReplyDelete
 19. ತೇಜಸ್ವಿನಿ, ಆ ಪ್ರಸಂಗದ ಚಿತ್ರಣ ಈ-ಟಿವಿಯವರು ಬಹಳ ಹಾಸ್ಯಮಯವಾಗಿ ಮಾಡಿದ್ರು..ಸಾಲದುದಕ್ಕೆ..."ನನ್ನ ಸ್ಟೈಲು ಬೇರೇನೇ ನನ್ನ ಲುಕ್ಕು ಬೇರೇನೇ" ಅನ್ನೋ ಕನ್ನಡ ಹಾಡು ಬೇರೆ..ಹಹಹ....ಧನ್ಯವಾದ

  ReplyDelete
 20. ಸುನಾಥಣ್ಣ...ನನಗೆ ಆ ಕಷ್ಟಾನೇ ಬೇಡ ಅಂತ ಅವರೇ ಬೋಳು ಬಂದು ಮುಂದೆ ನಿಂತ್ರೆ..ಚಿತ್ರಕ್ಕೆ ಶೀರ್ಷಿಕೆ ಕೊಡೋದಷ್ಟೇ ಅಲ್ಲವೇ ನನ್ನ ಕೆಲಸ...ಹಹಹ ಧನ್ಯವಾದ.

  ReplyDelete
 21. ಮನಸು ಮೇಡಂ ಬಜ್ ನಲ್ಲಿ ಸಿಕ್ಕಿಹಾಕಿಕೊಂಡು ಹೊರಗೆ ಬಂದ್ರೆ ಇಲ್ಲೊಂದು !! ಅಂದ್ಕೊಂಡ್ರಾ...ಹಹಹ ...ಧನ್ಯವಾದ

  ReplyDelete
 22. ಬಾಲು..ಬುಂಡೆ ಕ್ಯಾತನಿಗೆ ಛತ್ರಿ ಹಿಡಿಯೋಕೆ ತೊಂಡೆಕ್ಯಾತ ಅಂತ ಎಲ್ಲ ಅದೇ ಕುಟುಂಬದವರು ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

  ReplyDelete
 23. ಸುಬ್ರಮಣ್ಯ ..ಧನ್ಯವಾದ...ಟೀ.ವಿ, ನೋಡ್ತಾ ಇರಿ..ಮನರಂಜನೆ ತಾನಾಗೇ ಆಗುತ್ತೆ,,,ಹಹಹಹ..ಧನ್ಯವಾದ..

  ReplyDelete
 24. ಧನ್ಯವಾದ ಸೀತಾರಾಂ ಸರ್, ನಮಗೆಲ್ಲಾ ಮನರಂಜನೆ ಜೊತೆಗೆ ವ್ಯ್ವವಹಾರ ತಿಳುವಳಿಕೇನೂ ಕೊಡ್ತಿವೆ ಘಟನಾವಳಿಗಳು..ಅಲ್ವೇ..?

  ReplyDelete
 25. ದಂಡಯಾತ್ರೆ ಚೆನ್ನಾಗಿದೆ...

  ReplyDelete
 26. ದಂಡಯಾತ್ರೆ ...ನಿಮಗೂ ಇಷ್ಟವಾಗಿದ್ದಕ್ಕೆ ಧನ್ಯವಾದ...ಇನ್ನು ಮೇಲೆ ದಾಂಡಿ ಯಾತ್ರೆಯ ಮೆಲುಕು ಈ ತರಹ ಆಗುತ್ತೇನೋ ಗೊತ್ತಿಲ್ಲ.....ಹಹಹಹ...ಅಂದ ಹಾಗೆ ಶಿವು ಕಥೆ ಎಲ್ಲಿಗೆ ಬಂತು ..??ಹಹಹ

  ReplyDelete
 27. ಆಜಾದ್ ಭಯ್ಯ
  ಹಾಸ್ಯಮಯವಾಗಿದೆ ... ನಗ್ನ ಸತ್ಯ ..

