Monday, May 7, 2018

ಫರಕ್


Foto: Pinterest.com

ಫರಕ್

ಸಲಾಂ ಅಲೇಕುಮ್
ವಾಲೆಕುಂ ಅಸ್ಸಲಾಮ್ ವ ರಹ್ಮತುಲ್ಲಾಹಿ ವ ಬರಕಾತುಹು
ಒಳಗಡೆ ನನ್ನ ರೂಮಿನಲ್ಲಿ ಕಾದಂಬರಿಯೊಂದನ್ನು ಓದುತ್ತಾ ಕೂತಿದ್ದ ನನಗೆ ಅಬ್ಬಾ ಜಾನ್ ರು ಮನೆಗೆ ಬಂದವರ ಸಲಾಂ (ಶುಭ ಕೋರಿಕೆ) ಗೆ ಪ್ರತಿ ಸಲಾಂ ಕೋರಿದ್ದು ಕೇಳಿಸಿತು. ಅಷ್ಟರಲ್ಲಿ ಚಿಕ್ಕಪ್ಪನೂ ಅವರ ಮಾತಿಗೆ ದನಿಗೂಡಿಸಿದ್ದೂ ಕೇಳಿಸಿತುಅಷ್ಟರಲ್ಲಿ ಸೋದರಮಾವನೂ ಎಲ್ಲಿಂದಲೋ ಬಂದವನು ಬಂದವರಿಗೆ ಸಲಾಂ ಮಾಡಿದಾಗ ಎಲ್ಲವೂ ಯೋಜಿತ ಎನಿಸಿದ್ದು ಹೌದು..  ಅದೂ ಮಾವ ಬಂದ ಎಂದರೆ ನನ್ನ ಮದುವೆ ಬಗ್ಗೆಯೇ ಎಂದು ನನಗೆ ಖಾತರಿಯಾಯ್ತು.
ನೆಪಕ್ಕೆ ಪುಸ್ತಕ ಕೈಯಲ್ಲಿ. ಕಿವಿ ಮಾತ್ರ ಸಲ್ಲಾದಲ್ಲಿ ನಡೆಯುತ್ತಿದ್ದ ಸಲ್ಲಾಪದತ್ತಲೇ ಎನ್ನುವುದನ್ನು ಸ್ವಲ್ಪ ಮಾತ್ರ ತೆರೆದಿದ್ದ ನನ್ನ ಕೋಣೆಯ ಬಾಗಿಲನ್ನು ಇನ್ನೂ ಹೆಚ್ಚು ತೆರೆಯಲು ಮುಂದಾದ ನನ್ನ ಕಾಲೇ ಸೂಚಿಸಿತ್ತು.
ಮಾವ ಏನು ಓದಿದ್ದಾಳೆ ಮಗಳು..ಖಾನ್ಸಾಬ್ ?
ನನ್ನ ಕಿವಿ ನೆಟ್ಟಗಾಯಿತುಕಾಲು ಮತ್ತೆ ತನ್ನ ಚೇಷ್ಟೆ ಮುಂದುವರೆಸಿತ್ತುಬಾಗಿಲು ಪೂರ್ತಿ ತೆರೆದಿರಲಿಲ್ಲವಲ್ಲಾ..?
ಬಂದವರು.. ಖಾನ್ಸಾಬ್ ಎಂದದ್ದು ಮಾತ್ರ ಗೊತ್ತಾಯ್ತು.. ಯಾವ ಖಾನ್ ಸಾಬ..?? ಶಾರೂಕ್ಕಾ? ಅಮೀರಾ..?? ಸಲ್ಮಾನಾ..???
ಎಮ್ ಎಸ್ಸಿ ಮಾಡಿದ್ದಾಳೆ, ಪಿಎಚ್ಡಿ ಮಾಡಬೇಕು ಅಂತ ಹೇಳ್ತಿದ್ಳುಮದ್ವೆ ಮಾಡ್ಕೊ..ಗಂಡ ಮುಂದಕ್ಕೆ ಓದ್ಸಿದ್ರೆ ಓದು ಅಂದೆ….”
ಖಾನ್ಸಾಬ್ರು ಹೇಳಿದ್ದು ಕೇಳಿ ನನ್ನ ಆಸಕ್ತಿ ಹೆಚ್ಚಾಯ್ತು
