Thursday, February 16, 2023

ಏನಾಗಲಿ?

 

ಏನಾಗಲಿ?

              - ಆಜಾದ್ ಐ.ಎಸ್.  

ಹೊರಳಿ ನೋಡುವುದೇ ಹೀಗೆ

ಮರಳಿ ಬಾರದ ಹಾಗೆ

ಉಲ್ಕೆಯಾಗದಿರು ಪಥದಿ

ಗ್ರಹವಾದರೂ ಸ್ವಂತತೆ ಇಲ್ಲ ..

 

ಚಂದಿರನಾಗಲೇ ಹೇಳು

ತಂಪೆನಿಸುವಂತೆ ವಿರಹಿಗೆ..

ಸೂರ್ಯನಾಗಲೇ ಬೇಡ

ತಪಿಸುವಂತೆ ತನ್ನೊಳಗೇ ..

 

ಭೂಮಿಯಾಗಲೇ ಗೆಳೆಯಾ

ಹೊರಲು ಪಾಪಿಗಳ..

ಪಾಪ ತೊಳೆಯಲೇ ಗಂಗೆಯಾಗಿ

ಮಾಲಿನ್ಯ ವಿಷದಂಗಳ..

 

ಬೆಟ್ಟ ಗುಡ್ಡವಾದರೂ ಏನು

ಲೂಟಿ ಅಗೆದು ವಜ್ರ ಖನಿಜ ..

ಬಗೆವರು ಗರ್ಭವನು ಚಿನ್ನ

ಬಿಡಲಾರ ಈ ಮನುಜ. 

2 comments:

  1. ಚಂದ್ರ, ತಾರೆ, ಸೂರ್ಯ, ಭೂಮಿ ಇವ್ಯಾವದೂ ನೀವು ಆಗುವುದು ಬೇಡ, ಆಝಾದ! ನೀವು ಕವಿಯಾಗಿ, ವಿಜ್ಞಾನಲೇಖಕರಾಗಿ, ಪದಾರ್ಥಚಿಂತಾಮಣಿಯ ಜನಕರಾಗಿ, ಓದುಗರಿಗೆ ಸಂತೋಷವನ್ನೂ, ಕನ್ನಡಕ್ಕೆ ಮೌಲಿಕ ಕೊಡುಗೆಯನ್ನೂ ಕೊಟ್ಟಿರುವಿರಿ. ಮತ್ತೇಕೆ, ಏನೇನೊ ಆಗುವ ಹಂಬಲ?

    ReplyDelete
    Replies
    1. ಧನ್ಯವಾದ ಅಣ್ಣ, ನಿಮ್ಮ ಆಶೀರ್ವಾದ ಹೀಗೇ ಇರಲಿ

      Delete