  ReplyDelete
 28. ಶಿವು, ನನದೊಂದು ಪ್ರಶ್ನೆ,
  ಏನು ಹೇಳು...

  ಈ ಅಜಾದ್‍ಸರ್ ಅಷ್ಟು ದೂರದಲ್ಲಿದ್ದರೂ ಇಲ್ಲಿ ನಡೆಯೋದನ್ನು ಸೂಕ್ಷ್ಮವಾಗಿ ಚಿಂತನೆಗೊಳಗಾಗುವಂತೆ ಬರೆಯುತ್ತಾರಲ್ಲ..ನೀವು ಇಲ್ಲೇ ಇದ್ದರೂ ಇದೆಲ್ಲಾ ಯಾಕೆ ಬರೆಯೋಕೆ ಹಾಗೊಲ್ಲ...

  ಗೊತ್ತಿಲ್ಲ ಕಣೇ...

  ReplyDelete
 29. ಹಃ ಹಃ.. Good one Sir..

  ReplyDelete
 30. ಸತ್ಯಾಗ್ರಹ ಎಂದರೆ ನಾಲಿಗೆಯನ್ನೂ ಬಿಗಿಹಿಡಿಯಬೆಕೆಂಬ ರೂಲ್ಸು ಇರ್ಬೇಕಿತ್ತು. ಮನುಷ್ಯನಿಗಲ್ಲದಿದ್ರೂ ಅವರ ಸ್ಥಾನಕ್ಕೆ ಮರ್ಯಾದೆ ಕೊಟ್ಟಿದಿದ್ರೆ ನಮ್ಮೆಲ್ಲರ ದೃಷ್ಟಿಯಲ್ಲಿ ಅವರ ಸ್ಥಾನಮಾನ ಹೆಚ್ಚುತ್ತಿತ್ತು.

  ReplyDelete
 31. hmmm

  vastava rajakeeya chitra.. vidambane super

  thanks
  pravi

  ReplyDelete
 32. ಶ್ರೀಧರ್, ಧನ್ಯವಾದ...ಇದು ಸತ್ಯ ಇದುವೇ ಸತ್ಯ ಮಿಕ್ಕೆಲ್ಲವೂ ಮಿಥ್ಯ ಅನ್ನುವಂತಿವೆ ಘಟನಾವಳಿಗಳು.

  ReplyDelete
 33. ಶಿವು ..ಹಹಹ...ನಿಮ್ಮನೆಯವರಿಗೆ ಹೊಸೆ ಪ್ರಾಬ್ಲಂ...ಹಹಹ...ಯಾಕಂದ್ರೆ ನಾನು ಇನ್ನೂ ಬೇರೆ ಬೇರೆ ವಿಷಯ ಡೀಲ್ ಮಾಡ್ತೀನಿ ಅನ್ನಿ..ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ.

  ReplyDelete
 34. ಶ್ರವನ್ ನಿಮ್ಮ ಅನಿಸಿಕೆಗೆ ಧನ್ಯವಾದ...

  ReplyDelete
 35. ಸಾಗರಿ ಇದೇ ಕಾರಣಕ್ಕೆ ಇರಬೇಕು ಕೆಲ ರಾಜಕಾರಣಿಗಳು ...ಈಗಲೂ ಗೌರವಾರ್ಹರು..ವಾಜಪೇಯ್, ನರಸಿಂಹರಾವ್, ರಾ,ಕೃ.ಹೆಗ್ಡೆ, ಎಸ್.ಎಮ್.ಕೃಷ್ಣ, ಹಾಗೇ ನೋಡಿದ್ರೆ ನಮ್ಮ ಪ್ರಧಾನಿ ಮ.ಮೋ.ಸಿಂಗ್ ಸಹಾ ತಮ್ಮ ಇತಿ-ಮಿತಿ ಮತ್ತು ಸ್ಥಾನ ಗೌರವ ಅರಿತು ನಡೆದವರು... ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 36. ಧನ್ಯವಾದ ವಿಜಯಶ್ರೀ ನಿಮ್ಮ ......ಅನಿಸಿಕೆ ಗೆ...