ನನ್ನ ಅಬ್ಬು ದನಿ ಕೇಳಿಸ್ತು.. “ಇವನಿಗೂ ಹುಡುಗಿ science ಓದಿರೋಳು ಆದರೆ ಒಳ್ಳೇದು ಅಂತ ಇವನ ಅಮ್ಮಿಜಾನ್ ಹೇಳ್ತಿದ್ಳು” …
ಅರೆ..ಹೌದಾ..? ನಾನು ಹೇಳಿದ್ದನ್ನ ಅಮ್ಮೀಜಾನ್..ಅಬ್ಬೂ ಕಿವಿಗೆ ಹಾಕೇ ಬಿಟ್ಟಿದ್ದಾಳಾ..?? ಡಾಕ್ಟ್ರಾದ್ರೂ ಅಮ್ಮಿಜಾನ್ ಅಬ್ಬೂ ಗೆ ಬಹಳ ವಿಧೇಯಳು…, ಒಂದು ರೀತಿಲಿ ಅಬ್ಬೂ ನ ಬಹಳವಾಗಿ ಬೆಳೆದ ಬ್ಯುಸಿನೆಸ್ ಅದರಿಂದ ಅಬ್ಬೂಗೆ ಇದ್ದ ವರ್ಚಸ್ಸೇ ಇದಕ್ಕೆ ಕಾರಣ..
ಚಿಕ್ಕಪ್ಪ ಮದುವೆ ಆದಮೇಲೆ ಇವನ ಲ್ಯಾಬಲ್ಲೇ ರೀಸರ್ಚ್ ಮಾಡ್ತಾ ಪಿ.ಎಚ್.ಡಿ ಮಾಡ್ತಾಳೆ ಬಿಡಿ.., ಅಲ್ವಾ ಭಾಭಿಜಾನ್…?
ಚಿಕ್ಕಪ್ಪ ಅಷ್ಟರಲ್ಲಿ ಕ್ಲಿನಿಕ್ ನಿಂದ ಮನೆಗೆ ಬಂದ ಅಮ್ಮಿನ ಕೇಳಿದ
ಅಮ್ಮಿ ಹೌದು.. ಅಂದಹಾಗೆ ಹುಡುಗಿ ಫೊಟೋ ಇದೆಯಾ..?
ಖಾನ್ ಸಾಬ್: ಕಳುಹಿಸಿ ಕೊಡುವೆ ಬೆಹೆನ್ ಜೀ... ಒಮ್ಮೆ ನೀವೆಲ್ಲಾ ಬನ್ನಿ.. ನಮ್ಮ ಮನೆಗೆ ಹುಡುಗಿನ ನೋಡೋ ರಿವಾಜ್ ಆಗಿಬಿಡಲಿ..
ಅಮ್ಮಿ: ಆಗಲಿ ..ಭಾನುವಾರ ಬರ್ತೇವೆ ನಾವು ೬-೭ ಜನ...ಅಲ್ವಾ ಭಯ್ಯಾ..??
ಮಾಮ: ಹೌದು... ಅಂದಹಾಗೆ .. ಕಾಲೇಜ್ ಪಕ್ಕ.. ದೊಡ್ಡ ಕಾಂಪೌಂಡ್ ಇರೋ ಮನೆನೇ ಅಲ್ವಾ..? ನಿಮ್ಮದು.
ಖಾನ್ ಸಾಬ್: ಹೌದು, ಅದೇ... ಬನ್ನಿ... ಆದರೆ ಮಾಫ್ ಮಾಡ್ಬೇಕು ಹುಡುಗನ್ನ ಕರ್ಕೊಂಡ್ ಬರ್ಬೇಡಿ... ಮೊದಲೇ ಹುಡುಗನಿಗೆ ಹುಡ್ಗಿನ ತೋರ್ಸೋ ರಸಂ ನಮ್ಮಲ್ಲಿಲ್ಲ...ಮದ್ವೆ ನಿಶ್ಚಯ ಆದ್ಮೇಲೆ ಒಮ್ಮೆ ಹುಡುಗನ್ನ ಕರ್ಕೊಂಡು ಬನ್ನಿ... ತೊಂದರೆ ಇಲ್ಲ...