  ReplyDelete
 37. ಪ್ರವೀಣ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ..ನಿಮ್ಮ ಅಭಿಮಾನಕ್ಕೆ.

  ReplyDelete
 38. ಹ್ಹಾ ಹ್ಹಾ ಚೆನ್ನಾಗಿದೆ ಸರ್ .ಅಪ್ಪನ -ಮಗನಾ ಸಂವಾದ ಇಷ್ಟವಾಯ್ತು.

  ReplyDelete
 39. ಅಪ್ಪ ಮಗುವಿನ ಸಂಭಾಷಣೆ........
  ಇದು ಸತ್ಯ ಸಂಭಾಷಣೆ.........
  ರಾಜಕೀಯದ ತರ್ಕ ಸಂಭಾಷಣೆ.........
  ನಮಗೆ ಖುಷಿ ತಂದ ಸಂಭಾಷಣೆ.........
  ಅಜಾದ್ ಸರ್,
  ಅಂತೂ ಗೊತ್ತಿಲ್ಲ ಮಗು ಅಂತ ಎಲ್ಲಾ ಹೇಳಿದ್ರಿ ಅಲ್ವಾ?
  ಚೆನ್ನಾಗಿದೆ, ಹೀಗೆ ಮುಂದುವರೆಯಲಿ ಈ ಸಂಭಾಷಣೆ!

  ReplyDelete
 40. ಶಶಿ, ಎಲ್ಲಿ ಅಪ್ಪ ಮಗನ(ಮಗಳ) ಸಂವಾದ ?? ಮಗ/ಳು ಗೊತ್ತಿದ್ದರೂ ಉತ್ತರ ಕೊಡಲಾಗದ ಸ್ಥಿತಿ...ಧನ್ಯವಾದ ಪ್ರತಿಕ್ರಿಯೆಗೆ

  ReplyDelete
 41. ಪ್ರವೀಣ್ ನಿಮ್ಮ ಬ್ಲಾಗ್ ಮತ್ತೆ ನೋಡಿ..ಎರಡನೇ ಬಾರಿ ಕಾಮೆಂಟ್ ಹಾಕಿದೆ...ಇಲ್ಲಿ ನಿಮ್ಮ ಕಾಮೆಂಟ್ ಧನ್ಯವಾದ...

  ReplyDelete
 42. ಆಜಾದ್...

  "ಅಪಾ..."
  ಏನು ಮಗು...?"

  "ಪಾದಯಾತ್ರೆ ಮಾಡುವಾಗ ಖಡ್ಗ ಹಿಡಿದು ಯಾಕೆ ಡ್ಯಾನ್ಸ್ ಮಾಡ್ತಾರಪ್ಪಾ..?"

  "ಸಂಗಡ ಬರೊ ಜನರಿಗೆ.. ಟಿವಿ ನೋಡೊ ಜನರಿಗೆ ಉತ್ಸಾಹ ಬರ್ಲಿ ಅಂತ ಕಣಪಾ.."

  ಮತ್ತೆ ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧೀತಾತ ಸುಮ್ನೆ ಹೋಗ್ತಿದ್ರಂತೆ..
  ಆಗ ಜನರಿಗೆ ಉತ್ಸಾಹ ಇರ್ಲಿಲ್ಲಾಗಿತ್ತಾ?

  "ಉತ್ತರ ಗೊತ್ತಿದ್ರೂ ಹೇಳ್ಳಿಕ್ಕೆ ಆಗಲ್ಲ ಮಗು..."

  " ಯಾಕಪಾ..?"

  "ನಾಳೆ.. ನನಗೂ ಹೋಗಬೇಕಪಾ..."

  ಆಜಾದ್..
  ತುಂಬಾ... ತುಂಬಾ ಚೆನ್ನಾಗಿ ಬರ್ತಿದೆ ನಿಮ್ಮ ಈ.. "ಗೊತ್ತಿಲ್ಲ ಮಗು..."