“ಥತ್ ಇವ್ನಾ... ಎಂಥಾ ಮಾವನೋ ಇವ್ನು...? ಅನ್ನಿಸ್ತು .. ಪರ್ವಾಗಿಲ್ಲ ಬಿಡು..ಅಡ್ರೆಸ್ ಗೊತ್ತಾಯ್ತಲ್ಲ.. ನಾನೇ ಹೆಂಗೋ ನೋಡ್ತೀನಿ ಹಡ್ಗೀನ..” ಅಂದ್ಕೊಂಡು ಬೇಸರ ಆದರೂ ಸುಮ್ಮನ್ನಾದೆ.
ಒಂದು ದಿನ ಎಲ್ಲಾ ಹೋಗಿ ನೋಡ್ಕೊಂಡ್ ಬಂದ್ರು...ಹುಡುಗೀನ..
ಆಮೇಲೆ ಮದ್ವೆ ನಿಶ್ಚಯಕ್ಕೆ ಅಂತ ಮಾತ್ನಾಡ್ಕೊಳ್ಳೋವಾಗ ..ಮಾವ ಕೇಳ್ದ.. ಮುನೀರ್..ನಿನಗೆ ಹುಡ್ಗಿನ ಮೊದ್ಲೇ ನೋಡ್ಬೇಕು ಅಂತ ಅನ್ಸೊಲ್ವೇನೋ..? ಕೀಟಲೆ ಮಾಡ್ತಾ..
ಮಾಮ್.. ನಾನು ಆಗಲೇ ಅವಳ ಫೋಟೋ ತಕ್ಕೊಂಡಾಯ್ತು... ಅಂದೆ ಕಣ್ಣು ಮಿಟಕಿಸ್ತಾ,,
ಭಲೆ ಪಾಕಡಾ ಕಣೊ ನೀನು..ಅಂತ ಗುದ್ದುತ್ತಾ ಮಾವ ಅಂದ..
ಮುಂದಿನ ಭಾನುವಾರ ಖುದ್ದಾಗಿ ನೋಡುವೆಯಂತೆ ಬಿಡು ಅಂದ...
ಭಾನುವಾರ ಎಲ್ಲಾ ಹೋದ್ವಿ, ಶಾಸ್ತ್ರ ಎಲ್ಲಾ ಮುಗೀತು, ಮದ್ವೆ ನಿಶ್ಚಯ ಆಯ್ತು.. ಅಮ್ಮಿ ಅಂದ್ಳು...
“ಮುನೀರ್ ಬೇಟಾ, ಹುಡುಗೀನ ನೋಡಬೇಕಂತೆ ..ಕರೆಸ್ತೀರಾ ..?”
ಹುಡುಗಿ ಮಾವ ಇರ್ಬೇಕು.. ಹುಡುಗೀನ ಕರ್ಕೊಂಡ್ ಬಂದ...
ಮಾವ ಅಂದ – ನೋಡೋ ಮುನೀರಾ ಹುಡ್ಗೀನ... ಹುಡ್ಗಿ ಥರ ಕತ್ತು ಬಗ್ಗಿಸ್ಕೊಂಡ್ ಯಾಕೆ ಕೂತಿದ್ದೀಯಾ...ಅಂತ ಹತ್ತಿರ ಬಂದು ಕಿವೀಲಿ..ನೋಡೋ..ಫೋಟೋದಲ್ಲಿ ನೋಡೋಕೂ..ಖುದ್ದಾಗಿ ನೋಡೋಕೂ..ಫರಕ್ ಇದೆ ಅಂದ
ನಿಧಾನಕ್ಕೆ ಕತ್ತೆತ್ತಿ ನೋಡಿದೆ...ಕ್ಷಣಕ್ಕೆ ದಂಗಾದೆ...
ಮಾವ ನನ್ನ ಗಮನಿಸ್ತಾನೇ ಇದ್ದ...
ಖಾನ್ ಸಾಬ್ ಅಂದ್ರು ..ಆಯ್ತು... ಮದುವೆ ದಿನ ನಿಮಗೆ ನಮಗೆ ಅನುಕೂಲ ಆಗೋಹಾಗೆ ಇಟ್ಕೊಳ್ಳೋಣ...ಅಂದ್ರು ..ಎಲ್ಲಾ ಏನೇನೋ ಮಾತನಾಡ್ತಿದ್ರು... ನನಗೆ ಗೊಂದಲ...