  ಅಭಿನಂದನೆಗಳು...

  ReplyDelete
 43. ಅತಿ ವಿಶಿಷ್ಟವಾದ ಶೈಲಿ. ತಿಳಿ ಹಾಸ್ಯದಲ್ಲೂ ಕೊಂಕು ...ಅಪ್ಪ -ಮಗನ ಜೋಡಿ ಬಲು ಅಪರೂಪ ...!

  ReplyDelete
 44. ಪ್ರಕಾಶು, ನಿನ್ನ ಬರುವಿಕೆಯೇ ಭಾರಿ...(ಹಹಹ..ಬೇರೆ ಕಾರಣಕಾಗಿ ಅಲ್ಲಪ್ಪಾ)..ಮತ್ತೆ ನನಗೆ ಈ ಅಪ್ಪ-ಮಗ ಮಾಧ್ಯಮ ಬಹಳ ಆಪ್ಯಾಯಮಾನ...ಅಲ್ಲದೇ ಸ್ವಲ್ಪ ಬಾಲಿಶ ಅನ್ನಿಸುವುದನ್ನೂ ಕೇಳಬಹುದು ಮಗುವಿನ ನೆಪದಲ್ಲಿ...ಧನ್ಯವಾದ..

  ReplyDelete
 45. ಸೌಮ್ಯ ಧನ್ಯವಾದ ನಿಮ್ಮ ಅನಿಸಿಕೆಗೆ...ಹಾಗೇ..ಸ್ವಾಗತ ಜಲನಯನಕ್ಕೆ...

  ReplyDelete
 46. hi sir
  appa magan sambhasanhe
  so nice

  ReplyDelete
 47. ಕನಸು...hahaha...ಮಗುವಿನ ಬಾಯಿಗೆ ಬೀಗ ಹಾಕೋರಿಗೆ ಇದು ಒಂದು ಕಾರಣ ಇರಬಹುದು..ಯಾಕಂದ್ರೆ ಉತ್ತರಿಸೋದು ಕಷ್ಟ ಒಮ್ಮೊಮ್ಮೆ..ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 48. ಹಲವಾರು ದಿನಗಳ ನಂತರ ಬಂದರೂ ಉತ್ತಮವಾಗಿ ಬಂದಿದೆ.. ನಿಮ್ಮ ಈ ಸರಣಿ.
  ವಾಸ್ತವಕ್ಕೆ ತಕ್ಕದಾಗಿದೆ..
  ಚಿತ್ರವಂತೂ ಹೇಳಿಮಾಡಿಸಿದಂತಿದೆ..

  ReplyDelete
 49. ಧನ್ಯವಾದ ಇಲ್ಲ್ ಬಂದಿರಿ...ಜಲನಯನಕ್ಕೆ ಸ್ವಾಗತ....

  ReplyDelete
 50. ತು೦ಬಾ ಚೆನ್ನಾಗಿದೆ... ರಾಜಕೀಯ ವಿದ್ಯಮಾನಗಳು ಹೀಗಿವೆಯೇ ಈಗ!

  ReplyDelete
 51. ha ha thumba chennagi bardidira, thumba thamasheyagide.

  ReplyDelete
 52. ಆಜಾದ್ ಸರ್,

  ತಡವಾಗಿ ಪ್ರತಿಕ್ರಿಯಿಸ್ತ ಇದ್ದೀನಿ....ಕ್ಷಮೆ ಇರಲಿ....ತುಂಬಾ ಚೆನ್ನಾಗಿದೆ ಈ ಸಂಭಾಷಣೆ...ಹೀಗೆ ಮುಂದುವರಿಯಲಿ....ಧನ್ಯವಾದಗಳು...

  ReplyDelete
 53. ಅಪ್ಪನ -ಮಗನಾ ಸಂವಾದ ಇಷ್ಟವಾಯ್ತು.

  ReplyDelete