ನಾವು ಹೊರಟು ನಿಂತ್ವಿ... ಮಾವ ಮೊದಲೇ ಹೊರಗೆ ಬಂದಿದ್ದ ನನ್ನ ಹತ್ತಿರ ಬಂದು..”ಹೇಳ್ಲಿಲ್ವಾ ಖುದ್ದಾಗಿ ನೋಡೋಕೂ ಫೋಟೋಲಿ ನೋಡೋಕೂ ಫರಕ್ ಇರುತ್ತೆ ಅಂತ.. ಹುಡ್ಗಿ ಸೊಗ್ಸಾಗಿದ್ದಾಳಲ್ಲೋ...ಯಾಕೆ ಒಂಥರಾ ಮಾಡಿದೆ ನೀನು..?
ನಾನು: ಮಾಮ್ ಆದರೆ ಫೋಟೋಗೂ ಖುದ್ದಾಗಿ ನೋಡಿದ್ದಕ್ಕೂ ತುಂಬಾ ವ್ಯತ್ಯಾಸ ಇದೆ... ಚನ್ನಾಗೇ ಇದ್ದಾಳೆ..ಆದರೆ..ಫೋಟೋ.... ?..ಅಂದಹಾಗೆ ಖಾನ್ಸಾಹೇಬ್ರಿಗೆ ಒಬ್ಬಳೇ ತಾನೇ ಮಗಳು ಇರುವುದು?
ಮಾವ: ಹೌದು ಒಬ್ಬಳೇ...ಯಾಕೆ..?
ನಾನು ಕದ್ದು ಮುಚ್ಚಿ ತೆಗೆದಿದ್ದ ಹುಡುಗಿ ಫೋಟೋನ...ತೋರಿಸಿದೆ....
ಮಾವ..ಬಿದ್ದು ಬಿದ್ದು ನಗತೊಡಗಿದ...ಸದ್ಯಕ್ಕೆ ..ಅಮ್ಮಿ ಅಬ್ಬೂ ಎಲ್ಲಾ ಕಾರಿನೊಳಕ್ಕೆ ಕೂತು ಹೊರಟಿದ್ರು... ನಿನ್ನ ಮಾಮನೂ ನೀನೂ ನಿಮ್ಮ ಕಾರಲ್ಲಿ ಬನ್ನಿ ಅಂತ ಹೇಳ್ತಾ..
ನಾನಂದೆ....”ಮಾಮ್ ಯಾಕೆ ನಗ್ತೀಯಾ?”
ಈ ಫೋಟೋದಲ್ಲಿರೋ ಹುಡ್ಗಿ ಬೇಕಾ...? ಹಂಗಾದರೆ..ಮತ್ತೆ ಖಾನ್ ಸಾಬ್ರನ್ನ ಕೇಳಬೇಕು ಅಂದ..ನಗ್ತಾ...?
ಮಾಮ್ ..ನಗು ನಿಲ್ಸಿ ಹೇಳ್ತಿಯಾ ಏನ್ ವಿಷ್ಯಾ..ಅಂತ...ಅಂದ ಸ್ವಲ್ಪ ಬೇಜಾರಿಂದ...
“ಲೋ..ಮುನೀರ....ಫೋಟೋದಲ್ಲಿರೋದು... ಖಾನ್ಸಾಹೇಬರ ಎರಡನೇ ಹೆಂಡತಿ” ಅಂದ ಮತ್ತೆ ನಗ್ತಾ...
ಈಗ ನನಗೂ ನಗು ತಡೆಯಲಾಗದೇ...ಮಾಮನ ಜೊತೆ ನಗ್ತಾ ಅಂದೆ...
“ಸದ್ಯ ಮೊದಲೇ ಗೊತ್ತಾಯ್ತು...ಇಲ್ಲಾಂತಿದ್ದಿದ್ರೆ.. ಮದ್ವೆ ಆದ್ಮೇಲೆ...ಅತ್ತೆ ಮನೆಲಿ ಎಡವಟ್ ಆಗ್ತಿತ್ತು...”

21 comments:

  1. ಹ ಹ ಹ.. ವಿಚಿತ್ರ ಆದರೂ ಕೆಲವೊಮ್ಮೆ ಹೀಗಾಗುತ್ತೆ.. ಸೊಗಸಾದ ಬರಹ.. ಈ ಫಜೀತಿಗಳು ಆ ಕ್ಷಣಕ್ಕೆ ಹಿಂಸೆ ಅನ್ನಿಸಿದರೂ.. ಅದನ್ನು ನೆನೆದು ನೆನೆದು ಮುಂದೆ ಒಂದು ದಿನ ಹೊಟ್ಟೆ ಹುಣ್ಣಾಗುವಷ್ಟು ನಗಬಹುದು..

    ಸೊಗಸಾಗಿದೆ ಸರ್ಜಿ..

    ReplyDelete
    Replies
    1. ಶ್ರೀಮನ್ ಇದು ನನ್ನ ಸ್ನೇಹಿತನೊಬ್ಬನ ಕಥನ... ನನ್ನ ಮಾವನಿಗೆ ಒಬ್ಬರೇ ಇದ್ದದ್ದು ಹೆಂಡತಿ...ಹಿಹಿಹಿ

      Delete
  2. ಹ್ಹಹ್ಹಹ್ಹ...
    ಎಂತ ಎಡವಟ್ಟಾಗಿಹೋಗ್ತಿತ್ತು ಸ್ವಾಮೀ...
    ಬಹಳ ದಿನಗಳ ನಂತರ ಮನಬಿಚ್ಚಿ ನಕ್ಕೆ. ಸದ್ಯ ಹುಡುಗಿ ಚೆನ್ನಾಗಿರುವುದು ಒಂದು ಪುಣ್ಯ ಅನ್ನಿ. 😂

    ಬ್ಲಾಗ್ ಬರಹಕ್ಕಾ ಧನ್ಯವಾದಗಳು ಭೈ. ೨೦೧೮ನೇ ಇಸವಿಯಲ್ಲಿ ೨೦೧೮ ಬರಹ / ಕವನಗಳು ಬ್ಲಾಗಲೇ ಬರಲಿ.

    ReplyDelete
    Replies
    1. ಬದರಿ ನಮ್ಮ ಬ್ಲಾಗ್ ಬರಹಗಳು ಇನ್ನಾದರೂ ಹೆಚ್ಚಾಗಲಿ...ಕಡೇಪಕ್ಷ ನಮ್ಮ ಹಳೆಯ ಪಟಾಲಂ...ನನಗಂತೂ ಫೇಸ್ಬುಕ್ ಕಂಡು ಹೇಸಿಗೆ ಅನಿಸಿಬಿಟ್ಟಿದೆ.. ರಾಜಕಾರಣಿಗಳನ್ನು ದೇವರಾಗಿಸಿ..ದೆವ್ವಗಳಾಗಿಸಿ...ಸ್ನೇಹಿತರಲ್ಲೇ ಏನೋ ಒಂದು ವಿಧದ ವೈಷಮ್ಯ....ಇಲ್ಲಾದರೂ ನಮ್ಮ ಮನದ ಮಾತೇ ಮೂಡಲಿ ಎನ್ನುವ ಆಶಯ...

      Delete
  3. ಸಧ್ಯ... ಮೊದಲೇ ಗೊತ್ತಾಗಿದ್ದರಿಂದ ಎಲ್ಲರೂ ಬಚಾವ್. ನವಿರು ಹಾಸ್ಯದ ಮೊದಲ ಬ್ಲಾಗ್ ಬರಹ ಖುಷಿ ಕೊಟ್ಟಿತು ಸರ್...

    ReplyDelete
    Replies
    1. ಧನ್ಯವಾದ ಜಲಜಾವ್ರೇ...ಅಲ್ವಾ..? ಅಂವ (ನನ್ನ ಸ್ನೇಹಿತನ ೆಡವಟ್ಟಿನ ಕಥೆ) ಕೆಲವೊಮ್ಮೆ ನೆನಸಿಕೊಂಡು ನಗತಾನೆ..

      Delete
  4. ಹುಡುಗನಿಗೆ ಹುಡುಗಿನ ತೋರ್ಸೋ "ರಸಂ" ಇಲ್ಲಿ ರಸಂ ಅಂದರೆ ಪದ್ಧತಿನಾ? ಚೆಂದದ ಬರಹಕ್ಕೆ ಧನ್ಯವಾದಗಳು

    ReplyDelete
    Replies
    1. ಧನ್ಯವಾದ ವಸುಮ... ಹೌದು ದಕ್ಕನಿ ಉರ್ದುನಲ್ಲಿ ರಸ್ಮ್ ಎನ್ನುವ ಉರ್ದು ಪದ - ರಸಂ ಆಗಿದೆ...ಸಂಪ್ರದಾಯ, ಪದ್ಧತಿ, ವಾಡಿಕೆ ಎನ್ನಬಹುದು

      Delete
  5. ವಾಹ್ ಸರ್ ಒಳ್ಳೆ ಹಾಸ್ಯ ಬರಹ..ಎಲ್ಲರಲ್ಲೂ ಇಂತಾ ಕಥೆ ಇದೆ ಆದ್ರೆ ನಿಮ್ಮಷ್ಟು ನವಿರಾಗಿ ಓದೋಹಾಗೆ ಹೆಣೆಯೋ ಕೌಶಲ್ಯ ಇಲ್ಲ!

    ReplyDelete
    Replies
    1. ಧನ್ಯವಾದ ಸೀತಣ್ಣ...ಮತ್ತೆ ನಾವು ಬ್ಲಾಗಿಗಳು ಒಂದಾಗುವಂತಾಗಲಿ...

      Delete
  6. Replies
    1. ಚಂದ್ರಕಾಂತ್ ಧನ್ಯವಾದ...ನನ್ನ ಬ್ಲಾಗಿಗೆ ಸ್ವಾಗತ

      Delete
  7. ಸೂಪರ್ ಫಜೀತಿ ಭಾಯ್ ����

    ReplyDelete
  8. ಹ್ಹ..ಹ್ಹ ಹ್ಹಾ... ಹೀಗೂ ಉಂಠೆ.....��������

    ReplyDelete
    Replies
    1. ಹೀಗೂ..ಆಗುತ್ತೆ ಅನ್ನೋದು ಹೌದು....ಹಹಹ
      ಧನ್ಯವಾದ ಉಮೇಶ್

      Delete
  9. ಜಲನಯನ,
    ಹೊಸ ವರ್ಷದ ಗಿಿರಮಿಟ್ಟಿ ತಿನ್ನಿಸಿದಿರಿ. ತುಂಬಾ ರುಚಿಿಯಾಗಿದೆ. ಧನ್ಯವಾದಗಳು.

    ReplyDelete
    Replies
    1. ಅಣ್ಣ ಧನ್ಯನಾದೆ.. ಬ್ಲಾಗ್ ನ ಬರೆಹ ಗುಣಮಟ್ಟ ನಿಜಕ್ಕೂ ಉತ್ತಮವಿರುತ್ತದೆ.. ಮನೆ ಅಡುಗೆಯಂತೆ,,,, ಫೇಸ್ಬುಕ್ಕಲ್ಲಿ...ಹೊಟ್ಟೆ ಕೆಡಿಸುವಂತಹ ಲೇಖನ/ಉಡಾಫೆ ಪ್ರತಿಕ್ರಿಯೆಗಳೇ ಹೆಚ್ಚು... ನಿಮ್ಮಾಶೀರ್ವಾದ ಹೀಗೇ ಇರಲಿ

      Delete
  10. We are urgently in need of Kidney donors with the sum of $500,000.00,
    Email: customercareunitplc@gmail.com

    ReplyDelete